match Archives - Good News 24x7 https://www.goodnews24x7.com/tag/match/ Kannada Tue, 14 Oct 2025 08:21:49 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg match Archives - Good News 24x7 https://www.goodnews24x7.com/tag/match/ 32 32 ವೆಸ್ಟ್​ ವಿಂಡೀಸ್​ ವಿಂಡೀಸ್​ ವಿರುದ್ಧದ ಟೆಸ್ಟ್ ಸರಣಿ ಕ್ಲೀನ್​ ಸ್ವೀಪ್.. ಮ್ಯಾಚ್​ ಗೆಲ್ಲಿಸಿ ಸಂಭ್ರಮಿಸಿದ ರಾಹುಲ್ https://www.goodnews24x7.com/west-indies-clean-sweeps-test-series-against-west-indies-rahul-celebrates-after-winning-the-match/ Tue, 14 Oct 2025 08:21:49 +0000 https://www.goodnews24x7.com/?p=7709 ವೆಸ್ಟ್​ ವಿಂಡೀಸ್​ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್​ ಸ್ವೀಪ್ ಮಾಡಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಮೂಲಕ ಶುಬ್ಮನ್ ಗಿಲ್ ಪಡೆ ಟೆಸ್ಟ್​ ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ಬರೆದಿದೆ. ವೆಸ್ಟ್​ ವಿಂಡೀಸ್​…

The post ವೆಸ್ಟ್​ ವಿಂಡೀಸ್​ ವಿಂಡೀಸ್​ ವಿರುದ್ಧದ ಟೆಸ್ಟ್ ಸರಣಿ ಕ್ಲೀನ್​ ಸ್ವೀಪ್.. ಮ್ಯಾಚ್​ ಗೆಲ್ಲಿಸಿ ಸಂಭ್ರಮಿಸಿದ ರಾಹುಲ್ appeared first on Good News 24x7.

]]>

ವೆಸ್ಟ್​ ವಿಂಡೀಸ್​ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್​ ಸ್ವೀಪ್ ಮಾಡಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಮೂಲಕ ಶುಬ್ಮನ್ ಗಿಲ್ ಪಡೆ ಟೆಸ್ಟ್​ ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ಬರೆದಿದೆ.
ವೆಸ್ಟ್​ ವಿಂಡೀಸ್​ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್​ ಸ್ವೀಪ್ ಮಾಡಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಮೂಲಕ ಶುಬ್ಮನ್ ಗಿಲ್ ಪಡೆ ಟೆಸ್ಟ್​ ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ಬರೆದಿದೆ.

ಮೊದಲ ದಿನ ಟಾಸ್​ ಗೆದ್ದು ಬ್ಯಾಟ್ ಮಾಡಿದ್ದ ಭಾರತ ತಂಡ, ಒಟ್ಟು 518 ರನ್​ಗಳಿಸಿ ಡಿಕ್ಲೇರ್​ ಮಾಡಿಕೊಂಡಿತ್ತು. ಪ್ರತಿಯಾಗಿ ಬ್ಯಾಟಿಂಗ್​​ಗೆ ಇಳಿದ್ದ ವಿಂಡೀಸ್​, ನಿನ್ನೆಯ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 140 ರನ್​ಗಳಿಸಿತ್ತು. ಅಂತೆಯೇ ಬ್ಯಾಟಿಂಗ್​ಗೆ ಇಳಿದ ವಿಂಡೀಸ್ 248 ರನ್​​ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಗಿ, ಫಾಲೋ ಆನ್ ಸುಳಿಗೆ ಸಿಲುಕಿತ್ತು.

270 ರನ್​ಗಳ ಹಿನ್ನಡೆ ಅನುಭವಿಸಿದ ವಿಂಡೀಸ್, ಫಾಲೋ ಆನ್ ಪ್ರಕಾರ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಆರಂಭಿಸಿತು. ಎರಡನೇ ಅವಕಾಶದಲ್ಲಿ ಒಳ್ಳೆಯ ಪೈಪೋಟಿ ಕೊಟ್ಟ ವಿಂಡೀಸ್ ಪಡೆ, 390 ರನ್​ಗಳಿಸಿ ಆಲೌಟ್ ಆಯಿತು. ಆ ಮೂಲಕ ಭಾರತದ ಗೆಲುವಿಗೆ 121 ರನ್​ ಬೇಕಿತ್ತು.

ಈ ಗುರಿಯನ್ನು ನಿನ್ನೆ ಮಧ್ಯಾಹ್ನದಿಂದ ಬೆನ್ನು ಹತ್ತಿದ್ದ ಗಿಲ್ ಪಡೆ ಇಂದು ಬೆಳಗ್ಗೆ ಗೆದ್ದು ಬೀಗಿದೆ. ಜೈಸ್ವಾಲ್, ಸಾಯಿ ಸುದರ್ಶನ್, ಗಿಲ್ ಸೇರಿ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿದೆ. ತಾಳ್ಮೆಯ ಆಟವನ್ನಾಡಿದ ಕನ್ನಡಿಗ ಕೆಎಲ್ ರಾಹುಲ್ ತಂಡವನ್ನು ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾದರು. 108 ಬಾಲ್​ಗಳನ್ನು ಎದುರಿಸಿ ಎರಡು ಸಿಕ್ಸರ್, ಆರು ಬೌಂಡರಿಯೊಂದಿಗೆ 58 ರನ್​ಗಳಿಸಿ ಅಜಯರಾಗಿ ಉಳಿದರು. ಇನ್ನು ಮೊದಲ ಇನ್ನಿಂಗ್ಸ್​ನಲ್ಲಿ 38 ರನ್​ಗಳ ಕಾಣಿಕೆ ನೀಡಿದ್ದರು. ಈ ಗೆಲುವಿನೊಂದಿಗೆ ಶುಬ್ಮನ್ ಗಿಲ್ ನಾಯಕತ್ವಕ್ಕೆ ಮತ್ತೊಂದು ಸರಣಿ ಒಲಿದಿದೆ.

