MOTHER Archives - Good News 24x7 https://www.goodnews24x7.com/tag/mother/ Kannada Mon, 22 Jun 2026 11:26:14 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg MOTHER Archives - Good News 24x7 https://www.goodnews24x7.com/tag/mother/ 32 32 ಯುವತಿ ಸೇರಿ ಹೆತ್ತವರ ದಾರುಣ ಅ*0ತ್ಯ https://www.goodnews24x7.com/a-young-woman-who-was-supposed-to-get-married-and-her-parents-met-a-tragic-end/ Mon, 22 Jun 2026 11:26:14 +0000 https://www.goodnews24x7.com/?p=9632 ಮೈಸೂರಿನ ಟಿ.ನರಸೀಪುರದಲ್ಲಿ ನಾಡಿದ್ದು ಮದುವೆಯಾಗಬೇಕಿದ್ದ ಯುವತಿ ಹಾಗೂ ಆಕೆಯ ಹೆತ್ತವರು ಅದೇ ಗ್ರಾಮದ ವ್ಯಕ್ತಿಯೋರ್ವನ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ದಾರುಣವಾಗಿ ಅಂ*ತ್ಯ ಕಂಡಿದ್ದಾರೆ. ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲೀಗ ಸೂತಕ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನವೂ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ವರುಣ…

The post ಯುವತಿ ಸೇರಿ ಹೆತ್ತವರ ದಾರುಣ ಅ*0ತ್ಯ appeared first on Good News 24x7.

]]>

ಮೈಸೂರಿನ ಟಿ.ನರಸೀಪುರದಲ್ಲಿ ನಾಡಿದ್ದು ಮದುವೆಯಾಗಬೇಕಿದ್ದ ಯುವತಿ ಹಾಗೂ ಆಕೆಯ ಹೆತ್ತವರು ಅದೇ ಗ್ರಾಮದ ವ್ಯಕ್ತಿಯೋರ್ವನ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ದಾರುಣವಾಗಿ ಅಂ*ತ್ಯ ಕಂಡಿದ್ದಾರೆ. ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲೀಗ ಸೂತಕ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನವೂ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ವರುಣ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರು, ಜೂನ್​​ 22: ದಾಂಪತ್ಯ ಜೀವನದ ಕನಸು ಕಂಡಿದ್ದ ಯುವತಿ ಸೇರಿ ಆಕೆಯ ಹೆತ್ತವರು ದಾರುಣ ಅಂ*ತ್ಯ ಕಂಡಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ವ್ಯಕ್ತಿಯೋರ್ವನಿಂದ ಯುವತಿಗೆ ಕಿರುಕುಳ ಹಿನ್ನೆಲೆ ವಿಷ ಸೇವಿಸಿ ಮೂವರು ಒಟ್ಟಿಗೆ ಪ್ರಾಣಬಿಟ್ಟಿದ್ದಾರೆ. ಶಿವಣ್ಣ, ನಾಗರತ್ನ ಹಾಗೂ ರಕ್ಷಿತಾ ಮೃ*ತರಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜೂನ್​​ 24, ಅಂದರೆ ನಾಡಿದ್ದು ರಕ್ಷಿತಾ ವಿವಾಹ ನಡೆಯಬೇಕಿತ್ತು. ಆದರೆ ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲೀಗ ಸೂತಕ ಆವರಿಸಿದೆ.

ರಕ್ಷಿತಾಗೆ ಉಲ್ಲಾಸ್ ಗೌಡ ಎಂಬಾತ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಈತನಿಗೆ ರಕ್ಷಿತಾ ಕಳುಹಿಸಿದ್ದ ಮೆಸೇಜ್ ಹಾಗೂ ಕೆಲವು ಫೋಟೋಗಳನ್ನು ಇಟ್ಟುಕೊಂಡು ಮಾನಸಿಕ ಹಿಂಸೆ ನೀಡಿದ್ದ ಎನ್ನಲಾಗಿದೆ. ರಕ್ಷಿತಾ ಜೊತೆ ಮದುವೆ ನಿಶ್ಚಯವಾಗಿದ್ದ ಹುಡುಗನಿಗೂ ಈತ ಫೋಟೋಗಳನ್ನು ಕಳುಹಿಸಿದ್ದ. ಹೀಗಾಗಿ ಮಾನಕ್ಕೆ ಅಂಜಿದ ಕುಟುಂಬಸ್ಥರು ಮನೆಯಲ್ಲೇ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಮೂವರ ಸಾ*ವಿಗೂ ಉಲ್ಲಾಸ್ ಗೌಡ‌ನೇ ಕಾರಣನೆಂದು ರಕ್ಷಿತಾ ಡೆ*ತ್​ನೋಟ್ ಬರೆದಿರೋದು ಕೂಡ ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ವರುಣ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಂಬಂಧಿಕರ ಆಕ್ರಂದನ

ಹಸೆಮಣೆ ಏರಬೇಕಿದ್ದ ಮೊಮ್ಮಗಳ ಜೊತೆ ಅಳಿಯ-ಮಗಳು ಕೂಡ ಮಸಣಕ್ಕೆ ಸೇರಿದ್ದಾರೆ. ರಕ್ಷಿತಾ ಮದುವೆಗೆ ಎಲ್ಲ ಸಿದ್ಧತೆಗಳು ನಡೆದಿತ್ತು. ಆದರೆ ಉಲ್ಲಾಸ್​​ ಗೌಡ ಎಂಬಾತ ಮದುವೆ ನಿಲ್ಲಿಸಬೇಕೆಂದು ನನ್ನ ಮೊಮ್ಮಗಳ ಮಾನ ತೆಗೆದಿದ್ದಾನೆ. ಈತ ನನ್ನ ಅಳಿಯನಿಗೆ ಪರಿಚಯಸ್ಥನಾಗಿದ್ದು, ಟ್ರ್ಯಾಕ್ಟರ್ ಓಡಿಸುತ್ತಿದ್ದ ಈತನಿಗೆ ಅಳಿಯನ ಜೊತೆ ಒಡನಾಟ ಇತ್ತು. ಆಗಾಗ ಮನೆಗೆ ಕೂಡ ಆತ ಬಂದು ಹೋಗುತ್ತಿದ್ದ. ನನ್ನ ಮಗಳು, ಅಳಿಯ ಮತ್ತು ಮೊಮ್ಮಗಳ ಸಾ*ವಿಗೆ ಕಾರಣವಾದ ಉಲ್ಲಾಸ್ ಗೌಡನಿಗೆ ಶಿಕ್ಷೆ ಆಗಬೇಕು ಎಂದು ರಕ್ಷಿತಾಳ ಅಜ್ಜಿ ಚಿನ್ನಮ್ಮ ಆಗ್ರಹಿಸಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರ ಆಕ್ರಂದನವೂ ಮುಗಿಲು ಮುಟ್ಟಿದೆ.

ಆ್ಯಂಬುಲೆನ್ಸ್​​ಗೆ ಗ್ರಾಮಸ್ಥರ ಮುತ್ತಿಗೆ

ಆರೋಪಿ ಉಲ್ಲಾಸ್ ಗೌಡ ಬಂಧನಕ್ಕೆ ಗ್ರಾಮಸ್ಥರು ಪಟ್ಟುಹಿಡಿದಿದ್ದು, ಬಂಧನವರೆಗೂ ಮೃ*ತದೇಹಗಳನ್ನು ತೆಗೆದುಕೊಂಡು ಹೋಗದಂತೆ ತಾಕೀತು ಮಾಡಿದ್ದಾರೆ. ಹೀಗಾಗಿ ಪೊಲೀಸರ ಜೊತೆ ಸಂಬಂಧಿಕರು ಹಾಗೂ ಗ್ರಾಮಸ್ಥರ ಮಾತಿನ ಚಕಮಕಿ ನಡೆದಿದೆ. ವಿರೋಧದ ನಡುವೆಯೂ ಶ*ವಗಳನ್ನು ಕೊಂಡೊಯ್ಯುತ್ತಿದ್ದ ಕಾರಣ ಆ್ಯಂಬುಲೆನ್ಸ್​ಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ ಪ್ರಸಂಗವೂ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಸಹಾಯಕ ಸಿ. ಟಿ.ಕುಮಾರ್ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರೂ ಗ್ರಾಮಸ್ಥರು ಮಾತ್ರ ನಿರ್ಧಾರದಿಂದ ಹಿಂದೆ ಸರಿದಿಲ್ಲ.

The post ಯುವತಿ ಸೇರಿ ಹೆತ್ತವರ ದಾರುಣ ಅ*0ತ್ಯ appeared first on Good News 24x7.

]]>
ಸೊಸೆಗೆ ಬೆಂಕಿ ಹಚ್ಚಿ ಜೀವ ತೆಗೆದ ಅತ್ತೆ, ಮಾವ, ಗಂಡ.. https://www.goodnews24x7.com/mother-in-law-father-in-law-husband-set-daughter-in-law-on-fire/ Sun, 24 Aug 2025 05:16:56 +0000 https://www.goodnews24x7.com/?p=6601 ಲಕ್ನೋ: ನಿಕ್ಕಿ ಎನ್ನುವ ಮಹಿಳೆ ಜೀವ ಕಳೆದುಕೊಂಡವರು. ಈಕೆಯ ಗಂಡ ವಿಪಿನ್​ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಘಟನೆಯ ನಂತರ ನಾಪತ್ತೆ ಆಗಿರುವ ಮಾವ, ಅತ್ತೆ ಮತ್ತು ಸೋದರ ಮಾವ ಈ ಮೂವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ವರದಕ್ಷಿಣೆಗಾಗಿ ಅತ್ತೆ, ಮಾವ…

The post ಸೊಸೆಗೆ ಬೆಂಕಿ ಹಚ್ಚಿ ಜೀವ ತೆಗೆದ ಅತ್ತೆ, ಮಾವ, ಗಂಡ.. appeared first on Good News 24x7.

]]>

ಲಕ್ನೋ: ನಿಕ್ಕಿ ಎನ್ನುವ ಮಹಿಳೆ ಜೀವ ಕಳೆದುಕೊಂಡವರು. ಈಕೆಯ ಗಂಡ ವಿಪಿನ್​ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಘಟನೆಯ ನಂತರ ನಾಪತ್ತೆ ಆಗಿರುವ ಮಾವ, ಅತ್ತೆ ಮತ್ತು ಸೋದರ ಮಾವ ಈ ಮೂವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ವರದಕ್ಷಿಣೆಗಾಗಿ ಅತ್ತೆ, ಮಾವ ಹಾಗೂ ಗಂಡ ಸೇರಿ ಸೊಸೆಗೆ ಮನ ಬಂದಂತೆ ಹೊಡೆದು ಮನೆಯಲ್ಲೇ ಬೆಂಕಿ ಹಚ್ಚಿ ಜೀವ ತೆಗೆದಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಈಕೆಯ ಗಂಡ ವಿಪಿನ್​ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಘಟನೆಯ ನಂತರ ನಾಪತ್ತೆ ಆಗಿರುವ ರೋಹಿತ್ (ಮಾವ), ದಯಾ (ಅತ್ತೆ) ಮತ್ತು ಸತ್ವೀರ್​ (ಸೋದರ ಮಾವ) ಈ ಮೂವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮಹಿಳೆ ನಿಕ್ಕಿ ಹಾಗೂ ಈಕೆಯ ಸಹೋದರಿ ಕಾಂಚಾಣ ಇಬ್ಬರು ಒಂದೇ ಮನೆಗೆ ಸೊಸೆಯಾಗಿದ್ದರು. ನಿಕ್ಕಿ ಹಾಗೂ ವಿಪಿನ್ 2016ರಲ್ಲಿ ಹರಿಯಾಣದ ಸಿರ್ಸಾದಲ್ಲಿ ಮದುವೆಯಾಗಿದ್ದರು. ಆದರೆ ಮದುವೆಯಲ್ಲಿ ವರದಕ್ಷಿಣೆಯಾಗಿ ಎಸ್​ಯುವಿ ಕಾರು, ಬೆಲೆಬಾಳುವ ಚಿನ್ನಾಭರಣಗಳನ್ನು ನೀಡಲಾಗಿತ್ತು. ಆದರೂ ವರದಕ್ಷಿಣೆಗಾಗಿ ಇಬ್ಬರಿಗೂ ಗಂಡನ ಮನೆಯವರು ಹೊಡೆಯುತ್ತಿದ್ದರು.

