Maha Kumbh Mela Archives - Good News 24x7 https://www.goodnews24x7.com/tag/maha-kumbh-mela/ Kannada Wed, 22 Jan 2025 12:41:35 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Maha Kumbh Mela Archives - Good News 24x7 https://www.goodnews24x7.com/tag/maha-kumbh-mela/ 32 32 ಮಹಾಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಸುಧಾಮೂರ್ತಿ. https://www.goodnews24x7.com/%e0%b2%ae%e0%b2%b9%e0%b2%be%e0%b2%95%e0%b3%81%e0%b2%82%e0%b2%ad-%e0%b2%ae%e0%b3%87%e0%b2%b3%e0%b2%a6-%e0%b2%a4%e0%b3%8d%e0%b2%b0%e0%b2%bf%e0%b2%b5%e0%b3%87%e0%b2%a3%e0%b2%bf-%e0%b2%b8%e0%b2%82/ Wed, 22 Jan 2025 12:41:35 +0000 https://www.goodnews24x7.com/?p=1842 ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಮಂಗಳವಾರ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ಇಂದು ಕೂಡ ಪವಿತ್ರ ಸ್ನಾನ ಮಾಡಿದ್ದಾರೆ, ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಕೂಡ…

The post ಮಹಾಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಸುಧಾಮೂರ್ತಿ. appeared first on Good News 24x7.

]]>

ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಮಂಗಳವಾರ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ಇಂದು ಕೂಡ ಪವಿತ್ರ ಸ್ನಾನ ಮಾಡಿದ್ದಾರೆ, ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಕೂಡ ಸೂರ್ಯ ದೇವರನ್ನು ಪೂಜಿಸಿದರು. ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವ್ಯವಸ್ಥೆಗಳನ್ನು ಶ್ಲಾಘಿಸಿದರು.

ರಾಜ್ಯಸಭಾ ಸಂಸದೆ, ಇನ್ಫೋಸಿಸ್ ಫೌಂಡೇಶನ್ ಸಹ ಸಂಸ್ಥಾಪಕಿ ಸುಧಾಮೂರ್ತಿ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಭೇಟಿ ನೀಡಿ, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ದೇಶ ವಿದೇಶಗಳಿಂದ ಕೋಟ್ಯಂತರ ಭಕ್ತರು ಪ್ರಯಾಗ್ರಾಜ್ ಮಹಾಕುಂಭಕ್ಕೆ ಆಗಮಿಸಿ ಸಂಗಮದಲ್ಲಿ ಸ್ನಾನ ಮಾಡುತ್ತಿದ್ದಾರೆ. ಮೂರು ದಿನಗಳ ಕಾಲ ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಪೂರ್ವಜರಿಗೆ ತರ್ಪಣ ನೀಡುವುದಾಗಿ ಸುಧಾಮೂರ್ತಿ ತಿಳಿಸಿದರು.
ಈ ವೇಳೆ ಮಹಾಕುಂಭದ ವ್ಯವಸ್ಥೆ ಕಂಡು ಸಂತಸ ವ್ಯಕ್ತಪಡಿಸಿದ ಅವರು ಸಿಎಂ ಯೋಗಿ ಅವರಿಗೆ ದೀರ್ಘಾಯುಷ್ಯ ನೀಡಲಿ ಎಂದು ಹಾರೈಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸುಧಾ ಮೂರ್ತಿ, ನಾನು ಮೂರು ದಿನ ಪ್ರತಿಜ್ಞೆ ಮಾಡಿದ್ದೇನೆ. ನಮ್ಮ ತಾಯಿಯ ಅಜ್ಜ, ಅಜ್ಜಿ ಮತ್ತು ಅಜ್ಜ ಇಲ್ಲಿಗೆ ಬರಲು ಸಾಧ್ಯವಾಗಲಿಲ್ಲ.
ನಾವು ಕರ್ನಾಟಕದಿಂದ ಬಂದಿದ್ದೇವೆ. ಆ ಸಮಯದಲ್ಲಿ ಅವರಿಗೆ ಅದು ಸಾಧ್ಯವಾಗಲಿಲ್ಲ. ಅವರ ಹೆಸರಿನಲ್ಲಿ ನಾನು ತರ್ಪಣವನ್ನು ಅರ್ಪಿಸಬೇಕು. ಅದಕ್ಕಾಗಿಯೇ ಮೂರು ದಿನ ಸ್ನಾನ ಮಾಡಿ ತರ್ಪಣ ನೀಡುತ್ತೇನೆ ಎಂದು ಮೂರು ದಿನ ಉಪವಾಸ ಕೈಗೊಂಡಿದ್ದೇನೆ ಎಂದರು.
ದೇವರು ಮತ್ತು ಗಂಗಾಮಾತೆಯ ಆಶೀರ್ವಾದದಿಂದ ಮಹಾಕುಂಭದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಇಲ್ಲಿ ಬಹಳ ಒಳ್ಳೆಯ ವ್ಯವಸ್ಥೆ ಇದೆ. ಸಿಎಂ ಯೋಗಿ ನೇತೃತ್ವದಲ್ಲಿ ಪೊಲೀಸರು ಜನರಿಗೆ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಸಿಎಂ ಯೋಗಿಗೆ ದೇವರು ದೀರ್ಘಾಯುಷ್ಯ ನೀಡಲಿ ಎಂದರು.

