married Archives - Good News 24x7 https://www.goodnews24x7.com/tag/married/ Kannada Sat, 07 Mar 2026 06:15:32 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg married Archives - Good News 24x7 https://www.goodnews24x7.com/tag/married/ 32 32 ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ? https://www.goodnews24x7.com/do-you-know-how-rich-sachin-tendulkars-daughter-in-law-issachin-tendulkars-daughter-in-law-is-rich/ Sat, 07 Mar 2026 06:15:05 +0000 https://www.goodnews24x7.com/?p=8752 ಅರ್ಜುನ್ ತೆಂಡೂಲ್ಕರ್ ಸಾನಿಯಾ ಚಾಂದೋಕ್   ಅವರನ್ನು ವಿವಾಹವಾಗಿದ್ದಾರೆ. ಸಚಿನ್ ಪುತ್ರನ ಪತ್ನಿ ಸಾನಿಯಾ ಯಾರು, ಅವರ ಹಿನ್ನೆಲೆ, ಕುಟುಂಬದ ಸಂಪತ್ತು ಎಷ್ಟು ಎಂಬ ಕುತೂಹಲವಿದೆ. ಸಾನಿಯಾ ಖ್ಯಾತ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು. ಅವರ ಕುಟುಂಬ ಬಾಸ್ಕಿನ್-ರಾಬಿನ್ಸ್ ಅನ್ನು ಭಾರತಕ್ಕೆ…

The post ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ? appeared first on Good News 24x7.

]]>

ಅರ್ಜುನ್ ತೆಂಡೂಲ್ಕರ್ ಸಾನಿಯಾ ಚಾಂದೋಕ್   ಅವರನ್ನು ವಿವಾಹವಾಗಿದ್ದಾರೆ. ಸಚಿನ್ ಪುತ್ರನ ಪತ್ನಿ ಸಾನಿಯಾ ಯಾರು, ಅವರ ಹಿನ್ನೆಲೆ, ಕುಟುಂಬದ ಸಂಪತ್ತು ಎಷ್ಟು ಎಂಬ ಕುತೂಹಲವಿದೆ. ಸಾನಿಯಾ ಖ್ಯಾತ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು. ಅವರ ಕುಟುಂಬ ಬಾಸ್ಕಿನ್-ರಾಬಿನ್ಸ್ ಅನ್ನು ಭಾರತಕ್ಕೆ ತಂದಿದೆ. ಸಾನಿಯಾ ಅವರ ಕುಟುಂಬ ವ್ಯವಹಾರ ಕೋಟಿಗಟ್ಟಲೆ ಮೌಲ್ಯದ್ದಾಗಿದ್ದು, ಅರ್ಜುನ್‌ಗಿಂತ ಹೆಚ್ಚು ಸಂಪತ್ತು ಹೊಂದಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಸಾನಿಯಾ ಚಾಂದೋಕ್ ಅವರನ್ನು ವಿವಾಹವಾದರು. ಅರ್ಜುನ್ ಹೊಸ ಜೀವನವನ್ನು ಪ್ರಾರಂಭಿಸಿದ್ದಾರೆ. ಅವರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಮದುವೆಯ ನಂತರ ಅರ್ಜುನ್ ಮತ್ತು ಸಾನಿಯಾ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಹಾಗಾದರೆ ಸಚಿನ್ ತೆಂಡೂಲ್ಕರ್ ಅವರ ಸೊಸೆ ಎಷ್ಟು ಕೋಟಿ ಮಾಲೀಕರು ಗೊತ್ತಾ? ಆ ಬಗ್ಗೆ ಇಲ್ಲಿದೆ ವಿವರ.

ಅರ್ಜುನ್ ಪ್ರಸ್ತುತ ಈಗಷ್ಟೇ ಬೌಲರ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಐಪಿಎಲ್​​ನಲ್ಲಿ ಅವರು ಆಡುತ್ತಿದ್ದಾರೆ. ಅರ್ಜುನ್ ಅವರ ವೈಯಕ್ತಿಕ ಸಂಪತ್ತು ಸುಮಾರು 10-15 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಅವರು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ತಂದೆ ಸಚಿನ್ ಅವರ 100 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ.

ಅರ್ಜುನ್ ಅವರ ಪತ್ನಿ ಸಾನಿಯಾ ಚಾಂದೋಕ್ ಸಾಮಾನ್ಯ ಹೆಸರಲ್ಲ. ಸಾನಿಯಾ ಭಾರತದ ಖ್ಯಾತ ಕೈಗಾರಿಕೋದ್ಯಮಿ ಮತ್ತು ಗ್ರಾವಿಸ್ ಗ್ರೂಪ್‌ನ ಅಧ್ಯಕ್ಷ ರವಿ ಘಾಯ್ ಅವರ ಮೊಮ್ಮಗಳು. ಸಾನಿಯಾ ವಿದೇಶದಲ್ಲಿಅಧ್ಯಯನ ಮಾಡಿದ್ದಾರೆ ಕುಟುಂಬದ ವ್ಯವಹಾರಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಾ ಇದ್ದಾರೆ. ಸಾನಿಯಾ ಅವರ ಕುಟುಂಬವು ಭಾರತದಲ್ಲಿ ಜನಪ್ರಿಯ ಐಸ್ ಕ್ರೀಮ್ ಬ್ರ್ಯಾಂಡ್ ಬಾಸ್ಕಿನ್-ರಾಬಿನ್ಸ್ ಅನ್ನು ಪ್ರಾರಂಭಿಸಿತು.

ಸಾನಿಯಾ ಬಹಳ ಪ್ರಭಾವಿ ವ್ಯಾಪಾರ ಕುಟುಂಬದಿಂದ ಬಂದವರು. ಅವರ ನಿಖರವಾದ ವೈಯಕ್ತಿಕ ಸಂಪತ್ತು ಸಾರ್ವಜನಿಕವಾಗಿ ತಿಳಿದಿಲ್ಲವಾದರೂ, ಅವರ ಕುಟುಂಬದ ವ್ಯವಹಾರವು ಲಕ್ಷ ಕೋಟಿ ರೂಪಾಯಿಗಳಷ್ಟು ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಇದರರ್ಥ ಸಾನಿಯಾ, ಅರ್ಜುನ್‌ಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ.
ಕುಟುಂಬವು ಯಾವಾಗಲೂ ಐಷಾರಾಮಿ ಕಾರುಗಳನ್ನು ಇಷ್ಟಪಡುತ್ತಾರೆ. ಅರ್ಜುನ್ ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲಿ BMW i8, BMW X5 ಮತ್ತು ನಿಸ್ಸಾನ್ GT-R ನಂತಹ ಸೂಪರ್ ಕಾರುಗಳು ಸೇರಿವೆ. ಅರ್ಜುನ್ ಮತ್ತು ಸಾನಿಯಾ ಅವರ ಸಂಬಂಧ ಬಹಳ ಕಾಲ ರಹಸ್ಯವಾಗಿಯೇ ಇತ್ತು. ಅವರ ಆಪ್ತ ಮೂಲಗಳ ಪ್ರಕಾರ, ಇಬ್ಬರೂ ಮೊದಲು ಮುಂಬೈನಲ್ಲಿ ಭೇಟಿಯಾದರು. ಕ್ರಮೇಣ, ಅವರ ಸ್ನೇಹ ಸಂಬಂಧಕ್ಕೆ ತಿರುಗಿತು ಮತ್ತು ಎರಡೂ ಕುಟುಂಬಗಳು ಮದುವೆಗೆ ಅನುಮೋದನೆ ನೀಡಿದವು.

The post ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ? appeared first on Good News 24x7.

]]>
ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ https://www.goodnews24x7.com/rashmika-mandanna-and-vijay-deverakonda-to-get-married-in-udaipur-rajasthan/ Sun, 22 Feb 2026 04:49:33 +0000 https://www.goodnews24x7.com/?p=8443 ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆ ಫೆಬ್ರವರಿ 26ರಂದು ನಡೆಯಲಿದೆ. ಕುಟುಂಬದವರು ಮತ್ತು ಕೆಲವೇ ಕೆಲವು ಆಪ್ತರು ಮಾತ್ರ ಈ ಸೆಲೆಬ್ರಿಟಿ ಮದುವೆಗೆ ಹಾಜರಿ ಹಾಕಲಿದ್ದಾರೆ. ಮದುವೆ ತಯಾರಿಯಲ್ಲಿ ಇರುವ ರಶ್ಮಿಕಾ, ವಿಜಯ್ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.…

The post ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ appeared first on Good News 24x7.

]]>

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆ ಫೆಬ್ರವರಿ 26ರಂದು ನಡೆಯಲಿದೆ. ಕುಟುಂಬದವರು ಮತ್ತು ಕೆಲವೇ ಕೆಲವು ಆಪ್ತರು ಮಾತ್ರ ಈ ಸೆಲೆಬ್ರಿಟಿ ಮದುವೆಗೆ ಹಾಜರಿ ಹಾಕಲಿದ್ದಾರೆ. ಮದುವೆ ತಯಾರಿಯಲ್ಲಿ ಇರುವ ರಶ್ಮಿಕಾ, ವಿಜಯ್ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಅವರು ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಈಗಾಗಲೇ ಸಿನಿಮಾ ಕೆಲಸಗಳನ್ನು ಬದಿಗಿಟ್ಟು, ಮದುವೆ ತಯಾರಿಯಲ್ಲಿ ಅವರಿಬ್ಬರು ತೊಡಗಿಕೊಂಡಿದ್ದಾರೆ. ಸದ್ಯಕ್ಕಂತೂ ಸಖತ್ ಗಡಿಬಿಡಿ ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ವಿಡಿಯೋ ವೈರಲ್ ಆಗಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ವಿವಾಹ ನಡೆಯಲಿ. ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ. ಹಾಗಿದ್ದರೂ ಕೂಡ ಅವರು ಸಾರ್ವಜನಿಕವಾಗಿ ಈ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಕೇವಲ ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯಲಿದೆ.

ಹಲವು ಸಿನಿಮಾಗಳನ್ನು ಒಪ್ಪಿಕೊಂಡಿರುವ ರಶ್ಮಿಕಾ ಮಂದಣ್ಣ ಅವರು ಈಗ ಬ್ರೇಕ್ ತೆಗೆದುಕೊಂಡಿದ್ದಾರೆ. ವಿಜಯ್ ದೇವರಕೊಂಡ ಕೂಡ ಮದುವೆ ಸಲುವಾಗಿ ಬಿಡುವು ಮಾಡಿಕೊಂಡಿದ್ದಾರೆ. ಅವರಿಬ್ಬರು ಈಗ ಹೈದರಾಬಾದ್​ನಿಂದ ಬೇರೆ ಕಡೆಗೆ ಹಾರಿದ್ದಾರೆ. ವಿಮಾನ ನಿಲ್ದಾಣಕ್ಕೆ ಪ್ರತ್ಯೇಕವಾಗಿ ಬಂದ ಅವರು ಪಾಪಪಾಜಿಗಳ ಕ್ಯಾಮೆರಾದಲ್ಲಿ ಸೆರೆ ಆಗಿದ್ದಾರೆ.