ತವರಿನಿಂದ ಹಣ ತರುವಂತೆ ಮನೆಯಲ್ಲಿ ನಿರಂತರ ಹಿಂಸೆ ಕೊಡುತ್ತಿದ್ದರು. ಹೀಗಾಗಿಯೇ ಮತ್ತೊಂದು ಕಾರನ್ನು ಕೂಡ ನೀಡಲಾಗಿತ್ತು ಎಂದು ಹೇಳಲಾಗಿದೆ. ಆದರೂ ಗಂಡನ ಮನೆಯವರ ವರದಕ್ಷಿಣೆಯ ಆಸೆ ನಿರಂತರವಾಗಿದ್ದರಿಂದ ಮನೆಯಲ್ಲಿ ಹೆಂಡತಿ ಜೊತೆ ವಿಪಿನ್ ಜಗಳ ತೆಗೆದು ಹೊಡೆದಿದ್ದಾನೆ. ಇದಕ್ಕೆ ಗಂಡನ ಪೋಷಕರು ಸಾಥ್ ಕೊಟ್ಟಿದ್ದಾರೆ. ಅದರಂತೆ ಗಂಡ ಹೊಡೆದು, ಕೋಪದಲ್ಲಿ ಹೆಂಡತಿಗೆ ಬೆಂಕಿ ಹಚ್ಚಿಬಿಟ್ಟಿದ್ದಾನೆ. ರಕ್ಷಣೆಗಾಗಿ ಬೆಂಕಿಯಲ್ಲೇ ಮಹಿಳೆ ಚೀರಾಡಿದ್ದಾಳೆ. ಈ ವೇಳೆ ಈಕೆಯ ಸಹೋದರಿಯನ್ನ ಹೊರಗಾಕಲಾಗಿತ್ತು. ಇದನ್ನು ನೋಡಿ ಸಹೋದರಿ ತೀವ್ರ ಭಯದಿಂದ ಕೂಗಿದ್ದಾಳೆ.

ತಕ್ಷಣ ಸ್ಥಳೀಯರು ಬಂದು ಮನೆ ಒಳಗೆ ತೀವ್ರ ಸುಟ್ಟ ಗಾಯಗಳಿಂದ ಬಿದ್ದಿದ್ದ ಮಹಿಳೆಯನ್ನ ರಕ್ಷಣೆ ಮಾಡಿ, ಗ್ರೇಟರ್ ನೋಯ್ಡಾದ ಫೋರ್ಟಿಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ದಾರಿ ಮಧ್ಯೆಯೇ ಮಹಿಳೆ ಜೀವ ಬಿಟ್ಟಿದ್ದಾಳೆ. ಸದ್ಯ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರುವ ನಿಕ್ಕಿಯ ಸಹೋದರಿ ಕಾಂಚಾಣ, ನನ್ನ ಸಹೋದರಿಗೆ ಆಕೆಯ ಗಂಡ ಮನಬಂದಂತೆ ಥಳಿಸಿದ್ದರಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾಗ ವಿಪಿನ್ ಬೆಂಕಿ ಹಚ್ಚಿದ್ದಾನೆ. ವರದಕ್ಷಿಣೆಗಾಗಿ ನಮಗೆ ಹಿಂಸಿಸುತ್ತಿದ್ದರು. ಮದುವೆಯಲ್ಲಿ ಬ್ರ್ಯಾಂಡೆಡ್​​ ಎಸ್​ಯುವಿ ಕಾರು ಹಾಗೂ ಬೆಲೆಬಾಳುವ ಚಿನ್ನಾಭರಣಗಳನ್ನ ನೀಡಲಾಗಿದೆ. ಆದರೂ ನಿಕ್ಕಿ ಕಡೆಯವರು ಇನ್ನು ಬೇಕು ಎನ್ನುತ್ತಿದ್ದರು. ಮದುವೆ ನಂತರವೂ 35 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದರು ಎಂದಿದ್ದಾಳೆ. ಇದರ ಬದಲಿಗೆ ಮತ್ತೊಂದು ಕಾರನ್ನು ಇವರಿಗೆ ನೀಡಲಾಗಿತ್ತು. ಆದರೂ ಅವರ ಕಿರುಕುಳ, ಹಿಂಸೆ ನಿರಂತರವಾಗಿತ್ತು. ನಾನು ಸ್ಥಳದಲ್ಲೇ ಇದ್ದರೂ ಸಹೋದರಿಯನ್ನ ಉಳಿಸಿಕೊಳ್ಳಲು ಆಗಲಿಲ್ಲ. ಇಬ್ಬರು ಒಂದೇ ಬಾರಿ ಮದುವೆ ಆಗಿದ್ದೇವು. ಸ್ಥಳೀಯರ ಸಹಾಯದಿಂದ ನಿಕ್ಕಿಯನ್ನ ಆಸ್ಪತ್ರೆಗೆ ಕರೆದುಕೊಂಡು ಬಂದೇವು ಎಂದು ಕಾಂಚಾಣ ಹೇಳಿದ್ದಾರೆ.

ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ನಿಕ್ಕಿ ಅವರ ಮಗು ಹೇಳಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಪ್ಪನೇ ಮಮ್ಮಿಗೆ ಬೆಂಕಿ ಹಚ್ಚಿ ಜೀವ ತೆಗೆದಿದ್ದಾನೆ ಎಂದು ಮಗು ಹೇಳಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ವಿಪಿನ್ ಹಾಗೂ ಅವರ ಮನೆಯವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ಸ್ಥಳೀಯರು ಕೂಡ ಆ ಕುಟುಂಬದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.

The post ಸೊಸೆಗೆ ಬೆಂಕಿ ಹಚ್ಚಿ ಜೀವ ತೆಗೆದ ಅತ್ತೆ, ಮಾವ, ಗಂಡ.. appeared first on Good News 24x7.

]]>
ಶತಾಯುಷಿ ತಾಯಿಗೆ ಪಾಂಡುರಂಗನ ದರ್ಶನ ಮಾಡಿಸಿದ ಮಗ: ಚಳಿ, ಗಾಳಿ, ಮಳೆ ಎನ್ನದೆ 220 ಕಿಮೀ ಪಾದಯಾತ್ರೆ ಕೈಗೊಂಡ ಆಧುನಿಕ ಶ್ರವಣಕುಮಾರ. https://www.goodnews24x7.com/son-gives-centenarian-mother-a-glimpse-of-panduranga-a-modern-shravankumara-who-braved-cold-wind-and-rain-to-undertake-a-220-km-trek/ Tue, 19 Aug 2025 05:10:58 +0000 https://www.goodnews24x7.com/?p=6378 ಬಾವನಸೌಂದತ್ತಿ: ದೇವರ ಮೇಲಿನ ನಂಬಿಕೆಯು ಅಸಾಧ್ಯವನ್ನೂ ಸಾಧ್ಯವಾಗಿಸಬಲ್ಲದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿ ನಿಂತಿದ್ದಾರೆ ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದ ಸದಾಶಿವ ಬಾನೆ. ಪಂಢರಪುರ ವಿಠ್ಠಲನ ಭಕ್ತರಾದ ಸದಾಶಿವರು ತಾಯಿಯ ಮಹದಾಸೆ ಈಡೇರಿಸಲು ಮಾಡಿದ ಸಾಹಸ ಎಲ್ಲರ ಮನಗೆದ್ದಿದೆ. ರಾಮಾಯಣದಲ್ಲಿ ಕಾಣುವ ಶ್ರವಣಕುಮಾರನ…

The post ಶತಾಯುಷಿ ತಾಯಿಗೆ ಪಾಂಡುರಂಗನ ದರ್ಶನ ಮಾಡಿಸಿದ ಮಗ: ಚಳಿ, ಗಾಳಿ, ಮಳೆ ಎನ್ನದೆ 220 ಕಿಮೀ ಪಾದಯಾತ್ರೆ ಕೈಗೊಂಡ ಆಧುನಿಕ ಶ್ರವಣಕುಮಾರ. appeared first on Good News 24x7.

]]>

ಬಾವನಸೌಂದತ್ತಿ: ದೇವರ ಮೇಲಿನ ನಂಬಿಕೆಯು ಅಸಾಧ್ಯವನ್ನೂ ಸಾಧ್ಯವಾಗಿಸಬಲ್ಲದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿ ನಿಂತಿದ್ದಾರೆ ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದ ಸದಾಶಿವ ಬಾನೆ. ಪಂಢರಪುರ ವಿಠ್ಠಲನ ಭಕ್ತರಾದ ಸದಾಶಿವರು ತಾಯಿಯ ಮಹದಾಸೆ ಈಡೇರಿಸಲು ಮಾಡಿದ ಸಾಹಸ ಎಲ್ಲರ ಮನಗೆದ್ದಿದೆ.

ರಾಮಾಯಣದಲ್ಲಿ ಕಾಣುವ ಶ್ರವಣಕುಮಾರನ ಕಥೆ ನಮಗೆ ತಿಳಿದಿದೆ—ತಮ್ಮ ದೃಷ್ಟಿಹೀನ ತಾಯ್ತಂದೆಗಳನ್ನು ಕಾವಡದಲ್ಲಿ ಕೂರಿಸಿ ತೀರ್ಥಯಾತ್ರೆಗೆ ಕರೆದೊಯ್ಯುತ್ತಿದ್ದನು. ಈ ಪವಿತ್ರ ಕಥೆಯ ಪ್ರತಿಬಿಂಬವನ್ನು ನಾವಿಂದು 21ನೇ ಶತಮಾನದಲ್ಲೂ ನೋಡಿ ಬೆರಗಾಗುತ್ತಿದ್ದೇವೆ.

ತಾಯಿಯ ಆಶಯಕ್ಕೆ ಜೀವಿತರೂಪ ಕೊಟ್ಟ ಮಗ:

55 ವರ್ಷದ ಸದಾಶಿವ ಬಾನೆ ಅವರು ತಮ್ಮ ಶತಾಯುಷಿ ತಾಯಿ ಸತ್ಯವ್ವ ಲಕ್ಷ್ಮಣ ಬಾನೆ ಅವರ ಏಕೈಕ ಆಸೆ ಈಡೇರಿಸಿದ್ದಾರೆ. ತಾಯಿಯನ್ನು ತಮ್ಮ ಹೆಗಲ ಮೇಲೆ ಹೊತ್ತು, 220 ಕಿಮೀ ದೂರ ಪಾದಯಾತ್ರೆ ಮೂಲಕ ಪಂಢರಪುರದ ಪಾಂಡುರಂಗನ ದರ್ಶನ ಮಾಡಿಸಿದ್ದಾರೆ.

