Medical Archives - Good News 24x7 https://www.goodnews24x7.com/tag/medical/ Kannada Mon, 21 Jul 2025 08:06:00 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Medical Archives - Good News 24x7 https://www.goodnews24x7.com/tag/medical/ 32 32 ಕೆಆರ್ಎಸ್ ಹಿನ್ನೀರಿನಲ್ಲಿ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಜಲಸ*ಮಾಧಿ https://www.goodnews24x7.com/three-nursing-students-drown-in-krs-backwater/ Mon, 21 Jul 2025 08:06:00 +0000 https://www.goodnews24x7.com/?p=5162 ಮೈಸೂರು : ಪ್ರವಾಸ ಕ್ಕೆಂದು ಬಂದಿದ್ದ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮೈಸೂರು ತಾಲೂಕಿನ ಮೀನಾಕ್ಷಿಪುರದ ಕೆಆರ್ಎಸ್ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಮಂಡ್ಯದ ಸರ್ಕಾರಿ ವೈದ್ಯಕೀಯ ಕಾಲೇಜಿನ (ಮಿಮ್ಸ್) ನರ್ಸಿಂಗ್ ವಿದ್ಯಾರ್ಥಿಗಳಾದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ…

The post ಕೆಆರ್ಎಸ್ ಹಿನ್ನೀರಿನಲ್ಲಿ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಜಲಸ*ಮಾಧಿ appeared first on Good News 24x7.

