MangaloreRefineryAndPetrochemicalsLimited Archives - Good News 24x7 https://www.goodnews24x7.com/tag/mangalorerefineryandpetrochemicalslimited/ Kannada Wed, 30 Sep 2026 11:46:00 +0000 en-US hourly 1 https://wordpress.org/?v=7.1.2 MRPLನಲ್ಲಿ ಸ್ಫೋಟ: 9 ಕಾರ್ಮಿಕರಿಗೆ ಗಾಯ; ಓರ್ವ ವ್ಯಕ್ತಿ ಸಾ* https://www.goodnews24x7.com/explosion-at-mrpl-9-workers-injured-one-person-dead/ Wed, 30 Sep 2026 11:45:37 +0000 https://www.goodnews24x7.com/?p=10155 ಮಂಗಳೂರು: ಮಂಗಳೂರಿನ ಜೋಕಟ್ಟೆ ಬಳಿಯಿರುವ ಮಂಗಳೂರು ರಿಫೈನರಿ ಆ್ಯಂಡ್​ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (MRPL)ನ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಟೆಸ್ಟಿಂಗ್​​ ಮಾಡುವ ಸಂದರ್ಭದಲ್ಲಿ ಭಾರೀ ಸ್ಫೋಟ ಸಂಭವಿಸಿರುವ ಘಟನೆ ನಡೆದಿದೆ. ‘ಅವಘಡದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 9 ಕಾರ್ಮಿಕರಿಗೆ  ಗಾಯಗಳಾಗಿವೆ. ಪ್ರಸ್ತುತ ಬೆಂಕಿ…

The post MRPLನಲ್ಲಿ ಸ್ಫೋಟ: 9 ಕಾರ್ಮಿಕರಿಗೆ ಗಾಯ; ಓರ್ವ ವ್ಯಕ್ತಿ ಸಾ* appeared first on Good News 24x7.

]]>
ಮಂಗಳೂರು: ಮಂಗಳೂರಿನ ಜೋಕಟ್ಟೆ ಬಳಿಯಿರುವ ಮಂಗಳೂರು ರಿಫೈನರಿ ಆ್ಯಂಡ್​ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (MRPL)ನ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಟೆಸ್ಟಿಂಗ್​​ ಮಾಡುವ ಸಂದರ್ಭದಲ್ಲಿ ಭಾರೀ ಸ್ಫೋಟ ಸಂಭವಿಸಿರುವ ಘಟನೆ ನಡೆದಿದೆ.

‘ಅವಘಡದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 9 ಕಾರ್ಮಿಕರಿಗೆ  ಗಾಯಗಳಾಗಿವೆ. ಪ್ರಸ್ತುತ ಬೆಂಕಿ ನಿಯಂತ್ರಣಕ್ಕೆ ಬಂದಿದೆ’.  ಮನೀಶ್​(30) ಮೃ*ತ ವ್ಯಕ್ತಿ. ಸುರತ್ಕಲ್ ನಿವಾಸಿ ರಾಜೇಶ್​​​ಗೆ ಶೇಕಡಾ 35ರಷ್ಟು ಗಾಯಗಳಾಗಿದ್ದು, ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಪ್ರಸಾದ್​, ಇಂದ್ರಜೀತ್​, ರಾಮನ್​ಗೆ ಎಜಿ ಆಸ್ಪತ್ರೆಗೆ ಮತ್ತು ಗಾಯಾಳುಗಳಾದ ಜೆರೋಮ್​, ಜಯರಾಮ್​, ಅವಿನಾಶ್, ಅಕ್ಷಯ್ ಹಾಗೂ​ ಮತ್ತೋರ್ವನಿಗೆ MRPL ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಂದು ಮಂಗಳೂರು ಜಿಲ್ಲಾಧಿಕಾರಿ ದರ್ಶನ್​​ ಹೆಚ್​ವಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

https://www.facebook.com/reel/941238391927097

ಇಂದು ಮಧ್ಯಾಹ್ನ ಸರಿ ಸುಮಾರು 12.15 ಗಂಟೆಗೆ MRPL​​ನ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಟೆಸ್ಟಿಂಗ್​​ ಮಾಡುವ ಸಂದರ್ಭದಲ್ಲಿ ಭಾರೀ ಸ್ಫೋಟ ಸಂಭವಿಸಿದೆ. 11.30 ಗಂಟೆಗೆ ಶಿಫ್ಟ್ ಬದಲಾವಣೆ ಹಿನ್ನೆಲೆ ಘಟಕದಿಂದ ಕಾರ್ಮಿಕರು ಹೊರ ಹೋಗಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಆದರೆ 9 ಕಾರ್ಮಿಕರು ಗಾಯಗೊಂಡಿದ್ದಾರೆ. ಒಂದೆ ವೇಳೆ ಕಾರ್ಮಿಕರು ಒಳಗೆ ಇದ್ದಿದ್ದರೆ ಭಾರೀ ಸಾ*ವು ನೋವು ಸಾಧ್ಯತೆ ಇತ್ತು ಎನ್ನಲಾಗಿದೆ.

ಸದ್ಯ ಸ್ಥಳಕ್ಕೆ ಐದು ಅಗ್ನಿಶಾಮಕ ದಳ ವಾಹನ, ಎಸ್​​​ಡಿಆರ್​ಎಫ್​ ಮತ್ತು ಆಂಬ್ಯುಲೆನ್ಸ್​​​ಗಳು ಬಂದಿದ್ದು, ಪೊಲೀಸ್ ಕಮಿಷನರ್ ಸುದೀರ್ ಕುಮಾರ್ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಓ ನರ್ವಡೆ ವಿನಾಯಕ್ ಕಾರ್ಬಾರಿ ಕೂಡ ಭೇಟಿ ನೀಡಿದ್ದಾರೆ

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್​ ಪ್ರತಿಕ್ರಿಯಿಸಿದ್ದು, ‘MRPLನಲ್ಲಿ ಟೆಸ್ಟಿಂಗ್​​ ಮಾಡುವ ಸಂದರ್ಭದಲ್ಲಿ ಸ್ಫೋಟ ಆಗಿದೆ. ಘಟನೆಯಲ್ಲಿ ಗಾಯಗೊಂಡಿರುವವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಎಲ್ಲವೂ ನಿಯಂತ್ರಣಕ್ಕೆ ಬಂದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಭೀಕರ ಸ್ಫೋಟದಿಂದ ಪಣಂಬೂರು, ಕಾವೂರು, ಸುರತ್ಕಲ್, ಜೋಕಟ್ಟೆ ಭಾಗದ ಸುತ್ತಮುತ್ತಲಿನ ಕೆಲವೆಡೆ ಮನೆಗಳು ಕಂಪಿಸಿದೆ. ಸ್ಪೋಟದ ತೀರ್ವತೆ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಅಷ್ಟೇ ಅಲ್ಲದೆ ಭಾರೀ ಸ್ಟೋಟದ ಶಬ್ಧಕ್ಕೆ ಗ್ರಾಮದ ಜನರು ಬೆಚ್ಚಿಬಿದ್ದಾರೆ.

The post MRPLನಲ್ಲಿ ಸ್ಫೋಟ: 9 ಕಾರ್ಮಿಕರಿಗೆ ಗಾಯ; ಓರ್ವ ವ್ಯಕ್ತಿ ಸಾ* appeared first on Good News 24x7.

]]>