maharani collage Archives - Good News 24x7 https://www.goodnews24x7.com/tag/maharani-collage/ Kannada Wed, 29 Jan 2025 10:41:07 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg maharani collage Archives - Good News 24x7 https://www.goodnews24x7.com/tag/maharani-collage/ 32 32 ಶಿಥಿಲಗೊಂಡ ಮೈಸೂರಿನ ಪಾರಂಪರಿಕ ಮಹಾರಾಣಿ ಕಾಲೇಜು ಕಟ್ಟಡ ಕುಸಿತ : ಅವಶೇಷಗಳಡಿ ಸಿಲುಕಿದ ಕಾರ್ಮಿಕ. https://www.goodnews24x7.com/%e0%b2%b6%e0%b2%bf%e0%b2%a5%e0%b2%bf%e0%b2%b2%e0%b2%97%e0%b3%8a%e0%b2%82%e0%b2%a1-%e0%b2%ae%e0%b3%88%e0%b2%b8%e0%b3%82%e0%b2%b0%e0%b2%bf%e0%b2%a8-%e0%b2%aa%e0%b2%be%e0%b2%b0%e0%b2%82%e0%b2%aa%e0%b2%b0/ Wed, 29 Jan 2025 10:41:07 +0000 https://www.goodnews24x7.com/?p=1980 ಮೈಸೂರು: ಪಾರಂಪರಿಕ ಮಹಾರಾಣಿ ಕಾಲೇಜಿನಲ್ಲಿ ಕಾಮಗಾರಿ ವೇಳೆ ಕಟ್ಟಡ ಕುಸಿದಿರುವ ಘಟನೆ (ಜ.28) ನಡೆದಿದೆ. ಮಹಾರಾಣಿ ಕಾಲೇಜಿನ ಶಿಥಿಲಗೊಂಡಿದ್ದ ಕಟ್ಟಡ ದುರಸ್ತಿ ಕಾರ್ಯದ ವೇಳೆ ದುರಂತ ಸಂಭವಿಸಿದೆ. ಅವಶೇಷಗಳಡಿ ಸದ್ದಾಂ ಎಂಬ ಓರ್ವ ಕಾರ್ಮಿಕ ಸಿಲುಕಿದ್ದಾನೆ. ಮಹಾರಾಣಿ ಕಾಲೇಜು ಕಟ್ಟಡ ಶಿಥಿಲಗೊಂಡಿದ್ದರಿಂದ…

The post ಶಿಥಿಲಗೊಂಡ ಮೈಸೂರಿನ ಪಾರಂಪರಿಕ ಮಹಾರಾಣಿ ಕಾಲೇಜು ಕಟ್ಟಡ ಕುಸಿತ : ಅವಶೇಷಗಳಡಿ ಸಿಲುಕಿದ ಕಾರ್ಮಿಕ. appeared first on Good News 24x7.

]]>

ಮೈಸೂರು: ಪಾರಂಪರಿಕ ಮಹಾರಾಣಿ ಕಾಲೇಜಿನಲ್ಲಿ ಕಾಮಗಾರಿ ವೇಳೆ ಕಟ್ಟಡ ಕುಸಿದಿರುವ ಘಟನೆ (ಜ.28) ನಡೆದಿದೆ. ಮಹಾರಾಣಿ ಕಾಲೇಜಿನ ಶಿಥಿಲಗೊಂಡಿದ್ದ ಕಟ್ಟಡ ದುರಸ್ತಿ ಕಾರ್ಯದ ವೇಳೆ ದುರಂತ ಸಂಭವಿಸಿದೆ. ಅವಶೇಷಗಳಡಿ ಸದ್ದಾಂ ಎಂಬ ಓರ್ವ ಕಾರ್ಮಿಕ ಸಿಲುಕಿದ್ದಾನೆ.
ಮಹಾರಾಣಿ ಕಾಲೇಜು ಕಟ್ಟಡ ಶಿಥಿಲಗೊಂಡಿದ್ದರಿಂದ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಕಿಟಕಿಗಳನ್ನು ತೆಗೆದು ಹಾಕುವ ಕಟ್ಟಡ ಕುಸಿದಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಕಾರ್ಮಿಕನ ರಕ್ಷಣೆಗೆ ಮುಂದಾಗಿದ್ದಾರೆ. ಜೆಸಿಬಿ ಮೂಲಕ ಅವಶೇಷಗಳನ್ನು ತೆರವು ಮಾಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಶಾಸಕ ಹರೀಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

