marriedlife Archives - Good News 24x7 https://www.goodnews24x7.com/tag/marriedlife/ Kannada Fri, 29 Aug 2025 05:09:01 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg marriedlife Archives - Good News 24x7 https://www.goodnews24x7.com/tag/marriedlife/ 32 32 ಸಂಭ್ರಮದಲ್ಲೂ ಅಪ್ಪು ಮರೆತಿಲ್ಲ ಅನುಶ್ರೀ … https://www.goodnews24x7.com/anushree-has-not-forgotten-appu-even-in-the-celebration/ Fri, 29 Aug 2025 05:08:10 +0000 https://www.goodnews24x7.com/?p=6913 ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಅನುಶ್ರೀ ಅವರು ತಾವು ಮದುವೆಯಾಗುತ್ತಿರುವ ಮಂಟಪದಲ್ಲಿ ಅಪ್ಪು ಫೋಟೋವನ್ನು ರಾರಾಜಿಸುವಂತೆ ಮಾಡಿದ್ದಾರೆ. ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಇಂದು (ಆ.28) ಕೊಡಗು ಮೂಲದ ರೋಷನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ನಿರೂಪಣೆಯಿಂದ ಹೆಚ್ಚು…

The post ಸಂಭ್ರಮದಲ್ಲೂ ಅಪ್ಪು ಮರೆತಿಲ್ಲ ಅನುಶ್ರೀ … appeared first on Good News 24x7.

]]>

ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಅನುಶ್ರೀ ಅವರು ತಾವು ಮದುವೆಯಾಗುತ್ತಿರುವ ಮಂಟಪದಲ್ಲಿ ಅಪ್ಪು ಫೋಟೋವನ್ನು ರಾರಾಜಿಸುವಂತೆ ಮಾಡಿದ್ದಾರೆ.

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಇಂದು (ಆ.28) ಕೊಡಗು ಮೂಲದ ರೋಷನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ನಿರೂಪಣೆಯಿಂದ ಹೆಚ್ಚು ಜನಪ್ರಿಯತೆ ಗಳಿಸಿದ ಅನುಶ್ರೀ ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ಹಸೆಮಣೆ ಏರಿದ್ದು, 10:56ರ ಶುಭ ಮೂಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿರುವ ಅನುಶ್ರೀ ಮದುವೆ ಮಂಟಪದಲ್ಲಿ ಅಪ್ಪು ಫೋಟೋವೊಂದನ್ನು ಇರಿಸಿ, ಸುತ್ತಲೂ ಹೂವುಗಳಿಂದ ಅಲಂಕಾರ ಮಾಡಿದ್ದಾರೆ. ಈ ಮೂಲಕ ಅಪ್ಪು ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದಾರೆ. ಈ ಹಿಂದೆಯೂ ಅಪ್ಪು ಬಗ್ಗೆ ನಟಿ ಅನುಶ್ರೀ ಮಾತನಾಡಿದ್ದರು. ಅಪ್ಪು ಸರ್ ನನಗೆ ತುಂಬಾ ಹತ್ತಿರ. ಸಿನಿಮಾ ಇಷ್ಟ ಪಡಲು ಶುರುವಾಗಿದ್ದ ದಿನದಿಂದ ಅವರು ನನಗೆ ತುಂಬಾ ಹತ್ತಿರವಾಗಿದ್ದಾರೆ. ನಾನು ಇಷ್ಟ ಪಡುವ ಏಕೈಕ ನಟ ಅಂದ್ರೆ ಅಪ್ಪು ಸರ್. ಅವರನ್ನು ಭೇಟಿಯಾದ ಮೇಲೆ ಅವರ ಗುಣ, ವ್ಯಕ್ತಿತ್ವಕ್ಕೆ ನಾನು ಅಭಿಮಾನಿಯಾದೆ ಎಂದು ಹಲವು ಭಾರೀ ಭಾವುಕರಾಗಿದ್ದರು.

