Muda scam Archives - Good News 24x7 https://www.goodnews24x7.com/tag/muda-scam/ Kannada Thu, 19 Jun 2025 11:03:25 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Muda scam Archives - Good News 24x7 https://www.goodnews24x7.com/tag/muda-scam/ 32 32 ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ- MLC ಯತೀಂದ್ರ ಸಿದ್ದರಾಮಯ್ಯ. https://www.goodnews24x7.com/i-am-not-a-ministerial-aspirant-mlc-yathindra-siddaramaiah/ Thu, 19 Jun 2025 11:03:25 +0000 https://www.goodnews24x7.com/?p=4488 ಮೈಸೂರು : ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ತಂದೆಯವರು ತಿಳಿಸುವ ತನಕ ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ, ಮೊದಲಿನಿಂದಲೂ ತಂದೆಯವರನ್ನ…

The post ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ- MLC ಯತೀಂದ್ರ ಸಿದ್ದರಾಮಯ್ಯ. appeared first on Good News 24x7.

]]>

ಮೈಸೂರು : ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ತಂದೆಯವರು ತಿಳಿಸುವ ತನಕ ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ, ಮೊದಲಿನಿಂದಲೂ ತಂದೆಯವರನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಮುಡಾ ಹಗರಣ ,ವಾಲ್ಮೀಕಿ‌ಹಗರಣದಲ್ಲಿ ಸಿಲುಕಿಸುವ ಯತ್ನ ನಡೆಯಿತು. ನನ್ನನ್ನು ಕೂಡ ಹಲವು ಬಾರಿ ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಇಂತಹವುದಕ್ಕೆಲ್ಲಾ ಹೆದರಲ್ಲ. ಐದು ವರ್ಷ ತಂದೆಯವರೇ ಸಿಎಂ ಆಗಿರುತ್ತಾರೆ ಎಂದರು.

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ತಂದೆಯವರು ಇರುವ ತನಕ ನಾನು ಯಾವುದೇ ಹುದ್ದೆ ಅಲಂಕರಿಸಲ್ಲ. ತಂದೆಯವರು ತಿಳಿಸುವ ತನಕ ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದರು.ಎಂಎಲ್ ಸಿ ಯತೀಂದ್ರ ಯಾರು ಎಂದಿದ್ದ ಮಾಜಿ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ ಡಾ.ಯತೀಂದ್ರ ಸಿದ್ದರಾಮಯ್ಯ, ಪ್ರತಾಪ್ ಸಿಂಹ ಯಾರು? ಪ್ರತಾಪ್ ಸಿಂಹ ಯಾವ ಪಕ್ಷದಲ್ಲಿದ್ದಾರೆ? ಪ್ರತಾಪ್ ಸಿಂಹ ಯಾವ ಹುದ್ದೆಯಲ್ಲಿದ್ದಾರೆ? ಅವರಿಗೆ ನಾನು ಯಾರು ಅಂತ ಹೇಳಿ ಉತ್ತರ ಕೊಡಲಿ. ಯಾವ ಹುದ್ದೆಯಲ್ಲಿದ್ದಾರೆ ಅಂತ ನಾನು ಅವರಿಗೆ ರಿಪ್ಲೇ ಮಾಡಲಿ. ಅಂತಹವರಿಗೆಲ್ಲ ನಾನು ಪ್ರತಿಕ್ರಿಯೆ ಕೊಡಲ್ಲ ಎಂದರು.

The post ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ- MLC ಯತೀಂದ್ರ ಸಿದ್ದರಾಮಯ್ಯ. appeared first on Good News 24x7.

