Love Archives - Good News 24x7 https://www.goodnews24x7.com/tag/love/ Kannada Fri, 31 Oct 2025 08:02:12 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Love Archives - Good News 24x7 https://www.goodnews24x7.com/tag/love/ 32 32 ಪ್ರಪೋಸ್ ಮಾಡೇ ಬಿಟ್ಟ ಸೂರಜ್; ‘ಐ ಲವ್​ ಯೂ’ ಅಂದಿದ್ದಕ್ಕೆ ಅಚ್ಚರಿಯ ಉತ್ತರ ಕೊಟ್ಟ ರಾಶಿಕಾ https://www.goodnews24x7.com/suraj-refuses-to-propose-rashika-gives-surprising-answer-to-i-love-you/ Fri, 31 Oct 2025 08:02:12 +0000 https://www.goodnews24x7.com/?p=7925 ಬಿಗ್ ಬಾಸ್ ಮನೆಯಲ್ಲಿ ಸೂರಜ್ ಸಿಂಗ್ ರಾಶಿಕಾ ಶೆಟ್ಟಿಗೆ ಪ್ರಪೋಸ್ ಮಾಡಿದ್ದಾರೆ. ಆದರೆ, ಇದಕ್ಕೆ ಅವರು ಅಚ್ಚರಿಯ ಉತ್ತರ ಹೊರಹಾಕಿದ್ದಾರೆ. ಬಿಗ್ ಬಾಸ್‌ನಲ್ಲಿ ಪ್ರೀತಿ, ಪ್ರಣಯಗಳು ಪ್ರೇಕ್ಷಕರ ಗಮನ ಸೆಳೆಯಲು ಸಾಮಾನ್ಯ. ಸೂರಜ್ ತಮ್ಮ ಆಟದ ಮೇಲೆ ಹೆಚ್ಚು ಗಮನ ಹರಿಸಬೇಕಿದೆ.…

The post ಪ್ರಪೋಸ್ ಮಾಡೇ ಬಿಟ್ಟ ಸೂರಜ್; ‘ಐ ಲವ್​ ಯೂ’ ಅಂದಿದ್ದಕ್ಕೆ ಅಚ್ಚರಿಯ ಉತ್ತರ ಕೊಟ್ಟ ರಾಶಿಕಾ appeared first on Good News 24x7.

]]>

ಬಿಗ್ ಬಾಸ್ ಮನೆಯಲ್ಲಿ ಸೂರಜ್ ಸಿಂಗ್ ರಾಶಿಕಾ ಶೆಟ್ಟಿಗೆ ಪ್ರಪೋಸ್ ಮಾಡಿದ್ದಾರೆ. ಆದರೆ, ಇದಕ್ಕೆ ಅವರು ಅಚ್ಚರಿಯ ಉತ್ತರ ಹೊರಹಾಕಿದ್ದಾರೆ. ಬಿಗ್ ಬಾಸ್‌ನಲ್ಲಿ ಪ್ರೀತಿ, ಪ್ರಣಯಗಳು ಪ್ರೇಕ್ಷಕರ ಗಮನ ಸೆಳೆಯಲು ಸಾಮಾನ್ಯ. ಸೂರಜ್ ತಮ್ಮ ಆಟದ ಮೇಲೆ ಹೆಚ್ಚು ಗಮನ ಹರಿಸಬೇಕಿದೆ. ರಾಶಿಕಾ ಅವರ ಈ ಪ್ರತಿಕ್ರಿಯೆ ಆಟಕ್ಕೆ ಸಹಕಾರಿ ಆಗಲಿದೆ.

‘ಬಿಗ್ ಬಾಸ್’ ಮನೆಯಲ್ಲಿ ಪ್ರೀತಿ-ಪ್ರಣಯ ಸಾಮಾನ್ಯ. ಇಲ್ಲಿ ಹುಟ್ಟಿದ ಪ್ರೀತಿ ಮದುವೆ ಹಂತಕ್ಕೆ ಹೋಗೋದು ತುಂಬಾನೇ ಕಡಿಮೆ. ಬಹುತೇಕರು ಇದನ್ನು ಪ್ರೇಕ್ಷಕರ ಗಮನ ಸೆಳೆಯುವ ಉದ್ದೇಶಕ್ಕೆ ಬಳಸಿಕೊಳ್ಳುತ್ತಾರೆ. ರಾಶಿಕಾ ಶೆಟ್ಟಿ (Rashika Shetty) ಹಾಗೂ ಸೂರಜ್ ಆಪ್ತತೆ ಕೂಡ ಇದೇ ರೀತಿ ಎಂದು ಹೇಳಲಾಗುತ್ತಾ ಇದೆ. ಈಗ ಸೂರಜ್ ಅವರು ರಾಶಿಕಾಗೆ ಪ್ರಪೋಸ್ ಮಾಡಿದ್ದಾರೆ. ರಾಶಿಕಾ ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಗಮನ ಸೆಳೆಯಲು ಸಾಧ್ಯವಾಗಿಲ್ಲ. ಹೀಗಾಗಿ, ಅವರು ಮಾಡಿಕೊಂಡ ಆಯ್ಕೆ ಲವ್ ಟ್ರ್ಯಾಕ್. ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಬಂದ ಸೂರಜ್ ಸಿಂಗ್ ಜೊತೆ ಆಪ್ತತೆ ಬೆಳೆಸಿಕೊಂಡರು. ಅವರನ್ನು ನೋಡಿದ ತಕ್ಷಣವೇ ಫ್ಲ್ಯಾಟ್ ಆಗಿದ್ದರು. ರಾಶಿಕಾ ಹಾಗೂ ಸೂರಜ್ ಆಪ್ತತೆ ದಿನ ಕಳೆದಂತೆ ಹೆಚ್ಚುತ್ತಿದೆ.

