marriage Archives - Good News 24x7 https://www.goodnews24x7.com/tag/marriage/ Kannada Fri, 27 Feb 2026 13:38:07 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg marriage Archives - Good News 24x7 https://www.goodnews24x7.com/tag/marriage/ 32 32 ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಳಪತಿ ವಿಜಯ್ ಪತ್ನಿ https://www.goodnews24x7.com/thalapathy-vijays-wife-files-for-divorce8522-2/ Fri, 27 Feb 2026 13:37:48 +0000 https://www.goodnews24x7.com/?p=8522 ಕಾಲಿವುಡ್ ಖ್ಯಾತ ನಟ ದಳಪತಿ ವಿಜಯ್ ಸಂಸಾರದಲ್ಲಿ ಬಿರುಕು ಮೂಡಿದೆ. ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ದಾಂಪತ್ಯದ ಬಳಿಕ ಅವರು ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ವಿಜಯ್ ಅವರಿಗೆ ನಟಿಯೊಬ್ಬರ ಜೊತೆ ಅನೈತಿಕ ಸಂಬಂಧ ಇದೆ…

The post ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಳಪತಿ ವಿಜಯ್ ಪತ್ನಿ appeared first on Good News 24x7.

]]>

ಕಾಲಿವುಡ್ ಖ್ಯಾತ ನಟ ದಳಪತಿ ವಿಜಯ್ ಸಂಸಾರದಲ್ಲಿ ಬಿರುಕು ಮೂಡಿದೆ. ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ದಾಂಪತ್ಯದ ಬಳಿಕ ಅವರು ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ವಿಜಯ್ ಅವರಿಗೆ ನಟಿಯೊಬ್ಬರ ಜೊತೆ ಅನೈತಿಕ ಸಂಬಂಧ ಇದೆ ಎಂದು ಸಂಗೀತಾ ಆರೋಪಿಸಿದ್ದಾರೆ.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಳಪತಿ ವಿಜಯ್ ಪತ್ನಿನಟಿ ಜೊತೆ ಅನೈತಿಕ ಸಂಬಂಧ ಆರೋಪ

ಕಾಲಿವುಡ್ ಖ್ಯಾತ ನಟ ದಳಪತಿ ವಿಜಯ್ ಸಂಸಾರದಲ್ಲಿ ಬಿರುಕು ಮೂಡಿದೆ. ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ದಾಂಪತ್ಯದ ಬಳಿಕ ಅವರು ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ವಿಜಯ್ ಅವರಿಗೆ ನಟಿಯೊಬ್ಬರ ಜೊತೆ ಅನೈತಿಕ ಸಂಬಂಧ ಇದೆ ಎಂದು ಸಂಗೀತಾ ಆರೋಪಿಸಿದ್ದಾರೆ. ಸಿನಿಮಾಗಿಂತಲೂ ಹೆಚ್ಚಾಗಿ ರಾಜಕೀಯದಲ್ಲಿ ವಿಜಯ್ ಅವರು ಈಗ ಆಸಕ್ತಿ ಹೊಂದಿದ್ದಾರೆ. ಆದರೆ, ಅವರ ಮೇಲೆ ಅನೈತಿಕ ಸಂಬಂಧದ ಆರೋಪ ಕೇಳಿಬಂದಿರುವುದರಿಂದ ರಾಜಕೀಯದ ಹಾದಿಗೆ ಇದು ಕಪ್ಪು ಚುಕ್ಕಿ ಆಗಲಿದೆ.

ಚೆಂಗಲ್​ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಸಂಗೀತಾ ಅವರು ಫೆಬ್ರವರಿ 27ರಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿದಿದ್ದಾರೆ. ಈ ವಿಷಯದ ಬಗ್ಗೆ ವಿಜಯ್ ಅವರು ಇನ್ನೂ ಅಧಿಕೃತ ಹೇಳಿಕೆ ನೀಡುವುದು ಬಾಕಿ ಇದೆ. ನಟಿಯ ಜೊತೆ ವಿಜಯ್ ಅವರಿಗೆ ಅನೈತಿಕ ಸಂಬಂಧ ಇದೆ ಎಂದು ಪತ್ನಿ ಆರೋಪ ಮಾಡಿದ್ದು, ಕೋರ್ಟ್ ವಿಚಾರಣೆ ವೇಳೆ ಆ ನಟಿಯ ಹೆಸರು ಹೊರಬರಲಿದೆ.

ವಿಜಯ್ ಮತ್ತು ಸಂಗೀತಾ ಅವರ ಸಂಸಾರದ ವಿಚಾರಗಳು ಆದಷ್ಟು ಗುಟ್ಟಾಗಿ ಇರುತ್ತಿದ್ದವು. ಅದರ ನಡುವೆ ದಳಪತಿ ವಿಜಯ್ ಅವರ ನಟಿಯೊಬ್ಬರ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು. ಸೋಶಿಯಲ್ ಮೀಡಿಯಾದಲ್ಲಿ ಆ ಬಗ್ಗೆ ಗುಸುಗುಸು ಕೇಳಿಬರುತ್ತಿತ್ತು. ಈಗ ಸ್ವತಃ ಪತ್ನಿಯೇ ಆರೋಪ ಮಾಡಿರುವುದರಿಂದ ವದಂತಿ ನಿಜವಾದಂತಾಗಿದೆ.

ದಳಪತಿ ವಿಜಯ್ ನಟಿಸಿರುವ ಕೊನೇ ಸಿನಿಮಾ ‘ಜನ ನಾಯಗನ್’ ಇನ್ನೂ ಬಿಡುಗಡೆ ಆಗುವುದು ಬಾಕಿ ಇದೆ. ಆ ಚಿತ್ರ ತೆರೆಕಂಡ ಬಳಿಕ ಅವರು ಚಿತ್ರರಂಗದಿಂದ ಸಂಪೂರ್ಣ ದೂರ ಉಳಿದು, ರಾಜಕೀಯದಲ್ಲಿ ಸಕ್ರಿಯರಾಗಲಿದ್ದಾರೆ.

.

The post ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಳಪತಿ ವಿಜಯ್ ಪತ್ನಿ appeared first on Good News 24x7.

]]>
ಪ್ರಪೋಸ್ ಮಾಡೇ ಬಿಟ್ಟ ಸೂರಜ್; ‘ಐ ಲವ್​ ಯೂ’ ಅಂದಿದ್ದಕ್ಕೆ ಅಚ್ಚರಿಯ ಉತ್ತರ ಕೊಟ್ಟ ರಾಶಿಕಾ https://www.goodnews24x7.com/suraj-refuses-to-propose-rashika-gives-surprising-answer-to-i-love-you/ Fri, 31 Oct 2025 08:02:12 +0000 https://www.goodnews24x7.com/?p=7925 ಬಿಗ್ ಬಾಸ್ ಮನೆಯಲ್ಲಿ ಸೂರಜ್ ಸಿಂಗ್ ರಾಶಿಕಾ ಶೆಟ್ಟಿಗೆ ಪ್ರಪೋಸ್ ಮಾಡಿದ್ದಾರೆ. ಆದರೆ, ಇದಕ್ಕೆ ಅವರು ಅಚ್ಚರಿಯ ಉತ್ತರ ಹೊರಹಾಕಿದ್ದಾರೆ. ಬಿಗ್ ಬಾಸ್‌ನಲ್ಲಿ ಪ್ರೀತಿ, ಪ್ರಣಯಗಳು ಪ್ರೇಕ್ಷಕರ ಗಮನ ಸೆಳೆಯಲು ಸಾಮಾನ್ಯ. ಸೂರಜ್ ತಮ್ಮ ಆಟದ ಮೇಲೆ ಹೆಚ್ಚು ಗಮನ ಹರಿಸಬೇಕಿದೆ.…

The post ಪ್ರಪೋಸ್ ಮಾಡೇ ಬಿಟ್ಟ ಸೂರಜ್; ‘ಐ ಲವ್​ ಯೂ’ ಅಂದಿದ್ದಕ್ಕೆ ಅಚ್ಚರಿಯ ಉತ್ತರ ಕೊಟ್ಟ ರಾಶಿಕಾ appeared first on Good News 24x7.

]]>

ಬಿಗ್ ಬಾಸ್ ಮನೆಯಲ್ಲಿ ಸೂರಜ್ ಸಿಂಗ್ ರಾಶಿಕಾ ಶೆಟ್ಟಿಗೆ ಪ್ರಪೋಸ್ ಮಾಡಿದ್ದಾರೆ. ಆದರೆ, ಇದಕ್ಕೆ ಅವರು ಅಚ್ಚರಿಯ ಉತ್ತರ ಹೊರಹಾಕಿದ್ದಾರೆ. ಬಿಗ್ ಬಾಸ್‌ನಲ್ಲಿ ಪ್ರೀತಿ, ಪ್ರಣಯಗಳು ಪ್ರೇಕ್ಷಕರ ಗಮನ ಸೆಳೆಯಲು ಸಾಮಾನ್ಯ. ಸೂರಜ್ ತಮ್ಮ ಆಟದ ಮೇಲೆ ಹೆಚ್ಚು ಗಮನ ಹರಿಸಬೇಕಿದೆ. ರಾಶಿಕಾ ಅವರ ಈ ಪ್ರತಿಕ್ರಿಯೆ ಆಟಕ್ಕೆ ಸಹಕಾರಿ ಆಗಲಿದೆ.

