March2025 Archives - Good News 24x7 https://www.goodnews24x7.com/tag/march2025/ Kannada Sat, 01 Mar 2025 05:38:36 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg March2025 Archives - Good News 24x7 https://www.goodnews24x7.com/tag/march2025/ 32 32 ಬಂದ್ ! ಬಂದ್ ! ಬಂದ್ ! ಮಾ.22 ರಂದು ಕರ್ನಾಟಕ ಬಂದ್ https://www.goodnews24x7.com/%e0%b2%ac%e0%b2%82%e0%b2%a6%e0%b3%8d-%e0%b2%ac%e0%b2%82%e0%b2%a6%e0%b3%8d-%e0%b2%ac%e0%b2%82%e0%b2%a6%e0%b3%8d-%e0%b2%ae%e0%b2%be-22-%e0%b2%b0%e0%b2%82%e0%b2%a6%e0%b3%81-%e0%b2%95%e0%b2%b0/ Sat, 01 Mar 2025 05:38:36 +0000 https://www.goodnews24x7.com/?p=2481 ವಿವಿಧೆಡೆ ಮುತ್ತಿಗೆ, ಗಡಿಗಳ ಬಂದ್ಗೆ ಮಾ.3ರಿಂದಲೇ ನಿರ್ಧಾರ..! ಬೆಂಗಳೂರು – ಬೆಳಗಾವಿಯಲ್ಲಿ ಕನ್ನಡದ ಕಂಡಕ್ಟರ್ ಮೇಲೆ ಮರಾಠಿಗರ ಹಲ್ಲೆ, ಕನ್ನಡಿಗರ ಮೇಲೆ ಎಂಇಎಸ್ ಪುಂಡಾಟ, ಶಿವಸೇನೆ ನಾಯಕರು ಹಾಗೂ ಕಾರ್ಯಕರ್ತರು ಕರ್ನಾಟಕಕ್ಕೆ ಕಾಲಿಡದಂತೆ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಮಾ. 22ರಂದು…

The post ಬಂದ್ ! ಬಂದ್ ! ಬಂದ್ ! ಮಾ.22 ರಂದು ಕರ್ನಾಟಕ ಬಂದ್ appeared first on Good News 24x7.

