Muda Archives - Good News 24x7 https://www.goodnews24x7.com/tag/muda/ Kannada Wed, 02 Apr 2025 11:48:31 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Muda Archives - Good News 24x7 https://www.goodnews24x7.com/tag/muda/ 32 32 ಸಿ.ಎಂ ಗೆ ಮತ್ತೆ ಶುರುವಾಯ್ತು ಮುಡಾ ಸಂಕಷ್ಟ !!! https://www.goodnews24x7.com/%e0%b2%b8%e0%b2%bf-%e0%b2%8e%e0%b2%82-%e0%b2%97%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%b6%e0%b3%81%e0%b2%b0%e0%b3%81%e0%b2%b5%e0%b2%be%e0%b2%af%e0%b3%8d%e0%b2%a4%e0%b3%81/ Wed, 02 Apr 2025 11:48:31 +0000 https://www.goodnews24x7.com/?p=3005 ರಾಜ್ಯದೆಲ್ಲೆಡೆ ಸಂಚಲನವನ್ನು ಸೃಷ್ಟಿ ಮಾಡಿ ಸುದ್ದಿ ಆಗ್ತಾ ಇರೋದು ಅಂದ್ರೆ ಅದು ಮೂಡ ಹಗರಣ. ಇದೀಗ ಸುದ್ದಿ ಮತ್ತೆ ಎಲ್ಲೆಡೆ ಚರ್ಚೆ ಆಗ್ತಾಯಿದೆ. ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೆ ಸಂಕಷ್ಟ ಎದುರಾಗಿದೆ. ಹೌದು ಲೋಕಾಯುಕ್ತ ವರದಿ…

The post ಸಿ.ಎಂ ಗೆ ಮತ್ತೆ ಶುರುವಾಯ್ತು ಮುಡಾ ಸಂಕಷ್ಟ !!! appeared first on Good News 24x7.

]]>

ರಾಜ್ಯದೆಲ್ಲೆಡೆ ಸಂಚಲನವನ್ನು ಸೃಷ್ಟಿ ಮಾಡಿ ಸುದ್ದಿ ಆಗ್ತಾ ಇರೋದು ಅಂದ್ರೆ ಅದು ಮೂಡ ಹಗರಣ. ಇದೀಗ ಸುದ್ದಿ ಮತ್ತೆ ಎಲ್ಲೆಡೆ ಚರ್ಚೆ ಆಗ್ತಾಯಿದೆ. ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೆ ಸಂಕಷ್ಟ ಎದುರಾಗಿದೆ. ಹೌದು ಲೋಕಾಯುಕ್ತ ವರದಿ ತಿರಸ್ಕರಿಸುವಂತೆ ಜನಪ್ರತಿನಿಧಿಗಳ ನ್ಯಾಯಲಯಕ್ಕೆ ಜಾರಿ ನಿರ್ದೇಶನಾಲಯ ಅರ್ಜಿ ಸಲ್ಲಿಸಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸೇರಿದಂತೆ ಕುಟುಂಬ ಸದಸ್ಯರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾದ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಕೋರ್ಟ್ ಮೆಟ್ಟಿಲೇರಿದೆ. ಜನಪ್ರತಿನಿಧಿಗಳ ನ್ಯಾಯಲಯಕ್ಕೆ ಇಡಿ ತಕರಾರು ಅರ್ಜಿ ಸಲ್ಲಿಸಿದೆ.ತಕರಾರು ಅರ್ಜಿಯಲ್ಲಿ ಸಿಎಂ ಹಾಗೂ ಸಿಎಂ ಕುಟುಂಬದ ವಿರುದ್ಧ ಸಾಕಷ್ಟು ಸಾಕ್ಷಿ ಇದೆ.

 

ನಮ್ಮ ತನಿಖೆಯಲ್ಲಿ ಅವರು ತಪ್ಪುಗಳು ಸಾಭೀತಾಗಿದೆ. ಹೀಗಿದ್ದರೂ ಅವರು ಯಾವ ತಪ್ಪು ಮಾಡಿಲ್ಲ ಎಂದು ಹೇಳಿರುವುದು ಸರಿಯಲ್ಲ. ಹೀಗಾಗಿ ಲೋಕಾಯುಕ್ತ ವರದಿಯನ್ನ ತಿರಸ್ಕರಿಸಿ ಎಂದು ಇಡಿ ಒಟ್ಟು 8 ಪುಟಗಳ ತಕರಾರು ಅರ್ಜಿ ಸಲ್ಲಿಕೆ ಮಾಡಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಯ ಜವಾಬ್ದಾರಿಯನ್ನ ಮೈಸೂರು ಲೋಕಾಯುಕ್ತರಿಗೆ ವಹಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಸದಸ್ಯರ ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಕೋರ್ಟ್ಗೆ ವರದಿ ಸಲ್ಲಿಕೆ ಮಾಡಿದ್ದರು. ವರದಿಯಲ್ಲಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಲಾಗಿತ್ತು.

The post ಸಿ.ಎಂ ಗೆ ಮತ್ತೆ ಶುರುವಾಯ್ತು ಮುಡಾ ಸಂಕಷ್ಟ !!! appeared first on Good News 24x7.