ಸತತ 15 ವರ್ಷಗಳಿಂದ ವಿಠ್ಠಲ ಭಕ್ತಿಯಾಗಿ ಪಂಢರಪುರಕ್ಕೆ ಹೋಗುತ್ತಿರುವ ಸದಾಶಿವರು, ಈ ಬಾರಿ ತಾಯಿಯ ಕನಸನ್ನು ಈಡೇರಿಸಬೇಕು ಎಂಬ ಉದ್ದೇಶದಿಂದ ದಿಂಡಿಯಾತ್ರೆಯಲ್ಲಿ ಭಾಗವಹಿಸಿ, ತಾಯಿ ಸತ್ಯವ್ವರನ್ನು ಎಳೆಯುತ್ತಾ ಹೆಗಲ ಮೇಲೆ ಹೊತ್ತು ತೀವ್ರ ಮಳೆ, ಚಳಿ, ಗಾಳಿ ಮಧ್ಯೆಯೂ 9 ದಿನಗಳ ಕಾಲ ಪಾದಯಾತ್ರೆ ನಡೆಸಿ ಗಮ್ಯಕ್ಕೆ ತಲುಪಿದ್ದಾರೆ.

ಜನಮನದಲ್ಲಿ ‘ಆಧುನಿಕ ಶ್ರವಣಕುಮಾರ’ ಎಂಬ ಖ್ಯಾತಿಗೆ ಪಾತ್ರರಾದ ಸದಾಶಿವ, ಭಕ್ತಿಯ ಶಕ್ತಿ ಮತ್ತು ತಾಯಿಗೆ ತೋರಿದ ಪ್ರೀತಿಯ ಜೊತೆಗೆ, ಸಮಾಜದ ಮುಂದೆ ನಿಜವಾದ ಗೌರವದ ಪಾಠವನ್ನು ಬೋಧಿಸಿದ್ದಾರೆ.

The post ಶತಾಯುಷಿ ತಾಯಿಗೆ ಪಾಂಡುರಂಗನ ದರ್ಶನ ಮಾಡಿಸಿದ ಮಗ: ಚಳಿ, ಗಾಳಿ, ಮಳೆ ಎನ್ನದೆ 220 ಕಿಮೀ ಪಾದಯಾತ್ರೆ ಕೈಗೊಂಡ ಆಧುನಿಕ ಶ್ರವಣಕುಮಾರ. appeared first on Good News 24x7.

]]>
ಏರ್ ಇಂಡಿಯಾ ವಿಮಾನ ದುರಂತದ ವೇಳೆ ಟೀ ಅಂಗಡಿ ಬಳಿ ನಿಂತಿದ್ದ 14 ವರ್ಷದ ಬಾಲಕ ಸಾ*ವು! https://www.goodnews24x7.com/14-year-old-boy-dies-while-standing-near-tea-stall-during-air-india-plane-crash/ Sat, 14 Jun 2025 11:55:17 +0000 https://www.goodnews24x7.com/?p=4392 ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದ ವೇಳೆ ಅಲ್ಲೇ ಪಕ್ಕದ ಟೀ ಸ್ಟಾಲ್ ಬಳಿ ನಿಂತಿದ್ದ 14 ವರ್ಷದ ಬಾಲಕ ಬೆಂಕಿಯ ತೀವ್ರತೆಗೆ ಸಿಲುಕಿ ದಾರುಣ ಅಂತ್ಯ ಕಂಡಿದ್ದಾನೆ.             ಆಕಾಶ್ (14) ಮೃತ…

The post ಏರ್ ಇಂಡಿಯಾ ವಿಮಾನ ದುರಂತದ ವೇಳೆ ಟೀ ಅಂಗಡಿ ಬಳಿ ನಿಂತಿದ್ದ 14 ವರ್ಷದ ಬಾಲಕ ಸಾ*ವು! appeared first on Good News 24x7.

]]>

ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದ ವೇಳೆ ಅಲ್ಲೇ ಪಕ್ಕದ ಟೀ ಸ್ಟಾಲ್ ಬಳಿ ನಿಂತಿದ್ದ 14 ವರ್ಷದ ಬಾಲಕ ಬೆಂಕಿಯ ತೀವ್ರತೆಗೆ ಸಿಲುಕಿ ದಾರುಣ ಅಂತ್ಯ ಕಂಡಿದ್ದಾನೆ.

 

 

 

 

 

 

ಆಕಾಶ್ (14) ಮೃತ ಬಾಲಕ. ಬಿಜೆ ಹಾಸ್ಟೆಲ್ನ ಮುಂಭಾಗ ಆಕಾಶ್ ಕುಟುಂಬವು ಟೀ ಅಂಗಡಿ ಇಟ್ಟುಕೊಂಡಿದ್ದರು. ಆಕಾಶ್ ತಾಯಿಗೆ ತಿಂಡಿ ಕೊಡಲು ಅಂಗಡಿ ಬಳಿ ಹೋಗಿದ್ದ. ವಿಮಾನ ದುರಂತದ ವೇಳೆ ಆಕಾಶ್ ಟೀ ಅಂಗಡಿಯ ಮುಂದೆ ನಿಂತಿದ್ದ. ಇದ್ದಕ್ಕಿದ್ದಂತೆ ಸ್ಫೋಟದಿಂದ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಆಕಾಶ್ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

 

 

 

 

 

 

 

ಆಕಾಶ್ನನ್ನು ಕಳೆದುಕೊಂಡ ಸಹೋದರ ಕಲ್ಪೇಶ್ ಆಕ್ರಂದನ ಮುಗಿಲು ಮುಟ್ಟಿದೆ. ನನ್ನ ದೊಡ್ಡಣ್ಣ ನನಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ನಾನು ಆಟೋ ಓಡಿಸುತ್ತಿದ್ದೆ. ಬೆಂಕಿ ತೀವತ್ರೆಗೆ ಗಾಯಗೊಂಡಿದ್ದ ನನ್ನ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದರು. ನನ್ನ ತಮ್ಮ ಅಲ್ಲೇ ಸಿಲುಕಿದ್ದ. ನನ್ನ ತಮ್ಮನನ್ನು ಒಮ್ಮೆ ನೋಡಲು ಬಿಡಿ ಎಂದು ಕಣ್ಣೀರು ಹಾಕುತ್ತಿದ್ದಾರೆ.

ನನ್ನ ತಮ್ಮ ಆಕಾಶ್ ಕೂಡ ಅಲ್ಲೇ ಇದ್ದ. ಆದರೆ ಅವನನ್ನು ಯಾರೂ ರಕ್ಷಣೆ ಮಾಡೋರಿಲ್ಲದೆ ಸಾವನ್ನಪ್ಪಿದ್ದಾನೆ. ನನ್ನ ತಮ್ಮ ಇಲ್ಲದೆ ನಾನು ಹೇಗೆ ಬದುಕಲಿ. ಒಮ್ಮೆ ನನ್ನ ಸಹೋದರನ ಮುಖ ನೋಡಲು ಬಿಡಿ.  ನನ್ನ ತಾಯಿಗೆ ಇನ್ನೂ ವಿಷಯ ತಿಳಿದಿಲ್ಲ. ಆಕೆಗೆ ಕೂಡ ಚಿಕಿತ್ಸೆ ಕೊಡಿಸಲಾಗ್ತಿದೆ. ಮಗ ಹೇಗಿದ್ದಾನೆ ಎಂದು ಕೇಳ್ತಿದ್ದಾರೆ. ಆಕಾಶ್ಗೆ ಏನೂ ಆಗಿಲ್ಲ, ಚೆನ್ನಾಗಿದ್ದಾನೆ ಎಂದು ಅವರನ್ನು ಸಮಾಧಾನಪಡಿಸಿದ್ದೇವೆ ಎಂದು ದುಃಖಿಸಿದರು.

The post ಏರ್ ಇಂಡಿಯಾ ವಿಮಾನ ದುರಂತದ ವೇಳೆ ಟೀ ಅಂಗಡಿ ಬಳಿ ನಿಂತಿದ್ದ 14 ವರ್ಷದ ಬಾಲಕ ಸಾ*ವು! appeared first on Good News 24x7.

]]>
ಸರ್ಪ ದೋಷ ನಿವಾರಣೆಗೆಂದು ತನ್ನ ಮಗಳನ್ನೇ ನರಬ*ಲಿ ನೀಡಿದ ಕ್ರೂರ ತಾಯಿ….. https://www.goodnews24x7.com/the-cruel-mother-who-sacrificed-her-daughter-to-remove-the-snakes-evil/ Mon, 14 Apr 2025 11:14:57 +0000 https://www.goodnews24x7.com/?p=3252 ಹೌದು ವೀಕ್ಷಕರೇ ಇಂತಹದೊಂದು ಕ್ರೂರ ಘಟನೆ ಭಾರತದಲ್ಲಿ ನಡೆದಿದೆ ಎಂಬುವುದನ್ನು ನಂಬಲಾಗದಿದ್ದರೂ ಇದೇ ಸತ್ಯ. ತಾಯಿ ಎಂಬ ಪದಕ್ಕೆ ತದ್ವಿರುದ್ಧವಾದ ಆಕೆಯ ಹೆಸರು ಭಾರತಿ. ಯಾವುದೇ ಒಂದು ವಿಚಾರದ ಮೇಲೆ ನಂಬಿಕೆ ಇರಬೇಕು, ಆದರೆ ಮೂಢನಂಬಿಕೆ ಇರಬಾರದು, ಮೂಢನಂಬಿಕೆಯಿಂದ ಒಂದು ಜೀವವನ್ನು…

The post ಸರ್ಪ ದೋಷ ನಿವಾರಣೆಗೆಂದು ತನ್ನ ಮಗಳನ್ನೇ ನರಬ*ಲಿ ನೀಡಿದ ಕ್ರೂರ ತಾಯಿ….. appeared first on Good News 24x7.