]]>
ಸಿ.ಎಂ ಗೆ ಮತ್ತೆ ಶುರುವಾಯ್ತು ಮುಡಾ ಸಂಕಷ್ಟ !!! https://www.goodnews24x7.com/%e0%b2%b8%e0%b2%bf-%e0%b2%8e%e0%b2%82-%e0%b2%97%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%b6%e0%b3%81%e0%b2%b0%e0%b3%81%e0%b2%b5%e0%b2%be%e0%b2%af%e0%b3%8d%e0%b2%a4%e0%b3%81/ Wed, 02 Apr 2025 11:48:31 +0000 https://www.goodnews24x7.com/?p=3005 ರಾಜ್ಯದೆಲ್ಲೆಡೆ ಸಂಚಲನವನ್ನು ಸೃಷ್ಟಿ ಮಾಡಿ ಸುದ್ದಿ ಆಗ್ತಾ ಇರೋದು ಅಂದ್ರೆ ಅದು ಮೂಡ ಹಗರಣ. ಇದೀಗ ಸುದ್ದಿ ಮತ್ತೆ ಎಲ್ಲೆಡೆ ಚರ್ಚೆ ಆಗ್ತಾಯಿದೆ. ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೆ ಸಂಕಷ್ಟ ಎದುರಾಗಿದೆ. ಹೌದು ಲೋಕಾಯುಕ್ತ ವರದಿ…

The post ಸಿ.ಎಂ ಗೆ ಮತ್ತೆ ಶುರುವಾಯ್ತು ಮುಡಾ ಸಂಕಷ್ಟ !!! appeared first on Good News 24x7.

]]>

ರಾಜ್ಯದೆಲ್ಲೆಡೆ ಸಂಚಲನವನ್ನು ಸೃಷ್ಟಿ ಮಾಡಿ ಸುದ್ದಿ ಆಗ್ತಾ ಇರೋದು ಅಂದ್ರೆ ಅದು ಮೂಡ ಹಗರಣ. ಇದೀಗ ಸುದ್ದಿ ಮತ್ತೆ ಎಲ್ಲೆಡೆ ಚರ್ಚೆ ಆಗ್ತಾಯಿದೆ. ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೆ ಸಂಕಷ್ಟ ಎದುರಾಗಿದೆ. ಹೌದು ಲೋಕಾಯುಕ್ತ ವರದಿ ತಿರಸ್ಕರಿಸುವಂತೆ ಜನಪ್ರತಿನಿಧಿಗಳ ನ್ಯಾಯಲಯಕ್ಕೆ ಜಾರಿ ನಿರ್ದೇಶನಾಲಯ ಅರ್ಜಿ ಸಲ್ಲಿಸಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸೇರಿದಂತೆ ಕುಟುಂಬ ಸದಸ್ಯರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾದ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಕೋರ್ಟ್ ಮೆಟ್ಟಿಲೇರಿದೆ. ಜನಪ್ರತಿನಿಧಿಗಳ ನ್ಯಾಯಲಯಕ್ಕೆ ಇಡಿ ತಕರಾರು ಅರ್ಜಿ ಸಲ್ಲಿಸಿದೆ.ತಕರಾರು ಅರ್ಜಿಯಲ್ಲಿ ಸಿಎಂ ಹಾಗೂ ಸಿಎಂ ಕುಟುಂಬದ ವಿರುದ್ಧ ಸಾಕಷ್ಟು ಸಾಕ್ಷಿ ಇದೆ.

 

ನಮ್ಮ ತನಿಖೆಯಲ್ಲಿ ಅವರು ತಪ್ಪುಗಳು ಸಾಭೀತಾಗಿದೆ. ಹೀಗಿದ್ದರೂ ಅವರು ಯಾವ ತಪ್ಪು ಮಾಡಿಲ್ಲ ಎಂದು ಹೇಳಿರುವುದು ಸರಿಯಲ್ಲ. ಹೀಗಾಗಿ ಲೋಕಾಯುಕ್ತ ವರದಿಯನ್ನ ತಿರಸ್ಕರಿಸಿ ಎಂದು ಇಡಿ ಒಟ್ಟು 8 ಪುಟಗಳ ತಕರಾರು ಅರ್ಜಿ ಸಲ್ಲಿಕೆ ಮಾಡಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಯ ಜವಾಬ್ದಾರಿಯನ್ನ ಮೈಸೂರು ಲೋಕಾಯುಕ್ತರಿಗೆ ವಹಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಸದಸ್ಯರ ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಕೋರ್ಟ್ಗೆ ವರದಿ ಸಲ್ಲಿಕೆ ಮಾಡಿದ್ದರು. ವರದಿಯಲ್ಲಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಲಾಗಿತ್ತು.