‘ಬಿಗ್ ಬಾಸ್’ ಮನೆಯಲ್ಲಿ ಜೋರಾಗಿ ಜಗಳ ನಡೆಯುತ್ತಿತ್ತು. ಅತ್ತ ರಾಶಿಕಾ ಹಾಗೂ ಸೂರಜ್ ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿದ್ದರು. ಈ ರೀತಿ ಮುಳುಗಿ ಹೋಗುವಾಗಲೇ ಸೂರಜ್ ಪ್ರಪೋಸ್ ಮಾಡಿಯೇ ಬಿಟ್ಟರು. ನೇರವಾಗಿ ‘ಐ ಲವ್​ ಯೂ’ ಎಂದು ಸೂರಜ್ ಹೇಳಿದ್ದಾರೆ. ಇದನ್ನು ಕೇಳಿ ರಾಶಿಕಾ ಶಾಕ್ ಆದರು. ನನಗೆ ಅದರಲ್ಲಿ ಆಸಕ್ತಿ ಇಲ್ಲ ಎಂದರು.

ಸೂರಜ್ ಪ್ರಪೋಸ್ ಮಾಡುತ್ತಿದ್ದಂತೆ ಅವರು ಒಪ್ಪಿಕೊಳ್ಳುತ್ತಾರೆ ಎಂಬುದು ಅನೇಕರ ಊಹೆ ಆಗಿತ್ತು. ಆದರೆ, ಅವರು ಆ ರೀತಿ ಮಾಡಿಲ್ಲ. ಈ ಮೂಲಕ ಸೂರಜ್ ಜೊತೆಗಿನ ಆಪ್ತತೆ ಕೇವಲ ಒಂದು ಗೇಮ್ ತಂತ್ರ ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಿದಂತೆ ಆಗಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ಅವರು ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಇದು ಅವರ ಆಟಕ್ಕೆ ಸಹಕಾರಿ ಆಗುವ ಸಾಧ್ಯತೆ ಇದೆ.ಸೂರಜ್ ಅವರು ಆರಂಭದಲ್ಲಿ ಬಂದಾಗ ಉತ್ತಮ ಆಟ ಪ್ರದರ್ಶನ ಮಾಡಿದ್ದರು. ಆದರೆ, ಇತ್ತೀಚೆಗೆ ಏಕೋ ಅವರು ಪ್ರೀತಿ-ಪ್ರೇಮದ ವಿಚಾರದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ರಾಶಿಕಾ ಅವರು ಪ್ರಪೋಸ್ ಮಾಡಿದ ಮೇಲೂ ಒಪ್ಪಿಕೊಂಡಿಲ್ಲ. ಹೀಗಾಗಿ, ಸೂರಜ್ ತಮ್ಮ ಆಟದ ಮೇಲೆ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ.

The post ಪ್ರಪೋಸ್ ಮಾಡೇ ಬಿಟ್ಟ ಸೂರಜ್; ‘ಐ ಲವ್​ ಯೂ’ ಅಂದಿದ್ದಕ್ಕೆ ಅಚ್ಚರಿಯ ಉತ್ತರ ಕೊಟ್ಟ ರಾಶಿಕಾ appeared first on Good News 24x7.

]]>
15 ಲಕ್ಷಕ್ಕೆ ಸುಪಾರಿ ಕೊಟ್ಟು ಗರ್ಭಿಣಿ ಪತ್ನಿಯನ್ನೇ ಮುಗಿಸಿದ; ಸೀನಿಯರ್ ಮೇಲೆ ಮೋಹ.. ಪತ್ನಿಗೆ ಚಟ್ಟ! https://www.goodnews24x7.com/he-killed-his-pregnant-wife-by-giving-her-a-betel-nut-for-15-lakhs-infatuation-with-a-senior-wife-was-shocked/ Wed, 10 Sep 2025 06:31:10 +0000 https://www.goodnews24x7.com/?p=7449 ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಆರು ತಿಂಗಳ ಗರ್ಭಿಣಿಯನ್ನಾಗಿ ಮಾಡಿ ಇದೀಗ ಇನ್ನೊಬ್ಬಳ ಮೇಲಿನ ವ್ಯಾಮೋಹಕ್ಕೆ ಬಿದ್ದು 15 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು ಹೆಂಡತಿಯನ್ನೇ ಮುಗಿಸಿದ ಘಟನೆ ಕಾಗವಾಡ ತಾಲೂಕಿನ ಬಿ.ಕೆ.ಉಗಾರದಲ್ಲಿ ನಡೆದಿದೆ. ಬೆಳಗಾವಿ: ಎರಡು ವರ್ಷಗಳ ಹಿಂದೆ…

The post 15 ಲಕ್ಷಕ್ಕೆ ಸುಪಾರಿ ಕೊಟ್ಟು ಗರ್ಭಿಣಿ ಪತ್ನಿಯನ್ನೇ ಮುಗಿಸಿದ; ಸೀನಿಯರ್ ಮೇಲೆ ಮೋಹ.. ಪತ್ನಿಗೆ ಚಟ್ಟ! appeared first on Good News 24x7.

]]>

ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಆರು ತಿಂಗಳ ಗರ್ಭಿಣಿಯನ್ನಾಗಿ ಮಾಡಿ ಇದೀಗ ಇನ್ನೊಬ್ಬಳ ಮೇಲಿನ ವ್ಯಾಮೋಹಕ್ಕೆ ಬಿದ್ದು 15 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು ಹೆಂಡತಿಯನ್ನೇ ಮುಗಿಸಿದ ಘಟನೆ ಕಾಗವಾಡ ತಾಲೂಕಿನ ಬಿ.ಕೆ.ಉಗಾರದಲ್ಲಿ ನಡೆದಿದೆ.