The post ಮಹಾಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಸುಧಾಮೂರ್ತಿ. appeared first on Good News 24x7.

]]>
ಮಹಾಕುಂಭಮೇಳದಲ್ಲಿ ವೈರಲ್ ಆದ ಮೊನಾಲಿಸಾಗೆ ಬಾಲಿವುಡ್ ನಿಂದ ಬಂತು ಬಂಪರ್ ಆಫರ್. https://www.goodnews24x7.com/%e0%b2%ae%e0%b2%b9%e0%b2%be%e0%b2%95%e0%b3%81%e0%b2%82%e0%b2%ad%e0%b2%ae%e0%b3%87%e0%b2%b3%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b5%e0%b3%88%e0%b2%b0%e0%b2%b2%e0%b3%8d-%e0%b2%86%e0%b2%a6/ Tue, 21 Jan 2025 11:35:05 +0000 https://www.goodnews24x7.com/?p=1819 ಉತ್ತರಪ್ರದೇಶದ ಪ್ರಯಾಗ್ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಸುಂದರ ಯುವತಿಯ ಚಿತ್ರ ಇತ್ತೀಚೆಗೆ ವೈರಲ್ ಆಗಿತ್ತು. ಆ ಯುವತಿಯನ್ನು ಮೊನಾಲಿಸಾಗೆ ಹೋಲಿಸಲಾಗಿತ್ತು. ಭಾರತದ ಮೊನಾಲಿಸಾ ಎಂದೇ ಆ ಯುವತಿ ಫೇಮಸ್ ಆಗಿದ್ದರು. ಇದೀಗ ಆ ಯುವತಿಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸುವ…

The post ಮಹಾಕುಂಭಮೇಳದಲ್ಲಿ ವೈರಲ್ ಆದ ಮೊನಾಲಿಸಾಗೆ ಬಾಲಿವುಡ್ ನಿಂದ ಬಂತು ಬಂಪರ್ ಆಫರ್. appeared first on Good News 24x7.

