management Archives - Good News 24x7 https://www.goodnews24x7.com/tag/management/ Kannada Thu, 31 Jul 2025 11:30:58 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg management Archives - Good News 24x7 https://www.goodnews24x7.com/tag/management/ 32 32 ಮೃಗಾಲಯದ ಪ್ರವೇಶ ದರ ಶೇ 20 ರಷ್ಟು ಹೆಚ್ಚಳ. https://www.goodnews24x7.com/zoo-entry-fee-hiked-by-20-percent/ Thu, 31 Jul 2025 11:30:12 +0000 https://www.goodnews24x7.com/?p=5198 ಮೈಸೂರು : ನಾಳೆಯಿಂದ ಮೈಸೂರು ಮೃಗಾಲಯದ ಪ್ರವೇಶ ದರ ಶೇ 20 ರಷ್ಟು ಹೆಚ್ಚಳವಾಗಲಿದೆ.ನಾಲ್ಕು ವರ್ಷಗಳ ನಂತರ ಮೃಗಾಲಯ ಆಡಳಿತ ಮಂಡಳಿ ದರ ಪರಿಷ್ಕರಣೆ ಮಾಡಿದ್ದು, ವಯಸ್ಕರಿಗೆ 100 ರೂ ಇದ್ದ ಟಿಕೆಟ್ ದರ 120 ರೂ, ಮಕ್ಕಳಿಗೆ 50 ರೂ…

The post ಮೃಗಾಲಯದ ಪ್ರವೇಶ ದರ ಶೇ 20 ರಷ್ಟು ಹೆಚ್ಚಳ. appeared first on Good News 24x7.

]]>

ಮೈಸೂರು : ನಾಳೆಯಿಂದ ಮೈಸೂರು ಮೃಗಾಲಯದ ಪ್ರವೇಶ ದರ ಶೇ 20 ರಷ್ಟು ಹೆಚ್ಚಳವಾಗಲಿದೆ.ನಾಲ್ಕು ವರ್ಷಗಳ ನಂತರ ಮೃಗಾಲಯ ಆಡಳಿತ ಮಂಡಳಿ ದರ ಪರಿಷ್ಕರಣೆ ಮಾಡಿದ್ದು, ವಯಸ್ಕರಿಗೆ 100 ರೂ ಇದ್ದ ಟಿಕೆಟ್ ದರ 120 ರೂ, ಮಕ್ಕಳಿಗೆ 50 ರೂ ದರ 60 ರೂ.ಗೆ ಏರಿಕೆಯಾಗಲಿದೆ. ಮೃಗಾಲಯ, ಕಾರಂಜಿ ಕಾಂಬೋ 150 ರೂ. ಮಕ್ಕಳಿಗೆ 80 ರೂ ದರ ನಿಗದಿ ಮಾಡಲಾಗಿದೆ.

https://www.facebook.com/share/v/1Bvz39PD3X/

ಈ ಕುರಿತು ಮಾತನಾಡಿದ ಮೃಗಾಲಯ ಕಾರ್ಯ ನಿರ್ವಾಹಕ ಅಧಿಕಾರಿ ರಂಗಸ್ವಾಮಿ, ಒಂದು ದಿನಕ್ಕೆ ಮೃಗಾಲಯ ನಿರ್ವಹಣೆಗೆ 9 ಲಕ್ಷ ಹಣ ಖರ್ಚಾಗಲಿದ್ದು, ಮೃಗಾಲಯ ಪ್ರಾಣಿಗಳ ಖರ್ಚು ವೆಚ್ಚ ತುಟ್ಟಿ ಹಿನ್ನಲೆ, ನಾಲ್ಕು ವರ್ಷಗಳ ಬಳಿಕ ಪ್ರವೇಶ ದರದಲ್ಲಿ ಏರಿಕೆ ಮಾಡಲಾಗಿದೆ. ಇತ್ತೀಚಿನ ಜರ್ಮನ್, ಆಫ್ರಿಕಾದಿಂದ ತಂದಿರುವ ಹಂಟರ್ ಗೊರಿಲ್ಲ, ಹಂಡರ್ ಚೀತಾ, ಜಾಗ್ವಾರ್,ಪ್ರಾಣಿಗಳ ಸಾಕುವ ವೆಚ್ಚ ದುಬಾರಿಯಾದ ಹಿನ್ನಲೆ ಅನಿವಾರ್ಯವಾಗಿ ದರ ಏರಿಕೆ ಮಾಡಲಾಗುತ್ತಿದೆ. ಪ್ರವಾಸಿಗರು ದರ ಏರಿಕೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

