mp Archives - Good News 24x7 https://www.goodnews24x7.com/tag/mp/ Kannada Wed, 11 Mar 2026 11:22:52 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg mp Archives - Good News 24x7 https://www.goodnews24x7.com/tag/mp/ 32 32 ತೆರೆಮರೆಯ ಹೋರಾಟದ ಕಥೆಯನ್ನ ಬಿಚ್ಚಿಟ್ಟ ಮಾಜಿ ಸಂಸದ ಪ್ರತಾಪ್ ಸಿಂಹ – ಮೈಸೂರು ಸಿಲ್ಕ್ ಪರಂಪರೆ. https://www.goodnews24x7.com/former-mp-pratap-simha-reveals-the-story-of-the-behind-the-scenes-struggle-mysore-silk-heritage/ Wed, 11 Mar 2026 11:11:50 +0000 https://www.goodnews24x7.com/?p=8853 ಟಿ. ನರಸೀಪುರದಲ್ಲಿರುವ ಕೆಎಸ್ಐಸಿ ರೇಷ್ಮೆ ನೂಲು ಘಟಕದ ಜಾಗದಲ್ಲಿ ಸ್ಟೇಡಿಯಂ ನಿರ್ಮಿಸುವ ಸರ್ಕಾರದ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿರೋಧ ಪಕ್ಷದ ನಾಯಕರು ಮತ್ತು ನೌಕರರ ಹೋರಾಟದ ಫಲವಾಗಿ, ಸರ್ಕಾರ ಈ ಯೋಜನೆಯನ್ನು ಕೈಬಿಟ್ಟು, ಲಾಭದಾಯಕ ಘಟಕವನ್ನು ಉಳಿಸಿ ಅಭಿವೃದ್ಧಿಪಡಿಸುವುದಾಗಿ ಭರವಸೆ…

The post ತೆರೆಮರೆಯ ಹೋರಾಟದ ಕಥೆಯನ್ನ ಬಿಚ್ಚಿಟ್ಟ ಮಾಜಿ ಸಂಸದ ಪ್ರತಾಪ್ ಸಿಂಹ – ಮೈಸೂರು ಸಿಲ್ಕ್ ಪರಂಪರೆ. appeared first on Good News 24x7.

]]>

ಟಿ. ನರಸೀಪುರದಲ್ಲಿರುವ ಕೆಎಸ್ಐಸಿ ರೇಷ್ಮೆ ನೂಲು ಘಟಕದ ಜಾಗದಲ್ಲಿ ಸ್ಟೇಡಿಯಂ ನಿರ್ಮಿಸುವ ಸರ್ಕಾರದ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿರೋಧ ಪಕ್ಷದ ನಾಯಕರು ಮತ್ತು ನೌಕರರ ಹೋರಾಟದ ಫಲವಾಗಿ, ಸರ್ಕಾರ ಈ ಯೋಜನೆಯನ್ನು ಕೈಬಿಟ್ಟು, ಲಾಭದಾಯಕ ಘಟಕವನ್ನು ಉಳಿಸಿ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದೆ. ಈ ಬೆಳವಣಿಗೆಯು ಮೈಸೂರು ಸಿಲ್ಕ್ ಉದ್ಯಮಕ್ಕೆ ನಿಟ್ಟುಸಿರು ತಂದಿದೆ.

ಬೆಂಗಳೂರು ವಿಧಾನಸೌಧದಲ್ಲಿ ಕರ್ನಾಟಕ ಸಿಲ್ಕ್ ಇಂಡಸ್ಟ್ರಿ ಕಾರ್ಪೊರೇಷನ್ ಸಂಬಂಧಿಸಿದಂತೆ ನಡೆದ ಬೆಳವಣಿಗೆಗಳ ಕುರಿತು ರಾಜಕೀಯ ನಾಯಕರು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಟಿ. ನರಸೀಪುರದಲ್ಲಿರುವ ರೇಷ್ಮೆ ನೂಲು ಉತ್ಪಾದನಾ ಘಟಕವನ್ನು ಉಳಿಸುವ ಹೋರಾಟದಲ್ಲಿ ಬೆಂಬಲ ನೀಡಿದ ನಾಯಕರಿಗೆ ಕೃತಜ್ಞತೆ ಸಲ್ಲಿಸಲು ಕೆಎಸ್ಐಸಿ ನೌಕರರು ವಿಧಾನಸೌಧಕ್ಕೆ ಆಗಮಿಸಿದ್ದರು.

1912ರಲ್ಲಿ ಮೈಸೂರು ಮಹಾರಾಜರು ಆರಂಭಿಸಿದ ಮೈಸೂರು ಸಿಲ್ಕ್ ಉದ್ಯಮ
ಈ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮಾತನಾಡಿ, 1912ರಲ್ಲಿ ಮೈಸೂರು ಮಹಾರಾಜರು ಆರಂಭಿಸಿದ ಮೈಸೂರು ಸಿಲ್ಕ್ ಉದ್ಯಮವು ಇಂದು ಜಾಗತಿಕ ಖ್ಯಾತಿ ಗಳಿಸಿದೆ. ಈ ಸಂಸ್ಥೆಗೆ ಅಗತ್ಯವಾದ ರೇಷ್ಮೆ ನೂಲು ಉತ್ಪಾದಿಸುವ ಪ್ರಮುಖ ಘಟಕವು ಟಿ. ನರಸೀಪುರ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 12 ಎಕರೆ ಪ್ರದೇಶದಲ್ಲಿ ಈ ಫ್ಯಾಕ್ಟರಿ ಸ್ಥಾಪಿಸಲಾಗಿದೆ. ಆದರೆ ಈ ಜಾಗದಲ್ಲಿ ಸುಮಾರು 6 ಎಕರೆ ಭೂಮಿಯನ್ನು ತೆಗೆದುಕೊಂಡು ಸ್ಟೇಡಿಯಂ ನಿರ್ಮಿಸಲು ಸರ್ಕಾರ ಮುಂದಾಗಿತ್ತು ಎಂಬ ಆರೋಪವೂ ಕೇಳಿಬಂದಿತ್ತು.

ಆ ಜಾಗ ಎಲ್‌ ಆಕಾರದಲ್ಲಿರುವುದರಿಂದ ಅಲ್ಲಿ ಸ್ಟೇಡಿಯಂ ನಿರ್ಮಾಣ ಸಾಧ್ಯವಿಲ್ಲ. ವೃತ್ತಾಕಾರದ ಭೂಮಿಯಲ್ಲಿ ಮಾತ್ರ ಸೂಕ್ತವಾಗಿ ಸ್ಟೇಡಿಯಂ ನಿರ್ಮಾಣ ಸಾಧ್ಯವಾಗುತ್ತದೆ. ಆದರೂ ಅವೈಜ್ಞಾನಿಕವಾಗಿ ಆ ಸಂಸ್ಥೆಯನ್ನು ಮುಚ್ಚುವ ಯತ್ನ ನಡೆದಿದೆ ಎಂದು ಸಿಂಹ ಆರೋಪಿಸಿದರು. ಈ ವಿಷಯದಲ್ಲಿ ಉದ್ಯೋಗಿಗಳು ತಮ್ಮ ಧ್ವನಿಯನ್ನು ಎತ್ತಿದರೂ, ಸರ್ಕಾರ ಅದನ್ನು ಗಮನಿಸಿಲ್ಲ . ಆದರೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮತ್ತು ಶಾಸಕ ಶ್ರೀವತ್ಸ ಅವರು ನೌಕರರ ಪರ ನಿಂತು ಹೋರಾಟ ನಡೆಸಿದ ಪರಿಣಾಮ ಆ ಜಾಗ ಉಳಿಯುವಂತಾಯಿತು ಎಂದು ಕೃತಜ್ಞತೆ ಸಲ್ಲಿಸಿದರು.

98 ಕೋಟಿ ರೂಪಾಯಿ ಲಾಭ
ಇನ್ನು ಇದೇ ವೇಳೆ ಮಾತನಾಡಿದ ಆರ್. ಅಶೋಕ್ ಅವರು, ರೇಷ್ಮೆ ಕಾರ್ಖಾನೆಯನ್ನು ಉಳಿಸಲು ತಮ್ಮ ಪಕ್ಷದ ಶಾಸಕರು ಮತ್ತು ಮಾಜಿ ಸಂಸದರು ಒಟ್ಟಾಗಿ ಹೋರಾಟ ನಡೆಸಿದ್ದಾರೆ ಎಂದು ಹೇಳಿದರು. ಜಿಐ ಗುರುತು ಹೊಂದಿರುವ ಈ ಸಂಸ್ಥೆ ಪ್ರತಿವರ್ಷ ಸುಮಾರು 98 ಕೋಟಿ ರೂಪಾಯಿ ಲಾಭ ಗಳಿಸುತ್ತಿದೆ. ಇಂತಹ ಲಾಭದಾಯಕ ಸಂಸ್ಥೆಯನ್ನು ಖಾಸಗಿ ಒತ್ತಡಗಳಿಗೆ ಮಣಿದು ಮುಚ್ಚುವ ಪ್ರಯತ್ನ ನಡೆದಿದೆ ಎಂಬ ಆರೋಪವೂ ಮಾಡಿದರು. ಈ ಕಾರ್ಖಾನೆ ಮುಚ್ಚಿದರೆ ಚೀನಾದಿಂದ ರೇಷ್ಮೆ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಬಹುದು ಎಂದು ಅವರು ಎಚ್ಚರಿಸಿದರು.