]]>
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ : ಸಿಎಂ ಗೆ ಕ್ಲೀನ್ ಚಿಟ್..? https://www.goodnews24x7.com/%e0%b2%ae%e0%b3%81%e0%b2%a1%e0%b2%be-%e0%b2%b9%e0%b2%97%e0%b2%b0%e0%b2%a3%e0%b2%95%e0%b3%8d%e0%b2%95%e0%b3%86-%e0%b2%b8%e0%b2%82%e0%b2%ac%e0%b2%82%e0%b2%a7%e0%b2%bf%e0%b2%b8%e0%b2%bf%e0%b2%a6%e0%b2%82/ Thu, 23 Jan 2025 12:32:32 +0000 https://www.goodnews24x7.com/?p=1870 ಬೆಂಗಳೂರು :- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಪೂರ್ಣಗೊಂಡಿದ್ದು, ಲೋಕಾಯುಕ್ತ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾವರ್ತಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ವರದಿ ಮಾಡಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಎಸ್ಪಿ ಟಿಜೆ ಉದೇಶ್ ನೇತೃತ್ವದಲ್ಲಿ…

The post ಮುಡಾ ಹಗರಣಕ್ಕೆ ಸಂಬಂಧಿಸಿದಂತೆ : ಸಿಎಂ ಗೆ ಕ್ಲೀನ್ ಚಿಟ್..? appeared first on Good News 24x7.

]]>

ಬೆಂಗಳೂರು :- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಪೂರ್ಣಗೊಂಡಿದ್ದು, ಲೋಕಾಯುಕ್ತ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾವರ್ತಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ವರದಿ ಮಾಡಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಎಸ್ಪಿ ಟಿಜೆ ಉದೇಶ್ ನೇತೃತ್ವದಲ್ಲಿ ತನಿಖೆ ನಡೆದು ವರದಿ ಸಿದ್ಧಪಡಿಸಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಕೋರ್ಟ್ಗೆ ವರದಿಯನ್ನ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರ ಎಲ್ಲೂ ಕಂಡು ಬಂದಿಲ್ಲ. ಡಿ ನೋಟಿಫೈ ಮಾಡುವಾಗ, ಭೂಪರಿವರ್ತನೆ ಮಾಡುವಾಗ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.
ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರ ಎಲ್ಲೂ ಕಂಡು ಬಂದಿಲ್ಲ. ಡಿನೋಟಿಫೈ ಭೂ ಪರಿವರ್ತನೆ ಮಾಡಬೇಕಾದ್ರೆ ನಿಯಮ ಉಲ್ಲಂಘನೆಯಾಗಿದೆ. ಮುಡಾ ಆಯುಕ್ತರು, ಕಂದಾಯ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡು ಬಂದಿದೆ. ಅಧಿಕಾರಿಗಳು ಅಪರಾಧ ಎಸಗಿರುವ ಬಗ್ಗೆ ಮುಂದೇನು ಮಾಡಬೇಕೆಂಬುದರ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲಾಗುವುದು ಎನ್ನಲಾಗಿದೆ.

The post ಮುಡಾ ಹಗರಣಕ್ಕೆ ಸಂಬಂಧಿಸಿದಂತೆ : ಸಿಎಂ ಗೆ ಕ್ಲೀನ್ ಚಿಟ್..? appeared first on Good News 24x7.

]]>
ಮುಡಾಗೆ ಬಿಡಿಎ ರೂಪ ಪ್ರತ್ಯೇಕ ಕಾಯ್ದೆ ತರಲು ಸರ್ಕಾರ ನಿರ್ಧಾರ… https://www.goodnews24x7.com/%e0%b2%ae%e0%b3%81%e0%b2%a1%e0%b2%be%e0%b2%97%e0%b3%86-%e0%b2%ac%e0%b2%bf%e0%b2%a1%e0%b2%bf%e0%b2%8e-%e0%b2%b0%e0%b3%82%e0%b2%aa-%e0%b2%aa%e0%b3%8d%e0%b2%b0%e0%b2%a4%e0%b3%8d%e0%b2%af%e0%b3%87/ Sun, 15 Dec 2024 09:48:08 +0000 https://www.goodnews24x7.com/?p=1154 ಇನ್ನು ಕಂಡ ಕಂಡವರು ಸದಸ್ಯರಾಗುವಂತಿಲ್ಲ; ಸರ್ಕಾರದಿಂದ ಮೂರಾಲ್ಕು ಮಂದಿ ನಾಮನಿರ್ದೇಶನ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಬೆಳಗಾವಿ ಅಧಿವೇಶನದಲ್ಲೇ ಮಸೂದೆ ಮಂಡನೆ ನಿರ್ಧಾರ ಬೆಂಗಳೂರು, ಡಿ.14(ಕೆಎಂಶಿ)-ಭ್ರಷ್ಟಾಚಾರ ಹಗರಣಗಳ ಕೇಂದ್ರಬಿಂದು ಆಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಬಿಡಿಎ ಮಾದರಿಯಲ್ಲಿ ಪ್ರತ್ಯೇಕ ಕಾಯ್ದೆ…

The post ಮುಡಾಗೆ ಬಿಡಿಎ ರೂಪ ಪ್ರತ್ಯೇಕ ಕಾಯ್ದೆ ತರಲು ಸರ್ಕಾರ ನಿರ್ಧಾರ… appeared first on Good News 24x7.

]]>

ಇನ್ನು ಕಂಡ ಕಂಡವರು ಸದಸ್ಯರಾಗುವಂತಿಲ್ಲ; ಸರ್ಕಾರದಿಂದ ಮೂರಾಲ್ಕು ಮಂದಿ ನಾಮನಿರ್ದೇಶನ
ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
ಬೆಳಗಾವಿ ಅಧಿವೇಶನದಲ್ಲೇ ಮಸೂದೆ ಮಂಡನೆ ನಿರ್ಧಾರ

