military Archives - Good News 24x7 https://www.goodnews24x7.com/tag/military/ Kannada Wed, 01 Apr 2026 10:22:43 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg military Archives - Good News 24x7 https://www.goodnews24x7.com/tag/military/ 32 32 ರಷ್ಯಾದಲ್ಲಿ ಭೀಕರ ವಿಮಾನ ದುರಂತ: ಕ್ರೈಮಿಯಾ ಬಂಡೆಗೆ ಅಪ್ಪಳಿಸಿದ ‘An-26’, 29 ಸೇನಾ ಸಿಬ್ಬಂದಿ ದುರ್ಮರಣ. https://www.goodnews24x7.com/russias-deadliest-plane-crash-an-26-crashes-into-crimean-cliff-killing-29-military-personnel/ Wed, 01 Apr 2026 10:20:38 +0000 https://www.goodnews24x7.com/?p=9067 [ಮಾಸ್ಕೋ/ಕ್ರೈಮಿಯಾ]: ರಷ್ಯಾದ ರಕ್ಷಣಾ ಪಡೆಗೆ ಸೇರಿದ ‘An-26’ ಸೇನಾ ಸಾರಿಗೆ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ 29 ಪ್ರಯಾಣಿಕರು ಸಾವನ್ನಪ್ಪಿರುವ ಭೀಕರ ಘಟನೆ ಮಂಗಳವಾರ ಸಂಭವಿಸಿದೆ. ಕ್ರೈಮಿಯಾ ಪರ್ಯಾಯ ದ್ವೀಪದ ದುರ್ಗಮ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ರಷ್ಯಾದ…

The post ರಷ್ಯಾದಲ್ಲಿ ಭೀಕರ ವಿಮಾನ ದುರಂತ: ಕ್ರೈಮಿಯಾ ಬಂಡೆಗೆ ಅಪ್ಪಳಿಸಿದ ‘An-26’, 29 ಸೇನಾ ಸಿಬ್ಬಂದಿ ದುರ್ಮರಣ. appeared first on Good News 24x7.

]]>

[ಮಾಸ್ಕೋ/ಕ್ರೈಮಿಯಾ]: ರಷ್ಯಾದ ರಕ್ಷಣಾ ಪಡೆಗೆ ಸೇರಿದ ‘An-26’ ಸೇನಾ ಸಾರಿಗೆ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ 29 ಪ್ರಯಾಣಿಕರು ಸಾವನ್ನಪ್ಪಿರುವ ಭೀಕರ ಘಟನೆ ಮಂಗಳವಾರ ಸಂಭವಿಸಿದೆ. ಕ್ರೈಮಿಯಾ ಪರ್ಯಾಯ ದ್ವೀಪದ ದುರ್ಗಮ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ರಷ್ಯಾದ ರಕ್ಷಣಾ ಸಚಿವಾಲಯ ಘಟನೆಯನ್ನು ಅಧಿಕೃತವಾಗಿ ದೃಢಪಡಿಸಿದೆ.

ಘಟನೆಯ ವಿವರ:
ಮಂಗಳವಾರ (ಮಾರ್ಚ್ 31) ಸ್ಥಳೀಯ ಕಾಲಮಾನ ಸಂಜೆ 6 ಗಂಟೆಯ ಸುಮಾರಿಗೆ ಆಂಟೊನೊವ್ ಡಿಸೈನ್ ಬ್ಯೂರೋ ನಿರ್ಮಿತ An-26 ವಿಮಾನವು ಕ್ರೈಮಿಯಾ ಪರ್ಯಾಯ ದ್ವೀಪದ ಮೇಲೆ ತನ್ನ ನಿಯಮಿತ ಹಾರಾಟ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ವಿಮಾನವು ಇದ್ದಕ್ಕಿದ್ದಂತೆ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಕಳೆದುಕೊಂಡಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಪೈಲಟ್ ನಿಯಂತ್ರಣ ಕಳೆದುಕೊಂಡಿದ್ದಾರೆ, ಪರಿಣಾಮವಾಗಿ ವಿಮಾನವು ಬೆಟ್ಟದ ಬಂಡೆಗೆ ನೇರವಾಗಿ ಅಪ್ಪಳಿಸಿದೆ.