‘ಬಿಗ್ ಬಾಸ್’ ಮನೆಯಲ್ಲಿ ಪ್ರೀತಿ-ಪ್ರಣಯ ಸಾಮಾನ್ಯ. ಇಲ್ಲಿ ಹುಟ್ಟಿದ ಪ್ರೀತಿ ಮದುವೆ ಹಂತಕ್ಕೆ ಹೋಗೋದು ತುಂಬಾನೇ ಕಡಿಮೆ. ಬಹುತೇಕರು ಇದನ್ನು ಪ್ರೇಕ್ಷಕರ ಗಮನ ಸೆಳೆಯುವ ಉದ್ದೇಶಕ್ಕೆ ಬಳಸಿಕೊಳ್ಳುತ್ತಾರೆ. ರಾಶಿಕಾ ಶೆಟ್ಟಿ (Rashika Shetty) ಹಾಗೂ ಸೂರಜ್ ಆಪ್ತತೆ ಕೂಡ ಇದೇ ರೀತಿ ಎಂದು ಹೇಳಲಾಗುತ್ತಾ ಇದೆ. ಈಗ ಸೂರಜ್ ಅವರು ರಾಶಿಕಾಗೆ ಪ್ರಪೋಸ್ ಮಾಡಿದ್ದಾರೆ. ರಾಶಿಕಾ ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಗಮನ ಸೆಳೆಯಲು ಸಾಧ್ಯವಾಗಿಲ್ಲ. ಹೀಗಾಗಿ, ಅವರು ಮಾಡಿಕೊಂಡ ಆಯ್ಕೆ ಲವ್ ಟ್ರ್ಯಾಕ್. ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಬಂದ ಸೂರಜ್ ಸಿಂಗ್ ಜೊತೆ ಆಪ್ತತೆ ಬೆಳೆಸಿಕೊಂಡರು. ಅವರನ್ನು ನೋಡಿದ ತಕ್ಷಣವೇ ಫ್ಲ್ಯಾಟ್ ಆಗಿದ್ದರು. ರಾಶಿಕಾ ಹಾಗೂ ಸೂರಜ್ ಆಪ್ತತೆ ದಿನ ಕಳೆದಂತೆ ಹೆಚ್ಚುತ್ತಿದೆ.

‘ಬಿಗ್ ಬಾಸ್’ ಮನೆಯಲ್ಲಿ ಜೋರಾಗಿ ಜಗಳ ನಡೆಯುತ್ತಿತ್ತು. ಅತ್ತ ರಾಶಿಕಾ ಹಾಗೂ ಸೂರಜ್ ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿದ್ದರು. ಈ ರೀತಿ ಮುಳುಗಿ ಹೋಗುವಾಗಲೇ ಸೂರಜ್ ಪ್ರಪೋಸ್ ಮಾಡಿಯೇ ಬಿಟ್ಟರು. ನೇರವಾಗಿ ‘ಐ ಲವ್​ ಯೂ’ ಎಂದು ಸೂರಜ್ ಹೇಳಿದ್ದಾರೆ. ಇದನ್ನು ಕೇಳಿ ರಾಶಿಕಾ ಶಾಕ್ ಆದರು. ನನಗೆ ಅದರಲ್ಲಿ ಆಸಕ್ತಿ ಇಲ್ಲ ಎಂದರು.

ಸೂರಜ್ ಪ್ರಪೋಸ್ ಮಾಡುತ್ತಿದ್ದಂತೆ ಅವರು ಒಪ್ಪಿಕೊಳ್ಳುತ್ತಾರೆ ಎಂಬುದು ಅನೇಕರ ಊಹೆ ಆಗಿತ್ತು. ಆದರೆ, ಅವರು ಆ ರೀತಿ ಮಾಡಿಲ್ಲ. ಈ ಮೂಲಕ ಸೂರಜ್ ಜೊತೆಗಿನ ಆಪ್ತತೆ ಕೇವಲ ಒಂದು ಗೇಮ್ ತಂತ್ರ ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಿದಂತೆ ಆಗಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ಅವರು ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಇದು ಅವರ ಆಟಕ್ಕೆ ಸಹಕಾರಿ ಆಗುವ ಸಾಧ್ಯತೆ ಇದೆ.ಸೂರಜ್ ಅವರು ಆರಂಭದಲ್ಲಿ ಬಂದಾಗ ಉತ್ತಮ ಆಟ ಪ್ರದರ್ಶನ ಮಾಡಿದ್ದರು. ಆದರೆ, ಇತ್ತೀಚೆಗೆ ಏಕೋ ಅವರು ಪ್ರೀತಿ-ಪ್ರೇಮದ ವಿಚಾರದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ರಾಶಿಕಾ ಅವರು ಪ್ರಪೋಸ್ ಮಾಡಿದ ಮೇಲೂ ಒಪ್ಪಿಕೊಂಡಿಲ್ಲ. ಹೀಗಾಗಿ, ಸೂರಜ್ ತಮ್ಮ ಆಟದ ಮೇಲೆ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ.

The post ಪ್ರಪೋಸ್ ಮಾಡೇ ಬಿಟ್ಟ ಸೂರಜ್; ‘ಐ ಲವ್​ ಯೂ’ ಅಂದಿದ್ದಕ್ಕೆ ಅಚ್ಚರಿಯ ಉತ್ತರ ಕೊಟ್ಟ ರಾಶಿಕಾ appeared first on Good News 24x7.

]]>
ಒಟ್ಟೊಟ್ಟಿಗೆ ನೆರವೇರಿತು ಹಿಂದೂ ಮತ್ತು ಮುಸ್ಲಿಮರ ಸಾಮೂಹಿಕ ವಿವಾಹ; ಗದಗದಲ್ಲಿ ಕೋಮು ಸೌಹಾರ್ದತೆ ಸಂದೇಶ https://www.goodnews24x7.com/hindu-and-muslim-mass-marriages-held-together-a-message-of-communal-harmony-in-gadag/ Wed, 10 Sep 2025 07:18:26 +0000 https://www.goodnews24x7.com/?p=7453 ಗದಗದಲ್ಲಿ ನಡೆದ ಅಪರೂಪದ ಹಿಂದೂ-ಮುಸ್ಲಿಂ ಸಾಮೂಹಿಕ ವಿವಾಹ ಮಹೋತ್ಸದಲ್ಲಿ ಒಟ್ಟು 36 ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟಿವೆ. ಬೆಟಗೇರಿ ಅಂಜುಮನ್ ಕಮಿಟಿಯಿಂದ ಆಯೋಜಿಸಲ್ಪಟ್ಟ ಈ ವಿಶೇಷ ಕಾರ್ಯಕ್ರಮ ರಾಜ್ಯಾದ್ಯಂತ ಕೋಮು ಸೌಹಾರ್ದತೆಯ ಸಂದೇಶ ಸಾರಿದೆ. ಪುಟ್ಟರಾಜ್ ಗವಾಯಿಗಳ ಅನುಗ್ರಹದಲ್ಲಿ ನಡೆದ ಈ…

The post ಒಟ್ಟೊಟ್ಟಿಗೆ ನೆರವೇರಿತು ಹಿಂದೂ ಮತ್ತು ಮುಸ್ಲಿಮರ ಸಾಮೂಹಿಕ ವಿವಾಹ; ಗದಗದಲ್ಲಿ ಕೋಮು ಸೌಹಾರ್ದತೆ ಸಂದೇಶ appeared first on Good News 24x7.

]]>

ಗದಗದಲ್ಲಿ ನಡೆದ ಅಪರೂಪದ ಹಿಂದೂ-ಮುಸ್ಲಿಂ ಸಾಮೂಹಿಕ ವಿವಾಹ ಮಹೋತ್ಸದಲ್ಲಿ ಒಟ್ಟು 36 ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟಿವೆ. ಬೆಟಗೇರಿ ಅಂಜುಮನ್ ಕಮಿಟಿಯಿಂದ ಆಯೋಜಿಸಲ್ಪಟ್ಟ ಈ ವಿಶೇಷ ಕಾರ್ಯಕ್ರಮ ರಾಜ್ಯಾದ್ಯಂತ ಕೋಮು ಸೌಹಾರ್ದತೆಯ ಸಂದೇಶ ಸಾರಿದೆ. ಪುಟ್ಟರಾಜ್ ಗವಾಯಿಗಳ ಅನುಗ್ರಹದಲ್ಲಿ ನಡೆದ ಈ ಮದುವೆಯು ಬಡವರಿಗೆ ಆರ್ಥಿಕ ಹೊರೆ ತಪ್ಪಿಸುವ ಉದ್ದೇಶ ಹೊಂದಿತ್ತು.
ನಾಡಿನೆಲ್ಲೆಡೆ ಕೋಮು ದಳ್ಳುರಿ ಹೊತ್ತಿ ಉರಿಯುತ್ತಿದೆ. ಜಾತಿ ಜಾತಿಗಳ ಕಲಹ ಶುರುವಾಗಿದೆ. ಆದರೆ ಇತ್ತ ನಡೆದಾಡುವ ದೇವರ ನಾಡಿನಲ್ಲಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಬದುಕು ಸಾಗಿಸುತ್ತಿದ್ದಾರೆ. ಲಿಂಗೈಕ್ಯ ಪಂಡಿತ ಪುಟ್ಟರಾಜ್ ಗವಾಯಿಗಳ ನಡೆದಾಡಿದ ನೆಲದಲ್ಲಿ ಹಿಂದೂ-ಮುಸ್ಲಿಂ ಬಾಂಧವರ ಸಾಮೂಹಿಕ ವಿವಾವ ಮಹೋತ್ಸವ ಅದ್ಧೂರಿಯಾಗಿ ನಡೆದದ್ದು, 36 ನವದಂಪತಿಗಳು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಿಂಗೈಕ್ಯ ಪಂಡಿತ ಪುಟ್ಟರಾಜ್ ಗವಾಯಿಗಳು ನಡೆದಾಡಿದ ನೆಲ, ಸಂಗೀತ ಬೀಡು ಗದಗ ನಗರ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. ಅಂಜುಮನ್ ಶಾಲೆ‌ ಆವರಣದಲ್ಲಿ ಹಿಂದೂ, ಮುಸ್ಲಿಂ ಜೋಡಿಗಳ ಸಾಮೂಹಿಕ ವಿವಾಹ ಮಹೋತ್ಸವ ಬಹಳ ಅದ್ಧೂರಿಯಾಗಿ ನಡೆದಿದೆ. ಬೆಟಗೇರಿ‌ ಅಂಜುಮನ್ ಕಮಿಟಿ ವತಿಯಿಂದ ಸಾಮೂಹಿಕ ವಿವಾಹ ಮಹೋತ್ಸವ ಆಯೋಜನೆ ಮಾಡಲಾಗಿತ್ತು. ಈ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ 36 ಜೋಡಿಗಳು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ. 26 ಹಿಂದೂ‌ ಜೋಡಿಗಳು, 10 ಮುಸ್ಲಿಂ ಜೋಡಿಗಳು ಹಸೆಮಣೆ ಏರಿದ್ದಾರೆ. ಆ ಮೂಲಕ ನಾಡಿಗೆ ಕೋಮು ಸೌಹಾರ್ದತೆ ಸಂದೇಶ ಸಾರಿದ್ದಾರೆ.