ಸಾಮಾನ್ಯವಾಗಿ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳನ್ನು ನೋಡಿದಾಗ ರಶ್ಮಿಕಾ ಮಂದಣ್ಣ ಅವರು ಪೋಸ್ ನೀಡುತ್ತಾರೆ. ಸಾಧ್ಯವಾದರೆ ಒಂದೆರಡು ಮಾತನಾಡುತ್ತಾರೆ. ವಿಜಯ್ ದೇವರಕೊಂಡ ಕೂಡ ಹಾಗೆಯೇ ಮಾಡುತ್ತಾರೆ. ಆದರೆ ಈ ಬಾರಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ನೀಡಲು ಕೂಡ ಅವರು ಒಂದು ಕ್ಷಣ ನಿಂತಿಲ್ಲ. ಸಖತ್ ಗಡಿಬಿಡಿಯಲ್ಲಿ ಅವರು ಮುಂದೆ ಸಾಗಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಇದೆ. ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಯ ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಕೆಲಸ ಮಾಡಿದ್ದಾರೆ. ವಿಜಯ್ ದೇವರಕೊಂಡ ಕೂಡ ತೆಲುಗು ಮತ್ತು ಬಾಲಿವುಡ್​​ನಲ್ಲಿ ಫೇಮಸ್ ಆಗಿದ್ದಾರೆ. ಈ ಜೋಡಿಯ ಮದುವೆಗೆ ಯಾರೆಲ್ಲ ಬರುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾದಿದ್ದಾರೆ.

The post ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ appeared first on Good News 24x7.

]]>
ಸ್ಮೃತಿ ಮಂದಾನಗೆ ಮೋಸ ಮಾಡಿಬಿಟ್ರಾ ಪಾಲಶ್ ಮುಚ್ಚಲ್ ? ಮದುವೆ ನಿಂತ ಹಿಂದಿನ ಅಸಲಿ ರಹಸ್ಯ ಏನು ..! https://www.goodnews24x7.com/did-palash-mukhal-cheat-on-smriti-mandhana-what-is-the-real-secret-behind-the-marriage-being-postponed/ Wed, 26 Nov 2025 07:59:41 +0000 https://www.goodnews24x7.com/?p=8271 ಟೀಂ ಇಂಡಿಯಾದ ಆಟಗಾರ್ತಿ ಸ್ಮೃತಿ ಮಂದಾನರ ಮದುವೆ ತಾತ್ಕಾಲಿಕವಾಗಿ ಮುಂದೂಡಿಕೆ ಆಗಿದೆ. ಸ್ಮೃತಿ ತಂದೆ ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದೇ ಮದುವೆ ಮುಂದೂಡಿಕೆಗೆ ಕಾರಣ ಎನ್ನಲಾಗ್ತಿತ್ತು. ಆದ್ರೀಗ ಇದರ ಹಿಂದೆ ಬೇರೆಯದ್ದೇ ಕಾರಣ ಇದೆ ಅನ್ನೋ ಚರ್ಚೆ ಶುರುವಾಗಿದೆ. ಸ್ಮೃತಿ ಮಂದಾನ.. ಟೀಂ…

The post ಸ್ಮೃತಿ ಮಂದಾನಗೆ ಮೋಸ ಮಾಡಿಬಿಟ್ರಾ ಪಾಲಶ್ ಮುಚ್ಚಲ್ ? ಮದುವೆ ನಿಂತ ಹಿಂದಿನ ಅಸಲಿ ರಹಸ್ಯ ಏನು ..! appeared first on Good News 24x7.

]]>

ಟೀಂ ಇಂಡಿಯಾದ ಆಟಗಾರ್ತಿ ಸ್ಮೃತಿ ಮಂದಾನರ ಮದುವೆ ತಾತ್ಕಾಲಿಕವಾಗಿ ಮುಂದೂಡಿಕೆ ಆಗಿದೆ. ಸ್ಮೃತಿ ತಂದೆ ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದೇ ಮದುವೆ ಮುಂದೂಡಿಕೆಗೆ ಕಾರಣ ಎನ್ನಲಾಗ್ತಿತ್ತು. ಆದ್ರೀಗ ಇದರ ಹಿಂದೆ ಬೇರೆಯದ್ದೇ ಕಾರಣ ಇದೆ ಅನ್ನೋ ಚರ್ಚೆ ಶುರುವಾಗಿದೆ.

ಸ್ಮೃತಿ ಮಂದಾನ.. ಟೀಂ ಇಂಡಿಯಾ ಮಹಿಳಾ ತಂಡದ ಸ್ಟಾರ್​​ ಬ್ಯಾಟರ್​​.. ಬ್ಯೂಟಿ ಕ್ವೀನ್​​.. ಅಷ್ಟೇ ಅಲ್ಲ ಲಾಯಲ್​​ ಆರ್​​ಸಿಬಿ ವುಮೆನ್ಸ್​​ ತಂಡದ ಕ್ಯಾಪ್ಟನ್​​.. ಎಲ್ಲವೂ ಸರಿಯಾಗಿ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಸ್ಮೃತಿ ಮಂದಾನ.. ತಮ್ಮ ಬಹುವರ್ಷಗಳ ಪ್ರಿಯಕರನ ಕೈ ಹಿಡಿದು.. ಜೀವನದ ಹೊಸ ಇನ್ನಿಂಗ್ಸ್​​ ಅನ್ನು ಆರಂಭಿಸಬೇಕಿತ್ತು.. ಆದ್ರೆ ಹಸೆಮಣೆ ಏರಬೇಕಿದ್ದ ದಿನ ಸ್ಮೃತಿ ತಂದೆ ಹೃದಾಯಾಘಾತದಿಂದ ಆಸ್ಪತ್ರೆ ಸೇರಿದ ಕಾರಣ, ಮದುವೆ ಮುಂದೂಡಿಕೆ ಆಗಿತ್ತು.. ಆದ್ರೆ ಮದುವೆ ಏಕಾಏಕಿ ಮುಂದೂಡಿಕೆ ಆಗಿದ್ದಕ್ಕೆ ಬೇರೆಯದ್ದೇ ಕಾರಣ ಹರಿದಾಡತೊಡಗಿದೆ.

ಸ್ಮೃತಿ ಮಂದಾನ ಹಳದಿ ಶಾಸ್ತ್ರ.. ಸಂಗೀತ ಕಾರ್ಯಕ್ರಮದಲ್ಲಿ ಭಾವಿ ಪತಿ ಮುಚ್ಚಲ್​​ ಜೊತೆ ಬಿಂದಾಸ್​ ಆಗಿ ಪೋಸ್​​ ಕೊಟ್ಟಿದ್ರು. ನಾಚಿಕೆ ಸ್ವಭಾವದ ಸ್ಮೃತಿ.. ಸಂಗೀತಾ ಕಾರ್ಯಕ್ರಮದಲ್ಲಂತೂ.. ಸಂಕೋಚ ಎಲ್ಲವನ್ನು ಬದಿಗಿಟ್ಟು, ವೇದಿಕೆ ಮೇಲೆ ಮುಚ್ಚಿಲ್​​ ಜೊತೆ ಕುಣಿದು ಕುಪ್ಪಳಿಸಿದ್ರು. ನವೆಂಬರ್​ 23 ಭಾನುವಾರಂದು ಹಸೆಮಣೆ ಏರಲು ಸಜ್ಜಾಗಿದ್ದ ಸ್ಮೃತಿಗೆ ಶಾಕ್​ ಆಗಿತ್ತು. ಮದುವೆ ದಿನವೇ ಸ್ಮೃತಿ ಮಂದಾನ ತಂದೆಗೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ ಕಾರಣ, ಮದುವೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ ಎಂದು ಕುಟುಂಬಗಳು ಹೇಳಿಕೊಂಡಿದ್ವು.

ಆದ್ರೆ ಮಂಗಳವಾರ ಸ್ಮೃತಿ ಮಂದಾನ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಮುಚ್ಚಲ್​ ಜೊತೆಗಿನ ಎಂಗೇಜ್​​​ಮೆಂಟ್​ ಸೇರಿದಂತೆ ಮದುವೆ ಶಾಸ್ತ್ರದ ವಿಡಿಯೋ ಫೋಟೋಗಳನ್ನು ಡಿಲೀಟ್​ ಮಾಡಿದ್ದು. ಸಮ್​ಥಿಂಗ್​​ ಫಿಶಿಂಗ್​​ ಅನ್ಸಿತ್ತು. ಆದ್ರೀಗ ಸ್ಮೃತಿ ಮಂದಾನರ ಭಾವಿ ಪತಿಯ ಅಕ್ರಮ ಸಂಬಂಧವೇ ಮದುವೆ ಪೋಸ್ಟ್​ಪೋನ್​​ಗೆ ಕಾರಣ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಪಲಾಶ್‌ಗೆ ಬೇರೆ ಸಂಬಂಧವಿದೆ ಎಂದು ಹೇಳಲಾಗುವ ಯುವತಿಯೊಂದಿಗಿನ ಚಾಟ್‌ನ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಭಾರೀ ಸದ್ದು ಮಾಡ್ತಿದೆ. ಇದರಲ್ಲಿ ಯುವತಿಯನ್ನು ಮ್ಯಾರಿಯಟ್ ಹೋಟೆಲ್‌ನ ಪೂಲ್‌ನಲ್ಲಿ ಒಟ್ಟಿಗೆ ಈಜಲು ಆಹ್ವಾನಿಸುವುದು. ಸ್ಮೃತಿ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆಗಳು ಮತ್ತು ಪಲಾಶ್ ಅವರ ಉತ್ತರಗಳು ವಾಟ್ಸಾಪ್ ಚಾಟ್‌ನಲ್ಲಿವೆ. ಆದರೆ, ಇದು ನಿಜವಾಗಿಯೂ ಪಲಾಶ್ ಜೊತೆಗಿನ ಸಂಭಾಷಣೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಎರಡೂ ಕುಟುಂಬಗಳು ಯಾವುದೇ ಸ್ಪಷ್ಟನೆ ನೀಡಿಲಿಲ್ಲ.

ಶೀಘ್ರವೇ ಮದುವೆ ನಡೆಯಲಿದೆ ಎಂದ ಮುಚ್ಚಲ್​ ತಾಯಿ
ಸ್ಮೃತಿ ಮತ್ತು ಮುಚ್ಚಲ್​ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಇದೀಗ ಮುಂದೂಡಲ್ಪಟ್ಟ ಮದುವೆ ಯಾವಾಗ ನಡೆಯಲಿದೆ ಎಂಬುದರ ಕುರಿತು ಪಲಾಶ್ ಮುಚ್ಚಲ್ ಅವರ ತಾಯಿ ಅಮಿತಾ ಬಹುದೊಡ್ಡ ಅಪ್ಡೇಟ್ ನೀಡಿದ್ದಾರೆ. ಜೊತೆಗೆ ಮುಚ್ಚಲ್​ನನ್ನು ಆಸ್ಪತ್ರೆಗೆ ದಾಖಲಿಸಿದ ಕಾರಣವನ್ನು ಬಹಿರಂಗಪಡಿಸಿದ್ದಾರೆ.

The post ಸ್ಮೃತಿ ಮಂದಾನಗೆ ಮೋಸ ಮಾಡಿಬಿಟ್ರಾ ಪಾಲಶ್ ಮುಚ್ಚಲ್ ? ಮದುವೆ ನಿಂತ ಹಿಂದಿನ ಅಸಲಿ ರಹಸ್ಯ ಏನು ..! appeared first on Good News 24x7.