]]>

ಉತ್ತರಪ್ರದೇಶದ ಪ್ರಯಾಗ್ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಸುಂದರ ಯುವತಿಯ ಚಿತ್ರ ಇತ್ತೀಚೆಗೆ ವೈರಲ್ ಆಗಿತ್ತು. ಆ ಯುವತಿಯನ್ನು ಮೊನಾಲಿಸಾಗೆ ಹೋಲಿಸಲಾಗಿತ್ತು. ಭಾರತದ ಮೊನಾಲಿಸಾ ಎಂದೇ ಆ ಯುವತಿ ಫೇಮಸ್ ಆಗಿದ್ದರು. ಇದೀಗ ಆ ಯುವತಿಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಿದೆ.ಈ ಸೋಷಿಯಲ್ ಮೀಡಿಯಾ ಕಾಲದಲ್ಲಿ ಎಲ್ಲೋ ಇದ್ದವರು ರಾತ್ರಿ ಕಳೆದು ಬೆಳಗಾಗುವದರೊಳಗೆ ಸ್ಟಾರ್ ಆಗಿಬಿಡುತ್ತಾರೆ. ಹಲವರ ಜೀವನವೇ ಬದಲಾಗಿ ಬಿಡುತ್ತದೆ. ಟೀ ಮಾರುವ ಹುಡುಗ ಮಾಡೆಲ್ ಆಗಿದ್ದು, ಭಿಕ್ಷುಕ ಮಾಡೆಲ್ ಆಗಿದ್ದು, ಮೀನು ಮಾರುವ ಹುಡುಗಿ ಫ್ಯಾಷನ್ ಶೋ ಮಾಡಿದ್ದು, ಒಂದು ಕಣ್ಸನ್ನೆಯಿಂದ ಪ್ರಿಯಾ ವಾರಿಯಸ್ ಸ್ಟಾರ್ ಆಗಿದ್ದು ಎಲ್ಲವೂ ಸಾಧ್ಯವಾಗಿದ್ದು ಇದೇ ಸೋಷಿಯಲ್ ಮೀಡಿಯಾದಿಂದ. ಇದೀಗ ಮಹಾಕುಂಭದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಹುಡುಗಿಗೆ ಇದೇ ಸಾಮಾಜಿಕ ಜಾಲತಾಣದಿಂದ ಅದೃಷ್ಟ ಖುಲಾಯಿಸಿದೆ.
ವೈರಲ್ ಹುಡುಗಿ ಮೊನಾಲಿಸಾಗೆ ಬಾಲಿವುಡ್ನಿಂದ ಆಫರ್ ಬಂದಿದೆ. ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಯುವತಿಯೊಬ್ಬಾಕೆಯ ಚಿತ್ರವೊಂದು ಸಖತ್ ವೈರಲ್ ಆಗಿತ್ತು. ಆಕೆಯ ಸೌಂದರ್ಯಕ್ಕೆ ವಿಶೇಷವಾಗಿ ಆಕೆಯ ಸೆಳೆಯುವ ಕಣ್ಣುಗಳಿಗೆ ಜನ ಮಾರು ಹೋಗಿದ್ದರು. ಆ ಯುವತಿಯನ್ನು ಮೊನಾಲಿಸಾಗೆ ಹೋಲಿಸಲಾಗಿತ್ತು. ಭಾರತದ ಮೊನಾಲಿಸಾ ಎಂದೇ ಸಾಮಾಜಿಕ ಜಾಲತಾಣದಲ್ಲಿ ಆ ಚೆಲುವೆ ಫೇಮಸ್ ಆಗಿದ್ದರು. ಇದೀಗ ಬಾಲಿವುಡ್ ಕಣ್ಣು ಯುವತಿ ಮೊನಾಲಿಸಾ ಮೇಲೆ ಬಿದ್ದಿದೆ. ಮೊನಾಲಿಸಾಗೆ ಬಾಲಿವುಡ್ನಿಂದ ಆಫರ್ ಬಂದಿದೆ.ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರ, ಆ ವೈರಲ್ ಯುವತಿಗೆ ತಮ್ಮ ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ.