ಬೆಂಗಳೂರು, ಡಿ.14(ಕೆಎಂಶಿ)-ಭ್ರಷ್ಟಾಚಾರ ಹಗರಣಗಳ ಕೇಂದ್ರಬಿಂದು ಆಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಬಿಡಿಎ ಮಾದರಿಯಲ್ಲಿ ಪ್ರತ್ಯೇಕ ಕಾಯ್ದೆ ರೂಪಿಸಲು ಸರ್ಕಾರ ತೀರ್ಮಾನಿಸಿದೆ.ಬೆಳಗಾವಿಯ ಸುವರ್ಣಸೌಧದಲ್ಲಿ ನಿನ್ನೆ ರಾತ್ರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಂಡಿರುವ ಸರ್ಕಾರ, ಚಳಿಗಾಲದ ಅಧಿವೇಶನದಲ್ಲೇ ಮಸೂದೆ ಮಂಡನೆ ಮಾಡಿ ಅಂಗೀಕಾರ ಪಡೆಯಲು ಸಮ್ಮತಿಸಿದೆ. ಕಾಯ್ದೆ ಜಾರಿಗೊಂಡ ನಂತರ ಭೂಸ್ವಾಧೀನ, ನಕ್ಷೆ, ನಿವೇಶನ ಹಂಚಿಕೆ ಸೇರಿದಂತೆ ಎಲ್ಲಾ ಕಾರ್ಯಗಳು ಬಿಡಿಎ ಮಾದರಿಯಲ್ಲೇ ನಡೆಯಲಿವೆ. ಭೂಸ್ವಾಧೀನ ನಂತರ ಮಾಲೀಕರಿಗೆ ಶೇ.50 ಇಲ್ಲವೇ 40ರಷ್ಟು ನಿವೇಶನ ಹಂಚಿಕೆ ಹಾಗೂ ಬೇಕಾಬಿಟ್ಟಿ ಬಿಡಿ ನಿವೇಶನಗಳನ್ನು ಹಂಚಿಕೆ ಮಾಡುವ ಸ್ವಾತಂತ್ರ್ಯಕ್ಕೆ ಕಡಿವಾಣ ಬೀಳಲಿದೆ. ಅಷ್ಟೇ ಅಲ್ಲ, ಪ್ರಾಧಿಕಾರಕ್ಕೆ ಕೇವಲ ಮೂರರಿಂದ ನಾಲ್ಕು ಮಂದಿ ನಾಮನಿರ್ದೇಶನ ಸದಸ್ಯರಿರುತ್ತಾರೆ.

ಈ ಮೊದಲು ಮುಡಾಕ್ಕೆ ನಾಮನಿರ್ದೇಶಿತರ ಸಂಖ್ಯೆ ಅಧಿಕವಿತ್ತು. ನಗರಾಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಡಾಕ್ಕೆ ಇನ್ನು ಮುಂದೆ ಬಿಗಿಯಾದ ಕಾನೂನಿನ ಕುಣಿಕೆ ಬೀಳಲಿದೆ. ಮುಡಾ 1987ರ ಕಾಯ್ದೆಯಡಿ ಕಾರ್ಯನಿರ್ವ ಹಿಸುತ್ತಿತ್ತು. ಮಸೂದೆಗೆ ಅನುಮತಿ ದೊರೆಯುತಿ ದ್ದಂತೆ ಎಲ್ಲವನ್ನೂ ಹೊಸ ಕಾಯ್ದೆಯಡಿಯಲ್ಲೇ ನಿರ್ವಹಿಸಬೇಕಾಗುತ್ತದೆ. ಪ್ರಾಧಿಕಾರ ಇದುವರುಮೈಸೂರು ನಗರದಲ್ಲಿ ಅನೇಕ ಹೊಸ ಹೊಸ ಬಡಾವಣೆ ಗಳನ್ನು ನಿರ್ಮಿಸಿ, ನಿವೇಶನಗಳನ್ನು ಹಂಚಿಕೆ ಮಾಡಿದೆ. ಆದರೆ, ಸಾವಿರಾರು ಬಿಡಿ ನಿವೇಶನಗಳನ್ನು ಆಡಳಿತ ಮಂಡಳಿಯೊಂದಿಗೆ ಅಧಿಕಾರಿಗಳು ಶಾಮೀಲಾಗಿ ಬೇಕಾ ಬಿಟ್ಟಿ ಹಂಚಿ, ಮುಡಾಗೆ ಸಾವಿರಾರು ಕೋಟಿ ರೂ. ನಷ್ಟ, ಉಂಟು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ 14 ನಿವೇಶನಗಳನ್ನು ತಮ್ಮ ಜಮೀನಿನ ಸ್ವಾಧೀನಕ್ಕೆ ಬದಲಾಗಿ 4 ಪಡೆದುಕೊಂಡಿದ್ದೇ ಪ್ರಾಧಿಕಾರದಲ್ಲಿ ನಡೆದಿರುವ ಭ್ರಷ್ಟಾಚಾರಗಳು ಬಯಲಿಗೆ ಬರಲು ಕಾರಣವಾಗಿದ್ದು, ಈ ಬೆಳವಣಿಗೆ ನಂತರ ರಾಜಭವನ ಮಧ್ಯೆ ಪ್ರವೇಶಿಸಿ ನ್ಯಾಯಾಲಯದ ಆದೇಶದಂತೆ ತನಿಖೆಯೂ ನಡೆದಿದೆ. ಇದರ ನಡುವೆ ಜಾರಿ ನಿರ್ದೇಶನಾಲಯ ಪ್ರತ್ಯೇಕ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿ ದೊಡ್ಡ ಸಂಚಲನ ಉಂಟಾಗಲಿದೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ

The post ಮುಡಾಗೆ ಬಿಡಿಎ ರೂಪ ಪ್ರತ್ಯೇಕ ಕಾಯ್ದೆ ತರಲು ಸರ್ಕಾರ ನಿರ್ಧಾರ… appeared first on Good News 24x7.

