MLA of the constituency Archives - Good News 24x7 https://www.goodnews24x7.com/tag/mla-of-the-constituency/ Kannada Tue, 04 Mar 2025 12:17:47 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg MLA of the constituency Archives - Good News 24x7 https://www.goodnews24x7.com/tag/mla-of-the-constituency/ 32 32 ಶವ ಸಂಸ್ಕಾರಕ್ಕಾಗಿ ನದಿಯಲ್ಲಿ ಶವವನ್ನು ಹೊತ್ತುಕೊಂಡು ಸಾಗಿದ ಗ್ರಾಮಸ್ಥರು.! https://www.goodnews24x7.com/%e0%b2%b6%e0%b2%b5-%e0%b2%b8%e0%b2%82%e0%b2%b8%e0%b3%8d%e0%b2%95%e0%b2%be%e0%b2%b0%e0%b2%95%e0%b3%8d%e0%b2%95%e0%b2%be%e0%b2%97%e0%b2%bf-%e0%b2%a8%e0%b2%a6%e0%b2%bf%e0%b2%af%e0%b2%b2%e0%b3%8d%e0%b2%b2/ Tue, 04 Mar 2025 09:44:06 +0000 https://www.goodnews24x7.com/?p=2560 ಚಾಮರಾಜನಗರ :- ಯಳಂದೂರು ತಾಲೂಕಿನ ಮದ್ದೂರು ಗ್ರಾಮದಲ್ಲಿ ಸವಿತಾ ಸಮಾಜ ಜನಾಂಗದವರು ಶವ ಉಳಲು ಸ್ಮಶಾನಕ್ಕೆ ದಾರಿ ಇಲ್ಲದೆ ಸುವರ್ಣವತಿ ನದಿ ದಾಟ ಬೇಕಿದ್ದು ಸೇತುವೆ ಇಲ್ಲದೆ ನದಿಯಲ್ಲಿ ಇಳಿದು ಶವ ಸಾಗಿಸುವ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.…

The post ಶವ ಸಂಸ್ಕಾರಕ್ಕಾಗಿ ನದಿಯಲ್ಲಿ ಶವವನ್ನು ಹೊತ್ತುಕೊಂಡು ಸಾಗಿದ ಗ್ರಾಮಸ್ಥರು.! appeared first on Good News 24x7.

]]>

ಚಾಮರಾಜನಗರ :- ಯಳಂದೂರು ತಾಲೂಕಿನ ಮದ್ದೂರು ಗ್ರಾಮದಲ್ಲಿ ಸವಿತಾ ಸಮಾಜ ಜನಾಂಗದವರು ಶವ ಉಳಲು ಸ್ಮಶಾನಕ್ಕೆ ದಾರಿ ಇಲ್ಲದೆ ಸುವರ್ಣವತಿ ನದಿ ದಾಟ ಬೇಕಿದ್ದು ಸೇತುವೆ ಇಲ್ಲದೆ ನದಿಯಲ್ಲಿ ಇಳಿದು ಶವ ಸಾಗಿಸುವ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಈ ವೇಳೆ ಮದ್ದೂರು ಗ್ರಾಮದ ಮುಖಂಡರಾದ ಪುರುಷೋತ್ತಮ್ ರವರು ಮಾತನಾಡಿ ಮದ್ದೂರು ಗ್ರಾಮದಲ್ಲಿ ಸವಿತಾ ಸಮಾಜದ ಮಹದೇವ ಶೆಟ್ಟಿ ಎಂಬುವವರು ನಿಧನರಾಗಿದ್ದು, ಮದ್ದೂರು ಗ್ರಾಮದಲ್ಲಿ ಶವ ಸಾಗಿಸಲು ದಾರಿ ಇಲ್ಲದೆ ಸುವರ್ಣವತಿ ನದಿಯ ನೀರಿನ ದಾರಿಯಲ್ಲಿ ಶವ ತೆಗೆದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ, ಮತ್ತು ಈ ಭಾಗದಲ್ಲಿ ಸುಮಾರು 100-150 ಎಕರೆ ಜಮೀನುಗಳಿಗೆ ಹೋಗಲು ಹಾಗೂ ವ್ಯವಸಾಯ ಮಾಡಲು ದಾರಿ ಇಲ್ಲದೆ ಪರದಾಡುವಂತಾಗಿದೆ.

ಈ ಬಗ್ಗೆ ಕ್ಷೇತ್ರದ ಶಾಸಕರಾದ ಎ. ಆರ್. ಕೃಷ್ಣಮೂರ್ತಿ ರವರು ಹಾಗೂ ಅಧಿಕಾರಿಗಳು ಇದನ್ನು ಪರಿಶೀಲಿಸಿ ಈ ಗ್ರಾಮದಲ್ಲಿ ತಕ್ಷಣ ಸೇತುವೆ ಆಗಬೇಕು, ಈ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆಯೂ ಸಹ ಎರಡು ಸವಗಳನ್ನು ಸಾಗಿಸಲು ಇದೇ ರೀತಿ ನದಿಯ ಮೂಲಕವೇ ಹೋಗಬೇಕಾಗಿತ್ತು, ಅದೇ ರೀತಿ ಈ ನದಿಯನ್ನು ದಾಟಿ ಜಮೀನುಗಳಿಗೆ ಹೋಗಿ ಕೃಷಿ ಚಟುವಟಿಕೆಯನ್ನು ನಡೆಸ ಬೇಕಾಗಿದೆ, ಹಾಗಾಗಿ ನದಿಗೆ ತಕ್ಷಣ ಒಂದು ಸೇತುವೆ ನಿರ್ಮಾಣ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

The post ಶವ ಸಂಸ್ಕಾರಕ್ಕಾಗಿ ನದಿಯಲ್ಲಿ ಶವವನ್ನು ಹೊತ್ತುಕೊಂಡು ಸಾಗಿದ ಗ್ರಾಮಸ್ಥರು.! appeared first on Good News 24x7.

]]>