]]>
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕಿ ಅನನ್ಯ ಭಟ್ https://www.goodnews24x7.com/singer-ananya-bhatt-enters-into-married-life/ Tue, 11 Nov 2025 12:20:28 +0000 https://www.goodnews24x7.com/?p=8130 ಕನ್ನಡದ ಜನಪ್ರಿಯ ಗಾಯಕಿ ಅನನ್ಯಾ ಭಟ್ (Ananya Bhat) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಜಿಎಫ್, ಕಾಂತಾರ, ಲೂಸಿಯಾ, ಟಗರು ಸಿನಿಮಾ ಹಾಡುಗಳ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಡ್ರಮ್ಮರ್ ಮಂಜು, ಇಂಟರ್‌ನ್ಯಾಷನಲ್ ಮ್ಯೂಜಿಷಿಯನ್ ಡ್ರಮ್ಮರ್ ಮಂಜುನಾಥ್ ಜೊತೆ ಅನನ್ಯಾ ಭಟ್…

The post ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕಿ ಅನನ್ಯ ಭಟ್ appeared first on Good News 24x7.

]]>

ಕನ್ನಡದ ಜನಪ್ರಿಯ ಗಾಯಕಿ ಅನನ್ಯಾ ಭಟ್ (Ananya Bhat) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಜಿಎಫ್, ಕಾಂತಾರ, ಲೂಸಿಯಾ, ಟಗರು ಸಿನಿಮಾ ಹಾಡುಗಳ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ.

ಡ್ರಮ್ಮರ್ ಮಂಜು, ಇಂಟರ್‌ನ್ಯಾಷನಲ್ ಮ್ಯೂಜಿಷಿಯನ್ ಡ್ರಮ್ಮರ್ ಮಂಜುನಾಥ್ ಜೊತೆ ಅನನ್ಯಾ ಭಟ್ ಸಪ್ತಪದಿ ತುಳಿದಿದ್ದಾರೆ. ಇವರಿಬ್ಬರು ಒಂದೇ ಬ್ಯಾಂಡ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ತುಂಬಾ ವರ್ಷಗಳ ಗೆಳೆಯರಾಗಿದ್ದರು. ನಿನ್ನೆ ತಿರುಪತಿಯಲ್ಲಿ (Tirupati) ಕುಟುಂಬಸ್ಥರು, ಆಪ್ತ ಬಳಗದ ಸಮ್ಮುಖದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಖ್ಯಾತ ಜ್ಯೋತಿಷ್ಯ ಶಾಸ್ತ್ರದ ಲೇಖಕರು ಪಂಡಿತರು ಆದ ಪಂಡಿತ್ ಡಾ.ಅರುಣ್ ಗುರೂಜಿ ಅವರ ನೇತೃತ್ವದಲ್ಲಿ ತಿರುಪತಿಯಲ್ಲಿ ವಿವಾಹವಾಗಿದ್ದಾರೆ. ಅನನ್ಯಾ ಭಟ್ ಅವರು ಸಿನಿಮಾ ಹಾಡು, ಭಕ್ತಿ ಗೀತೆ, ಜಾನಪದ ಗೀತೆಗಳನ್ನ ತಮ್ಮ ಮಧುರ ಕಂಠದಿಂದ ಹಾಡಿ ಖ್ಯಾತಿ ಪಡೆದಿದ್ದಾರೆ.

The post ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕಿ ಅನನ್ಯ ಭಟ್ appeared first on Good News 24x7.

]]>
ಸಪ್ತಪದಿ ತುಳಿದು ತಾಳಿ ಕಟ್ಟಿದ್ದ ಗಂಡನೇ ಮಡದಿಯನ್ನ ಹ* ಮಾಡಿದ್ದಾನೆ https://www.goodnews24x7.com/the-husband-who-had-trampled-on-the-seven-pointed-star-and-tied-the-knot-killed-the-woman/ Sat, 18 Oct 2025 11:57:27 +0000 https://www.goodnews24x7.com/?p=7756 ಹಾಸನ: ಆಕೆಗೆ ಎಂಟು ವರ್ಷದ ಕೆಳಗೆ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾಗಿ ಮೂರು ವರ್ಷ ಚೆನ್ನಾಗಿ ಸಂಸಾರ ಮಾಡಿದ ಗಂಡ ಆಸ್ತಿಗಾಗಿ ಅಪ್ಪ ಅಮ್ಮನ ಮಾತು ಕೇಳಿ ಯಮ ಗಂಡನಾಗಿದ್ದ. ಗಂಡನ ಮನೆಯವರ ಕಿರುಕುಳದ ಜೊತೆಗೆ ಕುಡುಕ ಗಂಡನ ಜೊತೆ ಬಾಳೋದಕ್ಕಿಂತ…

The post ಸಪ್ತಪದಿ ತುಳಿದು ತಾಳಿ ಕಟ್ಟಿದ್ದ ಗಂಡನೇ ಮಡದಿಯನ್ನ ಹ* ಮಾಡಿದ್ದಾನೆ appeared first on Good News 24x7.

]]>

ಹಾಸನ: ಆಕೆಗೆ ಎಂಟು ವರ್ಷದ ಕೆಳಗೆ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾಗಿ ಮೂರು ವರ್ಷ ಚೆನ್ನಾಗಿ ಸಂಸಾರ ಮಾಡಿದ ಗಂಡ ಆಸ್ತಿಗಾಗಿ ಅಪ್ಪ ಅಮ್ಮನ ಮಾತು ಕೇಳಿ ಯಮ ಗಂಡನಾಗಿದ್ದ. ಗಂಡನ ಮನೆಯವರ ಕಿರುಕುಳದ ಜೊತೆಗೆ ಕುಡುಕ ಗಂಡನ ಜೊತೆ ಬಾಳೋದಕ್ಕಿಂತ ಒಂಟಿಯಾಗಿ ಇರೋದೇ ಮೇಲು ಎಂದು ಡೈವೋರ್ಸ್ ಗೆ ಅಪ್ಲೈ ಮಾಡಿಕೊಂಡಿದ್ದವಳನ್ನ ಚೆನ್ನಾಗಿರೋನ ಬಾ ಎಂದು ಪುಸಲಾಯಿಸಿ ಕರೆದುಕೊಂಡು ಬಂದವನು ಚಾಕುವಿನಿಂದ ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ತನುಜಾ ಜೀವಕ್ಕೆ ಜೀವ ಆಗಿರ್ತಿನಿ.. ಕಣ್ಣಲ್ಲಿ ಕಣ್ಣಾಗಿ ನೋಡ್ಕೊಳ್ತಿನಿ ಅಂತಾ ಸಪ್ತಪದಿ ತುಳಿದು ತಾಳಿ ಕಟ್ಟಿದ್ದ ಗಂಡನೇ ಈಕೆಯನ್ನ ಕೊಂದು ಕೆಡವಿದ್ದಾನೆ. ರಣರಾಕ್ಷಸನಂತೆ ತಾನೇ ತಾಳಿ ಕಟ್ಟಿದ ಕುತ್ತಿಗೆಯನ್ನ ಚಾಕುವಿನಿಂದ ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹೌದು ಕಳೆದ 8 ವರ್ಷಗಳ ಕೆಳಗೆ ಹಾಸನ ಜಿಲ್ಲೆಯ ಗುಡ್ಡೇನಹಳ್ಳಿಯ ತನುಜಳನ್ನ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಹಿರೇಕಾನವಂಗಲ ಗ್ರಾಮದ ರಮೇಶ್ ಜೊತೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಹೊಸತರಲ್ಲಿ ನೀನೆ ನನ್ನ ಜೀವ.. ನೀನೆ ನನ್ನುಸಿರು ಅಂತಾ ಅಂತಾ ಹೆಂಡತಿಯನ್ನ ಮುದ್ದು ಮಾಡ್ತಿದ್ದವನು. ಒಂದು ಗಂಡು ಮಗು ಆಗಿ ಹೆಂಡತಿ ತವರು ಮನೆಗೆ ಹೋದಾಗ್ಲಿಂದ ತನ್ನ ತಂದೆ, ತಾಯಿ, ಅಕ್ಕಂದಿರ ಮಾತು ಕೇಳಿ ಹೆಂಡತಿಗೆ ಕೊಡಬಾರದ ಚಿತ್ರ ಹಿಂಸೆ ಕೊಡ್ತಿದ್ನಂತೆ. ತನ್ನ ಮಗುವಿನ ನಾಮಕರಣಕ್ಕೂ ಹೋಗಿರ್ಲಿಲ್ವಂತೆ. ಹೆಂಡತಿ ಬಾಣಂತನ ಮುಗಿಸಿಕೊಂಡು ಗಂಡನ ಮನೆಗೆ ಬರ್ತಿದ್ದಂತೆ ಮನೆ ಮಂದಿ ಎಲ್ಲ ಸೇರಿ ಕಾಟ ಕೊಟ್ಟಿದ್ದಾರೆ. ಸಾಲದು ಅಂತಾ ಮನೆಯಿಂದ ಹೊರಗೆ ಹಾಕಿದ್ರಂತೆ. ಮೊದಲೇ ಗಂಡ ಕುಡುಕ ಅಪ್ಪ, ಅಮ್ಮ, ಅಕ್ಕಂದಿರ ಮಾತು ನಂಬಿ ಹೊಡೆದು ಬಡಿದು ಮಾಡ್ತಿದ್ನಂತೆ. ಇಲ್ಲೇ ಇದ್ರೆ ಸರಿಯಾಗಲ್ಲ ಅಂತಾ ತನುಜಾ ತನ್ನ ಗಂಡನ ಕರೆದುಕೊಂಡು ಬಂದು ಬೇರೆ ಸಂಸಾರ ಮಾಡ್ತಿದ್ದಳಂತೆ. ಮನೆ ಬಿಟ್ಟು ಬೇರೆ ಮನೆಗೆ ಬಂದ್ರೂ ಕೂಡಾ ಗಂಡ ರಮೇಶ ಕುಡಿಯೋದನ್ನ‌ ಬಿಟ್ಟಿಲ್ಲ ಇದರಿಂದ ಬೇಸತ್ತ ತನುಜಾ ಮೂರು ವರ್ಷಗಳ ಕೆಳಗೆ ಡಿವೋರ್ಸ್‌ಗೆ ಅಪ್ಲೆ ಮಾಡಿಕೊಂಡಿದ್ದಾಳೆ.. ಕೆಲ ದಿನಗಳ ಹಿಂದೆ ಮಗನ ಸ್ಕೂಲ್‌ಗೆ ರಜೆ ಅಂತಾ ತವರು ಮನೆಗೆ ಹೋಗಿದ್ದ ತನುಜಾಳಿಗೆ ಕಾಲ್ ಮಾಡಿದ್ದ ರಮೇಶ ಕೋರ್ಟ್‌ಗೆ ಹೋಗಬೇಕು.. ಲಾಯರ್ ಕಾಲ್ ಮಾಡಿದ್ರು.. ಇನ್ಮೇಲೆ ಚೆನ್ನಾಗಿರೋಣ ಬಾ ಅಂತ ಕರೆದಿದ್ದಾನೆ. ಸೋಮವಾರವಷ್ಟೇ ಗುಡ್ಡೇನಹಳ್ಳಿಯಿಂದ ತನುಜಾಳನ್ನ ಕರೆದುಕೊಂಡು ಬಂದಿದ್ದಾನೆ.. ಆದ್ರೆ ನಿನ್ನೆ ಸಂಜೆ ಗಂಡ ಹೆಂಡತಿ ನಡುವೆ ಅದೇನು ನಡೆಯಿತೋ ಗೊತ್ತಿಲ್ಲ ಚಾಕುವಿನಿಂದ ತನಜಾಳ ಕುತ್ತಿಗೆ ಸೀಳಿದ್ದಾನೆ.