ಮೃತರ ವಿವರ:
ವಿಮಾನದಲ್ಲಿ ಒಟ್ಟು 29 ಜನರಿದ್ದರು ಎಂದು ವರದಿಯಾಗಿದೆ. ಇದರಲ್ಲಿ ಆರು ಮಂದಿ ವಿಮಾನ ಚಾಲನಾ ಸಿಬ್ಬಂದಿ (Crew Members) ಮತ್ತು 23 ಪ್ರಯಾಣಿಕರಿದ್ದರು. ದುರಂತದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂದು ರಕ್ಷಣಾ ಇಲಾಖೆ ತಿಳಿಸಿದೆ. ಸದ್ಯ ಘಟನಾ ಸ್ಥಳದಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದ್ದು, ಮೃತದೇಹಗಳನ್ನು ಹೊರತೆಗೆಯುವ ಪ್ರಕ್ರಿಯೆ ಜಾರಿಯಲ್ಲಿದೆ.

ಹಳೆಯ ವಿಮಾನಗಳ ಸುರಕ್ಷತೆ ಬಗ್ಗೆ ಪ್ರಶ್ನೆ:
An-26 ವಿಮಾನಗಳು 1960ರ ದಶಕದ ಅಂತ್ಯದಿಂದ ರಷ್ಯಾ ಮತ್ತು ಉಕ್ರೇನ್ ಸೇನೆಗಳಲ್ಲಿ ಸಕ್ರಿಯವಾಗಿವೆ. ಸರಕು ಸಾಗಣೆ ಮತ್ತು ಸುಮಾರು 40 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಈ ವಿಮಾನಗಳು ದಶಕಗಳಷ್ಟು ಹಳೆಯದಾಗಿವೆ. ಈ ಹಿಂದೆಯೂ ಈ ವಿಮಾನಗಳು ಹಲವಾರು ಬಾರಿ ತಾಂತ್ರಿಕ ಕಾರಣಗಳಿಂದ ಅಪಘಾತಕ್ಕೀಡಾಗಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಸದ್ಯ ಅಪಘಾತ ನಡೆದ ಕ್ರೈಮಿಯಾ ಪ್ರಾಂತ್ಯವು 2014ರಿಂದ ರಷ್ಯಾದ ಅಧೀನದಲ್ಲಿದೆ.

ಕರಾಳ ಇತಿಹಾಸದ ಮೇಲೆ ಒಂದು ನೋಟ:
An-26 ವಿಮಾನಗಳ ಸುರಕ್ಷತಾ ದಾಖಲೆ ಇತ್ತೀಚಿನ ವರ್ಷಗಳಲ್ಲಿ ಕಳವಳಕಾರಿಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ನಡೆದ ಪ್ರಮುಖ ಅಪಘಾತಗಳು ಇಲ್ಲಿವೆ:

  • 2022: ಉಕ್ರೇನ್‌ನ ಜಪೋರಿಝಿಯಾ ಪ್ರಾಂತ್ಯದಲ್ಲಿ ವಿಮಾನ ಪತನಗೊಂಡು ಓರ್ವ ಸಾವು.
  • 2020: ಉಕ್ರೇನ್‌ನಲ್ಲಿ ತರಬೇತಿ ವೇಳೆ ಸಂಭವಿಸಿದ ಅಪಘಾತದಲ್ಲಿ 27 ಜನರ ಪೈಕಿ 26 ಮಂದಿ ದಾರುಣವಾಗಿ ಮೃತಪಟ್ಟಿದ್ದರು.
  • 2020: ದಕ್ಷಿಣ ಸುಡಾನ್‌ನಲ್ಲಿ ನಡೆದ ಅಪಘಾತದಲ್ಲಿ ಐವರು ರಷ್ಯನ್ನರು ಸೇರಿದಂತೆ ಎಂಟು ಜನರು ಪ್ರಾಣ ಕಳೆದುಕೊಂಡಿದ್ದರು.
  • 2017: ಪಶ್ಚಿಮ ಆಫ್ರಿಕಾದ ಐವರಿ ಕೋಸ್ಟ್‌ನಲ್ಲಿ ಲ್ಯಾಂಡಿಂಗ್ ವೇಳೆ ವಿಮಾನ ಪತನವಾಗಿ ನಾಲ್ವರು ಮೃತಪಟ್ಟಿದ್ದರು.

