LPG cylinders. Archives - Good News 24x7 https://www.goodnews24x7.com/tag/lpg-cylinders/ Kannada Tue, 24 Mar 2026 12:35:23 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg LPG cylinders. Archives - Good News 24x7 https://www.goodnews24x7.com/tag/lpg-cylinders/ 32 32 ಗೃಹಬಳಕೆ ಎಲ್​ಪಿಜಿ ಸಿಲಿಂಡರ್​ಗಾಗಿ ಜನರ ಕ್ಯೂ! https://www.goodnews24x7.com/people-queue-for-domestic-lpg-cylinderspeople-queue-for-domestic-lpg-cylinders/ Tue, 24 Mar 2026 12:35:16 +0000 https://www.goodnews24x7.com/?p=8966 ನಗರವು ಪ್ರಸ್ತುತ ಗೃಹಬಳಕೆ LPG ಸಿಲಿಂಡರ್ ಕೊರತೆಯನ್ನು ಎದುರಿಸುತ್ತಿದೆ. ರಾಜಧಾನಿಯ ಲಿಂಗರಾಜಪುರದಲ್ಲಿರುವ ವಿನಯ್ ಗ್ಯಾಸ್ ಏಜೆನ್ಸಿ ಮುಂಭಾಗದಲ್ಲಿ ಸಿಲಿಂಡರ್‌ಗಳಿಗಾಗಿ ಜನರು ಅರ್ಧ ಕಿಲೋಮೀಟರ್‌ಗೂ ಹೆಚ್ಚು ದೂರ ಕ್ಯೂ ನಿಂತಿರುವುದು ಕಂಡುಬಂದಿದೆ. ಖಾಲಿ ಸಿಲಿಂಡರ್‌ಗಳನ್ನು ರಸ್ತೆಯಲ್ಲಿ ಸಾಲಾಗಿ ಇಟ್ಟ ಗ್ರಾಹಕರು ಬೆಳಿಗ್ಗೆ 8:30…

The post ಗೃಹಬಳಕೆ ಎಲ್​ಪಿಜಿ ಸಿಲಿಂಡರ್​ಗಾಗಿ ಜನರ ಕ್ಯೂ! appeared first on Good News 24x7.

]]>

ನಗರವು ಪ್ರಸ್ತುತ ಗೃಹಬಳಕೆ LPG ಸಿಲಿಂಡರ್ ಕೊರತೆಯನ್ನು ಎದುರಿಸುತ್ತಿದೆ. ರಾಜಧಾನಿಯ ಲಿಂಗರಾಜಪುರದಲ್ಲಿರುವ ವಿನಯ್ ಗ್ಯಾಸ್ ಏಜೆನ್ಸಿ ಮುಂಭಾಗದಲ್ಲಿ ಸಿಲಿಂಡರ್‌ಗಳಿಗಾಗಿ ಜನರು ಅರ್ಧ ಕಿಲೋಮೀಟರ್‌ಗೂ ಹೆಚ್ಚು ದೂರ ಕ್ಯೂ ನಿಂತಿರುವುದು ಕಂಡುಬಂದಿದೆ. ಖಾಲಿ ಸಿಲಿಂಡರ್‌ಗಳನ್ನು ರಸ್ತೆಯಲ್ಲಿ ಸಾಲಾಗಿ ಇಟ್ಟ ಗ್ರಾಹಕರು ಬೆಳಿಗ್ಗೆ 8:30 ರಿಂದಲೇ ಕಾಯುತ್ತಿದ್ದಾರೆ.

ಕಳೆದ ಒಂದು ವಾರದಿಂದ ಸಪ್ಲೈ ಆಗಿಲ್ಲ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು 10 ರಿಂದ 24 ದಿನಗಳವರೆಗೆ ಸಿಲಿಂಡರ್ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಆಹಾರ ಸಚಿವ ಮುನಿಯಪ್ಪ , ಗ್ಯಾಸ್ ಏಜೆನ್ಸಿಗಳ ಮುಂದೆ ಕ್ಯೂ ನಿಲ್ಲಬೇಡಿ, ಮನೆಬಾಗಿಲಿಗೆ ಸಿಲಿಂಡರ್ ತಲುಪಿಸಲಾಗುವುದು ಎಂದು ಹೇಳಿದರೂ, ವಾಸ್ತವದಲ್ಲಿ ಬೆಂಗಳೂರಿನ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿರವಂತೆ ಕಾಣುತ್ತಿದೆ.

