Mumbai Archives - Good News 24x7 https://www.goodnews24x7.com/tag/mumbai/ Kannada Tue, 28 Apr 2026 13:33:58 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Mumbai Archives - Good News 24x7 https://www.goodnews24x7.com/tag/mumbai/ 32 32 ಧರ್ಮ ಕೇಳಿ ಇಬ್ಬರಿಗೆ ಚಾಕು ಇರಿದ ಜುಬೈರ್‌ ಅನ್ಸಾರಿ: ಮುಂಬೈ ಬೆಚ್ಚಿಬೀಳಿಸಿದ ಘಟನೆ. https://www.goodnews24x7.com/zubair-ansari-stabbed-two-people-over-religion-mumbai-shocked-by-incident/ Tue, 28 Apr 2026 13:33:58 +0000 https://www.goodnews24x7.com/?p=9475 ಘಟನೆಯ ವಿವರ: ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಧರ್ಮದ ವಿಚಾರವಾಗಿ ಭೀಕರ ದಾಳಿಯೊಂದು ನಡೆದಿದೆ. ಮೀರಾ ರಸ್ತೆ ಪೂರ್ವದಲ್ಲಿರುವ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕರ್ತವ್ಯದಲ್ಲಿದ್ದ ರಾಜ್‌ಕುಮಾರ್ ಮಿಶ್ರಾ ಮತ್ತು ಸುಬ್ರೋಟೊ ಸೇನ್ ಎಂಬ ಇಬ್ಬರು ಭದ್ರತಾ ಸಿಬ್ಬಂದಿಯ ಮೇಲೆ ಜುಬೈರ್ ಅನ್ಸಾರಿ…

The post ಧರ್ಮ ಕೇಳಿ ಇಬ್ಬರಿಗೆ ಚಾಕು ಇರಿದ ಜುಬೈರ್‌ ಅನ್ಸಾರಿ: ಮುಂಬೈ ಬೆಚ್ಚಿಬೀಳಿಸಿದ ಘಟನೆ. appeared first on Good News 24x7.

]]>

ಘಟನೆಯ ವಿವರ:
ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಧರ್ಮದ ವಿಚಾರವಾಗಿ ಭೀಕರ ದಾಳಿಯೊಂದು ನಡೆದಿದೆ. ಮೀರಾ ರಸ್ತೆ ಪೂರ್ವದಲ್ಲಿರುವ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕರ್ತವ್ಯದಲ್ಲಿದ್ದ ರಾಜ್‌ಕುಮಾರ್ ಮಿಶ್ರಾ ಮತ್ತು ಸುಬ್ರೋಟೊ ಸೇನ್ ಎಂಬ ಇಬ್ಬರು ಭದ್ರತಾ ಸಿಬ್ಬಂದಿಯ ಮೇಲೆ ಜುಬೈರ್ ಅನ್ಸಾರಿ (31) ಎಂಬಾತ ಚಾಕುವಿನಿಂದ ಇರಿದಿದ್ದಾನೆ. ಆರೋಪಿಯು ಮೊದಲು ಅವರ ಧರ್ಮದ ಬಗ್ಗೆ ವಿಚಾರಿಸಿ, ನಂತರ ಇಸ್ಲಾಮಿಕ್ ಪ್ರಾರ್ಥನೆ (ಕಲ್ಮಾ) ಪಠಿಸುವಂತೆ ಒತ್ತಾಯಿಸಿದ್ದಾನೆ. ಅವರು ನಿರಾಕರಿಸಿದ ತಕ್ಷಣ ಚಾಕುವಿನಿಂದ ಮನಬಂದಂತೆ ಇರಿದು ಪರಾರಿಯಾಗಿದ್ದಾನೆ.

ಆರೋಪಿಯ ಹಿನ್ನೆಲೆ:
ಬಂಧಿತ ಆರೋಪಿ ಜುಬೈರ್ ಅನ್ಸಾರಿ ಸುಶಿಕ್ಷಿತನಾಗಿದ್ದು, 2019ರವರೆಗೆ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಿ ಭಾರತಕ್ಕೆ ಮರಳಿದ್ದನು. ಕಳೆದ ಕೆಲವು ತಿಂಗಳ ಹಿಂದಿನವರೆಗೂ ಈತ ಕೋಚಿಂಗ್ ಸೆಂಟರ್ ಒಂದರಲ್ಲಿ ರಸಾಯನಶಾಸ್ತ್ರ ಮತ್ತು ಗಣಿತ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನು. ಸದ್ಯ ಈತ ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಪೊಲೀಸರು ಆತನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಟಿಎಸ್ ತನಿಖೆಗೆ ಆದೇಶ:
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ರಾಜ್‌ಕುಮಾರ್ ಮಿಶ್ರಾ ಮತ್ತು ಸುಬ್ರೋಟೊ ಸೇನ್ ಅವರನ್ನು ವೋಕಾರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕೃತ್ಯದ ಹಿಂದೆ ಯಾವುದಾದರೂ ಉಗ್ರಗಾಮಿ ಸಂಘಟನೆಗಳ ಪ್ರಚೋದನೆ ಅಥವಾ ಸೈದ್ಧಾಂತಿಕ ಸಂಬಂಧಗಳಿವೆಯೇ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳಕ್ಕೆ (ATS) ವರ್ಗಾಯಿಸಲಾಗಿದೆ.