ಗುರುವಾರ ಬೆಂಗಳೂರಿನ ಕಗ್ಗಲಿಪುರ ಬಳಿಯ ಹೊರವಲಯದ ರೆಸಾರ್ಟ್‌ನಲ್ಲಿ ಮದುವೆ ನೆರವೇರಿದ್ದು, ನಟ ಶರಣ್, ಹಿರಿಯ ನಟಿ ಪ್ರೇಮ, ಡಾಲಿ ಧನಂಜಯ್, ಚೈತ್ರಾ ಆಚಾರ್, ನಾಗಭೂಷಣ, ಗಾಯಕ ವಿಜಯಪ್ರಕಾಶ್, ನಟ ವಿಜಯ ರಾಘವೇಂದ್ರ ಸೇರಿದಂತೆ ಕಿರುತೆರೆ ಕಲಾವಿದರು, ಚಿತ್ರೋದ್ಯಮದ ಗಣ್ಯರು ನವಜೋಡಿಗೆ ಶುಭ ಹಾರೈಸಿದ್ದಾರೆ.

The post ಸಂಭ್ರಮದಲ್ಲೂ ಅಪ್ಪು ಮರೆತಿಲ್ಲ ಅನುಶ್ರೀ … appeared first on Good News 24x7.

]]>
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರೂಪಕಿ : ಮೂರು ಗಂಟಲ್ಲಿ ಒಂದಾದ ರೋಷನ್ ಅನುಶ್ರೀ ! https://www.goodnews24x7.com/dampatya-jivanakke-kali%e1%b9%ad%e1%b9%ada-nirupaki-muru-ga%e1%b9%87%e1%b9%adalli-ondada-ro%e1%b9%a3an-anusri-anchoranushree-kannadaactressmarriedlife-kanna%e1%b8%8dada-na%e1%b9%adi-s%e1%b9%ad/ Thu, 28 Aug 2025 05:47:37 +0000 https://www.goodnews24x7.com/?p=6870 ಕನ್ನಡದ ನಟಿ, ಸ್ಟಾರ್ ನಿರೂಪಕಿ ಅನುಶ್ರೀ ಅವರು ಇಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಬೆಳಗ್ಗೆ 10.56ಕ್ಕೆ ರೋಷನ್ ಅನುಶ್ರೀಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ ಈ ಇಬ್ಬರ ಮದುವೆಯೂ ಬೆಂಗಳೂರಿನ ಹೊರವಲಯದ ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್ ತಿಟ್ಟಹಳ್ಳಿ, ಕಗ್ಗಲಿಪುರದಲ್ಲಿ…

The post ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರೂಪಕಿ : ಮೂರು ಗಂಟಲ್ಲಿ ಒಂದಾದ ರೋಷನ್ ಅನುಶ್ರೀ ! appeared first on Good News 24x7.

]]>

ಕನ್ನಡದ ನಟಿ, ಸ್ಟಾರ್ ನಿರೂಪಕಿ ಅನುಶ್ರೀ ಅವರು ಇಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಬೆಳಗ್ಗೆ 10.56ಕ್ಕೆ ರೋಷನ್ ಅನುಶ್ರೀಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ

ಈ ಇಬ್ಬರ ಮದುವೆಯೂ ಬೆಂಗಳೂರಿನ ಹೊರವಲಯದ ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್ ತಿಟ್ಟಹಳ್ಳಿ, ಕಗ್ಗಲಿಪುರದಲ್ಲಿ ನಡೆಯುತ್ತಿದೆ. ಕೊಡಗು ಮೂಲದ ರಾಮಮೂರ್ತಿ ಹಾಗೂ ಸಿಸಿಲಿಯಾ ಅವರ ಪುತ್ರ ರೋಷನ್ ಜೊತೆ ಅನುಶ್ರೀ ವಿವಾಹ ಆಗಿದ್ದಾರೆ. ಇನ್ನೂ, ನಿರೂಪಕಿ ಅನುಶ್ರೀ ಹಾಗೂ ರೋಷನ್​ ಅದ್ಧೂರಿ ಮದುವೆಗೆ ಸ್ಟಾರ್ ಸೆಲೆಬ್ರಿಟಿಗಳು ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ.

ಅನುಶ್ರೀ ಹಾಗೂ ರೋಷನ್ ಅದ್ಧೂರಿಯಾಗಿ ಅರಶಿಣ ಶಾಸ್ತ್ರದಲ್ಲಿ ಮಿಂದೆದ್ದಿದ್ದಾರೆ. ಮುಖಕ್ಕೆ ಅರಿಶಿಣ ಹಚ್ಚಿಕೊಂಡು ಅನುಶ್ರೀ ಹಾಗೂ ರೋಷನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

The post ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರೂಪಕಿ : ಮೂರು ಗಂಟಲ್ಲಿ ಒಂದಾದ ರೋಷನ್ ಅನುಶ್ರೀ ! appeared first on Good News 24x7.

]]>