monsoon Archives - Good News 24x7 https://www.goodnews24x7.com/tag/monsoon/ Kannada Tue, 07 Jul 2026 05:15:26 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg monsoon Archives - Good News 24x7 https://www.goodnews24x7.com/tag/monsoon/ 32 32 ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ https://www.goodnews24x7.com/water-level-details-of-major-dams-in-karnataka/ Tue, 07 Jul 2026 05:15:26 +0000 https://www.goodnews24x7.com/?p=9772 ಕರ್ನಾಟಕದ ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಪ್ರಮುಖ ಜಲಾಶಯಗಳಿಗೆ ಭಾರಿ ಒಳಹರಿವು ಆರಂಭವಾಗಿದೆ. ಶಿವಮೊಗ್ಗದ ಗಾಜನೂರು ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಎಲ್ಲಾ 22 ಗೇಟ್‌ಗಳ ಮೂಲಕ ಕೃಷ್ಣಾ ನದಿಯ ಉಪನದಿಗೆ ನೀರು ಹರಿಸಲಾಗುತ್ತಿದೆ. ಬೆಂಗಳೂರು, ಜುಲೈ…

The post ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ appeared first on Good News 24x7.

]]>

ಕರ್ನಾಟಕದ ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಪ್ರಮುಖ ಜಲಾಶಯಗಳಿಗೆ ಭಾರಿ ಒಳಹರಿವು ಆರಂಭವಾಗಿದೆ. ಶಿವಮೊಗ್ಗದ ಗಾಜನೂರು ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಎಲ್ಲಾ 22 ಗೇಟ್‌ಗಳ ಮೂಲಕ ಕೃಷ್ಣಾ ನದಿಯ ಉಪನದಿಗೆ ನೀರು ಹರಿಸಲಾಗುತ್ತಿದೆ.

ಬೆಂಗಳೂರು, ಜುಲೈ 7: ಕಳೆದ ಕೆಲವು ದಿನಗಳಿಂದ ರಾಜ್ಯದಾದ್ಯಂತ ಮುಂಗಾರು ಮಳೆ (Monsoon Rain) ತೀವ್ರಗೊಂಡಿದ್ದು, ಬತ್ತಿ ಹೋಗುತ್ತಿದ್ದ ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಈಗ ಭಾರಿ ಪ್ರಮಾಣದ ಒಳಹರಿವು ಆರಂಭವಾಗಿದೆ. ಜೂನ್ ತಿಂಗಳಲ್ಲಿ ಕೊಂಚ ಕೈಕೊಟ್ಟಿದ್ದ ಮಳೆಯು ಜುಲೈ ಆರಂಭದಲ್ಲಿ ಚುರುಕುಗೊಂಡಿದೆ. ನದಿ-ಜಲಾಶಯಗಳು ಮೈದುಂಬಿಕೊಳ್ಳುತ್ತಿವೆ. ಇದರ ಪರಿಣಾಮವಾಗಿ ಶಿವಮೊಗ್ಗ ತಾಲೂಕಿನ ಗಾಜನೂರು ಬಳಿಯ ತುಂಗಾ ಜಲಾಶಯವು ಪ್ರಸಕ್ತ ಸಾಲಿನಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಭರ್ತಿಯಾಗಿದೆ. ಡ್ಯಾಂ ಸುರಕ್ಷತೆಯ ದೃಷ್ಟಿಯಿಂದ ಒಟ್ಟು 22 ಗೇಟ್‌ಗಳನ್ನು ಮುಂಜಾನೆ ತೆರೆಯಲಾಗಿದ್ದು, ಸುಮಾರು 24,ವಾಹನ ಕ್ಯೂಸೆಕ್ ನೀರನ್ನು ತುಂಗಾ ನದಿಗೆ ಹರಿಸಲಾಗುತ್ತಿದೆ. ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಡ್ಯಾಂ ಆವರಣದಲ್ಲಿರುವ ತುಂಗಾದೇವಿಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲಾಗಿದೆ.

ಹಾಲಿನ ನೊರೆಯಂತೆ ಧುಮುಕುತ್ತಿರುವ ನೀರು, ರೈತರಲ್ಲಿ ಹುಮ್ಮಸ್ಸು
ತುಂಗಾ ಜಲಾಶಯದ ಎಲ್ಲಾ ಗೇಟ್‌ಗಳಿಂದ ನೀರು ಧುಮುಕುತ್ತಿರುವುದರಿಂದ ಇಡೀ ವಾತಾವರಣ ಹಾಲಿನ ನೊರೆಯಂತೆ ಕಂಗೊಳಿಸುತ್ತಿದೆ. ಮಳೆಯ ನಡುವೆಯೂ ಡ್ಯಾಂ ಸೌಂದರ್ಯ ಇಮ್ಮಡಿಯಾಗಿದೆ. ನಿರಂತರ ಮಳೆಯಿಂದಾಗಿ ತುಂಗಾ ನದಿ ತುಂಬಿ ಹರಿಯುತ್ತಿದ್ದು, ಶಿವಮೊಗ್ಗ ಮಾತ್ರವಲ್ಲದೆ ದಾವಣಗೆರೆ, ಹಾವೇರಿ, ಗದಗ ಹಾಗೂ ಬಳ್ಳಾರಿ ಜಿಲ್ಲೆಗಳ ರೈತರ ಕೃಷಿ ಚಟುವಟಿಕೆಗಳಿಗೆ ಭಾರಿ ಅನುಕೂಲವಾಗಲಿದೆ. ಮಳೆ ತಡವಾಗಿದ್ದರಿಂದ ಆತಂಕದಲ್ಲಿದ್ದ ರೈತರ ಮುಖದಲ್ಲಿ ಈಗ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಗಳು ಮತ್ತೆ ಚುರುಕುಗೊಂಡಿವೆ.

ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ
ಕೆಆರ್​ಎಸ್ ಜಲಾಶಯ (ಮಂಡ್ಯ)
ಗರಿಷ್ಠ ಮಟ್ಟ: 124.80 ಅಡಿ
ಇಂದಿನ ನೀರಿನ ಮಟ್ಟ: 82.45 ಅಡಿ
ಒಳಹರಿವು: 5,734 ಕ್ಯೂಸೆಕ್, ಹೊರಹರಿವು: 777 ಕ್ಯೂಸೆಕ್
ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
ಇಂದಿನ ಸಂಗ್ರಹ: 11.909 ಟಿಎಂಸಿ
ಕಬಿನಿ ಜಲಾಶಯ (ಮೈಸೂರು)
ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 59.32 ಅಡಿಯಷ್ಟಿದೆ (ಕಳೆದ ವರ್ಷ ಇದೇ ದಿನ 80.79 ಅಡಿ ಇತ್ತು). ಪ್ರಸ್ತುತ ಜಲಾಶಯದಲ್ಲಿ 7.07 ಟಿಎಂಸಿ ನೀರು ಸಂಗ್ರಹವಿದ್ದು, 4,394 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ನದಿಗೆ 500 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದ್ದು, ಕಾಲುವೆಗಳಿಗೆ ಸದ್ಯ ನೀರು ಹರಿಸುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಕಬಿನಿಯಲ್ಲಿ ನೀರಿನ ಮಟ್ಟ ಹಾಗೂ ಒಳಹರಿವು ಕಡಿಮೆ ಇದೆ. ಕಳೆದ 24 ಗಂಟೆಗಳಲ್ಲಿ ಇಲ್ಲಿ 30 ಮಿ.ಮೀ ಮಳೆ ದಾಖಲಾಗಿದೆ.

