medicine Archives - Good News 24x7 https://www.goodnews24x7.com/tag/medicine/ Kannada Wed, 29 Apr 2026 08:42:21 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg medicine Archives - Good News 24x7 https://www.goodnews24x7.com/tag/medicine/ 32 32 ಕರಾವಳಿಯಲ್ಲಿ ಬಿಸಿಲಿನ ಅಬ್ಬರ: ಆರೋಗ್ಯ ಇಲಾಖೆ ಕಟ್ಟೆಚ್ಚರ https://www.goodnews24x7.com/heatwave-on-the-coast-health-department-on-high-alert9482-2/ Wed, 29 Apr 2026 08:42:21 +0000 https://www.goodnews24x7.com/?p=9482 ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ಬಿಸಿಲು ಮತ್ತು ಆರ್ದ್ರತೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಚಿಕಿತ್ಸಾ ಸೌಲಭ್ಯಗಳನ್ನು ಸಜ್ಜುಗೊಳಿಸಿದೆ.…

The post ಕರಾವಳಿಯಲ್ಲಿ ಬಿಸಿಲಿನ ಅಬ್ಬರ: ಆರೋಗ್ಯ ಇಲಾಖೆ ಕಟ್ಟೆಚ್ಚರ appeared first on Good News 24x7.

]]>

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ಬಿಸಿಲು ಮತ್ತು ಆರ್ದ್ರತೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಚಿಕಿತ್ಸಾ ಸೌಲಭ್ಯಗಳನ್ನು ಸಜ್ಜುಗೊಳಿಸಿದೆ.

ಆಸ್ಪತ್ರೆಗಳಲ್ಲಿ ವಿಶೇಷ ಸಿದ್ಧತೆ
ಬಿಸಿಲಿನ ತಾಪದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ತಕ್ಷಣದ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರತ್ಯೇಕ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ:

ತಾಲೂಕು ಆಸ್ಪತ್ರೆಗಳು: ತಲಾ 5 ವಿಶೇಷ ಬೆಡ್‌ಗಳು.

ಸಮುದಾಯ ಆರೋಗ್ಯ ಕೇಂದ್ರಗಳು: ತಲಾ 2 ವಿಶೇಷ ಬೆಡ್‌ಗಳು.

ಚರ್ಮದ ಕಾಯಿಲೆಗಳ ಹೆಚ್ಚಳ
ಬಿಸಿಲಿನ ತೀವ್ರತೆಯಿಂದಾಗಿ ಜಿಲ್ಲೆಯಲ್ಲಿ ಚರ್ಮದ ಕಾಯಿಲೆಗಳು ಕಾಣಿಸಿಕೊಳ್ಳಲಾರಂಭಿಸಿವೆ. ವಿಶೇಷವಾಗಿ ಬೆವರು ಸಾಲೆ, ಚರ್ಮದ ತುರಿಕೆ ಮತ್ತು ಕಜ್ಜಿಯಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ದಿನವೊಂದಕ್ಕೆ ಸರಾಸರಿ 3 ರಿಂದ 5 ರೋಗಿಗಳು ಇಂತಹ ಲಕ್ಷಣಗಳೊಂದಿಗೆ ಚಿಕಿತ್ಸೆಗೆ ಬರುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ
ಹೀಟ್ ಸ್ಟ್ರೋಕ್ ಸೇರಿದಂತೆ ಬಿಸಿಲಿನಿಂದ ಉಂಟಾಗುವ ಯಾವುದೇ ಪ್ರಕರಣಗಳು ದಾಖಲಾದಲ್ಲಿ, ತಕ್ಷಣವೇ ಮಾಹಿತಿಯನ್ನು ಆರೋಗ್ಯ ಇಲಾಖೆಯ ವೆಬ್ ಪೋರ್ಟಲ್‌ನಲ್ಲಿ ದಾಖಲಿಸುವಂತೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಓಆರ್‌ಎಸ್ (ORS) ಕಾರ್ನರ್ ಸೌಲಭ್ಯ
ನಿರ್ಜಲೀಕರಣ ತಡೆಗಟ್ಟಲು ಜಿಲ್ಲಾಸ್ಪತ್ರೆಯಿಂದ ಹಿಡಿದು ಪ್ರಾಥಮಿಕ ಆರೋಗ್ಯ ಕೇಂದ್ರಗಳವರೆಗೆ ‘ಓಆರ್‌ಎಸ್ ಕಾರ್ನರ್’ಗಳನ್ನು ಸ್ಥಾಪಿಸಲಾಗಿದೆ. ಔಷಧಗಳ ಕೊರತೆಯಾಗದಂತೆ ಸ್ಥಳೀಯವಾಗಿಯೇ ಖರೀದಿಸಲು ಅವಕಾಶ ನೀಡಲಾಗಿದ್ದು, ಕಳೆದ ಒಂದು ವಾರದಿಂದ ಓಆರ್‌ಎಸ್ ಪ್ಯಾಕೆಟ್‌ಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ.