ಬೆಳಗಾವಿ: ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಆರು ತಿಂಗಳ ಗರ್ಭಿಣಿಯನ್ನಾಗಿ ಮಾಡಿ ಇದೀಗ ಇನ್ನೊಬ್ಬಳ ಮೇಲಿನ ವ್ಯಾಮೋಹಕ್ಕೆ ಬಿದ್ದು 15 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು ಹೆಂಡತಿಯನ್ನೇ ಮುಗಿಸಿದ ಘಟನೆ ಕಾಗವಾಡ ತಾಲೂಕಿನ ಬಿ.ಕೆ.ಉಗಾರದಲ್ಲಿ ನಡೆದಿದೆ. ಚೈತಾಲಿ ಗಂಡನ ಸುಪಾರಿಗೆ ಬಲಿಯಾದ ಮಹಿಳೆ. ಪ್ರದೀಪ್ ಪ್ರಮುಖ ಆರೋಪಿ. ಪ್ರಕರಣ ಸಂಬಂಧ ಪ್ರದೀಪ್ ಸೇರಿ, ಸಾಥ್ ನೀಡಿದ್ದ ಇನ್ನಿಬ್ಬರು ಆರೋಪಿಗಳನ್ನು ಕಾಗವಾಡ ಪೊಲೀಸರು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ. ಪತಿ ಪ್ರದೀಪ್ ಹಾಗೂ ಮೃತ ಚೈತಾಲಿ ಉಗಾರ್ ಬಿ.ಕೆ.ಗ್ರಾಮದವರು. ಒಂದೇ ಗ್ರಾಮದವರಾದ ಇವರು ಪ್ರೀತಿಸಿ ಎರಡು ವರ್ಷಗಳ ಹಿಂದಷ್ಟೇ ಮದುವೆ ಆಗಿದ್ದರು. ಸಾಕ್ಷಿಯಾಗಿ ಆರು ತಿಂಗಳ ಗರ್ಭಿಣಿ ಕೂಡ ಆಗಿದ್ದಳು ಎಂದು ತಿಳಿದುಬಂದಿದೆ.

ಆಗಿದ್ದೇನು..? ಕಾನೂನು ಪದವಿ ಪಡೆದಿದ್ದ ಪ್ರದೀಪ್ ಕಿರಣಗಿ, ಕಾಗವಾಡ ಕೋರ್ಟ್‌ನಲ್ಲಿ ವಕೀಲ ವೃತ್ತಿಯಲ್ಲಿದ್ದ. ಪ್ರೇಮ-ವಿವಾಹದ ಬಳಿಕವೂ ಕಾಲೇಜಿನ ಸೀನಿಯರ್ ಜೊತೆಗೆ ಪ್ರದೀಪ್​​ಗೆ ಲವ್ ಶುರುವಾಗಿತ್ತಂತೆ. ಸೀನಿಯರ್ ಲೇಡಿಯನ್ನ ಬುಟ್ಟಿಗೆ ಹಾಕಿಕೊಳ್ಳಲು ತನಗೆ ಮದುವೆಯೇ ಆಗಿಲ್ಲ ಎಂದು ನಾಟಕವಾಡಿದ್ದಾನೆ ಎನ್ನಲಾಗಿದೆ. ಜೂನಿಯರ್ ಪ್ರದೀಪ್ ಮಾತು ನಂಬಿದ್ದ ಸೀನಿಯರ್​, ಪ್ರೀತಿಯ ಬಲೆಗೆ ಬಿದ್ದಿದ್ದಳು. ಯಾವಾಗ ಸೀನಿಯರ್ ಮೇಲೆ ಮೋಹ ಹೆಚ್ಚಾಯಿತೋ ಆಗಲೇ ಪತ್ನಿಯನ್ನು ಮುಗಿಸಲು ಪ್ಲಾನ್ ಮಾಡಿದ್ದಾನೆ ಅನ್ನೋದು ತನಿಖೆಯಿಂದ ತಿಳಿದುಬಂದಿದೆ.

ಮಾಡಿದ್ದೇನು..? ಪ್ರದೀಪ್ ತನ್ನ ಹೆಂಡತಿಯನ್ನ ಮುಗಿಸಲು ಸ್ನೇಹಿತನ ಸಹಾಯ ಪಡೆದಿದ್ದಾನೆ. ಸ್ನೇಹಿತ ರಾಜೇಂದ್ರ ಜೊತೆ ಮಾತುಕತೆ ನಡೆಸಿ 15 ಲಕ್ಷ ರೂಪಾಯಿಗೆ ಸೂಪಾರಿ ಕೊಟ್ಟಿದ್ದ ಎನ್ನಲಾಗಿದೆ. ಅಂತೆಯೇ ಚೈತಾಲಿಯನ್ನ ಮುಗಿಸಲು ಎರಡು ಬಾರಿ ಪ್ರಯತ್ನಿಸಿದ್ದಾರೆ. ಆದರೆ ಅದು ಫೇಲ್ ಆಗಿತ್ತು. ಮೂರನೇ ಬಾರಿಗೆ ಯಶಸ್ವಿಯಾಗಿದ್ದಾರೆ. ಭಾರವಾದ ವಸ್ತುವಿನಿಂದ ತಲೆಗೆ ಹೊಡೆದು ಆರು ತಿಂಗಳ ಗರ್ಭಿಣಿಯ ಜೀವ ತೆಗೆದಿದ್ದರು.