ಸನೋಜ್ ಮಿಶ್ರ ‘ಡೈರಿ ಆಫ್ ಮಣಿಪುರ್’ ಹೆಸರಿನ ಸಿನಿಮಾ ಅನ್ನು ನಿರ್ದೇಶನ ಮಾಡುತ್ತಿದ್ದು, ಆ ಸಿನಿಮಾದಲ್ಲಿ ವೈರಲ್ ಹುಡುಗಿಯೇ ನಾಯಕಿ. ಇದಕ್ಕಾಗಿ ಮೊನಾಲಿಸಾ ಲುಕ್ ಟೆಸ್ಟ್ ಸಹ ನಡೆಸಲಾಗಿದೆ. ವೈರಲ್ ಯುವತಿಗೆ ಮೇಕೋವರ್ ಮಾಡಲಾಗಿದ್ದು, ಮೇಕೊವರ್ ವಿಡಿಯೋ ಇದೀಗ ವೈರಲ್ ಆಗಿದೆ. ಇದು ಮಾತ್ರವೇ ಅಲ್ಲದೆ ಮಹಾಕುಂಭದ ಮೊನಾಲಿಸಾಗೆ ನಟನಾ ತರಬೇತಿಯನ್ನು ಸಹ ಕೊಡಿಸಲಾಗುತ್ತಿದೆ.ಹೀಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವರಿಗೆ ಸಿನಿಮಾ ಅವಕಾಶಗಳು ಇದು ಮೊದಲೇನೂ ಅಲ್ಲ.
ಈ ಹಿಂದೆ ಬೀದಿಯಲ್ಲಿ ಹಾಡು ಹಾಡುತ್ತಿದ್ದ ರಾನು ಮಂಡಲ್ಗೆ ಬಾಲಿವುಡ್ ಸಿನಿಮಾ ಹಾಡು ಹಾಡುವ ಅವಕಾಶ ನೀಡಲಾಗಿತ್ತು. ಇದರಿಂದಾಗಿ ರಾನು ಮಂಡಲ್ ರಾತ್ರೋರಾತ್ರಿ ಸೆಲೆಬ್ರಿಟಿ ಆಗಿಬಿಟ್ಟಿದ್ದರು. ಕೇರಳದಲ್ಲಿ ಮೀನು ಮಾರುತ್ತಿದ್ದ ಯುವತಿಗೆ ಫ್ಯಾಷನ್ ಶೋನಲ್ಲಿ ಶೋ ಸ್ಟಾಪರ್ ಮಾಡಲಾಗಿತ್ತು. ಮಲಯಾಳಿ ನಟಿ ಪ್ರಿಯಾ ವಾರಿಯರ್ ಸಹ ಸ್ಟಾರ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಅವರ ಒಂದು ಸಣ್ಣ ಕ್ಲಿಪ್ನಿಂದಲೇ. ಇದೀಗ ಮಹಾಕುಂಭದ ಮೊನಾಲಿಸಾಳ ಸರದಿ. ಈ ಅವಕಾಶವನ್ನು ಯುವತಿ ಸದುಪಯೋಗ ಪಡಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ. ಸದುಪಯೋಗಪಡಿಸಿಕೊಳ್ಳಲಿ ಎಂಬುದು ಎಲ್ಲ ನೆಟ್ಟಿಗರ ಆಸೆಯಾಗಿದೆ. ಮತ್ತು ಕೆಲವರು , ದೇವರು ಬಡವರಿಗೆ ಐಶ್ವರ್ಯವನ್ನು ಕೊಡುವುದರಲ್ಲಿ ಕಡಿಮೆ ಮಾಡಿದರು ಸೌಂದರ್ಯದ ಕೊರತೆ ಮಾಡಿಲ್ಲ ಎಂದು ಕಾಮೆಂಟ್ ಗಳ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದಾರೆ.

The post ಮಹಾಕುಂಭಮೇಳದಲ್ಲಿ ವೈರಲ್ ಆದ ಮೊನಾಲಿಸಾಗೆ ಬಾಲಿವುಡ್ ನಿಂದ ಬಂತು ಬಂಪರ್ ಆಫರ್. appeared first on Good News 24x7.

]]>
ಆಪಲ್ ಕಂಪನಿ ಮಾಲೀಕ ಸ್ಟೀವ್ ಜಾಬ್, ಪತ್ನಿ ಲಾರೆನ್, ಮಹಾಮೇಳದಲ್ಲಿ ಭಾಗಿ. https://www.goodnews24x7.com/%e0%b2%86%e0%b2%aa%e0%b2%b2%e0%b3%8d-%e0%b2%95%e0%b2%82%e0%b2%aa%e0%b2%a8%e0%b2%bf-%e0%b2%ae%e0%b2%be%e0%b2%b2%e0%b3%80%e0%b2%95-%e0%b2%b8%e0%b3%8d%e0%b2%9f%e0%b3%80%e0%b2%b5%e0%b3%8d-%e0%b2%9c/ Mon, 13 Jan 2025 07:16:32 +0000 https://www.goodnews24x7.com/?p=1746 ಪ್ರಯಾಗ್‌ರಾಜ್, ಜ.12- ಉತ್ತರ ಪ್ರದೇಶದ ಧಾರ್ಮಿಕ ನಗರವಾದ ಪ್ರಯಾಗ ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಪ್ರಯಾಗ್‌ರಾಜ್ ನಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ . ಮಹಾ ಕುಂಭಮೇಳ ನಡೆಯಲಿದೆ. ಇದೀಗ ಮಹಾ ಕುಂಭಮೇಳದಲ್ಲಿ ವಿಶೇಷ ಸಂಗತಿ ಎಂದರೆ, ಜಗತ್ಪಸಿದ್ದ ಆಪಲ್…

The post ಆಪಲ್ ಕಂಪನಿ ಮಾಲೀಕ ಸ್ಟೀವ್ ಜಾಬ್, ಪತ್ನಿ ಲಾರೆನ್, ಮಹಾಮೇಳದಲ್ಲಿ ಭಾಗಿ. appeared first on Good News 24x7.

]]>

ಪ್ರಯಾಗ್‌ರಾಜ್, ಜ.12- ಉತ್ತರ ಪ್ರದೇಶದ ಧಾರ್ಮಿಕ ನಗರವಾದ ಪ್ರಯಾಗ ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳಕ್ಕೆ ಕೌಂಟ್‌ಡೌನ್ ಶುರುವಾಗಿದೆ.