]]>
ಮುಡಾ ಹಗರಣ ಪ್ರಕರಣ ಕೇಸ್ ಗೆ ಹೊಸ ಟ್ವಿಸ್ಟ್; ಸಿಎಂ ಕುಟುಂಬದ ವಿರುದ್ಧ ಬಿತ್ತು ಮತ್ತೊಂದು ಕೇಸ್..! https://www.goodnews24x7.com/new-twist-to-the-muda-scam-case-another-case-filed-against-the-cms-family/ Wed, 27 Nov 2024 06:15:49 +0000 https://www.goodnews24x7.com/?p=1031 ಮುಡಾ ಹಗರಣ ಪ್ರಕರಣ ಕೇಸ್ ಗೆ ಹೊಸ ಟ್ವಿಸ್ಟ್ A4 ಆರೋಪಿ. ಜೆ.ದೇವರಾಜು ಅಣ್ಣನ ಮಗಳು ಜಮುನಾರಿಂದ ದಾವೆ ದೇವರಾಜು ಅಣ್ಣಾ ಮೈಲಾರಯ್ಯ ಮಗಳು ಜಮುನಾ ಸಿಎಂ ಪತ್ನಿ ಬಿ.ಎನ್.ಪಾವರ್ತಿ ಅವರ ವಿರುದ್ಧವೂ ದಾವೆ ಹೂಡಿದ್ದಾರೆ. ಸಿದ್ದರಾಮಯ್ಯ ತಮ್ಮ ಜಮೀನು ಎಂದು…

The post ಮುಡಾ ಹಗರಣ ಪ್ರಕರಣ ಕೇಸ್ ಗೆ ಹೊಸ ಟ್ವಿಸ್ಟ್; ಸಿಎಂ ಕುಟುಂಬದ ವಿರುದ್ಧ ಬಿತ್ತು ಮತ್ತೊಂದು ಕೇಸ್..! appeared first on Good News 24x7.

]]>

ಮುಡಾ ಹಗರಣ ಪ್ರಕರಣ ಕೇಸ್ ಗೆ ಹೊಸ ಟ್ವಿಸ್ಟ್ A4 ಆರೋಪಿ. ಜೆ.ದೇವರಾಜು ಅಣ್ಣನ ಮಗಳು ಜಮುನಾರಿಂದ ದಾವೆ ದೇವರಾಜು ಅಣ್ಣಾ ಮೈಲಾರಯ್ಯ ಮಗಳು ಜಮುನಾ ಸಿಎಂ ಪತ್ನಿ ಬಿ.ಎನ್.ಪಾವರ್ತಿ ಅವರ ವಿರುದ್ಧವೂ ದಾವೆ ಹೂಡಿದ್ದಾರೆ.

ಸಿದ್ದರಾಮಯ್ಯ ತಮ್ಮ ಜಮೀನು ಎಂದು ಹೇಳುವ ಸಂಬಂಧ ಕೇಸ್. ಕೆಸರೆ ಗ್ರಾಮದ ಸರ್ವೆ ನಂಬರ್ 464 ರ ಜಮೀನಿನಲ್ಲಿ ಭಾಗ ಬರಬೇಕು ಎಂದು ದಾವೆ ಸರ್ವೆ ನಂ.464ರ 3.16 ಎಕರೆ ಭೂಮಿ ಪಿತ್ರಾರ್ಜಿತ ಆಸ್ತಿಯಲ್ಲಿ ನನಗೂ ಪಾಲು ಕೊಡಿ ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ ಕೇಸ್ ಫೈಲ್
ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ವಿರುದ್ಧ ಕೂಡ ದಾವೆ ಹೂಡಿದ್ದಾರೆ. ಸ್ವಂತ ದೊಡ್ಡಪ್ಪ ದೇವರಾಜು ಹಾಗು ಕುಟುಂಬದವರು ಎದುರಾಳಿ ಮೈಸೂರು ಮುಡಾ ಕಮೀಷನರ್, ಜಿಲ್ಲಾಧಿಕಾರಿಯನ್ನೂ ಪಾರ್ಟಿ ಮಾಡಿರುವ ಜಮುನಾ.

ಸಿ. ಎನ್.ಆರ್ ನಂಬರ್ KAMS020031832024ರ ಅಡಿ ದಾವೆ. ಮಂಜುನಾಥ್ ಸ್ವಾಮಿ,ಜೆ.ದೇವರಾಜು, ಸರೋಜಮ್ಮ , ಡಿ.ಶೋಭಾ, ಡಿ.ದಿನಕರ್, ಡಿ.ಪ್ರಭಾ, ಡಿ.ಪ್ರತಿಭಾ, ಡಿ.ಶಶಿಧರ್ , ಬಿ.ಎಂ.ಮಲ್ಲಿಕಾರ್ಜುನ್ ಸ್ವಾಮಿ, ಡಿ.ಎನ್‌.ಪಾರ್ವತಿ, ಮುಡಾದ ಆಯುಕ್ತ, ಹಾಗು ಮೈಸೂರು ಜಿಲ್ಲಾಧಿಕಾರಿಗಳು ಎಂದು ಉಲ್ಲೇಖ ಎಲ್ಲರನ್ನು ವಿರುದ್ಧ ಪಾರ್ಟಿ ಮಾಡಿರುವ ಜಮುನಾ.

The post ಮುಡಾ ಹಗರಣ ಪ್ರಕರಣ ಕೇಸ್ ಗೆ ಹೊಸ ಟ್ವಿಸ್ಟ್; ಸಿಎಂ ಕುಟುಂಬದ ವಿರುದ್ಧ ಬಿತ್ತು ಮತ್ತೊಂದು ಕೇಸ್..! appeared first on Good News 24x7.