The post ಸಿ.ಎಂ ಗೆ ಮತ್ತೆ ಶುರುವಾಯ್ತು ಮುಡಾ ಸಂಕಷ್ಟ !!! appeared first on Good News 24x7.

]]>
ಮುಡಾ ಹಗರಣ ಪ್ರಕರಣ ಕೇಸ್ ಗೆ ಹೊಸ ಟ್ವಿಸ್ಟ್; ಸಿಎಂ ಕುಟುಂಬದ ವಿರುದ್ಧ ಬಿತ್ತು ಮತ್ತೊಂದು ಕೇಸ್..! https://www.goodnews24x7.com/new-twist-to-the-muda-scam-case-another-case-filed-against-the-cms-family/ Wed, 27 Nov 2024 06:15:49 +0000 https://www.goodnews24x7.com/?p=1031 ಮುಡಾ ಹಗರಣ ಪ್ರಕರಣ ಕೇಸ್ ಗೆ ಹೊಸ ಟ್ವಿಸ್ಟ್ A4 ಆರೋಪಿ. ಜೆ.ದೇವರಾಜು ಅಣ್ಣನ ಮಗಳು ಜಮುನಾರಿಂದ ದಾವೆ ದೇವರಾಜು ಅಣ್ಣಾ ಮೈಲಾರಯ್ಯ ಮಗಳು ಜಮುನಾ ಸಿಎಂ ಪತ್ನಿ ಬಿ.ಎನ್.ಪಾವರ್ತಿ ಅವರ ವಿರುದ್ಧವೂ ದಾವೆ ಹೂಡಿದ್ದಾರೆ. ಸಿದ್ದರಾಮಯ್ಯ ತಮ್ಮ ಜಮೀನು ಎಂದು…

The post ಮುಡಾ ಹಗರಣ ಪ್ರಕರಣ ಕೇಸ್ ಗೆ ಹೊಸ ಟ್ವಿಸ್ಟ್; ಸಿಎಂ ಕುಟುಂಬದ ವಿರುದ್ಧ ಬಿತ್ತು ಮತ್ತೊಂದು ಕೇಸ್..! appeared first on Good News 24x7.

]]>

ಮುಡಾ ಹಗರಣ ಪ್ರಕರಣ ಕೇಸ್ ಗೆ ಹೊಸ ಟ್ವಿಸ್ಟ್ A4 ಆರೋಪಿ. ಜೆ.ದೇವರಾಜು ಅಣ್ಣನ ಮಗಳು ಜಮುನಾರಿಂದ ದಾವೆ ದೇವರಾಜು ಅಣ್ಣಾ ಮೈಲಾರಯ್ಯ ಮಗಳು ಜಮುನಾ ಸಿಎಂ ಪತ್ನಿ ಬಿ.ಎನ್.ಪಾವರ್ತಿ ಅವರ ವಿರುದ್ಧವೂ ದಾವೆ ಹೂಡಿದ್ದಾರೆ.

ಸಿದ್ದರಾಮಯ್ಯ ತಮ್ಮ ಜಮೀನು ಎಂದು ಹೇಳುವ ಸಂಬಂಧ ಕೇಸ್. ಕೆಸರೆ ಗ್ರಾಮದ ಸರ್ವೆ ನಂಬರ್ 464 ರ ಜಮೀನಿನಲ್ಲಿ ಭಾಗ ಬರಬೇಕು ಎಂದು ದಾವೆ ಸರ್ವೆ ನಂ.464ರ 3.16 ಎಕರೆ ಭೂಮಿ ಪಿತ್ರಾರ್ಜಿತ ಆಸ್ತಿಯಲ್ಲಿ ನನಗೂ ಪಾಲು ಕೊಡಿ ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ ಕೇಸ್ ಫೈಲ್
ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ವಿರುದ್ಧ ಕೂಡ ದಾವೆ ಹೂಡಿದ್ದಾರೆ. ಸ್ವಂತ ದೊಡ್ಡಪ್ಪ ದೇವರಾಜು ಹಾಗು ಕುಟುಂಬದವರು ಎದುರಾಳಿ ಮೈಸೂರು ಮುಡಾ ಕಮೀಷನರ್, ಜಿಲ್ಲಾಧಿಕಾರಿಯನ್ನೂ ಪಾರ್ಟಿ ಮಾಡಿರುವ ಜಮುನಾ.

