MinisterHCMahadevappa Archives - Good News 24x7 https://www.goodnews24x7.com/tag/ministerhcmahadevappa/ Kannada Mon, 04 Aug 2025 05:31:36 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg MinisterHCMahadevappa Archives - Good News 24x7 https://www.goodnews24x7.com/tag/ministerhcmahadevappa/ 32 32 ಇಂದು ಮಧ್ಯಾಹ್ನ ಸಲ್ಲುವ ಶುಭ ಲಗ್ನದಲ್ಲಿ ಪೂಜೆ ಸಲ್ಲಿಸಿ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ. https://www.goodnews24x7.com/gajapayana-to-be-formally-inaugurated-by-offering-puja-at-the-auspicious-ascendant-this-afternoon/ Mon, 04 Aug 2025 05:30:15 +0000 https://www.goodnews24x7.com/?p=5291 ಮೈಸೂರು : – ದಸರಾ ಮಹೋತ್ಸವ ಪ್ರಮುಖ ಆಕರ್ಷಣೆ ಆಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ತಂಡದಲ್ಲಿ 9 ಆನೆಗಳಿಗೆ ಇಂದು ಮಧ್ಯಾಹ್ನ 12.34ರಿಂದ 12.59 ರವರೆಗೆ ಸಲ್ಲುವ ಶುಭ. ತುಲಾ (ಅಭಿಜಿನ್) ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ…

The post ಇಂದು ಮಧ್ಯಾಹ್ನ ಸಲ್ಲುವ ಶುಭ ಲಗ್ನದಲ್ಲಿ ಪೂಜೆ ಸಲ್ಲಿಸಿ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ. appeared first on Good News 24x7.

]]>

ಮೈಸೂರು : – ದಸರಾ ಮಹೋತ್ಸವ ಪ್ರಮುಖ ಆಕರ್ಷಣೆ ಆಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ತಂಡದಲ್ಲಿ 9 ಆನೆಗಳಿಗೆ ಇಂದು ಮಧ್ಯಾಹ್ನ 12.34ರಿಂದ 12.59 ರವರೆಗೆ ಸಲ್ಲುವ ಶುಭ. ತುಲಾ (ಅಭಿಜಿನ್) ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ.
ಪ್ರಸಕ್ತ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಈ ಬಾರಿ ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ 14 ಆನೆಗಳನ್ನು ಆಯ್ಕೆ ಮಾಡಲು ಅರಣ್ಯ ಇಲಾಖೆ ನಿರ್ಧರಿ, ಸಿದ್ದು, ಈಗಾಗಲೇ ಮೊದಲ ಮತ್ತು ಎರ ಡನೇ ತಂಡದ ಆನೆಗಳ ಪಟ್ಟಿ ಸಿದ್ಧಪಡಿಸಿದೆ. ಜಂಬೂಸವಾರಿಗೂ 55 ದಿನ ಮುನ್ನವೇ ಮೊದಲ ತಂಡದ ಆನೆಗಳಿಗೆ ತಾಲೀಮು ಆರಂಭಿಸಿ, ವಿಶೇಷ ಆರೈಕೆ ಮಾಡಬೇಕಾದ ಹಿನ್ನೆಲೆಯಲ್ಲಿ ಅಂಬಾರಿ ಆನೆ, ಪರ್ಯಾಯ’ ಅಂಬಾರಿ ಆನೆ ಹಾಗೂ ಕುಮ್ಮಿ ಆನೆ ಜವಾಬ್ದಾರಿ ನಿಭಾಯಿಸುವ ಆನೆಗಳನ್ನು ಮೊದಲ ತಂಡದಲ್ಲಿ ಕರೆತರುವ ವಾಡಿಕೆ ಯಿದ್ದು, ಅದರಂತೆ ಇಂದು ಮಧ್ಯಾಹ್ನ ವಿವಿಧ ಕ್ಯಾಂಪ್ಗಳ 9 ಆನೆಗಳು ಸಾಂಸ್ಕೃತಿಕ ನಗರಿ ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ.