]]>

ಮೈಸೂರು : ಪ್ರವಾಸ ಕ್ಕೆಂದು ಬಂದಿದ್ದ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮೈಸೂರು ತಾಲೂಕಿನ ಮೀನಾಕ್ಷಿಪುರದ ಕೆಆರ್ಎಸ್ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಮಂಡ್ಯದ ಸರ್ಕಾರಿ ವೈದ್ಯಕೀಯ ಕಾಲೇಜಿನ (ಮಿಮ್ಸ್) ನರ್ಸಿಂಗ್ ವಿದ್ಯಾರ್ಥಿಗಳಾದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಅನವಾಲು ಗ್ರಾಮದ ಪ್ರಶಾಂತ್ (21), ಚಾಮ ರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಸಂತೇಮರಹಳ್ಳಿಯ ಸಿದ್ದೇಶ್(22), ಕೊಪ್ಪಳ ಜಿಲ್ಲೆಯ ಕೃಷ್ಣ(21) ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟ ನರ್ಸಿಂಗ್ ವಿದ್ಯಾರ್ಥಿಗಳು.
ತುಂಬಿ ತುಳುಕುತ್ತಿರುವ ಕೆಆರ್ಎಸ್ ಜಲಾ ಶಯದ ಹಿನ್ನೀರಿನ ಪ್ರದೇಶಗಳು ಪ್ರವಾಸಿತಾಣವಾಗಿ ಮಾರ್ಪಟ್ಟಿದ್ದು, ಪ್ರತಿ ದಿನ ನೂರಾರು ಮಂದಿ ಪ್ರವಾಸಿಗರು ಹಿನ್ನೀರಿನ ಪ್ರದೇಶಕ್ಕೆ ಬಂದು ವಿಹರಿಸಿ ವಾಪಸ್ಸಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನರ್ಸಿಂಗ್ ಕಾಲೇಜಿನ 6 ವಿದ್ಯಾರ್ಥಿಗಳು 3 ಬೈಕ್ ಗಳಲ್ಲಿ ಭಾನುವಾರ ಬೆಳಗ್ಗೆ ವಿದ್ಯಾರ್ಥಿನಿಲಯ ದಿಂದ ಮೈಸೂರು ತಾಲೂಕಿನ ಮೀನಾಕ್ಷಿಪುರದ ಕೆಆರ್ಎಸ್ ಹಿನ್ನೀರಿನ ಪ್ರದೇಶಕ್ಕೆ ಪಿಕ್ನಿಕ್ ಬಂದಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಐವರು ವಿದ್ಯಾರ್ಥಿಗಳು ಈಜಲು ಮುಂದಾಗಿ ದ್ದರೆ, ಓರ್ವ ವಿದ್ಯಾರ್ಥಿ ದಡದಲ್ಲಿಯೇ ನಿಂತಿದ್ದ ಎನ್ನಲಾಗಿದೆ. ಕೆಲ ಸಮಯದ ನಂತರ ಈಜುತ್ತಿದ್ದ ಐವರು ವಿದ್ಯಾರ್ಥಿ ಗಳು ನೀರಿನ ಸೆಳೆತಕ್ಕೆ ಒಳಗಾಗಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರನ್ನು ದಡದಲ್ಲಿ ನಿಂತಿದ್ದ ರಕ್ಷಿಸಿದ್ದಾನೆ.
ಸ್ಥಳೀಯರು ಮತ್ತು ಇನ್ನಿತರ ಪ್ರವಾಸಿಗರು ನೆರವಿಗೆ ಬರುವ ವೇಳೆಗೆ ಮೂವರೂ ಹಿನ್ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದ್ದರು. ಇದರಿಂದ ಅವರನ್ನು ಸ್ಥಳೀಯರಿಗೆ ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಿನ್ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ಮುಳುಗಿರುವ ವಿಷಯ ತಿಳಿಯುತ್ತಿದ್ದಂತೆ ಇಲವಾಲ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಹೇಂದ್ರ ಸಿಬ್ಬಂದಿಗಳೊಂದಿಗೆ ಆಗಮಿಸಿ ಪರಿಶೀಲಿಸಿದರು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ನುರಿತ ಈಜುಗಾರರನ್ನು ಕರೆಸಿ ಸತತ 2 ಗಂಟೆ ಕಾರ್ಯಾಚರಣೆ ನಡೆಸಿದ ಬಳಿಕ ಸಂಜೆ 4 ಗಂಟೆಗೆ ಮೂವರು ವಿದ್ಯಾರ್ಥಿಗಳ ಮೃತದೇಹ ಪತ್ತೆಯಾ ಯಿತು.
ನಂತರ ಮಹಜರ್ ನಡೆಸಿ ಮೈಸೂರಿನ ಸರ್ಕಾರಿ ಮೆಡಿಕಲ್ ಕಾಲೇಜಿನ ಶವಾಗಾರಕ್ಕೆ ದೇಹಗಳನ್ನು ಸ್ಥಳಾಂತರಿಸ ಲಾಯಿತು. ಮೃತಪಟ್ಟ ವರು ವಿದ್ಯಾರ್ಥಿ ಗಳ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಸಂಜೆ ವೇಳೆಗೆ ಪಿರಿಯಾ ಪಟ್ಟಣದ ಪ್ರಶಾಂತ್ ಹಾಗೂ ಸಂತೇಮರ ಹಳ್ಳಿಯ ಸಿದ್ದೇಶ್ ಪೋಷಕರು ಶವಾ ಗಾರದ ಬಳಿ ಆಗಮಿಸಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಅವರ ಗೋಳಾಟ ಹೇಳತೀರದ್ದಾಗಿದೆ. ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸು ದಾರರಿಗೆ ದೇಹವನ್ನು ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಇಲವಾಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ.

The post ಕೆಆರ್ಎಸ್ ಹಿನ್ನೀರಿನಲ್ಲಿ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಜಲಸ*ಮಾಧಿ appeared first on Good News 24x7.