]]>

ವಿವಿಧೆಡೆ ಮುತ್ತಿಗೆ, ಗಡಿಗಳ ಬಂದ್ಗೆ ಮಾ.3ರಿಂದಲೇ ನಿರ್ಧಾರ..!
ಬೆಂಗಳೂರು – ಬೆಳಗಾವಿಯಲ್ಲಿ ಕನ್ನಡದ ಕಂಡಕ್ಟರ್ ಮೇಲೆ ಮರಾಠಿಗರ ಹಲ್ಲೆ, ಕನ್ನಡಿಗರ ಮೇಲೆ ಎಂಇಎಸ್ ಪುಂಡಾಟ, ಶಿವಸೇನೆ ನಾಯಕರು ಹಾಗೂ ಕಾರ್ಯಕರ್ತರು ಕರ್ನಾಟಕಕ್ಕೆ ಕಾಲಿಡದಂತೆ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಮಾ. 22ರಂದು ಕರ್ನಾಟಕ ಬಂದ್ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ಮಾ.3 ರಿಂದಲೇ ರಾಜಭವನ ಮುತ್ತಿಗೆ, ಮಾ.7 ಬೆಳಗಾವಿ ಚಲೋ ಸೇರಿ ಹಂತ ಹಂತ ವಾಗಿ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲಾಗುವುದು ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಶುಕ್ರ ವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧ ಮಾಡಬೇಕು. ಶಿವಸೇನೆಗಡಿಪಾರು ಮಾಡ ಬೇಕು. ಸಂಭಾಜಿ ಪ್ರತಿಮೆ ತೆರವುಗೊಳಿ ಸಬೇಕು. ಕಂಡಕ್ಟರ್ ಮೇಲಿನ ಹಲ್ಲೆಗೆ ಉನ್ನತ ಮಟ್ಟದ ತನಿಖೆ ಯಾಗಬೇಕು. ವಾಟಾಳ್ ಕೊಪ್ಪಳ ಕಾರ್ಖಾನೆಗಳಿಂದ ಪರಿಸರ ಹಾಳಾಗುತ್ತಿದ್ದು, ಇದಕ್ಕೆ ತಡೆ ನೀಡಬೇಕು. ಪರ ಭಾಷೆಯವರು ತಮ್ಮದೇ ಭಾಷಾ ವ್ಯಾಮೋಹ ಹೊಂದಿದ್ದರೆ ನಮ್ಮ ರಾಜ್ಯ ದಿಂದ ಹೊರಗಡೆ
ಹೋಗಬೇಕು. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮೂಲೆಗುಂಪಾಗಿದ್ದು, ಇದಕ್ಕೆ ಶಕ್ತಿ ತುಂಬಬೇಕು ಎಂದು ಆಗ್ರಹಿಸಿ ಮಾ.22ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಕನ್ನಡ ಒಕ್ಕೂಟದಿಂದ ಹಂತ ಹಂತವಾಗಿ ಪ್ರತಿಭಟನೆ
ಮಾರ್ಚ್ 3 – ಬೆಳಿಗ್ಗೆ 11 ಗಂಟೆಗೆ ರಾಜಭವನ ಮುತ್ತಿಗೆ.
ಮಾರ್ಚ್ 7 – ರಂದು ಬೆಳಗಾವಿ ಚಲೋ.
ಮಾರ್ಚ್ 11 – ಅತ್ತಿಬೆಲೆ ತಮಿಳುನಾಡು ಗಡಿ ಬಂದ್.
ಮಾರ್ಚ್ 14 – ಮಂಡ್ಯ ಮೈಸೂರು, ರಾಮನಗರ ರಾಷ್ಟ್ರೀಯ ಹೆದ್ದಾರಿ ಬಂದ್
ಮಾರ್ಚ್ 16 – ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಬಂದ್.
ಮಾರ್ಚ್ 22 – ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಅಖಂಡ ಕರ್ನಾಟಕ ಬಂದ್
ಪೂಜಾ ಗಾಂಧಿ ಹಾಡಿಗೆ ಫ್ಯಾನ್ಸ್ ಫುಲ್ ಫಿದಾ..!
ಕರ್ನಾಟಕ ಬಂದ್ಗೆ ಕರೆ ನೀಡಿರುವುದಕ್ಕೆ ಯಾರೊಬ್ಬರೂ ನನ್ನನ್ನು ಕರೆದಿಲ್ಲ ಅಂತ ಮಾತನಾಡಬೇಡಿ. ನಾನು ಪ್ರವೀಣ್ ಶೆಟ್ಟಿ ಅವರನ್ನು ಕರೆದಿದ್ದೆ. ಆದರೆ ಪಾಪ ಅವರು ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲ. ನಾನು ನಾರಾಯಣಗೌಡರಿಗೂ ಬಹಿರಂಗವಾಗಿ ಕರೆಯುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನಾವು ಕಳಕಳಿಯಿಂದ ಮನವಿ ಮಾಡುತ್ತೇನೆ. ಇದು ರಾಜಕೀಯವಲ್ಲ ಸಂಪೂರ್ಣ ಬೆಂಬಲ ನೀಡಬೇಕು. ರಾಮಲಿಂಗಾರೆಡ್ಡಿ ಅವರು ನಿಮ್ಮ ಇಲಾಖೆಯ ಎಲ್ಲ ಬಸ್ಸುಗಳನ್ನು ನಿಲ್ಲಿಸಿ ಬೆಂಬಲ ಸೂಚಿಸಬೇಕು. ಹೋಟೆಲ್ ಅವರು ಬಂದ್ ಮಾಡಿ ಬೆಂಬಲ ನೀಡಬೇಕು ಎಂದು ಆಗ್ರಹಿಸಿದರು.

ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಇರುವ ಶಾಪಿಂಗ್ ಮಾಲ್ಗಳೆಲ್ಲ ಮುಚ್ಚುತ್ತಾರೆ ನಾವು ಮಾತನಾಡಿದ್ದೇವೆ. ಸರ್ಕಾರಿ ನೌಕರರರ ಸಂಘ ಗೌರವದಿಂದ ಹೇಳುತ್ತೇನೆ ಬೆಂಬಲ ನೀಡಿ. ಖಾಸಗಿ ಶಾಲೆ, ಸರ್ಕಾರಿ ಶಾಲೆ ರಜೆ ಘೋಷಣೆ ಮಾಡಿ. ಎಲ್ಲಾ ಐಟಿ ಕಂಪನಿಗಳು ಕೂಡ ರಜೆ ಕೊಡಬೇಕು. ಎಲ್ಲಾ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರ, ವ್ಯವಹಾರ ನಿಲ್ಲಿಸಬೇಕು. ಉಳಿದಂತೆ ಎಲ್ಲ ಜನಸಾಮಾನ್ಯರು ಇದಕ್ಕೆ ಬೆಂಬಲ ನೀಡಲಿದ್ದಾರೆ ಎಂದು ವಾಟಾಳ್ ನಾಗರಾಜ್ ಹೇಳಿದರು.