ಸದ್ಯ ರಷ್ಯಾದ ವಿಶೇಷ ತನಿಖಾ ತಂಡವು ಸ್ಥಳಕ್ಕೆ ಧಾವಿಸಿದ್ದು, ಕಪ್ಪು ಪೆಟ್ಟಿಗೆ (Black Box) ಪತ್ತೆ ಹಚ್ಚುವ ಮೂಲಕ ಅಪಘಾತದ ನಿಖರ ಕಾರಣವನ್ನು ತಿಳಿಯಲು ಮುಂದಾಗಿದೆ. ಈ ಘಟನೆಯು ರಷ್ಯಾದ ವಾಯುಪಡೆಯ ಹಳೆಯ ವಿಮಾನಗಳ ಆಧುನೀಕರಣದ ಅಗತ್ಯವನ್ನು ಮತ್ತೊ

The post ರಷ್ಯಾದಲ್ಲಿ ಭೀಕರ ವಿಮಾನ ದುರಂತ: ಕ್ರೈಮಿಯಾ ಬಂಡೆಗೆ ಅಪ್ಪಳಿಸಿದ ‘An-26’, 29 ಸೇನಾ ಸಿಬ್ಬಂದಿ ದುರ್ಮರಣ. appeared first on Good News 24x7.

]]>
ಮಸೂದ್‌ ಅಜರ್‌ಗೆ ಮತ್ತೊಂದು ಆ*ತ: ಸಹೋದರನ ನಿಗೂಢ ಸಾ*. https://www.goodnews24x7.com/another-shock-for-masood-azhar-brothers-mysterious-death/ Tue, 31 Mar 2026 09:59:36 +0000 https://www.goodnews24x7.com/?p=9057 ಇಸ್ಲಾಮಾಬಾದ್: ಭಾರತದ ‘ಆಪರೇಷನ್‌ ಸಿಂಧೂರ’ ಸೇನಾ ಕಾರ್ಯಾಚರಣೆಯಲ್ಲಿ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ ಕುಟುಂಬದ 14 ಸದಸ್ಯರು ಸಾ*ನ್ನಪ್ಪಿದ್ದರು. ಆ ಆಘಾತದಿಂದ ಇನ್ನೂ ಹೊರಬರದಿದ್ದ ಜೈಶ್‌ ಮುಖ್ಯಸ್ಥನಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಪಾಕಿಸ್ತಾನದ ಬಹವಾಲ್‌ಪುರ್‌ನಲ್ಲಿ ಮಸೂದ್‌…

The post ಮಸೂದ್‌ ಅಜರ್‌ಗೆ ಮತ್ತೊಂದು ಆ*ತ: ಸಹೋದರನ ನಿಗೂಢ ಸಾ*. appeared first on Good News 24x7.