ನಿನ್ನೆ ಸಂಜೆ ತನುಜಾ ಮತ್ತು ರಮೇಶನ ನಡುವೆ ಯಾವ ಜಗಳ ನಡೆದಿತ್ತೋ ಗೊತ್ತಿಲ್ಲ. ಕಂಠಪೂರ್ತಿ ಕುಡಿದು ಬಂದಿದ್ದ ರಮೇಶನಿಗೆ ಎಣ್ಣೆಯ ನಶೆಯ ಜೊತೆಗೆ ಪಿತ್ತ ನೆತ್ತಿಗೆ ಹತ್ತುತ್ತಿದ್ದಂತೆ ಮನೆಯಲ್ಲಿದ್ದ ಚಾಕುವನ್ನ ಕೈಗೆತ್ತಿಕೊಂಡು ಸಿಕ್ಕ ಸಿಕ್ಕಲ್ಲಿ ಚುಚ್ಚಿದ್ದಾನೆ.. ಚಾಕುವಿನಿಂದ ಚುಚ್ಚಿದ ತಕ್ಷಣ ಕೆಳಗೆ ಬಿದ್ದ ತನುಜಾಳ ಎದೆಯ ಮೇಲೆ ಹತ್ತಿ ಕೂತವ್ನೇ ತಾನೇ ತನ್ನ ಕೈಯ್ಯಾರೆ ತಾಳಿ ಕಟ್ಟಿದ್ದ ಕುತ್ತಿಗೆಯನ್ನ ರಣ ರಾಕ್ಷಸನಂತೆ ಸೀಳಿ ಕೊಂದಿದ್ದಾನೆ.. ಯಾವಗ ತನ್ನ ಹೆಂಡತಿ ತನುಜಾ ಸಾವನ್ನಪ್ಪಿದ್ದಾಳೆ ಅನ್ನೋದು ಕನ್ಫರ್ಮ್ ಆಯ್ತೋ ಆಗ ಅದೇ ಚಾಕುವಿನಿಂದ ತಾನೂ ಕೂಡಾ ಕೈ ಕೊಯ್ದುಕೊಂಡು ನನ್ನ ಹೆಂಡತಿ ನನಗೆ ಹೊಡೆದಿದ್ದಾಳೆ ಅಂತಾ ಆಸ್ಪತ್ರೆಗೆ ಹೋಗಿ ಅಡ್ಮೆಂಟ್ ಆಗಿದ್ದಾನೆ.. ಆಸತ್ರೆಯಿಂದ ಬಂದ ಮಾಹಿತಿ ಆಧರಿಸಿ ಹಿರೇಕಾನವಂಗಲ ಗ್ರಾಮದ ರಮೇಶನ ಮನೆಗೆ ಹೋದ ಅಜ್ಜಂಪುರ ಠಾಣೆಯ ಇನ್ಸ್ಪೆಕ್ಟರ್ ವೀರೇಂದ್ರ ಮತ್ತು ಪಿಎಸ್‌ಐ ಗಜೇಂದ್ರ ಇಬ್ಬರೂ ಒಂದು ಕ್ಷಣ ಶಾಕ್ ಆಗಿಹೋಗಿದ್ದಾನೆ. ಯಾಕಂದ್ರೆ ತನ್ನ ಹೆಂಡತಿ ತನಗೆ ಹೊಡೆದ್ದಾಳೆ ಅಂತಾ ಆಸ್ಪತ್ರೆ ಸೇರಿದ್ದ ಗಂಡ ರಮೇಶ ಇಲ್ಲಿ ತನ್ನ ಹೆಂಡತಿಯನ್ನ ಕತ್ತು ಸೀಳಿ ಕೊಂದು ಮಲಗಿಸಿ ಹೋಗಿದ್ದ. ಕೂಡಲೇ ಆಸ್ಪತ್ರೆಗೆ ಹೋಗಿ ಅಡ್ಮೆಂಟ್ ಆಗಿದ್ದ ರಮೇಶನನ್ನ ವಿಚಾರಿಸ್ತಿದ್ದಂತೆ ತಾನೇ ತನ್ನ ಹೆಂಡತಿಯನ್ನ ಕೊಂದಿದ್ದು ಅಂತ ಸತ್ಯ ಬಾಯಿಬಿಟ್ಟಿದ್ದಾನೆ. ಇನ್ನೂ ರಮೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಕೊಲೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ರಮೇಶನ ತಂದೆ ಪುಟ್ಟಪ್ಪ ಹಾಗೂ ತಾಯಿ ಲಲಿತಮ್ಮರನ್ನ ಪೊಲೀಸರು ಬಂಧಿಸಿದ್ದಾರೆ.

ಒಟ್ನಲ್ಲಿ ಕುಡಿತದ ಚಟಕ್ಕೆ ದಾಸನಾಗಿದ್ದ ಗಂಡ ಆಸ್ತಿಗಾಗಿ ಅಪ್ಪ, ಅಮ್ಮ, ಅಕ್ಕಂದಿರ ಮಾತು ಕೇಳಿ ತನ್ನನ್ನೇ ನಂಬಿ ಅಗ್ನಿಸಾಕ್ಷಿಯಾಗಿ ಕೈ ಹಿಡಿದು ತನ್ನವರನ್ನೆಲ್ಲ ಬಿಟ್ಟು ಬಂದಿದ್ದ ಹೆಂಡತಿಯನ್ನೇ ಕೊಂದು ಕೆಡವಿದ್ದು. ತಾಯಿ ಸತ್ತು ಸುಟ್ಟು ಬೂಧಿಯಾಗಿ ತಂದೆ ಜೈಲುಪಾಲಾಗಿದ್ದಾನೆ. ಆದ್ರೆ ಏನೂ ಅರಿಯದ 6 ವರ್ಷದ ಕಂದಮ್ಮ ಅನಾಥವಾಗಿದ್ದು ಮಾತ್ರ ದುರಂತ

The post ಸಪ್ತಪದಿ ತುಳಿದು ತಾಳಿ ಕಟ್ಟಿದ್ದ ಗಂಡನೇ ಮಡದಿಯನ್ನ ಹ* ಮಾಡಿದ್ದಾನೆ appeared first on Good News 24x7.

]]>
15 ಲಕ್ಷಕ್ಕೆ ಸುಪಾರಿ ಕೊಟ್ಟು ಗರ್ಭಿಣಿ ಪತ್ನಿಯನ್ನೇ ಮುಗಿಸಿದ; ಸೀನಿಯರ್ ಮೇಲೆ ಮೋಹ.. ಪತ್ನಿಗೆ ಚಟ್ಟ! https://www.goodnews24x7.com/he-killed-his-pregnant-wife-by-giving-her-a-betel-nut-for-15-lakhs-infatuation-with-a-senior-wife-was-shocked/ Wed, 10 Sep 2025 06:31:10 +0000 https://www.goodnews24x7.com/?p=7449 ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಆರು ತಿಂಗಳ ಗರ್ಭಿಣಿಯನ್ನಾಗಿ ಮಾಡಿ ಇದೀಗ ಇನ್ನೊಬ್ಬಳ ಮೇಲಿನ ವ್ಯಾಮೋಹಕ್ಕೆ ಬಿದ್ದು 15 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು ಹೆಂಡತಿಯನ್ನೇ ಮುಗಿಸಿದ ಘಟನೆ ಕಾಗವಾಡ ತಾಲೂಕಿನ ಬಿ.ಕೆ.ಉಗಾರದಲ್ಲಿ ನಡೆದಿದೆ. ಬೆಳಗಾವಿ: ಎರಡು ವರ್ಷಗಳ ಹಿಂದೆ…

The post 15 ಲಕ್ಷಕ್ಕೆ ಸುಪಾರಿ ಕೊಟ್ಟು ಗರ್ಭಿಣಿ ಪತ್ನಿಯನ್ನೇ ಮುಗಿಸಿದ; ಸೀನಿಯರ್ ಮೇಲೆ ಮೋಹ.. ಪತ್ನಿಗೆ ಚಟ್ಟ! appeared first on Good News 24x7.

]]>

ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಆರು ತಿಂಗಳ ಗರ್ಭಿಣಿಯನ್ನಾಗಿ ಮಾಡಿ ಇದೀಗ ಇನ್ನೊಬ್ಬಳ ಮೇಲಿನ ವ್ಯಾಮೋಹಕ್ಕೆ ಬಿದ್ದು 15 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು ಹೆಂಡತಿಯನ್ನೇ ಮುಗಿಸಿದ ಘಟನೆ ಕಾಗವಾಡ ತಾಲೂಕಿನ ಬಿ.ಕೆ.ಉಗಾರದಲ್ಲಿ ನಡೆದಿದೆ.

ಬೆಳಗಾವಿ: ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಆರು ತಿಂಗಳ ಗರ್ಭಿಣಿಯನ್ನಾಗಿ ಮಾಡಿ ಇದೀಗ ಇನ್ನೊಬ್ಬಳ ಮೇಲಿನ ವ್ಯಾಮೋಹಕ್ಕೆ ಬಿದ್ದು 15 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು ಹೆಂಡತಿಯನ್ನೇ ಮುಗಿಸಿದ ಘಟನೆ ಕಾಗವಾಡ ತಾಲೂಕಿನ ಬಿ.ಕೆ.ಉಗಾರದಲ್ಲಿ ನಡೆದಿದೆ. ಚೈತಾಲಿ ಗಂಡನ ಸುಪಾರಿಗೆ ಬಲಿಯಾದ ಮಹಿಳೆ. ಪ್ರದೀಪ್ ಪ್ರಮುಖ ಆರೋಪಿ. ಪ್ರಕರಣ ಸಂಬಂಧ ಪ್ರದೀಪ್ ಸೇರಿ, ಸಾಥ್ ನೀಡಿದ್ದ ಇನ್ನಿಬ್ಬರು ಆರೋಪಿಗಳನ್ನು ಕಾಗವಾಡ ಪೊಲೀಸರು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ. ಪತಿ ಪ್ರದೀಪ್ ಹಾಗೂ ಮೃತ ಚೈತಾಲಿ ಉಗಾರ್ ಬಿ.ಕೆ.ಗ್ರಾಮದವರು. ಒಂದೇ ಗ್ರಾಮದವರಾದ ಇವರು ಪ್ರೀತಿಸಿ ಎರಡು ವರ್ಷಗಳ ಹಿಂದಷ್ಟೇ ಮದುವೆ ಆಗಿದ್ದರು. ಸಾಕ್ಷಿಯಾಗಿ ಆರು ತಿಂಗಳ ಗರ್ಭಿಣಿ ಕೂಡ ಆಗಿದ್ದಳು ಎಂದು ತಿಳಿದುಬಂದಿದೆ.