]]>

ಹೌದು ವೀಕ್ಷಕರೇ ಇಂತಹದೊಂದು ಕ್ರೂರ ಘಟನೆ ಭಾರತದಲ್ಲಿ ನಡೆದಿದೆ ಎಂಬುವುದನ್ನು ನಂಬಲಾಗದಿದ್ದರೂ ಇದೇ ಸತ್ಯ. ತಾಯಿ ಎಂಬ ಪದಕ್ಕೆ ತದ್ವಿರುದ್ಧವಾದ ಆಕೆಯ ಹೆಸರು ಭಾರತಿ. ಯಾವುದೇ ಒಂದು ವಿಚಾರದ ಮೇಲೆ ನಂಬಿಕೆ ಇರಬೇಕು, ಆದರೆ ಮೂಢನಂಬಿಕೆ ಇರಬಾರದು, ಮೂಢನಂಬಿಕೆಯಿಂದ ಒಂದು ಜೀವವನ್ನು ಬಲಿ ಪಡೆಯುತ್ತದೆ ಎಂದರೆ ಏನ್ ಅರ್ಥ? ಜಗತ್ತು ವೇಗವಾಗಿ ತಂತ್ರಜ್ಞಾನದ ಹಿಂದೆ ಓಡುತ್ತಿದೆ. ಆದರೆ ಕೆಲವೊಂದು ಕಡೆ ಮೂಢನಂಬಿಕೆ ಕೊನೆಯಾಗಿಲ್ಲ ನೋಡಿ. ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಮೋತೆ ಮಂಡಲದ ಮೇಕಲ ತಾಂಡಾದಲ್ಲಿ ಮಹಿಳೆಯೊಬ್ಬರು ತನ್ನ ಮಗಳನೇ ನರಬಲಿ ನೀಡಿರುವ ಘಟನೆ ನಡೆದಿದೆ.ಆದರೆ ಆಕೆ ತನ್ನ ಮಗಳನ್ನು ನರ ಬಲಿ ಕೊಟ್ಟಿದ್ದಾದರೂ ಯಾಕೆ ಅಂತೀರಾ? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಒಂದು ನಂಬಿಕೆ ಎನ್ನುವುದು ನಮ್ಮ ಜೀವನವನ್ನು ರೂಪಿಸುತ್ತದೆ, ಅದೇ ಒಂದು ಮೂಢನಂಬಿಕೆ ನಮ್ಮ ಜೀವನವನ್ನೇ ಕೊನೆ ಮಾಡುತ್ತದೆ. ಪದಗಳ ವ್ಯತ್ಯಾಸದಷ್ಟೇ, ಅವುಗಳ ಆಚರಣೆಯಲ್ಲೂ ವ್ಯತ್ಯಾಸ ಇದೆ. ಒಬ್ಬ ಮನುಷ್ಯನಿಗೆ ನಂಬಿಕೆ ಇರಬೇಕು, ಆದರೆ ಮೂಢನಂಬಿಕೆ ಇರಬಾರದು, ಅದು ಈ ಆಧುನಿಕ ಜಗತ್ತಿನಲ್ಲಿ, ಇಡೀ ಜಗತ್ತು ತಂತ್ರಜ್ಞಾನದ ಹಿಂದೆ ಓಡುತ್ತಿದೆ. ಎಐ ಅಂತಹ ವಿಚಾರಗಳ ಮುಂದೆ ಈ ಮೂಢನಂಬಿಕೆ ಎಂಬ ಭೂತ ಇನ್ನು ಹೋಗಿಲ್ಲ ನೋಡಿ. ಹೌದು ಇಲ್ಲೊಂದು ಘಟನೆ ಇಡೀ ಮನುಷ್ಯ ಕುಲಕ್ಕೆ ಅವಮಾನ. ಅದರಲ್ಲೂ ತಾಯಿ ಎನ್ನುವ ಪದಕ್ಕೆ ಕಳಂಕ ತಂದಿದೆ. ತನ್ನ ಅತಿಯಾದ ಮೂಢನಂಬಿಕೆಯಿಂದ ಸ್ವಂತ ಮಗಳನ್ನೇ ತಾಯಿಯೊಬ್ಬಳು ಬಲಿ ನೀಡಿದ್ದಾಳೆ. ಈ ಘಟನೆ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಮೋತೆ ಮಂಡಲದ ಮೇಕಲ ತಾಂಡಾದಲ್ಲಿ ನಡೆದಿದೆ. ಕೃಷ್ಣ ಮತ್ತು ಭಾರತಿ ಎಂಬ ದಂಪತಿಗಳು ಇಲ್ಲಿ ವಾಸವಾಗಿದ್ದರು. ಭಾರತಿ ಮತ್ತು ಕೃಷ್ಣ ಅವರ ಮದುವೆಗೆ ಭಾರತಿ ಮನೆಯವರ ಒಪ್ಪಿಗೆ ಇರಲಿಲ್ಲ. ಬಲವಂತವಾಗಿ ಭಾರತಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಿದ್ದಾರೆ. ಆದರೆ ಆಕೆ ಆತನ ಜತೆ ಸಂಸಾರ ನಡೆಸದೆ. ಕೃಷ್ಣನ ಜತೆಗೆ ಓಡಿ ಹೋಗಿ 2019ರಲ್ಲಿ ಕೃಷ್ಣ ಅವರನ್ನು ವಿವಾಹವಾದರು. ಹೀಗೆ ಅವರ ಪ್ರೀತಿಯ ಸಂಕೇತವಾಗಿ ಒಬ್ಬಳು ಮಗಳು ಜನಿಸಿದಳು.

ಭಾರತಿಗೆ ಮೊದಲಿನಿಂದಲ್ಲೂ ದೇವರ ಬಗ್ಗೆ ಅಥವಾ ಜ್ಯೋತಿಷ್ಯದ ಬಗ್ಗೆ ಅಪಾರ ನಂಬಿಕೆ, ಆ ಕಾರಣಕ್ಕೆ ಆಕೆಗೆ ಒಬ್ಬ ಜ್ಯೋತಿಷ್ಯರು ಸರ್ಪ ದೋಷ ಇದೆ ಎಂದು ಹೇಳಿದರು. ಅಂದಿನಿಂದ ಆಕೆ ಎಲ್ಲ ಕಡೆ ಸರ್ಪ ದೋಷ ನಿವಾರಣೆ ಪೂಜೆ, ಆ ಪೂಜೆ, ಈ ಪೂಜೆ ಎಲ್ಲ ಮಾಡುತ್ತಿದ್ದಳು. ಆದರೆ ತಾಯಿಯ ಈ ಮೂಢನಂಬಿಕೆ ಬಗ್ಗೆ ಆಕೆಯ ಮಗಳು ಅಸಡ್ಡೆ ತೋರುತ್ತಿದ್ದಳು. ಈಕೆಯ ಈ ವರ್ತನೆ ನೋಡಿ ಗಂಡ ಕೃಷ್ಣ ಹಾಗೂ ಆಕೆಯ ಅತ್ತೆ-ಮಾವ ಮನೋವೈದ್ಯರ ಬಳಿಗೆ ಕರೆದೊಯ್ಯಲು ನಿರ್ಧಾರಿಸಿದರು. ಆದರೆ ಆಕೆ ಈ ಮೂಢನಂಬಿಕೆಗೆ ಒಳಗಾಗಿ, ನಾನು ಮಂತ್ರ ಶಕ್ತಿಯಿಂದ ಸರಿಯಾಗುತ್ತೇನೆ ಎಂದು ಚಿಕಿತ್ಸೆಯನ್ನು ವಿರೋಧಿಸಿದಳು.

ಸ್ವಲ್ಪ ದಿನಗಳ ನಂತರ ಭಾರತಿ ಈ ಸರ್ಪ ದೋಷದಿಂದ ಮುಕ್ತಿ ಪಡೆಯಲು ನರಬಲಿ ಪೂಜೆ ಮಾಡಬೇಕು ಎಂದು ನಿರ್ಧಾರಿಸಿದಳು. ಇದಕ್ಕೆ ಏಪ್ರಿಲ್ 15, 2021 ರಂದು, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ಸರ್ಪ ದೋಷದಿಂದ ಮುಕ್ತಿಗೆ ಈ ದಾರಿ ಸರಿ ಎಂದು ಭಾರತಿ ತನ್ನ ಏಳು ವರ್ಷ ಮಗಳ ನಾಲಿಗೆ ಮತ್ತು ಗಂಟಲನ್ನು ಕತ್ತರಿಸಿ ಕ್ರೂರವಾಗಿ ಕೊಂದು ಹಾಕಿದ್ದಾಳೆ. ನಂತರ ಸ್ಥಳದಿಂದ ಭಾರತಿ ಪರಾರಿಯಾಗಿದ್ದಾಳೆ. ಕೃಷ್ಣ ಮನೆಗೆ ಬಂದು ನೋಡಿದ್ರೆ, ತನ್ನ ಮಗುವು ರಕ್ತ ಮಡುವಿನಲ್ಲಿ ಬಿದ್ದಿರುವುದು ಕಂಡು ಅಘಾತಕ್ಕೆ ಒಳಗಾಗಿದ್ದ, ನಂತರ ಈ ವಿಷಯನ್ನು ಪೋಲಿಸರಿಗೆ ತಿಳಿಸಿದ್ದಾನೆ.ಪೊಲೀಸರು ತನಿಖೆಯನ್ನು ನಡೆಸಿ, ತಾಯಿ ಭಾರತಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ತನಿಖೆ ನಡೆಸಿದ ಪೊಲೀಸರು, ಆಕೆಯನ್ನು ಕೋರ್ಟ್ ಮುಂದೆ ಹಾಜರು ಪಡಿಸಿದ್ದಾರೆ. ಪೊಲೀಸ್ ಇಲಾಖೆ ನಡೆಸಿದ ಎಲ್ಲ ತನಿಖೆಗಳ ವರದಿಯನ್ನು ಕೋರ್ಟ್ ಮುಂದೆ ಇಟ್ಟಿದ್ದಾರೆ. ಆಕೆ ತಪ್ಪಿಗೆ ಬಲವಾದ ಸಾಕ್ಷಿಗಳಿದ್ದು, ಕೋರ್ಟ್ ಆಕೆಗೆ ಮರಣದಂಡನೆ ನೀಡಿದೆ. ಸೂರ್ಯಪೇಟೆ ಜಿಲ್ಲಾ ನ್ಯಾಯಾಲಯದ ಮೊದಲ ಹೆಚ್ಚುವರಿ ನ್ಯಾಯಾಧೀಶ ಎಂ. ಶ್ಯಾಮ್ ಶ್ರೀ ತೀರ್ಪು ನೀಡಿದ್ದಾರೆ. ಹಾಗೂ ಆಕೆಗೆ 5 ಸಾವಿರ ದಂಡ ವಿಧಿಸಲಾಯಿತು. ಒಂದು ವೇಳೆ ದಂಡ ಪಾವತಿಸದಿದ್ದಾರೆ. 3 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆಯನ್ನು ವಿಧಿಸುತ್ತದೆ ಎಂದು ಹೇಳಿದೆ.

The post ಸರ್ಪ ದೋಷ ನಿವಾರಣೆಗೆಂದು ತನ್ನ ಮಗಳನ್ನೇ ನರಬ*ಲಿ ನೀಡಿದ ಕ್ರೂರ ತಾಯಿ….. appeared first on Good News 24x7.

]]>
ಲವ್ ಹೆಸರಿನಲ್ಲಿ ಆಕೆಯನ್ನು ಬಳಸಿಕೊಂಡು ಮೋಸ- ತಾಯಿ ಮಗಳು ಬ*ಲಿ…! https://www.goodnews24x7.com/%e0%b2%b2%e0%b2%b5%e0%b3%8d-%e0%b2%b9%e0%b3%86%e0%b2%b8%e0%b2%b0%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%86%e0%b2%95%e0%b3%86%e0%b2%af%e0%b2%a8%e0%b3%8d%e0%b2%a8%e0%b3%81/ Fri, 14 Mar 2025 12:08:02 +0000 https://www.goodnews24x7.com/?p=2772 ಪ್ರೇಮಿಗಳಿಬ್ಬರೂ ಅಕ್ಕಪಕ್ಕದ ಗ್ರಾಮದವರು. ಇಬ್ಬರ ನಡುವೆ ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ಆತನ ಬಣ್ಣ ಬಣ್ಣದ ಮಾತನ್ನೇ ನಿಜವಾದ ಪ್ರೀತಿ ಅಂದುಕೊಂಡಿದ್ದ ಆಕೆ, ತನ್ನನ್ನ ತಾನು ಅರ್ಪಿಸಿಕೊಂಡಿದ್ದಳು. ಆಕೆಯ ಮುಗ್ದತೆಯನ್ನ ಬಳಸಿಕೊಂಡಿದ್ದ ಪ್ರೇಮಿ, ಆಕೆಯನ್ನ ಬಳಸಿಕೊಂಡು ಮೋಸ ಮಾಡಿದ್ದಾನೆ. ಇದರಿಂದ ಮನನೊಂದು ಯುವತಿ ಆತ್ಮಹತ್ಯೆ…

The post ಲವ್ ಹೆಸರಿನಲ್ಲಿ ಆಕೆಯನ್ನು ಬಳಸಿಕೊಂಡು ಮೋಸ- ತಾಯಿ ಮಗಳು ಬ*ಲಿ…! appeared first on Good News 24x7.