ಆಫ್ರಿಕನ್ ಹಂಟರ್ ಚೀತಾ, ಜಾಗ್ವಾರ್ ಜರ್ಮನ್ ಗೊರಿಲ್ಲ ಸೇರಿದಂತೆ ಹಲವು ಪ್ರಾಣಿಗಳ ವಿನಿಮಯ ಪದ್ದತಿಯಲ್ಲಿ ಮೃಗಾಲಯಕ್ಕೆ ಬಂದ ಹೊಸ ಪ್ರಾಣಿಗಳಾಗಿವೆ.

The post ಮೃಗಾಲಯದ ಪ್ರವೇಶ ದರ ಶೇ 20 ರಷ್ಟು ಹೆಚ್ಚಳ. appeared first on Good News 24x7.

]]>
ಕಬಿನಿ ಜಲಾಶಯ ಭೂಮಿ, ಸಮನ್ಸ್ ಜಾರಿ ಮಾಡಿದ ಕೋರ್ಟ್. https://www.goodnews24x7.com/kabini-reservoir-land-court-issued-summons/ Sat, 21 Jun 2025 12:04:29 +0000 https://www.goodnews24x7.com/?p=4585 ಮೈಸೂರು : ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕು ಬಿದರಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಭೂಮಿ ಅಡವಿಟ್ಟು ನೂರಾರು ಕೋಟಿ ಸಾಲ ಪಡೆದಿದ್ದ ಪ್ರಕರಣ, ಕಬಿನಿ ಜಲಾಶಯದ ಹೆಸರಿನ ಆರ್ ಟಿಸಿ ಬದಲಿಸಿದ್ದ ಕೇಸ್ ಗೆ ಸಂಬಂಧಿಸಿದಂತೆ ಸುಭಾಷ್ ಪವರ್ ಮ್ಯಾನೇಜ್‌ಮೆಂಟ್ ವಿರುದ್ಧ…

The post ಕಬಿನಿ ಜಲಾಶಯ ಭೂಮಿ, ಸಮನ್ಸ್ ಜಾರಿ ಮಾಡಿದ ಕೋರ್ಟ್. appeared first on Good News 24x7.

]]>

ಮೈಸೂರು : ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕು ಬಿದರಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಭೂಮಿ ಅಡವಿಟ್ಟು ನೂರಾರು ಕೋಟಿ ಸಾಲ ಪಡೆದಿದ್ದ ಪ್ರಕರಣ, ಕಬಿನಿ ಜಲಾಶಯದ ಹೆಸರಿನ ಆರ್ ಟಿಸಿ ಬದಲಿಸಿದ್ದ ಕೇಸ್ ಗೆ ಸಂಬಂಧಿಸಿದಂತೆ ಸುಭಾಷ್ ಪವರ್ ಮ್ಯಾನೇಜ್‌ಮೆಂಟ್ ವಿರುದ್ಧ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.