ಮುಂದೆ ಏನಾಯ್ತು..? ಆರೋಪಿಗಳಿಬ್ಬರು ಹಾಗೂ ಪ್ರದೀಪ್ ಸೇರಿ ಪ್ಲಾನ್ ಮಾಡಿದ್ದಾರೆ. ಪ್ಲಾನ್ ಪ್ರಕಾರವೇ ಆಕೆಯನ್ನು ಮುಗಿಸಿ, ಮೃತದೇಹವನ್ನು ಕೆಲ ಹೊತ್ತು ರಸ್ತೆಗೆ ತಂದು ಕಾಲ ಕಳೆದಿದ್ದಾರೆ. ಅದಾದ ನಂತರ ಆರೋಪಿ ಪ್ರದೀಪ್ ಪೊಲೀಸರಿಗೆ ಖುದ್ದು ಕರೆ ಮಾಡಿದ್ದಾನೆ. ಸೆಪ್ಟೆಂಬರ್ 7 ರಂದು ರಾತ್ರಿ 9.30ಕ್ಕೆ ಕರೆ ಮಾಡಿದ ಆತ, ಸರ್​ ರಸ್ತೆಯಲ್ಲಿ ಹೋಗುವಾಗ ಅಪಘಾತ ಆಗಿದೆ. ನನ್ನದೇ ಕಾರಿನಲ್ಲಿ ಹೋಗುವಾಗ ಅಪಘಾತ ಆಗಿದೆ. ಹೆಂಡತಿಗೆ ಗಂಭೀರ ಪೆಟ್ಟು ಬಿದ್ದಿದೆ. ನನಗೂ ಗಾಯವಾಗಿದೆ. ಪತ್ನಿ ಚೈತಾಲಿಯನ್ನು ಕಾಗವಾಡ ತಾಲೂಕು ಆಸ್ಪತ್ರೆಗೆ ದಾಖಲಿಸುತ್ತಿರೋದಾಗಿ ಹೇಳಿದ್ದಾನೆ. ವಿಷಯ ತಿಳಿದ ಪೊಲೀಸರು ತಕ್ಷಣವೇ ಕಾಗವಾಡ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಸಿಕ್ಕಿಬಿದ್ದಿದ್ದು ಹೇಗೆ..? ಪೊಲೀಸರು ಆಸ್ಪತ್ರೆಗೆ ಹೋದಾಗ ಚೈತ್ರಾಲಿ ಅನ್ನೋರು ಯಾರೂ ಇರಲಿಲ್ಲ. ಕೂಡಲೇ ಪೊಲೀಸರು ಪ್ರದೀಪ್​ಗೆ ಕರೆ ಮಾಡಿದ್ದಾರೆ. ಆಗ ಕಾಗವಾಡ ಬದಲು ಮಹಾರಾಷ್ಟ್ರದ ಮೀರಜ್‌‌ ಆಸ್ಪತ್ರೆಗೆ ಚೈತ್ರಾಣಿ ‌ಕರೆತಂದಿರುವುದಾಗಿ ಪೊಲೀಸರಿಗೆ ಪ್ರದೀಪ್ ಮಾಹಿತಿ ನೀಡಿದ್ದಾನೆ. ತಕ್ಷಣವೇ ‌ಪ್ರದೀಪ್ ನಿವಾಸಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿದ್ದಾರೆ. ಆಗ ಪ್ರದೀಪ್ ನಿವಾಸದ ಎದುರು ಕಾರು ನಿಂತಿತ್ತು. ಇದರಿಂದ ಪ್ರದೀಪ್ ನಡೆ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ಇದರ ನಡುವೆ ಪ್ರದೀಪ್ ಮೀರಜ್ ಪೊಲೀಸರನ್ನ ಭೇಟಿಯಾಗಿ, ಪತ್ನಿ ಅಪಘಾತದಿಂದ ಮೃತರಾಗಿದ್ದು ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾನೆ. ಆಗ ಮೀರಜ್ ಪೊಲೀಸರು ‌ಕಾಗವಾಡ ಠಾಣೆಯ ‌ಪೊಲೀಸರನ್ನ ಸಂಪರ್ಕಿಸುತ್ತಾರೆ. ಆಗ ನಾವು ಮೀರಜ್‌ಗೆ ಬರ್ತಿದ್ದೇವೆ, ಯಾವುದೇ ‌ದೂರು ದಾಖಲಿಸಿಕೊಳ್ಳದಂತೆ ಮನವಿ ಮಾಡುತ್ತಾರೆ.

ಮೀರಜ್‌ಗೆ ಬರುತ್ತಿದ್ದಂತೆಯೇ ಪೊಲೀಸರು ಪ್ರದೀಪ್​ನ ವಿಚಾರಣೆಗೆ ಒಳಪಡಿಸುತ್ತಾರೆ. ಆಗ ಪ್ರದೀಪ್​​ಗೆ ಅಪಘಾತದಿಂದ ಯಾವುದೇ ಗಾಯ ಆಗದಿರೋದು ಗೊತ್ತಾಗಿದೆ. ಚೈತಾಲಿ ‌ಮೃತದೇಹ ನೋಡಿದ ಪೊಲೀಸರು ಇದು ಅಪಘಾತವಲ್ಲ, ಕೊ*ಲೆ ಎಂಬುದನ್ನ ಮೇಲ್ನೋಟಕ್ಕೆ ಪತ್ತೆಹಚ್ಚಿಕೊಳ್ತಾರೆ. ತಕ್ಷಣವೇ ಪ್ರದೀಪ್​ನನ್ನ ‌ತೀವ್ರ ವಿಚಾರಣೆ ಮಾಡಿದಾಗ ಕೊ*ಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮಾತ್ರವಲ್ಲ, ಸ್ಥಳ ಮಹಜರು ವೇಳೆ ಪ್ರಕರಣಕ್ಕೆ ಸಾಥ್ ನೀಡಿದವರ ಹೆಸರನ್ನೂ ಹೇಳಿದ್ದಾನೆ. ಪ್ರಕರಣದಲ್ಲಿ ಐವರು ಆರೋಪಿಗಳು ಬಾಗಿಯಾಗಿರುವ ಶಂಕೆಯಿದ್ದ, ಮೂವರ ಬಂಧನವಾಗಿದೆ. ಮತ್ತಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ.

The post 15 ಲಕ್ಷಕ್ಕೆ ಸುಪಾರಿ ಕೊಟ್ಟು ಗರ್ಭಿಣಿ ಪತ್ನಿಯನ್ನೇ ಮುಗಿಸಿದ; ಸೀನಿಯರ್ ಮೇಲೆ ಮೋಹ.. ಪತ್ನಿಗೆ ಚಟ್ಟ! appeared first on Good News 24x7.