]]>
ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು https://www.goodnews24x7.com/complaint-to-lokayukta-against-raghu-kautilya/ Sat, 19 Oct 2024 06:19:52 +0000 https://www.goodnews24x7.com/?p=875 ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ಕಾನೂನು ಬಾಹಿರವಾಗಿ ಸಿ.ಎ ನಿವೇಶನ ಪಡೆದಿದ್ದಾರೆಂದು ಆರೋಪಿಸಿ ಬಿಜೆಪಿ ಮುಖಂಡ ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ನಾಗೇಂದ್ರ ಎಂಬುವವರು ರಘು ಕೌಟಿಲ್ಯ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದ್ದು ಇದಕ್ಕೆ ಸಂಬಂಧಪಟ್ಟ ಎಲ್ಲಾ…

The post ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು appeared first on Good News 24x7.

]]>

ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು

ಕಾನೂನು ಬಾಹಿರವಾಗಿ ಸಿ.ಎ ನಿವೇಶನ ಪಡೆದಿದ್ದಾರೆಂದು ಆರೋಪಿಸಿ ಬಿಜೆಪಿ ಮುಖಂಡ ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ನಾಗೇಂದ್ರ ಎಂಬುವವರು ರಘು ಕೌಟಿಲ್ಯ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದ್ದು ಇದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳನ್ನು ನಾಗೇಂದ್ರ ಅವರು ಸಲ್ಲಿಸಿದ್ದಾರೆ ಎನ್ನಲಾಗಿದೆ.

ಜೆ. ರಂಗಣ್ಣ ಲಕ್ಷ್ಮಮ್ಮ ಚಾರಿಟಬಲ್ ಟ್ರಸ್ಟ್ ಗ ಕಾನೂನು ಬಾಹಿರ ಸಿ.ಎ ನಿವೇಶನ ಪಡೆಯಲಾಗಿದೆ. ಮೈಸೂರು ತಾಲ್ಲೂಕು, ಕೇರ್ಗಳ್ಳಿ ಸರ್ವೆ ನಂ. 27, 29 ರಲ್ಲಿ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದವರು ನಿರ್ಮಿಸಿರುವ ಸೋಮನಾಥ ನಗರ ಬಡಾವಣೆಯಲ್ಲಿ ಸಿ.ಎ. ನಿವೇಶನ ಇದಾಗಿದೆ. ನಿವೇಶನದ 85 (62+67)/2 ( 5482.5) ಚದರ ಮೀಟರ್‌ಗಳು ) ಇದನ್ನು ಮಂಜೂರು ಮಾಡಲಾಗಿತ್ತು.

ನಿವೇಶನಕ್ಕೆ ಸಂಬಂಧಿಸಿದಂತೆ ಸರ್ಕಾರದ ಗಮನಕ್ಕಾಗಲೀ ತರದೇ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮಂಡಿಸದೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಹಾಗೂ ಸಿಬ್ಬಂದಿ ಸೇರಿ ಕಾನೂನುಬಾಹಿರವಾಗಿ ರಘು ಕೌಟಿಲ್ಯ ಅವರಿಗೆ ನಿವೇಶನ ಮಂಜೂರು ಮಾಡಿದ್ದಾರೆ. ಹೀಗಾಗಿ ಅಕ್ರಮವಾಗಿ ನಿವೇಶನ ಪಡೆದಿರುವ ರುಘು ಕೌಟಿಲ್ಯ ವಿರುದ್ದ ಕ್ರಮ ಜರುಗಿಸುವಂತೆ ದೂರಿನಲ್ಲಿ ನಾಗೇಂದ್ರ ಒತ್ತಾಯಿಸಿದ್ದಾರೆ.

ವ್ಯವಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಖಾಸಗಿ ವ್ಯಕ್ತಿ ಆರ್. ರಘು ಕೌಟಿಲ್ಯ ಆಕ್ರಮ ಆರ್ಥಿಕ ಲಾಭ ಮಾಡಿಕೊಡುವ ಉದ್ದೇಶದಿಂದ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಸಿ.ಎ. ನಿವೇಶನವನ್ನು ಗುತ್ತಿಗೆ ಒಪ್ಪಂದ ಪತ್ರ ಮಾಡಿಕೊಟ್ಟು ಸಹಕರಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟು ಮಾಡಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ತಹಶೀಲ್ದಾರ್ ರಾಜಶೇಖ‌ರ್, ನಗರ ಯೋಜನಾ ಸಹಾಯಕ ನಿರ್ದೇಶಕಪಿ.ಎಸ್.ನಟರಾಜ್, ಅಂದಿನ ಆಯುಕ್ತರುಗಳಾಗಿದ್ದ ನಟೇಶ್ ಮತ್ತು ದಿನೇಶ್ ಕುಮಾರ್, ಹಿಂದಿನ ಕಾರ್ಯದರ್ಶಿಗಳಾದ ಕುಸುಮ ಕುಮಾರಿ ಮತ್ತು ತಹಶೀಲ್ದಾರ್ ರಮಾದೇವಿ ಸಬ್ ರಿಜಿಸ್ಟ್ರಾರ್, ಪ್ರಥಮ ದರ್ಜೆ ಸಹಾಯಕ ಮಾದೇಶ್ ದ್ವೀತಿಯ ದರ್ಜೆ ಸಹಾಯಕ ರವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾಗೇಂದ್ರ ಆಗ್ರಹಿಸಿದ್ದಾರೆ.

 

The post ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು appeared first on Good News 24x7.

