market Archives - Good News 24x7 https://www.goodnews24x7.com/tag/market/ Kannada Tue, 26 May 2026 05:57:52 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg market Archives - Good News 24x7 https://www.goodnews24x7.com/tag/market/ 32 32 ವಾಹನ ಸವಾರರಿಗೆ ಇಂಧನ ಬೆಲೆ ಏರಿಕೆ ಬರೆ: ಪೆಟ್ರೋಲ್, ಡೀಸೆಲ್ ಬೆನ್ನಲ್ಲೇ ಈಗ ಸಿಎನ್‌ಜಿ ದರವೂ ದುಬಾರಿ! https://www.goodnews24x7.com/fuel-price-hike-for-motorists-after-petrol-and-diesel-now-cng-price-is-also-expensive%e0%b2%b5%e0%b2%be%e0%b2%b9%e0%b2%a8-%e0%b2%b8%e0%b2%b5%e0%b2%be%e0%b2%b0%e0%b2%b0%e0%b2%bf%e0%b2%97%e0%b3%86/ Tue, 26 May 2026 05:57:52 +0000 https://www.goodnews24x7.com/?p=9531 ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸತತ ನಾಲ್ಕು ಬಾರಿ ಏರಿಕೆಯಾದ ಬೆನ್ನಲ್ಲೇ, ವಾಹನ ಸವಾರರಿಗೆ ಈಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿರುವುದರಿಂದ, ಕೇವಲ ಎರಡು ವಾರಗಳ ಅವಧಿಯಲ್ಲಿ ನಾಲ್ಕನೇ ಬಾರಿಗೆ ಸಿಎನ್‌ಜಿ (CNG)…

The post ವಾಹನ ಸವಾರರಿಗೆ ಇಂಧನ ಬೆಲೆ ಏರಿಕೆ ಬರೆ: ಪೆಟ್ರೋಲ್, ಡೀಸೆಲ್ ಬೆನ್ನಲ್ಲೇ ಈಗ ಸಿಎನ್‌ಜಿ ದರವೂ ದುಬಾರಿ! appeared first on Good News 24x7.

]]>

ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸತತ ನಾಲ್ಕು ಬಾರಿ ಏರಿಕೆಯಾದ ಬೆನ್ನಲ್ಲೇ, ವಾಹನ ಸವಾರರಿಗೆ ಈಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿರುವುದರಿಂದ, ಕೇವಲ ಎರಡು ವಾರಗಳ ಅವಧಿಯಲ್ಲಿ ನಾಲ್ಕನೇ ಬಾರಿಗೆ ಸಿಎನ್‌ಜಿ (CNG) ದರವನ್ನು ಹೆಚ್ಚಿಸಲಾಗಿದೆ. ಪರಿಷ್ಕೃತ ದರಗಳ ಪ್ರಕಾರ, ದೇಶದ ರಾಜಧಾನಿ ದೆಹಲಿಯಲ್ಲಿ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 83 ರೂಪಾಯಿ 09 ಪೈಸೆಗೆ ತಲುಪಿದ್ದು, ಈ ಹೊಸ ದರವು ಮೇ 26 ರ ಬೆಳಿಗ್ಗೆ 6 ಗಂಟೆಯಿಂದಲೇ ಜಾರಿಗೆ ಬಂದಿದೆ. ಸೋಮವಾರವಷ್ಟೇ ಇಂಧನ ದರ ಲೀಟರ್‌ಗೆ 2 ರೂಪಾಯಿ 83 ಪೈಸೆ ಹೆಚ್ಚಳವಾಗಿದ್ದರಿಂದ ಕಂಗಾಲಾಗಿದ್ದ ಜನಸಾಮಾನ್ಯರಿಗೆ, ಈಗ ಸಿಎನ್‌ಜಿ ಬೆಲೆ ಏರಿಕೆಯೂ ಗಾಯದ ಮೇಲೆ ಉಪ್ಪನ್ನು ಸವರಿದಂತಾಗಿದೆ. ಆದರೆ ಸದ್ಯಕ್ಕಂತೂ ಗೃಹಬಳಕೆಯ ಪೈಪ್ಡ್ ನೈಸರ್ಗಿಕ ಅನಿಲದ (PNG) ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲದಿರುವುದು ಗ್ರಾಹಕರಿಗೆ ಸಣ್ಣ ಸಮಾಧಾನ ತಂದಿದೆ.