ಇದಲ್ಲದೆ, ಈ ಘಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉದ್ಯೋಗದಲ್ಲಿದ್ದು, ಅವರ ಜೀವನೋಪಾಯಕ್ಕೂ ಇದು ಪ್ರಮುಖ ಆಧಾರವಾಗಿದೆ ಎಂದು ಅಶೋಕ್ ಹೇಳಿದರು. ಈ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಮುಚ್ಚುವ ಯತ್ನ ಮಾಡಿದರೆ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ಮುಂಚೆಯೇ ಎಚ್ಚರಿಕೆ ನೀಡಿದ್ದೆ ಎಂದರು. ಅದರ ಪರಿಣಾಮವಾಗಿ ಸರ್ಕಾರ ಈ ಜಾಗವನ್ನು ಮುಟ್ಟುವುದಿಲ್ಲ ಹಾಗೂ ಘಟಕವನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದೆ. ಭವಿಷ್ಯದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಈ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಇನ್ನು ಮಾರ್ಚ್ 9ರಂದು ನಡೆದ ವಿಧಾನಸಭಾ ಅಧಿವೇಶನದಲ್ಲಿಯೂ ಈ ವಿಷಯ ಪ್ರಸ್ತಾಪವಾಗಿತ್ತು. ಟಿ. ನರಸೀಪುರ ರೇಷ್ಮೆ ನೂಲು ತಯಾರಿಕಾ ಘಟಕವನ್ನು ಮುಚ್ಚುವ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸರ್ಕಾರವನ್ನು ಪ್ರಶ್ನಿಸಿದ್ದರು. ಈ ಸ್ಥಳದಲ್ಲಿ ಸ್ಟೇಡಿಯಂ ನಿರ್ಮಿಸಲು ಸರ್ಕಾರ ಮುಂದಾಗಿರುವುದು ಸರಿಯಲ್ಲ ಎಂದು ಅವರು ಹೇಳಿ, ಈ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪಶುಸಂಗೋಪನಾ ಸಚಿವ K. ವೆಂಕಟೇಶ್, ಸ್ಟೇಡಿಯಂ ನಿರ್ಮಾಣಕ್ಕೆ ಆ ಜಾಗ ಸೂಕ್ತವೆಂದು ಯಾರೋ ತಪ್ಪು ಮಾಹಿತಿ ನೀಡಿದ್ದರು ಎಂದು ಹೇಳಿದರು. ಇದೀಗ ಸರ್ಕಾರ ಆ ಯೋಜನೆಯನ್ನು ಕೈಬಿಟ್ಟಿದ್ದು, ಟಿ. ನರಸೀಪುರದಲ್ಲಿರುವ ಕೆಎಸ್‌ಐಸಿ ಘಟಕ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲಿಗೆ ಸ್ಟೇಡಿಯಂ ನಿರ್ಮಿಸುವ ಯೋಜನೆ ಇಲ್ಲ ಎಂದು ಸಚಿವರು ಹೇಳಿದರು. ಈ ನಿರ್ಧಾರವನ್ನು ವಿರೋಧ ಪಕ್ಷದ ನಾಯಕ ಅಶೋಕ್ ಸ್ವಾಗತಿಸಿದರು.

ಅದೇ ದಿನ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಶ್ರೀವತ್ಸ ಮೈಸೂರು ಸಿಲ್ಕ್ ಸೀರೆಯ ಬೇಡಿಕೆ ಕುರಿತು ಪ್ರಶ್ನೆ ಎತ್ತಿದ್ದರು. ಮೈಸೂರು ಸಿಲ್ಕ್ ಸೀರೆಗಳಿಗೆ ಅಪಾರ ಬೇಡಿಕೆ ಇರುವುದರಿಂದ ಜನರು ಬೆಳಗಿನ ಜಾವವೇ ಅಂಗಡಿಗಳ ಮುಂದೆ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ ಎಂದು ಅವರು ಗಮನ ಸೆಳೆದರು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಆನ್‌ಲೈನ್ ಮಾರಾಟ ತಾತ್ಕಾಲಿಕ ನಿಲ್ಲಿಸುವಂತೆ ಚಿಂತನೆ
ಇದಕ್ಕೆ ಉತ್ತರಿಸಿದ ಸಚಿವ ಕೆ. ವೆಂಕಟೇಶ್ ಅವರು, ಮೈಸೂರು ಸಿಲ್ಕ್ ಸೀರೆಗಳಿಗೆ ಅಪಾರ ಬೇಡಿಕೆ ಇರುವುದನ್ನು ಒಪ್ಪಿಕೊಂಡರು. ಸ್ವಲ್ಪ ಹಾನಿಯಾಗಿದ್ದರೂ ಮಹಿಳೆಯರು ಆ ಸೀರೆಗಳನ್ನು ಖರೀದಿಸಲು ಹಿಂದೇಟು ಹಾಕುವುದಿಲ್ಲ ಎಂದರು. ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಬೆಳಿಗ್ಗೆ ಮೂರು ಗಂಟೆಗೆ ಜನರು ಸಾಲಿನಲ್ಲಿ ನಿಲ್ಲುತ್ತಾರೆ ಎಂಬ ಮಾಹಿತಿ ಸರಿಯಲ್ಲ. ಕೆಲವೊಮ್ಮೆ ‘ಸೆಕೆಂಡ್ ಸೇಲ್’ ಸಂದರ್ಭದಲ್ಲಿ ಜನರು ಸ್ವಲ್ಪ ಬೇಗ ಬರುತ್ತಾರೆ ಎಂದರು

ಇದಲ್ಲದೆ, ಮೈಸೂರು ಸಿಲ್ಕ್ ಸೀರೆಗಳ ಮಾರಾಟದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವ ಉದ್ದೇಶದಿಂದ ಕೆಲವು ಸಂದರ್ಭಗಳಲ್ಲಿ ಆನ್‌ಲೈನ್ ಮಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಬಗ್ಗೆ ಕೂಡ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಚಿವರು ಹೇಳಿದರು. ಒಟ್ಟಿನಲ್ಲಿ, ಟಿ. ನರಸೀಪುರದ ಕೆಎಸ್ಐಸಿ ಘಟಕವನ್ನು ಉಳಿಸುವ ಬಗ್ಗೆ ಸರ್ಕಾರದ ಸ್ಪಷ್ಟನೆ ಮತ್ತು ಅದನ್ನು ಸ್ವಾಗತಿಸಿರುವ ವಿರೋಧ ಪಕ್ಷದ ನಾಯಕರು ರಾಜ್ಯದ ರೇಷ್ಮೆ ಉದ್ಯಮಕ್ಕೆ ಸ್ವಲ್ಪ ಮಟ್ಟಿನ ನಿಟ್ಟುಸಿರು ತಂದಂತಾಗಿದೆ.

The post ತೆರೆಮರೆಯ ಹೋರಾಟದ ಕಥೆಯನ್ನ ಬಿಚ್ಚಿಟ್ಟ ಮಾಜಿ ಸಂಸದ ಪ್ರತಾಪ್ ಸಿಂಹ – ಮೈಸೂರು ಸಿಲ್ಕ್ ಪರಂಪರೆ. appeared first on Good News 24x7.

]]>
ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂ ವಜಾಗೊಳಿಸಿದೆ https://www.goodnews24x7.com/supreme-court-dismisses-petition-filed-by-banu-mushtaq-opposing-mysore-dasara-inauguration/ Fri, 19 Sep 2025 10:23:07 +0000 https://www.goodnews24x7.com/?p=7578 ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನ ರಾಜ್ಯ ಸರ್ಕಾರ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಇತ್ತೀಚೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದೀಗ ಬೆಂಗಳೂರು ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ವಜಾಗೊಳಿಸಿ ಆದೇಶ ಹೊರಡಿಸಿದೆ.…

The post ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂ ವಜಾಗೊಳಿಸಿದೆ appeared first on Good News 24x7.

]]>

ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನ ರಾಜ್ಯ ಸರ್ಕಾರ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಇತ್ತೀಚೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದೀಗ ಬೆಂಗಳೂರು ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ವಜಾಗೊಳಿಸಿ ಆದೇಶ ಹೊರಡಿಸಿದೆ.

ಬೆಂಗಳೂರು: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ (mysuru dasara) ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ (Banu Mushtaq)​​ ಆಯ್ಕೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ವಿಚಾರಣೆ ಮಾಡಿ ಈ ಪ್ರಕರಣವನ್ನು ವಜಾಗೊಳಿಸಿದೆ.

ಬೆಂಗಳೂರು ನಿವಾಸಿ ಹೆಚ್.ಎಸ್.ಗೌರವ್ ಅವರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಪಿ.ಬಿ. ಸುರೇಶ್​ ವಾದ ಮಂಡಿಸಿದ್ದು, ಹಿಂದೂಯೇತರ ವ್ಯಕ್ತಿಗೆ ಪೂಜೆ ಮಾಡಲು ಅವಕಾಶ ನೀಡಲಾಗುವುದಿಲ್ಲ ಎಂದಿದ್ದಾರೆ.

ದೇವಸ್ಥಾನದ ಒಳಗೆ ಪೂಜೆ ನಡೆಸುವುದನ್ನು ಜಾತ್ಯತೀತ ಕ್ರಿಯೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಸಂಪೂರ್ಣವಾಗಿ ಇದೊಂದು ರಾಜಕೀಯವಾಗಿದ್ದು, ಧಾರ್ಮಿಕ ಕಾರ್ಯಗಳಿಗಾಗಿ ಅವರನ್ನು ಆಹ್ವಾನಿಸಬಾರದು ಎಂಬುದಕ್ಕೆ ಯಾವುದೇ ಕಾರಣವಿಲ್ಲ ಎಂದು ಹಿರಿಯ ವಕೀಲ ಪಿ.ಬಿ. ಸುರೇಶ್​ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಪೀಠ ಅರ್ಜಿಯನ್ನು ವಜಾಗೊಳಿಸಿದೆ.

ಹೈಕೋರ್ಟ್​ನಲ್ಲೂ ವಜಾ
ಬಾನು ಮುಷ್ತಾಕ್​​ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದನ್ನು ವಿರೋಧಿಸಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಇತ್ತೀಚೆಗೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್, ದಸರಾ ಉದ್ಘಾಟನೆ ವಿಚಾರದಲ್ಲಿ ಯಾವುದೇ ಹಕ್ಕು ಉಲ್ಲಂಘನೆ ಆಗಿರುವುದು ಕಂಡುಬಂದಿಲ್ಲ ಎಂದು ಅರ್ಜಿಯನ್ನು ತಿರಸ್ಕರಿಸಿತ್ತು. ಹೈಕೋರ್ಟಿನಲ್ಲಾದರೂ ನ್ಯಾಯ ಸಿಗಬಹುದು ಎಂಬ ಭರವಸೆ ಇತ್ತು. ಆದರೆ ಅದು ಕೂಡ ಇಲ್ಲವಾಯಿತು ಎಂದು ತೀರ್ಪಿನ ನಂತರ ಪ್ರತಾಪ್ ಸಿಂಹ ನಿರಾಶೆ ವ್ಯಕ್ತಪಡಿಸಿದ್ದರು.

ಬಾನು ಮುಷ್ತಾಕ್​​ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವ ಸಿಎಂ ಸಿದ್ದರಾಮಯ್ಯ ಸರ್ಕಾರದ ನಿರ್ಧಾರದ ವಿರುದ್ಧ ಬಿಜೆಪಿಯ ಅನೇಕ ನಾಯಕರು ಟೀಕೆ ಮಾಡಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಪುಟ ಸಚಿವರು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

The post ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂ ವಜಾಗೊಳಿಸಿದೆ appeared first on Good News 24x7.