]]>
ಮದುವೆಯಾಗದೆ ತಾಯಿಯಾದ ನಟಿ ಭಾವನಾ! https://www.goodnews24x7.com/bhavana-becomes-a-mother-without-marriage/ Fri, 04 Jul 2025 09:34:51 +0000 https://www.goodnews24x7.com/?p=4904 ನಟಿ ಭಾವನಾ ಅಮ್ಮನಾಗುತ್ತಿದ್ದಾರೆ. ಅವರೀಗ ಏಳು ತಿಂಗಳ ಗರ್ಭಿಣಿಯಾಗಿದ್ದು ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಇದುವರೆಗೂ ಮದುವೆಯಾಗದ ಭಾವನಾ ಹೇಗೆ ಮಗು ಪಡೆದರು ಎಂದು ಆಶ್ಚರ್ಯವಾಗೋದು ನಿಜ. ಆದರೆ ಅವರು ಐವಿಎಫ್ ಮೂಲಕ ಮಗು ಪಡೆಯುತ್ತಿದ್ದು ತಮ್ಮ ಗರ್ಭದಲ್ಲೇ ಮಗುವನ್ನ…

The post ಮದುವೆಯಾಗದೆ ತಾಯಿಯಾದ ನಟಿ ಭಾವನಾ! appeared first on Good News 24x7.

]]>

ನಟಿ ಭಾವನಾ ಅಮ್ಮನಾಗುತ್ತಿದ್ದಾರೆ. ಅವರೀಗ ಏಳು ತಿಂಗಳ ಗರ್ಭಿಣಿಯಾಗಿದ್ದು ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಇದುವರೆಗೂ ಮದುವೆಯಾಗದ ಭಾವನಾ ಹೇಗೆ ಮಗು ಪಡೆದರು ಎಂದು ಆಶ್ಚರ್ಯವಾಗೋದು ನಿಜ. ಆದರೆ ಅವರು ಐವಿಎಫ್ ಮೂಲಕ ಮಗು ಪಡೆಯುತ್ತಿದ್ದು ತಮ್ಮ ಗರ್ಭದಲ್ಲೇ ಮಗುವನ್ನ ಹೆರುತ್ತಿರುವುದು ವಿಶೇಷ.

ನಟಿಯಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಭಾವನಾ ಸಿಂಗಲ್ ಜೀವನ ನಡೆಸುತ್ತಿದ್ದಾರೆ. ಮುಂದುವರೆದ ವೈದ್ಯಕೀಯ ತಂತ್ರಜ್ಞಾನದಲ್ಲೀಗ ಪುರುಷನ ದೈಹಿಕ ಸಂಪರ್ಕ ಇಲ್ಲದೆ ಈಗ ತಾಯಿಯಾಗಬಹುದು. ಹಾಗೆಯೇ ಭಾವನಾ ತಾಯಿಯಾಗುತ್ತಿದ್ದು ಅವರಿಗೀಗ ವಯಸ್ಸು 40ರ ಆಸುಪಾಸು.

ಭರತನಾಟ್ಯ ಕಲಾವಿದೆಯಾಗಿ ಫಿಟ್ ಆಗಿರುವ ಭಾವನಾ ಇದೀಗ ಮಗು ಹೆರಲು ಸಿದ್ಧರಾಗಿದ್ದು, ಅವಳಿ ಮಕ್ಕಳನ್ನು ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ಅವರು ತಾಯಿಯಾಗಲಿದ್ದಾರೆ. ಹೆಚ್ಚಿನ ವಿಚಾರಗಳನ್ನ ಅವರೇ ಹಂಚಿಕೊಳ್ಳಬೇಕಿದೆ.

The post ಮದುವೆಯಾಗದೆ ತಾಯಿಯಾದ ನಟಿ ಭಾವನಾ! appeared first on Good News 24x7.