ಈ ವೇಳೆ ಮಾತನಾಡಿದ ಪುಟ್ಟರಾಜ್ ಗವಾಯಿಗಳ ಮಠದ ಪೀಠಾಧಿಪತಿ ಕಲ್ಲಯ್ಯಜ್ಜನವರು, ಇಂದಿನ ದುಬಾರಿ ಜಗತ್ತಿನಲ್ಲಿ ಮದುವೆಗೆ ಲಕ್ಷಾಂತರ ರೂ ಖರ್ಚು ಮಾಡಲಾಗುತ್ತಿದೆ. ಬಡವರಿಗೆ ಮದುವೆ ಮಾಡುವುದಂದರೆ ಕಷ್ಟದ ಕೆಲಸ. ಆದರೆ ಬೆಟಗೇರಿ ಅಂಜುಮನ್ ಕಮಿಟಿ ಸರ್ವಧರ್ಮಗಳ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಂಡಿದ್ದು ಖುಷಿಯ ವಿಚಾರ ಎಂದಿದ್ದಾರೆ.
ಬೆಟಗೇರಿ ಅಂಜುಮನ್ ಕಮಿಟಿಯಿಂದ ನವ ಜೋಡಿಗಳಿಗೆ ತಾಳಿ, ಕಾಲುಂಗರ, ಬಟ್ಟೆಗಳು ವಿತರಣೆ ಮಾಡಲಾಗಿದೆ. ಕಮಿಟಿ ಅಧ್ಯಕ್ಷ ಪೀರಸಾಬ್ ಕೌತಾಳ ದಂಪತಿ ನವಜೋಡಿಗಳಿಗೆ ತಾಳಿ, ಕಾಲುಂಗರ ನೀಡಿದರು. ಮದುವೆಗೆ ಅಗಮಿಸಿದ 6-7 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. 10 ಮುಸ್ಲಿಂ ಜೋಡಿಗಳಿಗೆ ಅವರ ಸಂಪ್ರದಾಯದಂತೆ ಮತ್ತು 26 ಹಿಂದೂ ಜೋಡಿಗಳಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಲಾಗಿದೆ. ಪುಟ್ಟರಾಜ್ ಗವಾಯಿಗಳ‌ ಮಠದ ಪೀಠಾಧಿಪತಿ ಕಲ್ಲಯ್ಯಜ್ಜನವರು ಹಾಗೂ ಮುಸ್ಲಿಂ ಧರ್ಮಗುರುಗಳ ಸಾನಿಧ್ಯದಲ್ಲಿ ಹಿಂದೂ-ಮುಸ್ಲಿಂ ಸಾಮೂಹಿಕ ವಿವಾಹ ಮಹೋತ್ಸವ ನಡೆಯಿತು.
ಧರ್ಮಗಳ ಮಧ್ಯೆ ನಡೆಯುವ ಗಲಾಟೆ, ಗದ್ದಲಗಳ ಮಧ್ಯೆ ಪುಟ್ಟರಾಜ್ ಗವಾಯಿಗಳು ನಡೆದಾಡಿದ ನೆಲ ಗದಗ ನಗರದಲ್ಲಿ ನಡೆದ ಹಿಂದೂ-ಮುಸ್ಲಿಂ ಸಾಮೂಹಿಕ ವಿವಾಹ ಮಹೋತ್ಸವ ದೇಶದಲ್ಲೆಡೆ ಕೋಮು ಸೌಹಾರ್ದತೆ ಸಂದೇಶ ಸಾರಿದೆ.

The post ಒಟ್ಟೊಟ್ಟಿಗೆ ನೆರವೇರಿತು ಹಿಂದೂ ಮತ್ತು ಮುಸ್ಲಿಮರ ಸಾಮೂಹಿಕ ವಿವಾಹ; ಗದಗದಲ್ಲಿ ಕೋಮು ಸೌಹಾರ್ದತೆ ಸಂದೇಶ appeared first on Good News 24x7.

]]>
ಕೊನೆಗೂ ಬ್ಯಾಚುಲರ್ ಲೈಫ್​​ಗೆ ಗುಡ್​ಬೈ ಹೇಳಿದ ಚಿಕ್ಕಣ್ಣ, ಫಿಕ್ಸ್ ಆಯ್ತು ಕಾಮಿಡಿ ಸ್ಟಾರ್ ಚಿಕ್ಕಣ್ಣನ ಮದುವೆ https://www.goodnews24x7.com/chikkanna-finally-says-goodbye-to-bachelor-life-comedy-star-chikkannas-marriage-is-fixed/ Mon, 01 Sep 2025 04:13:16 +0000 https://www.goodnews24x7.com/?p=7182 ಚಿಕ್ಕಣ್ಣ ಮದುವೆ: ಹಾಸ್ಯ ನಟ ಆ ನಂತರ ಹೀರೋ ಸಹ ಆದ ಚಿಕ್ಕಣ್ಣ ಮದುವೆಯಿಂದ ದೂರವಿದ್ದರು. ಆದರೆ ಈಗ ಕೊನೆಗೂ ಬ್ಯಾಚುಲರ್ ಲೈಫ್​​ಗೆ ಗುಡ್​ಬೈ ಹೇಳಿದ್ದು, ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಚಿಕ್ಕಣ್ಣ ಮದವೆ ಆಗುತ್ತಿರುವ ಯುವತಿ ಯಾರು? ಯಾವ ಊರು? ನಟಿಯಾ?…

The post ಕೊನೆಗೂ ಬ್ಯಾಚುಲರ್ ಲೈಫ್​​ಗೆ ಗುಡ್​ಬೈ ಹೇಳಿದ ಚಿಕ್ಕಣ್ಣ, ಫಿಕ್ಸ್ ಆಯ್ತು ಕಾಮಿಡಿ ಸ್ಟಾರ್ ಚಿಕ್ಕಣ್ಣನ ಮದುವೆ appeared first on Good News 24x7.

]]>

ಚಿಕ್ಕಣ್ಣ ಮದುವೆ: ಹಾಸ್ಯ ನಟ ಆ ನಂತರ ಹೀರೋ ಸಹ ಆದ ಚಿಕ್ಕಣ್ಣ ಮದುವೆಯಿಂದ ದೂರವಿದ್ದರು. ಆದರೆ ಈಗ ಕೊನೆಗೂ ಬ್ಯಾಚುಲರ್ ಲೈಫ್​​ಗೆ ಗುಡ್​ಬೈ ಹೇಳಿದ್ದು, ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಚಿಕ್ಕಣ್ಣ ಮದವೆ ಆಗುತ್ತಿರುವ ಯುವತಿ ಯಾರು? ಯಾವ ಊರು? ನಟಿಯಾ? ಎಲ್ಲ ಮಾಹಿತಿ ಇಲ್ಲಿದೆ ನೋಡಿ.ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ. ಬಹಳ ಕಷ್ಟಪಟ್ಟು ಚಿತ್ರರಂಗದಲ್ಲಿ ಹೆಸರು ಮಾಡಿರುವ ಚಿಕ್ಕಣ್ಣ ಇಷ್ಟ ವರ್ಷ ಬ್ಯಾಚುಲರ್ ಆಗಿದ್ದರು.