ಹೇಮಾವತಿ ಜಲಾಶಯ (ಹಾಸನ)
ಗರಿಷ್ಠ ಮಟ್ಟ: 2922 ಅಡಿ (37 ಟಿಎಂಸಿ)
ಇಂದಿನ ನೀರಿನ ಮಟ್ಟ: 2895.91 ಅಡಿ (17.379 ಟಿಎಂಸಿ)
ಒಳಹರಿವು: 8,901 ಕ್ಯೂಸೆಕ್, ಹೊರಹರಿವು: 300 ಕ್ಯೂಸೆಕ್
ಭದ್ರಾ ಜಲಾಶಯ (ಲಕ್ಕವಳ್ಳಿ/ಭದ್ರಾವತಿ)
ಗರಿಷ್ಠ ಮಟ್ಟ: 186 ಅಡಿ (71.535 ಟಿಎಂಸಿ)
ಇಂದಿನ ನೀರಿನ ಮಟ್ಟ: 140.6 ಅಡಿ (27.231 ಟಿಎಂಸಿ)
ಒಳಹರಿವು: 8,117 ಕ್ಯೂಸೆಕ್, ಹೊರಹರಿವು: 212 ಕ್ಯೂಸೆಕ್
ಬಸವಸಾಗರ ಜಲಾಶಯ (ನಾರಾಯಣಪುರ, ಯಾದಗಿರಿ)
ಗರಿಷ್ಠ ಮಟ್ಟ: 492.25 ಮೀಟರ್
ಇಂದಿನ ನೀರಿನ ಮಟ್ಟ: 488.82 ಮೀಟರ್
ಒಳಹರಿವು: 00 ಕ್ಯೂಸೆಕ್, ಹೊರಹರಿವು: 761 ಕ್ಯೂಸೆಕ್
ರಾಜ್ಯಾದ್ಯಂತ ಮುಂಗಾರು ಮಳೆ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೆಆರ್‌ಎಸ್, ಭದ್ರಾ ಮತ್ತು ಹೇಮಾವತಿ ಜಲಾಶಯಗಳ ನೀರಿನ ಮಟ್ಟದಲ್ಲಿ ಭಾರೀ ಏರಿಕೆಯಾಗುವ ನಿರೀಕ್ಷೆಯಿದೆ.

The post ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ appeared first on Good News 24x7.

]]>
ಪ್ರಯಾಗರಾಜ್ ನಲ್ಲಿ ಉಕ್ಕಿ ಹರಿದ ಗಂಗಾ, ಯಮುನಾ ನದಿಗಳು, ಉತ್ತರ ಭಾರತದಲ್ಲಿ ವರುಣ ಮೃದಂಗ.. ಜಲ ಪ್ರವಾಹ! https://www.goodnews24x7.com/ganga-yamuna-rivers-overflow-in-prayagraj-varuna-mridangam-in-north-india-floods/ Tue, 05 Aug 2025 10:05:15 +0000 https://www.goodnews24x7.com/?p=5360 ಮಹಾಕುಂಭ ಮೇಳ ನಗರ ಪ್ರಯಾಗರಾಜ್ ಪ್ರವಾಹದಿಂದ ತತ್ತರಿಸಿ ಹೋಗಿದೆ. ತ್ರಿವೇಣಿ ಸಂಗಮ ಪ್ರಯಾಗರಾಜ್ನ ಅರ್ಧ ಭಾಗವೇ ನೀರಿನಲ್ಲಿ ಮುಳುಗಿ ಹೋಗಿದೆ. ಜನರು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಶಿವಗಾಮಿಯಂತೆ ಅಂಗೈಲಿ ಮಗು ಹಿಡಿದು ಪ್ರವಾಹ ದಾಟಿದ ತಂದೆ! ಮನೆಗೆ ನುಗ್ಗಿದ ಗಂಗೆ! ಪೊಲೀಸ್…

The post ಪ್ರಯಾಗರಾಜ್ ನಲ್ಲಿ ಉಕ್ಕಿ ಹರಿದ ಗಂಗಾ, ಯಮುನಾ ನದಿಗಳು, ಉತ್ತರ ಭಾರತದಲ್ಲಿ ವರುಣ ಮೃದಂಗ.. ಜಲ ಪ್ರವಾಹ! appeared first on Good News 24x7.

]]>

ಮಹಾಕುಂಭ ಮೇಳ ನಗರ ಪ್ರಯಾಗರಾಜ್ ಪ್ರವಾಹದಿಂದ ತತ್ತರಿಸಿ ಹೋಗಿದೆ. ತ್ರಿವೇಣಿ ಸಂಗಮ ಪ್ರಯಾಗರಾಜ್ನ ಅರ್ಧ ಭಾಗವೇ ನೀರಿನಲ್ಲಿ ಮುಳುಗಿ ಹೋಗಿದೆ. ಜನರು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.

ಶಿವಗಾಮಿಯಂತೆ ಅಂಗೈಲಿ ಮಗು ಹಿಡಿದು ಪ್ರವಾಹ ದಾಟಿದ ತಂದೆ! ಮನೆಗೆ ನುಗ್ಗಿದ ಗಂಗೆ! ಪೊಲೀಸ್ ಅಧಿಕಾರಿಯಿಂದ ಆರತಿ! ದೇವರಿಗೂ ಜಲ ದಿಗ್ಬಂಧನ! ಪ್ರಯಾಗ್ರಾಜ್ನಲ್ಲಿ ಮಹಾ ಪ್ರವಾಹ! ಉತ್ತರ ಪ್ರದೇಶದ ತ್ರಿವೇಣಿ ಸಂಗಮ ನಗರಿ ಪ್ರಯಾಗರಾಜ್ ನಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಗಂಗಾ ನದಿ ನೀರು ಮನೆಗಳಿಗೆ ನುಗ್ಗಿದೆ. ಪ್ರಯಾಗರಾಜ್ನ ಅರ್ಧ ಭಾಗವೇ ನೀರಿನಲ್ಲಿ ಮುಳುಗಿ ಹೋಗಿದೆ. ಜನವರಿಯಲ್ಲಿ ಕೋಟ್ಯಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು. ಆದರೇ, ಈಗ ಅದೇ ಪ್ರಯಾಗರಾಜ್ ನ ಸ್ಥಳೀಯ ನಿವಾಸಿಗಳು ಗಂಗಾ, ಯಮುನಾ ನದಿಯ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಂಗಾ, ಯಮುನಾ ನದಿಯಲ್ಲಿ 10 ಲಕ್ಷ ಕ್ಯೂಸೆಕ್ ನೀರು ಏಕಕಾಲಕ್ಕೆ ಹರಿಯುತ್ತಿದ್ದು, ಜನರು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಪ್ರಕೃತಿ ಮುಂದೆ ಮನುಷ್ಯ ಯಕಶ್ಚಿತ್ ಅನ್ನೋದು ಪದೇ ಪದೇ ಸಾಬೀತಾಗ್ತಾನೆ ಇದೆ.. ಪ್ರಕೃತಿ ದೇವಿ ಒಮ್ಮೆ ಮುನಿಸಿಕೊಂಡ್ರೆ ಮಾನವನ ಅವಶೇಷವೂ ಸಿಗದೇ ನಾಪತ್ತೆಯಾಗಿಬಿಡ್ತಾನೆ. ಪ್ರಯಾಗ್ರಾಜ್ನಲ್ಲಿ ಮಳೆರಾಯನ ಆರ್ಭಟ ಜನರ ಬದುಕನ್ನೆ ನುಂಗಿ ಹಾಕಿದೆ.. ಜೀವ ಮತ್ತು ಜೀವನ ಉಳಿಸಿಕೊಳ್ಳೋದಕ್ಕೆ ಜನ ಅಕ್ಷರಶಃ ಹರಸಾಹಸವನ್ನೆ ಪಡ್ತಿದ್ದಾರೆ.. ನೆತ್ತಿಗೆ ಆಸರೆಯಾಗಿದ್ದ ಸೂರುಗಳು ಜಲಾವೃತವಾಗಿದ್ದು, ಕಾಳಜಿ ಕೇಂದ್ರವೇ ದಿಕ್ಕಾಗಿದೆ.. ಜಲಾಸುರು ಸೃಷ್ಟಿಸಿರುವ ಅವಾಂತರದ ಒಂದೊಂದು ದೃಶ್ಯಗಳು ನಿಜಕ್ಕೂ ಕರುಣಜಾನಕ.. ಆ ವರುಣ ಮೃದoಗದ ದೃಶ್ಯಗಳು ಭಯಾನಕ.