The post ಧರ್ಮ ಕೇಳಿ ಇಬ್ಬರಿಗೆ ಚಾಕು ಇರಿದ ಜುಬೈರ್‌ ಅನ್ಸಾರಿ: ಮುಂಬೈ ಬೆಚ್ಚಿಬೀಳಿಸಿದ ಘಟನೆ. appeared first on Good News 24x7.

]]>
MI vs RCB: ವಾಂಖೆಡೆಯಲ್ಲಿ ದೈತ್ಯರ ನಡುವೆ ಬಿಗ್ ಫೈಟ್; ಮುಂಬೈ ಸವಾಲಿಗೆ ಸಜ್ಜಾದ ಬೆಂಗಳೂರು! https://www.goodnews24x7.com/mi-vs-rcb-big-fight-between-giants-at-wankhede-bangalore-ready-for-mumbai-challenge/ Sat, 11 Apr 2026 08:54:52 +0000 https://www.goodnews24x7.com/?p=9186 ಮುಂಬೈ: ಐಪಿಎಲ್ 2026ರ ಭಾನುವಾರದ ಬಿಗ್ ಸಂಡೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗುತ್ತಿವೆ. ಶುಕ್ರವಾರವಷ್ಟೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿದ್ದ ಆರ್‌ಸಿಬಿ ತಂಡ, ಕೇವಲ ಒಂದೇ ದಿನದ ಅಂತರದಲ್ಲಿ ಮುಂಬೈನ…

The post MI vs RCB: ವಾಂಖೆಡೆಯಲ್ಲಿ ದೈತ್ಯರ ನಡುವೆ ಬಿಗ್ ಫೈಟ್; ಮುಂಬೈ ಸವಾಲಿಗೆ ಸಜ್ಜಾದ ಬೆಂಗಳೂರು! appeared first on Good News 24x7.

]]>

ಮುಂಬೈ: ಐಪಿಎಲ್ 2026ರ ಭಾನುವಾರದ ಬಿಗ್ ಸಂಡೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗುತ್ತಿವೆ. ಶುಕ್ರವಾರವಷ್ಟೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿದ್ದ ಆರ್‌ಸಿಬಿ ತಂಡ, ಕೇವಲ ಒಂದೇ ದಿನದ ಅಂತರದಲ್ಲಿ ಮುಂಬೈನ ಐಕಾನಿಕ್ ವಾಂಖೆಡೆ ಕ್ರೀಡಾಂಗಣದಲ್ಲಿ ಹಾರ್ದಿಕ್ ಪಾಂಡ್ಯ ಪಡೆಯನ್ನು ಎದುರಿಸಲು ಸಜ್ಜಾಗಿದೆ.

ವಾಂಖೆಡೆ ಪಿಚ್ ಮತ್ತು ಹವಾಮಾನ ವರದಿ:
ಬ್ಯಾಟ್ಸ್‌ಮನ್‌ಗಳ ಸ್ವರ್ಗವೆಂದೇ ಕರೆಯಲ್ಪಡುವ ವಾಂಖೆಡೆಯ ಕೆಂಪು ಮಣ್ಣಿನ ಪಿಚ್ ವೇಗ ಮತ್ತು ಬೌನ್ಸ್‌ಗೆ ಹೆಸರಾಗಿದೆ. ಇಲ್ಲಿನ ವೇಗದ ಔಟ್‌ಫೀಲ್ಡ್ ಬೃಹತ್ ಮೊತ್ತದ ರನ್ ಗಳಿಸಲು ಪೂರಕವಾಗಿದೆ. ವಿಶೇಷವಾಗಿ ಎರಡನೇ ಇನ್ನಿಂಗ್ಸ್‌ನ 12ನೇ ಓವರ್ ಬಳಿಕ ಇಬ್ಬನಿ (Dew Factor) ಬೀಳುವ ನಿರೀಕ್ಷೆಯಿರುವುದರಿಂದ ಚೇಸಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ. ಪಂದ್ಯದ ವೇಳೆ ಮಳೆ ಸಾಧ್ಯತೆ ಕೇವಲ ಶೇ.5 ರಷ್ಟು ಮಾತ್ರವಿದ್ದು, ಕ್ರಿಕೆಟ್ ಪ್ರಿಯರಿಗೆ ಯಾವುದೇ ಅಡ್ಡಿಯಿಲ್ಲದೆ ಪಂದ್ಯ ವೀಕ್ಷಿಸಲು ಅವಕಾಶವಿದೆ.

