Mantralaya Archives - Good News 24x7 https://www.goodnews24x7.com/tag/mantralaya/ Kannada Tue, 26 Aug 2025 10:30:06 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Mantralaya Archives - Good News 24x7 https://www.goodnews24x7.com/tag/mantralaya/ 32 32 ಮಂತ್ರಾಲಯ ಶ್ರೀಗಳಿಂದ 100ಕ್ಕೂ ಹೆಚ್ಚು ಮಣ್ಣಿನ ಗಣೇಶ ವಿತರಣೆ .. https://www.goodnews24x7.com/mantralaya-sri-distributes-more-than-100-clay-ganesha-idols/ Tue, 26 Aug 2025 10:30:06 +0000 https://www.goodnews24x7.com/?p=6762 ರಾಯಚೂರು: ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಯವರು ಮಣ್ಣಿನ ಗಣೇಶ ಮೂರ್ತಿಗಳನ್ನ ಭಕ್ತರಿಗೆ ವಿತರಿಸುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು. ಮಂತ್ರಾಲಯದ ಐತಿಹಾಸಿಕ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪರಿಸರ…

The post ಮಂತ್ರಾಲಯ ಶ್ರೀಗಳಿಂದ 100ಕ್ಕೂ ಹೆಚ್ಚು ಮಣ್ಣಿನ ಗಣೇಶ ವಿತರಣೆ .. appeared first on Good News 24x7.

]]>

ರಾಯಚೂರು: ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಯವರು ಮಣ್ಣಿನ ಗಣೇಶ ಮೂರ್ತಿಗಳನ್ನ ಭಕ್ತರಿಗೆ ವಿತರಿಸುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು.

ಮಂತ್ರಾಲಯದ ಐತಿಹಾಸಿಕ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪರಿಸರ ಹಾಗೂ ಸಂಸ್ಕೃತಿ ಉಳಿಸಲು ಮಣ್ಣಿನ ಗಣೇಶ ಮೂರ್ತಿಗಳನ್ನು ಬಳಸುವಂತೆ ಕರೆ ನೀಡಿದರು. ಗಣೇಶ ಉತ್ಸವದ ಮಹತ್ವವನ್ನ ತಿಳಿಸುವ ಮೂಲಕ ಆಚರಣೆಗಳು ಹಾಗೂ ಪರಿಸರ ಒಟ್ಟೊಟ್ಟಿಗೆ ಉಳಿಯಬೇಕು ಮತ್ತು ಬೆಳೆಯಬೇಕು ಎಂದು ತಿಳಿಸಿದರು.

ಮಣ್ಣಿನ ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಿ ಸಾಂಕೇತಿಕವಾಗಿ ನೂರಾರು ಭಕ್ತರಿಗೆ ಮಣ್ಣಿನ ಗಣೇಶ ಮೂರ್ತಿಗಳನ್ನ ವಿತರಿಸಿದರು. ಪ್ರತಿಯೊಬ್ಬರು ಮಣ್ಣಿನ ಗಣೇಶ ಮೂರ್ತಿಯನ್ನೇ ಪ್ರತಿಷ್ಠಾಪಿಸಿ ಪೂಜಿಸುವಂತೆ ಹೇಳಿದರು.

The post ಮಂತ್ರಾಲಯ ಶ್ರೀಗಳಿಂದ 100ಕ್ಕೂ ಹೆಚ್ಚು ಮಣ್ಣಿನ ಗಣೇಶ ವಿತರಣೆ .. appeared first on Good News 24x7.

]]>
ಹಾಸನ ಮೂಲದ ಮೂವರು ಯುವಕರು ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ನಾಪತ್ತೆ. https://www.goodnews24x7.com/three-youths-from-hassan-go-missing-after-swimming-in-tungabhadra-river-near-mantralaya/ Sun, 13 Jul 2025 06:25:09 +0000 https://www.goodnews24x7.com/?p=5064 ರಾಯಚೂರು: ಮಂತ್ರಾಲಯದ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನಾಪತ್ತೆಯಾಗಿರುವ ಘಟನೆ ಶನಿವಾರ ನಡೆದಿದೆ. ಯುವಕರನ್ನು ಹಾಸನ ಮೂಲದ ಅಜಿತ್ (20), ಸಚಿನ್ (20) ಹಾಗೂ ಪ್ರಮೋದ್ (19) ಎಂದು ಗುರುತಿಸಲಾಗಿದೆ. ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ರಾಯರ…

The post ಹಾಸನ ಮೂಲದ ಮೂವರು ಯುವಕರು ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ನಾಪತ್ತೆ. appeared first on Good News 24x7.

]]>

ರಾಯಚೂರು: ಮಂತ್ರಾಲಯದ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನಾಪತ್ತೆಯಾಗಿರುವ ಘಟನೆ ಶನಿವಾರ ನಡೆದಿದೆ. ಯುವಕರನ್ನು ಹಾಸನ ಮೂಲದ ಅಜಿತ್ (20), ಸಚಿನ್ (20) ಹಾಗೂ ಪ್ರಮೋದ್ (19) ಎಂದು ಗುರುತಿಸಲಾಗಿದೆ.

ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ರಾಯರ ದರ್ಶನಕ್ಕಾಗಿ ಹಾಸನದಿಂದ 7 ಜನ ಯುವಕರ ತಂಡ ಬಂದಿತ್ತು. ಯುವಕರು ಸ್ನಾನಘಟ್ಟದ ಬಳಿ ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದರು. ಆಗ ನದಿಗೆ ಹೆಚ್ಚಿನ ನೀರು ಹರಿಬಿಟ್ಟಿರುವುದ್ದರಿಂದ, ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನದಿಯಲ್ಲಿ ನೀರಿನ ರಭಸ ಕಂಡು ಬೇಡವೆಂದು ಹೇಳಿದರೂ ಈಜಲು ಹೋಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಪೊಲೀಸರು ಹಾಗೂ ಈಜುಗಾರರ ತಂಡದಿಂದ ಯುವಕರ ಶೋಧ ಕಾರ್ಯ ನಡೆದಿದೆ. ರಾತ್ರಿಯಾಗಿದ್ದರಿಂದ ಶೋಧ ಕಾರ್ಯಾಚರಣೆ ನಿಲ್ಲಿಸಿದ್ದು, ಭಾನುವಾರ ಬೆಳಗ್ಗೆ ಪುನರಾರಂಭಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

The post ಹಾಸನ ಮೂಲದ ಮೂವರು ಯುವಕರು ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ನಾಪತ್ತೆ. appeared first on Good News 24x7.

]]>