The post ವೆಸ್ಟ್​ ವಿಂಡೀಸ್​ ವಿಂಡೀಸ್​ ವಿರುದ್ಧದ ಟೆಸ್ಟ್ ಸರಣಿ ಕ್ಲೀನ್​ ಸ್ವೀಪ್.. ಮ್ಯಾಚ್​ ಗೆಲ್ಲಿಸಿ ಸಂಭ್ರಮಿಸಿದ ರಾಹುಲ್ appeared first on Good News 24x7.

]]>
ಸೂರ್ಯಕುಮಾರ್ ಸೇನೆಗೆ ಮತ್ತೊಂದು ವಿಜಯಮಾಲೆ. ಏಷ್ಯಾಕಪ್ ಫೈನಲ್ ಗೇರಿದ ಟೀಮ್ ಇಂಡಿಯಾ https://www.goodnews24x7.com/another-victory-for-suryakumar-sena-team-india-reaches-asia-cup-final/ Thu, 25 Sep 2025 07:54:41 +0000 https://www.goodnews24x7.com/?p=7611 ಬಾಂಗ್ಲಾದೇಶದ ವಿರುದ್ಧ ನಡೆದ ಏಷ್ಯಾಕಪ್ನ ಸೂಪರ್-4 ಪಂದ್ಯದಲ್ಲಿ ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ 41 ರನ್ಗಳಿಂದ ಭರ್ಜರಿ ಗೆಲುವು ದಾಖಲು ಮಾಡಿದೆ. ಈ ಮೂಲಕ ಏಷ್ಯಾಕಪ್ನಲ್ಲಿ ಸತತ ಐದು ಮ್ಯಾಚ್ಗಳಲ್ಲಿ ವಿಜಯಮಾಲೆ ಧರಿಸಿದೆ. ದುಬೈನ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ…

The post ಸೂರ್ಯಕುಮಾರ್ ಸೇನೆಗೆ ಮತ್ತೊಂದು ವಿಜಯಮಾಲೆ. ಏಷ್ಯಾಕಪ್ ಫೈನಲ್ ಗೇರಿದ ಟೀಮ್ ಇಂಡಿಯಾ appeared first on Good News 24x7.

]]>

ಬಾಂಗ್ಲಾದೇಶದ ವಿರುದ್ಧ ನಡೆದ ಏಷ್ಯಾಕಪ್ನ ಸೂಪರ್-4 ಪಂದ್ಯದಲ್ಲಿ ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ 41 ರನ್ಗಳಿಂದ ಭರ್ಜರಿ ಗೆಲುವು ದಾಖಲು ಮಾಡಿದೆ. ಈ ಮೂಲಕ ಏಷ್ಯಾಕಪ್ನಲ್ಲಿ ಸತತ ಐದು ಮ್ಯಾಚ್ಗಳಲ್ಲಿ ವಿಜಯಮಾಲೆ ಧರಿಸಿದೆ.

ದುಬೈನ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿ ಟೀಮ್ ಇಂಡಿಯಾವನ್ನು ಮೊದಲ ಬ್ಯಾಟಿಂಗ್ಗೆ ಆಹ್ವಾನ ಮಾಡಿತು. ಅದರಂತೆ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಅಭಿಷೇಕ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್ಗಳ ಟಾರ್ಗೆಟ್ ಅನ್ನು ನೀಡಿತ್ತು.

ಇದಾದ ಮೇಲೆ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ಆರಂಭದಲ್ಲೇ ದೊಡ್ಡ ಆಘಾತಕ್ಕೆ ಒಳಗಾಯಿತು. ಓಪನರ್ ತಾಂಜಿದ್ ಹಸನ್ ತಮೀಮ್ ಕೇವಲ 1 ರನ್ಗೆ ಔಟ್ ಆದರು. ಇವರ ನಂತರ ಬಂದ ಪರ್ವೇಜ್ ಹೊಸೇನ್ ಎಮನ್, ಓಪನರ್ ಸೈಫ್ ಹಸನ್ಗೆ ಉತ್ತಮ ಸಾಥ್ ಕೊಟ್ಟು 21 ರನ್ ಗಳಿಸಿ ಔಟ್ ಆದರು. ಇನ್ನೊಂದೆಡೆ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ್ದ ಸೈಫ್ ಹಸನ್ ಅರ್ಧಶತಕ ಬಾರಿಸಿ ಪಂದ್ಯದ ಕೊನೆವರೆಗೂ ಹೋರಾಟ ನಡೆಸಿದ್ದನು.