]]>
“ಪಾರಂಪರಿಕತೆ” ಕುರಿತು ಶಾಲಾ ಮಕ್ಕಳಿಗೆ ಅರಿವು ಮೂಡಿಸಿದ ಸಂಸದ ಯದುವೀರ್. https://www.goodnews24x7.com/mp-yaduveer-creates-awareness-among-school-children-about-heritage/ Thu, 11 Sep 2025 10:38:47 +0000 https://www.goodnews24x7.com/?p=7465 ಮೈಸೂರು : ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಸರ್ಕಾರಿ ಶಾಲಾ ಮಕ್ಕಳಿಗೆ ಪಾಠ ಮಾಡಿ ಪಾರಂಪರಿಕ‌ ಕಟ್ಟಡಗಳ ಕುರಿತು ಅರಿವು ಮೂಡಿಸಿದರು. ಮೈಸೂರಿನ ಕುಂಬಾರಕೊಪ್ಪಲಿನ ಸರ್ಕಾರಿ ಪಾಠಶಾಲೆಗೆ ಭೇಟಿ ನೀಡಿದ ಸಂಸದ ಯದುವೀರ್ ಅವರು, ಮಕ್ಕಳಿಗೆ…

The post “ಪಾರಂಪರಿಕತೆ” ಕುರಿತು ಶಾಲಾ ಮಕ್ಕಳಿಗೆ ಅರಿವು ಮೂಡಿಸಿದ ಸಂಸದ ಯದುವೀರ್. appeared first on Good News 24x7.

]]>

ಮೈಸೂರು : ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಸರ್ಕಾರಿ ಶಾಲಾ ಮಕ್ಕಳಿಗೆ ಪಾಠ ಮಾಡಿ ಪಾರಂಪರಿಕ‌ ಕಟ್ಟಡಗಳ ಕುರಿತು ಅರಿವು ಮೂಡಿಸಿದರು. ಮೈಸೂರಿನ ಕುಂಬಾರಕೊಪ್ಪಲಿನ ಸರ್ಕಾರಿ ಪಾಠಶಾಲೆಗೆ ಭೇಟಿ ನೀಡಿದ ಸಂಸದ ಯದುವೀರ್ ಅವರು, ಮಕ್ಕಳಿಗೆ ಪಾಠ- ಪ್ರವಚನ ಮಾಡಿದರು. ನಾವು ಪಾರಂಪರಿಕವಾಗಿ ಭಾರತೀಯ, ದಕ್ಷಿಣ ಭಾರತ, ಕರ್ನಾಟಕದ ಶೈಲಿ ಕಾಣಬಹುದು. ಪ್ಲಾಸ್ಟಿಕ್, ಸಿಮೆಂಟ್ ಇನ್ನಿತರೇ ಇವು ಪಾಶ್ಚಿಮಾತ್ಯ ಶೈಲಿ. ನಮ್ಮದೇ ಆದಂತಹ ಅನನ್ಯ ಶೈಲಿ ಉಲ್ಲೇಖಿಸಬೇಕಾಗಿದೆ. ನಮ್ಮ ಕಟ್ಟಡಗಳನ್ನ ಬೇರೆ ದೇಶಗಳಲ್ಲಿ ನೋಡಲು ಸಾಧ್ಯವಿಲ್ಲ. ಜಗತ್ತಿನಾದ್ಯಂತ ಹವಮಾನ ವೈಪರೀತ್ಯ ಉಂಟಾಗುತ್ತಿದೆ ಎಂದು ತಿಳಿಸಿದರು.

ನಮಗೆ ಗಾಳಿ, ಬೆಳಕು ಬಳಕೆ ಅಧಿಕವಾಗಿ ಬೇಕಾಗುತ್ತದೆ. ಹೀಗಾಗಿ ಈ ವಾತಾವರಣ ನಮಗೆ ಹೆಚ್ಚು ಅವಶ್ಯಕ.ಅದ್ದರಿಂದ ಒಳ್ಳೆ ರೀತಿಯ ಕಟ್ಟಡಗಳನ್ನ ಉಳಿಸಿ‌ ಬೆಳೆಸಿ. ಪೂರ್ವಜರ ಆಸೆ, ಕನಸು ಹಳೆಯ ಕಟ್ಟಡಗಳಲ್ಲಿ ಹುದುಗಿದೆ. ಅವರ ನಡವಳಿಕೆಯನ್ನ ,ಆಚಾರ ವಿಚಾರಗಳನ್ನು ಉಳಿಸಿ‌ ಬೆಳೆಸಬೇಕಾಗಿದೆ. ಮೈಸೂರು ಅಂದರೆ ಕೇವಲ ಅರಮನೆ ಅಷ್ಟೆ ಅಲ್ಲ. ಮೈಸೂರಿನ ಭಾವನೆ ಉಳಿಸಿ, ಮುಂದಿನ ಪೀಳಿಗೆಗೆ ಉಣಬಡಿಸಬೇಕಿದೆ ಎಂದು ನುಡಿದರು.

 

 

 

 

 

ನಾವು ಸ್ವದೇಶಿ, ಭಾರತೀಯ ಉತ್ಫನ್ನ ಹೆಚ್ಚಾಗಿ ಬಳಸಬೇಕಿದೆ. ಪ್ರತಿಯೊಬ್ಬ ಮಗುವು ದೇಸಿ ಉತ್ಪನ್ನಗಳ ಕಡೆಗೆ ಒಲವು ತೋರಬೇಕಿದೆ. ಜೀವನದಲ್ಲೂ ಕೂಡ ಸ್ವದೇಶ ವಸ್ತು ಬಳಸುವುದು ಅನುಕೂಲಕರ. ಓಕಲ್ ಫಾರ್ ಲೋಕಲ್ ಘೋಷಣೆಯಂತೆ ಸ್ವದೇಶಿಗೆ ಹೆಚ್ಚು ಮಹತ್ವ ನೀಡಿ. ಭಾರತಕ್ಕೆ ಹೆಚ್ಚು ಅನುಕೂಲವಾಗುವ ಉತ್ಪನ್ನಗಳನ್ನ ಬಳಸಿ ಎಂದು ಸಂಸದ ಯದುವೀರ್ ಕಿವಿಮಾತು ಹೇಳಿದರು.

ಮುಂದಿನ ಪೀಳಿಗೆಗೆ ಸ್ಮರಣೆ ಮಾಡುವ ಕೆಲಸ ಮಾಡಿ. ಪರಿಸರ ಉಳಿಸಿ, ಕಾಡು ಬೆಳೆಸಿ. ಪ್ರಕೃತಿ ಹಾಳು ಮಾಡುವ ಕೆಲಸ ಮಾಡಬೇಡಿ. ಕಾರ್ಬನ್ ಉತ್ಫಾದಿಸುವ ವಸ್ತುಗಳನ್ನ ಕಡಿಮೆ ಮಾಡಿ. ಮರಗಳನ್ನ ಹೆಚ್ಚೆಚ್ಚು ಬೆಳೆಸುವ ಕೆಲಸ ಮಾಡಿ. ತ್ಯಾಜ್ಯವಸ್ತುಗಳನ್ನ ಬಳಸಿ ಕಟ್ಟಡ ನಿರ್ಮಾಣ ಮಾಡಬಹುದು. ಅಂತಹ ಕ್ರಮಗಳತ್ತ ಎಲ್ಲರೂ ಚಿತ್ತ ಹರಿಸಿ ಎಂದು ಯದುವೀರ್ ತಿಳಿಸಿದರು.

 

The post “ಪಾರಂಪರಿಕತೆ” ಕುರಿತು ಶಾಲಾ ಮಕ್ಕಳಿಗೆ ಅರಿವು ಮೂಡಿಸಿದ ಸಂಸದ ಯದುವೀರ್. appeared first on Good News 24x7.

]]>
ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಈಕೆ, ತಾಯಿ ಚಾಮುಂಡೇಶ್ವರಿಯನ್ನು ಒಪ್ಪಿ ಪುಷ್ಪಾರ್ಚನೆ ಮಾಡಿಯಾರೇ: ಪ್ರತಾಪ್ ಸಿಂಹ ಆಕ್ಷೇಪ https://www.goodnews24x7.com/she-who-did-not-accept-kannada-as-bhuvaneshwari-accepted-and-offered-flowers-to-her-mother-chamundeshwari-pratap-simha-objection/ Mon, 25 Aug 2025 08:58:35 +0000 https://www.goodnews24x7.com/?p=6723 ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ. ಕಾಡಿನಿಂದ ನಾಡಿಗೆ ಬಂದ ಗಜಪಡೆಗಳು ತಾಲೀಮು ಆರಂಭಿಸಿವೆ. ದಸರಾ ಉದ್ಘಾಟಕರ ಹೆಸರು ಸಹ ಅಂತಿಮವಾಗಿದೆ. ಸರ್ಕಾರ ಅದ್ದೂರಿಯಾಗಿ ದಸರಾ ನಡೆಸಲು ತೀರ್ಮಾನಿಸಿದೆ. ಈ ನಡುವೆ ದಸರಾ ಉದ್ಘಾಟಕರ ವಿಚಾರ ಈಗ ಚರ್ಚೆಗೆ ಕಾರಣವಾಗಿದೆ.…

The post ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಈಕೆ, ತಾಯಿ ಚಾಮುಂಡೇಶ್ವರಿಯನ್ನು ಒಪ್ಪಿ ಪುಷ್ಪಾರ್ಚನೆ ಮಾಡಿಯಾರೇ: ಪ್ರತಾಪ್ ಸಿಂಹ ಆಕ್ಷೇಪ appeared first on Good News 24x7.