ಉಭಯ ತಂಡಗಳ ಮುಖಾಮುಖಿ ಹಾಗೂ ದಾಖಲೆಗಳು:
ಇತಿಹಾಸವನ್ನು ಗಮನಿಸಿದರೆ, ಈವರೆಗೆ ನಡೆದ 34 ಹಣಾಹಣಿಗಳಲ್ಲಿ ಮುಂಬೈ 19 ಪಂದ್ಯ ಗೆದ್ದಿದ್ದರೆ, ಆರ್‌ಸಿಬಿ 15 ರಲ್ಲಿ ಜಯ ಸಾಧಿಸಿದೆ. ಮುಂಬೈ ವಿರುದ್ಧದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 855 ರನ್ ಗಳಿಸುವ ಮೂಲಕ ಉತ್ತಮ ದಾಖಲೆ ಹೊಂದಿದ್ದಾರೆ. ಮತ್ತೊಂದೆಡೆ, ಮುಂಬೈ ಪರ ಜಸ್ಪ್ರೀತ್ ಬುಮ್ರಾ ಆರ್‌ಸಿಬಿ ವಿರುದ್ಧ 24 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. 2015 ರಲ್ಲಿ ಆರ್‌ಸಿಬಿ ಇದೇ ಮೈದಾನದಲ್ಲಿ 235 ರನ್ ಸಿಡಿಸಿ ಗರಿಷ್ಠ ಮೊತ್ತ ಪೇರಿಸಿದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ತನ್ನ ತವರಿನ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ಅದ್ಭುತ ದಾಖಲೆ ಹೊಂದಿದ್ದು, ಆರ್‌ಸಿಬಿ ವಿರುದ್ಧದ 12 ಪಂದ್ಯಗಳಲ್ಲಿ 8 ರಲ್ಲಿ ಜಯ ಸಾಧಿಸಿದೆ. ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧದ ಸೋಲಿನಿಂದ ಚೇತರಿಸಿಕೊಂಡು ಜಯಭೇರಿ ಬಾರಿಸುವ ಒತ್ತಡದಲ್ಲಿ ರಜತ್ ಪಾಟಿದಾರ್ ನೇತೃತ್ವದ ಬೆಂಗಳೂರು ತಂಡವಿದೆ.

The post MI vs RCB: ವಾಂಖೆಡೆಯಲ್ಲಿ ದೈತ್ಯರ ನಡುವೆ ಬಿಗ್ ಫೈಟ್; ಮುಂಬೈ ಸವಾಲಿಗೆ ಸಜ್ಜಾದ ಬೆಂಗಳೂರು! appeared first on Good News 24x7.

]]>
ಬೆಂಗಳೂರು-ಮುಂಬೈ ಪ್ರಯಾಣಿಕರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಹಳಿ ಮೇಲೆ ಓಡಲಿದೆ ‘ವಂದೇ ಭಾರತ್ ಸ್ಲೀಪರ್’ ರೈಲು! https://www.goodnews24x7.com/good-news-for-bengaluru-mumbai-passengers-vande-bharat-sleeper-train-to-run-on-tracks-soon/ Sat, 11 Apr 2026 08:33:04 +0000 https://www.goodnews24x7.com/?p=9183 ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವಿನ ರೈಲು ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಈ ಎರಡು ಪ್ರಮುಖ ನಗರಗಳ ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಅಧಿಕೃತ ಅನುಮೋದನೆ ದೊರೆತಿದ್ದು,…

The post ಬೆಂಗಳೂರು-ಮುಂಬೈ ಪ್ರಯಾಣಿಕರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಹಳಿ ಮೇಲೆ ಓಡಲಿದೆ ‘ವಂದೇ ಭಾರತ್ ಸ್ಲೀಪರ್’ ರೈಲು! appeared first on Good News 24x7.

]]>

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವಿನ ರೈಲು ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಈ ಎರಡು ಪ್ರಮುಖ ನಗರಗಳ ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಅಧಿಕೃತ ಅನುಮೋದನೆ ದೊರೆತಿದ್ದು, ಇನ್ನು ಮುಂದೆ ಕೇವಲ ಹಗಲು ಮಾತ್ರವಲ್ಲದೆ ರಾತ್ರಿ ಪ್ರಯಾಣವೂ ಅತ್ಯಂತ ವೇಗವಾಗಿ ಮತ್ತು ಆರಾಮದಾಯಕವಾಗಿರಲಿದೆ. ಈ ಹೊಸ ರೈಲು ಕೆಎಸ್ಆರ್ ಬೆಂಗಳೂರು (KSR Bengaluru) ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಡುವೆ ಸಂಪರ್ಕ ಕಲ್ಪಿಸಲಿದೆ.

ಸಂಸದ ಪಿಸಿ ಮೋಹನ್ ಪ್ರಯತ್ನಕ್ಕೆ ಫಲ:
ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಅವರು ಈ ಮಾರ್ಗದಲ್ಲಿ ಸ್ಲೀಪರ್ ರೈಲು ಆರಂಭಿಸುವಂತೆ ನಿರಂತರವಾಗಿ ನಡೆಸಿದ ಪ್ರಯತ್ನಕ್ಕೆ ಈಗ ದೊಡ್ಡ ಯಶಸ್ಸು ಸಿಕ್ಕಿದೆ. ಕಳೆದ ಡಿಸೆಂಬರ್‌ನಲ್ಲಿ ನೈಋತ್ಯ ರೈಲ್ವೆ ಸ್ಥಾಯಿ ಸಮಿತಿಯ ಭೇಟಿಯ ವೇಳೆ ಅವರು ಈ ಬೇಡಿಕೆಯನ್ನು ಪ್ರಬಲವಾಗಿ ಮಂಡಿಸಿದ್ದರು. ಅಲ್ಲದೆ, ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಅನ್ನು ರೈಲಿನ ಆರಂಭಿಕ ಅಥವಾ ಅಂತ್ಯದ ನಿಲ್ದಾಣವನ್ನಾಗಿ ಮಾಡುವಂತೆ ಅವರು ಸಲಹೆ ನೀಡಿದ್ದಾರೆ.