]]>
ಸತ್ಯಗಳನ್ನು ತೊಳೆದು ಇಟ್ಟಂತಾಗಿದೆ ಎಂದ ಧರ್ಮಾಧಿಕಾರಿಗಳು https://www.goodnews24x7.com/%e0%b2%b8%e0%b2%a4%e0%b3%8d%e0%b2%af%e0%b2%97%e0%b2%b3%e0%b2%a8%e0%b3%8d%e0%b2%a8%e0%b3%81-%e0%b2%a4%e0%b3%8a%e0%b2%b3%e0%b3%86%e0%b2%a6%e0%b3%81-%e0%b2%87%e0%b2%9f%e0%b3%8d%e0%b2%9f%e0%b2%82%e0%b2%a4/ Sun, 24 Aug 2025 06:45:04 +0000 https://www.goodnews24x7.com/?p=6636 “ಒಂದೊಂದೇ ಸತ್ಯಗಳು ಹೊರಗೆ ಬರುತ್ತಾ ಇದೆ” ಇದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಇಂದು ನೀಡಿರುವ ಮೊದಲ ಪ್ರತಿಕ್ರಿಯೆ. ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಎಸ್‌ಐಟಿ ಬಂಧಿಸಿರುವ ಘಟನೆಗೆ ಸಂಬಂಧಿಸಿದಂತೆ ವೀರೇಂದ್ರ ಹೆಗ್ಗಡೆ ಅವರು ಮೊದಲ ಪ್ರತ್ರಿಕ್ರಿಯೆ ನೀಡಿದ್ದಾರೆ.ಈಗ ಒಂದೊಂದೇ ಸತ್ಯಗಳು…

The post ಸತ್ಯಗಳನ್ನು ತೊಳೆದು ಇಟ್ಟಂತಾಗಿದೆ ಎಂದ ಧರ್ಮಾಧಿಕಾರಿಗಳು appeared first on Good News 24x7.

]]>

“ಒಂದೊಂದೇ ಸತ್ಯಗಳು ಹೊರಗೆ ಬರುತ್ತಾ ಇದೆ” ಇದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಇಂದು ನೀಡಿರುವ ಮೊದಲ ಪ್ರತಿಕ್ರಿಯೆ. ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಎಸ್‌ಐಟಿ ಬಂಧಿಸಿರುವ ಘಟನೆಗೆ ಸಂಬಂಧಿಸಿದಂತೆ ವೀರೇಂದ್ರ ಹೆಗ್ಗಡೆ ಅವರು ಮೊದಲ ಪ್ರತ್ರಿಕ್ರಿಯೆ ನೀಡಿದ್ದಾರೆ.ಈಗ ಒಂದೊಂದೇ ಸತ್ಯಗಳು ಹೊರಗೆ ಬರುತ್ತಾ ಇದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಇವತ್ತಿನ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನ ನೀಡಿದ್ದ ದೂರಿನ ಆಧಾರದ ಮೇಲೆ ಎಸ್‌ಐಟಿ ತನಿಖೆ ನಡೆಸಿತ್ತು. ಮಾಸ್ಕ್ ಮ್ಯಾನ್ ಚಿನ್ನಯ್ಯ ತೋರಿಸಿದ ಜಾಗಗಳಲೆಲ್ಲಾ ಅಗೆದರೂ, ಮಾಸ್ಕ್ ಮ್ಯಾನ್ ಹೇಳಿದಂತೆ ನೂರಾರು ಶವದ ಅಸ್ಥಿಪಂಜರಗಳು ಸಿಗಲಿಲ್ಲ. ಜೊತೆಗೆ ಮಾಸ್ಕ್ ಮ್ಯಾನ್ ದೂರು, ಹೇಳಿಕೆಯ ಬಗ್ಗೆಯೇ ಅನುಮಾನ ಮೂಢಲಾರಂಭಿಸಿತ್ತು. ಈ ಬಗ್ಗೆ ಪ್ರಶ್ನಿಸಿದರೂ, ಸಮರ್ಪಕ ಉತ್ತರವನ್ನು ಮಾಸ್ಕ್ ಮ್ಯಾನ್ ನೀಡಲು ವಿಫಲನಾಗಿದ್ದಾನೆ. ಮಾಸ್ಕ್ ಮ್ಯಾನ್ ಚಿನ್ನಯ್ಯ ಮೊದಲು ಒಂದು ತಲೆ ಬುರುಡೆಯನ್ನು ತಂದಿದ್ದ.

ಅಮೆರಿಕನ್ ಡೈಮಂಡ್​ನಿಂದ ತಯಾರಾದ ವಿಶೇಷ ಗಣಪ.. ಇದರ ಬೆಲೆ ಎಷ್ಟು ಗೊತ್ತಾ?

 

 