]]>

ಪ್ರೇಮಿಗಳಿಬ್ಬರೂ ಅಕ್ಕಪಕ್ಕದ ಗ್ರಾಮದವರು. ಇಬ್ಬರ ನಡುವೆ ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ಆತನ ಬಣ್ಣ ಬಣ್ಣದ ಮಾತನ್ನೇ ನಿಜವಾದ ಪ್ರೀತಿ ಅಂದುಕೊಂಡಿದ್ದ ಆಕೆ, ತನ್ನನ್ನ ತಾನು ಅರ್ಪಿಸಿಕೊಂಡಿದ್ದಳು. ಆಕೆಯ ಮುಗ್ದತೆಯನ್ನ ಬಳಸಿಕೊಂಡಿದ್ದ ಪ್ರೇಮಿ, ಆಕೆಯನ್ನ ಬಳಸಿಕೊಂಡು ಮೋಸ ಮಾಡಿದ್ದಾನೆ. ಇದರಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳ ಸಾವಿನ ಮನನೊಂದಿದ್ದ ತಾಯಿ, ಮಗಳ ಸಾವಿಗೆ ನ್ಯಾಯ ಸಿಗಲಿಲ್ಲವೆಂದು ನೇಣಿಗೆ ಶರಣಾಗಿದ್ದಾಳೆ. ಸಕ್ಕರಿನಗರಿ ಮಂಡ್ಯದಲ್ಲಿ ನಡೆದ ಮನಕಲಕುವ ಘಟನೆ ವಿವರ ಇಲ್ಲಿದೆ.
ಯುವಕ ಆಕೆಯನ್ನು ನಿಜವಾಗಿಯೂ ಪ್ರೀತಿಸುತ್ತಿದ್ದಾನೆ ಎಂದು ತಿಳಿದಿದ್ದಳು, ಆದರೆ ಅಲ್ಲಿ ನಿಜವಾಗಿಯೂ ನಡೆದಿದ್ದೇ ಬೇರೆ. ಲವ್, ಸೆಕ್ಸ್ ದೋಖಾಕ್ಕೆ ತಾಯಿ ಮಗಳು ಇಬ್ಬರು ಬಲಿಯಾಗಿರುವ ದಾರುಣ ಘಟನೆ ಸಕ್ಕರೆ ನಗರಿ ಮಂಡ್ಯದಲ್ಲಿ ನಡೆದಿದೆ. ಹೌದು..ಯುವಕನ ಪ್ರೀತಿ ಹುಚ್ಚಾಟಕ್ಕೆ ತಾಯಿ ಲಕ್ಷ್ಮಿ ಹಾಗೂ ಮಗಳು ವಿಜಯಲಕ್ಷ್ಮೀ ಬಲಿಯಾಗಿರುವ ಮನಕಲಕುವ ಘಟನೆ ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ ನಡೆದಿದೆ. ಪ್ರೀತಿಸಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಪ್ರಿಯತಮ ಹರಿಕೃಷ್ಣ ಮೋಸ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಮನನೊಂದ ಯುವತಿ ವಿಜಯಲಕ್ಷ್ಮೀ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದರಿಂದ ಮನನೊಂದಿದ್ದ ಯುವತಿ ತಾಯಿ ಲಕ್ಷ್ಮೀ ಸಹ ಮಗಳ ಸಾವಿಗೆ ನ್ಯಾಯ ಸಿಗಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವಕನ ಪ್ರೀತಿಯ ಹುಚ್ಚಾಟಕ್ಕೆ 21 ದಿನಗಳಲ್ಲಿ ತಾಯಿ ಮಗಳು ದುರಂತ ಅಂತ್ಯಕಂಡಿದ್ದಾರೆ.
ಈ ಅಮಾನವೀಯ ಘಟನೆ ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದ ವಿಜಯಲಕ್ಷ್ಮೀ ಇತ್ತೀಚೆಗಷ್ಟೇ ಡಿಗ್ರಿ ಮುಗಿಸಿ ಮಂಡ್ಯದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಈ ಮಧ್ಯೆ ಓದುವಾಗಲೇ ತನ್ನೂರಿನ ಮೊಮ್ಮಗ, ಪಕ್ಕದ ಗ್ರಾಮ ಮಾರಸಿಂಗನಹಳ್ಳಿ ಗ್ರಾಮದ ಹರಿಕೃಷ್ಣ ಎಂಬಾತನ ಪ್ರೀತಿ ಬಲೆಗೆ ಬಿದ್ದಿದ್ದಳು. ಪರಸ್ಪರ ಇಬ್ಬರು ಒಂದೂವರೆ ವರ್ಷದಿಂದ ಪ್ರೀತಿಸಿದ್ದರು. ಹರಿಕೃಷ್ಣ ಪ್ರೀತಿಯ ಹರಿ ಕಥೆಗೆ ಮರುಳಾಗಿ ವಿಜಯಲಕ್ಷ್ಮೀ ತನ್ನನ್ನ ನಂಬಿ ಮನಸ್ಸಿಗೆ ಹಚ್ಚಿಕೊಂಡಿದ್ದಳು.

ಆದರೆ, ಈ ಮಧ್ಯೆ ಹರಿಕೃಷ್ಣಬೇರೆ ಹುಡುಗಿಯರ ಜೊತೆ ಸಂಪರ್ಕದಲ್ಲಿ ಇರುವ ವಿಚಾರ ಗೊತ್ತಗಿತ್ತು. ಈ ಬಗ್ಗೆ ವಿಜಯಲಕ್ಷ್ಮೀ ಪ್ರಶ್ನಿಸಿ ಮದುವೆಗೆ ಪಟ್ಟು ಹಿಡಿದಿದ್ದಳು. ಆದರೆ ದುರುಳ ಹರಿಕೃಷ್ಣ, ಮದುವೆಯನ್ನ ನಿರಾಕರಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಇದರಿಂದ ಮನನೊಂದಿದ್ದ ವಿಜಯಲಕ್ಷ್ಮೀ ಫೆಬ್ರವರಿ 21 ರಂದು ಮಂಡ್ಯದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಳು. ರೈಲ್ವೆ ಪೊಲೀಸರು ಯುಡಿಆರ್ ಮಾಡಿಕೊಂಡಿದ್ದರು. ಕುಟುಂಬಸ್ಥರಿಗೆ ಪ್ರಾರಂಭದಲ್ಲಿ ಅಸಲಿ ಸತ್ಯ ಗೊತ್ತಾಗಿರಲಿಲ್ಲ. ಆದರೆ ಆನಂತರ ಯುವತಿಯ ಮೊಬೈಲ್ ಹಾಗೂ ಸ್ನೇಹಿತರ ಹೇಳಿಕೆಯಿಂದ ಅಸಲಿ ಸತ್ಯ ಗೊತ್ತಾಗಿದೆ.
ಇಂತಹದೊಂದು ಆಘಾತಕಾರಿ ಘಟನೆ ನಡೆದ ತಕ್ಷಣವೇ ವಿಜಯಲಕ್ಷ್ಮೀ ಕುಟುಂಬಸ್ಥರು ಮಂಡ್ಯದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ನ್ಯಾಯ ಕೇಳಲು ಹರಿಕೃಷ್ಣನ ಮನೆಯ ಬಳಿ ಹೋಗಿ ಗಲಾಟೆ ಮಾಡಿದ್ದರು. ಹೀಗಾಗಿ ವಿಜಯಲಕ್ಷ್ಮೀ ಕುಟುಂಬಸ್ಥರು ಸೇರಿ ಗ್ರಾಮಸ್ಥರ ವಿರುದ್ಧವೇ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರಿಂದ ಮೃತ ವಿಜಯಲಕ್ಷ್ಮೀ ತಾಯಿ ಲಕ್ಷ್ಮಿ ಸಾಕಷ್ಟು ಮನನೊಂದಿದ್ದರು. ಮಗಳ ಸಾವಿಗೆ ನ್ಯಾಯ ಸಿಗಲಿಲ್ಲ. ತಮ್ಮವರ ವಿರುದ್ದವೇ ದೂರು ದಾಖಲಾಯ್ತು ಎಂದು ವಿಜಯಲಕ್ಷ್ಮೀ ತಾಯಿ ಲಕ್ಷ್ಮಿ ಕೂಡ ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ. ಆನಂತರ ಪೊಲೀಸರ ವಿರುದ್ದವೇ ಕುಟುಂಬಸ್ಥರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಮೃತದೇಹ ಎತ್ತಲು ಬಿಟ್ಟಿರಲಿಲ್ಲ. ಆದರೆ ಇದರಿಂದ ಎಚ್ಚೆತ್ತ ಪೊಲೀಸರು, ಕೊನೆಗೂ ಹರಿಕೃಷ್ಣ ಹಾಗೂ ಕುಟುಂಬಸ್ಥರ ವಿರುದ್ಧ ದೂರು ದಾಖಲು ಮಾಡಿಕೊಂಡು ಐವರನ್ನ ವಶಕ್ಕೆ ಪಡೆದಿದ್ದಾರೆ. ಆದರೆ ಪ್ರಿಯಕರ ಹರಿಕೃಷ್ಣ ಪರಾರಿಯಾಗಿದ್ದಾನೆ.
ಒಟ್ಟಾರೆಯಾಗಿ ಹೇಳುವುದಾದರೆ, ಯುವಕನ ಕಾಮತೃಷೆಗಾಗಿ ಒಂದೇ ಕುಟುಂಬದ ಇಬ್ಬರು ದಾರುಣ ಅಂತ್ಯ ಕಂಡಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕಿದೆ. ವಿಜಯಲಕ್ಷ್ಮೀ ಹಾಗೂ ಆಕೆಯ ಕುಟುಂಬಕ್ಕೆ ನ್ಯಾಯವನ್ನು ಸಲ್ಲಿಸಬೇಕಾಗಿರುವುದು ಕಾನೂನಿನ ಕೈಯಲ್ಲಿದೆ ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

 

The post ಲವ್ ಹೆಸರಿನಲ್ಲಿ ಆಕೆಯನ್ನು ಬಳಸಿಕೊಂಡು ಮೋಸ- ತಾಯಿ ಮಗಳು ಬ*ಲಿ…! appeared first on Good News 24x7.