 

ಸಿಲಿಂಡರ್ ವಿತರಣಾ ಏಜೆನ್ಸಿಯ ಹೇಳುವಂತೆ 5000 ಬುಕಿಂಗ್‌ಗಳಿಗೆ ಕೇವಲ 300-500 ಸಿಲಿಂಡರ್‌ಗಳು ಬರುತ್ತಿವೆ. ಇದಕ್ಕೆ “ಪ್ಯಾನಿಕ್ ಬುಕಿಂಗ್” ಕಾರಣ ಎಂದು ಹೇಳಲಾಗುತ್ತಿದೆ. ಸರ್ಕಾರವು ದೇಶೀಯ ಸಿಲಿಂಡರ್‌ಗಳಿಗೆ ಯಾವುದೇ ಕೊರತೆ ಇಲ್ಲ ಎಂದು ಹೇಳುತ್ತಿದ್ದರೂ, ಬೆಂಗಳೂರಿನಲ್ಲಿ ಜನರು ತಮ್ಮ ದೈನಂದಿನ ಕಾರ್ಯಗಳನ್ನು ಬಿಟ್ಟು ಸಿಲಿಂಡರ್‌ಗಳಿಗಾಗಿ ಕಾಯುತ್ತಿದ್ದಾರೆ. OTP ಬಂದಿದ್ದರೂ ಸಿಲಿಂಡರ್ ಸಿಗದಂತಹ ಪ್ರಕರಣಗಳು ವರದಿಯಾಗಿದೆ.

The post ಗೃಹಬಳಕೆ ಎಲ್​ಪಿಜಿ ಸಿಲಿಂಡರ್​ಗಾಗಿ ಜನರ ಕ್ಯೂ! appeared first on Good News 24x7.

]]>
ಸೌದೆ ಒಲೆ ಮೇಲೆ ಅಡುಗೆ ಮಾಡಿದ ಇಂದಿರಾ ಕ್ಯಾಂಟಿನ್​ ಸಿಬ್ಬಂದಿ! https://www.goodnews24x7.com/indira-canteen-staff-cooking-on-a-wood-stoveindira-canteen-staff-cooking-on-a-wood-stove/ Fri, 13 Mar 2026 12:28:30 +0000 https://www.goodnews24x7.com/?p=8883   ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಕರ್ನಾಟಕದ ಮೇಲೂ ಬೀರಿದ್ದು, LPG ಸಿಲಿಂಡರ್ ಪೂರೈಕೆ ವ್ಯತ್ಯಯ ಉಂಟಾಗಿದೆ. ಇತ್ತ ಕಲಬುರಗಿಯಲ್ಲೂ ಸಿಲಿಂಡರ್ ಕೊರತೆಯಾಗಿದ್ದು ಜನ, ಹೋಟೆಲ್ ಉದ್ಯಮದಾರರು ಪರದಾಡುತ್ತಿದ್ದಾರೆ. ಹೀಗಾಗಿ ಎಲ್ಲರೂ ಸೌದೆ ಒಲೆಯತ್ತ ಮುಖ ಮಾಡಿದ್ದು, ಇಂದಿರಾ ಕ್ಯಾಂಟಿನ್​​​ಗಳಲ್ಲಿ ಸೌದೆ ಒಲೆ…

The post ಸೌದೆ ಒಲೆ ಮೇಲೆ ಅಡುಗೆ ಮಾಡಿದ ಇಂದಿರಾ ಕ್ಯಾಂಟಿನ್​ ಸಿಬ್ಬಂದಿ! appeared first on Good News 24x7.