]]>
ಇನ್ಮುಂದೆ ಭಾರತದಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸಹ ಪೈಲಟ್‌ಗಳಾಗಬಹುದು. https://www.goodnews24x7.com/now-arts-and-commerce-students-can-also-become-pilots-in-india/ Wed, 28 May 2025 11:57:37 +0000 https://www.goodnews24x7.com/?p=4102 ಪೈಲಟ್ ಆಗುವ ಕನಸು ಇನ್ನು ಮುಂದೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಭಾರತದಲ್ಲಿ ಪೈಲಟ್ ಆಗುವ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಲಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಈಗ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ವಾಣಿಜ್ಯ ಪೈಲಟ್ ಪರವಾನಾಗಿಗಾಗಿ ತರಬೇತಿ ಪಡೆಯಲು…

The post ಇನ್ಮುಂದೆ ಭಾರತದಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸಹ ಪೈಲಟ್‌ಗಳಾಗಬಹುದು. appeared first on Good News 24x7.

]]>

ಪೈಲಟ್ ಆಗುವ ಕನಸು ಇನ್ನು ಮುಂದೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಭಾರತದಲ್ಲಿ ಪೈಲಟ್ ಆಗುವ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಲಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಈಗ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ವಾಣಿಜ್ಯ ಪೈಲಟ್ ಪರವಾನಾಗಿಗಾಗಿ ತರಬೇತಿ ಪಡೆಯಲು ಸಾಧ್ಯವಾಗುವಂತೆ ಶಿಫಾರಸನ್ನು ಮಾಡಿದೆ. ಇಲ್ಲಿಯವರೆಗೆ ಈ ಅವಕಾಶ 12 ನೇ ತರಗತಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತವನ್ನು ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಿತ್ತು.  DGCA ಈ ಶಿಫಾರಸನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಿದೆ.

 

 

 

 

 

 

ಸಚಿವಾಲಯದಿಂದ ಅನುಮೋದನೆ ಪಡೆದ ನಂತರ, ಈ ಪ್ರಸ್ತಾವನೆಯು ಕಾನೂನು ಸಚಿವಾಲಯಕ್ಕೆ ಹೋಗುತ್ತದೆ, ಅದು ಅದನ್ನು ಅಧಿಸೂಚನೆ ಮಾಡುತ್ತದೆ. ಇದರ ನಂತರವೇ ಈ ಹೊಸ ನಿಯಮ ಜಾರಿಗೆ ಬರುತ್ತದೆ. ನಿಯಮಗಳನ್ನು ಬದಲಾಯಿಸಿದ ನಂತರ, ವೈದ್ಯಕೀಯ ಫಿಟ್ನೆಸ್ ಮತ್ತು ಇತರ ಪರೀಕ್ಷೆಗಳಲ್ಲಿ ಉತ್ತೀರ್ಣರಾದ 12 ನೇ ತರಗತಿಯಲ್ಲಿ ತೇರ್ಗಡೆಯಾದ ಯಾವುದೇ ವಿದ್ಯಾರ್ಥಿಯನ್ನು ಪೈಲಟ್ ಆಗಲು ಅರ್ಹರೆಂದು ಪರಿಗಣಿಸಲಾಗುತ್ತದೆ.

30 ವರ್ಷಗಳ ನಂತರ ಬದಲಾವಣೆ

 

 

 

 

 

1990 ರ ದಶಕದ ಮಧ್ಯಭಾಗದಿಂದ ಇಲ್ಲಿಯವರೆಗೆ, ಭಾರತದಲ್ಲಿ ಸಿಪಿಎಲ್ ತರಬೇತಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮಾತ್ರವಾಗಿತ್ತು. ಇದಕ್ಕೂ ಮೊದಲು 10ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದರೆ ಸಾಕಾಗುತ್ತಿತ್ತು. ಅನೇಕ ಹಿರಿಯ ಪೈಲಟ್ಗಳು ಇದನ್ನು ಹಳೆಯ ಮತ್ತು ನಿಷ್ಪ್ರಯೋಜಕ ನಿಯಮ ಎಂದು ಬಣ್ಣಿಸಿದ್ದರು. ಈ ಕಾರಣಕ್ಕಾಗಿ, ಕಳೆದ ಕೆಲವು ವರ್ಷಗಳಲ್ಲಿ, ಸಾವಿರಾರು ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳು ಸಿಪಿಎಲ್ ತರಬೇತಿ ಪಡೆಯಲು ಭೌತಶಾಸ್ತ್ರ ಮತ್ತು ಗಣಿತ ಪರೀಕ್ಷೆಗಳನ್ನು ಬರೆದು ಮತ್ತೆ ಸಿಪಿಎಲ್ ತರಬೇತಿಗೆ ಆಯ್ಕೆಯಾಗುತ್ತಿದ್ದರು. ಆದರೆ ಇನ್ಮುಂದೆ ಹಾಗಿಲ್ಲ ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳು ನೇರವಾಗಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಂತೆಯೇ ಪೈಲಟ್ ಆಗಲು ಅರ್ಹರು.