The post ಬಂದ್ ! ಬಂದ್ ! ಬಂದ್ ! ಮಾ.22 ರಂದು ಕರ್ನಾಟಕ ಬಂದ್ appeared first on Good News 24x7.

]]>
ಮಾರ್ಚ್‌ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ. https://www.goodnews24x7.com/%e0%b2%ae%e0%b2%be%e0%b2%b0%e0%b3%8d%e0%b2%9a%e0%b3%8d-%e0%b2%a4%e0%b2%bf%e0%b2%82%e0%b2%97%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%86%e0%b2%9a%e0%b2%b0%e0%b2%bf%e0%b2%b8%e0%b2%b2/ Fri, 28 Feb 2025 11:28:11 +0000 https://www.goodnews24x7.com/?p=2470 ಹಿಂದೂ ಧರ್ಮದಲ್ಲಿ ವರ್ಷವಿಡೀ ಹಲವಾರು ಧಾರ್ಮಿಕ ಆಚರಣೆ, ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ. ನಾವೀಗ ಫೆಬ್ರವರಿ ತಿಂಗಳು ಕಳೆದು, ವರ್ಷದ ಮೂರನೇ ತಿಂಗಳಾದ ಮಾರ್ಚ್ಗೆ ಕಾಲಿಡುತ್ತಿದ್ದೇವೆ. ಹಿಂದೂ ಪಂಚಾಂಗದ ಪ್ರಕಾರ ಈ ಮಾರ್ಚ್ ಅಂದರೆ ಫಾಲ್ಗುಣ ಮಾಸವು ವರ್ಷದ ಕೊನೆಯ ತಿಂಗಳಾಗಿದೆ. ಈ…

The post ಮಾರ್ಚ್‌ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ. appeared first on Good News 24x7.

]]>

ಹಿಂದೂ ಧರ್ಮದಲ್ಲಿ ವರ್ಷವಿಡೀ ಹಲವಾರು ಧಾರ್ಮಿಕ ಆಚರಣೆ, ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ. ನಾವೀಗ ಫೆಬ್ರವರಿ ತಿಂಗಳು ಕಳೆದು, ವರ್ಷದ ಮೂರನೇ ತಿಂಗಳಾದ ಮಾರ್ಚ್ಗೆ ಕಾಲಿಡುತ್ತಿದ್ದೇವೆ. ಹಿಂದೂ ಪಂಚಾಂಗದ ಪ್ರಕಾರ ಈ ಮಾರ್ಚ್ ಅಂದರೆ ಫಾಲ್ಗುಣ ಮಾಸವು ವರ್ಷದ ಕೊನೆಯ ತಿಂಗಳಾಗಿದೆ. ಈ ಮಾಸದಲ್ಲಿ ಹೋಳಿಯಂಥಹ ಹಲವು ಪ್ರಮುಖ ಹಬ್ಬಗಳನ್ನು ಆಚರಿಸಲಾಗುತ್ತದೆ. ಹೌದು ವರ್ಷದ 12 ತಿಂಗಳಲ್ಲೂ ಕೂಡಾ ಒಂದಲ್ಲಾ ಒಂದು ಹಬ್ಬ, ವ್ರತಾಚರಣೆಗಳನ್ನು ಆಚರಿಸಲಾಗುತ್ತದೆ. ಅಂತೆಯೇ ವರ್ಷದ ಮೂರನೇ ತಿಂಗಳಾಗಿರುವ ಮಾರ್ಚ್ ತಿಂಗಳಲ್ಲಿಯೂ ಹಲವಾರು ಹಬ್ಬಗಳನ್ನು ಆಚರಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಮಾರ್ಚ್ ಅಂದರೆ ಫಾಲ್ಗುಣ ಮಾಸವು ವರ್ಷದ ಕೊನೆಯ ತಿಂಗಳು. ಈ ತಿಂಗಳಿನಲ್ಲಿ ಅನೇಕ ಹಬ್ಬಗಳು ಬರುತ್ತವೆ. ಅಂತೆಯೇ ಶುಭ ಕಾರ್ಯಗಳಿಗೂ ಉತ್ತಮ ಮುಹೂರ್ತವಿರುವ ತಿಂಗಳು ಇದಾಗಿದೆ. ಹಾಗಾದರೆ ಮಾರ್ಚ್ ತಿಂಗಳಿನಲ್ಲಿ ಯಾವೆಲ್ಲಾ ಪ್ರಮುಖ ಹಬ್ಬಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.