ಗಮನಿಸಿ: ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಅವರ ನೇತೃತ್ವದಲ್ಲಿ ಮಂಗಳವಾರ ವಿಶೇಷ ಸಭೆ ನಡೆದಿದ್ದು, ಬಿಸಿಲಿನಿಂದ ಗಂಭೀರ ಸಮಸ್ಯೆ ಎದುರಾದ ರೋಗಿಗಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ರವಾನಿಸಲು ಸೂಚಿಸಲಾಗಿದೆ. ಸದ್ಯದ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಅಧಿಕೃತ ಹೀಟ್ ಸ್ಟ್ರೋಕ್ ಪ್ರಕರಣಗಳು ವರದಿಯಾಗಿಲ್ಲ.

The post ಕರಾವಳಿಯಲ್ಲಿ ಬಿಸಿಲಿನ ಅಬ್ಬರ: ಆರೋಗ್ಯ ಇಲಾಖೆ ಕಟ್ಟೆಚ್ಚರ appeared first on Good News 24x7.

]]>
11 ಮಕ್ಕಳು ಕೆಮ್ಮಿನ ಸಿರಪ್ ಸೇವಿಸಿ ಸಾ* https://www.goodnews24x7.com/11-children-die-after-consuming-cough-syrup/ Sat, 04 Oct 2025 08:49:47 +0000 https://www.goodnews24x7.com/?p=7661 ನವದೆಹಲಿ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಇತ್ತೀಚೆಗೆ 11 ಮಕ್ಕಳು ಸಾವನ್ನಪ್ಪಿದ ಘಟನೆಗೆ ಕೆಮ್ಮಿನ ಔಷಧ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಔಷಧದ ಮಾದರಿಯನ್ನು ಪರೀಕ್ಷಿಸಿ ಕ್ಲೀನ್‌ ಚಿಟ್ ನೀಡಿವೆ. ಮಕ್ಕಳ ಸಾವಿಗೆ ಔಷಧ…

The post 11 ಮಕ್ಕಳು ಕೆಮ್ಮಿನ ಸಿರಪ್ ಸೇವಿಸಿ ಸಾ* appeared first on Good News 24x7.

]]>

ನವದೆಹಲಿ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಇತ್ತೀಚೆಗೆ 11 ಮಕ್ಕಳು ಸಾವನ್ನಪ್ಪಿದ ಘಟನೆಗೆ ಕೆಮ್ಮಿನ ಔಷಧ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಔಷಧದ ಮಾದರಿಯನ್ನು ಪರೀಕ್ಷಿಸಿ ಕ್ಲೀನ್‌ ಚಿಟ್ ನೀಡಿವೆ. ಮಕ್ಕಳ ಸಾವಿಗೆ ಔಷಧ ಕಾರಣವಲ್ಲ ಎಂದು ಸಷ್ಟಪಡಿಸಿವೆ.

