malware Archives - Good News 24x7 https://www.goodnews24x7.com/tag/malware/ Kannada Sat, 23 Aug 2025 09:00:11 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg malware Archives - Good News 24x7 https://www.goodnews24x7.com/tag/malware/ 32 32 ಸೈಬರ್ ದಾಳಿ ಸಂತ್ರಸ್ತರಲ್ಲಿ ಭಾರತ ನಂ 1. https://www.goodnews24x7.com/india-is-no-1-in-cyber-attack-victims/ Sat, 23 Aug 2025 09:00:11 +0000 https://www.goodnews24x7.com/?p=6550 ಭಾರತವು ಜಾಗತಿಕವಾಗಿ ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಇತ್ತೀಚೆಗೆ, ಬ್ರೆಜಿಲ್ ಮತ್ತು ಸ್ಪೇನ್‌ನಂತಹ ದೇಶಗಳನ್ನು ಹಿಂದಿಕ್ಕಿ, ನಾವು ಮತ್ತೊಂದು ಕ್ಷೇತ್ರದಲ್ಲಿ ಮೊದಲ ಸ್ಥಾನಕ್ಕೆ ತಲುಪಿದ್ದೇವೆ. ಆದರೆ, ಇದು ಖುಷಿಪಡುವಂತಹ ಸಾಧನೆಯಲ್ಲ, ಬದಲಾಗಿ ಗಂಭೀರವಾಗಿ ಆಲೋಚಿಸಬೇಕಾದ ವಿಷಯ. ಏಕೆಂದರೆ, ಸೈಬರ್ ದಾಳಿ…

The post ಸೈಬರ್ ದಾಳಿ ಸಂತ್ರಸ್ತರಲ್ಲಿ ಭಾರತ ನಂ 1. appeared first on Good News 24x7.

]]>

ಭಾರತವು ಜಾಗತಿಕವಾಗಿ ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಇತ್ತೀಚೆಗೆ, ಬ್ರೆಜಿಲ್ ಮತ್ತು ಸ್ಪೇನ್‌ನಂತಹ ದೇಶಗಳನ್ನು ಹಿಂದಿಕ್ಕಿ, ನಾವು ಮತ್ತೊಂದು ಕ್ಷೇತ್ರದಲ್ಲಿ ಮೊದಲ ಸ್ಥಾನಕ್ಕೆ ತಲುಪಿದ್ದೇವೆ. ಆದರೆ, ಇದು ಖುಷಿಪಡುವಂತಹ ಸಾಧನೆಯಲ್ಲ, ಬದಲಾಗಿ ಗಂಭೀರವಾಗಿ ಆಲೋಚಿಸಬೇಕಾದ ವಿಷಯ.
ಏಕೆಂದರೆ, ಸೈಬರ್ ದಾಳಿ ಸಂತ್ರಸ್ತರಲ್ಲಿ ಭಾರತವು ಇದೀಗ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಹ್ಯಾಕರ್‌ಗಳು ಅತಿ ಹೆಚ್ಚು ದಾಳಿ ಮಾಡುವ ದೇಶಗಳ ಪಟ್ಟಿಯಲ್ಲಿ ನಮ್ಮ ದೇಶ ಈಗ ಮುಂಚೂಣಿಯಲ್ಲಿದೆ.

ಹೆಚ್ಚಿದ ಮಾಲ್‌ವೇರ್ ದಾಳಿಗಳು:

  •  ಕಳೆದ ಮೇ ತಿಂಗಳಲ್ಲಿ, ಭಾರತದಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಶೇ.12.4ರಷ್ಟು ಸಾಧನಗಳಲ್ಲಿ ಮಾಲ್‌ವೇರ್ ದಾಳಿ ಪತ್ತೆಯಾಗಿತ್ತು.
  • ಆದರೆ, ಜೂನ್ ವೇಳೆಗೆ ಈ ಪ್ರಮಾಣ ಶೇ.13.2ಕ್ಕೆ ಏರಿಕೆಯಾಗಿದೆ.
  • ಇ-ಮೇಲ್ ಮೂಲಕ ನಡೆಯುವ ಸೈಬರ್ ದಾಳಿಗಳ ಸಂಖ್ಯೆಯೂ ಕೂಡಾ ಗಣನೀಯವಾಗಿ ಹೆಚ್ಚಾಗಿದೆ.

ವರ್ಕ್ ಫ್ರಂ ಹೋಂ ಕೂಡ ಒಂದು ಕಾರಣ:

ಕೋವಿಡ್ ಸಾಂಕ್ರಾಮಿಕದ ನಂತರ, ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ‘ವರ್ಕ್ ಫ್ರಂ ಹೋಂ’ ಅವಕಾಶ ಕಲ್ಪಿಸಿದವು. ಇದರಿಂದ, ಕಚೇರಿಯ ಸುರಕ್ಷಿತ ನೆಟ್‌ವರ್ಕ್‌ಗಳು ಮನೆಯಲ್ಲಿನ ಅಸುರಕ್ಷಿತ ಸಾಧನಗಳೊಂದಿಗೆ ಸಂಪರ್ಕ ಸಾಧಿಸಿದವು. ಸೈಬರ್ ಸುರಕ್ಷತಾ ಕಂಪನಿ ‘ಆಕ್ರಾನಿಸ್’ನ ಜನರಲ್ ಮ್ಯಾನೇಜರ್ ರಾಜೇಶ್ ಛಬ್ರಾ ಅವರ ಪ್ರಕಾರ, ಸೈಬರ್ ದಾಳಿ ಹೆಚ್ಚಳಕ್ಕೆ ಇದೂ ಒಂದು ಪ್ರಮುಖ ಕಾರಣ.

The post ಸೈಬರ್ ದಾಳಿ ಸಂತ್ರಸ್ತರಲ್ಲಿ ಭಾರತ ನಂ 1. appeared first on Good News 24x7.

]]>