The post ಇನ್ಮುಂದೆ ಭಾರತದಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸಹ ಪೈಲಟ್‌ಗಳಾಗಬಹುದು. appeared first on Good News 24x7.

]]>
ಎನ್‌ಎಂಸಿಗೆ ವೈದ್ಯಕೀಯ ಸೀಟುಗಳ ಹೆಚ್ಚಳಕ್ಕೆ ಆಗ್ರಹ: ಸಚಿವ ಶರಣ ಪ್ರಕಾಶ್ ಪಾಟೀಲ್. https://www.goodnews24x7.com/nmc-urged-to-increase-medical-seats-minister-sharan-prakash-patil/ Wed, 23 Apr 2025 11:56:33 +0000 https://www.goodnews24x7.com/?p=3363 ಬೆಂಗಳೂರು : ನೀಟ್ ಆಕಾಂಕ್ಷಿಗಳ ಸಂಖ್ಯೆ ಮತ್ತು ಲಭ್ಯವಿರುವ ವೈದ್ಯಕೀಯ ಸೀಟುಗಳ ನಡುವಿನ ಅಂತರ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ನಮ್ಮ ಸರ್ಕಾರವು ದೇಶಾದ್ಯಂತ ಪದವಿಪೂರ್ವ ವೈದ್ಯಕೀಯ ಸೀಟುಗಳನ್ನು ಗಣನೀಯವಾಗಿ ಹೆಚ್ಚಿಸುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು (ಎನ್‌ಎಂಸಿ) ಆಗ್ರಹಿಸಿದೆ ಎಂದು ವೈದ್ಯಕೀಯ ಶಿಕ್ಷಣ,…

The post ಎನ್‌ಎಂಸಿಗೆ ವೈದ್ಯಕೀಯ ಸೀಟುಗಳ ಹೆಚ್ಚಳಕ್ಕೆ ಆಗ್ರಹ: ಸಚಿವ ಶರಣ ಪ್ರಕಾಶ್ ಪಾಟೀಲ್. appeared first on Good News 24x7.