ಮಧ್ಯಪ್ರದೇಶದಲ್ಲಿ 9 ಮಕ್ಕಳು ಸಾವು: ಕಳೆದ 15 ದಿನದಲ್ಲಿ ಮಧ್ಯ ಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ 9 ಮಕ್ಕಳು ಮೃತಪಟ್ಟಿವೆ. ಈ ಮಕ್ಕಳ ಸಾವಿಗೆ ಕೋಲ್ಟಿಫ್ ಮತ್ತು ನೆಕ್‌ಸ್ಟೋ-ಡಿಎಸ್ ಕೆಮ್ಮಿನ ಔಷಧ ಸೇವನೆಯಿಂದ ಉಂಟಾದ ಕಿಡ್ನಿ ವೈಫಲ್ಯ ಕಾರಣ ಎಂದು ಪೋಷಕರು ಮತ್ತು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಮಧ್ಯ ಪ್ರದೇಶದ ಆರೋಗ್ಯ ಇಲಾಖೆಯು ಔಷಧದ ಪರೀಕ್ಷೆ ವೇಳೆ ಯಾವುದೇ ವಿಷಪೂರಿತ ಅಂಶ ಪತ್ತೆಯಾಗಿಲ್ಲ. ಔಷಧದ ನಿಷೇಧದ ಪ್ರಶ್ನೆಯೇ ಇಲ್ಲ. ಮಕ್ಕಳ ಸಾವಿಗೆ ಸಮಿತಿ ರಚಿಸಲಾಗಿದ್ದು, ತನಿಖೆ ಆರಂಭವಾಗಿದೆ ಎಂದು ಸ್ಪಷ್ಟಪಡಿಸಿದೆ.
ರಾಜಸ್ಥಾನದಲ್ಲಿ 2 ಮಕ್ಕಳ ಸಾವು: ರಾಜ ಸ್ಥಾನದ ಸಿಕಾರ್ ಮತ್ತು ಭರತ್‌ ಪುರ ಜಿಲ್ಲೆಗಳಲ್ಲಿ ತಲಾ ಒಂದೊಂದು ಸಾವಾಗಿದ್ದು, ಇಲ್ಲಿಯೂ ಸಹ ಔಷಧವೇ ಕಾರಣ ಎಂಬ ಆರೋಪವಿದೆ.

 

 

 

 

 

 

ತಮಿಳುನಾಡಿನಲ್ಲಿ ನಿಷೇಧ
ಮಕ್ಕಳ ಸಾವಿನ ಬೆನ್ನಲ್ಲೇ ತಮಿಳುನಾಡು ಸರ್ಕರ ಕೋಲ್ಟಿಫ್ ಸಿರಪ್ ಮೇಲೆ ನಿಷೇಧ ಹೇರಿದೆ. ತಮಿಳುನಾಡು ಔಷಧ ನಿಯಂತ್ರಣಾ ಮಂಡಳಿ ಈ ಕ್ರಮ ಕೈಗೊಂಡಿದೆ. ಘಟನೆ ಕುರಿತು ತನಿಖೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಆರೋಪವಿದೆ. ಆದರೆ ಅಲ್ಲಿನ ಸರ್ಕಾರವು ವೈದ್ಯರಿಗೆ ಕ್ಲೀನ್‌ ಚಿಟ್ ನೀಡಿದೆ. ರಾಜಸ್ಥಾನ ಔಷಧ ನಿಯಂತ್ರಣ ಮಂಡಳಿಯು ಔಷಧಗಳ ಪೂರೈಕೆಗೆ ತಾತ್ಕಾಲಿಕ ತಡೆ ನೀಡಿದೆ. ಎರಡೂ ಪ್ರಕರಣಗಳಲ್ಲಿಯೂ ಪೋಷಕರು ವೈದ್ಯರ ಸೂಚನೆಯಿಲ್ಲದೆಯೇ ಔಷಧ ನೀಡಿದ್ದೇ ಕಾರಣ ಎಂದು ಆರೋಗ್ಯ ಇಲಾಖೆ ಹೇಳಿದೆ.