ಕೈಗಾರಿಕಾ ಮೂಲಗಳ ಪ್ರಕಾರ, ಅಮೆರಿಕ ಹಾಗೂ ಇರಾನ್ ನಡುವಿನ ರಾಜತಾಂತ್ರಿಕ ಸಂಘರ್ಷ ಮತ್ತು ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ‘ಹಾರ್ಮೊಜ್ ಜಲಸಂಧಿ’ಯಲ್ಲಿ ಉಂಟಾಗಿರುವ ಅಡಚಣೆಯ ಭೀತಿಯೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣ ಎನ್ನಲಾಗಿದೆ. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಗಳು ತೀವ್ರ ಏರಿಳಿತ ಕಾಣುತ್ತಿದ್ದು, ತೈಲ ಕಂಪನಿಗಳ ಮೇಲಿನ ಒತ್ತಡ ಹೆಚ್ಚಾಗಿದೆ. ಆದಾಗ್ಯೂ, ಸಾರ್ವಜನಿಕರನ್ನು ಈ ಬೆಲೆ ಏರಿಕೆಯ ಬಿಸಿಯಿಂದ ರಕ್ಷಿಸಲು ಕೇಂದ್ರ ಸರ್ಕಾರವು ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂಪಾಯಿಗಳಷ್ಟು ಕಡಿತಗೊಳಿಸಿದೆ. ಈ ಮೂಲಕ ಸರ್ಕಾರವು ಸುಮಾರು 14,000 ಕೋಟಿ ರೂಪಾಯಿಗಳಷ್ಟು ತೆರಿಗೆ ಆದಾಯವನ್ನು ಬಿಟ್ಟುಕೊಟ್ಟಿದೆ ಎಂದು ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಮಾಹಿತಿ ನೀಡಿದ್ದಾರೆ.

The post ವಾಹನ ಸವಾರರಿಗೆ ಇಂಧನ ಬೆಲೆ ಏರಿಕೆ ಬರೆ: ಪೆಟ್ರೋಲ್, ಡೀಸೆಲ್ ಬೆನ್ನಲ್ಲೇ ಈಗ ಸಿಎನ್‌ಜಿ ದರವೂ ದುಬಾರಿ! appeared first on Good News 24x7.

]]>
ಎಲ್‌ಪಿಜಿ ಸಿಲಿಂಡರ್​ ಸಿಗದೆ ಪರದಾಟ! https://www.goodnews24x7.com/lpg-cylinder-shortagelpg-cylinder-shortage/ Thu, 12 Mar 2026 06:44:32 +0000 https://www.goodnews24x7.com/?p=8866   ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯವು ಎಲ್‌ಪಿಜಿ ಸಿಲಿಂಡರ್ ಬಿಕ್ಕಟ್ಟನ್ನು ಎದುರಿಸುತ್ತಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಿಲಿಂಡರ್ ಸಿಗದೆ ಹೋಟೆಲ್ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಲಿಂಡರ್​ಗಳು ಬ್ಲ್ಯಾಕ್​​ ಮಾರ್ಕೆಟ್​​ನಲ್ಲಿ ಮೂರು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುತ್ತಿದ್ದರೂ…

The post ಎಲ್‌ಪಿಜಿ ಸಿಲಿಂಡರ್​ ಸಿಗದೆ ಪರದಾಟ! appeared first on Good News 24x7.

]]>

 

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯವು ಎಲ್‌ಪಿಜಿ ಸಿಲಿಂಡರ್ ಬಿಕ್ಕಟ್ಟನ್ನು ಎದುರಿಸುತ್ತಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಿಲಿಂಡರ್ ಸಿಗದೆ ಹೋಟೆಲ್ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಲಿಂಡರ್​ಗಳು ಬ್ಲ್ಯಾಕ್​​ ಮಾರ್ಕೆಟ್​​ನಲ್ಲಿ ಮೂರು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುತ್ತಿದ್ದರೂ ಅವುಗಳ ಲಭ್ಯತೆಯೂ ಕಷ್ಟಸಾಧ್ಯವಾಗಿದೆ. ಇದರಿಂದ ಹಲವು ಹೋಟೆಲ್‌ಗಳು ಮುಚ್ಚುವ ಪರಿಸ್ಥಿತಿ ತಲುಪಿವೆ ಅಥವಾ ತಮ್ಮ ಮೆನುವಿನ ಐಟಂಗಳನ್ನು ಗಣನೀಯವಾಗಿ ಕಡಿಮೆ ಮಾಡಿವೆ.

ಇದರಿಂದಾಗಿ ಹೋಟೆಲ್‌ಗಳನ್ನು ಅವಲಂಬಿಸಿರುವ ವಿದ್ಯಾರ್ಥಿಗಳು, ಉದ್ಯೋಗಿಗಳು ಆಹಾರದ ಕೊರತೆ ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಯ ನಡುವೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ನಾಗರಿಕರಿಗೆ ಬುಕಿಂಗ್ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದೆ. ಮುಂದಿನ ಎರಡು ದಿನಗಳಲ್ಲಿ ಸಿಲಿಂಡರ್​ಗಳನ್ನು ಮನೆಗಳಿಗೆ ವಿತರಿಸಲಾಗುವುದು. ಅಲ್ಲದೆ, ಎಲ್‌ಪಿಜಿ ಸಿಲಿಂಡರ್ ಉತ್ಪಾದನೆಯನ್ನು ಶೇಕಡಾ 25ರಷ್ಟು ಹೆಚ್ಚಿಸಲಾಗಿದೆ ಮತ್ತು ಹೊಸ ಮೂಲಗಳಿಂದ ಎಲ್‌ಎನ್‌ಜಿ ಸರಕುಗಳನ್ನು ಖರೀದಿಸಲಾಗುತ್ತಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

The post ಎಲ್‌ಪಿಜಿ ಸಿಲಿಂಡರ್​ ಸಿಗದೆ ಪರದಾಟ! appeared first on Good News 24x7.