ಕಳೆದೆರಡು ತಿಂಗಳ ಹಿಂದೆ ಕರ್ನಾಟಕದಲ್ಲಿ ಅಬ್ಬರಿಸಿ ಬೊಬ್ಬಿರಿದ್ದ ಮಳೆರಾಯ ಈಗ ಉತ್ತರ ಭಾರತದಲ್ಲಿ ಆರ್ಭಟಿಸ್ತಿದ್ದಾನೆ. ವರುಣನ ಅಟ್ಟಹಾಸಕ್ಕೆ ಜನ ಸಾಕಪ್ಪ ವರುಣ ನಮ್ಮನ್ನ ಬಿಟ್ಟುಬಿಡು ಅಂತ ಕೈ ಮುಗಿದು ಕೇಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.. ಕಳೆದ ಮೂರು ದಿನದಿಂದ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ವರುಣ ಬಡಪಾಯಿ ಜನರ ಬದುಕಿಗೆ ಕತ್ತಲೆ ಆವರಿಸುವಂತೆ ಮಾಡಿದ್ದಾನೆ. ಬಿಟ್ಟು ಬಿಡದೇ ಸುರಿಯತ್ತಿರುವ ಮಳೆ ಹತ್ತಾರು ಗ್ರಾಮಗಳನ್ನ ಸ್ವಾಹ ಮಾಡಿದೆ. ಮನೆ ಕಳ್ಕೊಂಡು ಕಂಗಾಲಾದವರು ಕಾಳಜಿ ಕೇಂದ್ರ ಸೇರಿ ನೆರವಿಗಾಗಿ ಎದುರು ನೋಡ್ತಿದ್ದಾರೆ. ಪ್ರಯಾಗ್ ಪ್ರವಾಹದ ಒಂದೊಂದು ದೃಶ್ಯವೂ ಭೀಕರ. ರಣ ಭೀಕರ..
ರಾಜಮೌಳಿ ಬಾಹುಬಲಿ ಸಿನಿಮಾದ ಈ ಸೀನ್ ಎಂದಿಗೂ ಮರೆಯೋದಕ್ಕೆ ಸಾಧ್ಯವಿಲ್ಲ ಬಿಡಿ. ಇಂಥದೊಂದು ಕಲ್ಪನೆ ಮೂವಿ ಮಾಂತ್ರಿಕ ರಾಜಮೌಳಿಗೆ ಬಿಟ್ಟು ಬೇರೆ ಯಾರಿಗೂ ಊಹಿಸಿಕೊಳ್ಳೋಕೆ ಸಾಧ್ಯನೇ ಇಲ್ಲ. ಮೈದುಂಬಿ ಹರಿಯುತ್ತಿರುವ ನದಿ, ಕೈಯಲ್ಲಿ ಕಂದ, ಈ ಸೀನ್ ನೋಡುತ್ತಿದ್ದರೇ, ಮೈ ರೋಮಾಂಚನವಾಗಿ ಬಿಡುತ್ತೆ. ಇದು ರೀಲ್ ಸೀನ್, ಸಿನಿಮಾದ ಸೀನ್.

ಇದ್ಯಾವುದೋ ಸಿನಿಮಾ ಸೀನ್ ಅಲ್ಲ. ಅಥವಾ ರೀಲ್ಸ್ಗಾಗಿ ಮಾಡಿದ ವಿಡಿಯೋ ಕೂಡ ಅಲ್ಲ.. ಸಾವು ಬದುಕಿನ ಸಂಘರ್ಷಕ್ಕೆ ಸಾಕ್ಷಿಯಾಗಿರೋವ ಕರುಳು ಹಿಂಡುವ ವಿಡಿಯೋ.. ಗಂಗೆ ಯಮುನೆಯ ಆರ್ಭಟಕ್ಕೆ ಸಾಕ್ಷಿಯಾದ ದೃಶ್ಯವಿದು.. ಆರ್ಭಟಿಸ್ತಿರೋ ಮಳೆರಾಯ ಪ್ರಯಾಗರಾಜ್ನಲ್ಲಿ ಮಹಾ ಪ್ರವಾಹವನ್ನೆ ಸೃಷ್ಟಿಸಿಬಿಟ್ಟಿದ್ದಾನೆ. ಮನೆಗಳಿಗೆ ನೀರು ನುಗ್ಗಿ, ಜೀವ ಉಳಿದ್ರೆ ಸಾಕು ಅಂತ ಜನ ಉಟ್ಟ ಬಟ್ಟೆಯಲ್ಲೇ ತಾವಿದ್ದ ಸ್ಥಳವನ್ನ ತೊರೆಯುತ್ತಿದ್ದಾರೆ.. ಹೀಗೆ ಪ್ರವಾಹದಿಂದ ಬಚಾವ್ ಆಗುವ ಹೊತ್ತಲ್ಲಿ ಕಂಡು ಬಂದ ಮನ ಮಿಡಿಯುವ ಮಿಡಿಯುವ ದೃಶ್ಯವಿದು… ಮುಂದೆ ಅಪ್ಪ ತನ್ನ ಕರುಳ ಬಳ್ಳಿಯನ್ನ ಅಂಗೈಯಲ್ಲಿ ಹಿಡಿದು ಒಂದೊಂದೆ ಹೆಜ್ಜೆ ಇಡ್ತಿದ್ರೆ, ಹಿಂದೆ ಗಂಡ ಹೆಗಲಿಗೆ ಕೈ ಒರಗಿ ಹೆಂಡತಿ ಸಾಗ್ತಿದ್ದಾಳೆ.. ನಿಜಕ್ಕೂ ಈ ದೃಶ್ಯ ನೋಡ್ತಿದ್ರೆ ಕರುಳು ಹಿಂಡಿದ ಅನುಭವವೇ ಆಗುತ್ತೆ.