]]>
ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಶುಭಾಶಯ ಕೋರಲು ಇಲ್ಲಿವೆ ಸಂದೇಶಗಳು https://www.goodnews24x7.com/%e0%b2%85%e0%b2%82%e0%b2%a4%e0%b2%be%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b3%80%e0%b2%af-%e0%b2%ae%e0%b2%b9%e0%b2%bf%e0%b2%b3%e0%b2%be-%e0%b2%a6%e0%b2%bf%e0%b2%a8%e0%b2%95/ Sat, 08 Mar 2025 05:38:31 +0000 https://www.goodnews24x7.com/?p=2667 ಹೆಣ್ಣು ಇಲ್ಲದೇ ಹೋದರೆ ಸೃಷ್ಟಿಯೇ ಆಗದು. ಹಾಗಾಗಿ ಈ ಸೃಷ್ಟಿಯೇ ಹೆಣ್ಣು. ಹೆಣ್ಣೆಂಬ ಜೀವವೂ ತಾಯಿ, ಸ್ನೇಹಿತೆ, ಪತ್ನಿ, ಸಹೋದ್ಯೋಗಿ, ಮಗಳು ಹೀಗೆ ಹಲವು ಪಾತ್ರಗಳನ್ನು ನಿಭಾಯಿಸುತ್ತಾಳೆ. ಪ್ರತಿಯೊಬ್ಬರ ಜೀವನದಲ್ಲಿಯೂ ಹೆಣ್ಣಿನ ಪಾತ್ರವೂ ಅಗಾಧವಾದದ್ದು, ಹೀಗಾಗಿ ಆಕೆಗಾಗಿ ಒಂದು ದಿನವನ್ನು ಮೀಸಲಿಡಲಾಗಿದೆ.…

The post ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಶುಭಾಶಯ ಕೋರಲು ಇಲ್ಲಿವೆ ಸಂದೇಶಗಳು appeared first on Good News 24x7.

]]>

ಹೆಣ್ಣು ಇಲ್ಲದೇ ಹೋದರೆ ಸೃಷ್ಟಿಯೇ ಆಗದು. ಹಾಗಾಗಿ ಈ ಸೃಷ್ಟಿಯೇ ಹೆಣ್ಣು. ಹೆಣ್ಣೆಂಬ ಜೀವವೂ ತಾಯಿ, ಸ್ನೇಹಿತೆ, ಪತ್ನಿ, ಸಹೋದ್ಯೋಗಿ, ಮಗಳು ಹೀಗೆ ಹಲವು ಪಾತ್ರಗಳನ್ನು ನಿಭಾಯಿಸುತ್ತಾಳೆ. ಪ್ರತಿಯೊಬ್ಬರ ಜೀವನದಲ್ಲಿಯೂ ಹೆಣ್ಣಿನ ಪಾತ್ರವೂ ಅಗಾಧವಾದದ್ದು, ಹೀಗಾಗಿ ಆಕೆಗಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಹೌದು, ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಯನ್ನು ಆಚರಿಸಲಾಗುತ್ತದೆ.


ಮಾರ್ಚ್ 8 ಮಹಿಳೆಯರಿಗೆ ಮೀಸಲಾಗಿರುವ ದಿನ. ಪ್ರತಿ ವರ್ಷ ಮಾರ್ಚ್ 8 ರಂದು ಭಾರತ ಮಾತ್ರವಲ್ಲದೇ, ವಿಶ್ವದಾದಂತ್ಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಮಹಿಳೆಯರ ಕೊಡುಗೆಗಳನ್ನು ಹಾಗೂ ಅವರು ಮಾಡಿದ ಸಾಧನೆಗಳನ್ನು ಗುರುತಿಸಿ ಗೌರವಿಸುವ ದಿನವಾಗಿದೆ. ಪ್ರತಿಯೊಬ್ಬ ಮಹಿಳೆಯೂ ತನ್ನ ಕುಟುಂಬಕ್ಕೆ ಸಾಕಷ್ಟು ತ್ಯಾಗಗಳನ್ನು ಮಾಡಿರುತ್ತಾಳೆ. ಅವರ ತ್ಯಾಗದ ಬಗ್ಗೆ ಯಾರು ಕೂಡ ಮಾತನಾಡುವುದೇ ಇಲ್ಲ. ತನ್ನ ಕುಟುಂಬ ಹಾಗೂ ಸಂಸಾರಕ್ಕಾಗಿ ಬದುಕನ್ನು ಸವೆಸುವ ಹೆಣ್ಣು ಮಕ್ಕಳಿಗೆ ಈ ರೀತಿ ಸಂದೇಶ ಕಳುಹಿಸುವ ಮೂಲಕ ಶುಭಾಶಯ ಕೋರಬಹುದು

ಮಹಿಳಾ ದಿನಕ್ಕೆ ಶುಭಾಶಯ ಕೋರಲು ಇಲ್ಲಿವೆ ಸಂದೇಶಗಳು
• ನಿನ್ನ ಬದುಕಿನಲ್ಲಿ ನೀನು ಬಯಸಿದ ಎಲ್ಲವೂ ಸಿಗುವಂತಾಗಲಿ, ಮಹಿಳಾ ದಿನಾಚರಣೆ ಶುಭಾಶಯಗಳು.
• ನನ್ನ ಬದುಕಿಗೆ ದಿಟ್ಟ ಮಹಿಳೆಯನ್ನು ಕೊಟ್ಟಿದ್ದಕ್ಕೆ ದೇವರಿಗೆ ಧನ್ಯವಾದಗಳು ಹೇಳಲು ಬಯಸುತ್ತೇನೆ. ಮಹಿಳಾ ದಿನಾಚರಣೆ ಶುಭಾಶಯಗಳು.
• ನೀನೊಂದು ಅದ್ಭುತವಾದ ವ್ಯಕ್ತಿ, ನಿನ್ನ ವ್ಯಕ್ತಿತ್ವವೇ ನಿನಗೆ ಆಭರಣ. ನನಗೆ ನೀನು ಸಿಕ್ಕಿರುವುದು ನನ್ನ ಅದೃಷ್ಟ, ನನ್ನ ಜೀವನದ ಪ್ರಮುಖ ವ್ಯಕ್ತಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.
• ಹೆಣ್ಣಾಗಿ ಹುಟ್ಟಿರುವುದೇ ಒಂದು ಅದೃಷ್ಟ. ಅದನ್ನು ಸಂತಸದಿಂದ ಸಂಭ್ರಮಿಸಿ. ಮಹಿಳಾ ದಿನದ ಶುಭಾಶಯಗಳು.
• ತಾಯ್ತನದಿಂದ ಹಿಡಿದು ಹೆಂಡತಿಯ ತನಕ, ಸಹೋದರಿಯಿಂದ ಹಿಡಿದು ಮಗಳವರೆಗೆ ಜೀವನದ ಪ್ರತಿಯೊಂದು ಹಂತದಲ್ಲೂ ‘ಮಹಿಳೆ’ಯ ಪಾತ್ರ ಅಗಾಧ. ಆ ಜೀವವೇ ಇಲ್ಲದೇ ಹೋದರೆ ಈ ಜೀವಕ್ಕೆ ಅಸ್ತಿತ್ವವಿಲ್ಲ. ಮಹಿಳಾ ದಿನಾಚರಣೆಯ ಶುಭಾಶಯಗಳು.
• ವಿದ್ಯೆಗೆ ಸರಸ್ವತಿ, ಸಂಪತ್ತಿಗೆ ಲಕ್ಷ್ಮಿ, ಶಕ್ತಿಗೆ ಪಾರ್ವತಿ, ಎಲ್ಲಕ್ಕೂ ಮಿಗಿಲಾಗಿ ಜನ್ಮ ಕೊಟ್ಟವಳು ಈ ಹೆಣ್ಣು. ಕಣ್ಣಿಗೆ ಕಾಣುವ ತ್ಯಾಗ ಮೂರ್ತಿಯೇ ಹೆಣ್ಣು. ಜೀವನದ ಎಲ್ಲಾ ಹಂತದಲ್ಲಿಯೂ ಜೊತೆ ನಿಲ್ಲುವ ಹೆಣ್ಣಿಗೆ ಕೋಟಿ ಕೋಟಿ ನಮನಗಳು, ಮಹಿಳಾ ದಿನದ ಶುಭಾಶಯಗಳು.
• ತಾಯಿಯಾಗಿ, ಸಹೋದರಿಯಾಗಿ, ಮಡದಿಯಾಗಿ, ಮಗಳಾಗಿ ಹಾಗೂ ಸ್ನೇಹಿತೆಯಾಗಿ ನನ್ನ ಬದುಕಿನ ಪ್ರತಿ ಕ್ಷಣದಲ್ಲೂ ಬೆಂಬಲವಾಗಿ ನಿಂತಿದ್ದೀರಿ. ತಮ್ಮ ಈ ನಿಸ್ವಾರ್ಥ ಪ್ರೀತಿಗೆ ನಾನು ಸದಾ ಋಣಿ. ತಮಗೆಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು.
• ತಂದೆಗೆ ಮಗಳಾಗಿ, ಗಂಡನಿಗೆ ಬೆಳವಣಿಗೆಯಾಗಿ, ಸಹೋದರನಿಗೆ ಆಸರೆಯಾಗಿ, ಮಗುವಿಗೆ ತಾಯಿಯಾಗಿ, ಸಾಧನೆಯಲ್ಲಿ ಸ್ಫೂರ್ತಿಯಾಗಿ, ಪ್ರೇಮಿಗೆ ಪ್ರೀತಿಯಾಗಿ, ಮನೆಗೆ ಬೆಳಗುವ ಬೆಳಕಾಗಿ ಜಗತ್ತಿನ ಎಲ್ಲಾ ಮನಸ್ಸಿನ ಹೆಣ್ಣು ಮಕ್ಕಳಿಗೆ ಮಹಿಳಾ ದಿನದ ಶುಭಾಶಯಗಳು.
• ಮತ್ತೊಂದು ಜೀವಕ್ಕೆ ಉಸಿರು ನೀಡುವ ಶಕ್ತಿ ಇರುವುದು ಮಹಿಳೆಗೆ ಮಾತ್ರವೇ. ಹೆಣ್ಣಾಗಿ ಹುಟ್ಟಿದ್ದಕ್ಕೆ ಖುಷಿ ಪಡಿ, ಪ್ರತಿಕ್ಷಣವನ್ನು ಹೆಮ್ಮೆಯಿಂದಲೇ ಸಂಭ್ರಮಿಸಿ, ಮಹಿಳಾ ದಿನದ ಶುಭಾಶಯಗಳು.
• ನನ್ನ ಬದುಕಿಗೆ ಹೊಸ ಅರ್ಥ ನೀಡಿದ ಸುಂದರವಾದ ಶಿಲ್ಪಿ ನೀನು, ಇಂದು ನಾನು ಏನು ಆಗಿದ್ದೇನೋ ಅದಕ್ಕೆಲ್ಲಾ ನೀನೇ ಕಾರಣ. ಮಹಿಳಾ ದಿನಾಚರಣೆಯ ಶುಭಾಶಯಗಳು.
• ನಾನು ಬಯಸಿದ ಎಲ್ಲಾ ಗುಣಗಳಿರುವ ಹೆಣ್ಣು ನೀನು. ಹೇಗೋ ಇದ್ದ ನನ್ನ ಬದುಕಿಗೆ ಒಂದು ಸುಂದರವಾದ ಅರ್ಥ ಕಲ್ಪಿಸಿಕೊಟ್ಟೆ, ನನ್ನ ಪ್ರತೀ ಹೆಜ್ಜೆಗೂ ಸ್ಪೂರ್ತಿ ನೀನು. ಜಗತ್ತು ಬೆಳಗುವ ಸೂರ್ಯನಂತೆ ನನ್ನ ಬಾಳು ಬೆಳಗುತ್ತಿರುವ ದೀಪ ನೀನು. ನನ್ನ ಮನದರಸಿಗೆ ಮಹಿಳಾ ದಿನಾಚರಣೆಯ ಹಾರ್ಥಿಕ ಶುಭಾಶಯಗಳು.