ಆಗಿದ್ದೇನು..? ಕಾನೂನು ಪದವಿ ಪಡೆದಿದ್ದ ಪ್ರದೀಪ್ ಕಿರಣಗಿ, ಕಾಗವಾಡ ಕೋರ್ಟ್‌ನಲ್ಲಿ ವಕೀಲ ವೃತ್ತಿಯಲ್ಲಿದ್ದ. ಪ್ರೇಮ-ವಿವಾಹದ ಬಳಿಕವೂ ಕಾಲೇಜಿನ ಸೀನಿಯರ್ ಜೊತೆಗೆ ಪ್ರದೀಪ್​​ಗೆ ಲವ್ ಶುರುವಾಗಿತ್ತಂತೆ. ಸೀನಿಯರ್ ಲೇಡಿಯನ್ನ ಬುಟ್ಟಿಗೆ ಹಾಕಿಕೊಳ್ಳಲು ತನಗೆ ಮದುವೆಯೇ ಆಗಿಲ್ಲ ಎಂದು ನಾಟಕವಾಡಿದ್ದಾನೆ ಎನ್ನಲಾಗಿದೆ. ಜೂನಿಯರ್ ಪ್ರದೀಪ್ ಮಾತು ನಂಬಿದ್ದ ಸೀನಿಯರ್​, ಪ್ರೀತಿಯ ಬಲೆಗೆ ಬಿದ್ದಿದ್ದಳು. ಯಾವಾಗ ಸೀನಿಯರ್ ಮೇಲೆ ಮೋಹ ಹೆಚ್ಚಾಯಿತೋ ಆಗಲೇ ಪತ್ನಿಯನ್ನು ಮುಗಿಸಲು ಪ್ಲಾನ್ ಮಾಡಿದ್ದಾನೆ ಅನ್ನೋದು ತನಿಖೆಯಿಂದ ತಿಳಿದುಬಂದಿದೆ.

ಮಾಡಿದ್ದೇನು..? ಪ್ರದೀಪ್ ತನ್ನ ಹೆಂಡತಿಯನ್ನ ಮುಗಿಸಲು ಸ್ನೇಹಿತನ ಸಹಾಯ ಪಡೆದಿದ್ದಾನೆ. ಸ್ನೇಹಿತ ರಾಜೇಂದ್ರ ಜೊತೆ ಮಾತುಕತೆ ನಡೆಸಿ 15 ಲಕ್ಷ ರೂಪಾಯಿಗೆ ಸೂಪಾರಿ ಕೊಟ್ಟಿದ್ದ ಎನ್ನಲಾಗಿದೆ. ಅಂತೆಯೇ ಚೈತಾಲಿಯನ್ನ ಮುಗಿಸಲು ಎರಡು ಬಾರಿ ಪ್ರಯತ್ನಿಸಿದ್ದಾರೆ. ಆದರೆ ಅದು ಫೇಲ್ ಆಗಿತ್ತು. ಮೂರನೇ ಬಾರಿಗೆ ಯಶಸ್ವಿಯಾಗಿದ್ದಾರೆ. ಭಾರವಾದ ವಸ್ತುವಿನಿಂದ ತಲೆಗೆ ಹೊಡೆದು ಆರು ತಿಂಗಳ ಗರ್ಭಿಣಿಯ ಜೀವ ತೆಗೆದಿದ್ದರು.

ಮುಂದೆ ಏನಾಯ್ತು..? ಆರೋಪಿಗಳಿಬ್ಬರು ಹಾಗೂ ಪ್ರದೀಪ್ ಸೇರಿ ಪ್ಲಾನ್ ಮಾಡಿದ್ದಾರೆ. ಪ್ಲಾನ್ ಪ್ರಕಾರವೇ ಆಕೆಯನ್ನು ಮುಗಿಸಿ, ಮೃತದೇಹವನ್ನು ಕೆಲ ಹೊತ್ತು ರಸ್ತೆಗೆ ತಂದು ಕಾಲ ಕಳೆದಿದ್ದಾರೆ. ಅದಾದ ನಂತರ ಆರೋಪಿ ಪ್ರದೀಪ್ ಪೊಲೀಸರಿಗೆ ಖುದ್ದು ಕರೆ ಮಾಡಿದ್ದಾನೆ. ಸೆಪ್ಟೆಂಬರ್ 7 ರಂದು ರಾತ್ರಿ 9.30ಕ್ಕೆ ಕರೆ ಮಾಡಿದ ಆತ, ಸರ್​ ರಸ್ತೆಯಲ್ಲಿ ಹೋಗುವಾಗ ಅಪಘಾತ ಆಗಿದೆ. ನನ್ನದೇ ಕಾರಿನಲ್ಲಿ ಹೋಗುವಾಗ ಅಪಘಾತ ಆಗಿದೆ. ಹೆಂಡತಿಗೆ ಗಂಭೀರ ಪೆಟ್ಟು ಬಿದ್ದಿದೆ. ನನಗೂ ಗಾಯವಾಗಿದೆ. ಪತ್ನಿ ಚೈತಾಲಿಯನ್ನು ಕಾಗವಾಡ ತಾಲೂಕು ಆಸ್ಪತ್ರೆಗೆ ದಾಖಲಿಸುತ್ತಿರೋದಾಗಿ ಹೇಳಿದ್ದಾನೆ. ವಿಷಯ ತಿಳಿದ ಪೊಲೀಸರು ತಕ್ಷಣವೇ ಕಾಗವಾಡ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಸಿಕ್ಕಿಬಿದ್ದಿದ್ದು ಹೇಗೆ..? ಪೊಲೀಸರು ಆಸ್ಪತ್ರೆಗೆ ಹೋದಾಗ ಚೈತ್ರಾಲಿ ಅನ್ನೋರು ಯಾರೂ ಇರಲಿಲ್ಲ. ಕೂಡಲೇ ಪೊಲೀಸರು ಪ್ರದೀಪ್​ಗೆ ಕರೆ ಮಾಡಿದ್ದಾರೆ. ಆಗ ಕಾಗವಾಡ ಬದಲು ಮಹಾರಾಷ್ಟ್ರದ ಮೀರಜ್‌‌ ಆಸ್ಪತ್ರೆಗೆ ಚೈತ್ರಾಣಿ ‌ಕರೆತಂದಿರುವುದಾಗಿ ಪೊಲೀಸರಿಗೆ ಪ್ರದೀಪ್ ಮಾಹಿತಿ ನೀಡಿದ್ದಾನೆ. ತಕ್ಷಣವೇ ‌ಪ್ರದೀಪ್ ನಿವಾಸಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿದ್ದಾರೆ. ಆಗ ಪ್ರದೀಪ್ ನಿವಾಸದ ಎದುರು ಕಾರು ನಿಂತಿತ್ತು. ಇದರಿಂದ ಪ್ರದೀಪ್ ನಡೆ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ಇದರ ನಡುವೆ ಪ್ರದೀಪ್ ಮೀರಜ್ ಪೊಲೀಸರನ್ನ ಭೇಟಿಯಾಗಿ, ಪತ್ನಿ ಅಪಘಾತದಿಂದ ಮೃತರಾಗಿದ್ದು ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾನೆ. ಆಗ ಮೀರಜ್ ಪೊಲೀಸರು ‌ಕಾಗವಾಡ ಠಾಣೆಯ ‌ಪೊಲೀಸರನ್ನ ಸಂಪರ್ಕಿಸುತ್ತಾರೆ. ಆಗ ನಾವು ಮೀರಜ್‌ಗೆ ಬರ್ತಿದ್ದೇವೆ, ಯಾವುದೇ ‌ದೂರು ದಾಖಲಿಸಿಕೊಳ್ಳದಂತೆ ಮನವಿ ಮಾಡುತ್ತಾರೆ.

ಮೀರಜ್‌ಗೆ ಬರುತ್ತಿದ್ದಂತೆಯೇ ಪೊಲೀಸರು ಪ್ರದೀಪ್​ನ ವಿಚಾರಣೆಗೆ ಒಳಪಡಿಸುತ್ತಾರೆ. ಆಗ ಪ್ರದೀಪ್​​ಗೆ ಅಪಘಾತದಿಂದ ಯಾವುದೇ ಗಾಯ ಆಗದಿರೋದು ಗೊತ್ತಾಗಿದೆ. ಚೈತಾಲಿ ‌ಮೃತದೇಹ ನೋಡಿದ ಪೊಲೀಸರು ಇದು ಅಪಘಾತವಲ್ಲ, ಕೊ*ಲೆ ಎಂಬುದನ್ನ ಮೇಲ್ನೋಟಕ್ಕೆ ಪತ್ತೆಹಚ್ಚಿಕೊಳ್ತಾರೆ. ತಕ್ಷಣವೇ ಪ್ರದೀಪ್​ನನ್ನ ‌ತೀವ್ರ ವಿಚಾರಣೆ ಮಾಡಿದಾಗ ಕೊ*ಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮಾತ್ರವಲ್ಲ, ಸ್ಥಳ ಮಹಜರು ವೇಳೆ ಪ್ರಕರಣಕ್ಕೆ ಸಾಥ್ ನೀಡಿದವರ ಹೆಸರನ್ನೂ ಹೇಳಿದ್ದಾನೆ. ಪ್ರಕರಣದಲ್ಲಿ ಐವರು ಆರೋಪಿಗಳು ಬಾಗಿಯಾಗಿರುವ ಶಂಕೆಯಿದ್ದ, ಮೂವರ ಬಂಧನವಾಗಿದೆ. ಮತ್ತಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ.

The post 15 ಲಕ್ಷಕ್ಕೆ ಸುಪಾರಿ ಕೊಟ್ಟು ಗರ್ಭಿಣಿ ಪತ್ನಿಯನ್ನೇ ಮುಗಿಸಿದ; ಸೀನಿಯರ್ ಮೇಲೆ ಮೋಹ.. ಪತ್ನಿಗೆ ಚಟ್ಟ! appeared first on Good News 24x7.

]]>
“ನನ್ನ ಮನೆ ಮೇಲೆ ಐಟಿ ದಾಳಿ ಆಗಲಿ!” – ‘ಲಕ್ಷ್ಮೀ ನಿವಾಸ’ ಖ್ಯಾತ ನಟಿ ಚಂದನಾ ಅನಂತಕೃಷ್ಣಾ. https://www.goodnews24x7.com/let-my-house-be-raided-by-it-lakshmi-niwas-famous-actress-chandana-ananthakrishna/ Sat, 30 Aug 2025 10:03:32 +0000 https://www.goodnews24x7.com/?p=7014 ಬೆಂಗಳೂರು: ಹಾಸ್ಯಮಿಶ್ರಿತವಾಗಿ ಆದರೆ ಗಂಭೀರ ಶ್ರದ್ಧೆಯೊಂದಿಗೆ, ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೂಲಕ ಮನೆಮಾತಾದ ನಟಿ ಹಾಗೂ ಗಾಯಕಿ ಚಂದನಾ ಅನಂತಕೃಷ್ಣಾ ಮಾತನಾಡುತ್ತಾ – “ನನ್ನ ಮನೆ ಮೇಲೆ ಐಟಿ (ಇನ್‌ಕಮ್ ಟ್ಯಾಕ್ಸ್) ದಾಳಿ ಆಗಲಿ!” ಎಂದು ಆಶಿಸಿದಿದ್ದಾರೆ! ಸಮೀಪದ ಸಂದರ್ಶನವೊಂದರಲ್ಲಿ, ನಟಿ…

The post “ನನ್ನ ಮನೆ ಮೇಲೆ ಐಟಿ ದಾಳಿ ಆಗಲಿ!” – ‘ಲಕ್ಷ್ಮೀ ನಿವಾಸ’ ಖ್ಯಾತ ನಟಿ ಚಂದನಾ ಅನಂತಕೃಷ್ಣಾ. appeared first on Good News 24x7.

]]>

ಬೆಂಗಳೂರು: ಹಾಸ್ಯಮಿಶ್ರಿತವಾಗಿ ಆದರೆ ಗಂಭೀರ ಶ್ರದ್ಧೆಯೊಂದಿಗೆ, ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೂಲಕ ಮನೆಮಾತಾದ ನಟಿ ಹಾಗೂ ಗಾಯಕಿ ಚಂದನಾ ಅನಂತಕೃಷ್ಣಾ ಮಾತನಾಡುತ್ತಾ – “ನನ್ನ ಮನೆ ಮೇಲೆ ಐಟಿ (ಇನ್‌ಕಮ್ ಟ್ಯಾಕ್ಸ್) ದಾಳಿ ಆಗಲಿ!” ಎಂದು ಆಶಿಸಿದಿದ್ದಾರೆ!