ಪ್ರಕರಣ ಸಂಬಂಧ ವಕೀಲ ಬಾಲಚಂದ್ರ ಎಂಬುವವರು ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದು ಸುಭಾಷ್ ಪವರ್ ಮ್ಯಾನೇಜ್‌ಮೆಂಟ್ ಗೆ ಜೂನ್ 28 ನೇ ತಾರೀಖು ಖುದ್ದು ಹಾಜರಿಗೆ ಕೋರ್ಟ್ ಸಮನ್ಸ್ ಜಾರಿಮಾಡಿದೆ. ಪ್ರತಿನಿಧಿತ್ವ ರೆಪ್ರೆಸೆಂಟಿಟಿವ್ ಕ್ಯಾರೆಕ್ಟರ್ ಸೂಟ್ ಅಡಿ ಒಎಸ್ ದಾಖಲು ಮಾಡಲಾಗಿದ್ದು, 74/2025 ಕೇಸ್ ನಂ. ಬಾಲಚಂದ್ರ v/s ಚೀಫ್ ಸೆಕ್ರೆಟರಿ, ಕರ್ನಾಟಕ ಸ್ಟೇಟ್ ಚೀಫ್ ಸೆಕ್ರೆಟರಿ, ಕಾವೇರಿ ನೀರಾವರಿ ನಿಗಮದ ಸೂಪರಿಡೆಂಟ್ ಇಂಜಿನಿಯರ್, ಚೀಫ್ ಇಂಜಿನಿಯರ್, ಎಕ್ಸಿಕ್ಯುಟಿವ್ ಎಂಜಿನಿಯರ್, ಕಬಿನಿ ಎಇಇ ಚಂದ್ರಶೇಖರ್, ಸುಭಾಷ್ ಪವರ್ ಕಂಪನಿ ಮ್ಯಾನೇಜಿಂಗ್ ಡೈರೆಕ್ಟರ್, ಸೆಂದಿಲ್, ಸೀನಿಯರ್ ಮ್ಯಾನೇಜರ್, ತಹಶಿಲ್ದಾರ್ ಮೋಹನಕುಮಾರಿ ಅವರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಕಬಿನಿ ಜಲಾಶಯದ ಹೆಸರಿನ ಆರ್ ಟಿಸಿಯಲ್ಲಿ ಸುಭಾಷ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಎಂದು ದಾಖಲೆ ಪಡೆದು ಸಾಲ ಪಡೆಯಲಾಗಿತ್ತು. ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿ ಬಳಿಕ ಆರ್ ಟಿಸಿ ಮರುಬದಲು, ನೂರಾರು ಕೋಟಿ ಸಾಲ ಪಾವತಿ ಮಾಡಲಾಗಿತ್ತು. ಈ ನಡುವೆ ಇದೀಗ ಜೂನ್ 28 ರಂದು ಕೋರ್ಟ್‌ಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

The post ಕಬಿನಿ ಜಲಾಶಯ ಭೂಮಿ, ಸಮನ್ಸ್ ಜಾರಿ ಮಾಡಿದ ಕೋರ್ಟ್. appeared first on Good News 24x7.

]]>
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್: ಸಿಬ್ಬಂದಿಯಿಂದ ಹೆಚ್ಚಿನ ಭದ್ರತೆ. https://www.goodnews24x7.com/high-alert-at-kempegowda-airport-increased-security-by-staff/ Fri, 09 May 2025 10:44:05 +0000 https://www.goodnews24x7.com/?p=3751 ಬೆಂಗಳೂರು : ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಭದ್ರತಾ ಪಡೆ ಸಿಐಎಸ್‌ಎಪ್ ಸಿಬ್ಬಂದಿಯಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಶಸ್ತ್ರಸಜ್ಜಿತವಾಗಿ ಭದ್ರತಾ ಪಡೆಯಿದ ರೌಂಡ್ಸ್…

The post ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್: ಸಿಬ್ಬಂದಿಯಿಂದ ಹೆಚ್ಚಿನ ಭದ್ರತೆ. appeared first on Good News 24x7.

]]>

ಬೆಂಗಳೂರು : ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಭದ್ರತಾ ಪಡೆ ಸಿಐಎಸ್‌ಎಪ್ ಸಿಬ್ಬಂದಿಯಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಶಸ್ತ್ರಸಜ್ಜಿತವಾಗಿ ಭದ್ರತಾ ಪಡೆಯಿದ ರೌಂಡ್ಸ್ ಹಾಕಲಾಗುತ್ತಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಏರ್ ಪೋರ್ಟ್ ನಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಏರ್ಪೋರ್ಟ್ಗೆ ಬರುವ ವಾಹನಗಳು, ಪ್ರಯಾಣಿಕರ ಮೇಲೆ ಹದ್ದಿನಕಣ್ಣಿಡಲಾಗಿದೆ.


ಪಾಕ್ ಗಡಿ ಭಾಗದ ಏರ್ಪೋರ್ಟ್ ಗೆ ತೆರಳುವ ವಿಮಾನಗಳನ್ನು ರದ್ದು ಮಾಡಲಾಗಿದೆ. ಈ ಮಧ್ಯೆ ಪ್ರಯಾಣಿಕರು ತಮ್ಮ ವಿಮಾನ ನಿರ್ಗಮನದ ಕನಿಷ್ಠ ಮೂರು ಗಂಟೆಗಳ ಮುನ್ನ ವಿಮಾನ ನಿಲ್ದಾಣಕ್ಕೆ ಆಗಮಿಸುವಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ಮಂಡಳಿ ಪ್ರಯಾಣಿಕರಿಗೆ ಸೂಚನೆ ನೀಡಿದೆ.