The post ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಶುಭಾಶಯ ಕೋರಲು ಇಲ್ಲಿವೆ ಸಂದೇಶಗಳು appeared first on Good News 24x7.

]]>
3 ಮಕ್ಕಳೊಂದಿಗೆ ನದಿಗೆ ಹಾರಿ ತಾಯಿ ಆ*ಹತ್ಯೆಗೆ ಶರಣು https://www.goodnews24x7.com/3-%e0%b2%ae%e0%b2%95%e0%b3%8d%e0%b2%95%e0%b2%b3%e0%b3%8a%e0%b2%82%e0%b2%a6%e0%b2%bf%e0%b2%97%e0%b3%86-%e0%b2%a8%e0%b2%a6%e0%b2%bf%e0%b2%97%e0%b3%86-%e0%b2%b9%e0%b2%be%e0%b2%b0%e0%b2%bf-%e0%b2%a4/ Wed, 05 Mar 2025 10:59:38 +0000 https://www.goodnews24x7.com/?p=2619 ಬೆಳಗಾವಿ :- ಮೂವರು ಮಕ್ಕಳೊಂದಿಗೆ ಕೃಷ್ಣಾ ನದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ರಾಯಭಾಗ ತಾಲೂಕಿನ ಚಿಂಚಲಿ ಬಳಿ ಈ ಘಟನೆ ನಡೆದಿದೆ. ತಾಯಿ ಶಾರದಾ (32), ಮಕ್ಕಳಾದ ಅಮೃತಾ, ಆದರ್ಶ ಹಾಗೂ ಅನುಷ್ಕಾ ಮೃತಪಟ್ಟವರು.…

The post 3 ಮಕ್ಕಳೊಂದಿಗೆ ನದಿಗೆ ಹಾರಿ ತಾಯಿ ಆ*ಹತ್ಯೆಗೆ ಶರಣು appeared first on Good News 24x7.

]]>

ಬೆಳಗಾವಿ :- ಮೂವರು ಮಕ್ಕಳೊಂದಿಗೆ ಕೃಷ್ಣಾ ನದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ರಾಯಭಾಗ ತಾಲೂಕಿನ ಚಿಂಚಲಿ ಬಳಿ ಈ ಘಟನೆ ನಡೆದಿದೆ. ತಾಯಿ ಶಾರದಾ (32), ಮಕ್ಕಳಾದ ಅಮೃತಾ, ಆದರ್ಶ ಹಾಗೂ ಅನುಷ್ಕಾ ಮೃತಪಟ್ಟವರು. ಪತಿ ಅಶೋಕ್ ಕಿರುಕುಳದಿಂದ ಬೇಸತ್ತು ಶಾರದಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಶಾರದಾ ತನ್ನ ಮಕ್ಕಳೊಂದಿಗೆ ನದಿಗೆ ಹಾರಿದ್ದನ್ನು ನೋಡಿದ ಸ್ಥಳೀಯರು ನೀರಿನಲ್ಲಿ ಮುಳುಗುತ್ತಿದ್ದ ಅನುಕ್ಷಾಳನ್ನು ರಕ್ಷಣೆ ಮಾಡಿದ್ದರು. ನಂತರ ಆಕೆಯನ್ನು ರಾಯಬಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೂ ಚಿಕಿತ್ಸೆಗೆ ಸ್ಪಂದಿಸದೆ ಆಕೆಯೂ ಮೃತಪಟ್ಟಿದ್ದಾಳೆ.
ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಅಶೋಕ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

The post 3 ಮಕ್ಕಳೊಂದಿಗೆ ನದಿಗೆ ಹಾರಿ ತಾಯಿ ಆ*ಹತ್ಯೆಗೆ ಶರಣು appeared first on Good News 24x7.

]]>
ಗಂಡನಿಂದಲೇ ಮಕ್ಕಳಾಗಬೇಕು ಎಂದೇನಿಲ್ಲ..! ಮದುವೆಯಾಗದೆ ತಾಯಿಯಾಗುವ ಆಸೆಯನ್ನ ವ್ಯಕ್ತಪಡಿಸಿದ ನಟಿ ಯಾರು ಗೊತ್ತಾ? https://www.goodnews24x7.com/%e0%b2%97%e0%b2%82%e0%b2%a1%e0%b2%a8%e0%b2%bf%e0%b2%82%e0%b2%a6%e0%b2%b2%e0%b3%87-%e0%b2%ae%e0%b2%95%e0%b3%8d%e0%b2%95%e0%b2%b3%e0%b2%be%e0%b2%97%e0%b2%ac%e0%b3%87%e0%b2%95%e0%b3%81-%e0%b2%8e%e0%b2%82/ Mon, 03 Feb 2025 08:17:28 +0000 https://www.goodnews24x7.com/?p=2184 ಮನರಂಜನಾ ಜಗತ್ತಿನಲ್ಲಿ ಇನ್ನೂ ಒಂಟಿಯಾಗಿರುವ ಅನೇಕ ನಟಿಯರಿದ್ದಾರೆ. ಈ ನಟಿಯರಲ್ಲಿ ಅನೇಕರು ತಾಯಿಯಾಗಲು ಬಯಸುತ್ತಾರೆ. ಆದರೆ ಆ ಸಂದರ್ಭದಲ್ಲಿ ಈ ನಟಿಯರು ಏನೆಲ್ಲಾ ಆಯ್ಕೆಗಳಿವೆ ಎಂದು ಹುಡುಕುತ್ತಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರೋದು ಪ್ರಸಿದ್ಧ ನಟಿ ಸುಶ್ಮಿತಾ ಸೇನ್.. ಇವರು ತಮ್ಮ…

The post ಗಂಡನಿಂದಲೇ ಮಕ್ಕಳಾಗಬೇಕು ಎಂದೇನಿಲ್ಲ..! ಮದುವೆಯಾಗದೆ ತಾಯಿಯಾಗುವ ಆಸೆಯನ್ನ ವ್ಯಕ್ತಪಡಿಸಿದ ನಟಿ ಯಾರು ಗೊತ್ತಾ? appeared first on Good News 24x7.

]]>

ಮನರಂಜನಾ ಜಗತ್ತಿನಲ್ಲಿ ಇನ್ನೂ ಒಂಟಿಯಾಗಿರುವ ಅನೇಕ ನಟಿಯರಿದ್ದಾರೆ. ಈ ನಟಿಯರಲ್ಲಿ ಅನೇಕರು ತಾಯಿಯಾಗಲು ಬಯಸುತ್ತಾರೆ. ಆದರೆ ಆ ಸಂದರ್ಭದಲ್ಲಿ ಈ ನಟಿಯರು ಏನೆಲ್ಲಾ ಆಯ್ಕೆಗಳಿವೆ ಎಂದು ಹುಡುಕುತ್ತಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರೋದು ಪ್ರಸಿದ್ಧ ನಟಿ ಸುಶ್ಮಿತಾ ಸೇನ್.. ಇವರು ತಮ್ಮ 23 ನೇ ವಯಸ್ಸಿನಲ್ಲಿ ತಾಯಿಯಾಗಲು ನಿರ್ಧರಿಸಿ, ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡರು. ಸುಶ್ಮಿತಾ ಅವರ ಹಾದಿಯಲ್ಲೇ ಮತ್ತೊಬ್ಬ ನಟಿ ತಾಯಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ. ಆ ನಟಿ ಬೇರಾರೂ ಅಲ್ಲ.. ಟೀನಾ ದತ್ತಾ. ಉತ್ತರಾನ್ ಧಾರಾವಾಹಿಯಿಂದ ಟೀನಾ ಖ್ಯಾತಿ ಪಡೆದರು.

ಅದರ ನಂತರ, ಅವರು ಬಿಗ್ ಬಾಸ್ 16 ಅನ್ನು ಗೆದ್ದರು. 33 ವರ್ಷದ ಟೀನಾ ಇನ್ನೂ ಒಂಟಿಯಾಗಿದ್ದಾಳೆ, ಆದರೆ ತಾಯಿಯಾಗುವ ಬಗ್ಗೆ ತನ್ನ ಆಲೋಚನೆಗಳನ್ನು ತೆರೆದಿದ್ದಾಳೆ. ಭವಿಷ್ಯದಲ್ಲಿ ತಾನು ಒಂಟಿ ತಾಯಿಯಾಗಬಹುದು ಎಂದು ಟೀನಾ ಸುಳಿವು ನೀಡಿದ್ದು, ಬಾಡಿಗೆ ತಾಯ್ತನ ಅಥವಾ ದತ್ತು ಪಡೆದು ತಾಯಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ..
ಈ ಬಗ್ಗೆ ಮಾತನಾಡಿದ ಅವರು “ನಾನು ಒಳ್ಳೆಯ ತಾಯಿಯಾಗಬಹುದೆಂದು ನಾನು ಭಾವಿಸುತ್ತೇನೆ.. ನಾನು ಒಂಟಿಯಾಗಿ ತಾಯಿಯಾಗಲು ಸಾಧ್ಯವಾಗಲಿಲ್ಲವಾದರೂ, ದತ್ತು ಅಥವಾ ಬಾಡಿಗೆ ತಾಯ್ತನದಂತಹ ಆಯ್ಕೆಗಳನ್ನು ನಾನು ಪರಿಗಣಿಸಬಹುದು,” ಎಂದು ನಟಿ ಹೇಳಿದ್ದಾರೆ..
ಒಂಟಿ ತಾಯಂದಿರಾಗಿರುವ ಮಹಿಳೆಯರ ಬಗ್ಗೆ ಟೀನಾಗೆ ಹೆಚ್ಚಿನ ಅಭಿಮಾನವಿದೆ. “ಇಬ್ಬರು ಸುಂದರ ಹೆಣ್ಣು ಮಕ್ಕಳನ್ನು ದತ್ತು ಪಡೆದಿರುವ ಸುಶ್ಮಿತಾ ಸೇನ್ ಅವರಂತಹ ಮಹಿಳೆಯರನ್ನು ನಾನು ಮೆಚ್ಚುತ್ತೇನೆ. ನಾನು ಮತ್ತು ನನ್ನ ಹೆತ್ತವರು ಸಣ್ಣ ಪಟ್ಟಣದಿಂದ ಬಂದವರು. ನಾನು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ದತ್ತು ಪಡೆಯಲು ಅಥವಾ ಹೊಂದಲು ನಿರ್ಧರಿಸಿದರೆ ಅವರು ನನ್ನನ್ನು ಬೆಂಬಲಿಸುತ್ತಾರೆ. ನನ್ನ ಮತ್ತು ನನ್ನ ಕುಟುಂಬವನ್ನು ನಾನು ನೋಡಿಕೊಳುವಂತೆ, ನಾನು ಮಗುವನ್ನು ನೋಡಿಕೊಳ್ಳುತ್ತೇನೆ.. ಇದಕ್ಕಾಗಿ ಗಂಡನನ್ನು ಅವಲಂಬಿಸುವ ಅಗತ್ಯವಿಲ್ಲ” ಎಂದಿದ್ದಾರೆ ಟೀನಾ..
ಹಾಸ್ಟೆಲ್‌ ಹುಡುಗಿಯರ Wash Roomನಲ್ಲಿ ಹಿಡನ್‌ ಕ್ಯಾಮೆರಾ!