ಸಮೀಪದ ಸಂದರ್ಶನವೊಂದರಲ್ಲಿ, ನಟಿ ಚಂದನಾ ಮಾತನಾಡುತ್ತಾ – “ನಿರಂತರ ಕೆಲಸ ಮಾಡಿ, ದುಡಿದು, ಅಷ್ಟು ಮಟ್ಟಿಗೆ ಅಭಿವೃದ್ಧಿಯಾಗೋಣ ಎಂಬ ಹವಣಿಕೆ ನನ್ನದು. ನಾನು ಎಲ್ಲ ವಾಹಿನಿಗಳಲ್ಲಿಯೂ ಕೆಲಸ ಮಾಡಿರುವೆ. ಏನಂದ್ರೆ, ಐಟಿ ದಾಳಿ ಮಾಡುವಷ್ಟು ಆದಾಯ ಇದ್ದರೆ ಎಷ್ಟು ಚೆನ್ನಾಗಿರುತ್ತದೆ!” ಎಂದು ನಗುಮಾಡಿದ್ದಾರೆ.

ವೈವಾಹಿಕ ಜೀವನಕ್ಕೂ ಹೊಸ ಅಂಗದಾರಂಭ:

ಇತ್ತೀಚೆಗಷ್ಟೇ ಉದ್ಯಮಿ ಪ್ರತ್ಯಕ್ಷ್ ಅವರೊಂದಿಗೆ ವಿವಾಹವಾಗಿರುವ ಚಂದನಾ, ಮದುವೆಯ ನಾಡಿನಲ್ಲೂ ಶೂಟಿಂಗ್‌ ನಿಭಾಯಿಸುತ್ತಾ ತಮ್ಮ ಪಾಠವನ್ನೇ ಸಾಕ್ಷಾತ್ ಮಾಡಿಸಿದ್ದರೂ, ಮದುವೆ ನಂತರ ಪ್ರತ್ಯಕ್ಷ್ ಜೊತೆ ನೀಡಿದ ಸಂದರ್ಶನ ಸದ್ಯ ವೈರಲ್ ಆಗುತ್ತಿದೆ.

ಈ ಸಂದರ್ಶನದಲ್ಲಿ ಅವರು ತಮ್ಮ ಉತ್ಸಾಹಭರಿತ ಮಾತುಗಳ ಮೂಲಕ ‘ಐಟಿ ದಾಳಿ’ಗೆ ಕಾರಣವಾಗಬಹುದಾದಷ್ಟು ಯಶಸ್ಸು ಹೊಂದುದಲೆಂದೇ ಆ ಆಶಯ ಹೊರಹಾಕಿದ್ದಾರೆ.

ಪ್ರತ್ಯಕ್ಷ್ – ಕಲಾವಿದರ ಮನೆತನದ ವರ:

ಚಂದನಾರ ಪತಿ ಪ್ರತ್ಯಕ್ಷ್ ಕಲಾವಿದರ ಮನೆತನದಿಂದ ಬರುವವರು. ಹಿರಿಯ ನಟಿ ಕಾವ್ಯಾಂಜಲಿ ಮತ್ತು ದಿವಂಗತ ನಟ ಉದಯ್ ಕುಮಾರ್ ಅವರ ಪುತ್ರ. ಕಳೆದ ನವೆಂಬರ್ 28ರಂದು ಅವರ ಮದುವೆ ನಡೆದಿತ್ತು. ಅದೇ 29ರಂದು ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಜರುಗಿತ್ತು. ಟಿವಿ ಹಾಗೂ ಚಿತ್ರರಂಗದ ಅನೇಕ ಪ್ರಸಿದ್ಧ ಮುಖಗಳು ಈ ಶುಭ ಮೌಕೆಗೆ ಸಾಕ್ಷಿಯಾಗಿದ್ದರು.

ಕಿರುತೆರೆಯ ಹಲವು ಹಂತಗಳಲ್ಲೂ ಚಂದನಾ ದೀಪಾವಳಿ:

ಕಲರ್ಸ್ ಕನ್ನಡದ ‘ರಾಜಾ ರಾಣಿ’ ಧಾರಾವಾಹಿಯಲ್ಲಿ “ಚುಕ್ಕಿ” ಪಾತ್ರದಲ್ಲಿ ಭರತನವ್ಯ ಪಯಣ ಆರಂಭಿಸಿದ ಚಂದನಾ, ಆಮೇಲೆ ಬಿಗ್‌ಬಾಸ್ ಸೀಸನ್ 7ನಲ್ಲಿ ಸ್ಪರ್ಧಿಯಾಗಿ ಪಾದಾರ್ಪಣೆ ಮಾಡಿದ್ದರು. ನಂತರ ಸಿಂಗಿಂಗ್ ಶೋ ನಿರೂಪಣೆ, ಡ್ಯಾನ್ಸ್ ರಿಯಾಲಿಟಿ ಶೋ ಸೇರಿದಂತೆ ಹಲವು ಫಾರ್ಮ್ಯಾಟ್‌ಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.

ಈ ದಿನಗಳಲ್ಲಿ ಅವರು ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಚಿನ್ನುಮರಿ ಎಂಬ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಈ ಪಾತ್ರದ ಮೂಲಕ ಮತ್ತೆ ಒಂದು ಬೃಹತ್ ಅಭಿಮಾನಿ ಬಳಗವನ್ನೇ ಗೆದ್ದಿದ್ದಾರೆ.

‘ಲಕ್ಷ್ಮೀ ನಿವಾಸ’ ಸೀರಿಯಲ್‌ನಲ್ಲಿ ಏನಾಗ್ತಿದೆ?

ಈ ಸೀರಿಯಲ್‌ನಲ್ಲಿ ಸೈಕೋ ಜಯಂತ್ ಹಾಗೂ ಚಿನ್ನುಮರಿ ನಡುವೆ ನೂಕುನುಗ್ಗಲು ಗಂಭೀರ ತಿರುವು ಪಡೆಯುತ್ತಿದೆ. ಜಾಹ್ನವಿ-ವಿಶ್ವ ಸಂಬಂಧ, ವಿಜಯ್‌ನ ಅನುಮಾನ, ಲೀಲೆಯ ಕ್ರಿಯಾಶೀಲತೆ – ಇವೆಲ್ಲವೂ ಕಥೆಯ ತೀವ್ರತೆಯನ್ನು ಹೆಚ್ಚಿಸುತ್ತಿವೆ. ಈ ಧಾರಾವಾಹಿ ಪ್ರತಿದಿನ ರಾತ್ರಿ 8:30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.

ಸಂಗೀತ, ನಟನೆ, ರಿಯಾಲಿಟಿ ಶೋ, ಮತ್ತು ಈಗ ಧಾರಾವಾಹಿಗಳಲ್ಲೂ ಚಂದನಾ ಅನಂತಕೃಷ್ಣಾ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ‘ಐಟಿ ದಾಳಿ ಆಗೋಷ್ಟು ಯಶಸ್ಸು ಬಾರಲಿ’ ಎಂಬ ಅವರ ಮಾತು, ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ಅವರ ಧೈರ್ಯವಂತಿಕೆ ವ್ಯಕ್ತಪಡಿಸುತ್ತದೆ.

The post “ನನ್ನ ಮನೆ ಮೇಲೆ ಐಟಿ ದಾಳಿ ಆಗಲಿ!” – ‘ಲಕ್ಷ್ಮೀ ನಿವಾಸ’ ಖ್ಯಾತ ನಟಿ ಚಂದನಾ ಅನಂತಕೃಷ್ಣಾ. appeared first on Good News 24x7.

]]>
ಇಲ್ಲಿವೆ ಅನುಶ್ರೀ ಮದುವೆ ಫೋಟೋಗಳು… https://www.goodnews24x7.com/here-are-anushrees-wedding-photos/ Fri, 29 Aug 2025 05:53:21 +0000 https://www.goodnews24x7.com/?p=6927 ಆ್ಯಂಕರ್ ಅನುಶ್ರೀ ಯಾವ ಊರಿಗೆ ಹೋದರೂ, ಯಾವ ಸ್ಟೇಜಿಗೆ ಹೋದರೂ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡರೂ ಅದೊಂದೇ ಪ್ರಶ್ನೆ ಎದುರಾಗ್ತಿತ್ತು. ಅನುಶ್ರೀ ಮದುವೆ ಯಾವಾಗ? ಅನ್ನೋ ಪ್ರಶ್ನೆ ಆಗಿಂದಾಗೇ ಕೇಳಿ ಬರ್ತಿತ್ತು. ಈ ಪ್ರಶ್ನೆಗೀಗ ಉತ್ತರ ಸಿಕ್ಕಿದ್ದು, ಪ್ರೀತಿಸಿದ ಹುಡುಗನ ಜೊತೆಗೆ ಸಪ್ತಪದಿ…

The post ಇಲ್ಲಿವೆ ಅನುಶ್ರೀ ಮದುವೆ ಫೋಟೋಗಳು… appeared first on Good News 24x7.

]]>

ಆ್ಯಂಕರ್ ಅನುಶ್ರೀ ಯಾವ ಊರಿಗೆ ಹೋದರೂ, ಯಾವ ಸ್ಟೇಜಿಗೆ ಹೋದರೂ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡರೂ ಅದೊಂದೇ ಪ್ರಶ್ನೆ ಎದುರಾಗ್ತಿತ್ತು. ಅನುಶ್ರೀ ಮದುವೆ ಯಾವಾಗ? ಅನ್ನೋ ಪ್ರಶ್ನೆ ಆಗಿಂದಾಗೇ ಕೇಳಿ ಬರ್ತಿತ್ತು. ಈ ಪ್ರಶ್ನೆಗೀಗ ಉತ್ತರ ಸಿಕ್ಕಿದ್ದು, ಪ್ರೀತಿಸಿದ ಹುಡುಗನ ಜೊತೆಗೆ ಸಪ್ತಪದಿ ತುಳಿದಿದ್ದಾರೆ.

ಆ್ಯಂಕರ್ ಅನುಶ್ರೀ ಯಾವ ಊರಿಗೆ ಹೋದರೂ, ಯಾವ ಸ್ಟೇಜಿಗೆ ಹೋದರೂ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡರೂ ಅದೊಂದೇ ಪ್ರಶ್ನೆ ಎದುರಾಗ್ತಿತ್ತು. ಅನುಶ್ರೀ ಮದುವೆ ಯಾವಾಗ? ಅನ್ನೋ ಪ್ರಶ್ನೆ ಆಗಿಂದಾಗೇ ಕೇಳಿ ಬರ್ತಿತ್ತು. ಈ ಪ್ರಶ್ನೆಗೀಗ ಉತ್ತರ ಸಿಕ್ಕಿದ್ದು, ಪ್ರೀತಿಸಿದ ಹುಡುಗನ ಜೊತೆಗೆ ಸಪ್ತಪದಿ ತುಳಿದಿದ್ದಾರೆ.