ಪ್ರಯಾಗ್‌ರಾಜ್ ನಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ . ಮಹಾ ಕುಂಭಮೇಳ ನಡೆಯಲಿದೆ. ಇದೀಗ ಮಹಾ ಕುಂಭಮೇಳದಲ್ಲಿ ವಿಶೇಷ ಸಂಗತಿ ಎಂದರೆ, ಜಗತ್ಪಸಿದ್ದ ಆಪಲ್ ಕಂಪನಿ ಮಾಲೀಕ ಸ್ಟೀವ್ ಜಾಬ್ ಅವರ ಪತ್ನಿ ‘ಲಾರೆನ್ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ಕಲ್ಪವಾಸ ವ್ರತ ಮಾಡಲಿದ್ದಾರೆ. ಕುಂಭಮೇಳದ ಜಾಗಕ್ಕೆ ತಲುಪುವ ಮೊದಲೇ ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿದ ಲಾರೆನ್ ಅವರು ತನ್ನ ಹೆಸರನ್ನು ಸಹ ಬದಲಾಯಿಸಿಕೊಂಡಿದ್ದು, ಗುರು ನಿರಂಜನಿ ಪೀಠಾಧೀಶ್ವರ ಮಹಂತ್ ಕೈಲಾಶಾನಂದ ಗಿರಿ ಅವರಿಗೆ ತಮ್ಮ ಗೋತ್ರವನ್ನು ನೀಡಿದ ಬಳಿಕ ಲಾರೆನ್‌ಗೆ ಅವರು ಕಮಲಾ ಎಂದು ಹೆಸರಿಟ್ಟರು. ನಂತರ ಆಪಲ್ ಕಂಪನಿ ಮಾಲೀಕ ಸ್ಟೀವ್ ಜಾಬ್ ಅವರ ಪತ್ನಿ ಲಾರೆನ್ ಪಾಶ್ಚಿಮಾತ್ಯ ಉಡುಗೆಯ ಬದಲು ಸನ್ಯಾಸಿ ನಿಲುವಂಗಿಯನ್ನು ಧರಿಸಿರುವುದು ಅಚ್ಚರಿ ಮೂಡಿಸಿದೆ.
ಪ್ರಯಾಗರಾಜ್‌ನಲ್ಲಿ ನಡೆಯುವ ಮಹಾಕುಂಭಮೇಳದಲ್ಲಿ ಲಾರೆನ್ ಅವರು ತಮ್ಮ ಹೆಸರನ್ನು ಕಮಲಾ ಎಂದು ಬದಲಾಯಿಸಿಕೊಳ್ಳುವ ಮೂಲಕ ಸನಾತನ ಧರ್ಮದ ಆಚರಣೆಗಳನ್ನು ಅರ್ಥೈಸಿಕೊಳ್ಳಲು ಮುಂದಾಗಿದ್ದಾರೆ. ಅವರು ಮಹಾಕುಂಭಮೇಳದ ಸಮಯ ದಲ್ಲಿ ಅಲ್ಲಿ ನಡೆಯುವ ಕಥೆಗಳು ಮತ್ತು ಪ್ರವಚನಗಳಲ್ಲಿ ಭಾಗವಹಿಸುತ್ತಾರೆ ಎಂದು ತಿಳಿದು ಬಂದಿದೆ.