 

The post ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್: ಸಿಬ್ಬಂದಿಯಿಂದ ಹೆಚ್ಚಿನ ಭದ್ರತೆ. appeared first on Good News 24x7.

]]>
Google ನ ಆಂಡ್ರಾಯ್ಡ್ಗಳಿಂದ ನೂರಾರು ಉದ್ಯೋಗಿಗಳ ಲೇಆಫ್. https://www.goodnews24x7.com/google-%e0%b2%a8-%e0%b2%86%e0%b2%82%e0%b2%a1%e0%b3%8d%e0%b2%b0%e0%b2%be%e0%b2%af%e0%b3%8d%e0%b2%a1%e0%b3%8d%e0%b2%97%e0%b2%b3%e0%b2%bf%e0%b2%82%e0%b2%a6-%e0%b2%a8%e0%b3%82%e0%b2%b0%e0%b2%be%e0%b2%b0/ Fri, 11 Apr 2025 09:59:47 +0000 https://www.goodnews24x7.com/?p=3163 ಕ್ಯಾಲಿಫೋರ್ನಿಯಾ : ಗೂಗಲ್ ಸಂಸ್ಥೆಯಲ್ಲಿ ಹೊಸ ಸುತ್ತಿನ ಲೇ ಆಫ್ ನಡೆಯುತ್ತಿದೆ. ಅದರ ಪ್ಲಾಟ್ಫಾರ್ಮ್ಸ್ ಮತ್ತು ಡಿವೈಸ್ ಯೂನಿಟ್ನಿಂದ ನೂರಾರು ಉದ್ಯೋಗಿಗಳನ್ನು ಲೇ ಆಫ್ ಮಾಡಲಾಗುತ್ತಿದೆ ಎನ್ನುವ ಸುದ್ದಿ ಕೇಳಿಬಂದಿದೆ. ದಿ ಇನ್ಫಾರ್ಮೇಶನ್ ಎನ್ನುವ ವೆಬ್ಸೈಟ್ನಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದೆ.…

The post Google ನ ಆಂಡ್ರಾಯ್ಡ್ಗಳಿಂದ ನೂರಾರು ಉದ್ಯೋಗಿಗಳ ಲೇಆಫ್. appeared first on Good News 24x7.

]]>

ಕ್ಯಾಲಿಫೋರ್ನಿಯಾ : ಗೂಗಲ್ ಸಂಸ್ಥೆಯಲ್ಲಿ ಹೊಸ ಸುತ್ತಿನ ಲೇ ಆಫ್ ನಡೆಯುತ್ತಿದೆ. ಅದರ ಪ್ಲಾಟ್ಫಾರ್ಮ್ಸ್ ಮತ್ತು ಡಿವೈಸ್ ಯೂನಿಟ್ನಿಂದ ನೂರಾರು ಉದ್ಯೋಗಿಗಳನ್ನು ಲೇ ಆಫ್ ಮಾಡಲಾಗುತ್ತಿದೆ ಎನ್ನುವ ಸುದ್ದಿ ಕೇಳಿಬಂದಿದೆ. ದಿ ಇನ್ಫಾರ್ಮೇಶನ್ ಎನ್ನುವ ವೆಬ್ಸೈಟ್ನಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದೆ. ಪ್ಲಾಟ್ಫಾರ್ಮ್ ಮತ್ತು ಡಿವೈಸ್ ಯೂನಿಟ್ನಲ್ಲಿರುವ ಉದ್ಯೋಗಿಗಳು ಆಂಡ್ರಾಯ್ಡ್ ಸಾಫ್ಟ್ವೇರ್, ಪಿಕ್ಸೆಲ್ ಫೋನ್, ಕ್ರೋಮ್ ಬ್ರೌಸರ್ ಇತ್ಯಾದಿ ಉತ್ಪನ್ನಗಳನ್ನು ನಿರ್ವಹಿಸುತ್ತಾರೆ. ಇವರಲ್ಲಿ ನೂರಾರು ಮಂದಿಯನ್ನು ಕೆಲಸ ಬಿಡುವಂತೆ ಗೂಗಲ್ ಮ್ಯಾನೇಜ್ಮೆಂಟ್ ತಿಳಿಸಿದೆಯಂತೆ.ಆದರೆ, ಎಷ್ಟು ಮಂದಿಯ ಲೇ ಆಫ್ ಮಾಡಲಾಗುತ್ತಿದೆ ಎಂಬುದು ಗೊತ್ತಾಗಿಲ್ಲ. ಗೂಗಲ್ನಿಂದ ಅಧಿಕೃತವಾಗಿ ಯಾವ ಮಾಹಿತಿಯೂ ಬಂದಿಲ್ಲ. ಆದರೆ, ಉದ್ಯೋಗಿಗಳಿಗೆ ಸ್ವ ಇಚ್ಛೆಯಿಂದ ಕೆಲಸ ಬಿಡುವ ಅವಕಾಶವನ್ನು ಗೂಗಲ್ ಕೆಲ ತಿಂಗಳ ಹಿಂದೆ ಆಫರ್ ಮಾಡಿತ್ತು. ಆ ಸಂದರ್ಭದಲ್ಲಿ ಗೂಗಲ್ನಲ್ಲಿ ಹೆಚ್ಚುವರಿ ಲೇ ಆಫ್ ಮಾಡುವ ಸುಳಿವನ್ನು ಗೂಗಲ್ ವಕ್ತಾರರು ಹೊರಹಾಕಿದ್ದರು.