ನೀವು ಸೂಕ್ಷ್ಮವಾಗಿ ಗಮನಿಸಿದ್ರೆ, ಕಣ್ಣು ಹಾಯಿಸಿದ ಕಡೆಯೆಲ್ಲ ಬರೀ ನೀರೇ ಕಾಣ್ತಿದೆ.. ಆ ನೀರಿನ ಮಧ್ಯೆ ಮೂರು ಜೀವಗಳು ಸಿಲುಕಿವೆ.. ಸುಮಾರು ನೂರು ಮೀಟರ್ ತನಕ ಅರ್ಧದೇಹದ ತನಕ ನೀರು ನಿಂತಿದೆ.. ಸ್ವಲ್ಪ ಎಚ್ಚರ ತಪ್ಪಿದ್ರೂ ಕೈಯಲ್ಲಿದ್ದ ಮಗು ನೀರುಪಾಲಾಗುತ್ತೆ.. ಹೀಗಾಗಿ ಮಗುವಿನ ತಂದೆ.. ಮಗುವಿಗೆ ಒಂದು ಹನಿ ನೀರು ಕೂಡ ತಾಗದಂತೆ ಜೋಪಾನವಾಗಿ ಕಂದನನ್ನ ರಕ್ಷಣೆ ಮಾಡೋ ಸಾಹಸಕ್ಕೆ ಕೈ ಹಾಕಿದ್ದಾನೆ.. ಕೇವಲ ಮಗುವಿನ ಪ್ರಾಣ ಮಾತ್ರವಲ್ಲ.. ಬೆನ್ನ ಹಿಂದೆ ಹೆಜ್ಜೆ ಹಾಕ್ತಿರೋ ಹೆಂಡತಿಯನ್ನ ಆತ ಕಾಪಾಡಬೇಕಿದೆ.

ಉತ್ತರ ಪ್ರದೇಶದ ಪ್ರಯರಾಜ್ನಲ್ಲಿ ವರುಣನ ಆರ್ಭಟಕ್ಕೆ ಮನೆಗಳೆಲ್ಲ ಮುಳುಗಡೆಯಾಗಿ.. ಜನ ಜೀವನ್ಮರಣದ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲೂ ಕೂಡ ಗಂಗೆ ಯಮನೆಯ ಆರ್ಭಟಕ್ಕ ಈ ದಂಪತಿ ಮನೆ ಜಲಾವೃತವಾಗಿದ್ದು, ಹಸುಗೂಸಿನ ಜೊತೆ ಗಂಡ ಹೆಂಡತಿ ಇಬ್ಬರೂ ಪ್ರವಾಹವನ್ನೆ ದಾಟಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಅಪ್ಪನ ಈ ಹರಸಾಹಸವನ್ನ ಕಂಡು ಜನ ಕೂಡ ಆಶ್ಚರ್ಯಗೊಂಡಿದ್ದಾರೆ.

ಪ್ರಯಾಗ್ರಾಜ್ನಲ್ಲಿ ಸುರಿಯುತ್ತಿರುವ ಮಳೆಯಿಂದ ಗಂಗೆ ಮತ್ತು ಯುಮನಾ ನದಿಗಳು ಅಬ್ಬರಿಸಿ ಬೊಬ್ಬಿರಿಯುತ್ತಿವೆ… ನದಿ ಪಾತ್ರದಲ್ಲಿರೋ ಜನರ ಪಾಡಂತು ನಿಜಕ್ಕೂ ಘೋರಾತಿ ಘೋರವಾಗಿದೆ.. ಶಾಕಿಂಗ್ ಏನಂದ್ರೆ ನದಿ ಪಾತ್ರವನ್ನ ದಾಟಿ ಗಂಗೆ ನಗರಕ್ಕೂ ನುಗ್ಗಿದ್ದಾಳೆ. ಅಷ್ಟರ ಮಟ್ಟಿಗೆ ಮಳೆ ಬಿಟ್ಟು ಬಿಡದೇ ಸುರಿಯುತ್ತಿದೆ.. ಹೀಗಿರುವಾಗ ಇಲ್ಲೊಬ್ಬ ಪೊಲೀಸ್ ಅಧಿಕಾರಿ ಮನೆ ಹೊಸ್ತಿಲ ತನಕವೂ ಗಂಗೆ ನುಗ್ಗಿ ಬಂದಿದ್ದಾಳೆ.. ಆದ್ರೆ ಈ ಪುಣ್ಯಾತ್ಮ ಗಂಗೆ ಮನೆ ಬಾಗಿಲಿಗೆ ಬಂದಿದ್ದಾಳೆ ಅಂತ ಪೂಜೆ ಸಲ್ಲಿಸಿದ್ದಾನೆ.

ಇನ್ನೊಂದೆರಡು ಅಡಿ ನೀರು ಹೆಚ್ಚಾದ್ರು, ಮನೆಯೂ ಉಳಿಯಲ್ಲ, ಮನೆಯಲ್ಲಿದ್ದವು ಉಳಿಯಲ್ಲ.. ಇಂಥಾ ಟೈಮ್ನಲ್ಲಿ ಓದಿರೋ ತಿಳುವಳಿಕೆ ಇರೋ ಇಂಥವರೇ ಮೌಢ್ಯಕ್ಕೆ ಬಿದ್ರೆ ಏನ್ ಹೇಳೋಣ ಹೇಳಿ.. ಮನೆಗೆ ಗಂಗಾ ನದಿ ನುಗ್ಗಿ ಬಂದಿದ್ರೆ, ಈ ಪೊಲೀಸ್ ಅಧಿಕಾರಿಗೆ ಗಂಗೆ ಗುಲಾಬಿ ಹೂವು ಹಾಕಿ, ಆರತಿ ಮಾಡಿ ಪೂಜೆ ಸಲ್ಲಿಸಿದ್ದಾನೆ.ಇದಷ್ಟೆ ಅಲ್ಲ ಮುಳುಗಿರೋ ಮನೆ ಮೇಲಿಂದನೇ ಈ ಆಸಾಮಿ ನೀರಿಗೆ ಹಾರಿ ಸ್ವೀಮ್ಮಿಂಗ್ ಮಾಡಿದ್ದಾನೆ. ಇದನ್ನ ಹುಚ್ಚಾಟ ಅನ್ಬೇಕೋ.. ಮೌಢ್ಯದ ಪರಮಾವಧಿ ಅನ್ಬೇಕೋ ಗೊತ್ತಿಲ್ಲ.

ಕಳೆದ ಮೂರು ನಾಲ್ಕು ದಿನದಿಂದ ಮಳೆ ಬಿಟ್ಟು ಬಿಡದೇ ಸುರಿಯುತ್ತಿರೋದ್ರಿಂದ.. ಜನರ ಬದುಕಿಗೆ ಕತ್ತಲೇ ಆವರಿಸಿದೆ. ಮನೆಗಳೆಲ್ಲ ಜಲಾವೃತವಾಗಿದ್ದು, ಜನರನ್ನ ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಜೊತೆಗೆ ಪ್ರಯಾಗರಾಜ್ ಸೇರಿದಂತೆ 12 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಮಳೆರಾಯನ ಆರ್ಭಟ ಅದೆಷ್ಟಿದೆ ಅಂದ್ರೆ ಎರಡಂತಸ್ತಿನ ಕಟ್ಟಡಗಳು ಕೂಡ ನೀರಲ್ಲಿ ಮುಳುಗಿ ಹೋಗಿವೆ… ಒಂದ್ಕಡೆ ಮಳೆ.. ಇನ್ನೊಂದ್ಕಡೆ ಮನೆ ಮುಂದೆಯೇ ಮೊಣಕಾಲುದ್ದ ನಿಂತಿರೋ ನೀರು.. ಹೀಗೆ ಜೀವಕ್ಕಾಗಿ ಪರದಾಡ್ತಿರೋರ ಪಾಲಿಗೆ ದೇವದೂಂತರಂತೆ ನಿಂತು ಎನ್ಡಿಆರ್ ಎಫ್ ತಂಡ ಕೆಲಸ ಮಾಡ್ತಿದೆ. ಬಹಳಷ್ಟು ಮನೆಗಳ ಅರ್ಧ ಭಾಗ ನೀರಲ್ಲಿ ಮುಳುಗಿ ಹೋಗಿದೆ.. ದಿಕ್ಕೇ ತೋಚದೇ ಕೂತಿದ್ದವರಿಗೆ ದೇವರಂತೆ ಬಂದು ಎನ್ಡಿಆರ್ಎಫ್ ತಂಡ ರಕ್ಷಣೆ ಮಾಡಿದೆ. ಮನೆಯಲ್ಲಿದ್ದವರನ್ನ ಏಣಿ ಮೂಲಕ ಒಬ್ಬೊಬ್ಬರನ್ನೆ ರಕ್ಷಣೆ ಮಾಡಿ ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ.