]]>
ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ : ಆಭರಣಪ್ರಿಯರಿಗೆ ಗುಡ್ ನ್ಯೂಸ್! https://www.goodnews24x7.com/gold-price-drops-slightly-good-news-for-jewelry-lovers/ Thu, 19 Jun 2025 11:46:41 +0000 https://www.goodnews24x7.com/?p=4498 ಬೆಂಗಳೂರು: ಕೆಲ ದಿನಗಳ ಹಿಂದೆ ಗಗನಕ್ಕೇರಿದ್ದ ಬಂಗಾರದ ಬೆಲೆ ಇಂದು ಕೊಂಚ ಇಳಿಕೆಯಾಗಿದೆ. ಸೋಮವಾರ 1,01,510 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 1,140 ರೂ. ಇಳಿಕೆಯೊಂದಿಗೆ 1,00,370 ರೂ.ಗೆ ತಲುಪಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಶನಿವಾರ…

The post ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ : ಆಭರಣಪ್ರಿಯರಿಗೆ ಗುಡ್ ನ್ಯೂಸ್! appeared first on Good News 24x7.

]]>

ಬೆಂಗಳೂರು: ಕೆಲ ದಿನಗಳ ಹಿಂದೆ ಗಗನಕ್ಕೇರಿದ್ದ ಬಂಗಾರದ ಬೆಲೆ ಇಂದು ಕೊಂಚ ಇಳಿಕೆಯಾಗಿದೆ. ಸೋಮವಾರ 1,01,510 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 1,140 ರೂ. ಇಳಿಕೆಯೊಂದಿಗೆ 1,00,370 ರೂ.ಗೆ ತಲುಪಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಶನಿವಾರ 1,09,165 ರೂ. ಇದ್ದ ಒಂದು ಕೆಜಿ ಬೆಳ್ಳಿಯ ಬೆಲೆ ಇಂದು 1,10,000 ರೂ.ಗೆ ತಲುಪಿದೆ.

 

 

 

 

 

 

ಇಂದಿನ ಚಿನ್ನದ ದರ: ರಾಜಧಾನಿ ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 10,037 ರೂ. ಇದೆ ಉಳಿದಂತೆ 22 ಕ್ಯಾರೆಟ್ ಚಿನ್ನದ ದರ 9,200 ರೂ. ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ 7,528 ರೂ. ಇದೆ.
ಹೈದರಾಬಾದ್ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 1,00,370 ರೂ. ಹಾಗೂ ಒಂದು ಕೆಜಿ ಬೆಳ್ಳಿಯ ಬೆಲೆ 1,20,000 ರೂ. ಇದೆ. ನಿನ್ನೆಯಿಂದ ಇಂದಿಗೆ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ 1140 ರೂ. ಇಳಿಕೆಯಾಗಿದೆ. ಉಳಿದಂತೆ, 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 1050ರೂ. ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 860 ರೂ. ಇಳಿಕೆ ಕಂಡಿದೆ.
ಸ್ಪಾಟ್ ಚಿನ್ನದ ಬೆಲೆ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸ್ವಲ್ಪ ಹೆಚ್ಚಾಗಿದೆ. ಶುಕ್ರವಾರ ಒಂದು ಔನ್ಸ್ ಚಿನ್ನದ ಬೆಲೆ $3331 ರಷ್ಟಿತ್ತು. ಆದರೆ ಭಾನುವಾರ $54 ರಷ್ಟು ಹೆಚ್ಚಾಗಿ $3385 ಕ್ಕೆ ತಲುಪಿದೆ. ಪ್ರಸ್ತುತ ಒಂದು ಔನ್ಸ್ ಬೆಳ್ಳಿಯ ಬೆಲೆ 36.23 ಡಾಲರ್.
(ಮುನ್ಸೂಚನೆ :-ಮೇಲಿನ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಇದ್ದ ದರವಾಗಿದೆ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಯಾಗುತ್ತಿರುತ್ತವೆ ಎಂಬುದನ್ನು ಗ್ರಾಹಕರು ದಯವಿಟ್ಟು ಗಮನಿಸಿ.)

The post ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ : ಆಭರಣಪ್ರಿಯರಿಗೆ ಗುಡ್ ನ್ಯೂಸ್! appeared first on Good News 24x7.

]]>