ಹಾಸ್ಯ ನಟ ಆ ನಂತರ ಹೀರೋ ಸಹ ಆದ ಚಿಕ್ಕಣ್ಣ ಮದುವೆಯಿಂದ ದೂರವಿದ್ದರು. ಆದರೆ ಈಗ ಕೊನೆಗೂ ಬ್ಯಾಚುಲರ್ ಲೈಫ್​​ಗೆ ಗುಡ್​ಬೈ ಹೇಳಿದ್ದು, ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಚಿಕ್ಕಣ್ಣ ಅವರು ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿಯನ್ನು ವಿವಾಹವಾಗುತ್ತಿದ್ದಾರೆ. ಮನೆಯವರು ನೋಡಿರುವ ಸಂಬಂಧ ಇದು ಎನ್ನಲಾಗಿದೆ.
ಚಿಕ್ಕಣ್ಣ ಅವರ ಮದುವೆ ನಿಶ್ಚಯವನ್ನು ಸದ್ದಿಲ್ಲದೆ ಮುಗಿಸಿಕೊಂಡಿದ್ದಾರೆ. ಹೂ ಮುಡಿಸುವ ಶಾಸ್ತ್ರವನ್ನು ಮಾಡಿ ಆಗಿದೆ. ಮದುವೆಯ ದಿನಾಂಕವೂ ನಿಗದಿ ಆಗಿದೆಯಂತೆ ಚಿಕ್ಕಣ್ಣ ಮದುವೆ ಆಗುತ್ತಿರುವ ಯುವತಿಯ ಹೆಸರು ಪಾವನಾ. ಮಹದೇವಪುರ ಗ್ರಾಮದ ಯುವತಿ ಈಕೆ. ಇತ್ತೀಚೆಗಷ್ಟೆ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆಚಿಕ್ಕಣ್ಣ ಟಾಕ್ ಶೋಗಳಲ್ಲಿ ಮದುವೆ ವಿಷಯ ಮಾತಾಡಿದಾಗೆಲ್ಲ ತಮಾಷೆ ಮಾಡುತ್ತಾ ಹಾರಿಕೆ ಉತ್ತರ ನೀಡುತ್ತಿದ್ದರು. ಈಗ ಕೊನೆಗೆ ಗೃಹಸ್ಥರಾಗಲು ಸಜ್ಜಾಗಿದ್ದಾರೆ.

The post ಕೊನೆಗೂ ಬ್ಯಾಚುಲರ್ ಲೈಫ್​​ಗೆ ಗುಡ್​ಬೈ ಹೇಳಿದ ಚಿಕ್ಕಣ್ಣ, ಫಿಕ್ಸ್ ಆಯ್ತು ಕಾಮಿಡಿ ಸ್ಟಾರ್ ಚಿಕ್ಕಣ್ಣನ ಮದುವೆ appeared first on Good News 24x7.

]]>
ಬಾಲಿವುಡ್‌ ನಟ ಗೋವಿಂದ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ https://www.goodnews24x7.com/bollywood-actor-govinda-files-for-divorce-from-wife/ Sat, 23 Aug 2025 06:34:57 +0000 https://www.goodnews24x7.com/?p=6508 ಬಾಲಿವುಡ್‌ ಹಿರಿಯ ನಟ ಗೋವಿಂದ ಅವರ ಸಂಸಾರದಲ್ಲಿ ಬಿರುಕು ಮೂಡಿದೆ. ಗೋವಿಂದ ಅವರ ಪತ್ನಿ ಸುನೀತಾ ಅಹುಜಾಅವರು ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪ್ರೀತಿ ಮತ್ತು ವಿವಾಹದಲ್ಲಿ ಮೋಸ ಹಾಗೂ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಅಂತ ಕಾರಣ ಕೊಟ್ಟು ಸುನೀತಾ…

The post ಬಾಲಿವುಡ್‌ ನಟ ಗೋವಿಂದ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ appeared first on Good News 24x7.

]]>

ಬಾಲಿವುಡ್‌ ಹಿರಿಯ ನಟ ಗೋವಿಂದ ಅವರ ಸಂಸಾರದಲ್ಲಿ ಬಿರುಕು ಮೂಡಿದೆ. ಗೋವಿಂದ ಅವರ ಪತ್ನಿ ಸುನೀತಾ ಅಹುಜಾಅವರು ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಪ್ರೀತಿ ಮತ್ತು ವಿವಾಹದಲ್ಲಿ ಮೋಸ ಹಾಗೂ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಅಂತ ಕಾರಣ ಕೊಟ್ಟು ಸುನೀತಾ ಅವರು ವಿಚ್ಛೇದನ ಕೋರಿದ್ದಾರೆ. ಹಿಂದೂ ವಿವಾಹ ಕಾಯ್ದೆ 1955ರ ಸೆಕ್ಷನ್ 13 (1), (i), (ia), (ib) ಅಡಿಯಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ
ಬಾಲಿವುಡ್‌ ಹಿರಿಯ ನಟ ಗೋವಿಂದ ಅವರ ಸಂಸಾರದಲ್ಲಿ ಬಿರುಕು ಮೂಡಿದೆ. ಗೋವಿಂದ ಅವರ ಪತ್ನಿ ಸುನೀತಾ ಅಹುಜಾಅವರು ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಈ ಹಿಂದೆಯೇ ಅಹುಜಾ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ತಿಳಿದುಬಂದಿತ್ತು. ಮೇ 25ರಂದು ನ್ಯಾಯಾಲಯವು ಗೋವಿಂದ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಜೂನ್‌ನಿಂದ ಇಬ್ಬರೂ ವಿಚ್ಛೇದನ ಕುರಿತಂತೆ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಆದರೆ, ವಿಚಾರಣೆ ಸಮಯದಲ್ಲಿ ಗೋವಿಂದ ಅವರು ಹಾಜರಾಗುತ್ತಿರಲಿಲ್ಲ. ಸುನೀತಾ ಅವರು ಹಾಜರಾಗುತ್ತಿದ್ದರು. ಇಬ್ಬರೂ ಮತ್ತೆ ಒಂದಾಗುತ್ತಿದ್ದಾರೆ ಎಂದೇ ಹೇಳಲಾಗಿತ್ತು.

ಈ ಜೋಡಿ 37 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಸುನೀತಾ ತಮ್ಮ ಯೂಟ್ಯೂಬ್ ವ್ಲಾಗ್‌ನಲ್ಲಿ ವಿಚ್ಛೇದನದ ಬಗ್ಗೆ ಮಾತನಾಡಿದ ಕೆಲವು ವಾರಗಳ ನಂತರ ಈ ವರದಿ ಬಂದಿದೆ. ಸುನೀತಾ ಬಾಂದ್ರಾ ಅವರು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ

The post ಬಾಲಿವುಡ್‌ ನಟ ಗೋವಿಂದ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ appeared first on Good News 24x7.

]]>
ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಸ್ಯಾಂಡಲ್​ವುಡ್​ ಬ್ಯೂಟಿ ಅಂಕಿತಾ ಅಮರ್​: ನಟಿ ಹೇಳಿದ್ದೇನು ಕೇಳಿ… https://www.goodnews24x7.com/sandalwood-beauty-ankita-amar-has-finally-broken-her-silence-about-marriage-listen-to-what-the-actress-said/ Sat, 16 Aug 2025 10:51:15 +0000 https://www.goodnews24x7.com/?p=6245 ಸ್ಯಾಂಡಲ್‌ವುಡ್‌ ಬ್ಯೂಟಿ ಅಂಕಿತಾ ಅಮರ್‌ ಕೊನೆಗೂ ತಮ್ಮ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ. ಕಲೆಯೇ ಜೀವನ ಎಂದು ನಂಬುವ ಅಂಕಿತಾ, ಅವಕಾಶದ ಗಾತ್ರವನ್ನೆಂದರೆ ಕೇಳದೇ, ಬಂದ ಪ್ರತಿಯೊಂದು ಅವಕಾಶವನ್ನೂ ಮನಸ್ಸು ಬಿಡದೇ ಬಳಸಿಕೊಂಡು ಬಣ್ಣದ ಲೋಕದಲ್ಲಿ ಹೆಜ್ಜೆ ಇಟ್ಟಿದ್ದಾರೆ. ಎಂಬಿಬಿಎಸ್ ಪದವೀಧರೆ…

The post ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಸ್ಯಾಂಡಲ್​ವುಡ್​ ಬ್ಯೂಟಿ ಅಂಕಿತಾ ಅಮರ್​: ನಟಿ ಹೇಳಿದ್ದೇನು ಕೇಳಿ… appeared first on Good News 24x7.

]]>

ಸ್ಯಾಂಡಲ್‌ವುಡ್‌ ಬ್ಯೂಟಿ ಅಂಕಿತಾ ಅಮರ್‌ ಕೊನೆಗೂ ತಮ್ಮ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ. ಕಲೆಯೇ ಜೀವನ ಎಂದು ನಂಬುವ ಅಂಕಿತಾ, ಅವಕಾಶದ ಗಾತ್ರವನ್ನೆಂದರೆ ಕೇಳದೇ, ಬಂದ ಪ್ರತಿಯೊಂದು ಅವಕಾಶವನ್ನೂ ಮನಸ್ಸು ಬಿಡದೇ ಬಳಸಿಕೊಂಡು ಬಣ್ಣದ ಲೋಕದಲ್ಲಿ ಹೆಜ್ಜೆ ಇಟ್ಟಿದ್ದಾರೆ. ಎಂಬಿಬಿಎಸ್ ಪದವೀಧರೆ ಆದ ಈಕೆ, ಟಿವಿ ಧಾರಾವಾಹಿಗಳ ಮೂಲಕ ನಟನೆಯ ಕ್ಷೇತ್ರಕ್ಕೆ ಪ್ರವೇಶಿಸಿದರು. ಮೊದಲಿಗೆ ‘ಪುಟ್ಟಗೌರಿ ಮದುವೆ’ ಎಂಬ ಧಾರಾವಾಹಿಯಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡ ಅವರು, ಬಳಿಕ ‘ನಮ್ಮನೆ ಯುವರಾಣಿ’ ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದು “ಮೀರಾ” ಎಂಬ ಪಾತ್ರದಿಂದ ಪ್ರೇಕ್ಷಕರ ಪ್ರೀತಿಗೆ ಪಾತ್ರರಾದರು.