ಸೈಫ್ ಹಸನ್ ಕೊನೆವರೆಗೆ ಹೋರಾಟ ನಡೆಸಿ 51 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್ಗಳಿಂದ 69 ರನ್ ಗಳಿಸಿದರು. ತೋಹಿದ್ ಹೃದಯ್ 7, ಕ್ಯಾಪ್ಟನ್ ಜಾಕೀರ್ ಅಲಿ 4 ರನ್ ಬಿಟ್ಟರೇ ಉಳಿದ ಯಾವ ಬ್ಯಾಟರ್ ಕೂಡ 7 ರನ್ಗಳ ಗಡಿ ದಾಟಲಿಲ್ಲ. ಹೀಗಾಗಿ 19.3 ಓವರ್ಗಳಲ್ಲಿ ಕೇವಲ 127 ರನ್ಗೆ ಬಾಂಗ್ಲಾ ಆಟಗಾರರು ಆಲೌಟ್ ಆದರು. ಟೀಮ್ ಇಂಡಿಯಾ ವಿರುದ್ಧ ಬಾಂಗ್ಲಾದೇಶ ಸೋಲುಂಡಿತು. ಈ ವಿಜಯಮಾಲೆಯೊಂದಿಗೆ ಟೀಮ್ ಇಂಡಿಯಾ ಏಷ್ಯಾಕಪ್ ಫೈನಲ್ಗೆ ಎಂಟ್ರಿಕೊಟ್ಟಿದೆ.

The post ಸೂರ್ಯಕುಮಾರ್ ಸೇನೆಗೆ ಮತ್ತೊಂದು ವಿಜಯಮಾಲೆ. ಏಷ್ಯಾಕಪ್ ಫೈನಲ್ ಗೇರಿದ ಟೀಮ್ ಇಂಡಿಯಾ appeared first on Good News 24x7.

]]>
ಭಾರತ-ಪಾಕ್ ಮ್ಯಾಚ್ ನೋಡಲ್ಲ ಎಂದ ಪ್ರದೀಪ್ ಈಶ್ವರ್, ಕೇಂದ್ರ ಸರ್ಕಾರ ವಿರುದ್ಧ ಕಿಡಿ ಕಾರಿದ MLA ಪ್ರದೀಪ್ ಈಶ್ವರ್ https://www.goodnews24x7.com/bharata-pak-myac-no%e1%b8%8dalla-enda-pradip-isvar-kendra-sarkara-viruddha-ki%e1%b8%8di-karida-mla-pradip-isvar-asiacupindiapakistanbengalurumlapradeepeshwarcentralgovernmentteamagainstma/ Sun, 14 Sep 2025 13:01:19 +0000 https://www.goodnews24x7.com/?p=7544 ಬದ್ಧ ವೈರಿಯಾಗಿರುವ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಇವತ್ತು ಏಷ್ಯಾಕಪ್​ ಟಿ20 ಪಂದ್ಯವಾಡಲಿದೆ. ಈಗಾಗಲೇ ಎರಡು ತಂಡಗಳು ಭಾರೀ ಸಿದ್ಧತೆ ನಡೆಸಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಪಂದ್ಯ ಆರಂಭವಾಗಲಿದೆ. ಬೆಂಗಳೂರು: ಬದ್ಧ ವೈರಿಯಾಗಿರುವ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಇವತ್ತು ಏಷ್ಯಾಕಪ್​…

The post ಭಾರತ-ಪಾಕ್ ಮ್ಯಾಚ್ ನೋಡಲ್ಲ ಎಂದ ಪ್ರದೀಪ್ ಈಶ್ವರ್, ಕೇಂದ್ರ ಸರ್ಕಾರ ವಿರುದ್ಧ ಕಿಡಿ ಕಾರಿದ MLA ಪ್ರದೀಪ್ ಈಶ್ವರ್ appeared first on Good News 24x7.

]]>

ಬದ್ಧ ವೈರಿಯಾಗಿರುವ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಇವತ್ತು ಏಷ್ಯಾಕಪ್​ ಟಿ20 ಪಂದ್ಯವಾಡಲಿದೆ. ಈಗಾಗಲೇ ಎರಡು ತಂಡಗಳು ಭಾರೀ ಸಿದ್ಧತೆ ನಡೆಸಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಪಂದ್ಯ ಆರಂಭವಾಗಲಿದೆ.