ಆ ಬುರುಡೆಯನ್ನು ಪೊಲೀಸರು ಮತ್ತು ಕೋರ್ಟ್ ಗೆ ನೀಡಿ ಹೇಳಿಕೆಯನ್ನು ನೀಡಿದ್ದ. ಆ ಬುರುಡೆಯನ್ನು ಎಲ್ಲಿಂದ ತಂದಿದ್ದ ಎಂಬುದನ್ನು ತಿಳಿಸಲು ವಿಫಲನಾಗಿದ್ದ. ಹೀಗಾಗಿ ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು ಎಸ್‌ಐಟಿ ಬಂಧಿಸಿದೆ. ಮತ್ತೊಂದೆಡೆ ಮಹೇಶ್ ಶೆಟ್ಟಿ ತಿಮ್ಮರೋಡಿರನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಈ ಎಲ್ಲ ಬೆಳವಣಿಗೆ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ಈಗ ಒಂದೊಂದೇ ಸತ್ಯಗಳು ಹೊರಗೆ ಬರ್ತಾ ಇದೆ” ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ. ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು, ಈ ಬಗ್ಗೆ ಹೆಚ್ಚು ಮಾತನಾಡಲ್ಲ . ಎಸ್ಐಟಿ ತನಿಖೆಯ ಹಂತದಲ್ಲಿ ನಾನು ಹೆಚ್ಚು ಮಾತನಾಡಲ್ಲ. ಧರ್ಮಸ್ಥಳಕ್ಕೆ ಬಂದು ಬೆಂಬಲ ಸೂಚಿಸುವ ಎಲ್ಲರಿಗೂ ಧನ್ಯವಾದಗಳು. ಈಗ ಒಂದೊಂದೇ ಸತ್ಯಗಳು ಹೊರಗೆ ಬರ್ತಾ ಇದೆ. ಸತ್ಯಗಳನ್ನು ತೊಳೆದು ಇಟ್ಟಂತಾಗಿದೆ, ಕ್ಷೇತ್ರದ ಮೇಲಿನ ಅಭಿಮಾನ ಹೀಗೇ ಇರಲಿ. ಎಲ್ಲರ ಪ್ರೀತಿ ವಿಶ್ವಾಸ ಹೀಗೆಯೇ ಇರಲಿ ಎಂದು ಆಶಿಸ್ತೇನೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

The post ಸತ್ಯಗಳನ್ನು ತೊಳೆದು ಇಟ್ಟಂತಾಗಿದೆ ಎಂದ ಧರ್ಮಾಧಿಕಾರಿಗಳು appeared first on Good News 24x7.

]]>
ಶಿಕ್ಷಕಿ ಮೇಲೆ ಲವ್, ಒಪ್ಪದಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವಿದ್ಯಾರ್ಥಿ.  https://www.goodnews24x7.com/sik%e1%b9%a3aki-mele-lav-oppadiddakke-pe%e1%b9%adrol-suridu-be%e1%b9%85ki-haccida-vidyarthi-bhopalstudentpolicejabalpursuryanshkochharpetrolnarsinghpurmadhyapradeshlove-sik%e1%b9%a3aki-pri/ Fri, 22 Aug 2025 12:36:40 +0000 https://www.goodnews24x7.com/?p=6473 ಶಿಕ್ಷಕಿ ಪ್ರೀತಿಯನ್ನು ಒಪ್ಪಿಕೊಳ್ಳದಿದ್ದಕ್ಕೆ, ವಿದ್ಯಾರ್ಥಿಯೊಬ್ಬ ಟೀಚರ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದ ನರಸಿಂಗಪುರದಲ್ಲಿ ನಡೆದಿದೆ. ಘಟನೆಯಲ್ಲಿ ಶಿಕ್ಷಕಿಯ ದೇಹ ಶೇ.30ರಷ್ಟು ಸುಟ್ಟು ಹೋಗಿದೆ. ಅವರು ಜಬಲ್ಪುರ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.…

The post ಶಿಕ್ಷಕಿ ಮೇಲೆ ಲವ್, ಒಪ್ಪದಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವಿದ್ಯಾರ್ಥಿ.  appeared first on Good News 24x7.

]]>

ಶಿಕ್ಷಕಿ ಪ್ರೀತಿಯನ್ನು ಒಪ್ಪಿಕೊಳ್ಳದಿದ್ದಕ್ಕೆ, ವಿದ್ಯಾರ್ಥಿಯೊಬ್ಬ ಟೀಚರ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದ ನರಸಿಂಗಪುರದಲ್ಲಿ ನಡೆದಿದೆ. ಘಟನೆಯಲ್ಲಿ ಶಿಕ್ಷಕಿಯ ದೇಹ ಶೇ.30ರಷ್ಟು ಸುಟ್ಟು ಹೋಗಿದೆ. ಅವರು ಜಬಲ್ಪುರ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಹೆಸರು ಸೂರ್ಯಾಂಶ್ ಕೊಚಾರ್, ಆತ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ.ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಪೆಟ್ರೋಲ್ ಬಾಟಲಿಯೊಂದಿಗೆ ಶಿಕ್ಷಕಿಯ ಮನೆಗೆ ತಲುಪಿದ್ದ.

ಭೋಪಾಲ್ ಶಿಕ್ಷಕಿ ಪ್ರೀತಿಯನ್ನು ಒಪ್ಪಿಕೊಳ್ಳದಿದ್ದಕ್ಕೆ, ವಿದ್ಯಾರ್ಥಿಯೊಬ್ಬ ಟೀಚರ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದ ನರಸಿಂಗಪುರದಲ್ಲಿ ನಡೆದಿದೆ. ಘಟನೆಯಲ್ಲಿ ಶಿಕ್ಷಕಿಯ ದೇಹ ಶೇ.30ರಷ್ಟು ಸುಟ್ಟು ಹೋಗಿದೆ. ಅವರು ಜಬಲ್ಪುರ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯ ಹೆಸರು ಸೂರ್ಯಾಂಶ್ ಕೊಚಾರ್, ಆತ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ.ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಪೆಟ್ರೋಲ್ ಬಾಟಲಿಯೊಂದಿಗೆ ಶಿಕ್ಷಕಿಯ ಮನೆಗೆ ತಲುಪಿದ್ದ. 26 ವರ್ಷದ ಶಿಕ್ಷಕಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದ. ಪ್ರಾಥಮಿಕ ತನಿಖೆಯಲ್ಲಿ ಸೂರ್ಯಾಂಶ್ ಶಿಕ್ಷಕಿಯನ್ನು ಪ್ರೀತಿಸುತ್ತಿದ್ದ ಆದರೆ ಅದು ಒನ್​ ಸೈಡೆಡ್ ಪ್ರೀತಿಯಾಗಿತ್ತು. ಆಗಸ್ಟ್ 15 ರ ಕಾರ್ಯಕ್ರಮಕ್ಕೆ ಶಿಕ್ಷಕಿ ಸೀರೆ ಧರಿಸಿ ಬಂದಾಗ, ಆರೋಪಿ ವಿದ್ಯಾರ್ಥಿನ ಏನೇನೋ ಮನಬಂದಂತೆ ಕಮೆಂಟ್ ಮಾಡಿದ್ದ, ಇದರಿಂದ ಕೋಪಗೊಂಡ ಶಿಕ್ಷಕಿ ಮುಖ್ಯ ಶಿಕ್ಷಕರಿಗೆ ದೂರು ನೀಡಿದ್ದರು.