]]>
ಮೈಸೂರು ಮುಡಾ ಕಚೇರಿ ಮೇಲೆ ಇಡಿ ದಾಳಿ, 20ಕ್ಕೂ ಹೆಚ್ಚು ಅಧಿಕಾರಿಗಳಿ ದಾಳಿ https://www.goodnews24x7.com/ed-raid-on-mysore-muda-office-more-than-20-officers-attacked/ Fri, 18 Oct 2024 08:10:20 +0000 https://www.goodnews24x7.com/?p=867 ಮೈಸೂರು ಮುಡಾ ಕಚೇರಿ ಮೇಲೆ ಇಡಿ ದಾಳಿ, 20ಕ್ಕೂ ಹೆಚ್ಚು ಅಧಿಕಾರಿಗಳಿ ದಾಳಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. 20ಕ್ಕೂ ಹೆಚ್ಚು ಅಧಿಕಾರಿಗಳಿ ದಾಳಿ ಮಾಡಿ, ಸೈಟ್​ ಹಂಚಿಕೆ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.…

The post ಮೈಸೂರು ಮುಡಾ ಕಚೇರಿ ಮೇಲೆ ಇಡಿ ದಾಳಿ, 20ಕ್ಕೂ ಹೆಚ್ಚು ಅಧಿಕಾರಿಗಳಿ ದಾಳಿ appeared first on Good News 24x7.

]]>

ಮೈಸೂರು ಮುಡಾ ಕಚೇರಿ ಮೇಲೆ ಇಡಿ ದಾಳಿ, 20ಕ್ಕೂ ಹೆಚ್ಚು ಅಧಿಕಾರಿಗಳಿ ದಾಳಿ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. 20ಕ್ಕೂ ಹೆಚ್ಚು ಅಧಿಕಾರಿಗಳಿ ದಾಳಿ ಮಾಡಿ, ಸೈಟ್​ ಹಂಚಿಕೆ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಮುಡಾ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಿವೇಶನ ಹಂಚಿಕೆ ವಿಚಾರವಾಗಿ ಮುಡಾದಲ್ಲಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಆರ್​ಐಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನೀಡಿದ ದೂರಿನ ಆಧಾರದ ಮೇಲೆ ಇಡಿ ಅಧಿಕಾರಿಗಳು ಮುಡಾ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಇಡಿಯ 20ಕ್ಕೂ ಹೆಚ್ಚು ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ.

The post ಮೈಸೂರು ಮುಡಾ ಕಚೇರಿ ಮೇಲೆ ಇಡಿ ದಾಳಿ, 20ಕ್ಕೂ ಹೆಚ್ಚು ಅಧಿಕಾರಿಗಳಿ ದಾಳಿ appeared first on Good News 24x7.

]]>
ಮುಡಾ ಅಧ್ಯಕ್ಷ ಮರೀಗೌಡ ರಾಜೀನಾಮೆ ಸಾಧ್ಯತೆ? https://www.goodnews24x7.com/muda-president-marigowda-likely-to-resign/ Wed, 16 Oct 2024 03:48:13 +0000 https://www.goodnews24x7.com/?p=845 ಮುಡಾ ಅಧ್ಯಕ್ಷ ಮರೀಗೌಡ ರಾಜೀನಾಮೆ ಸಾಧ್ಯತೆ? ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಮರೀಗೌಡ ಅವರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಮುಡಾಗೆ ಆಡಳಿತಾಧಿಕಾರಿ ನೇಮಕಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಮುಡಾದಲ್ಲಿ 50:50ರ ಅನುಪಾತ ಅಡಿಯಲ್ಲಿ ನಿವೇಶನ ಹಂಚಿಕೆಯಲ್ಲಿ ಬಹುಕೋಟಿ ಹಗರಣ…

The post ಮುಡಾ ಅಧ್ಯಕ್ಷ ಮರೀಗೌಡ ರಾಜೀನಾಮೆ ಸಾಧ್ಯತೆ? appeared first on Good News 24x7.

]]>

ಮುಡಾ ಅಧ್ಯಕ್ಷ ಮರೀಗೌಡ ರಾಜೀನಾಮೆ ಸಾಧ್ಯತೆ?

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಮರೀಗೌಡ ಅವರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಮುಡಾಗೆ ಆಡಳಿತಾಧಿಕಾರಿ ನೇಮಕಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಮುಡಾದಲ್ಲಿ 50:50ರ ಅನುಪಾತ ಅಡಿಯಲ್ಲಿ ನಿವೇಶನ ಹಂಚಿಕೆಯಲ್ಲಿ ಬಹುಕೋಟಿ ಹಗರಣ ಪ್ರಕರಣದ ಪರಿಣಾಮ ಈ ನಿರ್ಧಾರಕ್ಕೆ ಬಂದಿದೆ.

ಸಿಎಂ ಸಿದ್ದರಾಮಯ್ಯ ವಿರುದ್ಧವೇ ಗಂಭೀರ ಆರೋಪ ಕೇಳಿ ಬಂದಿರುವ ಹಿನ್ನೆಲೆ ಕಾಂಗ್ರೆಸ್ ಪಕ್ಷ ತೀವ್ರ ಮುಜುಗರಕ್ಕೆ ಸಿಲುಕಿದೆ. ಹಾಗಾಗಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೆ. ಮರೀಗೌಡಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

The post ಮುಡಾ ಅಧ್ಯಕ್ಷ ಮರೀಗೌಡ ರಾಜೀನಾಮೆ ಸಾಧ್ಯತೆ? appeared first on Good News 24x7.

]]>
ಮುಡಾ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ : ಸಿಎಂ ಸಿದ್ದರಾಮಯ್ಯ https://www.goodnews24x7.com/mu%e1%b8%8da-prakara%e1%b9%87ada-tanikheyalli-hastak%e1%b9%a3epa-illa-sie%e1%b9%81-siddaramayya-lokayukta-mu%e1%b8%8da-prakara%e1%b9%87ada-tanikhe-prastuta-lokayuktadalliddu-nanu-adaralli-yavude/ Sun, 29 Sep 2024 08:19:30 +0000 https://www.goodnews24x7.com/?p=689 ಮುಡಾ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ : ಸಿಎಂ ಸಿದ್ದರಾಮಯ್ಯ ಮುಡಾ ಪ್ರಕರಣದ ತನಿಖೆ ಪ್ರಸ್ತುತ ಲೋಕಾಯುಕ್ತದಲ್ಲಿದ್ದು, ನಾನು ಅದರಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮುಡಾ ಪ್ರಕರಣ ಸಂಬಂಧ ಸಿಎಂ ವಿರುದ್ಧ ಇಡಿಯಲ್ಲಿ ದೂರು…

The post ಮುಡಾ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ : ಸಿಎಂ ಸಿದ್ದರಾಮಯ್ಯ appeared first on Good News 24x7.