ಬೆಂಗಳೂರು: ಬದ್ಧ ವೈರಿಯಾಗಿರುವ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಇವತ್ತು ಏಷ್ಯಾಕಪ್​ ಟಿ20 ಪಂದ್ಯವಾಡಲಿದೆ. ಈಗಾಗಲೇ ಎರಡು ತಂಡಗಳು ಭಾರೀ ಸಿದ್ಧತೆ ನಡೆಸಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಪಂದ್ಯ ಆರಂಭವಾಗಲಿದೆ. ಪಾಕ್ ವಿರುದ್ಧ ಭಾರತ ಅಖಾಡಕ್ಕೆ ಇಳಿಯಬಾರದು ಎಂದು ಹಲವೆಡೆ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಈ ಸಂಬಂಧ ಶಾಸಕ ಪ್ರದೀಪ್ ಈಶ್ವರ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯವನ್ನು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ನಿಲ್ಲಿಸಬಹುದಿತ್ತು. ಇವರು ಯಾವ ಮುಖ ಇಟ್ಟುಕೊಂಡು ಮ್ಯಾಚ್ ಆಡಿಸುತ್ತಿದ್ದಾರೆ. ಈ ಪಂದ್ಯವನ್ನು ರದ್ದು ಮಾಡಬೇಕಿತ್ತು. ಪಹಲ್ಗಾಮ್ ಘಟನೆಯ ನೋವು ನಮ್ಮಲ್ಲಿ ಇನ್ನು ಹಾಗೇ ಇದೆ ಎಂದು ಹೇಳಿದ್ದಾರೆ.
ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ ಮಗ ಜೈಶಾಗೆ ಬ್ಯುಸಿನೆಸ್​ ಮುಖ್ಯ. ಇಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಬಿ.ವೈ ವಿಜಯೇಂದ್ರ, ಶಾಸಕ ಬಸನಗೌಡ ಯತ್ನಾಳ್ ಅವರು ಪಾಕಿಸ್ತಾನ ಅಂತ ಬೊಬ್ಬೆ ಹಾಕುತ್ತಾರೆ. ಇವರಿಗೆ ಅದೇ ಧಮ್ಮು, ತಾಕತ್ ಇದ್ದರೇ ಕೇಂದ್ರ ಸರ್ಕಾರಕ್ಕೆ ಹೇಳಿ ಮ್ಯಾಚ್ ರದ್ದು ಮಾಡಿಸಲಿ. ಒಂದು ವೇಳೆ ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಿದ್ರೆ ಪಂದ್ಯ ರದ್ದು ಮಾಡಿಸುತ್ತಿದ್ದೇವು. ಪಹಲ್ಗಾಮ್ ಘಟನೆ ಇನ್ನೂ ಮರೆತಿಲ್ಲ, ನೋವಿದೆ. ಅದಕ್ಕಾಗಿ ಇಂದಿನ ಮ್ಯಾಚ್ ನೋಡಲ್ಲ ಎಂದು ಎಂಎಲ್​ಎ ಪ್ರದೀಪ್ ಈಶ್ವರ್​ ಅವರು ಹೇಳಿದ್ದಾರೆ.

ಕಳೆದ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಮೃತಪಟ್ಟಿದ್ದರು. ಇದರಲ್ಲಿ ಕರ್ನಾಟಕದವರು ಸೇರಿದ್ದಾರೆ. ಪಹಲ್ಗಾಮ್ ದಾಳಿಗೆ ಪಾಕಿಸ್ತಾನವೇ ಕಾರಣ. ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಕೂಡ ನಡೆದಿತ್ತು. ಈ ಎಲ್ಲಾ ಬೆಳವಣಿಗಳ ನಡುವೆ ಪಾಕ್ ವಿರುದ್ಧ ಭಾರತ ಪಂದ್ಯವಾಡುತ್ತಿರುವುದಕ್ಕೆ ವಿರೋಧ ಕೇಳಿ ಬರುತ್ತಿದೆ.

The post ಭಾರತ-ಪಾಕ್ ಮ್ಯಾಚ್ ನೋಡಲ್ಲ ಎಂದ ಪ್ರದೀಪ್ ಈಶ್ವರ್, ಕೇಂದ್ರ ಸರ್ಕಾರ ವಿರುದ್ಧ ಕಿಡಿ ಕಾರಿದ MLA ಪ್ರದೀಪ್ ಈಶ್ವರ್ appeared first on Good News 24x7.

]]>
ವೈಟ್ ಜೆರ್ಸಿಯಲ್ಲಿ ಫ್ಯಾನ್ಸ್ಗಳಿಂದ ‘ಕಿಂಗ್ ಕೊಹ್ಲಿ’ಗೆ ಗೌರವ. https://www.goodnews24x7.com/fans-pay-tribute-to-king-kohli-in-white-jersey/ Sat, 17 May 2025 10:38:02 +0000 https://www.goodnews24x7.com/?p=3936 ಕೆಲ ದಿನಗಳ ಹಿಂದೆ ಟೆಸ್ಟ್ ಕ್ರಿಕೆಟ್ಗೆ ಬೈ ಹೇಳಿದ ಕಿಂಗ್ ಕೊಹ್ಲಿಗೆ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಅಭಿಮಾನಿಗಳು ವೈಟ್ ಜೆರ್ಸಿ ಧರಿಸಿ ಗೌರವ ಕೊಡಲು ರೆಡಿಯಾಗಿದ್ದಾರೆ. ರನ್ ಮಿಷನ್ ಎಂದೇ ಖ್ಯಾತಿ ಪಡೆದಿದ್ದ ವಿರಾಟ್ ಕೊಹ್ಲಿ ರನ್…

The post ವೈಟ್ ಜೆರ್ಸಿಯಲ್ಲಿ ಫ್ಯಾನ್ಸ್ಗಳಿಂದ ‘ಕಿಂಗ್ ಕೊಹ್ಲಿ’ಗೆ ಗೌರವ. appeared first on Good News 24x7.