]]>

 

ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಕರ್ನಾಟಕದ ಮೇಲೂ ಬೀರಿದ್ದು, LPG ಸಿಲಿಂಡರ್ ಪೂರೈಕೆ ವ್ಯತ್ಯಯ ಉಂಟಾಗಿದೆ. ಇತ್ತ ಕಲಬುರಗಿಯಲ್ಲೂ ಸಿಲಿಂಡರ್ ಕೊರತೆಯಾಗಿದ್ದು ಜನ, ಹೋಟೆಲ್ ಉದ್ಯಮದಾರರು ಪರದಾಡುತ್ತಿದ್ದಾರೆ. ಹೀಗಾಗಿ ಎಲ್ಲರೂ ಸೌದೆ ಒಲೆಯತ್ತ ಮುಖ ಮಾಡಿದ್ದು, ಇಂದಿರಾ ಕ್ಯಾಂಟಿನ್​​​ಗಳಲ್ಲಿ ಸೌದೆ ಒಲೆ ಮೇಲೆ ಅಡುಗೆ ಮಾಡಲಾಗಿದೆ.

ಕಲಬುರಗಿ, ಇಸ್ರೇಲ್ ಮತ್ತು ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧ ನಮ್ಮ ರಾಜ್ಯಕ್ಕೂ ಅದರ ಪರಿಣಾಮ ನೇರವಾಗಿ ತಟ್ಟಿದೆ. ಸಿಲಿಂಡರ್​ಗಳ (LPG cylinder) ಪೂರೈಕೆಯಲ್ಲಿ ವ್ಯತ್ಯಯ ಶುರುವಾಗಿದೆ. ಇತ್ತ ಕಲಬುರಗಿಯಲ್ಲಿ ಇಂದಿರಾ ಕ್ಯಾಂಟಿನ್ ಅಡುಗೆ ಮಾಡುವುದಕ್ಕೆ ಸೌದೆ ಒಲೆಯೇ ಗತಿ ಎನ್ನುವಂತಾಗಿದೆ.

ಕಳೆದ ಹತ್ತು ದಿನಗಳಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಬಿಸಿ ಭಾರತಕ್ಕೂ ತಟ್ಟಿದೆ. ಅದು ಎಲ್​ಲಿಜಿ ಸಿಲಿಂಡರ್​ಗಳ ಮೇಲೆ ನೇರ ಪರಿಣಾಮ ಬೀರಿದ. ಇರಾನ್ – ಇಸ್ರೇಲ್ ಯುದ್ದದಿಂದ ಕಲಬುರಗಿಯಲ್ಲಿಯೂ ನಿನ್ನೆಯಿಂದಲೇ ಕಮರ್ಷಿಯಲ್ ಸಿಲಿಂಡರ್ ಕೊರತೆಯಾಗಿದ್ದು ಜನ, ಹೋಟೆಲ್ ಉದ್ಯಮದಾರರು ಪರದಾಡುತ್ತಿದ್ದಾರೆ.

ಇಂದಿರಾ ಕ್ಯಾಂಟಿನ್​​ಗೂ ಸಿಲಿಂಡರ್ ಸಪ್ಲೈ ಬಂದ್ ಆದ ಹಿನ್ನಲೆ ಸಿಬ್ಬಂದಿ ಸೌದೆ ಒಲೆ ಮೊರೆ ಹೋಗಿದ್ದಾರೆ. ಕಲಬುರಗಿ ನಗರದ ಎಂಟು ಇಂದಿರಾ ಕ್ಯಾಂಟಿನ್​​ಗಳಿಗೂ ಸೌದೆ ಒಲೆ ಮೇಲೆಯೇ ಅಡುಗೆ ಮಾಡಲಾಗಿದೆ. ಏಕೆಂದರೆ ನಿನ್ನೆಯವರೆಗೂ ತಮ್ಮ ಬಳಿ ಇದ್ದ ಸಿಲಿಂಡರ್​​ಗಳ ಮೂಲಕ ಸಿಬ್ಬಂದಿ ಅಡುಗೆ ಮಾಡಿದ್ದಾರೆ. ಆದರೆ ಸಿಲಿಂಡರ್ ಸಿಗದ ಕಾರಣ, ಬೆಳಿಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಮತ್ತು ರಾತ್ರಿ ಊಟವನ್ನ ಸೌದೆ ಒಲೆಯಲ್ಲಿಯೇ ಮಾಡಿದ್ದಾರೆ.