ಗಂಗಾ ತೀರದಲ್ಲಿ ಬೋಟಿಂಗ್ ಮಾಡ್ತಿದ್ದ ಬಡಪಾಯಿಗಳ ಒಪ್ಪತ್ತಿನ ಊಟಕ್ಕೂ ಮಳೆರಾಯ ಕಲ್ಲು ಹಾಕಿದ್ದಾನೆ. ಗಂಗೆ ದಡದಲ್ಲಿ ಬೋಟಿಂಗ್ ಇಲ್ಲಿನ ನಿವಾಸಿಗಳಿಗೆ ಮುಖ್ಯ ಆದಾಯ.. ನೂರಾರು ಕುಟಂಬಗಳಿಗೆ ಇವತ್ತು ಇದೇ ಬೋಟಿಂಗ್ ಕೆಲಸವೇ ಆಸರೆಯಾಗಿದೆ.. ಆದ್ರೀಗ ನದಿಯಲ್ಲಿ ನೀರು ಹೆಚ್ಚಾಗಿರೋ ಕಾರಣಕ್ಕೆ ಬೋಟಿಂಗ್ ಕೂಡ ಬಂದ್ ಆಗಿದ್ದು, ಅದನ್ನೆ ನಂಬ್ಕೊಂಡು ಕೆಲಸ ಮಾಡ್ತಿದ್ದವರ ಪರದಾಡುವಂತಾಗಿದೆ. ಎಲ್ಲ ಬಂದ್ ಆಗಿದೆ ನಮ್ಮ ಕಷ್ಟ ಕೇಳೋರು ಯಾರು ಅಂತ ಬೋಟ್ ಓಡಿಸೋ ವ್ಯಕ್ತಿಯೊಬ್ಬ ಅಳಲು ತೋಡಿಕೊಂಡಿದ್ದಾನೆ.


ನಮ್ಮ ದಿನದ ಊಟ ಇದೇ ಆಗಿತ್ತು.. ಅದೇ ಇಲ್ಲ..ಗಂಗಾನದಿ ಉಕ್ಕಿ ಹರಿಯುತ್ತಿರೋದ್ರಿಂದ.. ಘಾಟ್ ಬಳಿ ಜನ ಸ್ನಾನಕ್ಕೆ ಬರ್ತಿದ್ರು. ಈಗ ಎಲ್ಲ ಬಂದ್ ಆಗಿದೆ. ಸ್ನಾನ ಮಾಡೋರಿಗೂ ಜಾಗ ಇಲ್ಲ… ಬೋಟ್ ಮೂಲಕ ಹೋಗ್ತಿದ್ರು.. ಯಾರು ಬರ್ತಿಲ್ಲ. ಒಂದು ಗಂಟೆ ಎರಡು ಗಂಟೆ ಬಳಿಕ ಒಬ್ಬೊಬ್ಬರು ಬರ್ತಾರೆ.. ಪೊಲೀಸರು ಕೂಡ ಬಿಡಲ್ಲ.. ಅಲ್ಲಿ ಶವ ಸಂಸ್ಕಾರ ಮಾಡುವ ಘಾಟ್ ಕೂಡ ಮುಳುಗಿ ಹೋಗಿದೆ. ಹೆಣ ಸುಡೋಕು ಕಷ್ಟ ಆಗ್ತಿದೆ. ಅಸ್ಥಿ ತಂದೆ ಬೋಟ್ ಮೂಲಕ ಗಂಗೆಯಲ್ಲಿ ಬಿಡ್ತಿದ್ರು.. ಈಗ ಯಾರು ಬರ್ತಿಲ್ಲ.ಒಟ್ನಲ್ಲಿ ಮಳೆರಾಯ ಸೃಷ್ಟಿಸಿದ ಅವಾಂತರಕ್ಕೆ ಘಾಟ್ಗಳಲ್ಲಿ ಹೆಣ ಸುಡೋದಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಹಳ್ಳದ ನಟ್ಟ ನಡುವಲ್ಲಿ ಸಿಲುಕಿಕೊಂದಿದ್ದ ಬೈಕ್ ಸವಾರ ಬದುಕಿ ಬಂದ ದೃಶ್ಯ ನಿಜಕ್ಕೂ ರಣ ರೋಚಕವಾಗಿದೆ.

 

The post ಪ್ರಯಾಗರಾಜ್ ನಲ್ಲಿ ಉಕ್ಕಿ ಹರಿದ ಗಂಗಾ, ಯಮುನಾ ನದಿಗಳು, ಉತ್ತರ ಭಾರತದಲ್ಲಿ ವರುಣ ಮೃದಂಗ.. ಜಲ ಪ್ರವಾಹ! appeared first on Good News 24x7.

]]>
ಅರೇಹಳ್ಳಿಯಲ್ಲಿ ಭಾರೀ ಮಳೆಗೆ ಕುಸಿದು ಬಿದ್ದ ಶಾಲಾ ಕಾಂಪೌಂಡ್‌ https://www.goodnews24x7.com/school-compound-collapses-in-arehalli-due-to-heavy-rain/ Wed, 18 Jun 2025 13:37:58 +0000 https://www.goodnews24x7.com/?p=4481 ಅರೇಹಳ್ಳಿಯಲ್ಲಿ ಭಾರೀ ಮಳೆಗೆ ಕುಸಿದು ಬಿದ್ದ ಶಾಲಾ ಕಾಂಪೌಂಡ್‌ ಮಲೆನಾಡು ಬಾಗವಾದ ಅರೇಹಳ್ಳಿ ಹಾಗು ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಮುಂಗಾರು ಮಳೆ ಚುರುಕುಗೊಂಡಿದ್ದು ಕಳೆದ ರಾತ್ರಿ ಸುರಿದ ದಾರಕಾರ ಮಳೆಗೆ ಸರ್ಕಾರಿ ಶಾಲೆಯ ಕಾಂಪೌಂಡ್ ಕುಸಿದು ಕುಸಿದು ಬಿದ್ದಿದೆ. ಪಟ್ಟಣದ…

The post ಅರೇಹಳ್ಳಿಯಲ್ಲಿ ಭಾರೀ ಮಳೆಗೆ ಕುಸಿದು ಬಿದ್ದ ಶಾಲಾ ಕಾಂಪೌಂಡ್‌ appeared first on Good News 24x7.