]]>

ಕೆಲ ದಿನಗಳ ಹಿಂದೆ ಟೆಸ್ಟ್ ಕ್ರಿಕೆಟ್ಗೆ ಬೈ ಹೇಳಿದ ಕಿಂಗ್ ಕೊಹ್ಲಿಗೆ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಅಭಿಮಾನಿಗಳು ವೈಟ್ ಜೆರ್ಸಿ ಧರಿಸಿ ಗೌರವ ಕೊಡಲು ರೆಡಿಯಾಗಿದ್ದಾರೆ. ರನ್ ಮಿಷನ್ ಎಂದೇ ಖ್ಯಾತಿ ಪಡೆದಿದ್ದ ವಿರಾಟ್ ಕೊಹ್ಲಿ ರನ್ ಹಸಿವು ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಅದಾಗಲೇ ವೈಟ್ ಜೆರ್ಸಿ ಕ್ರಿಕೆಟ್ಗೆ ವಿದಾಯ ಹೇಳಿಬಿಟ್ಟಿದ್ದ ಕೊಹ್ಲಿಗೆ ಕೊನೆ ಪಕ್ಷ ಬಿಸಿಸಿಐ ವಿದಾಯದ ಪಂದ್ಯವಾಡಿಸಿ ಬೀಳ್ಕೊಡುಗೆ ನೀಡಬಹುದಿತ್ತು. ಆದ್ರೆ ಅದೂ ಆಗಲಿಲ್ಲ. ಹೀಗಾಗಿ ಆರ್ಸಿಬಿ ಫ್ಯಾನ್ಸ್ ನಾಳೆ ನಡೆಯುವ ಮ್ಯಾಚ್ಗೆ ನಂಬರ್ 18ರ ವೈಟ್ ಜೆರ್ಸಿ ಧರಿಸಿ ಕೊಹ್ಲಿಗೆ ಗೌರವ ನೀಡಲು ಸಿದ್ಧರಾಗಿದ್ದಾರೆ.

ಇಂಡಿಯಾ ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿ ಮಧ್ಯೆ ಕಿಂಗ್ ಕೊಹ್ಲಿಯ ಟೆಸ್ಟ್ ಕ್ರಿಕೆಟ್ನ ವಿದಾಯದ ಸುದ್ದಿ ಕೋಟ್ಯಂತರ ಅಭಿಮಾನಿಗಳಿಗೆ ಬರಸಿಡಿಲು ಬಂದಂತೆ ಎರಗಿತ್ತು. ಇನ್ನೂ ನಾಲ್ಕೈದು ವರ್ಷಗಳ ಕಾಲ ಕ್ರಿಕೆಟ್ ಆಡುವಷ್ಟು ಸಾಮರ್ಥ್ಯವಿದ್ದರೂ ವಿರಾಟ್ ದೃಢ ನಿರ್ಧಾರ ಮಾಡಿ ನಿವೃತ್ತಿ ಘೋಷಿಸಿದ್ದಾರೆ. 124 ಟೆಸ್ಟ್ ಮ್ಯಾಚ್ಗಳಲ್ಲಿ 9,230 ರನ್ ಹೊಡೆದಿದ್ದ ಕೊಹ್ಲಿಗೆ 770 ರನ್ ಗಳಿಸಿದರೆ 10000 ರನ್ಗಳ ಸರದಾರನಾಗುತ್ತಿದ್ದರು. ಆದರೆ ದಾಖಲೆಗೆ ತಲೆಕೆಡಿಸಕೊಳ್ಳದ ಕೊಹ್ಲಿ ಈಗಾಗಲೇ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.ಬಿಸಿಸಿಐ ಆದರೂ ಒಂದು ಟೆಸ್ಟ್ ಮ್ಯಾಚ್ ಆಡುವಂತೆ ವಿನಂತಿ ಮಾಡಿ, ವಿದಾಯದ ಬೀಳ್ಕೊಡುಗೆ ಮಾಡಬಹುದಿತ್ತು ಅದನ್ನೂ ಮಾಡಲಿಲ್ಲ. ಇದೀಗ ಅಭಿಮಾನಿಗಳು, ಬಿಸಿಸಿಐ ಬೀಳ್ಕೊಡುಗೆ ಕೊಡಲಿಲ್ಲ ಅಂದರೆ ಏನಂತೆ ನಾವು ಕೊಡ್ತೀವಿ ಅಂತಾ ಸಜ್ಜಾಗಿದ್ದಾರೆ. ಭಾರತ ಪಾಕ್ ಸಂಘರ್ಷದಿಂದ ನಿಂತಿದ್ದ ಐಪಿಎಲ್ ಶನಿವಾರದಿಂದ ಮತ್ತೆ ಶುರುವಾಗಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೋಲ್ಕತ್ತಾ ಮತ್ತು ಆರ್ಸಿಬಿ ನಡುವೆ ಮ್ಯಾಚ್ ನಡೆಯಲಿದೆ. ಆರ್ಸಿಬಿಯ ಪಂದ್ಯಕ್ಕೆ ರೆಡ್ ಜೆರ್ಸಿ ಧರಿಸಿ ಎಂಟ್ರಿ ಕೊಡ್ತಿದ್ದ ಫ್ಯಾನ್ಸ್ ನಾಳೆ ಕೊಹ್ಲಿಗಾಗಿ ನಂ. 18ರ ವೈಟ್ ಜೆರ್ಸಿ ಧರಿಸಿ ಸ್ಟೇಡಿಯಂಗೆ ಎಂಟ್ರಿ ಕೊಡಲಿದ್ದಾರೆ.