ಅಂಕಿತಾ ಕೇವಲ ನಟಿಯಷ್ಟೇ ಅಲ್ಲದೆ, ಖ್ಯಾತ ನಿರೂಪಕಿ, ಗಾಯಕಿ ಹಾಗೂ ನೃತ್ಯಕಾರಿಯೂ ಹೌದು. ‘ಎದೆ ತುಂಬಿ ಹಾಡುವೆನು’ ಎಂಬ ಸಂಗೀತ ಕಾರ್ಯಕ್ರಮವನ್ನು ನಿರೂಪಿಸಿ ಹೊಸ ಮಟ್ಟಿಗೆ ಗುರುತಿಸಿಕೊಂಡ ಅವರು, ಮೈಸೂರಿನವರಾಗಿದ್ದು ಎಂಬಿಬಿಎಸ್‌ ಓದಿದ್ದರೂ ಕಲೆಯತ್ತ ಹೆಚ್ಚಿನ ಆಸಕ್ತಿ ತೋರಿ ಸಿನಿಮಾ ಹಾಗೂ ಸಾಂಸ್ಕೃತಿಕ ಕ್ಷೇತ್ರವನ್ನೇ ತಮ್ಮ ಜೀವನ ಗುರಿಯನ್ನಾಗಿ ಮಾಡಿಕೊಂಡಿದ್ದಾರೆ. ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ನೂರಾರು ಮಹಿಳೆಯರ ನಡುವೆ ಭಜನೆಗೆ ಹೆಜ್ಜೆ ಹಾಕಿ ಎಲ್ಲರ ಮೆಚ್ಚುಗೆ ಪಡೆದ ಘಟನೆ ಈತನಕ ನೆನಪಿನಲ್ಲಿಯೇ ಉಳಿದಿದೆ.

ಇತ್ತೀಚೆಗೆ ಚಿತ್ತಾರಾ ಸ್ಟಾರ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ಅಂಕಿತಾಗೆ ಮದುವೆ ಬಗ್ಗೆ ಪ್ರಶ್ನೆ ಕೇಳಿದಾಗ, ಅವರು ತಮTypical ಶೈಲಿಯಲ್ಲಿ ಉತ್ತರ ನೀಡಿ ಎಲ್ಲರ ಮುಖದಲ್ಲಿ ನಗು ತರಿಸಿದರು. “ಈಗಷ್ಟೇ ಮದುವೆಯಾದ ನಿರೂಪಕಿಯನ್ನೊಮ್ಮೆ ನೋಡಿ, ನಾನೂ ಮದುವೆಯಾಗೋಣ ಅಂದುಕೊಳ್ಳುತ್ತೇನೆ. ಇನ್ನೂ ಐದು ವರ್ಷ ಹೊಸದಾಗಿ ಮದುವೆಯಾದವರನ್ನು ನೋಡಿ ನೀವು ಹೇಗಿದ್ದೀರಾ ಅಂತ ಗಮನಿಸಿದಮೇಲೆ ನಾನು ಮದುವೆಯಾಗ್ತೀನಿ” ಎಂದು ಅಂಕಿತಾ ಹುಬ್ಬೆತ್ತಿಸಿದರು. ತಮಗೆ ಬದಲಿಗೆ ಅಭಿಮಾನಿಗಳು ಮದುವೆಯ ಬಗ್ಗೆ ಹೆಚ್ಚು ಕಾತುರದಿಂದ ಕಾದು ನೋಡುತ್ತಿದ್ದಾರೆ ಎಂದೂ ಅವರು ನಗುಮಾಡುತ್ತಲೇ ನಾಚಿಕೆಯಿಂದ ಹೇಳಿದರು.

ಅವರ ಸ್ಯಾಂಡಲ್‌ವುಡ್ ಪ್ರಯಾಣಕ್ಕೂ ಇಂದಿನಿಂದಲೇ ಸಕ್ರೀಯವಾಗಿದೆ. ‘ಅಬಜದಬ’ ಸಿನಿಮಾದ ಮೂಲಕ ಅವರು ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರೂ ಅದು ಇನ್ನೂ ಬಿಡುಗಡೆ ಆಗಿಲ್ಲ. ಆದರೂ ಅವರು ‘ಇಬ್ಬನಿ ತಬ್ಬಿದ ಇಳೆಯಲಿ’, ‘ಮೈ ಹೀರೋ’, ‘ರಂಗು ರಗಳೆ’ ಸೇರಿದಂತೆ ಹಲವು ವಿಭಿನ್ನ ಶೈಲಿಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಎಲ್ಲಾ ಪಾತ್ರಗಳಲ್ಲಿ ತಮ್ಮ ವೈವಿಧ್ಯಮಯ ಪ್ರತಿಭೆ ತೋರಿಸುವದಕ್ಕೆ ಸಜ್ಜಾಗಿದ್ದಾರೆ.

ಅಂಕಿತಾ ತಮ್ಮ ಕಲಾ ಆಸಕ್ತಿಯ ಬಗ್ಗೆ ಮಾತನಾಡುತ್ತಿದ್ದಂತೆ, “ನನಗೆ ಮಲ್ಟಿಟಾಸ್ಕಿಂಗ್‌ ಅಂದರೆ ಇಷ್ಟ. ನಾಟಕ, ನೃತ್ಯ, ಗಾಯನ, ನಿರೂಪಣೆ — ಇವು ಎಲ್ಲವನ್ನೂ ನಾನು ಸಮಾನವಾಗಿ ಇಷ್ಟಪಡುವೆ. ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸದೇ ಇದ್ದರೆ ಓದುವ ಆಸಕ್ತಿಯೇ ಇರುತ್ತಿರಲಿಲ್ಲ. ಈಗ ನಾನು ನೃತ್ಯದಲ್ಲಿ ಇನ್ನಷ್ಟು ಸಾಧನೆ ಮಾಡಲು ಸಜ್ಜಾಗುತ್ತಿದ್ದೇನೆ, ಜೊತೆಗೆ ಸುಗಮ ಸಂಗೀತ ಕಲಿಯುತ್ತಿದ್ದೇನೆ” ಎಂದಿದ್ದರು.

ಒಟ್ಟಾರೆ, ತಮ್ಮ ಬಹುಮುಖ ಪ್ರತಿಭೆಯಿಂದಾಗಿ ಅಂಕಿತಾ ಅಮರ್‌ ಸ್ಯಾಂಡಲ್‌ವುಡ್‌ನಲ್ಲಿ ನಿಜವಾದ ಕಲಾವಿದೆ ಎಂಬ ಗುರುತನ್ನು ಸಂಪಾದಿಸಿದ್ದಾರೆ.

The post ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಸ್ಯಾಂಡಲ್​ವುಡ್​ ಬ್ಯೂಟಿ ಅಂಕಿತಾ ಅಮರ್​: ನಟಿ ಹೇಳಿದ್ದೇನು ಕೇಳಿ… appeared first on Good News 24x7.

]]>
ವಿಚ್ಛೇದನಕ್ಕೆ ಮುಂದಾದ ಅಜಯ್ ರಾವ್ ದಂಪತಿ ! ವಿಚ್ಛೇದನ ಬಯಸಿ ಅರ್ಜಿ ಸಲ್ಲಿಸಿದ ಪತ್ನಿ . https://www.goodnews24x7.com/ajay-rao-couple-set-for-divorce-wife-files-for-divorce/ Sat, 16 Aug 2025 09:13:54 +0000 https://www.goodnews24x7.com/?p=6204 ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾದ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಅಜಯ್ ರಾವ್ ಹಾಗೂ ಸ್ವಪ್ನ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಈ ಇಬ್ಬರೂ ಸಹ 2014 ರಲ್ಲಿ ಹೊಸೇಪಟೆಯಲ್ಲಿ ಸರಳವಾಗಿ ವಿವಾಹವಾಗಿದ್ದರು. ಇಬ್ಬರಿಗೂ ಮಗಳು ಸಹ ಇದ್ದಾಳೆ. ಮದುವೆಯಾದ 11…

The post ವಿಚ್ಛೇದನಕ್ಕೆ ಮುಂದಾದ ಅಜಯ್ ರಾವ್ ದಂಪತಿ ! ವಿಚ್ಛೇದನ ಬಯಸಿ ಅರ್ಜಿ ಸಲ್ಲಿಸಿದ ಪತ್ನಿ . appeared first on Good News 24x7.