ಗಜಪಯಣ: ಹುಣಸೂರು ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಳ್ಳಿ ಗೇಟ್ ಬಳಿ ನಾಳೆ ಮಧ್ಯಾಹ್ನ 9 ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸ ಲಾಗುತ್ತದೆ. ಈಗಾಗಲೇ ವೀರನಹೊಸಳ್ಳಿ ಗೇಟ್ನಲ್ಲಿ ಗಜಪಯಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮತ್ತಿಗೋಡು, ಬಳ್ಳೆ, ದುಬಾರೆ ಕ್ಯಾಂಪ್ಗಳಿಂದ ಮೊದಲ ತಂಡದ 9 ಆನೆಗಳು ಭಾನುವಾರ ಸಂಜೆ ವೇಳೆಗೆ ವೀರನ ಹೊಸಳ್ಳಿ ಗೇಟ್ ಬಳಿ ಸುರಕ್ಷಿತವಾಗಿ ಬಂದಿವೆ.

https://youtu.be/PcQMR0MEW7c?si=5hHOn5m1LJ-lrFhiಟ್ರೇಡಿಂಗ್ ಹೆಸರಲ್ಲಿ ರಾಜಕುಮಾರನನ್ನು ಬಲೆಗೆ ಕೆಡವಿದ ಸುಂದರಿ… ಸುಂದರಿ‌ ನಂಬಿ ಹಣ ಕೊಟ್ಟ ಉದ್ಯಮಿಗಳಿಗೆ ಪಂಗನಾಮ

ಮಧ್ಯಾಹ್ನ 12 ಗಂಟೆಗೆ ಅರ್ಚಕ ಎಸ್.ವಿ. ಪ್ರಹ್ಲಾದರಾವ್ ಅವರು ದ್ವಾರ ಪೂಜೆ ಮಾಡಿ, ಎಲ್ಲಾ ಆನೆಗಳ ಪಾದ ತೊಳೆದು ಅರಿಶಿನ, ಕ್ಯಾಪ್ಟನ್ ಅಭಿಮನ್ಯು ಸೇರಿ ಮೊದಲ ತಂಡದ 9 ಆನೆಗಳು ಮೈಸೂರಿಗೆ ಪಯಣ 7 ಗಂಡಾನೆ, 2 ಹೆಣ್ಣಾನೆ ಆಗಮನ ರಿಂದ 12.59 ರವರೆಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಪೂಜೆ ಕುಂಕುಮ, ಶ್ರೀಗಂಧ ಹಚ್ಚಿ, ಸೊಂಡಿಲ ಮೇಲೆ ಓಂಕಾರ ಬರೆದ ನಂತರ ಅಡವಿದೇವಿ ಪೂಜೆ, ಚಾಮುಂಡಿಪೂಜೆ, ಗಣಪತಿ ಪೂಜೆ ನೆರವೇರಿಸಲಿದ್ದಾರೆ. ನಂತರ ಮಧ್ಯಾಹ್ನ 12.34ರಿಂದ 12.59ರವರೆಗೆ ಸಲ್ಲುವ ಶುಭತುಲಾ(ಅಭಿಜಿನ್) ಲಗ್ನದಲ್ಲಿ ಜಿಲ್ಲಾ ಉಸ್ತು ವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಆನೆಗಳಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡ ಲಿದ್ದಾರೆ. ಬಳಿಕ ಆನೆಗಳಿಗೆ ಪಂಚಫಲ, ಕಬ್ಬು, ಬೆಲ್ಲ ಸೇರಿದಂತೆ ವಿವಿಧ ತಿನಿಸು ನೀಡಿದ ನಂತರ ದೃಷ್ಟಿ ತೆಗೆಯಲಾಗುತ್ತದೆ. ನಂತರ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೊದಲ ತಂಡದ ಆನೆಗಳನ್ನು ವೀರನಹೊಸಳ್ಳಿ ಗೇಟ್ನಿಂದ 1.5 ಕಿ.ಮೀ ದೂರದ ನಾಗಾಪುರ ಹಾಡಿ ಸಮೀಪದ ಮೈದಾನದಲ್ಲಿ ನಡೆಯುವ ವೇದಿಕೆ” ಕಾರ್ಯಕ್ರಮದವರೆಗೂ ಮೆರವಣಿಗೆ ಯಲ್ಲಿ ಕರೆತರಲಾಗುತ್ತದೆ.