2 ವರ್ಷದ ಮಕ್ಕಳಿಗೆ ಕೆಮ್ಮಿನೌಷಧ ಬೇಡ: ಕೇಂದ್ರದ ಎಚ್ಚರಿಕೆ
ಅತ್ತ ಕೇಂದ್ರ ಸರ್ಕಾರ ಕಫ್‌ಸಿರಪ್‌ನಿಂದ ಮಕ್ಕಳ ಸಾವು ಸಂಭವಿಸಿದೆ ಎಂಬ ಆರೋಪವನ್ನು ತಿರಸ್ಕರಿಸಿದೆ. ವೈದ್ಯಕೀಯ ಮತ್ತು ವೈಜ್ಞಾನಿಕ ಪರೀಕ್ಷೆಯಲ್ಲಿ ಸಿರಪ್‌ನಲ್ಲಿ ಯಾವುದೇ ವಿಷಪೂರಿತ ಅಂಶಗಳು ಪತ್ತೆಯಾಗಿಲ್ಲ. ಈ ತನಿಖೆ ಆರಂಭವಾಗಿದೆ ಎಂದು ಸ್ಪಷ್ಟಪಡಿಸಿದೆ.

ಜತೆಗೆ 2 ವರ್ಷದ ಒಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡಬಾರದೆಂದು ಆದೇಶಿಸಿದೆ. ಜೊತೆಗೆ ಕೆಮ್ಮಿನ ಔಷಧದ ಪರಿಣಾಮ ಎಂಬ ಯಾವುದೇ ಪ್ರಕರಣ ಬಂದಲ್ಲಿ ಖಾಸಗಿ ವೈದ್ಯರು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಬೇಕು ಎಂದು ಆದೇಶ ಹೊರಡಿಸಿದೆ.

The post 11 ಮಕ್ಕಳು ಕೆಮ್ಮಿನ ಸಿರಪ್ ಸೇವಿಸಿ ಸಾ* appeared first on Good News 24x7.

]]>
ಒಂಟಿತನಕ್ಕೆ ಬ್ರೇಕ್ ಹಾಕೋದು ಹೇಗೆ ? ಇಲ್ಲಿದೆ ಸಿಂಪಲ್ ಟಿಪ್ಸ್. https://www.goodnews24x7.com/%e0%b2%92%e0%b2%82%e0%b2%9f%e0%b2%bf%e0%b2%a4%e0%b2%a8%e0%b2%95%e0%b3%8d%e0%b2%95%e0%b3%86-%e0%b2%ac%e0%b3%8d%e0%b2%b0%e0%b3%87%e0%b2%95%e0%b3%8d-%e0%b2%b9%e0%b2%be%e0%b2%95%e0%b3%8b%e0%b2%a6%e0%b3%81/ Sat, 01 Feb 2025 06:07:30 +0000 https://www.goodnews24x7.com/?p=2063  ಒಂಟಿತನವು ತುಂಬಾನೇ ಅಪಾಯಕಾರಿ. ವಿಪರೀತವಾದರೆ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.  ವೈಯಕ್ತಿಕ ಜೀವನದ ಘಟನೆಗಳು, ಕಹಿ ಅನುಭವಗಳು ಕೂಡ ವ್ಯಕ್ತಿಯ ಜೊತೆಗೆ ಬೆರೆಯಲಾಗದೇ ಒಂಟಿಯಾಗಿಸಬಹುದು.  ಒಂಟಿತನವನ್ನು ಔಷಧದಿಂದ ಗುಣಪಡಿಸಲು ಸಾಧ್ಯವಿಲ್ಲದಿದ್ದರೂ ಕೆಲ ಬದಲಾವಣೆಗಳು ಈ…

The post ಒಂಟಿತನಕ್ಕೆ ಬ್ರೇಕ್ ಹಾಕೋದು ಹೇಗೆ ? ಇಲ್ಲಿದೆ ಸಿಂಪಲ್ ಟಿಪ್ಸ್. appeared first on Good News 24x7.