ಆ ಮೂಲಕ ಇಡೀ ಚಿನ್ನಸ್ವಾಮಿ ಸ್ಟೇಡಿಯಂನ 40,000 ಪ್ರೇಕ್ಷಕರು ವೈಟ್ ಅಂಡ್ ವೈಟ್ನಲ್ಲಿ ಕೊಹ್ಲಿಗೆ ಟೆಸ್ಟ್ ಕ್ರಿಕೆಟ್ನ ವಿದಾಯದ ಬೀಳ್ಕೊಡುಗೆ ನೀಡಲಿದ್ದಾರೆ. ದೇಶಕ್ಕಾಗಿ ರನ್ ಮಳೆಯನ್ನೇ ಹರಿಸಿ, ತನ್ನ ಅಗ್ರೆಶನ್ನಿಂದ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ ನಿಸ್ವಾರ್ಥ ಆಟಗಾರನಿಗೆ ಇದಕ್ಕಿಂತ ಇನ್ನೇನು ಬೇಕು ಹೇಳಿ. ಒಟ್ಟಿನಲ್ಲಿ ಇಡೀ ಸ್ಟೇಡಿಯಂನ ವೈಟ್ ಅಂಡ್ ವೈಟ್ನಲ್ಲಿ ನೋಡೋದು ನಿಜಕ್ಕೂ ಅಚ್ಚರಿಯೇ ಸರಿ. ಇದು ಕಿಂಗ್ ಕೊಹ್ಲಿ ಗಳಿಸಿದ ಆಗಾಧ ಸಂಪತ್ತು.

The post ವೈಟ್ ಜೆರ್ಸಿಯಲ್ಲಿ ಫ್ಯಾನ್ಸ್ಗಳಿಂದ ‘ಕಿಂಗ್ ಕೊಹ್ಲಿ’ಗೆ ಗೌರವ. appeared first on Good News 24x7.

]]>
ಇಂದು RCB ಹಾಗೂ KKR ಉಭಯ ತಂಡಗಳ ಭರ್ಜರಿ ಪೈಪೋಟಿ. https://www.goodnews24x7.com/today-rcb-and-kkr-will-have-a-fierce-competition/ Sat, 17 May 2025 08:31:07 +0000 https://www.goodnews24x7.com/?p=3923 IPL 2025 : ಇಂಡಿಯನ್ ಪ್ರೀಮಿಯರ್ ಲೀಗ್ನ 58ನೇ ಪಂದ್ಯದಲ್ಲಿ RCB ಹಾಗೂ KKR ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಆರ್ಸಿಬಿಗಿಂತ, ಕೆಕೆಆರ್ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್ನಲ್ಲಿ ಗೆದ್ದರೆ ಮಾತ್ರ KKR ತಂಡವು…

The post ಇಂದು RCB ಹಾಗೂ KKR ಉಭಯ ತಂಡಗಳ ಭರ್ಜರಿ ಪೈಪೋಟಿ. appeared first on Good News 24x7.

]]>

IPL 2025 : ಇಂಡಿಯನ್ ಪ್ರೀಮಿಯರ್ ಲೀಗ್ನ 58ನೇ ಪಂದ್ಯದಲ್ಲಿ RCB ಹಾಗೂ KKR ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಆರ್ಸಿಬಿಗಿಂತ, ಕೆಕೆಆರ್ ಪಾಲಿಗೆ ನಿರ್ಣಾಯಕ.

ಏಕೆಂದರೆ ಈ ಮ್ಯಾಚ್ನಲ್ಲಿ ಗೆದ್ದರೆ ಮಾತ್ರ KKR ತಂಡವು ಪ್ಲೇಆಫ್ ರೇಸ್ನಲ್ಲಿ ಉಳಿಯಲಿದೆ. ಅತ್ತ RCB ತಂಡ ಗೆಲುವು ದಾಖಲಿಸಿದರೆ ಪ್ಲೇಆಫ್ ಗೇರುವುದು ಖಚಿತವಾಗಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
ಇನ್ನು ಈ ಪಂದ್ಯದಲ್ಲಿ RCB ತಂಡ ಗೆದ್ದರೆ 18 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದೆ. ಅಲ್ಲದೆ ಆರ್ಸಿಬಿ ಪಡೆ ಪ್ಲೇಆಫ್ ಆಡುವುದು ಬಹುತೇಕ ಖಚಿತವಾಗಲಿದೆ. ಅಷ್ಟೇ ಅಲ್ಲದೆ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ಆರ್ಸಿಬಿ ತಂಡವು ಇಂದು ಗೆಲುವು ದಾಖಲಿಸಲೇಬೇಕು.