]]>

ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ. ಕಾಡಿನಿಂದ ನಾಡಿಗೆ ಬಂದ ಗಜಪಡೆಗಳು ತಾಲೀಮು ಆರಂಭಿಸಿವೆ. ದಸರಾ ಉದ್ಘಾಟಕರ ಹೆಸರು ಸಹ ಅಂತಿಮವಾಗಿದೆ. ಸರ್ಕಾರ ಅದ್ದೂರಿಯಾಗಿ ದಸರಾ ನಡೆಸಲು ತೀರ್ಮಾನಿಸಿದೆ. ಈ ನಡುವೆ ದಸರಾ ಉದ್ಘಾಟಕರ ವಿಚಾರ ಈಗ ಚರ್ಚೆಗೆ ಕಾರಣವಾಗಿದೆ. ಯಾಕೆ? ವಿವರಗಳು ಇಲ್ಲಿವೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಎಂದರೆ ರಾಜ ಪರಂಪರೆ, ಗತಕಾಲದ ವೈಭವ. ಅಷ್ಟೇ ಅಲ್ಲ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಉತ್ಸವ. ಈ ಬಾರಿ ಸೆಪ್ಟೆಂಬರ್ 22ರಂದು ವಿಶ್ವವಿಖ್ಯಾತ ಮೈಸೂರು ದಸರಾಗೆ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಚಾಲನೆ ಸಿಗುತ್ತಿದೆ. ಅಂದಿನಿಂದ ಅಕ್ಟೋಬರ್ 2ರ ವರೆಗೆ, ಅಂದರೆ 11 ದಿನಗಳ ಕಾಲ ದಸರಾ ಕಲರವ ಜೋರಾಗಿರಲಿದೆ. ಸರ್ಕಾರ ಈ ಬಾರಿ ದಸರಾ ಉದ್ಘಾಟನೆಗೆ ಅಂತರರಾಷ್ಟ್ರೀಯ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತೆ ಕನ್ನಡತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದೆ. ಇದು ಈಗ ಚರ್ಚೆಗೆ ಕಾರಣವಾಗಿದೆ.

ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ನಾಡಹಬ್ಬಕ್ಕೆ ಪ್ರತಿ ವರ್ಷ ಚಾಲನೆ ನೀಡಲಾಗುತ್ತದೆ. ಇದು ಧಾರ್ಮಿಕ ಹಬ್ಬ, ಹಿಂದುಗಳ ಹಬ್ಬ. ತಾಯಿ ಚಾಮುಂಡೇಶ್ವರಿ ಬಗ್ಗೆ ನಂಬಿಕೆ ಇಟ್ಟವರು ಆಕೆಗೆ ಪೂಜೆ ಸಲ್ಲಿಸಿ ದಸರಾ ಉದ್ಘಾಟಿಸುವುದು ಪರಂಪರೆ. ಆದರೆ ಸಿಎಂ ಸಿದ್ದರಾಮಯ್ಯ ಉದ್ದೇಶಪೂರ್ವಕವಾಗಿ ಮುಸ್ಲಿಂ ಒಬ್ಬರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದಾರೆ ಎಂಬುದು ಮಾಜಿ ಸಂಸ್ ಪ್ರತಾಪ್ ಸಿಂಹ ಆರೋಪ. ಬೂಕರ್ ಪ್ರಶಸ್ತಿಯನ್ನು ಪಡೆದಿರುವ ಬಾನು ಮುಷ್ತಾಕ್ ಅವರನ್ನು ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಮಾಡಿ, ಆದರೆ ಧಾರ್ಮಿಕ ನಂಬಿಕೆ ಮತ್ತು ಆಚರಣೆಯ ಪ್ರತೀಕವಾಗಿರುವ ದಸರಾ ಉದ್ಘಾಟನೆಗೆ ಕರೆಯುವುದು ಸೂಕ್ತವೇ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. 2023ರ ಜನ ಸಾಹಿತ್ಯ ಸಮ್ಮೇಳನದಲ್ಲಿ ಬಾನು ಮುಷ್ತಾಕ್ ರವರು ಮಾಡಿದ ಭಾಷಣದ ವಿಡಿಯೋ ತುಣುಕನ್ನು ಎಕ್ಸ್​​ ತಾಣದಲ್ಲಿ ಪೋಸ್ಟ್ ಮಾಡಿರುವ ಪ್ರತಾಪ್ ಸಿಂಹ, ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಈಕೆ, ತಾಯಿ ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪಿಕೊಂಡು ಪುಷ್ಪಾರ್ಚನೆ ಮಾಡಿಯಾರೆ ಮುಷ್ತಾಕ್ ಬಾನು ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆ 2017ರಲ್ಲಿ ನಿಸಾರ್ ಅಹಮದ್ ಸಹ ದಸರಾ ಉದ್ಘಾಟನೆ ಮಾಡಿದ್ದರು. ಅವರು ತಾಯಿ ಚಾಮುಂಡೇಶ್ವರಿಯ ದೇಗುಲದ ಒಳಗೆ ಹೋಗದೆ ನೇರವಾಗಿ ವೇದಿಕೆ ಕಾರ್ಯಕ್ರಮಕ್ಕೆ ಬಂದು ದಸರಾ ಉದ್ಘಾಟನೆ ಮಾಡಿದ್ದರು. ಅಷ್ಟೇ ಅಲ್ಲ, ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾಸ್ತಿಕರಾಗಿದ್ದ ಗಿರೀಶ್ ಕಾರ್ನಾಡ್ ಅವರಿಗೆ ದಸರಾ ಉದ್ಘಾಟಿಸಲು ಆಯ್ಕೆ ಮಾಡಿದ್ದರು. ಎರಡು ವರ್ಷಗಳ ಹಿಂದೆ ಹಂಸಲೇಖ ಅವರಿಗೂ ಅವಕಾಶ ನೀಡಿದರು. ಆಗಲೂ ಸಹ ಉದ್ಘಾಟಕರ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಸದ್ಯ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರನ್ನಾಗಿ‌ ಮುಸ್ಲಿಂ ಸಮುದಾಯದ ಮಹಿಳೆಯ ಆಯ್ಕೆ ವಿಚಾರವಾಗಿ ಮಾಜಿ ಸಂಸದ ಪ್ರತಾಪ ಸಿಂಹ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಕಿಡಿ ಹಚ್ಚಿದ್ದಾರೆ. ಇದು ಮುಂದೆ ರಾಜ್ಯಾದ್ಯಂತ ಯಾವ ರೀತಿಯಾದ ಚರ್ಚೆಗೆ ಕಾರಣವಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

The post ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಈಕೆ, ತಾಯಿ ಚಾಮುಂಡೇಶ್ವರಿಯನ್ನು ಒಪ್ಪಿ ಪುಷ್ಪಾರ್ಚನೆ ಮಾಡಿಯಾರೇ: ಪ್ರತಾಪ್ ಸಿಂಹ ಆಕ್ಷೇಪ appeared first on Good News 24x7.

]]>
ರಾಹುಲ್ ಗಾಂಧಿಯನ್ನು ಭೇಟಿಯಾದ ಕರ್ನಾಟಕ ಬೈಕ್ ಟ್ಯಾಕ್ಸಿ ಚಾಲಕರು. https://www.goodnews24x7.com/karnataka-bike-taxi-drivers-meet-rahul-gandhi/ Sat, 23 Aug 2025 10:51:23 +0000 https://www.goodnews24x7.com/?p=6578 ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು ದೆಹಲಿಯಲ್ಲಿ ಭೇಟಿಯಾದ ಕರ್ನಾಟಕ ಬೈಕ್ ಟ್ಯಾಕ್ಸಿ ಚಾಲಕರು ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಸಂಬಂಧ ಸ್ಪಷ್ಟ ನೀತಿ ರೂಪಿಸಲು ಮಧ್ಯ ಪ್ರವೇಶಿಸಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ. ಕೂಡಲೇ ನೀತಿ ನಿರೂಪಣೆ ರಚಿಸಲು ಒತ್ತಾಯ ಮಾಡಿದ್ದು, ಬಡತನ…

The post ರಾಹುಲ್ ಗಾಂಧಿಯನ್ನು ಭೇಟಿಯಾದ ಕರ್ನಾಟಕ ಬೈಕ್ ಟ್ಯಾಕ್ಸಿ ಚಾಲಕರು. appeared first on Good News 24x7.

]]>

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು ದೆಹಲಿಯಲ್ಲಿ ಭೇಟಿಯಾದ ಕರ್ನಾಟಕ ಬೈಕ್ ಟ್ಯಾಕ್ಸಿ ಚಾಲಕರು ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಸಂಬಂಧ ಸ್ಪಷ್ಟ ನೀತಿ ರೂಪಿಸಲು ಮಧ್ಯ ಪ್ರವೇಶಿಸಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ. ಕೂಡಲೇ ನೀತಿ ನಿರೂಪಣೆ ರಚಿಸಲು ಒತ್ತಾಯ ಮಾಡಿದ್ದು, ಬಡತನ ಕಾಯುವುದಿಲ್ಲ ಎಂದಿದ್ದಾರೆ. ತಾವು ಮಧ್ಯಪ್ರವೇಶಿಸುವುದಾಗಿ ಭರವಸೆ ನೀಡಿರುವ ರಾಹುಲ್ ಗಾಂಧಿ ಸಹಾಯ ಮಾಡುವ ಆಶ್ವಾಸನೆ ನೀಡಿದ್ದಾರೆ.

ನವದೆಹಲಿಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ನಂತರ ಬೈಕ್ ಟ್ಯಾಕ್ಸಿ ಚಾಲಕರು ತಮ್ಮ ಸಮಸ್ಯೆಗೆ ಪರಿಹಾರ ಸಿಗುವ ಭರವಸೆಯಲ್ಲಿದ್ದಾರೆ. ಕರ್ನಾಟಕ ಬೈಕ್ ಟ್ಯಾಕ್ಸಿ ಕಲ್ಯಾಣ ಸಂಘದ ಪ್ರತಿನಿಧಿಗಳು ಇಂದು ನವದೆಹಲಿಯಲ್ಲಿ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಸಂಬಂಧ ಸ್ಪಷ್ಟ ನೀತಿ ರೂಪಿಸಲು ಮಧ್ಯಪ್ರವೇಶಿಸಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ. 6 ಲಕ್ಷಕ್ಕೂ ಅಧಿಕ ಬೈಕ್ ಟ್ಯಾಕ್ಸಿ ಚಾಲಕರು ಮತ್ತು ಅವರ ಕುಟುಂಬಗಳನ್ನು ಪ್ರತಿನಿಧಿಸುವ ಸಂಘದ ಪ್ರತಿನಿಧಿಗಳ ತಂಡ ಬೈಕ್ ಟ್ಯಾಕ್ಸಿ ಸೇವೆಯ ಸ್ಥಗಿತದಿಂದ ಉಂಟಾಗಿರುವ ಗಂಭೀರ ಜೀವನೋಪಾಯ ಸಂಕಷ್ಟಗಳನ್ನು ವಿವರಿಸಿದೆ.

 

ನನ್ನ ಸಿನಿಮಾ ಸೋಲಲು ಅವನೇ ಕಾರಣ ಯಶ್ ತಾಯಿ ಪುಷ್ಪ ದೂರು.