The post ಶಿಕ್ಷಕಿ ಮೇಲೆ ಲವ್, ಒಪ್ಪದಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವಿದ್ಯಾರ್ಥಿ.  appeared first on Good News 24x7.

]]>
ಕೈ ಕೊಟ್ಟ ಹುಡುಗಿಗೆ ಶಾಕ್ ಕೊಟ್ಟ ಮಾಜಿ ಪ್ರಿಯಕರ…. https://www.goodnews24x7.com/%e0%b2%95%e0%b3%88-%e0%b2%95%e0%b3%8a%e0%b2%9f%e0%b3%8d%e0%b2%9f-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf%e0%b2%97%e0%b3%86-%e0%b2%b6%e0%b2%be%e0%b2%95%e0%b3%8d-%e0%b2%95%e0%b3%8a/ Sun, 18 May 2025 10:05:01 +0000 https://www.goodnews24x7.com/?p=3971 ನಿನ್ನ ನಾಟಕ ಸಾಕು, ಖರ್ಚು ಮಾಡಿದ ನನ್ನ ದುಡ್ಡನ್ನು ವಾಪಸ್ಸು ಕೊಡು ಅಷ್ಟೇ ಎಂದು ಮುಲಾಜು ಇಲ್ಲದೆ ಕೇಳಿದಾನೇ .ಈಗಿನ ಕಾಲದಲ್ಲಿ ಪ್ರಾಮಾಣಿಕವಾಗಿ ಪ್ರೀತಿಸುವವರು ಸಿಗುವುದೇ ವಿರಳ. ಸಣ್ಣ ಪುಟ್ಟ ವಿಚಾರಗಳಿಗೆ ಜಗಳ ಮಾಡಿಕೊಂಡು ದೂರವಾಗುವವವರೇ ಹೆಚ್ಚು. ಕೆಲವರು ತಮ್ಮ ಹಣೆಬರಹ…

The post ಕೈ ಕೊಟ್ಟ ಹುಡುಗಿಗೆ ಶಾಕ್ ಕೊಟ್ಟ ಮಾಜಿ ಪ್ರಿಯಕರ…. appeared first on Good News 24x7.

]]>

ನಿನ್ನ ನಾಟಕ ಸಾಕು, ಖರ್ಚು ಮಾಡಿದ ನನ್ನ ದುಡ್ಡನ್ನು ವಾಪಸ್ಸು ಕೊಡು ಅಷ್ಟೇ ಎಂದು ಮುಲಾಜು ಇಲ್ಲದೆ ಕೇಳಿದಾನೇ .ಈಗಿನ ಕಾಲದಲ್ಲಿ ಪ್ರಾಮಾಣಿಕವಾಗಿ ಪ್ರೀತಿಸುವವರು ಸಿಗುವುದೇ ವಿರಳ. ಸಣ್ಣ ಪುಟ್ಟ ವಿಚಾರಗಳಿಗೆ ಜಗಳ ಮಾಡಿಕೊಂಡು ದೂರವಾಗುವವವರೇ ಹೆಚ್ಚು. ಕೆಲವರು ತಮ್ಮ ಹಣೆಬರಹ ಎಂದು ತಮ್ಮ ಪಾಡಿಗೆ ತಾವು ಇದ್ದು ಬಿಟ್ಟರೆ, ಇನ್ನು ಕೆಲವರು ಸೇಡು ತೀರಿಸಿಕೊಳ್ಳುತ್ತಾರೆ..ಆದರೆ ಇಲ್ಲೊಬ್ಬ ಪ್ರಿಯಕರು ತನ್ನ ಮಾಜಿ ಪ್ರೇಮಿಯ ಬಳಿ ತಾನು ತಿಂಡಿ ತಿನಿಸಿಗೆ ಖರ್ಚು ಮಾಡಿದ ಅಷ್ಟು ಹಣವನ್ನು ಮರುಪಾವತಿ ಮಾಡುವಂತೆ ಹೇಳಿ ಶಾಕ್ ನೀಡಿದ್ದಾನೆ. ಈ ಕುರಿತಾದ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ರೀತಿ ಕೈಕೊಡುವ ಹುಡುಗಿಯರಿಗೆ ಹೀಗೆ ಮಾಡ್ಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಪ್ರೀತಿಯಲ್ಲಿ ಬಿದ್ದ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ಈ ವೇಳೆಯಲ್ಲಿ ತನ್ನ ಪ್ರೇಮಿಯ ಬಳಿ ದುಡ್ಡು ಖರ್ಚು ಮಾಡಿಸುತ್ತಾರೆ. ತನ್ನ ಹುಡುಗಿಗಾಗಿ ಹುಡುಗರು ಗಿಫ್ಟ್ ಸೇರಿದಂತೆ ಕೇಳಿದನ್ನೆಲ್ಲಾ ಕೊಡಿಸುತ್ತಾರೆ. ಆದರೆ ಕೆಲ ಹುಡುಗಿಯರು ಹುಡುಗರನ್ನು ಚೆನ್ನಾಗಿ ಬೋಳಿಸಿ ಕೈ ಕೊಡುವುದನ್ನು ನೋಡಬಹುದು. ಹೀಗಿರುವಾಗ ಕೆಲವು ಹುಡುಗರು ಕೂಡ ಹುಡುಗಿಗೆ ಸರಿಯಾಗಿ ಬುದ್ಧಿ ಕಲಿಸುತ್ತಾರೆ. ಆದರೆ ಇಲ್ಲೊಬ್ಬ ಪ್ರಿಯಕರನು ತನ್ನ ಕೈ ಕೊಟ್ಟ ಹುಡುಗಿಗೆ ಶಾಕ್ ನೀಡಿದ್ದಾನೆ. ತಾನು ನಿನಗಾಗಿ ಏನೆಲ್ಲಾ ತಿಂಡಿ ತಿನಿಸುಗಳನ್ನು ಕೊಡಿಸಿದ್ದೆ ಅದರ ಹಣವನ್ನು ತನಗೆ ಪಾವತಿಸುವೆ ಎಂದು ಹೇಳಿದ್ದಾನೆ. ತನ್ನ ಪ್ರಿಯಕರ ತನ್ನ ಜೊತೆಗೆ ಸಂಭಾಷಣೆ ನಡೆಸಿದ ವಾಟ್ಸಪ್ಪ್ ಸ್ಕ್ರೀನ್ ಶಾರ್ಟ್ ಯುವತಿಯೂ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.