ವೇದಿಕೆ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ದಸರಾ ಆನೆಗಳ ಪಟ್ಟಿ ಹಾಗೂ ಕಿರು ಹೊತ್ತಿಗೆ ಬಿಡುಗಡೆ ಮಾಡಲಿದ್ದಾರೆ. ಶಾಸಕ ಜಿ.ಡಿ.ಹರೀಶ್ ಗೌಡ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮ ದಲ್ಲಿ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಶಾಸಕ ರಾದ ಜಿ.ಟಿ.ದೇವೇಗೌಡ, ತಸ್ವೀರ್ಸೇರ್, ಡಿ.ರವಿಶಂಕರ್, ಟಿ.ಎಸ್.ಶ್ರೀವತ್ಸ, ಕೆ.ಹರೀಶ್ ಗೌಡ, ದರ್ಶನ್ ದ್ರುವನಾರಾಯಣ್, ಅನಿಲ್ ಚಿಕ್ಕಮಾದು, ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸುನೀಲ್ ಭೋಸ್, ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ವಿವೇಕಾನಂದ ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ.

ಐದು ಸಾವಿರ ಜನರಿಗೆ ಊಟ: ನಾಗರಹೊಳೆ ಅಭಯಾರಣ್ಯದ ವೀರನ ಹೊಸಳ್ಳಿ ಗೇಟ್ ಬಳಿ ಚಾಲನೆ ದೊರೆತ ಬಳಿಕ ನಾಗಾಪುರ ಹಾಡಿ ಸಮೀಪ ನಡೆಯುವ ಸಭಾ ಕಾರ್ಯಕ್ರಮ ವೀರನಹೊಸಳ್ಳಿ, ನಾಗಾಪುರ ಹಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಆಗಮಿಸುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ 5 ಸಾವಿರ ಜನರಿಗೆ ಊಟ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ವೇದಿಕೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲಿಸ ಲಾಗಿದ್ದು, ವೀರನಹೊಸಳ್ಳಿ ಗೇಟ್ನಿಂದ ಸಭಾ ಕಾರ್ಯಕ್ರಮ ನಡೆಯುವ ಸ್ಥಳದವರೆಗೂ ರಸ್ತೆಯಲ್ಲಿ ತಳಿರು ತೋರಣದಿಂದ ಶೃಂಗರಿಸಲಾಗಿದೆ. ಸಭಾ ಕಾರ್ಯಕ್ರಮದಲ್ಲಿ ಆದಿವಾಸಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಟಿಬೆಟಿಯನ್ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಕ್ರಮ ಕೈಗೊಳ್ಳಲಾಗಿದೆ.

ಮೊದಲ ತಂಡದ ಆನೆಗಳಿವು ಗಜಪಡೆ ನಾಯಕ ಅಭಿಮನ್ಯು(59) ವಿನೊಂದಿಗೆ ಮತ್ತಿಗೋಡು ಶಿಬಿರದ ಭೀಮ (25), ದುಬಾರೆ ಶಿಬಿರದ ಕಂಜನ್ (24), ಧನಂಜಯ (44) ಮತ್ತು ಪ್ರಶಾಂತ್ (53), ಬಳ್ಳೆ ಶಿಬಿರದ ಮಹೇಂದ್ರ (42), ದೊಡ್ಡಹರವೆ ಶಿಬಿರದ ಏಕಲವ್ಯ (40) ಸೇರಿದಂತೆ 7 ಗಂಡಾನೆ ಹಾಗೂ ದುಬಾರೆ ಶಿಬಿರದ ಕಾವೇರಿ (45) ಹಾಗೂ ಬಳ್ಳೆಯ (ದೊಡ್ಡಹರವೆ) ಲಕ್ಷ್ಮೀ(53) ಹೆಣ್ಣಾನೆಗಳು ಮೊದಲ ತಂಡದಲ್ಲಿ ಮೈಸೂರಿಗೆ ಆಗಮಿಸಲಿವೆ.