ಪ್ರಯಾಣದ ಸಮಯ ಗಣನೀಯ ಇಳಿಕೆ:
ಪ್ರಸ್ತುತ ಬೆಂಗಳೂರಿನಿಂದ ಮುಂಬೈಗೆ ಸುಮಾರು 1,136 ಕಿಲೋಮೀಟರ್ ದೂರವಿದ್ದು, ಉದ್ಯಾನ್ ಎಕ್ಸ್‌ಪ್ರೆಸ್‌ನಂತಹ ರೈಲುಗಳು ಈ ದೂರವನ್ನು ಕ್ರಮಿಸಲು ಸುಮಾರು 23 ರಿಂದ 24 ಗಂಟೆಗಳನ್ನು ತೆಗೆದುಕೊಳ್ಳುತ್ತವೆ. ಆದರೆ, ವಂದೇ ಭಾರತ್ ಸ್ಲೀಪರ್ ರೈಲು ಚಾಲನೆಗೆ ಬಂದರೆ ಈ ಸುದೀರ್ಘ ಪ್ರಯಾಣದ ಅವಧಿಯಲ್ಲಿ ಭಾರಿ ಕಡಿತವಾಗಲಿದೆ. ಅತ್ಯಾಧುನಿಕ ಸೌಲಭ್ಯಗಳು, ಹೆಚ್ಚಿನ ವೇಗ ಮತ್ತು ವಿಶ್ವದರ್ಜೆಯ ಸುರಕ್ಷತಾ ವ್ಯವಸ್ಥೆಯನ್ನು ಹೊಂದಿರುವ ಈ ರೈಲು, ಉದ್ಯಮಿಗಳು ಹಾಗೂ ಪ್ರವಾಸಿಗರಿಗೆ ಅತ್ಯುತ್ತಮ ಆಯ್ಕೆಯಾಗಲಿದೆ.

The post ಬೆಂಗಳೂರು-ಮುಂಬೈ ಪ್ರಯಾಣಿಕರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಹಳಿ ಮೇಲೆ ಓಡಲಿದೆ ‘ವಂದೇ ಭಾರತ್ ಸ್ಲೀಪರ್’ ರೈಲು! appeared first on Good News 24x7.

]]>
ಚಿನ್ನದ ಬೆಲೆಯಲ್ಲಿ ಸತತ ಇಳಿಕೆ! https://www.goodnews24x7.com/gold-prices-continue-to-fallgold-prices-continue-to-fall/ Tue, 24 Mar 2026 12:07:27 +0000 https://www.goodnews24x7.com/?p=8964 ಚಿನ್ನದ ಬೆಲೆಯಲ್ಲಿ ಇಳಿಕೆಯಾದರೆ, ಬೆಳ್ಳಿ ಬೆಲೆಯಲ್ಲಿ ಐದು ರೂ ಹೆಚ್ಚಳ ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 12,865 ರೂ ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ 14,035 ರೂ ಇದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್​ಗೆ 235…

The post ಚಿನ್ನದ ಬೆಲೆಯಲ್ಲಿ ಸತತ ಇಳಿಕೆ! appeared first on Good News 24x7.

]]>

ಚಿನ್ನದ ಬೆಲೆಯಲ್ಲಿ ಇಳಿಕೆಯಾದರೆ, ಬೆಳ್ಳಿ ಬೆಲೆಯಲ್ಲಿ ಐದು ರೂ ಹೆಚ್ಚಳ ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 12,865 ರೂ ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ 14,035 ರೂ ಇದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್​ಗೆ 235 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 240 ರೂ ಇದೆ.

ಚಿನ್ನದ ಬೆಲೆಯ ಸತತ ಇಳಿಕೆ ಮುಂದುವರಿಯುತ್ತಿದೆ. ಆಭರಣ ಪ್ರಿಯ ಮಹಿಳೆಯರ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ಚಿನ್ನದ ಬೆಲೆ ಗಗನಕ್ಕೇರಿದ್ದಾಗ ಆತಂಕದಲ್ಲಿ ಚಿನ್ನ ಖರೀದಿ ಬಿಟ್ಟಿರದ ಮಹಿಳೆಯರು ಈಗ ಬಂಗಾರದ ಬೆಲೆ ಸತತವಾಗಿ ಇಳಿಯುತ್ತಿರುವುದರಿಂದ ಚಿನ್ನದಂಗಡಿಗಳಿಗೆ ಲಗ್ಗೆ ಇಡುತ್ತಿದ್ದಾರೆ. ಮಂಗಳವಾರ ಚಿನ್ನದ ಬೆಲೆ ಒಂದೇ ದಿನ 270 ರೂ ಕಡಿಮೆ ಆಗಿದೆ. ಬೆಂಗಳೂರಿನಲ್ಲಿ ಆಭರಣ ಚಿನ್ನದ ಬೆಲೆ 12,865 ರೂ ಮುಟ್ಟಿದೆ. ಇದೇ ವೇಳೆ, ಬೆಳ್ಳಿ ಬೆಲೆಯಲ್ಲಿ ಐದು ರೂ ಹೆಚ್ಚಳವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,28,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,40,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,28,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 24ಕ್ಕೆ)
24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,035 ರೂ
22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,865 ರೂ
18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,526 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,035 ರೂ
22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,865 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