ಅನುಶ್ರೀ.. ಕನ್ನಡ ಕಿರುತೆರೆಯ ಚಿರ ಪರಿಚಿತ ಹೆಸರು. ಅನುಶ್ರೀ ಗೊತ್ತಿಲ್ಲದಂತ ಟಿ.ವಿ ವೀಕ್ಷಕರೇ ಇಲ್ಲ. ಆ ಮಟ್ಟಿಗಿನ ಜನಪ್ರಿಯತೆ ಗಳಿಸಿರೋ ನಿರೂಪಕಿ‌. ಹರಳು ಉರಿದಂತ ತಮ್ಮ ಮಾತುಗಳಿಂದ ಇಡೀ ಶೋವನ್ನು, ವೇದಿಕೆಯನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಅನುಶ್ರೀಗಿದೆ. ಇಂತಹ ಅನುಶ್ರೀಗೆ ಹೋದಲ್ಲಿ ಬಂದಲ್ಲಿ, ಒಂದೇ ಪ್ರಶ್ನೆ ಎದುರಾಗ್ತಿತ್ತು. ಅನುಶ್ರೀ ಮದುವೆ ಯಾವಾಗ ಅನ್ನೋ ಪ್ರಶ್ನೆ ಕೇಳಿ, ಕೇಳಿ ಅನುಶ್ರೀಗೂ. ಮದುವೆಯಾಗೋ ಮನಸ್ಸಾಯ್ತು ಅನ್ನಿಸುತ್ತೆ. ಕೊನೆಗೂ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ‌.

ಅನುಶ್ರೀ ಮದುವೆ ವಿಚಾರವಾಗಿ ಅಂತೆ-ಕಂತೆ ವಿಚಾರಗಳು ಬಂದಾಗಲೇ ಅನುಶ್ರೀಗೆ ಶುಭ ಹಾರೈಕೆಗಳ ಸುರಿಮಳೆ ಹರಿದಿತ್ತು. ನೆಚ್ಚಿನ ನಿರೂಪಕಿಯ ಮದುವೆ ಸುದ್ದಿ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ರು. ಅದ್ರಲ್ಲೂ ಹುಡುಗನ ಫೋಟೊ ರಿವೀಲ್ ಆದ ಬಳಿಕ ಹುಡುಗ ಯಾರು..? ಹುಡುಗನ ಹಿನ್ನೆಲೆ ಏನು..? ಅನ್ನೋ ಹುಡುಕಾಟ ಶುರುವಾಗಿದ್ದವು.

ಫೈನಲಿ, ಇಂದು ಪ್ರೀತಿಯ ಗೆಳೆಯ ರೋಷನ್ ಜೊತೆಗೆ ಅನುಶ್ರೀ ಹಸೆಮಣೆ ಏರಿದರು. ಕನಕಪುರ ರಸ್ತೆಯ ಕಗ್ಗಲಿಪುರ ಬಳಿಯ ಖಾಸಗಿ ಸ್ಥಳದಲ್ಲಿ ಮದುವೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಈ ಮದುವೆಗೆ ಅನುಶ್ರೀ ಆಪ್ತರು, ಕುಟುಂಬಸ್ಥರು ಹಾಗೂ ಸ್ಯಾಂಡಲ್ವುಡ್ ತಾರೆಯರು ಭಾಗಿಯಾಗಿದ್ರು.

ಅನುಶ್ರೀಯನ್ನು ನಿರೂಪಕಿ ಅನ್ನೋದಕ್ಕಿಂತ ಹೆಚ್ಚಾಗಿ, ಸ್ನೇಹಿತೆಯಂತೆ ಕಂಡವರು ಜಾಸ್ತಿ. ಹೀಗಾಗಿಯೇ ಮದುವೆಗೆ ಸ್ಯಾಂಡಲ್ವುಡ್ ತಾರೆಯರು ಕುಟುಂಬಸ್ಥರಾಗಿ ಆಗಮಿಸಿದ್ರು. ಶಿವಣ್ಣ, ಡಾಲಿ ಧನಂಜಯ, ರಚಿತಾ ರಾಮ್, ರಾಜ್ ಬಿ ಶೆಟ್ಟಿ, ತರುಣ್ ಸುಧೀರ್, ಶರಣ್, ಪ್ರೇಮ್, ವಿಜಯ್ ರಾಘವೇಂದ್ರ. ಹೀಗೆ ಸಾಲು ಸಾಲು ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗಿಯಾಗಿದ್ರು.

ಮದುವೆ ಸಮಾರಂಭದಲ್ಲಿ ತುಂಬಾ ಹೊತ್ತು ಕಾಲ ಕಳೆದ ಶಿವಣ್ಣ, ಮದುವೆಯ ನಂತರ ಅನುಶ್ರೀ ಮದುವೆಯ ವಿಚಾರವಾಗಿ ಮಾತನಾಡಿದ್ರು. ಅನುಶ್ರೀ ನಮ್ಮ ಮನೆಯ ಸದಸ್ಯೆ ಅಂತಾ ಪ್ರೀತಿಯಿಂದ ಮಾತನಾಡಿದ್ರು.

ಮದುವೆಯ ನಂತರ ಮಾಧ್ಯಮಗಳೊಂದಿಗೆ ನವ ದಂಪತಿ ಪ್ರೀತಿಯಿಂದ ಹಾರೈಸಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ರು. ಅಲ್ಲದೇ ತಮ್ಮ ಲವ್‌ ಕಂ ಅರೇಂಜ್ಡ್ ಮ್ಯಾರೇಜ್ ಮಾಹಿತಿಯನ್ನು ಪ್ರೀತಿಯಿಂದ ಹಂಚಿಕೊಂಡ್ರು.

ಒಟ್ಟಾರೆ ಅನುಶ್ರೀ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಕಾರ್ಯಕ್ರಮ ನಿರೂಪಣೆಯಂತೆ‌. ಜೀವನದ ನಿರೂಪಣೆಯೂ ಯಶಸ್ವಿ ಆಗಲಿ ಅನ್ನೋದು ಅಭಿಮಾನಿಗಳ ಹಾರೈಕೆ ಆಗಿದೆ.

The post ಇಲ್ಲಿವೆ ಅನುಶ್ರೀ ಮದುವೆ ಫೋಟೋಗಳು… appeared first on Good News 24x7.

]]>
ಕೋಟಿ ಕೊಟ್ರೂ ಸಾಕಾಗಲಿಲ್ಲ.. ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಕ್ರಿಮಿನಾಶಕ ಸೇವಿಸಿ ಸಾ*ವು. https://www.goodnews24x7.com/even-crores-of-rupees-were-not-enough-newlywed-woman-dies-after-consuming-pesticide-due-to-dowry-harassment/ Mon, 30 Jun 2025 08:11:36 +0000 https://www.goodnews24x7.com/?p=4845 ತಮಿಳುನಾಡು : ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಜೀವಕಳೆದುಕೊಂಡಿದ್ದಾಳೆ. ರಿಧಾನ್ಯಾ ಎಂಬ 27 ವರ್ಷದ ನವವಿವಾಹಿತೆ ಕಾರ್ ನಲ್ಲಿ ಕ್ರಿಮಿನಾಶಕ ಸೇವಿಸಿ ಸಾವನ್ನಪ್ಪಿದ್ದಾರೆ. ದೇವಸ್ಥಾನಕ್ಕೆ ಹೋಗುತ್ತೇನೆಂದು ಗಂಡನ ಮನೆಯಿಂದ ಕಾರ್ನಲ್ಲಿ ಹೊರಟ ರಿಧಾನ್ಯಾ ಕಾರ್ನಲ್ಲೇ ಕ್ರಿಮಿನಾಶಕ ಸೇವಿಸಿದ್ದಾರೆ.…

The post ಕೋಟಿ ಕೊಟ್ರೂ ಸಾಕಾಗಲಿಲ್ಲ.. ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಕ್ರಿಮಿನಾಶಕ ಸೇವಿಸಿ ಸಾ*ವು. appeared first on Good News 24x7.

]]>

ತಮಿಳುನಾಡು : ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಜೀವಕಳೆದುಕೊಂಡಿದ್ದಾಳೆ. ರಿಧಾನ್ಯಾ ಎಂಬ 27 ವರ್ಷದ ನವವಿವಾಹಿತೆ ಕಾರ್ ನಲ್ಲಿ ಕ್ರಿಮಿನಾಶಕ ಸೇವಿಸಿ ಸಾವನ್ನಪ್ಪಿದ್ದಾರೆ. ದೇವಸ್ಥಾನಕ್ಕೆ ಹೋಗುತ್ತೇನೆಂದು ಗಂಡನ ಮನೆಯಿಂದ ಕಾರ್ನಲ್ಲಿ ಹೊರಟ ರಿಧಾನ್ಯಾ ಕಾರ್ನಲ್ಲೇ ಕ್ರಿಮಿನಾಶಕ ಸೇವಿಸಿದ್ದಾರೆ.

ಈ ವರ್ಷದ ಏಪ್ರಿಲ್ನಲ್ಲಿ ಕವಿನ್ ಕುಮಾರ್ ಜೊತೆಗೆ ರಿಧಾನ್ಯಾ ವಿವಾಹ ನಡೆದಿತ್ತು. ಮದುವೆ ವೇಳೆ 70 ಲಕ್ಷ ರೂಪಾಯಿ ಮೌಲ್ಯದ ವೋಲ್ವೋ ಕಾರು, 800 ಗ್ರಾಂ ಚಿನ್ನವನ್ನು ವರದಕ್ಷಿಣೆ ಆಗಿ ರಿಧಾನ್ಯಾ ತಂದೆ ಅಣ್ಣಾದೊರೈ ಗಂಡನ ಮನೆಯವರಿಗೆ ನೀಡಿದ್ದರು. ಆದರೂ ಗಂಡನ ಮನೆಯಲ್ಲಿ ಇನ್ನೂ ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಈ ಮಾನಸಿಕ ಕಿರುಕುಳ ತಾಳಲಾಗದೇ ನವವಿವಾಹಿತೆ ಜೀವ ಕಳೆದುಕೊಂಡಿದ್ದಾರೆ.

ಜೀವ ತೆಗೆದುಕೊಳ್ಳುವುದಕ್ಕೂ ಮೊದಲು ರಿಧಾನ್ಯ ತನ್ನ ತಂದೆ ಅಣ್ಣಾದೊರೈಗೆ 8 ವಾಯ್ಸ್ ಮೆಸೇಜ್ ಕಳಿಸಿದ್ದರು. ಈ ವಾಯ್ಸ್ ಮೇಸೇಜ್ನಲ್ಲಿ ಗಂಡ ಹಾಗೂ ಅತ್ತೆ, ಮಾವ ಕೊಡುತ್ತಿದ್ದ ಕಿರುಕುಳನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಜೀವ ಬಿಡುತ್ತಿರುವುದಕ್ಕೆ ಮಾಡಿಕೊಳ್ಳುತ್ತಿರುವುದಕ್ಕೆ ನನ್ನನ್ನು ಕ್ಷಮಿಸಿ. ಇದರ ಬಗ್ಗೆ ಯಾರಿಗೆ ಹೇಳಬೇಕೆಂದು ಗೊತ್ತಾಗುತ್ತಿಲ್ಲ. ನನ್ನ ಮಾತು ಕೇಳಿದವರು, ಜೀವನ ಇದೇ ರೀತಿ ಇರುತ್ತೆ, ಜೀವನದಲ್ಲಿ ಇವುಗಳ ಬಗ್ಗೆ ರಾಜೀ ಮಾಡಿಕೊಳ್ಳಬೇಕು ಎಂದು ಹೇಳುತ್ತಾರೆ.