ಒಂದು ವೇಳೆ RCB ತಂಡವು KKR ವಿರುದ್ಧ ಸೋಲನುಭವಿಸಿದರೆ, ಅಂಕ ಪಟ್ಟಿಯಲ್ಲಿ ಬದಲಾವಣೆ ಏನೂ ಆಗುವುದಿಲ್ಲ. ಅಲ್ಲದೆ ಆರ್ಸಿಬಿ 16 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲೇ ಉಳಿಯಲಿದೆ. ಇದಾಗ್ಯೂ ಪ್ಲೇಆಫ್ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಬೇಕಿದ್ದರೆ SRH ಅಥವಾ LSG ವಿರುದ್ಧ ಜಯ ಸಾಧಿಸಲೇಬೇಕಾದ ಅನಿವಾರ್ಯತೆ ಎದುರಾಗಲಿದೆ.

ಹೀಗಾಗಿ RCB ತಂಡವು ಪ್ಲೇಆಫ್ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಇಂದಿನ ಪಂದ್ಯದಲ್ಲಿ ಗೆಲುವು ದಾಖಲಿಸಲೇಬೇಕು. ಈ ಮೂಲಕ 18 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ಆರ್ಸಿಬಿ ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ತನ್ನ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಬಹುದು. ಹೀಗಾಗಿ ಇಂದಿನ ಪಂದ್ಯದಲ್ಲಿ ರಾಯಲ್ ಪಡೆಯಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದಾಗಿದೆ.

The post ಇಂದು RCB ಹಾಗೂ KKR ಉಭಯ ತಂಡಗಳ ಭರ್ಜರಿ ಪೈಪೋಟಿ. appeared first on Good News 24x7.

]]>
ಟಾಸ್ ಗೆದ್ದು RCB ಬೌಲಿಂಗ್ ಆಯ್ಕೆ; ಯಾವುದೇ ಬದಲಾವಣೆ ಇಲ್ಲ https://www.goodnews24x7.com/rcb-win-toss-and-elect-to-bowl-no-change/ Sun, 13 Apr 2025 09:41:03 +0000 https://www.goodnews24x7.com/?p=3211 ಟಾಸ್ ಗೆದ್ದ ಆರ್ಸಿಬಿ ನಾಯಕ ರಜತ್ ಪಾಟಿದರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.  ಐಪಿಎಲ್ 2025 ರಲ್ಲಿ ಇಂದು ಡಬಲ್ ಹೆಡರ್ ಪಂದ್ಯ ನಡೆಯಲಿದೆ. ದಿನದ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯ…

The post ಟಾಸ್ ಗೆದ್ದು RCB ಬೌಲಿಂಗ್ ಆಯ್ಕೆ; ಯಾವುದೇ ಬದಲಾವಣೆ ಇಲ್ಲ appeared first on Good News 24x7.

]]>

ಟಾಸ್ ಗೆದ್ದ ಆರ್ಸಿಬಿ ನಾಯಕ ರಜತ್ ಪಾಟಿದರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.  ಐಪಿಎಲ್ 2025 ರಲ್ಲಿ ಇಂದು ಡಬಲ್ ಹೆಡರ್ ಪಂದ್ಯ ನಡೆಯಲಿದೆ. ದಿನದ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇದು ರಾಜಸ್ಥಾನ್ ರಾಯಲ್ಸ್ ತಂಡದ ತವರು ಮೈದಾನ. ಎರಡೂ ತಂಡಗಳು ಗೆಲುವಿನ ಹಾದಿಗೆ ಮರಳಲು ಪ್ರಯತ್ನಿಸಲಿವೆ. ಕಳೆದ ಪಂದ್ಯದಲ್ಲಿ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರು ವಿಕೆಟ್ಗಳಿಂದ ಸೋತಿತ್ತು. ಇತ್ತ ರಾಜಸ್ಥಾನ ತಂಡವನ್ನು ಗುಜರಾತ್ ಟೈಟಾನ್ಸ್ 58 ರನ್ಗಳಿಂದ ಸೋಲಿಸಿತು. ಮತ್ತೊಂದೆಡೆ, ರಾಜಸ್ಥಾನ್ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದ್ದರೆ, ಆರ್ಸಿಬಿ 5 ನೇ ಸ್ಥಾನದಲ್ಲಿದೆ.

The post ಟಾಸ್ ಗೆದ್ದು RCB ಬೌಲಿಂಗ್ ಆಯ್ಕೆ; ಯಾವುದೇ ಬದಲಾವಣೆ ಇಲ್ಲ appeared first on Good News 24x7.

]]>
Rcb ಗೆ ಗೆಲುವು ತಂದು ಕೊಡುತ್ತ Green Jersey? https://www.goodnews24x7.com/rcb-%e0%b2%97%e0%b3%86-%e0%b2%97%e0%b3%86%e0%b2%b2%e0%b3%81%e0%b2%b5%e0%b3%81-%e0%b2%a4%e0%b2%82%e0%b2%a6%e0%b3%81-%e0%b2%95%e0%b3%8a%e0%b2%a1%e0%b3%81%e0%b2%a4%e0%b3%8d%e0%b2%a4-green-jersey/ Sun, 13 Apr 2025 07:27:31 +0000 https://www.goodnews24x7.com/?p=3203 ಜೈಪುರ್: ರಜತ್ ಪಾಟಿದಾರ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು (ಏ.13) ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ. ಜೈಪುರದ ಸವಾಯ್ ಮಾನ್ಸಿಂಗ್ ಕ್ರಿಕೆಟ್ ಮೈದಾನದಲ್ಲಿ ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಲಿದೆ. ಆರ್ಸಿಬಿ ಆಟಗಾರರು ತಮ್ಮ ಕೆಂಪು ಮತ್ತು ಕಪ್ಪು ಮಿಶ್ರಿತ…

The post Rcb ಗೆ ಗೆಲುವು ತಂದು ಕೊಡುತ್ತ Green Jersey? appeared first on Good News 24x7.