ಅಲ್ಲದೇ “ಸಮಾಜವು ಬದಲಾಗುತ್ತಿದ್ದು, ಇಂತಹ ವಿಷಯಗಳನ್ನು ಸ್ವೀಕರಿಸುತ್ತಿದೆ. ನಾವು ಈ ಉದ್ಯಮದಲ್ಲಿ ಇರುವುದರಿಂದ ನಮ್ಮ ವೈಯಕ್ತಿಕ ಜೀವನದ ಮೇಲೆ ಯಾವಾಗಲೂ ಸುದ್ದಿಯಾಗುತ್ತಲೇ ಇರುತ್ತದೆ. ಮನರಂಜನಾ ಪ್ರಪಂಚವು ಎಲ್ಲದರಲ್ಲೂ ಬದಲಾವಣೆಗಳನ್ನು ಮಾಡುತ್ತಿದೆ ಎಂದು ಜನರು ಭಾವಿಸುತ್ತಾರೆ, ಆದರೆ ಹೊರಗಿನವರು ಸಹ ಈ ವಿಷಯಗಳನ್ನು ಸದ್ಯ ಒಪ್ಪಿಕೊಳ್ಳುತ್ತಿದ್ದಾರೆ. ನನಗೆ ಮಕ್ಕಳನ್ನು ದತ್ತು ಪಡೆದ ಅನೇಕ ಸ್ನೇಹಿತರಿದ್ದಾರೆ, ಆದರೆ ಅವರು ಸೆಲೆಬ್ರಿಟಿಗಳಲ್ಲದ ಕಾರಣ ಅವರು ಮುಖ್ಯಾಂಶಗಳನ್ನು ಮಾಡುವುದಿಲ್ಲ” ಎಂದು ನಟಿ ಟೀನಾ ಹೇಳಿಕೊಂಡಿದ್ದಾರೆ.

The post ಗಂಡನಿಂದಲೇ ಮಕ್ಕಳಾಗಬೇಕು ಎಂದೇನಿಲ್ಲ..! ಮದುವೆಯಾಗದೆ ತಾಯಿಯಾಗುವ ಆಸೆಯನ್ನ ವ್ಯಕ್ತಪಡಿಸಿದ ನಟಿ ಯಾರು ಗೊತ್ತಾ? appeared first on Good News 24x7.

]]>
ದತ್ತು ಪಡೆದ ಮಗನನ್ನೇ ಮದುವೆಯಾದ ತಾಯಿ! https://www.goodnews24x7.com/%e0%b2%a6%e0%b2%a4%e0%b3%8d%e0%b2%a4%e0%b3%81-%e0%b2%aa%e0%b2%a1%e0%b3%86%e0%b2%a6-%e0%b2%ae%e0%b2%97%e0%b2%a8%e0%b2%a8%e0%b3%8d%e0%b2%a8%e0%b3%87-%e0%b2%ae%e0%b2%a6%e0%b3%81%e0%b2%b5%e0%b3%86/ Wed, 08 Jan 2025 11:43:00 +0000 https://www.goodnews24x7.com/?p=1665 ನವದೆಹಲಿ:-ಮಕ್ಕಳಿಲ್ಲದ ದಂಪತಿ ಸಂಬಂಧಿಕರ ಮಕ್ಕಳನ್ನು ಅಥವಾ ಅನಾಥರನ್ನು ದತ್ತು ತೆಗೆದುಕೊಂಡು ‘ಅವರನ್ನು ಬೆಳೆಸುತ್ತಾರೆ. ಒಳ್ಳೆಯ ಸಂಬಂಧ ನೋಡಿ ಬೆಳೆಸಿ ಮದುವೆ ಮಾಡುತ್ತಾರೆ. ಆದರೆ ಯುವತಿಯೊಬ್ಬಳು ತಾನು ಬಾಲ್ಕದಿಂದ ಬೆಳೆಸಿದ ಮಗುವನ್ನು ಅವನು ಯುವಕನಾಗಿದ್ದಾಗ ಮದುವೆಯಾದಳು. ತಾಯಿ ತನ್ನ ಮಲಮಗನನ್ನು ಮದುವೆಯಾಗುವುದನ್ನು ನೀವು…

The post ದತ್ತು ಪಡೆದ ಮಗನನ್ನೇ ಮದುವೆಯಾದ ತಾಯಿ! appeared first on Good News 24x7.

]]>

ನವದೆಹಲಿ:-ಮಕ್ಕಳಿಲ್ಲದ ದಂಪತಿ ಸಂಬಂಧಿಕರ ಮಕ್ಕಳನ್ನು ಅಥವಾ ಅನಾಥರನ್ನು ದತ್ತು ತೆಗೆದುಕೊಂಡು ‘ಅವರನ್ನು ಬೆಳೆಸುತ್ತಾರೆ. ಒಳ್ಳೆಯ ಸಂಬಂಧ ನೋಡಿ ಬೆಳೆಸಿ ಮದುವೆ ಮಾಡುತ್ತಾರೆ. ಆದರೆ ಯುವತಿಯೊಬ್ಬಳು ತಾನು ಬಾಲ್ಕದಿಂದ ಬೆಳೆಸಿದ ಮಗುವನ್ನು ಅವನು ಯುವಕನಾಗಿದ್ದಾಗ ಮದುವೆಯಾದಳು. ತಾಯಿ ತನ್ನ ಮಲಮಗನನ್ನು ಮದುವೆಯಾಗುವುದನ್ನು ನೀವು ಎಂದಾದರೂ ಕೇಳಿದ್ದೀರಾ? ಕೇಳಲು ತುಂಬಾ ಆಶ್ಚರ್ಯ ಎನಿಸುತ್ತದೆ.ಸಂಗೀತ ಶಿಕ್ಷಕಿ ಮತ್ತು ಗಾಯಕಿ ಐಸಿಲು ಚಿಪ್ಪಯಾ ಮಿಂಗಲಿಮ್ (53) ಅವರು ಡೇನಿಯಲ್ ಚಿಜೆನ್ಸಿ (22) ಅವರನ್ನು ದತ್ತು ಪಡೆದು ನಂತರ ವಿವಾಹವಾದರು.ಸಾಮಾನ್ಯವಾಗಿ ಬಾಲ್ಯದಿಂದಲೇ ಬೆಳೆಸಿದ ಮಕ್ಕಳ ಮೇಲೆ ಪ್ರೀತಿ ವಾತ್ಸಲ್ಯವಿರುತ್ತದೆ. ತಾಯಿಯ ಪ್ರೀತಿ ಹುಟ್ಟುತ್ತದೆ. ಆದರೆ ಅವಳು ಸಂಪೂರ್ಣವಾಗಿವಿಭಿನ್ನವಾಗಿದೆ.
8 ವರ್ಷದ ಹುಡುಗನನ್ನು ದತ್ತು ಪಡೆದು ಬೆಳೆಸಿದರು. ಅವನು 22 * ವರ್ಷದವನಿದ್ದಾಗ ಮಹಿಳೆ ತಾನೂ ಸಾಕಿ, ಸಲುಹಿದ್ದ ಮಗನನ್ನೇ ಮದುವೆಯಾಗಿದ್ದಾಳೆ.
ತನ್ನ ಮಗನನ್ನೇ ಮದುವೆಯಾದ ರಷ್ಯಾದ ತಟರ್ಸ್ತಾನ್ನನ ಮಹಿಳೆ ಅವಳು ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಳು ಮತ್ತು ಅನಾಥಾಶ್ರಮದಲ್ಲಿ ಮಕ್ಕಳಿಗೆ ಸಂಗೀತವನ್ನು ಕಲಿಸುತ್ತಿದ್ದಳು. ಅಲ್ಲಿ, ಡೇನಿಯಲ್ ಎಂಬ 8 ವರ್ಷದ ಹುಡುಗ ಸಂಗೀತದಲ್ಲಿ ಆಸಕ್ತಿ ತೋರಿಸಿದನು ಮತ್ತು ವಿಶೇಷ ಕಾಳಜಿಯಿಂದ ಕಲಿಸಿದಳು. ಆದ್ದರಿಂದ ಅವಳು ‘ಆ ಹುಡುಗನನ್ನು ಇಷ್ಟಪಟ್ಟಳು. ಅನಾಥಾಶ್ರಮದ ನಿರ್ವಾಹಕರೊಂದಿಗೆ ಮಾತನಾಡಿ, ವಿಧಿವಿಧಾನಗಳನ್ನು ಪೂರ್ಣಗೊಳಿಸಿ ದತ್ತು ಪಡೆದಳು.ಹೀಗೆ ಎಂಟು ವರ್ಷಗಳ ಹಿಂದೆ ಮಗುವನ್ನು ತಂದು 14 ವರ್ಷ ಸಾಕಿದಳು.
ಅವನಿಗೆ 22 ವರ್ಷ. ಆಕೆಗೆ 53 ವರ್ಷ. ಸಂಗೀತದ ಮೇಲೆ ಉತ್ತಮ ಹಿಡಿತ ಹೊಂದಿರುವ ಡೇನಿಯಲ್ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ವಿಚಿತ್ರವೆಂದರೆ ಇಬ್ಬರು ಇಷ್ಟಪಟ್ಟರು. ಇಬ್ಬರೂ ಅಕ್ಟೋಬರ್ 20 (2023) ರಂದು ಟಾಟರ್ಸ್ತಾನ್ ಗಣರಾಜ್ಯದ ಕಜಾನ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ವಿವಾಹವಾದರು ಇಬ್ಬರ ನಡುವಿನ ವಯಸ್ಸಿನ ವ್ಯತ್ಯಾಸ 31 ವರ್ಷಗಳು.ಈ ಮದುವೆ ವಿಚಾರ ತಿಳಿದ ಅನಾಥಾಶ್ರಮದ ಆಡಳಿತಾಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ .
ಡೇನಿಯಲ್ ಹೀಗೆ ಸಾಕಿದ ತಾಯಿಯನ್ನು ಮದುವೆಯಾಗಿದ್ದಾನೆ ಎನ್ನುವ ವಿಚಾರ ತಿಳಿದ ನಂತರ. ಹೀಗೆ ದತ್ತು ಕೊಟ್ಟಿದ್ದ ನಾಲ್ಕು ಹುಡುಗಿಯರು ಮತ್ತು ಒಬ್ಬ ಹುಡುಗನನ್ನು ಆಶ್ರಮದ ನಿರ್ವಾಹಕರು ಹಿಂದಕ್ಕೆ ಕರೆದೊಯ್ದರು. ಈ ತಾಯಿ ಹಾಗೂ ದತ್ತು ಪುತ್ರನ ವಿವಾಹದ ಸುದ್ದಿ ವೈರಲ್ ಆಗುತ್ತಿದ್ದಂತೆ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ.

The post ದತ್ತು ಪಡೆದ ಮಗನನ್ನೇ ಮದುವೆಯಾದ ತಾಯಿ! appeared first on Good News 24x7.

]]>