ಬೈಕ್ ಟ್ಯಾಕ್ಸಿ ಚಾಲಕರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರಾಹುಲ್ ಗಾಂಧಿ, ಅವರಿಗೆ ಬೆಂಬಲದ ಭರವಸೆ ನೀಡಿದ್ದಾರೆ. ಇದು ಜೀವನೋಪಾಯ ಮತ್ತು ಗೌರವಕ್ಕಾಗಿ ಹೋರಾಡುತ್ತಿರುವ ಸಾವಿರಾರು ಯುವ ಅಸಂಘಟಿತ ಕಾರ್ಮಿಕರಿಗೆ ಹೊಸ ಭರವಸೆ ಮೂಡಿದೆ. ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧದಿಂದ ಸಂಕಷ್ಟ ಎದುರಿಸುತ್ತಿರುವ ಕರ್ನಾಟಕದ ಲಕ್ಷಾಂತರ ಅಸಂಘಟಿತ ಕಾರ್ಮಿಕರ ಧ್ವನಿಯನ್ನು ಪ್ರತಿನಿಧಿಸುವ ಕರ್ನಾಟಕ ಬೈಕ್ ಟ್ಯಾಕ್ಸಿ ಕಲ್ಯಾಣ ಸಂಘಕ್ಕೆ ದೊಡ್ಡ ಬೆಂಬಲ ಸಿಕ್ಕಿದಂತಾಗಿದೆ. ಪ್ರತಿಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ಇಂದು ನವದೆಹಲಿಯಲ್ಲಿ ಭೇಟಿ ಮಾಡಿದ ಸಂಘದ ಸದಸ್ಯರು, ಬೈಕ್ ಟ್ಯಾಕ್ಸಿ ನಿಷೇಧದಿಂದ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಚಾಲಕರು ಎದುರಿಸುತ್ತಿರುವ ಜೀವನೋಪಾಯ ಸಂಕಷ್ಟವನ್ನು ವಿವರಿಸಿ, ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ನಿಟ್ಟಿನಲ್ಲಿ ಸ್ಪಷ್ಟ ನೀತಿ ರೂಪಿಸಲು ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ವಿನಂತಿಸಿದ್ದಾರೆ.

ಸಂಘದ ಪ್ರತಿನಿಧಿಗಳ ಮಾತುಗಳನ್ನು ಶ್ರದ್ಧೆಯಿಂದ ಕೇಳಿರುವ ರಾಹುಲ್ ಗಾಂಧಿ, ಜೀವನ ನಡೆಸಲು ಹೋರಾಡುತ್ತಿರುವ ಯುವ ಕಾರ್ಮಿಕರ ಪರ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ. ಅವರ ಈ ಭರವಸೆಯಿಂದ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯದ 6 ಲಕ್ಷಕ್ಕೂ ಹೆಚ್ಚು ಚಾಲಕರು ಮತ್ತು ಅವರ ಕುಟುಂಬಗಳಿಗೆ ಹೊಸ ಭರವಸೆ ಮೂಡಿದಂತಾಗಿದೆ.

ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಕರ್ನಾಟಕ ಬೈಕ್ ಟ್ಯಾಕ್ಸಿ ಕಲ್ಯಾಣ ಸಂಘವು, ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಸಂಬಂಧ ಸಮರ್ಪಕ ನೀತಿಯನ್ನು ರೂಪಿಸುವಂತೆ ಮನವಿ ಮಾಡಿಕೊಂಡಿದೆ. ನೀತಿ ರೂಪಿಸುವವರೆಗೆ, ಕಾರ್ಮಿಕರ ವಿರುದ್ಧ ದಂಡಾತ್ಮಕ ಕ್ರಮ ಕೈಗೊಳ್ಳದೆ ತಕ್ಷಣ ಸೇವೆ ಪುನರಾರಂಭಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದೆ.

The post ರಾಹುಲ್ ಗಾಂಧಿಯನ್ನು ಭೇಟಿಯಾದ ಕರ್ನಾಟಕ ಬೈಕ್ ಟ್ಯಾಕ್ಸಿ ಚಾಲಕರು. appeared first on Good News 24x7.

]]>
ಪ್ರಜ್ವಲ್ ರೇವಣ್ಣಗೆ ದಿನಕ್ಕೆ ಎಷ್ಟು ಕೂಲಿ ಗೊತ್ತಾ? ಸದ್ಯದಲ್ಲೇ ಜೈಲಿನಲ್ಲಿ ಕೆಲಸ ಹಂಚಿಕೆ. https://www.goodnews24x7.com/do-you-know-how-much-prajwal-revanna-earns-per-day-work-distribution-in-jail-soon/ Fri, 22 Aug 2025 13:29:51 +0000 https://www.goodnews24x7.com/?p=6486 ರೇಪ್ ಕೇಸ್ ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣಗೆ ಸದ್ಯದಲ್ಲೇ ಜೈಲಿನಲ್ಲಿ ಕೆಲಸ ಹಂಚಿಕೆಯಾಗಲಿದೆ. ಪ್ರಜ್ವಲ್ ವಿದ್ಯಾಭ್ಯಾಸದ ಮೇಲೂ ಕೆಲಸ ಹಂಚಿಕೆಯಾಗಬಹುದು. ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಈಗ ದಿನಗೂಲಿ ಪಡೆಯಬೇಕಾಗಿದೆ.ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ಗೆ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿ…

The post ಪ್ರಜ್ವಲ್ ರೇವಣ್ಣಗೆ ದಿನಕ್ಕೆ ಎಷ್ಟು ಕೂಲಿ ಗೊತ್ತಾ? ಸದ್ಯದಲ್ಲೇ ಜೈಲಿನಲ್ಲಿ ಕೆಲಸ ಹಂಚಿಕೆ. appeared first on Good News 24x7.

]]>

ರೇಪ್ ಕೇಸ್ ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣಗೆ ಸದ್ಯದಲ್ಲೇ ಜೈಲಿನಲ್ಲಿ ಕೆಲಸ ಹಂಚಿಕೆಯಾಗಲಿದೆ. ಪ್ರಜ್ವಲ್ ವಿದ್ಯಾಭ್ಯಾಸದ ಮೇಲೂ ಕೆಲಸ ಹಂಚಿಕೆಯಾಗಬಹುದು. ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಈಗ ದಿನಗೂಲಿ ಪಡೆಯಬೇಕಾಗಿದೆ.ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ಗೆ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ನೀಡಿದೆ. ಪ್ರಜ್ವಲ್ ರೇವಣ್ಣಗೆ ಜೈಲ್ಲಿ‌ನಲ್ಲಿ ಏನು ಕೆಲಸ ಕೊಡಬೇಕು ಎಂಬುದರ ಬಗ್ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ಆರಂಭವಾಗಿದೆ. ಶೀಘ್ರದಲ್ಲೇ ಪ್ರಜ್ವಲ್ ರೇವಣ್ಣಗೆ ಜೈಲ್ಲಿನಲ್ಲಿ ಕೆಲಸವನ್ನು ನೀಡಲಿದ್ದಾರೆ.
ಸದ್ಯ ಪ್ರಜ್ವಲ್ ವಿದ್ಯಾಭ್ಯಾಸ ಮೇಲೆ ಕೆಲಸ ನೀಡಲು ಚಿಂತನೆ ನಡೆದಿದೆ. ಅಪರಾಧಿ ಪ್ರಜ್ವಲ್ ಬಿ.ಇ. ಮೆಕಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ.

 

 

ವ್ಯಾಸಂಗಕ್ಕೆ ಹೊಂದಿಕೊಳ್ಳುವ ಕೆಲಸ ನೀಡಲು ಜೈಲು ಅಧಿಕಾರಿಗಳ ಪ್ಲ್ಯಾನ್ ಮಾಡಿದ್ದಾರೆ. ಸಜಾಬಂಧಿ ಖೈದಿಗಳು ಕಡ್ಡಾಯವಾಗಿ ಜೈಲ್ಲಿ‌ನಲ್ಲಿರುವ ಯಾವುದಾದರೊಂದು ಕೆಲಸ ಮಾಡಬೇಕು. ಜೈಲಿನಲ್ಲಿ ಬೇಕರಿ, ತೋಟಗಾರಿಕೆ, ಗ್ರಂಥಾಲಯ ನಿರ್ವಹಣೆ, ಶಿಕ್ಷಣ, ಮಗ್ಗ, ಸಣ್ಣ ಪುಟ್ಟ ಕೈಗಾರಿಕೆ ಕೆಲಸ , ಅಡುಗೆ ಮನೆ ನಿರ್ವಹಣೆ, ಅಡ್ಮಿನಿಸ್ಟ್ರೇಶನ್ ನೋಡಿಕೊಳ್ಳುವುದು, ಸ್ಕಿಲ್ ಡೆವಲಪ್ಮೆಂಟ್ ಮುಂತಾದ ಕೆಲಸಗಳು ಇವೆ . ಪ್ರಜ್ವಲ್ ಗೆ ಜೈಲಿನಲ್ಲಿ ಮಾಡಿದ ಕೆಲಸಕ್ಕೆ ದಿನಕ್ಕೆ 540 ರೂಪಾಯಿ ಕೂಲಿ ಸಿಗಲಿದೆ. ಒಂದು ವರ್ಷ ಆದ ನಂತರ 615 ರೂಪಾಯಿ ಕೂಲಿ ನಿಗದಿಯಾಗಲಿದೆ.ಜೈಲಿನ ಹೊರಗೆ ಹತ್ತಾರು ಜನಕ್ಕೆ ತನ್ನ ತೋಟದಲ್ಲೇ ಪ್ರಜ್ವಲ್ ರೇವಣ್ಣ ಕೆಲಸ ಕೊಟ್ಟಿದ್ದ. ಇಡೀ ಲೋಕಸಭಾ ಕ್ಷೇತ್ರಕ್ಕೆ ಎಂಪಿಯಾಗಿದ್ದ. ಪ್ರಜ್ವಲ್ ಗೆ ಜೈಲು ಹೊರಗೆ ಎಲ್ಲದ್ದಕ್ಕೂ ಅಳುಗಳು ಇದ್ದರು. ಆದರೇ, ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣನೇ ಕೂಲಿ ಕೆಲಸ ಮಾಡಿ, ನಿತ್ಯದ ಕೂಲಿಯಾಗಿ 540 ರೂಪಾಯಿ ಹಣವನ್ನು ಪಡೆಯಬೇಕಾದ ಸ್ಥಿತಿ ಬಂದಿದೆ. ಜೈಲು ಕಾಯ್ದೆ ಪ್ರಕಾರ ಜೈಲು ಅಧಿಕಾರಿಗಳು ನೀಡುವ ಕೆಲಸವನ್ನು ಸಜಾ ಬಂಧಿಗಳು ಮಾಡಬೇಕು ಅಥವಾ ವ್ಯಾಸಂಗಕ್ಕೆ ಅನುಗುಣವಾಗಿ ಕೆಲಸ ಮಾಡ್ತೀನಿ ಅಂತ ಜೈಲು ಅಧಿಕಾರಿಗಳಿಗೆ ತಿಳಿಸಬೇಕು. ಸದ್ಯ ಸಜಾ ಖೈದಿಯಾಗಿರುವ ಪ್ರಜ್ವಲ್ ಯಾವ ಕೆಲಸ ಜೈಲಿನಲ್ಲಿ ಮಾಡ್ತಾರೆ ಎಂಬ ಪ್ರಶ್ನೆ ಉದ್ಭವವಾಗಿದೆ.