]]>

ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾದ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಅಜಯ್ ರಾವ್ ಹಾಗೂ ಸ್ವಪ್ನ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಈ ಇಬ್ಬರೂ ಸಹ 2014 ರಲ್ಲಿ ಹೊಸೇಪಟೆಯಲ್ಲಿ ಸರಳವಾಗಿ ವಿವಾಹವಾಗಿದ್ದರು. ಇಬ್ಬರಿಗೂ ಮಗಳು ಸಹ ಇದ್ದಾಳೆ. ಮದುವೆಯಾದ 11 ವರ್ಷದ ಬಳಿಕ ಇದೀಗ ಈ ದಂಪತಿ ಬೇರಾಗುತ್ತಿದ್ದಾರೆ.ಇಬ್ಬರ ವಿಚ್ಛೇದನಕ್ಕೆ ನಿಖರ ಕಾರಣಗಳು ಇನ್ನಷ್ಟೆ ತಿಳಿಯಬೇಕಿದೆ. ಸದ್ಯ ನಟ ಅಜಯ್‌ ರಾವ್‌ ಪತ್ನಿ ಸಪ್ನಾ ವಿಚ್ಛೇದನ ಬಯಸಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಮದುವೆಗೂ ಮುಂಚೆಯೇ ಅಜಯ್‌ ರಾವ್‌ ಡಿವೋರ್ಸ್‌ ಬಗ್ಗೆ ಭವಿಷ್ಯ!
ನಟ ಅಜಯ್‌ ರಾವ್‌, ಸ್ವಪ್ನ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಸದ್ಯ ಈ ದಂಪತಿಗೆ ಮುದ್ದಾದ ಮಗಳಿದ್ದಾಳೆ. ಈ ಜೋಡಿ ಅನ್ಯೋನ್ಯವಾಗಿ ಜೀವನ ಮಾಡುತ್ತಿದ್ದರು , ಆದರೆ ಮದುವೆಗೆ ಮುಂಚೆಯೇ ಇವರಿಬ್ಬರ ಡಿವೋರ್ಸ್‌ ಭವಿಷ್ಯ ನುಡಿದಿದ್ರಂತೆ.

ಈಗೆಲ್ಲಾ ಡಿವೋರ್ಸ್‌ ಟ್ರೆಂಡ್‌ ಹೆಚ್ಚಾಗಿದೆ. ಸಣ್ಣ-ಪುಟ್ಟ ಕಾರಣಗಳಿಗೆ ಮದುವೆ ಆದ ಕೆಲ ದಿನಗಳಲ್ಲೇ ಡಿವೋರ್ಸ್‌ ತೆಗೆದುಕೊಂಡಿರುವ ಸೆಲೆಬ್ರಿಟಿಗಳ ಉದಾಹರಣೆಗಳಿವೆ. ಮದುವೆ ಆದಮೇಲೆ ಡಿವೋರ್ಸ್‌ ತೆಗೆದುಕೊಳ್ಳುವುದು ಕಾಮನ್‌ ಆಗಿಬಿಟ್ಟಿದೆ. ಆದರೆ ಮದುವೆಗೆ ಮುಂಚೆಯೇ ನಟ ಅಜಯ್‌ ರಾವ್‌ ಅವರ ಡಿವೋರ್ಸ್‌ ಬಗ್ಗೆ ಒಬ್ಬರು ಭವಿಷ್ಯ ನುಡಿದಿದ್ದರಂತೆ. ಒಳ್ಳೆ ಮುಹೂರ್ತದಲ್ಲಿ ಮದುವೆಯಾಗುತ್ತಿಲ್ಲ, ಹಾಗಾಗಿ ಮದುವೆಯಾದ ಒಂದೇ ವರ್ಷದಲ್ಲಿ ಅಜಯ್‌ ರಾವ್ ಮತ್ತು ಸ್ವಪ್ನ ಅವರ ಡಿವೋರ್ಸ್‌ ಆಗಲಿದೆ ಎಂದಿದ್ದರಂತೆ.

ಅಜಯ್‌ ರಾವ್‌ ಮದುವೆ
ನಟ ಅಜಯ್‌ ರಾವ್‌ ಮತ್ತು ಸ್ವಪ್ನ ಅಜಯ್‌ ರಾವ್‌ ಅವರು 2014 ಡಿಸೆಂಬರ್‌ನಲ್ಲಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಯದ್ದು ಲವ್‌ ಕಂ ಅರೇಂಜ್‌ ಮ್ಯಾರೇಜ್‌. ಹೀಗೆ ಪರಿಚಯವಾಗಿ, ಆ ಪರಿಯಚಯ ಸ್ನೇಹಕ್ಕೆ ಮತ್ತು ಸ್ನೇಹ ಪ್ರೀತಿಗೆ ತಿರುಗಿ ನಂತರ ಸಪ್ತಪದಿ ತುಳಿದಿದ್ದರು. ಸದ್ಯ ಈ ಜೋಡಿಗೆ ಚೆರಿಷ್ಮಾ ಎಂಬ ಹೆಸರಿನ ಮುದ್ದಾಗ ಮಗಳಿದ್ದಾಳೆ.

ತಪ್ಪು ಮುಹೂರ್ತದಲ್ಲಿ ಮದುವೆಯಾದೆ!
ಶಾಸ್ತ್ರ ಮತ್ತು ಸಂಪ್ರದಾಯಗಳನ್ನು ನಾನು ನಂಬುತ್ತೇನೆ ಆದರೂ ನಾನು ಅದನ್ನು ಫಾಲೋ ಮಾಡಲ್ಲ. ನಾನು ಮದುವೆ ಆಗಿದ್ದು ತಪ್ಪು ಮುಹೂರ್ತದಲ್ಲಿ. ನನ್ನ ಮೊದಲನೇ ಪ್ರೊಡಕ್ಷನ್‌ ಸಿನಿಮಾ ʻಕೃಷ್ಣ ಲೀಲಾʼ ಮಾಡಿದ್ದು ತಪ್ಪು ಮುಹೂರ್ತದಲ್ಲಿ”
ಮದುವೆಯಾದ ಮುಹೂರ್ತದಲ್ಲಿ, ʻನೀವಿಬ್ಬರು ಒಂದು ವರ್ಷವೂ ಜೊತೆ ಇರಲ್ಲ, ಡಿವೋರ್ಸ್‌ ಆಗುತ್ತೆʼ ಅಂದಿದ್ದರು. ಆದರೆ ನಾನು ಯಾವ ಮುಹೂರ್ತವೂ ನೋಡಲ್ಲ. ನನಗೆ ಜ್ಯೋತಿಷ್ಯ ಓದುವುದಕ್ಕೆ ಬರುತ್ತೆ. ನಾನು ಸ್ಟಡಿ ಮಾಡಿದಾಗ, ಹೌದಲ್ವಾ ಇದು ತಪ್ಪು ಮುಹೂರ್ತ ಅನ್ನೋದು ನಂತರ ಗೊತ್ತಾಯ್ತು. ಜೀವನದಲ್ಲಿ ಏನೂ ಬಂದರೂ ನಾನು ಸ್ವೀಕರಿಸುತ್ತೇನೆ” ಎಂದಿದ್ದರು.

The post ವಿಚ್ಛೇದನಕ್ಕೆ ಮುಂದಾದ ಅಜಯ್ ರಾವ್ ದಂಪತಿ ! ವಿಚ್ಛೇದನ ಬಯಸಿ ಅರ್ಜಿ ಸಲ್ಲಿಸಿದ ಪತ್ನಿ . appeared first on Good News 24x7.

]]>
3 ತಿಂಗಳೊಳಗೆ ಪತಿಯ ಸಂಬಂಧಿಕನನ್ನೇ ವರಿಸಿದ ಮಗಳು; ತಂದೆಯಿಂದ ಜೀವಂತ ಅಂತ್ಯಕ್ರಿಯೆ! https://www.goodnews24x7.com/daughter-marries-husbands-relative-within-3-months-cremated-alive-by-father/ Sun, 10 Aug 2025 10:10:58 +0000 https://www.goodnews24x7.com/?p=5695 ಜೈಪುರ: ಮದುವೆ ಮಾಡಿಸಿ 3 ತಿಂಗಳು ಕಳೆಯುವ ಮುನ್ನ ತನ್ನ ಪತಿಯ ಸಂಬಂಧಿಕನನ್ನೇ ಮದುವೆಯಾದ ಮಗಳಿಗೆ ಜೀವಂತವಿದ್ದಾಗಲೇ ಸಂತಾಪ ಸೂಚಿಸಿರುವ ತಂದೆ, ಆಕೆಯ ಅಂತ್ಯಕ್ರಿಯೆ ಮಾಡಿರುವ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಸಿಂದ್​​ ಉಪವಿಭಾಗದ ಸರೇರಿ ಗ್ರಾಮದಲ್ಲಿ ಈ…

The post 3 ತಿಂಗಳೊಳಗೆ ಪತಿಯ ಸಂಬಂಧಿಕನನ್ನೇ ವರಿಸಿದ ಮಗಳು; ತಂದೆಯಿಂದ ಜೀವಂತ ಅಂತ್ಯಕ್ರಿಯೆ! appeared first on Good News 24x7.

]]>

ಜೈಪುರ: ಮದುವೆ ಮಾಡಿಸಿ 3 ತಿಂಗಳು ಕಳೆಯುವ ಮುನ್ನ ತನ್ನ ಪತಿಯ ಸಂಬಂಧಿಕನನ್ನೇ ಮದುವೆಯಾದ ಮಗಳಿಗೆ ಜೀವಂತವಿದ್ದಾಗಲೇ ಸಂತಾಪ ಸೂಚಿಸಿರುವ ತಂದೆ, ಆಕೆಯ ಅಂತ್ಯಕ್ರಿಯೆ ಮಾಡಿರುವ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಅಸಿಂದ್​​ ಉಪವಿಭಾಗದ ಸರೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಭೈರುಲಾಲ್ ಜೋಷಿ ಎಂಬುವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಮ್ಮ ಮಗಳ ಮದುವೆಯನ್ನು ಅದೇ ಗ್ರಾಮದ ನಿವಾಸಿ ಜತೆ ಈ ವರ್ಷದ ಏಪ್ರಿಲ್‌ನಲ್ಲಿ ಮಾಡಿಸಿದ್ದರು. ಮಗಳ ಮದುವೆ ಭಾರ ಕಳೆದುಕೊಂಡ ತಂದೆ ಸಂತೋಷದಲ್ಲಿರುವಾಗಲೇ ಮಗಳು ಕಾಣೆಯಾಗಿರುವ ಸುದ್ದಿ ಬರಸಿಡಿಲಿನಂತೆ ಬರುತ್ತದೆ.