]]>

 ಒಂಟಿತನವು ತುಂಬಾನೇ ಅಪಾಯಕಾರಿ. ವಿಪರೀತವಾದರೆ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
 ವೈಯಕ್ತಿಕ ಜೀವನದ ಘಟನೆಗಳು, ಕಹಿ ಅನುಭವಗಳು ಕೂಡ ವ್ಯಕ್ತಿಯ ಜೊತೆಗೆ ಬೆರೆಯಲಾಗದೇ ಒಂಟಿಯಾಗಿಸಬಹುದು.
 ಒಂಟಿತನವನ್ನು ಔಷಧದಿಂದ ಗುಣಪಡಿಸಲು ಸಾಧ್ಯವಿಲ್ಲದಿದ್ದರೂ ಕೆಲ ಬದಲಾವಣೆಗಳು ಈ ಸಮಸ್ಯೆಯಿಂದ ಹೊರಬರಲು ಸಾಧ್ಯ.

 ಒಂಟಿತನ ಅನುಭವಿಸುವ ವ್ಯಕ್ತಿಗಳು ನೃತ್ಯ, ಅಡುಗೆ, ಪ್ರಯಾಣ ಹೀಗೆ ತಮ್ಮಗಿಷ್ಟದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.
 ಒಬ್ಬರೇ ಹೆಚ್ಚು ಹೊತ್ತು ಕಳೆಯಬೇಡಿ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಬೆರೆತು ಕೆಲಸ ಮಾಡಿ.
 ಈ ಸಮಸ್ಯೆಯಿಂದ ಬಳಲುತ್ತಿರುವವರು ಟಿವಿ, ಮೊಬೈಲ್ ಸೋಶಿಯಲ್ ಮೀಡಿಯಾದಿಂದ ಸಾಧ್ಯವಾದಷ್ಟು ದೂರವಿರಿ.

 ಒಂಟಿಯೆನಿಸಿದರೆ ಸಾಕು ಪ್ರಾಣಿಗಳನ್ನು ಸಾಕಿ. ಈ ಪ್ರಾಣಿಗಳೊಂದಿಗೆ ಆಟವಾಡಿ ಸಮಯ ಕಳೆಯುವುದು ನಿಮ್ಮ ಮನಸ್ಸಿಗೆ ಖುಷಿ ತಂದು ಕೊಡುತ್ತದೆ.

The post ಒಂಟಿತನಕ್ಕೆ ಬ್ರೇಕ್ ಹಾಕೋದು ಹೇಗೆ ? ಇಲ್ಲಿದೆ ಸಿಂಪಲ್ ಟಿಪ್ಸ್. appeared first on Good News 24x7.

]]>
ಮುದ್ದಾದ ಅವಳಿ ಮಕ್ಕಳ ಜೀವ ತೆಗೆದ ತಾಯಿ., ರಾಜಸ್ಥಾನದಲ್ಲಿ ಹೃದಯ ವಿದ್ರಾವಕ ಘಟನೆ. https://www.goodnews24x7.com/%e0%b2%ae%e0%b3%81%e0%b2%a6%e0%b3%8d%e0%b2%a6%e0%b2%be%e0%b2%a6-%e0%b2%85%e0%b2%b5%e0%b2%b3%e0%b2%bf-%e0%b2%ae%e0%b2%95%e0%b3%8d%e0%b2%95%e0%b2%b3-%e0%b2%9c%e0%b3%80%e0%b2%b5-%e0%b2%a4%e0%b3%86/ Fri, 03 Jan 2025 10:10:40 +0000 https://www.goodnews24x7.com/?p=1481 ರಾಜಸ್ಥಾನದ ಸಿರೋಹಿ ಜಿಲ್ಲೆಯಿಂದ ಹೃದಯ ವಿದ್ರಾವಕ ಸುದ್ದಿ ಹೊರಬಿದ್ದಿದೆ. ಹಡೆದ ತಾಯಿ ಒಬ್ಬಳು ಪೈಶಾಚಿಕ ಕೃತ್ಯ ನಡೆಸಿದ್ದು, ಮುದ್ದಾದ ಅವಳಿ ಮಕ್ಕಳಿಗೆ ಮದ್ದು ನೀಡಿದ್ದಾಳೆ. ಬಳಿಕ ತನ್ನ ಬದುಕಿಗೂ ಫುಲ್ಸ್ಟಾಪ್ ಇಟ್ಟಿದ್ದಾಳೆ. ಸಿರೋಹಿ ಜಿಲ್ಲೆಯ ಶಿವಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…

The post ಮುದ್ದಾದ ಅವಳಿ ಮಕ್ಕಳ ಜೀವ ತೆಗೆದ ತಾಯಿ., ರಾಜಸ್ಥಾನದಲ್ಲಿ ಹೃದಯ ವಿದ್ರಾವಕ ಘಟನೆ. appeared first on Good News 24x7.