‘ಪ್ಲಾಟ್ಫಾರ್ಮ್ಸ್ ಮತ್ತು ಡಿವೈಸಸ್ ತಂಡಗಳನ್ನು ಕಳೆದ ವರ್ಷ ಒಟ್ಟು ಸೇರಿಸಿದಾಗಿನಿಂದ ನಾವು ಹೆಚ್ಚು ಕ್ಷಮತೆ, ಕಡಿಮೆ ಗಾತ್ರಕ್ಕೆ ಒತ್ತು ಕೊಡುತ್ತಿದ್ದೇವೆ. ಜನವರಿಯಲ್ಲಿ ವಾಲಂಟರಿ ಎಕ್ಸಿಟ್ ಸ್ಕೀಮ್ ಜೊತೆಗೆ ಕೆಲ ಉದ್ಯೋಗಗಳನ್ನೂ ತೆಗೆಯುತ್ತಿದ್ದೇವೆ’ ಎಂದು ಗೂಗಲ್ ವಕ್ತಾರರು ಹೇಳಿದ್ದರು.
ಒಟ್ಟಾರೆ, ಗೂಗಲ್ ತನ್ನ ಕಾರ್ಯಾಚರಣೆ ಮರು ರಚಿಸಲು ಮತ್ತು ವೆಚ್ಚ ಕಡಿಮೆ ಮಾಡಲು ಇತ್ತೀಚಿನ ದಿನಗಳಿಂದ ಯೋಜನೆ ಹಾಕಿದೆ. ಅದರ ಭಾಗವಾಗಿ ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್, ಲೇ ಆಫ್ ಇತ್ಯಾದಿಗಳು ನಡೆಯುತ್ತಿವೆ.
12,000 ಮಂದಿಯನ್ನು ಕೆಲಸದಿಂದ ತೆಗೆದಿದ್ದ ಗೂಗಲ್
2023ರಲ್ಲಿ ಟೆಕ್ ಕ್ಷೇತ್ರದಲ್ಲಿ ಇದ್ದ ಟ್ರೆಂಡ್ನಂತೆ ಗೂಗಲ್ ಸಂಸ್ಥೆ ಆ ವರ್ಷ ಒಮ್ಮೆಗೇ 12,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಿತು. ಅದರ ನೂರಕ್ಕೆ ಆರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು. ಆ ವರ್ಷ ಗೂಗಲ್ ಮಾತ್ರವಲ್ಲ, ಮೆಟಾ ಮತ್ತು ಅಮೇಜಾನ್ ಕಂಪನಿಗಳೂ ಕೂಡ ಸಾವಿರಾರು ಮಂದಿಯನ್ನು ಲೇ ಆಫ್ ಮಾಡಿದ್ದುವು.
2024 ಮತ್ತು ಈಗ 2025ರಲ್ಲೂ ಗೂಗಲ್ ಲೇ ಆಫ್ ಮಾಡಿದೆ. ಸಾವಿರಾರು ಸಂಖ್ಯೆಯಲ್ಲಲ್ಲವಾದರೂ, ನೂರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿದೆ.

The post Google ನ ಆಂಡ್ರಾಯ್ಡ್ಗಳಿಂದ ನೂರಾರು ಉದ್ಯೋಗಿಗಳ ಲೇಆಫ್. appeared first on Good News 24x7.

]]>