The post ಇಂದು ಮಧ್ಯಾಹ್ನ ಸಲ್ಲುವ ಶುಭ ಲಗ್ನದಲ್ಲಿ ಪೂಜೆ ಸಲ್ಲಿಸಿ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ. appeared first on Good News 24x7.

]]>
ನಾಲ್ವಡಿ ಕೃಷ್ಣರಾಜರಿಗೆ ಯಾರನ್ನು ಹೋಲಿಕೆ ಮಾಡಲು ಆಗಲ್ಲ- ಸಚಿವ ಹೆಚ್.ಸಿ ಮಹದೇವಪ್ಪ. https://www.goodnews24x7.com/no-one-can-be-compared-to-nalvadi-krishnaraja-minister-h-c-mahadevappa/ Mon, 28 Jul 2025 09:46:32 +0000 https://www.goodnews24x7.com/?p=5191 ಬೆಂಗಳೂರು : ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಬೇರೆಯವರನ್ನ ಹೋಲಿಕೆ ಮಾಡಲು ಆಗಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಗಿಂತ ಸಿಎಂ ಸಿದ್ದರಾಮಯ್ಯ ಅಭಿವೃದ್ದಿ ಕಾರ್ಯಗಳನ್ನ ಮಾಡಿದ್ದಾರೆ ಎಂದು ಹೋಲಿಕೆ ಮಾಡಿದ್ದ…

The post ನಾಲ್ವಡಿ ಕೃಷ್ಣರಾಜರಿಗೆ ಯಾರನ್ನು ಹೋಲಿಕೆ ಮಾಡಲು ಆಗಲ್ಲ- ಸಚಿವ ಹೆಚ್.ಸಿ ಮಹದೇವಪ್ಪ. appeared first on Good News 24x7.

]]>

ಬೆಂಗಳೂರು : ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಬೇರೆಯವರನ್ನ ಹೋಲಿಕೆ ಮಾಡಲು ಆಗಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಗಿಂತ ಸಿಎಂ ಸಿದ್ದರಾಮಯ್ಯ ಅಭಿವೃದ್ದಿ ಕಾರ್ಯಗಳನ್ನ ಮಾಡಿದ್ದಾರೆ ಎಂದು ಹೋಲಿಕೆ ಮಾಡಿದ್ದ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯಗೆ ಪರೋಕ್ಷ ಟಾಂಗ್ ಕೊಟ್ಟ ಸಚಿವ ಹೆಚ್.ಸಿ ಮಹದೇವಪ್ಪ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಎಲ್ಲರ ಗೌರವ ಪ್ರೀತಿಗೆ ಪಾತ್ರರಾದವರು ರಾಜ್ಯದ ಹಿತ ಕಾಪಾಡುವಲ್ಲಿ ನಾಲ್ವಡಿ ಕೃಷ್ಣರಾಜರು ಸಾಕಷ್ಟು ಶ್ರಮಿಸಿದ್ದಾರೆ. ಶ್ರೇಷ್ಟ ಆಡಳಿತ ನೀಡಿದ್ದಾರೆ.

ಬೇರೆಯವರನ್ನ ನಾಲ್ವಡಿ ಅವರಿಗೆ ಹೋಲಿಕೆ ಮಾಡಲು ಆಗಲ್ಲ ಒಡೆಯರ್ ಆಡಳಿತ ನಿಲುವು ನಡೆ ಬದ್ದತೆ ನಮ್ಮೆಲ್ಲರಿಗೆ ಸ್ಪೂರ್ತಿ. ಸಾಮಾಜಿಕ ನ್ಯಾಯ ಆನೇಕ ವಿಷಯಗಳಲ್ಲಿ ಅವರಿಗೆ ಬದ್ದತೆ ಇತ್ತು ಎಂದು ಸಚಿವ ಹೆಚ್ ಸಿ ಮಹದೇವಪ್ಪ ತಿಳಿಸಿದರು.

The post ನಾಲ್ವಡಿ ಕೃಷ್ಣರಾಜರಿಗೆ ಯಾರನ್ನು ಹೋಲಿಕೆ ಮಾಡಲು ಆಗಲ್ಲ- ಸಚಿವ ಹೆಚ್.ಸಿ ಮಹದೇವಪ್ಪ. appeared first on Good News 24x7.

]]>