ಸಿ. ಎನ್.ಆರ್ ನಂಬರ್ KAMS020031832024ರ ಅಡಿ ದಾವೆ. ಮಂಜುನಾಥ್ ಸ್ವಾಮಿ,ಜೆ.ದೇವರಾಜು, ಸರೋಜಮ್ಮ , ಡಿ.ಶೋಭಾ, ಡಿ.ದಿನಕರ್, ಡಿ.ಪ್ರಭಾ, ಡಿ.ಪ್ರತಿಭಾ, ಡಿ.ಶಶಿಧರ್ , ಬಿ.ಎಂ.ಮಲ್ಲಿಕಾರ್ಜುನ್ ಸ್ವಾಮಿ, ಡಿ.ಎನ್‌.ಪಾರ್ವತಿ, ಮುಡಾದ ಆಯುಕ್ತ, ಹಾಗು ಮೈಸೂರು ಜಿಲ್ಲಾಧಿಕಾರಿಗಳು ಎಂದು ಉಲ್ಲೇಖ ಎಲ್ಲರನ್ನು ವಿರುದ್ಧ ಪಾರ್ಟಿ ಮಾಡಿರುವ ಜಮುನಾ.

The post ಮುಡಾ ಹಗರಣ ಪ್ರಕರಣ ಕೇಸ್ ಗೆ ಹೊಸ ಟ್ವಿಸ್ಟ್; ಸಿಎಂ ಕುಟುಂಬದ ವಿರುದ್ಧ ಬಿತ್ತು ಮತ್ತೊಂದು ಕೇಸ್..! appeared first on Good News 24x7.

]]>
ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿಚಾರಣೆ https://www.goodnews24x7.com/cm-siddaramaiahs-wife-parvatis-trial-in-the-muda-case/ Sat, 26 Oct 2024 05:21:02 +0000 https://www.goodnews24x7.com/?p=940 ಉಪ ಚುನಾವಣೆ ರಾಜಕೀಯ ಕಾವೇರಿರುವ ಹೊತ್ತಲ್ಲೇ ಮುಡಾ ಹಗರಣದ ತನಿಖೆಗೆ ಮಹತ್ವದ ಘಟ್ಟ ತಲುಪಿದೆ. ನಿರೀಕ್ಷೆಗಿಂತ ವೇಗವಾಗಿ ಲೋಕಾಯುಕ್ತ ತನಿಖೆ ನಡೀತಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರನ್ನು ಮೈಸೂರು ಲೋಕಾಯುಕ್ತ ಎಸ್‌ಪಿ ವಿಚಾರಣೆಗೆ ಒಳಪಡಿಸಿದ್ದಾರೆ. ಸುಮಾರು ಮೂರು ಗಂಟೆಗಳ…

The post ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿಚಾರಣೆ appeared first on Good News 24x7.

]]>

ಉಪ ಚುನಾವಣೆ ರಾಜಕೀಯ ಕಾವೇರಿರುವ ಹೊತ್ತಲ್ಲೇ ಮುಡಾ ಹಗರಣದ ತನಿಖೆಗೆ ಮಹತ್ವದ ಘಟ್ಟ ತಲುಪಿದೆ. ನಿರೀಕ್ಷೆಗಿಂತ ವೇಗವಾಗಿ ಲೋಕಾಯುಕ್ತ ತನಿಖೆ ನಡೀತಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರನ್ನು ಮೈಸೂರು ಲೋಕಾಯುಕ್ತ ಎಸ್‌ಪಿ ವಿಚಾರಣೆಗೆ ಒಳಪಡಿಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಅವರು ವಿಚಾರಣೆ ಎದುರಿಸಿದ್ದಾರೆ.