ಅಷ್ಟೆ ಅಲ್ಲದೇ ಚಪಾತಿಯನ್ನ ಹೊರಗಡೆಯಿಂದ ಖರೀದಿ ಮಾಡಿ ಜನರಿಗೆ ನೀಡಿದ್ದಾರೆ. ಇನ್ನು ಆಸ್ಪತ್ರೆಗಳ ಪಕ್ಕ ಇರುವ ಇಂದಿರಾ ಕ್ಯಾಂಟಿನ್​ನಲ್ಲಿ ಇಡ್ಲಿ, ಸಾಂಬರ್​ಗೆ ಹೆಚ್ಚಿನ ಬೇಡಿಕೆಯಿದೆ. ಆದರೆ ಸಿಲಿಂಡರ್ ಇಲ್ಲದ ಪರಿಣಾಮ ಕೇವಲ ಉಪ್ಪಿಟ್ಟು, ಅವಲಕ್ಕಿ ಮಾಡಲಾಗುತ್ತಿದೆಯಂತೆ. ಸೌದೆ ಒಲೆ ಮೇಲೆ ಅಡುಗೆ ಮಾಡುವುದಕ್ಕೆ ಕೆಲಸಗಾರರು ಮುಂದೆ ಬರ್ತಿಲ್ಲ, ಆದರೆ ಬಡವರು ಉಪವಾಸ ಇರಬಾರದು ಎನ್ನುವ ಕಾರಣಕ್ಕೆ ನಾವೇ ಅಡುಗೆ ಮಾಡುತ್ತಿದ್ದೇವೆ ಎಂದು ಸಿಬ್ಬಂದಿ ಬಸವರಾಜ್​​ ಹೇಳುತ್ತಾರೆ.

ರಾಜ್ಯದಲ್ಲಿ ಯಾವಾಗ ಸಿಲಿಂಡರ್​​ಗಳ ಸಮಸ್ಯೆ ಉದ್ಭವವಾಯ್ತೋ, ಅಲ್ಲಿಗೆ ಹೋಟೆಲ್, ಢಾಬಾ ಹಾಗೂ ಮದುವೆ ಕಾರ್ಯಕ್ರಮಗಳಿಗೆ ಕೇಟರಿಂಗ್​​ನವರು ಸೌದೆ ಒಲೆಯತ್ತ ಮುಖ ಮಾಡಿದ್ದಾರೆ. ಅದಕ್ಕಾಗಿ ನಗರದಲ್ಲಿ ಕಟ್ಟಿಗೆ ಅಡ್ಡೆಗಳಲ್ಲಿ ಸೌದೆ ಖರೀದಿ ಮಾಡುವುದಕ್ಕೆ ಮುಗಿಬಿದ್ದಿದ್ದಾರೆ. ವಿವಿಧ ಕಾರ್ಯಕ್ರಮಗಳಿಗೆ ಅಡುಗೆ ಗುತ್ತಿಗೆ ಹಿಡಿದಿರುವ ಕೇಟರಿಂಗ್​​ನವರಿಗೆ ಗ್ಯಾಸ್ ಟ್ರಬಲ್ ಎದುರಾಗಿದೆ. ಹೀಗಾಗಿ ಸೌದೆ ಒಲೆಯಲ್ಲೇ ಅಡುಗೆ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ.

ಒಟ್ಟಿನಲ್ಲಿ ಸದ್ಯ ಕಲಬುರಗಿಯಲ್ಲಿಯೂ ಸಿಲಿಂಡರ್ ಹಾಹಾಕಾರ ಶುರುವಾಗಿದೆ. ಮುಂದೆ ಅದ್ಯಾವ ಮಟ್ಟಕ್ಕೆ ಹೋಗುತ್ತೋ ಕಾದುನೋಡಬೇಕು. ಏಕೆಂದರೆ ಸಿಲಿಂಡರ್​​ ಸಿಗದಿದ್ದರೆ ಮತ್ತಷ್ಟು ಸಂಕಷ್ಟ ಎದುರಾಗೋದು ಕಟ್ಟಿಟ್ಟ ಬುತ್ತಿ.

 

The post ಸೌದೆ ಒಲೆ ಮೇಲೆ ಅಡುಗೆ ಮಾಡಿದ ಇಂದಿರಾ ಕ್ಯಾಂಟಿನ್​ ಸಿಬ್ಬಂದಿ! appeared first on Good News 24x7.

]]>