‘ಕಾರ್ಮಿಕರು ಹೊಸ ಕಟ್ಟಡ ನಿರ್ಮಾಣಕ್ಕಾಗಿ ಶಿಥಿಲಗೊಂಡಿದ್ದ ಕಟ್ಟಡವನ್ನು ಒಡೆಯುವ ಕೆಲಸ ಮಾಡುತ್ತಿದ್ದರು. ಹಳೆಯ ಕಟ್ಟಡದಲ್ಲಿದ್ದ ಸಾಮಾಗ್ರಿಗಳನ್ನು ತೆರವುಗೊಳಿಸಿದ ಬಳಿಕ ಮೂವರು ಕಾರ್ಮಿಕರು ಕಿಟಕಿಗಳನ್ನು ತೆರವು ಮಾಡಲು ಮುಂದಾಗಿದ್ದಾರೆ. ಆಗ ಗೋಡೆ ಕುಸಿದಿದೆ. ಇಬ್ಬರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಓರ್ವ ಅವಶೇಷಗಳಡಿ ಸಿಲುಕಿಕೊಂಡಿದ್ದಾನೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಮಹಾರಾಣಿ ಕಾಲೇಜಿನ ಹೊಸ ಕಟ್ಟಡ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಅನುದಾನ ಬಿಡುಗಡೆ ಮಾಡಿದ್ದರು.

‘ಕಟ್ಟಡ ಶಿಥಿಲವಾಗಿದ್ದ ಕಾರಣ ಕಳೆದ ನಾಲ್ಕು ದಿನಗಳಿಂದ ಕಟ್ಟಡ ತೆರವುಗೊಳಿಸುವ ಕೆಲಸ ನಡೆಯುತ್ತಿತ್ತು. ಸ್ಟಾರ್ ಇನ್ಫ್ರಾಟೆಕ್ ಕಂಪನಿಗೆ ಕಾಮಗಾರಿ ನೀಡಲಾಗಿದೆ. ಅವಘಢ ನಡೆದಾಗ 14 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಟ್ಟಡದ ಕಿಟಕಿ, ಸರಳುಗಳನ್ನು ತೆಗೆಯುವ ಕೆಲಸ ಆಗುತ್ತಿತ್ತು. ಇದ್ದಕಿದ್ದಂತೆ ಮೊದಲ ಮಹಡಿಯ ಮೇಲ್ಚಾವಣಿ ಕುಸಿತ ಆಗಿದೆ. ತಕ್ಷಣ ಎಲ್ಲರೂ ಓಡಿ ಬಂದಿದ್ದಾರೆ. ಒಬ್ಬ ಮಾತ್ರ ಸಿಲುಕಿದ್ದಾನೆ. ದೇವರ ದಯೆಯಿಂದ ಆತನಿಗೆ ಏನೂ ಆಗದಿರಲಿ’ ಎಂದು ಶಾಸಕ ಹರೀಶ್ಗೌಡ ತಿಳಿಸಿದ್ದಾರೆ.

‘ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ಕಾಮಗಾರಿ ಮಾಡಬೇಕಿತ್ತು. ಮೊದಲು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಕಾರ್ಮಿಕನ ರಕ್ಷಣೆ ಆಗಬೇಕಿದೆ. ನಂತರದಲ್ಲಿ ತನಿಖೆ ಮಾಡಿ ಅವಘಡಕ್ಕೆ ಕಾರಣ ಆದವರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಹೇಳಿದ್ದಾರೆ.

The post ಶಿಥಿಲಗೊಂಡ ಮೈಸೂರಿನ ಪಾರಂಪರಿಕ ಮಹಾರಾಣಿ ಕಾಲೇಜು ಕಟ್ಟಡ ಕುಸಿತ : ಅವಶೇಷಗಳಡಿ ಸಿಲುಕಿದ ಕಾರ್ಮಿಕ. appeared first on Good News 24x7.

]]>