ಲೋಕಾಯುಕ್ತ ಪೊಲೀಸರು ಸಮನ್ಸ್ ನೀಡಿದ ಹಿನ್ನೆಲೆಯಲ್ಲಿಂದು ಸಿಎಂ ಪತ್ನಿ ವಿಚಾರಣೆಗೆ ಹಾಜರಾಗಿದ್ರು. ಗೌಪ್ಯ ಸ್ಥಳದಲ್ಲಿ ಸಿಎಂ ಪತ್ನಿಯನ್ನು ಮೂರು ಗಂಟೆಗಳ ಕಾಲ ಲೋಕಾಯುಕ್ತ ಎಸ್‌ಪಿ ವಿಚಾರಣೆ ಮಾಡಿದ್ದಾರೆ. ವಿವಾದಿತ ಜಮೀನು ಮತ್ತು 14 ಸೈಟ್‌ಗಳ ಖರೀದಿ ವಿಚಾರವಾಗಿ ಹತ್ತಾರು ಪ್ರಶ್ನೆಗಳನ್ನು ಲೋಕಾಯುಕ್ತ ಎಸ್‌ಪಿ ಕೇಳಿದ್ದಾರೆ. ಇದಕ್ಕೆ ತಮ್ಮಲ್ಲಿರುವ ಮಾಹಿತಿಯನ್ನು ಸಿಎಂ ಪತ್ನಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

The post ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿಚಾರಣೆ appeared first on Good News 24x7.

]]>
ಹೆಲಿಕಾಪ್ಟರ್‌ನಲ್ಲಿ ಬಂದು ಮುಡಾ ಹಗರಣದ ಕಡತ ತೆಗೆದುಕೊಂಡು ಹೋಗಿದ್ದಾರೆ : ಭೈರತಿ ಸುರೇಶ್ ವಿರುದ್ಧ ಸ್ನೇಹಮಯಿ ಕೃಷ್ಣ ದೂರು https://www.goodnews24x7.com/helikap%e1%b9%adarnalli-bandu-mu%e1%b8%8da-hagara%e1%b9%87ada-ka%e1%b8%8data-tegeduko%e1%b9%87%e1%b8%8du-hogiddare-bhairati-sures-viruddha-snehamayi-kr%cc%a5%e1%b9%a3%e1%b9%87a-duru-duru-h/ Mon, 07 Oct 2024 06:25:08 +0000 https://www.goodnews24x7.com/?p=756 ಹೆಲಿಕಾಪ್ಟರ್‌ನಲ್ಲಿ ಬಂದು ಮುಡಾ ಹಗರಣದ ಕಡತ ತೆಗೆದುಕೊಂಡು ಹೋಗಿದ್ದಾರೆ : ಭೈರತಿ ಸುರೇಶ್ ವಿರುದ್ಧ ಸ್ನೇಹಮಯಿ ಕೃಷ್ಣ ದೂರು ಹೆಲಿಕಾಪ್ಟರ್‌ನಲ್ಲಿ ಬಂದು ಮುಡಾ ಹಗರಣದ ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ವಿರುದ್ಧ ಸ್ನೇಹಮಯಿ ಕೃಷ್ಣ…

The post ಹೆಲಿಕಾಪ್ಟರ್‌ನಲ್ಲಿ ಬಂದು ಮುಡಾ ಹಗರಣದ ಕಡತ ತೆಗೆದುಕೊಂಡು ಹೋಗಿದ್ದಾರೆ : ಭೈರತಿ ಸುರೇಶ್ ವಿರುದ್ಧ ಸ್ನೇಹಮಯಿ ಕೃಷ್ಣ ದೂರು appeared first on Good News 24x7.