]]>

ಅರೇಹಳ್ಳಿಯಲ್ಲಿ ಭಾರೀ ಮಳೆಗೆ ಕುಸಿದು ಬಿದ್ದ ಶಾಲಾ ಕಾಂಪೌಂಡ್‌

ಮಲೆನಾಡು ಬಾಗವಾದ ಅರೇಹಳ್ಳಿ ಹಾಗು ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಮುಂಗಾರು ಮಳೆ ಚುರುಕುಗೊಂಡಿದ್ದು ಕಳೆದ ರಾತ್ರಿ ಸುರಿದ ದಾರಕಾರ ಮಳೆಗೆ ಸರ್ಕಾರಿ ಶಾಲೆಯ ಕಾಂಪೌಂಡ್ ಕುಸಿದು ಕುಸಿದು ಬಿದ್ದಿದೆ. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪರಿಮಿತಿಯ ಸುತ್ತಲೂ ಸುಮಾರು ಹತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಕಾಂಪೌಂಡ್ ನ ಒಂದು ಬದಿಯ ಉದ್ದಗಲಕ್ಕೂ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದಿದೆ.ಇದರಿಂದ ಪಕ್ಕದಲ್ಲೇ ನೂತನವಾಗಿ ನಿರ್ಮಿಸಲಾದ ರೈತ ಸಂಪರ್ಕ ಕೇಂದ್ರದ ಸಿಮೆಂಟ್ ಇಂಟರ್ಲಾಕ್ ಗಳು ಸಹ ಸಾಕಷ್ಟು ಹಾನಿಯಾಗಿದೆ.
ಶಿಥಿಲವಾಗಿ ಬಿದ್ದ ಕಾಂಪೌಂಡ್ ಮಳೆ ಗಾಳಿ ಬಿರುಗಾಳಿಯಿಂದ ಗೋಡೆಯ ಸಾಮರ್ಥ್ಯ ಕಡಿಮೆಯಾಗಿದ್ದಲ್ಲದೆ ಕೆಲವೊಮ್ಮೆ ಕಾಂಪೌಂಡ್ ಗೋಡೆಗಳನ್ನು ನಿರ್ಮಿಸುವಾಗ ಸರಿಯಾದ ಗುಣಮಟ್ಟದ ವಸ್ತುಗಳನ್ನು ಬಳಸದೆ ಇರುವುದು ಅಥವಾ ಸೂಕ್ತ ಇಂಜಿನಿಯರಿಂಗ್ ಮಾನದಂಡಗಳನ್ನು ಪಾಲಿಸದಿರುವುದೇ ಇದಕ್ಕೆ ಕಾರಣವಾಗಿರಬಹುದು, ಮಣ್ಣು ಸಡಿಲವಾಗಿದ್ದಾಗ ಅಥವಾ ಅಡಿಪಾಯವನ್ನು ಸರಿಯಾಗಿ ವಿನ್ಯಾಸಗೊಳಿಸ ದಿದ್ದಾಗ ಭಾರಿ ಮಳೆಯಿಂದಾಗಿ ದೊಡ್ಡ ಕುಸಿತಕ್ಕೆ ಕಾರಣ ವಾಗಿದೆ! ಈ ಕುಸಿತದ ಬಗ್ಗೆ ರೈತ ಸಂಪರ್ಕ ಕೇಂದ್ರದ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಶಾಲೆಯ ಮುಖ್ಯೋ ಪಾಧ್ಯಾಯರು ಹಾಗು ಶಾಲಾ ಆಡಳಿತ ಮಂಡಳಿಯವರು ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳ ಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡಿ ಅರೇಹಳ್ಳಿ ಸರಕಾರಿ ಶಾಲೆಯ ಕಾಂಪೌಂಡ್ ಕುಸಿದ ವಿಚಾರ ನಮ್ಮ ಗಮನಕ್ಕೆ ಬಂದಿದ್ದು ಇದು ಕೃಷಿ ಇಲಾಖೆ ರೈತ ಸಂಪರ್ಕಕ್ಕೆ ಸೇರಿದ್ದಾಗಿದ್ದು ಇದನ್ನು ಅವರಿಗೆ ತಿಳಿಸಿ ಮೇಲ್ಬಾಗದಲ್ಲಿ ಪೈಪ್ ನೀರು ಕಾಂಪೌಂಡ್ ಗೆ ಬೀಳುತ್ತಿದ್ದ ರಿಂದ ಈ ರೀತಿ ಆಗಿರ ಬಹುದು.ಅಲ್ಲದೆ ಅದನ್ನು ಬೇರೆಡೆಗೆ ತಿರುಗಿಸಲು ಹೇಳಿದ್ದು ಹಾಗು ಕಾಂಪೌಂಡ್ ಅನ್ನು ಹೊಸದಾಗಿ ಕಟ್ಟಿ ರೆಡಿ ಮಾಡಿಸಿಕೊಡಿ ಮತ್ತೆ ಇನ್ನು ಮುಂದೆ ಹೀಗಾಗದಂತೆ ಜಾಗೃತಿ ವಹಿಸಬೇಕೆಂದು ಅವರಿಗೆ ಎಚ್ಚರಿಕೆ ನೀಡಿದರು.

The post ಅರೇಹಳ್ಳಿಯಲ್ಲಿ ಭಾರೀ ಮಳೆಗೆ ಕುಸಿದು ಬಿದ್ದ ಶಾಲಾ ಕಾಂಪೌಂಡ್‌ appeared first on Good News 24x7.

]]>
ಮುಂಗಾರು ಮತ್ತೆ ಚುರುಕು: ದಕ್ಷಿಣ ಕನ್ನಡದಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ https://www.goodnews24x7.com/monsoon-is-back-agricultural-activities-in-dakshina-kannada/ Sun, 15 Jun 2025 12:00:38 +0000 https://www.goodnews24x7.com/?p=4432 ಬೆಳ್ತಂಗಡಿ: ಒಂದು ಹಂತದ ಅಬ್ಬರದ ಮಳೆ ಬಳಿಕ ಸ್ವಲ್ಪ ದಿನಗಳ ಬ್ರೇಕ್ ನಂತರ ಮತ್ತೆ ವರ್ಷಧಾರೆ ಶುರುವಾಗಿದ್ದು, ಎಲ್ಲೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮೇ ತಿಂಗಳಲ್ಲಿ ಈ ಬಾರಿ ಉತ್ತಮ ಮಳೆ ಸುರಿದುದರಿಂದ ಕೃಷಿ ನೀರಿನ ಸಮಸ್ಯೆ ದೂರವಾಗಿತ್ತು. ಅಲ್ಲದೆ ಕೃಷಿಕರು…

The post ಮುಂಗಾರು ಮತ್ತೆ ಚುರುಕು: ದಕ್ಷಿಣ ಕನ್ನಡದಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ appeared first on Good News 24x7.

]]>

ಬೆಳ್ತಂಗಡಿ: ಒಂದು ಹಂತದ ಅಬ್ಬರದ ಮಳೆ ಬಳಿಕ ಸ್ವಲ್ಪ ದಿನಗಳ ಬ್ರೇಕ್ ನಂತರ ಮತ್ತೆ ವರ್ಷಧಾರೆ ಶುರುವಾಗಿದ್ದು, ಎಲ್ಲೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಮೇ ತಿಂಗಳಲ್ಲಿ ಈ ಬಾರಿ ಉತ್ತಮ ಮಳೆ ಸುರಿದುದರಿಂದ ಕೃಷಿ ನೀರಿನ ಸಮಸ್ಯೆ ದೂರವಾಗಿತ್ತು. ಅಲ್ಲದೆ ಕೃಷಿಕರು ತಮ್ಮ ತೋಟ, ಗದ್ದೆಗಳ ಕೆಲಸವನ್ನು ಬೇಗನೆ ಆರಂಭಿಸಿದ್ದರು. ಆದರೆ ಜೂನ್ ಆರಂಭವಾಗುತ್ತಿದ್ದಂತೆ ಸುಮಾರು 10-12 ದಿನಗಳ ಕಾಲ ಮಳೆ ದೂರವಾಯಿತು. ಈ ಸಮಯ ಕೃಷಿ ಕೆಲಸಗಳು ಕೊಂಚ ಕುಂಠಿತಗೊಂಡವು. ಇದೀಗ 4 ದಿನಗಳಿಂದ ಮಳೆ ಪ್ರಾರಂಭವಾಗಿದ್ದು ಗದ್ದೆಗಳಲ್ಲಿ ನೀರು ತುಂಬಿದೆ. ಇದು ಏಣೇಲು ಭತ್ತದ ಗದ್ದೆಗಳಿಗೆ ಉತ್ತಮವಾಗಿದ್ದು, ಗದ್ದೆಗಳ ಕೆಲಸಗಳು ಭರದಿಂದ ಸಾಗುತ್ತಿದ್ದು ನೇಜಿ ನಾಟಿಯ ತಯಾರಿ ನಡೆದಿದೆ.

ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರ ಕೊರತೆ ಇರುವುದರಿಂದ ಹೆಚ್ಚಿನ ಕೃಷಿಕರು ಅಗತ್ಯ ಕೆಲಸಗಳಿಗೆ ಯಂತ್ರೋಪಕರಣಗಳನ್ನು ಬಳಸುತ್ತಿದ್ದಾರೆ. ಇದು ಕಡಿಮೆ ಖರ್ಚು ಹಾಗೂ ಕೆಲಸಗಳು ವೇಗವಾಗಿ ಸಾಗಲು ಸಹಕಾರಿಯಾಗಿದೆ. ಗದ್ದೆಗಳನ್ನು ಹದ ಮಾಡಲು ಟಿಲ್ಲರ್, ಟ್ರ್ಯಾಕ್ಟರ್ಗಳಿಗೆ ಬೇಡಿಕೆ ಹೆಚ್ಚಿದೆ. ಇದರ ಜತೆ ನೇಜಿ, ಬಿತ್ತನೆ ಬೀಜದ ಬೇಡಿಕೆ ಅಧಿಕಗೊಂಡಿದೆ. ಗದ್ದೆಗಳ ಬದು ಕಟ್ಟುವುದು, ಸಣ್ಣ ಪ್ರಮಾಣದ ಕಣಿಗಳನ್ನು ನಿರ್ಮಿಸುವುದು, ನೀರು ನಿಲ್ಲಿಸುವ, ಅಧಿಕ ನೀರನ್ನು ಹೊರ ಬಿಡುವ ಕೆಲಸಗಳನ್ನು ಕಾರ್ಮಿಕರಿಂದ ಮಾಡಿಸಲಾಗುತ್ತಿದೆ.

ಬೆಳ್ತಂಗಡಿ ತಾಲೂಕಿನಲ್ಲಿ 1600 ಹೆಕ್ಟೇರ್ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಕಳೆದ 1580 ಹೆಕ್ಟೇರ್ನಲ್ಲಿ ಬಿತ್ತನೆ ಮಾಡಲಾಗಿತ್ತು. ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ, ಕೊಕ್ಕಡ ವೇಣೂರು ಹೋಬಳಿಗಳಲ್ಲಿ ಎಂಒ-(4)- 40ಕ್ವಿಂ., ಬಿಳಿಜಯ-16ಕ್ವಿಂ., ಜ್ಯೋತಿ-12ಕ್ವಿಂ. ಬಿತ್ತನೆ ಬೀಜ ಸಹಾಯಧನದಲ್ಲಿ ಲಭ್ಯವಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಸಿಂಪಡಣೆಗೆ ಅನುಕೂಲ
ಜೂನ್ ತಿಂಗಳಲ್ಲಿ 10 ದಿನ ಮಳೆ ಬಿಟ್ಟು ಬಿಸಿಲಿನ ವಾತಾವರಣ ಮೂಡಿದ್ದು, ಅಡಕೆ ತೋಟಗಳಿಗೆ ಔಷಧ ಸಿಂಪಡಿಸುವ ಕೃಷಿಕರಿಗೆ ಹೆಚ್ಚಿನ ಅನುಕೂಲ ನೀಡಿತ್ತು. ಮೇ ತಿಂಗಳ ಕೊನೆಯ ವಾರದಲ್ಲಿ ವಿಪರೀತ ಮಳೆಯಿಂದ ಔಷಧ ಸಿಂಪಡಣೆಗೆ ಹೆಣಗಾಡುತ್ತಿದ್ದ ಅಡಕೆ ಕೃಷಿಕರಿಗೆ ಜೂನ್ ಮೊದಲ ವಾರ ಮಳೆಬಿಟ್ಟದ್ದು ಅನುಕೂಲವಾಯಿತು.

ಅರ್ಧಕ್ಕಿಂತ ಅಧಿಕ ತೋಟಗಳಲ್ಲಿ ಈಗಾಗಲೇ ಪ್ರಥಮ ಹಂತದ ಔಷಧ ಸಿಂಪಡಣೆ ಪೂರ್ಣಗೊಂಡಿದೆ. ಈ ಬಾರಿ ಉತ್ತಮ ಬೇಸಿಗೆ ಮಳೆಯಿಂದ ಅಡಕೆ ಬೇಗನೆ ಹಣ್ಣಾಗುವ ನಿರೀಕ್ಷೆ ಇದೆ. ನಳ್ಳಿ ಉದುರುವಿಕೆ ಕಡಿಮೆ ಇದ್ಧ ಕಾರಣ ಹಾಗೂ ನೀರಿನ ಕೊರತೆ ಕಂಡು ಬರದುದರಿಂದ ಹೆಚ್ಚಿನ ತೋಟಗಳಲ್ಲಿಉತ್ತಮ ಫಸಲು ಕಂಡು ಬರುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಕೃಷಿಕರು ಆಸಕ್ತರಾಗಿದ್ದಾರೆ. ನಾವು ಪ್ರತಿ ವರ್ಷ ನಮ್ಮ ಹಿರಿಯರಿಂದ ಬಂದ ಸುಮಾರು ಐದು ಎಕರೆ ಪ್ರದೇಶದಲ್ಲಿ ವರ್ಷಕ್ಕೆ ಎರಡು ಬಾರಿ ಗದ್ದೆ ಬೇಸಾಯ ಮಾಡುತ್ತಿದ್ದೇವೆ. ಏಣೇಲು ಬಿತ್ತನೆಯ ಪೂರ್ವ ತಯಾರಿ ಸಂಪೂರ್ಣಗೊಂಡಿದೆ ಎಂದಿದ್ದಾರೆ ರಮಾನಂದ ಶರ್ಮ, ಗದ್ದೆ ಕೃಷಿಕ, ಗುರಿಪಳ್ಳ, ನಡ.

ತಾಲೂಕಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಅಗತ್ಯ ಕೀಟನಾಶಕಗಳ ದಾಸ್ತಾನು ಸಾಕಷ್ಟು ಇದೆ. ಸಹಾಯಧನದಲ್ಲಿ ಬಿತ್ತನೆ ಬೀಜ ಲಭ್ಯವಿದ್ದು, ಆಸಕ್ತ ಕೃಷಿಕರು ಕಚೇರಿ ಸಮಯದಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದಿದ್ದಾರೆ ವೀರಭದ್ರಪ್ಪ ಎ.ಡಿ., ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಬೆಳ್ತಂಗಡಿ.

The post ಮುಂಗಾರು ಮತ್ತೆ ಚುರುಕು: ದಕ್ಷಿಣ ಕನ್ನಡದಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ appeared first on Good News 24x7.