]]>

ರಾಜಸ್ಥಾನದ ಸಿರೋಹಿ ಜಿಲ್ಲೆಯಿಂದ ಹೃದಯ ವಿದ್ರಾವಕ ಸುದ್ದಿ ಹೊರಬಿದ್ದಿದೆ. ಹಡೆದ ತಾಯಿ ಒಬ್ಬಳು ಪೈಶಾಚಿಕ ಕೃತ್ಯ ನಡೆಸಿದ್ದು, ಮುದ್ದಾದ ಅವಳಿ ಮಕ್ಕಳಿಗೆ ಮದ್ದು ನೀಡಿದ್ದಾಳೆ. ಬಳಿಕ ತನ್ನ ಬದುಕಿಗೂ ಫುಲ್ಸ್ಟಾಪ್ ಇಟ್ಟಿದ್ದಾಳೆ.
ಸಿರೋಹಿ ಜಿಲ್ಲೆಯ ಶಿವಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಶಿವಗಂಜ್ ಪ್ರದೇಶದಲ್ಲಿ ಕ್ರೂರಿ ತಾಯಿ ರೇಖಾ ವಾಸವಿದ್ದಳು. ಈಕೆಗೆ ಅವಳಿ ಗಂಡುಮಕ್ಕಳು ಜನಿಸಿದ್ದರು. ಮಕ್ಕಳಿಗೆ ಕೇವಲ 1.25 ವರ್ಷವಾಗಿತ್ತು. ವಾಸ್ತವಾಗಿ ಈಕೆಗೆ ಅವಳಿ ಮಕ್ಕಳು ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಹಾಲಲ್ಲಿ ವಿಷ ಹಾಕಿ ಮಕ್ಕಳ ಕತೆ ಮುಗಿಸಿದ್ದಾಳೆ ಎಂದು ತಿಳಿಸಿದ್ದಾರೆ.

ಆರೋಪಿ ರೇಖಾಗೆ ಗಂಡ ಇದ್ದಾನೆ. ಆತನ ಹೆಸರು ಯೋಗೇಶ್. ತನ್ನ ಅವಳಿ ಮಕ್ಕಳಿಗೆ ಪೂರ್ವಾಂಶ್ ಮತ್ತು ಪೂರ್ವಿತ್ ಎಂದು ಹೆಸರಿಟ್ಟಿದ್ದಳು. ಬುಧವಾರ ಮಧ್ಯಾಹ್ನ ರೇಖಾ ಇಬ್ಬರು ಪುತ್ರರಿಗೆ ವಿಷ ಕೊಟ್ಟಿದ್ದಾಳೆ. ಜೊತೆಗೆ ತಾನೂ ವಿಷ ಸೇವಿಸಿದ್ದಾಳೆ.
ವಿಷ ಸೇವನೆ ಬಳಿಕ ರೇಖಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಗೆ ಆಗಮಿಸಿದ್ದ ಪೊಲೀಸರು ಆಕೆಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕೆಯೂ ಇದೀಗ ಬದುಕಿನ ಜರ್ನಿ ಮುಗಿಸಿದ್ದಾಳೆ. ಮಕ್ಕಳು, ಪತ್ನಿಯನ್ನು ಕಳೆದುಕೊಂಡ ಯೋಗೇಶ್ ಕಂಗಾಲಾಗಿದ್ದಾನೆ.

The post ಮುದ್ದಾದ ಅವಳಿ ಮಕ್ಕಳ ಜೀವ ತೆಗೆದ ತಾಯಿ., ರಾಜಸ್ಥಾನದಲ್ಲಿ ಹೃದಯ ವಿದ್ರಾವಕ ಘಟನೆ. appeared first on Good News 24x7.

]]>