 

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)
ಬೆಂಗಳೂರು: 12,865 ರೂ
ಚೆನ್ನೈ: 13,000 ರೂ
ಮುಂಬೈ: 12,865 ರೂ
ದೆಹಲಿ: 12,880 ರೂ
ಕೋಲ್ಕತಾ: 12,865 ರೂ
ಕೇರಳ: 12,865 ರೂ
ಅಹ್ಮದಾಬಾದ್: 12,870 ರೂ
ಜೈಪುರ್: 12,880 ರೂ
ಲಕ್ನೋ: 12,880 ರೂ
ಭುವನೇಶ್ವರ್: 12,865 ರೂ

The post ಚಿನ್ನದ ಬೆಲೆಯಲ್ಲಿ ಸತತ ಇಳಿಕೆ! appeared first on Good News 24x7.

]]>
ಮುಂಬೈನಲ್ಲಿರುವ ಮಹಾರಾಷ್ಟ್ರ ವಿಧಾನ ಭವನಕ್ಕೆ ಬಾಂಬ್ ಬೆದರಿಕೆ! https://www.goodnews24x7.com/bomb-threat-to-maharashtra-vidhan-bhavan-in-mumbaibomb-threat-to-maharashtra-vidhan-bhavan-in-mumbai/ Thu, 12 Mar 2026 07:02:52 +0000 https://www.goodnews24x7.com/?p=8876   ಮುಂಬೈನಲ್ಲಿರುವ ಮಹಾರಾಷ್ಟ್ರ ವಿಧಾನಭವನಕ್ಕೆ ಬಾಂಬ್ ಬೆದರಿಕೆ ಬಂದಿದೆ. ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿದ್ದು, ತಕ್ಷಣದ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿವೆ. ಇಂದು ಬೆಳಗ್ಗೆ ಬಿಎಸ್‌ಇ, ವಿಧಾನ ಭವನ…

The post ಮುಂಬೈನಲ್ಲಿರುವ ಮಹಾರಾಷ್ಟ್ರ ವಿಧಾನ ಭವನಕ್ಕೆ ಬಾಂಬ್ ಬೆದರಿಕೆ! appeared first on Good News 24x7.

]]>

 

ಮುಂಬೈನಲ್ಲಿರುವ ಮಹಾರಾಷ್ಟ್ರ ವಿಧಾನಭವನಕ್ಕೆ ಬಾಂಬ್ ಬೆದರಿಕೆ ಬಂದಿದೆ. ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿದ್ದು, ತಕ್ಷಣದ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿವೆ. ಇಂದು ಬೆಳಗ್ಗೆ ಬಿಎಸ್‌ಇ, ವಿಧಾನ ಭವನ ಮತ್ತು ಬಾಂಬೆ ಹೈಕೋರ್ಟ್‌ಗೆ ಬೆದರಿಕೆ ಇ-ಮೇಲ್‌ಗಳು ಬಂದಿವೆ. ಎಲ್ಲಾ ಸ್ಥಳಗಳಲ್ಲಿ ಸಾಕಷ್ಟು ಭದ್ರತಾ ಕ್ರಮಗಳನ್ನು ಅಳವಡಿಸಲಾಗಿದೆ. ಮುಂಬೈ ಪೊಲೀಸರ ಪ್ರಕಾರ, ಆಯಾ ಪೊಲೀಸ್ ಠಾಣೆಗಳಲ್ಲಿ ಸಂಬಂಧಿತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ದಕ್ಷಿಣ ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ವಿಧಾನ ಭವನದಲ್ಲಿ ಬಾಂಬ್ ಸ್ಫೋಟ ಸಂಭವಿಸುವ ಬಗ್ಗೆ ಅಧಿಕಾರಿಗಳಿಗೆ ಮುಂಜಾನೆ ಬಂದ ಆತಂಕಕಾರಿ ಇ-ಮೇಲ್ ಬಂದಿತ್ತು. ಬಜೆಟ್ ಅಧಿವೇಶನ ಕೂಡ ನಡೆಯುತ್ತಿದೆ. ಮಹಾರಾಷ್ಟ್ರ ವಿಧಾನ ಭವನದ ಬಳಿ ನಡೆದ ಆತ್ಮಹತ್ಯೆ ಪ್ರಯತ್ನವನ್ನು ಪೊಲೀಸರ ಮಧ್ಯಪ್ರವೇಶದಿಂದ ವಿಫಲಗೊಳಿಸಿದ ಕೇವಲ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಬುಧವಾರ, ಸೋಲಾಪುರ ಜಿಲ್ಲೆಯ ಮಾಧಾ ತಾಲೂಕಿನ ತಕ್ಲಿ ಗ್ರಾಮದ ನಿವಾಸಿ 38 ವರ್ಷದ ದಾದಾಸೊ ಬಬನ್ ಕಲ್ಸೈತ್ ಎಂಬ ವ್ಯಕ್ತಿ ಉಷಾ ಮೆಹ್ತಾ ಚೌಕ್ ಬಳಿ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದರು.