]]>

ಬೆಂಗಳೂರು : ನೀಟ್ ಆಕಾಂಕ್ಷಿಗಳ ಸಂಖ್ಯೆ ಮತ್ತು ಲಭ್ಯವಿರುವ ವೈದ್ಯಕೀಯ ಸೀಟುಗಳ ನಡುವಿನ ಅಂತರ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ನಮ್ಮ ಸರ್ಕಾರವು ದೇಶಾದ್ಯಂತ ಪದವಿಪೂರ್ವ ವೈದ್ಯಕೀಯ ಸೀಟುಗಳನ್ನು ಗಣನೀಯವಾಗಿ ಹೆಚ್ಚಿಸುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು (ಎನ್‌ಎಂಸಿ) ಆಗ್ರಹಿಸಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಎಸ್‌ಎಬಿವಿಎಂಸಿ) 2019 ರ ಬ್ಯಾಚ್ನ ಪದವಿ ಪ್ರದಾನ ಸಮಾರಂಭದಲ್ಲಿ ಸಚಿವ ಶರಣ ಪ್ರಕಾಶ್ ಪಾಟೀಲ್ ಮಾತನಾಡಿದರು.
ಪ್ರತಿ ವರ್ಷ ಐದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗುತ್ತಾರೆ, ಆದರೆ ಇದಕ್ಕೆ ಪ್ರತಿಯಾಗಿ ಒಂದು ಲಕ್ಷ ವೈದ್ಯಕೀಯ ಸೀಟುಗಳು ಮಾತ್ರ ಲಭ್ಯವಿದೆ. ಇದರಿಂದ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರ ಹೆಚ್ಚಾಗುತ್ತಿದೆ ಎಂದು ಹೇಳಿದರು.
“ಈ ಅಸಮಾನತೆಯನ್ನು ತಕ್ಷಣ ನಿವಾರಿಸಬೇಕು. ಭಾರತದಲ್ಲಿ ತರಬೇತಿ ಪಡೆಯಲಿರುವ ವೈದ್ಯರು ವಿದೇಶದಲ್ಲಿಯೂ ಹೆಚ್ಚು ಮನ್ನಣೆ ಗಳಿಸುತ್ತಿದ್ದಾರೆ. ನಮ್ಮ ವೈದ್ಯರು ಜಗತ್ತಿನ ಎಲ್ಲೆಡೆ ಚಿಕಿತ್ಸೆ ಒದಗಿಸುತ್ತಿದ್ದಾರೆ” ಎಂದು ಅವರು ಹೇಳಿದರು,
ಭಾರತೀಯ ವೈದ್ಯರಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ
ಜಾಗತಿಕವಾಗಿ ಭಾರತೀಯ ವೈದ್ಯಕೀಯ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆ ಇದೆ. ಬೇಡಿಕೆ ಮತ್ತು ಲಭ್ಯತೆಯ ಅಂತರ ಕಡಿಮೆ ಮಾಡಲು ಎನ್‌ಎಂಸಿ ಮಧ್ಯಪ್ರವೇಶಿಸಬೇಕು” ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.
ವೇದಿಕೆಯ ಮೇಲೆ ಹಾಜರಿದ್ದ ಎನ್‌ಎಂಸಿ ಅಧ್ಯಕ್ಷರಾದ ಡಾ. ಬಿ.ಎನ್. ಗಂಗಾಧರ ಅವರಿಗೆ ಈ ಕುರಿತು ಸಚಿವರು ಮನವರಿಕೆ ಮಾಡಿಕೊಟ್ಟರು.
ಈ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಹೆಚ್ಚುವರಿಯಾಗಿ 800 ಪದವಿಪೂರ್ವ ಮತ್ತು 600 ಸ್ನಾತಕೋತ್ತರ ವೈದ್ಯಕೀಯ ಸೀಟುಗಳಿಗೆ ಅನುಮೋದನೆ ಕೋರಿ ಎನ್‌ಎಂಸಿ ಗೆ ಈಗಾಗಲೇ ಔಪಚಾರಿಕ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಶರಣ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದರು.