]]>

ಮುಡಾ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ : ಸಿಎಂ ಸಿದ್ದರಾಮಯ್ಯ

ಮುಡಾ ಪ್ರಕರಣದ ತನಿಖೆ ಪ್ರಸ್ತುತ ಲೋಕಾಯುಕ್ತದಲ್ಲಿದ್ದು, ನಾನು ಅದರಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮುಡಾ ಪ್ರಕರಣ ಸಂಬಂಧ ಸಿಎಂ ವಿರುದ್ಧ ಇಡಿಯಲ್ಲಿ ದೂರು ದಾಖಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಇಡಿಯಲ್ಲಿ ದೂರು ದಾಖಲಾಗಿದ್ದರೆ, ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ ಎಂದರು.

ಕುಮಾರಸ್ವಾಮಿಯವರು ಲೋಕಾಯುಕ್ತ ಎಡಿಜಿಪಿ ಮೇಲೆಯೂ ಟೀಕೆ ಮಾಡುತ್ತಿರುವ ಬಗ್ಗೆ ಬಗ್ಗೆ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿಯವರು ತಪ್ಪೆಸೆಗಿಸಿದ್ದು, ಅಧಿಕಾರಗಳ ವಿರುದ್ಧ ಟೀಕೆ ಮಾಡುವುದು ಸರಿಯಲ್ಲ. ಇಂತಹ ಹೇಳಿಕೆಗಳ ಮೇಲೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ

ಮೈಸೂರಿನಲ್ಲಿ ರೇವ್ ಪಾರ್ಟಿ ನಡೆದಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ರೇವ್ ಪಾರ್ಟಿ ನಡೆದಿರುವ ಬಗ್ಗೆ ಮಾಹಿತಿ ಬಂದಿದ್ದು,ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ದಸರಾ ಉತ್ಸವದ ಸಿದ್ಧತೆಗಳ ಪರ್ತಕರ್ತರಿಗೆ ಮಾಹಿತಿ ನೀಡುತ್ತಾ, ದಸರಾ ಉತ್ಸವಗಳ ಸಿದ್ದತೆಗಳಿಗೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಸಿದ್ಧತೆಗಳನ್ನು ವೀಕ್ಷಿಸಲು ಅಕ್ಟೋಬರ್ 2 ರಂದು ಮೈಸೂರಿಗೆ ಆಗಮಿಸಲಿದ್ದೇನೆ ಎಂದರು.

The post ಮುಡಾ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ : ಸಿಎಂ ಸಿದ್ದರಾಮಯ್ಯ appeared first on Good News 24x7.

]]>
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ FIR ದಾಖಲು https://www.goodnews24x7.com/file-fir-against-chief-minister-siddaramaiah/ Fri, 27 Sep 2024 10:46:46 +0000 https://www.goodnews24x7.com/?p=672 ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ FIR ದಾಖಲು ಅಕ್ರಮವಾಗಿ ಮುಡಾ ಸೈಟು ಪಡೆದ ಕೇಸ್‌ನಲ್ಲಿ ಕೊನೆಗೂ ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲು ಮಾಡಲಾಗಿದೆ. ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ ಅವರಿಂದ ಕೇಸ್ ನಂಬರ್ 11/2024 ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಮುಡಾ…

The post ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ FIR ದಾಖಲು appeared first on Good News 24x7.

]]>

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ FIR ದಾಖಲು

ಅಕ್ರಮವಾಗಿ ಮುಡಾ ಸೈಟು ಪಡೆದ ಕೇಸ್‌ನಲ್ಲಿ ಕೊನೆಗೂ ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲು ಮಾಡಲಾಗಿದೆ. ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ ಅವರಿಂದ ಕೇಸ್ ನಂಬರ್ 11/2024 ಅಡಿ ಪ್ರಕರಣ ದಾಖಲು ಮಾಡಲಾಗಿದೆ.

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ A1 ಆಗಿದ್ದು, ಲೋಕಾಯುಕ್ತ ಅಧಿಕಾರಿಗಳು ಎಫ್ಐಆರ್‌ನಲ್ಲಿ ಅಧಿಕೃತವಾಗಿ ನಮೂದು ಮಾಡಿದ್ದಾರೆ. A2 ಆಗಿ ಸಿಎಂ ಪತ್ನಿ ಬಿ.ಎನ್ ಪಾರ್ವತಿ, A3 ಸಿಎಂ ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ್ ಸ್ವಾಮಿ, A4 ಭೂಮಿ ಮಾರಾಟ ಮಾಡಿದ ದೇವರಾಜು ಅವರಾಗಿದ್ದಾರೆ.

The post ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ FIR ದಾಖಲು appeared first on Good News 24x7.