‘ಛಾವಾ’ ಸಿನಿಮಾಗೆ ₹100 ಕೋಟಿ ಡಿಫಮೇಶನ್
ಮಾರ್ಚ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ:
01, ಮಾರ್ಚ್ 2025: ರಾಮಕೃಷ್ಣ ಜಯಂತಿ
02, ಮಾರ್ಚ್ 2025: ರಂಜಾನ್ ತಿಂಗಳಾರಂಭ
03, ಮಾರ್ಚ್ 2025: ವಿನಾಯಕ ಚತುರ್ಥಿ
04, ಮಾರ್ಚ್ 2025: ಸ್ಕಂದ ಷಷ್ಠಿ
06, ಮಾರ್ಚ್ 2025: ರೋಹಿಣಿ ವ್ರತ
07, ಮಾರ್ಚ್ 2025: ಹೋಲಾಷ್ಟಕ ಆರಂಭ
07, ಮಾರ್ಚ್ 2025: ಮಾಸಿಕ ದುರ್ಗಾಷ್ಟಮಿ
10, ಮಾರ್ಚ್ 2025: ಅಮಲಕಿ ಏಕಾದಶಿ
10, ಮಾರ್ಚ್ 2025: ನರಸಿಂಹ ದ್ವಾದಶಿ
11, ಮಾರ್ಚ್ 2025: ಪ್ರದೋಷ ವ್ರತ
13, ಮಾರ್ಚ್ 2025: ಹೋಳಿ ಹುಣ್ಣಿಮೆ
13, ಮಾರ್ಚ್ 2025: ಚೈತನ್ಯ ಮಹಾಪ್ರಭು ಜಯಂತಿ
14, ಮಾರ್ಚ್ 2025: ವಸಂತ ಪೂರ್ಣಿಮಾ
14, ಮಾರ್ಚ್ 2025: ಹೋಳಿ
14, ಮಾರ್ಚ್ 2025: ಮೀನ ಸಂಕ್ರಮಣ
14, ಮಾರ್ಚ್ 2025: ಲಕ್ಷ್ಮೀ ಜಯಂತಿ
16, ಮಾರ್ಚ್ 2025: ಭಾಯ್ ದೂಜ್
17, ಮಾರ್ಚ್ 2025: ಭಾಲಚಂದ್ರ ಸಂಕಷ್ಟ ಚತುರ್ಥಿ
19, ಮಾರ್ಚ್ 2025: ರಂಗಪಂಚಮಿ
20, ಮಾರ್ಚ್ 2025: ಏಕನಾಥ ಷಷ್ಠಿ
21, ಮಾರ್ಚ್ 2025: ಭಾನು ಸಪ್ತಮಿ
22, ಮಾರ್ಚ್ 2025: ಶೀತಲಾಷ್ಟಮಿ
23, ಮಾರ್ಚ್ 2025: ಶಹೀದ್ ದಿವಸ್
25, ಮಾರ್ಚ್ 2025: ಪಾಪಮೋಚನಿ ಏಕಾದಶಿ
25, ಮಾರ್ಚ್ 2025: ಕರ್ಮದೇವಿ ಜಯಂತಿ
27,ಮಾರ್ಚ್ 2025: ಪ್ರದೋಷ ವ್ರತ
27,ಮಾರ್ಚ್ 2025: ಮಾಸಿಕ ಶಿವರಾತ್ರಿ
27,ಮಾರ್ಚ್ 2025: ಗುರು ಪ್ರದೋಷ
27,ಮಾರ್ಚ್ 2025: ವಾರುಣಿ ಹಬ್ಬ
29, ಮಾರ್ಚ್ 2025: ಚೈತ್ರ ಅಮವಾಸ್ಯೆ
29, ಮಾರ್ಚ್ 2025: ಸೂರ್ಯ ಗ್ರಹಣ
30, ಮಾರ್ಚ್ 2025: ಗುಡಿ ಪಾಡ್ವ
30, ಮಾರ್ಚ್ 2025: ಚೈತ್ರ ನವರಾತ್ರಿ
30, ಮಾರ್ಚ್ 2025: ಯುಗಾದಿ
30, ಮಾರ್ಚ್ 2025: ಜುಲೇಲಾಲ್ ಜಯಂತಿ
31, ಮಾರ್ಚ್ 2025: ಮತ್ಸ್ಯ ಜಯಂತಿ
31, ಮಾರ್ಚ್ 2025: ಈದ್ ಅಲ್-ಫಿತರ್

The post ಮಾರ್ಚ್‌ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ. appeared first on Good News 24x7.

]]>