ಕಳೆದ ಜುಲೈ 29 ರಂದು ಭಿಲ್ವಾರಾದ ಮಾಣಿಕ್ಯ ಲಾಲ್ ವರ್ಮಾ ಕಾಲೇಜಿನಲ್ಲಿ ಎಂಎ ಪರೀಕ್ಷೆಗೆ ಹಾಜರಾಗಲು ಮನೆಯಿಂದ ತೆರಳಿದ್ದ ಜೋಷಿ ಅವರ ಮಗಳು ಹಿಂತಿರುಗಿರಲಿಲ್ಲ. ಈ ಬಗ್ಗೆ ಜೋಷಿ ಜುಲೈ 30 ರಂದು ನಾಪತ್ತೆ ದೂರು ನೀಡಿದ್ದರು. ಪೊಲೀಸರು ಹತ್ತಿರದ ಪ್ರದೇಶಗಳಲ್ಲಿ ಮತ್ತು ಸಂಬಂಧಿಕರಲ್ಲಿ ವಿಚಾರಣೆ ನಡೆಸಿದ್ದು, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆಕೆಗೆ ಕರೆ ಮಾಡಿದಾಗ ರಿಂಗ್​ ಆಗುತ್ತಿದ್ದರು ಯಾರೂ ಸ್ವೀಕರಿಸುತ್ತಿರಲಿಲ್ಲ. ಬಳಿಕ ಲೊಕೇಶನ್​ ಮೂಲಕ ಪತ್ತೆ ಹಚ್ಚಿದಾಗ ಆಕೆ ತನ್ನ ಪತಿಯ ಸಂಬಂಧಿಯನ್ನೇ ತನ್ನ ಸ್ವಂತ ಇಚ್ಛೆಯಿಂದ ವಿವಾಹವಾಗಿರುವುದು ತಿಳಿದು ಬಂತು ಎಂದು ಅಲ್ಲಿನ ಹೆಡ್​ಕಾನ್‌ಸ್ಟೇಬಲ್ ಶ್ರವಣ್ ಕುಮಾರ್ ತಿಳಿಸಿದ್ದಾರೆ.

ಡಾ ವಿಷ್ಣುವರ್ಧನ್ ಸಮಾಧಿ ನೆಲಸಮ ಕಿಚ್ಚ ಸುದೀಪ್ ಬೇಸರ

ತಕ್ಷಣ ನಾವು ಕುಟುಂಬಕ್ಕೆ ಮಾಹಿತಿ ನೀಡಿ, ಮಗಳು ಎಸ್‌ಪಿ ಕಚೇರಿಗೆ ಹಾಜರಾಗುವ ಸಮಯದಲ್ಲಿ ಅವರೂ ಹಾಜರಿರುವಂತೆ ತಿಳಿಸಿದ್ದೆವು. ಅದರಂತೆ ಆಗಸ್ಟ್ 4ರಂದು ಕಾಣೆಯಾಗಿದ್ದ ಮಹಿಳೆ ಎಸ್‌ಪಿ ಮುಂದೆ ಹಾಜರಾಗಿ, ಪತಿಯ ಸಂಬಂಧಿಯನ್ನು ಸ್ವಇಚ್ಛೆಯಿಂದ ಮದುವೆಯಾಗಿರುವುದಾಗಿ ದೃಢಪಡಿಸಿದ್ದಳು. ಜತೆಗೆ ತನ್ನ ಕುಟುಂಬದಿಂದ ತನಗೆ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಹಿಳೆಯ ತಂದೆ ಜೋಷಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ನನ್ನ ಮಗಳು ಪೊಲೀಸ್ ಠಾಣೆಗೆ ಬಂದಾಗ, ಅವಳು ನಮ್ಮ ವಿರುದ್ಧ ಹೇಳಿಕೆಗಳನ್ನು ನೀಡಿದ್ದಳು. ನನಗೆ ತುಂಬಾ ನೋವಾಯಿತು. ಹೀಗಾಗಿ ಅವಳು ನಮ್ಮ ಕುಟುಂಬದ ಪಾಲಿಗೆ ಸತ್ತಿದ್ದಾಳೆ ಎಂದು ಪರಿಗಣಿಸಲು ನಿರ್ಧರಿಸಿದೆ. ನನ್ನ ಹೆಸರಿನಲ್ಲಿ ಸಂತಾಪ ಸೂಚನೆಯನ್ನು ಮುದ್ರಿಸಲಾಗಿತ್ತು ಮತ್ತು ನಾನು ಮನೆಯಲ್ಲಿ 12 ದಿನಗಳ ಶೋಕಾಚರಣೆಯನ್ನು ನಡೆಸುತ್ತಿದ್ದೇನೆ. ಆಗಸ್ಟ್ 10 (ಇಂದು) ರಂದು ‘ಮೃತ್ಯುಭೋಜ್’ (ಮರಣೋತ್ಸವ)ವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಸಂತಾಪ ಸೂಚಿಸಿರುವ ಪತ್ರದಲ್ಲಿ ಮಗಳ ವಿವಾಹ ದಿನಾಂಕವನ್ನು ಉಲ್ಲೇಖಿಸಿದ್ದು, ಜುಲೈ 29ಕ್ಕೆ ಅವಳು ಸಾವನ್ನಪ್ಪಿದ್ದಾಳೆಂದು ಘೋಷಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು ಮತ್ತು ಸಂಬಂಧಿಕರು ಶೋಕಾಚರಣೆಯ ಆಚರಣೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.

The post 3 ತಿಂಗಳೊಳಗೆ ಪತಿಯ ಸಂಬಂಧಿಕನನ್ನೇ ವರಿಸಿದ ಮಗಳು; ತಂದೆಯಿಂದ ಜೀವಂತ ಅಂತ್ಯಕ್ರಿಯೆ! appeared first on Good News 24x7.

]]>
ಮದುವೆಯಾಗದೆ ತಾಯಿಯಾದ ನಟಿ ಭಾವನಾ! https://www.goodnews24x7.com/bhavana-becomes-a-mother-without-marriage/ Fri, 04 Jul 2025 09:34:51 +0000 https://www.goodnews24x7.com/?p=4904 ನಟಿ ಭಾವನಾ ಅಮ್ಮನಾಗುತ್ತಿದ್ದಾರೆ. ಅವರೀಗ ಏಳು ತಿಂಗಳ ಗರ್ಭಿಣಿಯಾಗಿದ್ದು ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಇದುವರೆಗೂ ಮದುವೆಯಾಗದ ಭಾವನಾ ಹೇಗೆ ಮಗು ಪಡೆದರು ಎಂದು ಆಶ್ಚರ್ಯವಾಗೋದು ನಿಜ. ಆದರೆ ಅವರು ಐವಿಎಫ್ ಮೂಲಕ ಮಗು ಪಡೆಯುತ್ತಿದ್ದು ತಮ್ಮ ಗರ್ಭದಲ್ಲೇ ಮಗುವನ್ನ…

The post ಮದುವೆಯಾಗದೆ ತಾಯಿಯಾದ ನಟಿ ಭಾವನಾ! appeared first on Good News 24x7.

]]>

ನಟಿ ಭಾವನಾ ಅಮ್ಮನಾಗುತ್ತಿದ್ದಾರೆ. ಅವರೀಗ ಏಳು ತಿಂಗಳ ಗರ್ಭಿಣಿಯಾಗಿದ್ದು ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಇದುವರೆಗೂ ಮದುವೆಯಾಗದ ಭಾವನಾ ಹೇಗೆ ಮಗು ಪಡೆದರು ಎಂದು ಆಶ್ಚರ್ಯವಾಗೋದು ನಿಜ. ಆದರೆ ಅವರು ಐವಿಎಫ್ ಮೂಲಕ ಮಗು ಪಡೆಯುತ್ತಿದ್ದು ತಮ್ಮ ಗರ್ಭದಲ್ಲೇ ಮಗುವನ್ನ ಹೆರುತ್ತಿರುವುದು ವಿಶೇಷ.

ನಟಿಯಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಭಾವನಾ ಸಿಂಗಲ್ ಜೀವನ ನಡೆಸುತ್ತಿದ್ದಾರೆ. ಮುಂದುವರೆದ ವೈದ್ಯಕೀಯ ತಂತ್ರಜ್ಞಾನದಲ್ಲೀಗ ಪುರುಷನ ದೈಹಿಕ ಸಂಪರ್ಕ ಇಲ್ಲದೆ ಈಗ ತಾಯಿಯಾಗಬಹುದು. ಹಾಗೆಯೇ ಭಾವನಾ ತಾಯಿಯಾಗುತ್ತಿದ್ದು ಅವರಿಗೀಗ ವಯಸ್ಸು 40ರ ಆಸುಪಾಸು.