]]>

ಹೆಲಿಕಾಪ್ಟರ್‌ನಲ್ಲಿ ಬಂದು ಮುಡಾ ಹಗರಣದ ಕಡತ ತೆಗೆದುಕೊಂಡು ಹೋಗಿದ್ದಾರೆ : ಭೈರತಿ ಸುರೇಶ್ ವಿರುದ್ಧ ಸ್ನೇಹಮಯಿ ಕೃಷ್ಣ ದೂರು

ಹೆಲಿಕಾಪ್ಟರ್‌ನಲ್ಲಿ ಬಂದು ಮುಡಾ ಹಗರಣದ ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ವಿರುದ್ಧ ಸ್ನೇಹಮಯಿ ಕೃಷ್ಣ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.

ಮುಡಾ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರೂ ಆ ದಾಖಲೆಗಳನ್ನು ವಶಕ್ಕೆ ಪಡೆಯದೇ ಸುಜೀತ್‌ ಅವರು ಸಚಿವರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯ ಮೇರೆ ಬೈರತಿ ಸುರೇಶ್‌ ಅವರು ಹೆಲಿಕಾಪ್ಟರ್‌ನಲ್ಲಿ ಬಂದು ಕಡತಗಳನ್ನ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸ್ನೇಹಮಯಿ ಕೃಷ್ಣ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

The post ಹೆಲಿಕಾಪ್ಟರ್‌ನಲ್ಲಿ ಬಂದು ಮುಡಾ ಹಗರಣದ ಕಡತ ತೆಗೆದುಕೊಂಡು ಹೋಗಿದ್ದಾರೆ : ಭೈರತಿ ಸುರೇಶ್ ವಿರುದ್ಧ ಸ್ನೇಹಮಯಿ ಕೃಷ್ಣ ದೂರು appeared first on Good News 24x7.

]]>
ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ ನೀಡಿದ​ ಹೈಕೋರ್ಟ್‌ https://www.goodnews24x7.com/high-court-granted-temporary-relief-to-cm-siddaramaiah-2/ Thu, 29 Aug 2024 11:15:02 +0000 https://www.goodnews24x7.com/?p=489 ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ ನೀಡಿದ​ ಹೈಕೋರ್ಟ್‌ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆದಿದೆ. ಇದೀಗ ಹೈಕೋರ್ಟ್​ ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್​ ನೀಡಿದೆ. ರಾಜ್ಯಪಾಲರು ತನಿಖೆಗೆ ಆದೇಶ…

The post ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ ನೀಡಿದ​ ಹೈಕೋರ್ಟ್‌ appeared first on Good News 24x7.

]]>

ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ ನೀಡಿದ​ ಹೈಕೋರ್ಟ್‌

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆದಿದೆ. ಇದೀಗ ಹೈಕೋರ್ಟ್​ ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್​ ನೀಡಿದೆ.

ರಾಜ್ಯಪಾಲರು ತನಿಖೆಗೆ ಆದೇಶ ಹೊರಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್‌ನಲ್ಲಿ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ. ರಾಜ್ಯಪಾಲರ ಆದೇಶ ವಜಾಗೊಳಿಸಬೇಕು ಎಂದು ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಆ.31 ಕ್ಕೆ ಹೈಕೋರ್ಟ್‌ ಮುಂದೂಡಿದೆ.

ಶನಿವಾರ ಬೆಳಗ್ಗೆ 10:30 ಕ್ಕೆ ವಿಚಾರಣೆಯನ್ನು ನಿಗದಿಪಡಿಸಲಾಗಿದೆ. ಆ ಮೂಲಕ ಹಿಂದಿನ ಮಧ್ಯಂತರ ಆದೇಶವನ್ನು ಹೈಕೋರ್ಟ್‌ ಮುಂದುವರಿಸಿದೆ. ವಿಚಾರಣೆ ಮುಂದೂಡುವಂತೆ ಜನಪ್ರತಿನಿಧಿಗಳ ಕೋರ್ಟ್‌ಗೆ ಸೂಚನೆ ನೀಡಿದೆ.

The post ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ ನೀಡಿದ​ ಹೈಕೋರ್ಟ್‌ appeared first on Good News 24x7.

]]>