]]>

ಇಸ್ಲಾಮಾಬಾದ್: ಭಾರತದ ‘ಆಪರೇಷನ್‌ ಸಿಂಧೂರ’ ಸೇನಾ ಕಾರ್ಯಾಚರಣೆಯಲ್ಲಿ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ ಕುಟುಂಬದ 14 ಸದಸ್ಯರು ಸಾ*ನ್ನಪ್ಪಿದ್ದರು. ಆ ಆಘಾತದಿಂದ ಇನ್ನೂ ಹೊರಬರದಿದ್ದ ಜೈಶ್‌ ಮುಖ್ಯಸ್ಥನಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಪಾಕಿಸ್ತಾನದ ಬಹವಾಲ್‌ಪುರ್‌ನಲ್ಲಿ ಮಸೂದ್‌ ಅಜರ್‌ ಸಹೋದರ ಮೊಹಮ್ಮದ್‌ ತಾಹಿರ್‌ ಅನ್ವರ್‌ ನಿಗೂಢವಾಗಿ ಸಾ*ನ್ನಪ್ಪಿದ್ದಾನೆ. ಆದರೆ ಸಾ*ನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಬಹವಾಲ್‌ಪುರ್‌ ಜೈಶ್‌-ಎ-ಮೊಹಮ್ಮದ್‌ ಉಗ್ರರ ಪ್ರಮುಖ ಕೇಂದ್ರವಾಗಿದ್ದು, ಇದೇ ಊರಿನಲ್ಲಿ ಅನ್ವರ್‌ ಸಾ*ನ್ನಪ್ಪಿದ್ದಾನೆ. ಈ ಬಗ್ಗೆ ಮಾಹಿತಿ ಜೈಶ್‌ ಸಂಘಟನೆಯ ಅಧಿಕೃತ ಟೆಲಿಗ್ರಾಮ್‌ ಚಾನೆಲ್‌ಗಳಲ್ಲಿ ಪ್ರಕಟವಾಗಿದೆ. ಮಾ.30ರ ತಡರಾತ್ರಿ ಬಹವಾಲ್‌ಪುರ್‌ನ ಜಾಮಿಯಾ ಉಸ್ಮಾನ್-ಒ-ಅಲಿ‌ನಲ್ಲಿ ಅಂತ್ಯಕ್ರಿಯೆ ನೆರವೇರಿದರೂ, ಅದರಲ್ಲಿ ಮಸೂದ್‌ ಅಜರ್‌ ಭಾಗವಹಿಸಿಲ್ಲ ಎಂಬುದು ಗಮನಾರ್ಹವಾಗಿದೆ.

ಅನ್ವರ್‌ ಸಾ* ಹೇಗೆ ಸಂಭವಿಸಿತು ಎಂಬುದು ಇನ್ನೂ ನಿಗೂಢವಾಗಿದ್ದು, ಯಾವುದೇ ಅನಾರೋಗ್ಯದ ಪುರಾವೆಗಳೂ ಇಲ್ಲ. ಹೀಗಾಗಿ ದಿಢೀರ್‌ ಸಾ*ಮತ್ತು ಅಂತ್ಯಕ್ರಿಯೆಗೆ ಅಜರ್‌ ಗೈರಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮೊಹಮ್ಮದ್‌ ತಾಹಿರ್‌ ಅನ್ವರ್‌ ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ ಪ್ರಮುಖ ವ್ಯಕ್ತಿಯಾಗಿದ್ದು, ಸಶಸ್ತ್ರ ಪಡೆಗಳ ಕಮಾಂಡರ್‌ ಆಗಿಯೂ ಕಾರ್ಯನಿರ್ವಹಿಸಿದ್ದ. ಅಲ್ಲದೆ ಬಹವಾಲ್‌ಪುರ್‌ನ ‘ಮರ್ಕಝ್ ಉಸ್ಮಾನ್-ಒ-ಅಲಿ’ ತರಬೇತಿ ಕೇಂದ್ರದ ಮುಖ್ಯಸ್ಥನಾಗಿದ್ದನು. ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ ವ್ಯವಸ್ಥೆಯನ್ನೂ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.

ಈಗಾಗಲೇ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಯಲ್ಲಿ ಮಸೂದ್‌ ಅಜರ್‌ ಮತ್ತೊಬ್ಬ ಸಹೋದರ ಅಬ್ದುಲ್‌ ರೌಫ್‌ ಅಜರ್‌ ಹತ್ಯೆಯಾಗಿದ್ದು, ಇದೀಗ ಮತ್ತೋರ್ವ ಸಹೋದರನನ್ನು ಕಳೆದುಕೊಂಡಿದ್ದಾನೆ. ಒಟ್ಟಿನಲ್ಲಿ, ಜೈಶ್‌ ಮುಖ್ಯಸ್ಥನ ಕುಟುಂಬಕ್ಕೆ ಆಘಾತಗಳ ಸರಮಾಲೆ ಮುಂದುವರಿದಂತಾಗಿದೆ.

The post ಮಸೂದ್‌ ಅಜರ್‌ಗೆ ಮತ್ತೊಂದು ಆ*ತ: ಸಹೋದರನ ನಿಗೂಢ ಸಾ*. appeared first on Good News 24x7.

]]>