The post ಪ್ರಜ್ವಲ್ ರೇವಣ್ಣಗೆ ದಿನಕ್ಕೆ ಎಷ್ಟು ಕೂಲಿ ಗೊತ್ತಾ? ಸದ್ಯದಲ್ಲೇ ಜೈಲಿನಲ್ಲಿ ಕೆಲಸ ಹಂಚಿಕೆ. appeared first on Good News 24x7.

]]>
85 ಮೆಟ್ರೋ ಸ್ಟೇಷನ್​ಗಳಲ್ಲೂ ಅಪರ್ಣಾದ್ದೇ ಧ್ವನಿ! ಯೆಲ್ಲೋ ಲೈನ್ ಗೂ ಬಂತು ಖ್ಯಾತ ನಿರೂಪಕಿ ಕಂಠ.. https://www.goodnews24x7.com/aparnas-voice-is-heard-at-all-85-metro-stations-the-famous-anchorwomans-voice-has-also-come-to-the-yellow-line/ Mon, 11 Aug 2025 11:03:05 +0000 https://www.goodnews24x7.com/?p=5823 ಅಪರ್ಣಾ, ಯಾರಿಗೆತಾನೇ ಗೊತ್ತಿಲ್ಲ ಹೇಳಿ , ನಟಿ ಹಾಗೂ ನಿರೂಪಕಿಯಾಗಿ ಜಯಪ್ರಿಯತೆ ಪಡೆದವರು , ಅವರ ಸುಮಧುರ ಧ್ವನಿಯು ಬೆಂಗಳೂರಿನ ಹಸಿರು ಮತ್ತು ನೇರಳೆ ಮೆಟ್ರೋ ಮಾರ್ಗಗಳಲ್ಲಿ ಜನಪ್ರಿಯವಾಗಿತ್ತು. ಇದೀಗ ಹೊಸದಾಗಿ ಉದ್ಘಾಟನೆಯಾದ ಹಳದಿ ಮೆಟ್ರೋ ಮಾರ್ಗದಲ್ಲಿ ಸಹ ಇವರ ಧ್ವನಿಯನ್ನು…

The post 85 ಮೆಟ್ರೋ ಸ್ಟೇಷನ್​ಗಳಲ್ಲೂ ಅಪರ್ಣಾದ್ದೇ ಧ್ವನಿ! ಯೆಲ್ಲೋ ಲೈನ್ ಗೂ ಬಂತು ಖ್ಯಾತ ನಿರೂಪಕಿ ಕಂಠ.. appeared first on Good News 24x7.

]]>

ಅಪರ್ಣಾ, ಯಾರಿಗೆತಾನೇ ಗೊತ್ತಿಲ್ಲ ಹೇಳಿ , ನಟಿ ಹಾಗೂ ನಿರೂಪಕಿಯಾಗಿ ಜಯಪ್ರಿಯತೆ ಪಡೆದವರು , ಅವರ ಸುಮಧುರ ಧ್ವನಿಯು ಬೆಂಗಳೂರಿನ ಹಸಿರು ಮತ್ತು ನೇರಳೆ ಮೆಟ್ರೋ ಮಾರ್ಗಗಳಲ್ಲಿ ಜನಪ್ರಿಯವಾಗಿತ್ತು. ಇದೀಗ ಹೊಸದಾಗಿ ಉದ್ಘಾಟನೆಯಾದ ಹಳದಿ ಮೆಟ್ರೋ ಮಾರ್ಗದಲ್ಲಿ ಸಹ ಇವರ ಧ್ವನಿಯನ್ನು ಬಳಸಲಾಗಿದೆ. ಅಪರ್ಣಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ತಮ್ಮ ಕೊನೆಯ ದಿನಗಳಲ್ಲಿ ಯೆಲ್ಲೋ ಲೈನ್ ನ ಮೆಟ್ರೋ ಅನ್ನೊನ್ಸಮೆಂಟ್ ರೆಕಾರ್ಡಿಂಗ್‌ ಮಾಡಿದ್ದರು. 2024ರ ಏಪ್ರಿಲ್-ಮೇ ನಲ್ಲಿ ಮೆಟ್ರೋದ ತಾಂತ್ರಿಕ ತಂಡ ಅಪರ್ಣಾ ಬಳಿ ತೆರೆಳಿ ಅವರ ಧ್ವನಿಯನ್ನು ರೆಕಾರ್ಡಿಂಗ್ ಮಾಡಿಕೊಂಡಿತ್ತು.

ಕಳೆದ ವರ್ಷ ಜುಲೈನಲ್ಲಿ ನಿಧನ ಹೊಂದಿದ್ದ ನಿರೂಪಕಿ ಅಪರ್ಣಾ ಅನಾರೋಗ್ಯ ದಿಂದ ಬಳಲುತ್ತಿದ್ದರು . ಕ್ಯಾನ್ಸರ್ ಮಧ್ಯೆಯೂ ಅಪರ್ಣಾ ತಮ್ಮ ಧ್ವನಿ ನೀಡಿ ಕರ್ತವ್ಯ ಮೆರೆದಿದ್ದಾರೆ.

ಹಳದಿ ಬಣ್ಣದ ಮಾರ್ಗ ಭಾನುವಾರ (ಆಗಸ್ಟ್ 10) ಉದ್ಘಾಟನೆಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಲೋಕಾರ್ಪಣೆ ಮಾಡಿದರು. ಆರ್​ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಈ ರೈಲು ಸಂಪರ್ಕ ಕಲ್ಪಿಸುತ್ತದೆ. ಒಟ್ಟೂ 16 ನಿಲ್ದಾಣಗಳನ್ನು ಈ ಮೆಟ್ರೋ ರೈಲು ಹಾದು ಹೋಗುತ್ತದೆ. ಈ ಮಾರ್ಗದಲ್ಲಿ ಅಪರ್ಣಾ ಧ್ವನಿ ಪ್ರತಿಧ್ವನಿಸಲಿದೆ.

 

ಅಪರ್ಣಾ ಧ್ವನಿ ತುಂಬಾನೇ ಸುಮಧುರವಾಗಿತ್ತು. ಅವರು ಆ್ಯಂಕರಿಂಗ್​ಗೆ ನಿಂತರೆ ಬಾಯಿಯಿಂದ ಮುತ್ತುಗಳು ಉದುರುತ್ತಿವೆ ಎಂದನಿಸುತ್ತಿತ್ತು. ಹಸಿರು ಹಾಗೂ ಪರ್ಪಲ್ ಲೈನ್ ಮೆಟ್ರೋಗೆ ಅಪರ್ಣಾ ಅವರೇ ಧ್ವನಿ ನೀಡಿದ್ದರು. ಇದು ಮೆಟ್ರೋದ ಹೈಲೈಟ್ ಕೂಡ ಆಗಿತ್ತು. ಹಳದಿ ಬಣ್ಣದ ಮೆಟ್ರೋಗೂ ಅವರದ್ದೇ ಧ್ವನಿ ಇರಬೇಕು ಎಂಬುದು ಕನ್ನಡಿಗರ ಆಸೆ ಆಗಿತ್ತು. ‘ಹಳೆಯ ಮಾರ್ಗದಲ್ಲಿ ಅಪರ್ಣಾ ಧ್ವನಿ ಮುಂದುವರಿಸುತ್ತೇವೆ. ಹಳದಿ ಬಣ್ಣಕ್ಕೆ ಕಷ್ಟ’ ಎಂದು ಮೆಟ್ರೋ ಅಧಿಕಾರಿಗಳು ಈ ಮೊದಲು ಹೇಳಿದ್ದರು. ಆದರೆ , ಇದೀಗ ಹಳದಿ ಲೈನ್ ಮೆಟ್ರೋಗೂ ಅಪರ್ಣಾ ಅವರ ಧ್ವನಿ ಮುಂದುವರೆದಿರುವುದು ಕನ್ನಡಿಗರಲ್ಲಿ ಸಂತಸ ತಂದಿದೆ .

ಸದ್ಯ ಹಸಿರು ಬಣ್ಣದ ಲೈನ್​ ನಾಗಸಂದ್ರದಿಂದ ಸಿಲ್ಕ್ ಇನ್ಸ್​ಟಿಟ್ಯೂಟ್​ವರೆಗೆ ಕಾರ್ಯ ನಿರ್ವಹಿಸುತ್ತಿದ್ದು, 32 ಮೆಟ್ರೋ ಸ್ಟೇಷನ್​ಗಳು ಇವೆ. ಪರ್ಪಲ್ ಲೈನ್​ ವೈಟ್ ಫೀಲ್ಡ್​​ನಿಂದ ಚೆಲ್ಲಘಟ್ಟದವರೆಗೆ ಕಾರ್ಯ ನಿರ್ವಹಿಸುತ್ತಿದ್ದು 37 ಮೆಟ್ರೋ ಸ್ಟೇಷನ್​ಗಳು ಇವೆ. ಈಗ ಹಳದಿ ಮೆಟ್ರೋ ಸೇರಿದರೆ 85 ಸ್ಟೇಷನ್​ಗಳಿದ್ದು , ಎಲ್ಲಾ ಸ್ಟೇಷನ್ ಗಳಲ್ಲೂ ಅಪರ್ಣಾ ಅವರದ್ದೇ ಧ್ವನಿ ಇರಲಿದೆ.

The post 85 ಮೆಟ್ರೋ ಸ್ಟೇಷನ್​ಗಳಲ್ಲೂ ಅಪರ್ಣಾದ್ದೇ ಧ್ವನಿ! ಯೆಲ್ಲೋ ಲೈನ್ ಗೂ ಬಂತು ಖ್ಯಾತ ನಿರೂಪಕಿ ಕಂಠ.. appeared first on Good News 24x7.