]]>

ಜೈಪುರ್: ರಜತ್ ಪಾಟಿದಾರ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು (ಏ.13) ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ.


ಜೈಪುರದ ಸವಾಯ್ ಮಾನ್ಸಿಂಗ್ ಕ್ರಿಕೆಟ್ ಮೈದಾನದಲ್ಲಿ ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಲಿದೆ. ಆರ್ಸಿಬಿ ಆಟಗಾರರು ತಮ್ಮ ಕೆಂಪು ಮತ್ತು ಕಪ್ಪು ಮಿಶ್ರಿತ ಜೆರ್ಸಿ ಬದಲಿಗೆ ಹಸಿರು ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2011ರ ಐಪಿಎಲ್ನಿಂದಲೂ ಪ್ರತಿ ಆವೃತ್ತಿಯ ಒಂದು ಪಂದ್ಯದಲ್ಲಿ ಆರ್ಸಿಬಿ ಗ್ರೀನ್ ಜೆರ್ಸಿ ತೊಟ್ಟು ಪಂದ್ಯವನ್ನಾಡಲು ಆರಂಭಿಸಿತು. ಅಂದಿನಿಂದ ಆರ್ಸಿಬಿ ಪ್ರತಿ ವರ್ಷ ಐಪಿಎಲ್ನಲ್ಲಿ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ತೊಟ್ಟು ಆಡುತ್ತಿದೆ. ನಮ್ಮ ಸುತ್ತಲಿನ ಹಸಿರು ಪರಿಸರವನ್ನು ಸಂರಕ್ಷಿಸುವಂತೆ ಜಾಗೃತಿಗೊಳಿಸುವ ಉದ್ದೇಶವೂ ಇದ್ದಾಗಿದೆ.


ಆರ್ಸಿಬಿ ಸೋಲೇ ಹೆಚ್ಚು:

2011ರಲ್ಲಿ ಗೆಲುವು ಸಾಧಿಸಿದ್ದ ಆರ್ಸಿಬಿ 2012, 2013, 2014ರಲ್ಲಿ ಸೋಲು ಕಂಡಿತು. 2015ರಲ್ಲಿ ಯಾವುದೇ ಫಲಿತಾಂಶವಿಲ್ಲದೇ ಪಂದ್ಯ ರದ್ದಾಯಿತು. 2016ರಲ್ಲಿ ಗೆಲುವು ಸಾಧಿಸಿತ್ತು. ನಂತರ 2017, 2018, 2019, 2020ರಲ್ಲಿ ಸೋತಿತ್ತು. 2021 ನೀಲಿ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದರೂ ಸೋಲು ಕಂಡಿತ್ತು. 2023ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ತವರು ಕ್ರೀಡಾಂಗಣದಲ್ಲೇ ಗೆಲುವು ಸಾಧಿಸಿತ್ತು. ಆದ್ರೆ ಕಳೆದ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ರೈಡರ್ಸ್ ವಿರುದ್ಧ ಕೇವಲ 1 ರನ್ಗಳಿಂದ ವಿರೋಚಿತ ಸೋಲು ಕಂಡಿತ್ತು. ಇದುವರೆಗೆ 14 ಪಂದ್ಯಗಳ ಪೈಕಿ 9ರಲ್ಲಿ ಸೋಲು ಕಂಡಿದ್ದು, 4ರಲ್ಲಿ ಗೆಲುವು ಸಾಧಿಸಿದೆ. 1 ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇಂದಿನ ಪಂದ್ಯದಲ್ಲಿ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಪುಟಿದೇಳುತ್ತಾ ಆರ್ಸಿಬಿ?

ಪ್ರಸಕ್ತ ಆವೃತ್ತಿಯಲ್ಲಿ ಆಡಿರುವ 5 ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಐತಿಹಾಸಿಕ ಗೆಲುವು ದಾಖಲಿಸಿ, ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ. ಅಲ್ಲದೇ ಕಳೆದ ಎರಡೂ ಪಂದ್ಯಗಳಲ್ಲಿ ತವರಿನಲ್ಲೇ ಸೋತಿರುವುದು ಬೇಸರದ ಸಂಗತಿ. ಇಂದಿನ ಪಂದ್ಯದಲ್ಲಿ ಆರ್ಸಿಬಿ ಪುಟಿದೇಳುತ್ತಾ ಎಂಬುದು ಪ್ರಶ್ನೆಯಾಗಿದೆ.

The post Rcb ಗೆ ಗೆಲುವು ತಂದು ಕೊಡುತ್ತ Green Jersey? appeared first on Good News 24x7.

]]>