ಸಿಬ್ಬಂದಿ ಇಂಧನಕ್ಕೆ ಬೆಂಕಿ ಹಚ್ಚುವ ಮೊದಲೇ ಆತನನ್ನು ತಡೆದಿದ್ದರು. ನಂತರ ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗಾಗಿ ಮೆರೈನ್ ಡ್ರೈವ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಪೊಲೀಸರು ಕಲ್ಸೈತ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 226 ರ ಅಡಿಯಲ್ಲಿ ಗುರುತಿಸಲಾಗದ ಅಪರಾಧವನ್ನು ದಾಖಲಿಸಿದ್ದಾರೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಬಾಂಬ್ ಬೆದರಿಕೆ ಇ-ಮೇಲ್ ನಂತರ ಅಧಿಕಾರಿಗಳು ವಿಧಾನ ಭವನದಲ್ಲಿ ಭದ್ರತಾ ತಪಾಸಣೆಗಳನ್ನು ಮುಂದುವರೆಸಿದ್ದಾರೆ, ಆದರೂ ಸಂದೇಶದ ಮೂಲದ ಬಗ್ಗೆ ಅಧಿಕಾರಿಗಳು ಇನ್ನೂ ಹೆಚ್ಚಿನ ವಿವರಗಳನ್ನು ತಿಳಿಸಿಲ್ಲ.ಇಲ್ಲಿಯವರೆಗೆ ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ.

The post ಮುಂಬೈನಲ್ಲಿರುವ ಮಹಾರಾಷ್ಟ್ರ ವಿಧಾನ ಭವನಕ್ಕೆ ಬಾಂಬ್ ಬೆದರಿಕೆ! appeared first on Good News 24x7.

]]>
ಎರಡೆರಡು ಇತಿಹಾಸ ನಿರ್ಮಿಸಲಿದೆ ಟೀಂ ಇಂಡಿಯಾ! https://www.goodnews24x7.com/team-india-will-create-two-historiteam-india-will-create-two-historieses/ Thu, 05 Mar 2026 12:16:29 +0000 https://www.goodnews24x7.com/?p=8673   2026ರ ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಹಾಲಿ ಚಾಂಪಿಯನ್ ಭಾರತ, ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿ ಇತಿಹಾಸ ಸೃಷ್ಟಿಸುವ ಗುರಿಯಲ್ಲಿದೆ. ಹಿಂದಿನ ದಾಖಲೆಗಳನ್ನು ಮುರಿದು, ಸತತ ಫೈನಲ್ ತಲುಪುವ…

The post ಎರಡೆರಡು ಇತಿಹಾಸ ನಿರ್ಮಿಸಲಿದೆ ಟೀಂ ಇಂಡಿಯಾ! appeared first on Good News 24x7.

]]>

 

2026ರ ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಹಾಲಿ ಚಾಂಪಿಯನ್ ಭಾರತ, ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿ ಇತಿಹಾಸ ಸೃಷ್ಟಿಸುವ ಗುರಿಯಲ್ಲಿದೆ. ಹಿಂದಿನ ದಾಖಲೆಗಳನ್ನು ಮುರಿದು, ಸತತ ಫೈನಲ್ ತಲುಪುವ ಮೂಲಕ ಪ್ರಶಸ್ತಿ ಉಳಿಸಿಕೊಳ್ಳಲು ಟೀಂ ಇಂಡಿಯಾ ಸಿದ್ಧವಾಗಿದೆ. ಇದು ಮಹತ್ವದ ಐತಿಹಾಸಿಕ ಪಂದ್ಯವಾಗಿದೆ.

2026 ರ ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್ ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಾರ್ಚ್ 5 ರಂದು ನಡೆಯಲಿರುವ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಹಾಲಿ ಚಾಂಪಿಯನ್ ಭಾರತ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಇರಾದೆಯೊಂದಿಗೆ ಮೈದಾನಕ್ಕೆ ಇಳಿಯಲಿದೆ. ಆದರೆ ಅದು ಅಷ್ಟು ಸುಲಭದ ಕೆಲಸವಲ್ಲ. 2026 ರ ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್ ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಾರ್ಚ್ 5 ರಂದು ನಡೆಯಲಿರುವ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಹಾಲಿ ಚಾಂಪಿಯನ್ ಭಾರತ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಇರಾದೆಯೊಂದಿಗೆ ಮೈದಾನಕ್ಕೆ ಇಳಿಯಲಿದೆ. ಆದರೆ ಅದು ಅಷ್ಟು ಸುಲಭದ ಕೆಲಸವಲ್ಲ.

ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತವು ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಆದರೆ ಇಂಗ್ಲೆಂಡ್‌ನಂತಹ ಬಲಿಷ್ಠ ತಂಡದ ವಿರುದ್ಧ ಸವಾಲು ಕಠಿಣವಾಗಿರುತ್ತದೆ. ಸತತ ಮೂರನೇ ಬಾರಿಗೆ ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದು, ಈ ಪಂದ್ಯವನ್ನು ಇನ್ನಷ್ಟು ಆಸಕ್ತಿದಾಯಕವಾಗಿಸುತ್ತದೆ.
ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತವು ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಆದರೆ ಇಂಗ್ಲೆಂಡ್‌ನಂತಹ ಬಲಿಷ್ಠ ತಂಡದ ವಿರುದ್ಧ ಸವಾಲು ಕಠಿಣವಾಗಿರುತ್ತದೆ. ಸತತ ಮೂರನೇ ಬಾರಿಗೆ ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದು, ಈ ಪಂದ್ಯವನ್ನು ಇನ್ನಷ್ಟು ಆಸಕ್ತಿದಾಯಕವಾಗಿಸುತ್ತದೆ.

ಇದರ ಜೊತೆಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಪಂದ್ಯಾವಳಿಯ ಇತಿಹಾಸವನ್ನು ಬದಲಾಯಿಸಬೇಕಾಗುತ್ತದೆ. ವಾಸ್ತವವಾಗಿ, ಟಿ20 ವಿಶ್ವಕಪ್ ಇತಿಹಾಸದಲ್ಲಿ, ಕೇವಲ ಎರಡು ತಂಡಗಳು ಮಾತ್ರ ಸತತ ಎರಡು ಫೈನಲ್‌ಗಳಲ್ಲಿ ಆಡಿವೆ. ಅದರಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ಸೇರಿವೆ. ಹಾಗೆಯೇ ಹಾಲಿ ಚಾಂಪಿಯನ್ ತಂಡ ಮುಂದಿನ ಆವೃತ್ತಿಯಲ್ಲಿ ಫೈನಲ್ ತಲುಪಿಲ್ಲ.
ಇದರ ಜೊತೆಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಪಂದ್ಯಾವಳಿಯ ಇತಿಹಾಸವನ್ನು ಬದಲಾಯಿಸಬೇಕಾಗುತ್ತದೆ. ವಾಸ್ತವವಾಗಿ, ಟಿ20 ವಿಶ್ವಕಪ್ ಇತಿಹಾಸದಲ್ಲಿ, ಕೇವಲ ಎರಡು ತಂಡಗಳು ಮಾತ್ರ ಸತತ ಎರಡು ಫೈನಲ್‌ಗಳಲ್ಲಿ ಆಡಿವೆ. ಅದರಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ಸೇರಿವೆ. ಹಾಗೆಯೇ ಹಾಲಿ ಚಾಂಪಿಯನ್ ತಂಡ ಮುಂದಿನ ಆವೃತ್ತಿಯಲ್ಲಿ ಫೈನಲ್ ತಲುಪಿಲ್ಲ.

ಹೀಗಾಗಿ ಈ ದಾಖಲೆಯನ್ನು ಮುರಿಯಲು ಭಾರತಕ್ಕೆ ಒಂದು ಸುವರ್ಣಾವಕಾಶ ಸಿಕ್ಕಿದೆ. 2024 ರಲ್ಲಿ ಪ್ರಶಸ್ತಿ ಗೆದ್ದ ಟೀಂ ಇಂಡಿಯಾ ಈಗ ಇತಿಹಾಸ ನಿರ್ಮಿಸುವ ಹಾದಿಯಲ್ಲಿದೆ. ಈ ಪಂದ್ಯವನ್ನು ಭಾರತ ಗೆದ್ದರೆ, ಸತತ ಎರಡು ಬಾರಿ ಫೈನಲ್ ತಲುಪಿದ ಮೊದಲ ತಂಡವಾಗಲಿದೆ ಮತ್ತು ಹಾಲಿ ಚಾಂಪಿಯನ್ ಆಗಿ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದೆ.
ಹೀಗಾಗಿ ಈ ದಾಖಲೆಯನ್ನು ಮುರಿಯಲು ಭಾರತಕ್ಕೆ ಒಂದು ಸುವರ್ಣಾವಕಾಶ ಸಿಕ್ಕಿದೆ. 2024 ರಲ್ಲಿ ಪ್ರಶಸ್ತಿ ಗೆದ್ದ ಟೀಂ ಇಂಡಿಯಾ ಈಗ ಇತಿಹಾಸ ನಿರ್ಮಿಸುವ ಹಾದಿಯಲ್ಲಿದೆ. ಈ ಪಂದ್ಯವನ್ನು ಭಾರತ ಗೆದ್ದರೆ, ಸತತ ಎರಡು ಬಾರಿ ಫೈನಲ್ ತಲುಪಿದ ಮೊದಲ ತಂಡವಾಗಲಿದೆ ಮತ್ತು ಹಾಲಿ ಚಾಂಪಿಯನ್ ಆಗಿ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದೆ.