]]>
ಮುಂಗಾರು ಮಳೆಗೆ ಮೈತುಂಬಿ ಹರಿಯುತ್ತಿವೆ ಕೊಡಗಿನ ಜಲಪಾತಗಳು…. https://www.goodnews24x7.com/%e0%b2%ae%e0%b3%81%e0%b2%82%e0%b2%97%e0%b2%be%e0%b2%b0%e0%b3%81-%e0%b2%ae%e0%b2%b3%e0%b3%86%e0%b2%97%e0%b3%86-%e0%b2%ae%e0%b3%88%e0%b2%a4%e0%b3%81%e0%b2%82%e0%b2%ac%e0%b2%bf-%e0%b2%b9%e0%b2%b0/ Sun, 01 Jun 2025 07:58:33 +0000 https://www.goodnews24x7.com/?p=4183 ಕೊಡಗು ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಮಳೆ ಅತಿ ಬೇಗ ಆರಂಭವಾಗಿದೆ. ಇದರಿಂದ ಜಿಲ್ಲೆಯ ಎಲ್ಲಾ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಪ್ರವಾಸಿಗರು ಈ ಅದ್ಭುತ ನೈಸರ್ಗಿಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಧಾವಿಸುತ್ತಿದ್ದಾರೆ. ಆದರೆ, ದುಬಾರೆಯಲ್ಲಿ ನದಿ ದಾಟಲು ನಿರ್ಬಂಧ ಹೇರಲಾಗಿದೆ. ಮಳೆಯಿಂದಾಗಿ ಕೆಲವು…

The post ಮುಂಗಾರು ಮಳೆಗೆ ಮೈತುಂಬಿ ಹರಿಯುತ್ತಿವೆ ಕೊಡಗಿನ ಜಲಪಾತಗಳು…. appeared first on Good News 24x7.

]]>

ಕೊಡಗು ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಮಳೆ ಅತಿ ಬೇಗ ಆರಂಭವಾಗಿದೆ. ಇದರಿಂದ ಜಿಲ್ಲೆಯ ಎಲ್ಲಾ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಪ್ರವಾಸಿಗರು ಈ ಅದ್ಭುತ ನೈಸರ್ಗಿಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಧಾವಿಸುತ್ತಿದ್ದಾರೆ. ಆದರೆ, ದುಬಾರೆಯಲ್ಲಿ ನದಿ ದಾಟಲು ನಿರ್ಬಂಧ ಹೇರಲಾಗಿದೆ. ಮಳೆಯಿಂದಾಗಿ ಕೆಲವು ಅನಾನುಕೂಲಗಳೂ ಇವೆ. ಆದರೂ, ಪ್ರವಾಸಿಗರು ಸಂತೋಷದಿಂದ ಕೊಡಗಿನ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕಳೆದ 15-20 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿತ್ತು. ಇದರಿಂದ ಅವಾಂತರಗಳು ಸೃಷ್ಟಿಯಾಗಿದ್ದವು. ಈ ನಡುವೆಯೇ ನಿರಂತರ ಮಳೆಯಿಂದ ಜಲಪಾತಗಳು ಮೈದುಂಬಿ ಹರಿಯುತ್ತಿದೆ. ಮೈದುಂಬಿ ಹರಿಯುತ್ತಿರು ಜಲಪಾತಗಳನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಹಾಗಿದ್ದರೆ ಯಾವೆಲ್ಲ ಜಲಪಾತಗಳು ಧುಮ್ಮುಕ್ಕುತ್ತಿವೆ? ಇಲ್ಲಿದೆ ವಿವರ. ಇನ್ನು ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಾಗ ಮುನ್ನ ಸರ್ಕಾರದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ. ರಾಜ್ಯಾದ್ಯಂತ ಸುರಿಯುತ್ತಿರುವ ಮುಂಗಾರು ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಈ ಮಳೆ ಬಹಳಷ್ಟು ಜನರಿಗೆ ಸಂಕಷ್ಟಗಳನ್ನು ತಂದೊಡ್ಡಿದೆ. ಹಾಗೇ, ಮಳೆಯಿಂದ ಸಾಕಷ್ಟು ಅನುಕೂಲವೂ ಆಗಿದೆ. ಮಳೆಗಾಲ ಆರಂಭವಾಗಿದ್ದರಿಂದ ಪ್ರವಾಸಿ ಜಿಲ್ಲೆ ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ತೆರಳುತ್ತಿದ್ದಾರೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.ಕೊಡಗು ಜಿಲ್ಲೆಯ ಪ್ರಸಿದ್ಧ ಅಬ್ಬಿ ಜಲಪಾತ ಧುಮ್ಮುಕ್ಕುತ್ತಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಕೊಡಗಿನ ಯಾವುದೇ ಜಲಪಾತಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನೀರು ಇರಲ್ಲ. ಆದರೆ, ಈ ವರ್ಷ ಮುಂಗಾರು ಬೇಗನೆ ಆರಂಭವಾಗಿರುವುದರಿಂದ ಅಬ್ಬಿ ಜಲಪಾತ ಮೈದುಂಬಿ ಹರಿಯುತ್ತಿದೆ.

ಇದು ಪ್ರವಾಸಿಗರಿಗೆ ಇನ್ನಿಲ್ಲದ ಖುಷಿ ನೀಡಿದೆ. ಮಡಿಕೇರಿ ನಗರದ ವೀವ್ ಪಾಯಿಂಟ್ ರಾಜಸೀಟ್ನಲ್ಲೂ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಜಿಜಟಿಪಿಟಿ ಮಳೆಯ ಮಧ್ಯೆಯೂ ಪ್ರವಾಸಿಗರು ರಾಜಾಸೀಟ್ನತ್ತ ಆಗಮಿಸುತ್ತಿದ್ದಾರೆ. ಆಗ್ಗಾಗೆ ಮಳೆ-ಬಿಸಿಲು ಬರುತ್ತಿರುವುದರಿಂದ ಜನರು ಕೊಡೆ, ರೈನ್ ಕೋಟ್ ಧರಿಸಿಕೊಂಡು ಆಗಮಿಸುತ್ತಿದ್ದಾರೆ. ಇನ್ನು, ದುಬಾರೆಯಲ್ಲಿ ನದಿ ದಾಟಲು ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ನದಿ ದಾಟಿ ಆನೆಗಳನ್ನು ನೋಡುವ ಆಸೆ ಕಮರಿ ಹೋಗಿದೆ. ಮಳೆಯ ಅಬ್ಬರದಿಂದ ಜಿಲ್ಲೆಯ ಮಲ್ಲಳ್ಳಿ, ಅಬ್ಬಿ, ಇರ್ಪು, ಚೇಲಾವರ ಜಲಪಾತಗಳು ಧುಮ್ಮುಕ್ಕುತ್ತಿವೆ. ಸಾಮಾನ್ಯವಾಗಿ ಜುಲೈ ಆಗಸ್ಟ್ ತಿಂಗಳಲ್ಲಿ ಸಿಗುವ ಮಳೆಗಾಲದ ಅನುಭವ ಈ ಬಾರಿ ಪ್ರವಾಸಿಗರಿಗೆ ಮೇ ತಿಂಗಳಲ್ಲೇ ಸಿಗುತ್ತಿದೆ. ಹೀಗಾಗಿ ಜಿಲ್ಲೆಗೆ ಆಗಮಿಸಿರುವ ಪ್ರವಾಸಿಗರು ಖುಷಿಯಿಂದಲೇ ಒಳ್ಳೆಯ ಅನುಭವ ಪಡೆದು ಹಿಂದಿರುಗುತ್ತಿದ್ದಾರೆ.

 

 

The post ಮುಂಗಾರು ಮಳೆಗೆ ಮೈತುಂಬಿ ಹರಿಯುತ್ತಿವೆ ಕೊಡಗಿನ ಜಲಪಾತಗಳು…. appeared first on Good News 24x7.

]]>