ಅವರಿಗೆ ನನ್ನ ನೋವು ಅರ್ಥವಾಗಲ್ಲ. ನೀವು ನನ್ನ ಬಗ್ಗೆ ಅನುಮಾನ ಪಡಬಹುದು. ಆದರೇ, ನಾನು ಸುಳ್ಳು ಹೇಳುತ್ತಿಲ್ಲ. ನನ್ನ ಸುತ್ತ ಇರುವವರು ನಟಿಸುತ್ತಿದ್ದಾರೆ. ನಾನೇಕೆ ಮೌನವಾಗಿದ್ದೇನೆ ಎಂದು ನನಗೆ ಅರ್ಥವಾಗುತ್ತಿಲ್ಲ ಅಥವಾ ನಾನೇಕೆ ಈ ರೀತಿ ಇದ್ದೇನೆ. ನನ್ನ ಜೀವನ ಪೂರ್ತಿ ನಾನು ನಿಮಗೆ ಹೊರೆಯಾಗಲ್ಲ. ನಾನು ಈ ಭಾರಿ ಯಾವುದೇ ತಪ್ಪು ಮಾಡಲ್ಲ. ಈ ಜೀವನವನ್ನು ನಾನು ಇಷ್ಟಪಡಲ್ಲ. ಗಂಡ ಕವಿನ್ ಕುಮಾರ್ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ತಂದೆ ಅಣ್ಣಾದೊರೆೈಗೆ ಕಳಿಸಿದ ವಾಯ್ಸ್ ಮೇಸೇಜ್ಗಳಲ್ಲಿ ಇದೆ ಎಂದು ಹೇಳಲಾಗಿದೆ.

ಮಂಡಿಪಾಳ್ಯ ಬಳಿಯ ದೇವಸ್ಥಾನಕ್ಕೆ ಹೋಗುತ್ತೇನೆಂದು ಕಾರ್ನಲ್ಲಿ ರಿಧಾನ್ಯಾ ಹೊರಟಿದ್ದರು. ಬಳಿಕ ರಸ್ತೆ ಪಕ್ಕದಲ್ಲೇ ಕಾರ್ ನಿಲ್ಲಿಸಿ, ಕಾರ್ನಲ್ಲಿ ಕ್ರಿಮಿನಾಶಕ ಸೇವಿಸಿ ಜೀವ ಬಿಟ್ಟಿದ್ದಾರೆ. ಸ್ಥಳೀಯರು ರಸ್ತೆ ಪಕ್ಕ ಕಾರ್ ಬಹಳ ಹೊತ್ತು ನಿಂತಿರುವುದನ್ನು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಪೊಲೀಸರು ಬಂದು ಕಾರ್ ಅನ್ನು ಪರಿಶೀಲಿಸಿದಾಗ, ರಿಧಾನ್ಯಾ ಕ್ರಿಮಿನಾಶಕ ಸೇವಿಸಿರುವುದು ಬೆಳಕಿಗೆ ಬಂದಿದೆ.

ರಿಧಾನ್ಯಾ ಬಾಯಿಯಿಂದ ನೊರೆ ಬಂದಿದೆ. ಪೊಲೀಸರು ದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈಗ ಪತಿ, ಅತ್ತೆ, ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಬಿಎನ್ಎಸ್ ಕಾಯಿದೆಯ ಸೆಕ್ಷನ್ 85ರಡಿ ದೂರು ದಾಖಲಾಗಿದೆ. ದೂರಿನ ಆಧಾರದ ಮೇಲೆ ಪತಿ ಕವಿನ್ ಕುಮಾರ್, ಮಾವ ಈಶ್ವರ ಮೂರ್ತಿ, ಅತ್ತೆ ಚಿತ್ರಾದೇವಿಯನ್ನು ಪೊಲೀಸರು ಬಂಧಿಸಿದ್ದಾರೆ. ರಿಧಾನ್ಯಾ ತಂದೆ ಅಣ್ಣಾದೊರೈ ಗಾರ್ಮೆಂಟ್ಸ್ ಫ್ಯಾಕ್ಟರಿಯ ಮಾಲೀಕರು ಆಗಿದ್ದಾರೆ.

The post ಕೋಟಿ ಕೊಟ್ರೂ ಸಾಕಾಗಲಿಲ್ಲ.. ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಕ್ರಿಮಿನಾಶಕ ಸೇವಿಸಿ ಸಾ*ವು. appeared first on Good News 24x7.

]]>
ವರನ ಕೆಲಸ, ಕುಟುಂಬದ ಹಿನ್ನಲೆ ಜೊತೆಗೆ, ಡಿಜಿಟಲ್ ಹಿನ್ನಲೆಯನ್ನೂ ನೋಡಿ ಎಂದ ಯುವತಿ…. https://www.goodnews24x7.com/%e0%b2%b5%e0%b2%b0%e0%b2%a8-%e0%b2%95%e0%b3%86%e0%b2%b2%e0%b2%b8-%e0%b2%95%e0%b3%81%e0%b2%9f%e0%b3%81%e0%b2%82%e0%b2%ac%e0%b2%a6-%e0%b2%b9%e0%b2%bf%e0%b2%a8%e0%b3%8d%e0%b2%a8%e0%b2%b2%e0%b3%86/ Fri, 20 Jun 2025 10:00:15 +0000 https://www.goodnews24x7.com/?p=4531 ಈಗಿನ ಕಾಲದಲ್ಲಿ ಯುವತಿಯರು ಮದುವೆ ವಿಷಯದಲ್ಲಿ ಎಷ್ಟು ಜಾಗರೂಕರಾಗಿದ್ದರೂ ಸಾಲದು. ಸುಳ್ಳು ಹೇಳಿ ಮದುವೆ ಮಾಡಿಕೊಂಡು ಮೋಸ ಮಾಡುವ ಸುದ್ದಿಗಳನ್ನು ನೀವು ಆಗಾಗ ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ಯುವತಿಯೂ ತನ್ನ ಬುದ್ಧಿವಂತಿಕೆಯಿಂದ ಅಪಾಯಕಾರಿ ಪುರುಷನಿಂದ ಹೇಗೆ ತಪ್ಪಿಸಿಕೊಂಡೆ ಹಾಗೂ ವೈವಾಹಿಕ ಜೀವನಕ್ಕೆ…

The post ವರನ ಕೆಲಸ, ಕುಟುಂಬದ ಹಿನ್ನಲೆ ಜೊತೆಗೆ, ಡಿಜಿಟಲ್ ಹಿನ್ನಲೆಯನ್ನೂ ನೋಡಿ ಎಂದ ಯುವತಿ…. appeared first on Good News 24x7.

]]>

ಈಗಿನ ಕಾಲದಲ್ಲಿ ಯುವತಿಯರು ಮದುವೆ ವಿಷಯದಲ್ಲಿ ಎಷ್ಟು ಜಾಗರೂಕರಾಗಿದ್ದರೂ ಸಾಲದು. ಸುಳ್ಳು ಹೇಳಿ ಮದುವೆ ಮಾಡಿಕೊಂಡು ಮೋಸ ಮಾಡುವ ಸುದ್ದಿಗಳನ್ನು ನೀವು ಆಗಾಗ ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ಯುವತಿಯೂ ತನ್ನ ಬುದ್ಧಿವಂತಿಕೆಯಿಂದ ಅಪಾಯಕಾರಿ ಪುರುಷನಿಂದ ಹೇಗೆ ತಪ್ಪಿಸಿಕೊಂಡೆ ಹಾಗೂ ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನ ವರನ ಡಿಜಿಟಲ್ ಹಿನ್ನಲೆಯ ಬಗ್ಗೆ ತಿಳಿದುಕೊಳ್ಳುವುದು ಎಷ್ಟು ಮುಖ್ಯ ಎನ್ನುವುದನ್ನು ಒತ್ತಿ ಹೇಳಿದ್ದಾರೆ. ಯುವತಿಯ ಪೋಸ್ಟ್ವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈಕೆ ನೀಡಿದ ಸಲಹೆಯನ್ನು ಸ್ವೀಕರಿಸಿದ್ದಾರೆ.

ಈಗಿನ ಕಾಲದಲ್ಲಿ ಯಾರು ಹೇಗೆ ಇರುತ್ತಾರೆ ಎಂದು ಹೇಳುವುದೇ ಕಷ್ಟ. ಎದುರುಗಡೆಯಿಂದ ನೋಡಲು ಒಳ್ಳೆಯವರಂತೆ ಕಂಡರೂ ಕೆಟ್ಟ ಗುಣನಡತೆಯನ್ನು ಹೊಂದಿರಬಹುದು. ಅದರಲ್ಲಿಯೂ ಮದುವೆಯಾಗುವ ಮುನ್ನ ಹುಡುಗನೇ ಆಗಿರಲಿ, ಹುಡುಗಿಯೇ ಇರಲಿ, ಜೀವನ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಯ ಕುಟುಂಬ ಹಾಗೂ ಉದ್ಯೋಗದ ಹಿನ್ನಲೆಯನ್ನು ಪರಿಶೀಲಿಸುವುದು ಮಾತ್ರವಲ್ಲ, ಡಿಜಿಟಲ್ ಹಿನ್ನಲೆಯನ್ನು ಗಮನಿಸಬೇಕಂತೆ. ಇಲ್ಲದಿದ್ದರೆ ಗೊತ್ತಿಲ್ಲದೇ ಯಾಮಾರುವುದು ಗ್ಯಾರಂಟಿಯಂತೆ. ಈ ಬಗ್ಗೆ 22 ವರ್ಷದ ಯುವತಿಯೊಬ್ಬಳು ಮಾಡಿದ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾಳೆ. ತಾನು ಹೇಗೆ ಅಪಾಯಕಾರಿ ಮದುವೆಯಿಂದ ಪಾರಾದೆ ಎನ್ನುವ ಬಗ್ಗೆ ವಿವರಿಸಿದ್ದು ಈ ಪೋಸ್ಟ್ವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ರೆಡ್ಡಿಟ್ ಖಾತೆಯಲ್ಲಿ ಯುವತಿಯೂ ಶೇರ್ ಮಾಡಿದ ಪೋಸ್ಟ್ನಲ್ಲಿ, 2025ರಲ್ಲಿ ಅರೇಂಜ್ಡ್ ಮ್ಯಾರೇಜ್: ಹುಡುಗಿಯರು ಡಿಜಿಟಲ್ ಹಿನ್ನೆಲೆ ಪರಿಶೀಲನೆ ಮಾಡಬೇಕಾದ ಅಗತ್ಯ’ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾಳೆ. ಈ ಪೋಸ್ಟ್ನಲ್ಲಿ, ನಾನು ಎಲ್ಲವನ್ನೂ ಪರಿಶೀಲಿಸಿದೆ. ಕೆಲವು ಉತ್ತಮ ಸ್ಥಾನದಲ್ಲಿರುವ ಪುರುಷರು ಎಷ್ಟು ಅಪಾಯಕಾರಿ ಎಂಬುದು ನನಗೆ ಚೆನ್ನಾಗಿ ಅರಿವಾಯಿತು. ಸಾಮಾನ್ಯವಾಗಿ ಹೆಚ್ಚಿನ ಹುಡುಗಿಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಲಿಯುವುದಕ್ಕಾಗಿ ನಾನು ಈ ವಿಚಾರವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಎಂದು ಆಕೆ ಬರೆದುಕೊಂಡಿದ್ದಾಳೆ.

The post ವರನ ಕೆಲಸ, ಕುಟುಂಬದ ಹಿನ್ನಲೆ ಜೊತೆಗೆ, ಡಿಜಿಟಲ್ ಹಿನ್ನಲೆಯನ್ನೂ ನೋಡಿ ಎಂದ ಯುವತಿ…. appeared first on Good News 24x7.

]]>