ಭರತನಾಟ್ಯ ಕಲಾವಿದೆಯಾಗಿ ಫಿಟ್ ಆಗಿರುವ ಭಾವನಾ ಇದೀಗ ಮಗು ಹೆರಲು ಸಿದ್ಧರಾಗಿದ್ದು, ಅವಳಿ ಮಕ್ಕಳನ್ನು ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ಅವರು ತಾಯಿಯಾಗಲಿದ್ದಾರೆ. ಹೆಚ್ಚಿನ ವಿಚಾರಗಳನ್ನ ಅವರೇ ಹಂಚಿಕೊಳ್ಳಬೇಕಿದೆ.

The post ಮದುವೆಯಾಗದೆ ತಾಯಿಯಾದ ನಟಿ ಭಾವನಾ! appeared first on Good News 24x7.

]]>
ಮಗ ಮದುವೆಯಾಗಬೇಕಿದ್ದ ಯುವತಿ ಜೊತೆ ಓಡಿಹೋಗಿ ವಿವಾಹವಾದ ಅಪ್ಪ!…ಊರಿನಿಂದ ಬಹಿಷ್ಕಾರ ಮಾಡಿದ ಗ್ರಾಮಸ್ಥರು… https://www.goodnews24x7.com/%e0%b2%ae%e0%b2%97-%e0%b2%ae%e0%b2%a6%e0%b3%81%e0%b2%b5%e0%b3%86%e0%b2%af%e0%b2%be%e0%b2%97%e0%b2%ac%e0%b3%87%e0%b2%95%e0%b2%bf%e0%b2%a6%e0%b3%8d%e0%b2%a6-%e0%b2%af%e0%b3%81%e0%b2%b5%e0%b2%a4%e0%b2%bf/ Sat, 21 Jun 2025 08:00:51 +0000 https://www.goodnews24x7.com/?p=4568 ಮಗ ಮದುವೆಯಾಗಬೇಕಾಗಿದ್ದ ಯುವತಿಯನ್ನು ನೋಡಿದ ಆತನ ಅಪ್ಪನಿಗೆ ಆಕೆಯ ಮೇಲೆ ಲವ್ ಎಟ್ ಫಸ್ಟ್ ಸೈಟ್ ಆಗಿತ್ತು! ತನಗೆ ಸೊಸೆಯಾಗಬೇಕಾದವಳನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂದು ಬಯಸಿದ ಆತ ಆಕೆಯ ಜೊತೆ ಓಡಿಹೋಗಿ ತಾನೇ ಮದುವೆಯಾಗಿದ್ದಾನೆ. ಈ ಮೂಲಕ ಆತ ತನ್ನ ಮಗನಿಗೆ ಶಾಕ್…

The post ಮಗ ಮದುವೆಯಾಗಬೇಕಿದ್ದ ಯುವತಿ ಜೊತೆ ಓಡಿಹೋಗಿ ವಿವಾಹವಾದ ಅಪ್ಪ!…ಊರಿನಿಂದ ಬಹಿಷ್ಕಾರ ಮಾಡಿದ ಗ್ರಾಮಸ್ಥರು… appeared first on Good News 24x7.

]]>

ಮಗ ಮದುವೆಯಾಗಬೇಕಾಗಿದ್ದ ಯುವತಿಯನ್ನು ನೋಡಿದ ಆತನ ಅಪ್ಪನಿಗೆ ಆಕೆಯ ಮೇಲೆ ಲವ್ ಎಟ್ ಫಸ್ಟ್ ಸೈಟ್ ಆಗಿತ್ತು! ತನಗೆ ಸೊಸೆಯಾಗಬೇಕಾದವಳನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂದು ಬಯಸಿದ ಆತ ಆಕೆಯ ಜೊತೆ ಓಡಿಹೋಗಿ ತಾನೇ ಮದುವೆಯಾಗಿದ್ದಾನೆ. ಈ ಮೂಲಕ ಆತ ತನ್ನ ಮಗನಿಗೆ ಶಾಕ್ ನೀಡಿದ್ದಾನೆ. ಉತ್ತರ ಪ್ರದೇಶದ ರಾಂಪುರದಲ್ಲಿ ಈ ಘಟನೆ ನಡೆದಿದೆ. ಅವರಿಬ್ಬರನ್ನೂ ಗ್ರಾಮ ಪಂಚಾಯತ್ ನಿಂದ ಗಡೀಪಾರು ಮಾಡಲಾಗಿದೆ.

ತಂದೆಯೊಬ್ಬ ತನ್ನ ಮಗ ಮದುವೆಯಾಗಬೇಕಿದ್ದ ಯುವತಿಯನ್ನು ಮದುವೆಯಾದ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ. ತನ್ನ ಸೊಸೆಯಾಗಬೇಕಿದ್ದ ಯುವತಿಯನ್ನು ಮದುವೆಯಾದ ವ್ಯಕ್ತಿ ಆಕೆಯೊಂದಿಗೆ ಊರಿಗೆ ಹಿಂತಿರುಗಿದಾಗ ಅವ್ಯವಸ್ಥೆ ಭುಗಿಲೆದ್ದಿತು. ಇದು ಅವನ ಮಗನೊಂದಿಗೆ ಜಗಳಕ್ಕೆ ಕಾರಣವಾಯಿತು. ತನ್ನ ಸೊಸೆಯಾಗಬೇಕಾದವಳು ಸವತಿಯಾಗಿ ಬಂದಿದ್ದನ್ನು ಕಂಡ ತಾಯಿ ತನ್ನ ಗಂಡ ಮತ್ತು ಆತನ ಹೊಸ ಹೆಂಡತಿಯ ಜೊತೆ ಜಗಳವಾಡಿ, ಅವರಿಬ್ಬರನ್ನೂ ಮನೆಯಿಂದ ಹೊರಗೆ ಹಾಕಿದರು. ಶಕೀಲ್ ಎಂಬ ಯುವಕ ಮದುವೆಯಾಗಬೇಕಿದ್ದ ಯುವತಿಯನ್ನು ಆತನ 55 ವರ್ಷದ ತಂದೆ ಮದುವೆಯಾಗಿದ್ದಾನೆ. ಇದರಿಂದ ಜಗಳ ಹೆಚ್ಚಾಗಿ, ಕೊನೆಗೆ ಆ ಗ್ರಾಮಸ್ಥರು ಅವರಿಬ್ಬರನ್ನೂ ಗಡಿಪಾರು ಮಾಡಿದ್ದಾರೆ.

ಈ ಮದುವೆ ನವ ವಧು ಮತ್ತು ಅವಳ ಅತ್ತೆಯ ನಡುವೆ ಕೂಡ ತೀವ್ರ ಘರ್ಷಣೆಗೆ ಕಾರಣವಾಯಿತು. ಶಕೀಲ್ ಈ ಬಗ್ಗೆ ಆರೋಪಿಸಿದ್ದು, ನಾನು ಮದುವೆಯಾಗಬೇಕಿದ್ದ ಯುವತಿಯನ್ನು ಅಪ್ಪ ಮದುವೆಯಾಗಬೇಕೆಂದುಕೊಂಡಿರುವುದು ನನ್ನ ಅಜ್ಜಿಗೂ ತಿಳಿದಿತ್ತು. ಅವರೇ ಅಪ್ಪನಿಗೆ ಮದುವೆಯಾಗಲು ಸಹಾಯ ಮಾಡಿದರು ಎಂದು ಆತ ಆರೋಪಿಸಿದ್ದಾನೆ. ಒಂದು ವರ್ಷದ ಹಿಂದೆ ಅಜೀಮ್ ನಗರ ಪೊಲೀಸ್ ಠಾಣೆ ಪ್ರದೇಶದ ಹುಡುಗಿಯ ಜೊತೆ ತನ್ನ ಮಗನ ಮದುವೆ ನಿಶ್ಚಯ ಮಾಡಿದ್ದ 55 ವರ್ಷದ ವ್ಯಕ್ತಿ, ತನ್ನ ಭಾವಿ ಸೊಸೆಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದಾಗ ಕ್ರಮೇಣ ಅವಳ ಬಗ್ಗೆ ಪ್ರೀತಿ ಬೆಳೆಸಿಕೊಂಡಿದ್ದರು. ಅವರ ಕುಟುಂಬಗಳಿಗೆ ತಿಳಿಯದೆ ಅವರ ಸಂಬಂಧ ಪ್ರಣಯ ಸಂಬಂಧವಾಗಿ ಮಾರ್ಪಟ್ಟಿತು.ಈ ಹಿಂದೆ ಅಲಿಗಢದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಅಲ್ಲಿ ಒಬ್ಬ ವರ ಮತ್ತು ಅವನ ಭಾವಿ ಅತ್ತೆ ಓಡಿಹೋಗಿದ್ದರು. ಏಪ್ರಿಲ್ ಆರಂಭದಲ್ಲಿ ಬಿಹಾರದ ನೇಪಾಳ ಗಡಿಯ ಬಳಿ ಅವರನ್ನು ಪತ್ತೆಹಚ್ಚಿ ಬಂಧಿಸಲಾಯಿತು.

The post ಮಗ ಮದುವೆಯಾಗಬೇಕಿದ್ದ ಯುವತಿ ಜೊತೆ ಓಡಿಹೋಗಿ ವಿವಾಹವಾದ ಅಪ್ಪ!…ಊರಿನಿಂದ ಬಹಿಷ್ಕಾರ ಮಾಡಿದ ಗ್ರಾಮಸ್ಥರು… appeared first on Good News 24x7.

]]>