ಸ್ವಾಮಿ ಕೈಲಾಶಾ ನಂದ ಗಿರಿ ಅವರ ಪ್ರಕಾರ ಲಾರೆನ್ ಜಾಬ್ ಸನಾತನ ಧರ್ಮದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಅವರು ಕೈಲಾಶಾನಂದ ಗಿರಿ ಅವರನ್ನು ತನ್ನ ತಂದೆ ಎಂದು ಪರಿಗಣಿಸಿದ್ದಾರಂತೆ. ಸ್ವಾಮಿ ಕೈಲಾಶಾನಂದ ಗಿರಿ ಅವರಿಗೆ ತಮ್ಮ ಗೋತ್ರವನ್ನು ನೀಡಿದ ಲಾರೆನ್ ಅವರು ಪ್ರಸ್ತುತ ತಮ್ಮ ತಂಡದೊಂದಿಗೆ ವಾರಣಾಸಿಯಲ್ಲಿ ನೆಲೆಸಿದ್ದಾರೆ. ಲಾರೆನ್ ಪೊವೆಲ್ ಜ.13 ರಂದು ಕಾಶಿಯಿಂದ ಪ್ರಯಾಗರಾಜ್‌ಗೆ ತೆರಳಲಿದ್ದಾರೆ. ಮಹಾಕುಂಭದಲ್ಲಿ ಶ್ರೀ ನಿರಂಜನಿ ಅಖಾರದ ಆಚಾರ್ಯ ಮಹಾಮಂಡಲೇಶ್ವರರು ಸ್ವಾಮಿ ಕೈಲಾಶಾನಂದ ಗಿರಿಯ ಶಿಬಿರದಲ್ಲಿ ತಂಗಲಿದ್ದಾರೆ. 10 ದಿನಗಳ ಕಾಲ ಕಲ್ಪವಾಸ ವ್ರತವನ್ನು ಆಚರಿಸುತ್ತಾರೆ. ಋಷಿಮುನಿಗಳ ಸಹವಾಸದಲ್ಲಿ ಇದ್ದುಕೊಂಡು ಸನಾತನ, ಆಧ್ಯಾತ್ಮಿಕತೆ ಮತ್ತು ಭಾರತೀಯ ಸಂಸ್ಕೃತಿಯನ್ನು ಲಾರೆನ್ ಕಲಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಲಾರೆನ್ ಅವರ ಭೇಟಿಯ ಬಗ್ಗೆ ಆಧ್ಯಾತ್ಮಿಕ ಗುರು ಸ್ವಾಮಿ ಕೈಲಾಶಾನಂದ ಗಿರಿ ಮಹಾರಾಜ್ ಅವರು, ಕಾಶಿ ತಲುಪಿದ ನಂತರ ಲಾರೆನ್ ಜಾಬ್, ಬಾಬಾ ವಿಶ್ವನಾಥರನ್ನು ಭೇಟಿ ಮಾಡಲು ಹೋದರು. ಈ ಸಮಯದಲ್ಲಿ ಅವರು ಬಾಬಾನನ್ನು ನೋಡುತ್ತಲೇ ಇದ್ದರು. ನಂತರ ಅವರಿಗೆ ಬಾಬಾ ವಿಶ್ವನಾಥ್ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡಲಾಯಿತು. ಲಾರೆನ್ ಗರ್ಭಗುಡಿಯ ಹೊರಗಿನಿಂದ ಬಾಬಾರ ಆಶೀರ್ವಾದ ಪಡೆದರು. ಸನಾತನ ಧರ್ಮದಲ್ಲಿ ಹಿಂದೂಯೇತರರು ಶಿವಲಿಂಗವನ್ನು ಮುಟ್ಟುವುದಿಲ್ಲ. ಎಂಬುದನ್ನು ಗಮನದಲ್ಲಿಟ್ಟುಕೊಂಡು ಹೊರಗಿನಿಂದ ದರ್ಶನ ಪಡೆದರು ಎಂದು ಹೇಳಿದರು. ಸ್ಟೀವ್ ಜಾಬ್ ಪ್ರಸಿದ್ದ ಆಪಲ್ ಕಂಪನಿಯ ಸಹ-ಸಂಸ್ಥಾಪಕರಾಗಿದ್ದಾರೆ. ಅವರು ಆಧ್ಯಾತ್ಮಿಕತೆಯಲ್ಲಿ ಆಳವಾದ ಆಸಕ್ತಿಯನ್ನು ಹೊಂದಿದ್ದರು. ಪತ್ನಿ ಲಾರೆನ್ ಕೂಡ ತನ್ನ ದಿವಂಗತ ಪತಿಯಂತೆ ಆಧ್ಯಾತ್ಮಿಕತೆಯನ್ನು ನಂಬುತ್ತಾರೆ. ಹೀಗಾಗಿ, ಅವರು ಸನಾತನ ಧರ್ಮವನ್ನು ಅರ್ಥಮಾಡಿಕೊಳ್ಳಲು ಮಹಾಕುಂಭಕ್ಕೆ ಬಂದಿದ್ದಾರೆ.

The post ಆಪಲ್ ಕಂಪನಿ ಮಾಲೀಕ ಸ್ಟೀವ್ ಜಾಬ್, ಪತ್ನಿ ಲಾರೆನ್, ಮಹಾಮೇಳದಲ್ಲಿ ಭಾಗಿ. appeared first on Good News 24x7.

]]>