 

The post ಕೈ ಕೊಟ್ಟ ಹುಡುಗಿಗೆ ಶಾಕ್ ಕೊಟ್ಟ ಮಾಜಿ ಪ್ರಿಯಕರ…. appeared first on Good News 24x7.

]]>
ಸಾವಿನಲ್ಲೂ ಒಂದಾದ Love Birds ❤️ https://www.goodnews24x7.com/%e0%b2%b8%e0%b2%be%e0%b2%b5%e0%b2%bf%e0%b2%a8%e0%b2%b2%e0%b3%8d%e0%b2%b2%e0%b3%82-%e0%b2%92%e0%b2%82%e0%b2%a6%e0%b2%be%e0%b2%a6-love-birds-%e2%9d%a4%ef%b8%8f/ Thu, 25 Jul 2024 11:47:11 +0000 https://www.goodnews24x7.com/?p=302 ಪ್ರಿಯತಮೆ ಆತ್ಮಹತ್ಯೆಗೆ ಶರಣಾದ ಹಿನ್ನಲೆ ಪ್ರಿಯತಮನೂ ನೇಣಿಗೆ ಶರಣಾದ ದುರಂತ ಘಟನೆ ಮೈಸೂರಿನಲ್ಲಿ ನಡೆದಿದೆ. ಮೋನಿಕಾ(20) ಹಾಗೂ ಮನು(22) ಮೃತ ಪ್ರೇಮಿಗಳು. ಹತ್ತಿರದ ಸಂಭಂಧಿಗಳಾಗಿದ್ದ ಮಂಡಕಳ್ಳಿ ಗ್ರಾಮದ ನಿವಾಸಿ ಮೋನಿಕಾ ಹಾಗೂ ಮೈಸೂರಿನ ಜ್ಯೋತಿನಗರದ ಮನು ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದರು.…

The post ಸಾವಿನಲ್ಲೂ ಒಂದಾದ Love Birds ❤️ appeared first on Good News 24x7.

]]>

ಪ್ರಿಯತಮೆ ಆತ್ಮಹತ್ಯೆಗೆ ಶರಣಾದ ಹಿನ್ನಲೆ ಪ್ರಿಯತಮನೂ ನೇಣಿಗೆ ಶರಣಾದ ದುರಂತ ಘಟನೆ ಮೈಸೂರಿನಲ್ಲಿ ನಡೆದಿದೆ. ಮೋನಿಕಾ(20) ಹಾಗೂ ಮನು(22) ಮೃತ ಪ್ರೇಮಿಗಳು. ಹತ್ತಿರದ ಸಂಭಂಧಿಗಳಾಗಿದ್ದ ಮಂಡಕಳ್ಳಿ ಗ್ರಾಮದ ನಿವಾಸಿ ಮೋನಿಕಾ ಹಾಗೂ ಮೈಸೂರಿನ ಜ್ಯೋತಿನಗರದ ಮನು ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯಲ್ಲಿ ಇಬ್ಬರಿಗೂ ಮದುವೆ ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದರು.ಇತ್ತೀಚೆಗೆ ಪ್ರೇಮಿಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಭಿನ್ನಾಭಿಪ್ರಾಯ ಬಂದಿದೆ. ಇಬ್ಬರ ನಡುವೆ ಸಣ್ಣ ಗಲಾಟೆ ಆಗಿದೆ. ಇದರಿಂದ ಬೇಸತ್ತ ಮೋನಿಕಾ ದಟ್ಟಗಳ್ಳಿಯ ಕೆಲಸ ಮಾಡುತ್ತಿದ್ದ ಮನೆಯೊಂದರಲ್ಲಿ ನೇಣಿಗೆ ಶರಣಾಗಿದ್ದಾಳೆ. ವಿಷಯ ತಿಳಿದ ಮನು ಸ್ಥಳಕ್ಕೆ ಧಾವಿಸಿ ಮೋನಿಕಾಳನ್ನ ಆಸ್ಪತ್ರೆಗೆ ಕರೆತಂದಿದ್ದಾನೆ. ಆದ್ರೆ ಮೋನಿಕಾ ಮೃತಪಟ್ಟಿದ್ದಾಳೆ. ಮೋನಿಕಾ ಸಾವಿಗೆ ಮನನೊಂದ ಮನು ತಾನೂ ಸಹ ಜ್ಯೋತಿನಗರದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಸಾವಿನಲ್ಲೂ ಸಹ ಪ್ರೇಮಿಗಳು ಒಂದಾಗಿದ್ದಾರೆ….

The post ಸಾವಿನಲ್ಲೂ ಒಂದಾದ Love Birds ❤️ appeared first on Good News 24x7.

]]>