]]>
ನಿಯಮ ಉಲ್ಲಂಘನೆಯಾಗಿರುವ ಸಿಎ ನಿವೇಶನ ಮಾಹಿತಿ ಸಂಗ್ರಹಣೆಗೆ ಮುಡಾ ಅಧ್ಯಕ್ಷ ಕೆ.ಮರೀಗೌಡ ಸೂಚನೆ https://www.goodnews24x7.com/muda-president-k-marigowda-instructed-to-collect-information-about-the-ca-site-which-is-in-violation-of-the-rules/ Thu, 26 Sep 2024 12:45:45 +0000 https://www.goodnews24x7.com/?p=656 ನಿಯಮ ಉಲ್ಲಂಘನೆಯಾಗಿರುವ ಸಿಎ ನಿವೇಶನ ಮಾಹಿತಿ ಸಂಗ್ರಹಣೆಗೆ ಮುಡಾ ಅಧ್ಯಕ್ಷ ಕೆ.ಮರೀಗೌಡ ಸೂಚನೆ ಮುಡಾ ಅಧ್ಯಕ್ಷರು, ಪ್ರಾಧಿಕಾರದ ಆಯುಕ್ತರು ಹಾಗೂ ಎಲ್ಲಾ ಶಾಖಾ ಮುಖ್ಯಸ್ಥರೊಡನೆ ಸಭೆಯನ್ನು ನಡೆಸಿ ಮುಡಾದಿಂದ ಈ ಹಿಂದೆ ಹಂಚಿಕೆಯಾಗಿರುವ ನಾಗರೀಕ ಸೌಕರ್ಯ ನಿವೇಶನಗಳನ್ನು ಹಂಚಿಕೆಯಾದ ಉದ್ದೇಶಕ್ಕೆ ಬಳಸದೇ…

The post ನಿಯಮ ಉಲ್ಲಂಘನೆಯಾಗಿರುವ ಸಿಎ ನಿವೇಶನ ಮಾಹಿತಿ ಸಂಗ್ರಹಣೆಗೆ ಮುಡಾ ಅಧ್ಯಕ್ಷ ಕೆ.ಮರೀಗೌಡ ಸೂಚನೆ appeared first on Good News 24x7.

]]>

ನಿಯಮ ಉಲ್ಲಂಘನೆಯಾಗಿರುವ ಸಿಎ ನಿವೇಶನ ಮಾಹಿತಿ ಸಂಗ್ರಹಣೆಗೆ ಮುಡಾ ಅಧ್ಯಕ್ಷ ಕೆ.ಮರೀಗೌಡ ಸೂಚನೆ

ಮುಡಾ ಅಧ್ಯಕ್ಷರು, ಪ್ರಾಧಿಕಾರದ ಆಯುಕ್ತರು ಹಾಗೂ ಎಲ್ಲಾ ಶಾಖಾ ಮುಖ್ಯಸ್ಥರೊಡನೆ ಸಭೆಯನ್ನು ನಡೆಸಿ ಮುಡಾದಿಂದ ಈ ಹಿಂದೆ ಹಂಚಿಕೆಯಾಗಿರುವ ನಾಗರೀಕ ಸೌಕರ್ಯ ನಿವೇಶನಗಳನ್ನು ಹಂಚಿಕೆಯಾದ ಉದ್ದೇಶಕ್ಕೆ ಬಳಸದೇ ನಿಯಮ ಉಲ್ಲಂಘಿಸಿ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ನೀಡಿರುವ ಬಗ್ಗೆ ಅನೇಕ ದೂರುಗಳು ಬಂದಿವೆ. ಹೀಗಾಗಿ ನಿಯಮ ಉಲ್ಲಂಘನೆಯಾಗಿರುವ ಸಿಎ ನಿವೇಶನ ಮಾಹಿತಿ ಸಂಗ್ರಹಣೆಗೆ ಸೂಚನೆ ನೀಡಲಾಗಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರೀಗೌಡ ತಿಳಿಸಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಈ ಹಿಂದೆ ಹಂಚಿಕೆಯಾಗಿರುವ ನಾಗರೀಕ ಸೌಕರ್ಯ ನಿವೇಶನಗಳನ್ನು ಹಂಚಿಕೆಯಾದ ಉದ್ದೇಶಕ್ಕೆ ಬಳಸದೇ ನಿಯಮ ಉಲ್ಲಂಘಿಸಿ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ನೀಡಿರುವ ಬಗ್ಗೆ ಅನೇಕ ದೂರುಗಳು ಬಂದಿರುವುದನ್ನು ಗಂಭಿರವಾಗಿ ಪರಿಗಣಿಸಿದೆ. ಪ್ರಾಧಿಕಾರದಿಂದ ಹಂಚಿಕೆಯಾಗಿರುವ ನಾಗರೀಕ ಸೌಲಭ್ಯ ನಿವೇಶನಗಳ ವಿವರಗಳನ್ನ ಪರಿಶೀಲಿಸಿ ವರದಿ ನೀಡಬೇಕು. ಒಟ್ಟು ನಾಗರೀಕ ಸೌಕರ್ಯ ನಿವೇಶನಗಳ ಸಂಖ್ಯೆ, ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿರುವ ವಿವರ, ನ್ಯಾಯಾಲಯದಲ್ಲಿ ನಾಗರೀಕ ಸೌಕರ್ಯ ನಿವೇಶನ ಸಂಬಂಧಿಸಿದಂತೆ ಪ್ರಕರಣಗಳ ವಿವರ, ನಿಯಮ ಉಲ್ಲಂಘಿಸಿರುವ ನಾಗರೀಕ ಸೌಕರ್ಯ ನಿವೇಶನಗಳ ವಿವರದ ಬಗ್ಗೆ ವರದಿ ನೀಡುವಂತೆ ಕೆ.ಮರೀಗೌಡ ಸೂಚಿಸಿದ್ದಾರೆ.

The post ನಿಯಮ ಉಲ್ಲಂಘನೆಯಾಗಿರುವ ಸಿಎ ನಿವೇಶನ ಮಾಹಿತಿ ಸಂಗ್ರಹಣೆಗೆ ಮುಡಾ ಅಧ್ಯಕ್ಷ ಕೆ.ಮರೀಗೌಡ ಸೂಚನೆ appeared first on Good News 24x7.

]]>