ಅತಿ ಶೀಘ್ರದಲ್ಲೇ ಪ್ರತಿ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು
ಆರೋಗ್ಯ ಮೂಲಸೌಕರ್ಯವನ್ನು ವಿಸ್ತರಿಸಲು ನಮ್ಮ ಕಾಂಗ್ರೆಸ್ ಸರ್ಕಾರ ಸದಾ ಬದ್ಧವಾಗಿದೆ. ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಈ ಪ್ರತಿಯೊಂದು ಕಾಲೇಜುಗಳು ಆಸ್ಪತ್ರೆಯನ್ನು ಹೊಂದಿರುತ್ತವೆ ಮತ್ತು ಪ್ರತಿ ಜಿಲ್ಲೆಯಲ್ಲಿ ಕ್ಯಾನ್ಸರ್ ಆರೈಕೆ ಘಟಕಗಳು, ಆಘಾತ ಕೇಂದ್ರಗಳು ಮತ್ತು ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸುವ ಗುರಿಯನ್ನು ನಾವು ಹೊಂದಿದ್ದೇವೆ” ಎಂದು ಶರಣ ಪ್ರಕಾಶ್ ಪಾಟೀಲ್ ವಿವರಿಸಿದರು.
“ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ಹಲವು ಯೋಜನೆಗಳಿಗೆ ಹಸಿರು ನಿಶಾನೆ ತೋರಿದ್ದಾರೆ. ಶೀಘ್ರದಲ್ಲೇ, ವೈದ್ಯಕೀಯ ಕಾಲೇಜುಗಳಿಲ್ಲದ ಜಿಲ್ಲೆಗಳಲ್ಲಿ ಸಂಪೂರ್ಣ ಸುಸಜ್ಜಿತ ಸಂಸ್ಥೆಗಳನ್ನು ಆರಂಭಿಸಲಾಗುತ್ತದೆ. ಇದು ಆರ್ಥಿಕವಾಗಿ ದುರ್ಬಲ ವರ್ಗಗಳ ಅರ್ಹ ವಿದ್ಯಾರ್ಥಿಗಳು ಸರ್ಕಾರಿ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಸಚಿವ ಶರಣ ಪ್ರಕಾಶ್ ಪಾಟೀಲರು ಆಶಯ ವ್ಯಕ್ತಪಡಿಸಿದರು.
ಎನ್‌ಎಂಸಿ ಅಧ್ಯಕ್ಷರಾದ ಡಾ. ಗಂಗಾಧರ ಅವರು ಭಾಷಣ ಮಾಡಿ, ಜಾಗತಿಕ ಮಟ್ಟದಲ್ಲಿ ಸುಮಾರು 3 ಕೋಟಿ ವೈದ್ಯರ ಕೊರತೆ ಇದೆ ಎಂದರು.
ಯುವ ಪೀಳಿಗೆಯು ವೈದ್ಯಕೀಯ ವೃತ್ತಿಯನ್ನು ಕೈಗೆತ್ತಿಕೊಳ್ಳಬೇಕು. ಭಾರತೀಯ ವೈದ್ಯರಿಗೆ ವಿಶ್ವಾದ್ಯಂತ ಹೆಚ್ಚಿನ ಬೇಡಿಕೆಯಿದೆ, ಗಟ್ಟಿಯಾದ ಶೈಕ್ಷಣಿಕ ಅಡಿಪಾಯ ಮತ್ತು ಇಂಗ್ಲಿಷ್ ಪ್ರಾವೀಣ್ಯತೆ ಹೊಂದಿರುವ ಭಾರತೀಯರು ವಿಶ್ವಮಟ್ಟದಲ್ಲಿ ಮನ್ನಣೆ ಗಳಿಸಿದ್ದಾರೆ. ವೈದ್ಯಕೀಯ ವೃತ್ತಿಪರರ ಸಂಖ್ಯೆ ಹೆಚ್ಚಳ ಮಾಡಲು ಎನ್‌ಎಂಸಿ ಯ ಪ್ರಮುಖ ಗುರಿಗಳಲ್ಲಿ ಒಂದಾಗಿದೆ” ಎಂದು ಹೇಳಿದರು.
ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ಬಿ.ಎಲ್ ಮತ್ತು ಎಸ್‌ಎಬಿವಿಎಂಸಿ ನಿರ್ದೇಶಕ ಡಾ. ಮನೋಜ್ ಕುಮಾರ್ ಹೆಚ್.ವಿ ಉಪಸ್ಥಿತರಿದ್ದರು.

The post ಎನ್‌ಎಂಸಿಗೆ ವೈದ್ಯಕೀಯ ಸೀಟುಗಳ ಹೆಚ್ಚಳಕ್ಕೆ ಆಗ್ರಹ: ಸಚಿವ ಶರಣ ಪ್ರಕಾಶ್ ಪಾಟೀಲ್. appeared first on Good News 24x7.

]]>