]]>
ಕಾಂಗ್ರೆಸ್ ನ ಮುಠಾಳ ವಕ್ತಾರ, ಮೂರು ಕಾಸಿಗೂ ಬೆಲೆ ಇಲ್ಲದ ವ್ಯಕ್ತಿ: ಕಾಂಗ್ರೆಸ್ ವಕ್ತಾರ ಎಂ.‌ ಲಕ್ಷ್ಮಣ್ ವಿರುದ್ದ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ https://www.goodnews24x7.com/congresss-muthal-spokesperson-a-person-worthless-pratap-simha-launched-a-one-word-attack-on-congress-spokesperson-m-laxman/ Fri, 08 Aug 2025 11:35:13 +0000 https://www.goodnews24x7.com/?p=5585 ಮೈಸೂರು:ಕಾಂಗ್ರೆಸ್ ವಕ್ತಾರ ಎಂ.‌ ಲಕ್ಷ್ಮಣ್ ವಿರುದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಏಕ ವಚನದಲ್ಲಿ ವಾಗ್ದಾಳಿ “ಕಾಂಗ್ರೆಸ್ ನ ಮುಠಾಳ ವಕ್ತಾರ, ಕೆಪಿಸಿಸಿ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಪುಷ್ಪ ಅಮರನಾಥ್ ಹಾಗೂ ಚಿಕ್ಕಬಳ್ಳಾಪುರ ಕೂಗುಮಾರಿ ಎಲ್ಲರ ಮೇಲೆ ನ್ಯಾಯಾಲಯದಲ್ಲಿ ಕೇಸ್…

The post ಕಾಂಗ್ರೆಸ್ ನ ಮುಠಾಳ ವಕ್ತಾರ, ಮೂರು ಕಾಸಿಗೂ ಬೆಲೆ ಇಲ್ಲದ ವ್ಯಕ್ತಿ: ಕಾಂಗ್ರೆಸ್ ವಕ್ತಾರ ಎಂ.‌ ಲಕ್ಷ್ಮಣ್ ವಿರುದ್ದ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ appeared first on Good News 24x7.

]]>

ಮೈಸೂರು:ಕಾಂಗ್ರೆಸ್ ವಕ್ತಾರ ಎಂ.‌ ಲಕ್ಷ್ಮಣ್ ವಿರುದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಏಕ ವಚನದಲ್ಲಿ ವಾಗ್ದಾಳಿ “ಕಾಂಗ್ರೆಸ್ ನ ಮುಠಾಳ ವಕ್ತಾರ, ಕೆಪಿಸಿಸಿ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಪುಷ್ಪ ಅಮರನಾಥ್ ಹಾಗೂ ಚಿಕ್ಕಬಳ್ಳಾಪುರ ಕೂಗುಮಾರಿ ಎಲ್ಲರ ಮೇಲೆ ನ್ಯಾಯಾಲಯದಲ್ಲಿ ಕೇಸ್ ಹಾಕಿದ್ದೇನೆ. ನನ್ನ ಬಗ್ಗೆ ವೈಯಕ್ತಿಕವಾಗಿ ಅವರು ಮಾತಾಡುವಂತಿಲ್ಲ. ಮಾತಾಡಿದರೆ ಅದು ನ್ಯಾಯಾಂಗ ನಿಂದನೆ ಆಗುತ್ತೆ. ಮುಠಾಳ‌ ವಕ್ತಾರ ನ ಬಳಿ ನನ್ನ ಬಗ್ಗೆ ಸಾಕ್ಷಿ ಇದ್ದರೆ ನ್ಯಾಯಾಲಯಕ್ಕೆ ಕೊಡಲಿ ಇಲ್ಲ ಮಾಧ್ಯಮಕ್ಕೆ ನೀಡಲಿ. ಸಾಕ್ಷಿ ಯಾಕೆ ಜೇಬಿನಲ್ಲಿ ಇಟ್ಟು ಕೊಂಡು ಓಡಾಡುತ್ತೀರಾ? ಅದರಲ್ಲಿ ನಿಮ್ಮ ಮನೆಯವರು ಏನಾದರೂ ಇದಾರ ? ಜೀವನದಲ್ಲಿ ಒಂದು ಆರೋಪಕ್ಕೂ ಉತ್ತರ ಕೊಡದ ಕಾಂಗ್ರೆಸ್ ವಕ್ತಾರ ಒಬ್ಬ ಮೂರು ಕಾಸಿಗೂ ಬೆಲೆ ಇಲ್ಲದ ವ್ಯಕ್ತಿ. ಕಾಂಗ್ರೆಸ್ ವಕ್ತಾರ ಪಾಲಿಕೆ ಚುನಾವಣೆ ಗೆ ನಿಂತರು ಸೋಲುತ್ತಾನೆ. ಕಾಂಗ್ರೆಸ್ ವಕ್ತಾರ ಸೀತಾರಾಮ್ ಒಕ್ಕಲಿಗರ ಬಗ್ಗೆ ಮಾತನಾಡಿದ ವಿಚಾರ ಒಕ್ಕಲಿಗರ ಬಗ್ಗೆ ಅವಹೇಳನ ಕಾರಿ ಆಗಿ ಮಾತಾಡಿದ ಸೀತಾರಾಮ್ ಬಗ್ಗೆ ಯಾಕೆ ಕಾಂಗ್ರೆಸ್ ಕ್ರಮ‌ ಕೈಗೊಂಡಿಲ್ಲ”

“ಒಕ್ಕಲಿಗರನ್ನು ಬೈಯಲು ಸಿಎಂ ಸಿದ್ದರಾಮಯ್ಯ ತಮ್ಮ ಶಿಷ್ಯನನ್ನು ಇಟ್ಟು ಕೊಂಡಿದ್ದಾರಾ?
ಸಿಎಂ ಸಿದ್ದರಾಮಯ್ಯ ನಾಲ್ವಡಿ ಅವರ ನಿಂದ‌ನೆಗೆ ಮಗನನ್ನು ಇಟ್ಟು ಕೊಂಡಿದ್ದಾರೆ. ಒಕ್ಕಲಿಗರ ನಿಂದನೆಗೆ ಸೀತಾರಾಮ್ ನನ್ನು ಬೆಳೆಸಿದ್ದಾರೆ” ಎಂದಿದ್ದಾರೆ .

The post ಕಾಂಗ್ರೆಸ್ ನ ಮುಠಾಳ ವಕ್ತಾರ, ಮೂರು ಕಾಸಿಗೂ ಬೆಲೆ ಇಲ್ಲದ ವ್ಯಕ್ತಿ: ಕಾಂಗ್ರೆಸ್ ವಕ್ತಾರ ಎಂ.‌ ಲಕ್ಷ್ಮಣ್ ವಿರುದ್ದ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ appeared first on Good News 24x7.

]]>
ಸರ್ಕಾರ ಧರ್ಮಸ್ಥಳವನ್ನು ಕಬಳಿಸಲು ಈ ಪ್ರಯತ್ನ ಆರಂಭ ಮಾಡಿದೆ !ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ. https://www.goodnews24x7.com/the-government-has-started-this-effort-to-grab-dharmasthala-former-mp-pratap-simha-responds/ Fri, 08 Aug 2025 11:20:11 +0000 https://www.goodnews24x7.com/?p=5580 ಮೈಸೂರು: ಮೈಸೂರಿನಲ್ಲಿ ಧರ್ಮಸ್ಥಳ ಪ್ರಕರಣ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ . “ಸೌಜನ್ಯ ಅತ್ಯಾಚಾರ ಪ್ರಕರಣದ ಬಗ್ಗೆ ನೋವಿದೆ. ನಾವೆಲ್ಲಾ ಸೌಜನ್ಯ ಪರ. ಮೂರು ತನಿಖಾ ಸಂಸ್ಥೆ ಯಿಂದ ತನಿಖೆ ಆಗಿದೆ. ಬೇರೆ ಇನ್ನೂ ಯಾವುದಾದರೂ ಮೂಲಕ ತನಿಖೆ…

The post ಸರ್ಕಾರ ಧರ್ಮಸ್ಥಳವನ್ನು ಕಬಳಿಸಲು ಈ ಪ್ರಯತ್ನ ಆರಂಭ ಮಾಡಿದೆ !ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ. appeared first on Good News 24x7.

]]>

ಮೈಸೂರು: ಮೈಸೂರಿನಲ್ಲಿ ಧರ್ಮಸ್ಥಳ ಪ್ರಕರಣ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ . “ಸೌಜನ್ಯ ಅತ್ಯಾಚಾರ ಪ್ರಕರಣದ ಬಗ್ಗೆ ನೋವಿದೆ. ನಾವೆಲ್ಲಾ ಸೌಜನ್ಯ ಪರ.
ಮೂರು ತನಿಖಾ ಸಂಸ್ಥೆ ಯಿಂದ ತನಿಖೆ ಆಗಿದೆ. ಬೇರೆ ಇನ್ನೂ ಯಾವುದಾದರೂ ಮೂಲಕ ತನಿಖೆ ಆಗಬೇಕಿದ್ದರೆ ಸೌಜನ್ಯ ತಾಯಿ ಹೇಳಲಿ. ನಾವೇ ಅವರ ಪರ ನ್ಯಾಯಾಲಯಕ್ಕೆ ಅರ್ಜಿ ಹಾಕುತ್ತೇವೆ. ಧರ್ಮಸ್ಥಳದಲ್ಲಿ ಸಾವಿರಾರು ಕೊಲೆ ಆಗಿದೆ ಅಂತಾರೆ. ಇದು ವಾಸ್ತವದಲ್ಲಿ ಸಾಧ್ಯನೂ? ಧರ್ಮಸ್ಥಳ ಟಾರ್ಗೆಟ್ ಮಾಡಿರುವುದು ಹಿಂದೂ ಸಮಾಜಕ್ಕೆ ಅರ್ಥವಾಗುತ್ತಿಲ್ಲ.
ಧರ್ಮಸ್ಥಳದ ಬಗ್ಗೆ ಅಪನಂಬಿಕೆ ಮೂಡಿಸುವ ಕೆಲಸವನ್ನು ಇಸ್ಲಾಂ ಧರ್ಮದ ಯಾವನೋ ಒಬ್ಬ ಮಾಡುತ್ತಾನೆ.
ಅದನ್ನು ಹಿಂದೂಗಳು ನಂಬುತ್ತಿದ್ದಾರೆ.

ವಿರೇಂದ್ರ ಹೆಗ್ಡೆ ಕುರಿತು ಮಾತನಾಡಿದ ಅವರು “ಒಂದೇ ಒಂದು ಸಾಕ್ಷಿ ಇಲ್ಲದೆ ಯಾಕೆ ವಿರೇಂದ್ರ ಹೆಗ್ಡೆ ಅವರನ್ನು ಆರೋಪಿ ಸ್ಥಾನಕ್ಕೆ ತರಲಾಗಿದೆ? ಹಿಂದೂ ಸಮಾಜ ಪ್ರಜಾವಂತಿಕೆ ಕಳೆದು ಕೊಂಡಿದೆ.ರಾಜ್ಯ ಸರ್ಕಾರ ಧರ್ಮಸ್ಥಳದ ಧರ್ಮಾಧಿಕಾರಿ ಅವರನ್ನು ಅರೋಪಿ ಅಂತಾ ತೀರ್ಮಾನ ಮಾಡಿ ಅದಕ್ಕೆ ಬೇಕಾದ ಸಾಕ್ಷಿ ಈಗ ಹುಡುಕುತ್ತಿದೆ. ನೂರಾರು ಕೊಲೆ ಮಾಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ದಾವುದ್ ಇಬ್ರಾಹಿಂ ಥರ ದೊಡ್ಡ ಡಾನ್ ನಾ? ಧರ್ಮಸ್ಥಳವನ್ನು ಟಾರ್ಗೆಟ್ ಮಾಡಲಾಗಿದೆ. ಇದರ ಹಿಂದೆ ವ್ಯವಸ್ಥಿತ ಪಿತೂರಿ ಇದೆ.”
ಆರೋಪಿಯನ್ನು ಮೊದಲೆ ನಿರ್ಧರಿಸಿ ಅದಕ್ಕೆ ಬೇಕಾದ ಸಾಕ್ಷಿ ಹುಡುಕುತ್ತಿರುವ ಮೊದಲ ಪ್ರಕರಣ ಇದು. ಧರ್ಮಸ್ಥಳ ದೇವಸ್ಥಾನಕ್ಕೆ ಮೀನು ತಿಂದು ಹೋಗಿ ಜನರ ಭಾವನೆಗೆ ಧಕ್ಕೆ ತಂದವರು ಈಗ ಅಲ್ಲಿನ ನಂಬಿಕೆ ಮಾಡಲು ತನಿಖೆ ಮಾಡಿಸುತ್ತಿದ್ದಾರೆ. ಸೌಜನ್ಯ ಪ್ರಕರಣಕ್ಕೂ ಈಗ ನಡೆಯುತ್ತಿರುವ ಹುಡುಕಾಟಕ್ಕೂ ಸಂಬಂಧವೆ ಇಲ್ಲ. ಸರ್ಕಾರ ಧರ್ಮಸ್ಥಳವನ್ನು ಕಬಳಿಸಲು ಈ ಪ್ರಯತ್ನ ಆರಂಭ ಮಾಡಿದೆ. ಟೆಸ್ಟ್ ಮ್ಯಾಚ್ ಗಿಂತಾಲೂ ಹೆಚ್ಚಾಗಿ ಧರ್ಮಸ್ಥಳದ ವಿಚಾರ ದಿನ‌ ನಡೆಯುತ್ತಿದೆ . ನಮ್ಮ ಧರ್ಮಾಧಿಕಾರಿ ಹೆಗ್ಡೆ ಅವರು ಯಾಕೆ ನಿಮಗೆ ಟಾರ್ಗೆಟ್?
ಅನಾಮಿಕನ ಪೂರ್ವಪರ ಮೊದಲು ಬಹಿರಂಗ ಆಗಲಿ.” ಎಂದಿದ್ದಾರೆ .

The post ಸರ್ಕಾರ ಧರ್ಮಸ್ಥಳವನ್ನು ಕಬಳಿಸಲು ಈ ಪ್ರಯತ್ನ ಆರಂಭ ಮಾಡಿದೆ !ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ. appeared first on Good News 24x7.

]]>
ರಾಹುಲ್ ಗಾಂಧಿ ಮತಗಳ್ಳತನ ವಿಚಾರ : ಮೈಸೂರಿನಲ್ಲಿ ಗುಡುಗಿದ ಪ್ರತಾಪ್ ಸಿಂಹ . https://www.goodnews24x7.com/rahul-gandhis-vote-rigging-issue-pratap-simha-thundered-in-mysore/ Fri, 08 Aug 2025 10:58:15 +0000 https://www.goodnews24x7.com/?p=5576 ಮೈಸೂರು: ರಾಹುಲ್ ಗಾಂಧಿ ಹೋರಾಟ ವಿಚಾರವಾಗಿ ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ.”ಸೋತು ಕಂಗೆಟ್ಟಿರುವ ಕಾಂಗ್ರೆಸ್ ತರಾವರಿ ಆರೋಪ ಮಾಡುತ್ತಿದೆ. ಇವಿಎಂ ಹಠಾವೋ ಚಳವಳಿಯನ್ನು ಕಾಂಗ್ರೆಸ್ ಶುರು ಮಾಡಿದೆ. ರಾಹುಲ್ ಗಾಂಧಿ ಮಾಡುವ ಆರೋಪಕ್ಕೆ ಸಾಕ್ಷಿ ಏನಿದೆ ? ಹೆಸರನ್ನೆ…

The post ರಾಹುಲ್ ಗಾಂಧಿ ಮತಗಳ್ಳತನ ವಿಚಾರ : ಮೈಸೂರಿನಲ್ಲಿ ಗುಡುಗಿದ ಪ್ರತಾಪ್ ಸಿಂಹ . appeared first on Good News 24x7.

]]>

ಮೈಸೂರು: ರಾಹುಲ್ ಗಾಂಧಿ ಹೋರಾಟ ವಿಚಾರವಾಗಿ
ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ.”ಸೋತು ಕಂಗೆಟ್ಟಿರುವ ಕಾಂಗ್ರೆಸ್ ತರಾವರಿ ಆರೋಪ ಮಾಡುತ್ತಿದೆ.
ಇವಿಎಂ ಹಠಾವೋ ಚಳವಳಿಯನ್ನು ಕಾಂಗ್ರೆಸ್ ಶುರು ಮಾಡಿದೆ. ರಾಹುಲ್ ಗಾಂಧಿ ಮಾಡುವ ಆರೋಪಕ್ಕೆ ಸಾಕ್ಷಿ ಏನಿದೆ ? ಹೆಸರನ್ನೆ ಫ್ರಾಂಡ್ ಮಾಡಿದ ವಂಶ ನಿಮ್ಮದು.
ಫಿರೋಜ್ ಗಾಂಧಿ ಅನ್ನೋ ಹೆಸರನ್ನು ಫ್ಹಿರೋಜ್ ಗಾಂಧಿ ಅಂತಾ ಬದಲಾಯಿಸಿದ ವಂಶ ನಿಮ್ಮದು. ಫ್ರಾಂಡ್ ಮಾಡಿಕೊಂಡು ಗಾಂಧಿ ಅಂತಾ ಸರ್ ನೇಮ್ ಇಟ್ಟು ಕೊಂಡು ವಂಶ ನಿಮ್ಮದು.”

ಮತಗಳ್ಳತನ ವಿಚಾರ ಕುರಿತು ” ನೀವು ಗೆದ್ದ ಕಡೆಯಲೆಲ್ಲಾ ಮತಗಳ್ಳತನ ಆಗಿಲ್ವಾ? ಜನಕ್ಕಿಂತಾ ಜಾಸ್ತಿ ಮತದಾರರು ಇದ್ದಾರೆ ಅಂತಾ ಹೇಳುವ ನಿಮ್ಮ ಆರೋಪಕ್ಕೆ ಸಾಕ್ಷಿಯೆ ಇಲ್ಲ.
ವಿಧಾನಸಭೆಗೆ ಒಂದು ರೀತಿ ಮತ ಹಾಕುತ್ತಾರೆ. ಲೋಕಸಭೆಗೆ ಒಂದು ರೀತಿ ಮತ ಹಾಕುತ್ತಾರೆ. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸತ್ತವರು ಬಂದು ನನಗೆ ಮತ ಹಾಕಿದ್ದಾರೆ ಎಂದು ಈ ಹಿಂದೆ ಸಿದ್ದರಾಮಯ್ಯ ಹೇಳಿದ್ದರು. ಚಾಮುಂಡೇಶ್ವರಿ ಉಪ ಚುನಾವಣೆ ಗೆ ಫಿಟರ್ ಅಂತಾ ಚುನಾವಣಾ ಅಧಿಕಾರಿ ಹಾಕಿಸಿ ಕೊಂಡು ಬಂದು ನೀವು ಹೇಗೆ ಗೆದ್ದಿರಿ ಗೊತ್ತಿದೆ. ಟಿ. ನರಸೀಪುರದಲ್ಲಿ ಡಿಕ್ಲೇರ್ ಆದ ಫಲಿತಾಂಶ ಉಲ್ಟಾ ಮಾಡಿ ಗೆದ್ದಿದ್ದು ಮಹದೇವಪ್ಪ. ಅಕ್ರಮ ಎನ್ನುವುದು ಕಾಂಗ್ರೆಸ್ ಗೆ ಜನ್ಮತಾ ಬಂದಿದೆ. ಚನ್ನಪಟ್ಟಣ, ಸಂಡೂರು, ರಾಮನಗರ ಉಪ ಚುನಾವಣೆ ಗೆದ್ದಾಗ ಅದು ನ್ಯಾಯ ಸಮ್ಮತ ಚುನಾವಣೆ ನಾ? ಸಿಎಂ ಕೂಡ ರಾಹುಲ್ ಗಾಂಧಿ ಥರ ಮಾತನಾಡಿದರೆ ನಾವು ಏನೂ ಹೇಳಬೇಕು. ಪ್ರಿಯಾಂಕ ಖರ್ಗೆ ಮೊದಲು ತನ್ನ ಕ್ಷೇತ್ರದ ಬಗ್ಗೆ ಮಾತಾಡಲಿ. ಪ್ರಿಯಾಂಕ ಖರ್ಗೆ ಅಂತೂ ಕಾಲೇಜ್ ಓದಲಿಲ್ಲ.‌ ತಮ್ಮ ಕ್ಷೇತ್ರದ ಮಕ್ಕಳಾದರೂ ಓದೋಕೆ ಕಾಲೇಜ್ ಕಟ್ಟಿಸಲಿ‌ ” ಎಂದು ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಗುಡುಗಿದ್ದಾರೆ

The post ರಾಹುಲ್ ಗಾಂಧಿ ಮತಗಳ್ಳತನ ವಿಚಾರ : ಮೈಸೂರಿನಲ್ಲಿ ಗುಡುಗಿದ ಪ್ರತಾಪ್ ಸಿಂಹ . appeared first on Good News 24x7.

]]>