ಐಸಿಸಿ ವಿಶ್ವಕಪ್‌ನ ನಾಕೌಟ್ ಪಂದ್ಯಗಳಲ್ಲಿ ಉಭಯ ತಂಡಗಳ ನಡುವಿನ ಐದನೇ ಮುಖಾಮುಖಿ ಇದಾಗಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ, ಎರಡೂ ತಂಡಗಳು ತಲಾ ಎರಡು ಬಾರಿ ಗೆದ್ದಿವೆ. ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ ಮೂರನೇ ಟಿ20 ಮುಖಾಮುಖಿ ಇದಾಗಿದೆ. ಇಲ್ಲಿಯೂ ಸಹ, ಎರಡೂ ತಂಡಗಳು 1-1 ಗೆಲುವಿನೊಂದಿಗೆ ಸಮಬಲ ಸಾಧಿಸಿವೆ. ಎರಡೂ ತಂಡಗಳು ತಲಾ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿದ್ದು ಮೂರನೇ ಬಾರಿಗೆ ಚಾಂಪಿಯನ್ ಆಗಲು ಎದುರು ನೋಡುತ್ತಿವೆ.
ಐಸಿಸಿ ವಿಶ್ವಕಪ್‌ನ ನಾಕೌಟ್ ಪಂದ್ಯಗಳಲ್ಲಿ ಉಭಯ ತಂಡಗಳ ನಡುವಿನ ಐದನೇ ಮುಖಾಮುಖಿ ಇದಾಗಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ, ಎರಡೂ ತಂಡಗಳು ತಲಾ ಎರಡು ಬಾರಿ ಗೆದ್ದಿವೆ. ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ ಮೂರನೇ ಟಿ20 ಮುಖಾಮುಖಿ ಇದಾಗಿದೆ. ಇಲ್ಲಿಯೂ ಸಹ, ಎರಡೂ ತಂಡಗಳು 1-1 ಗೆಲುವಿನೊಂದಿಗೆ ಸಮಬಲ ಸಾಧಿಸಿವೆ. ಎರಡೂ ತಂಡಗಳು ತಲಾ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿದ್ದು ಮೂರನೇ ಬಾರಿಗೆ ಚಾಂಪಿಯನ್ ಆಗಲು ಎದುರು ನೋಡುತ್ತಿವೆ.

The post ಎರಡೆರಡು ಇತಿಹಾಸ ನಿರ್ಮಿಸಲಿದೆ ಟೀಂ ಇಂಡಿಯಾ! appeared first on Good News 24x7.

]]>
ಕೋಲಾರದ ಖಾಸಗಿ ಮಿನಿ ಹೆಲಿಕಾಪ್ಟರ್ ಜೋಡಣಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ. https://www.goodnews24x7.com/prime-minister-modi-inaugurates-private-mini-helicopter-assembly-plant-in-kolar/ Tue, 17 Feb 2026 12:59:30 +0000 https://www.goodnews24x7.com/?p=8379 ಫೆಬ್ರವರಿ 17: ಕೋಲಾರ ತಾಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲಿರುವ ಟಾಟಾ ಏರ್‌ಬಸ್ ಮಿನಿ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಮುಂಬೈನಿಂದ ವರ್ಚುವಲ್ ಮೂಲಕ​​ ಉದ್ಘಾಟಿಸಿದ್ದಾರೆ. ಭಾರತದ ಮೊದಲ…

The post ಕೋಲಾರದ ಖಾಸಗಿ ಮಿನಿ ಹೆಲಿಕಾಪ್ಟರ್ ಜೋಡಣಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ. appeared first on Good News 24x7.

]]>

ಫೆಬ್ರವರಿ 17: ಕೋಲಾರ ತಾಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲಿರುವ ಟಾಟಾ ಏರ್‌ಬಸ್ ಮಿನಿ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಮುಂಬೈನಿಂದ ವರ್ಚುವಲ್ ಮೂಲಕ​​ ಉದ್ಘಾಟಿಸಿದ್ದಾರೆ. ಭಾರತದ ಮೊದಲ ಖಾಸಗಿ ಹೆಲಿಕಾಪ್ಟರ್ ತಯಾರಿಕಾ ಘಟಕ ಇದಾಗಿದ್ದು, 2027ರಲ್ಲಿ ಮೊದಲ ಹೆಲಿಕಾಪ್ಟರ್ ಇಲ್ಲಿ ಸಿದ್ಧಗೊಳ್ಳುವ ನಿರೀಕ್ಷೆಯಿದೆ. ಕೋಲಾರ ತಾಲೂಕಿನ ವೇಮಗಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್​​ ಸಿಂಗ್​, ಫ್ರಾನ್ಸ್ ರಕ್ಷಣಾ ಸಚಿವೆ ಕ್ಯಾಥರಿನ್ ವೌಟ್ರಿನ್, ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಕೋಲಾರ ಕ್ಷೇತ್ರದ ಸಂಸದ ಮಲ್ಲೇಶ್ ಬಾಬು ಸೇರಿ ಮತ್ತಿತರರು ಉಪಸ್ಥಿತರಿದ್ದರು.


ಸುಮಾರು 16 ಎಕರೆ ಪ್ರದೇಶದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ವತಿಯಿಂದ ಈ ಘಟಕ ನಿರ್ಮಾಣಗೊಂಡಿದ್ದು, ಇದು ದೇಶದಲ್ಲೇ ಮೊದಲ ಮಿನಿ ನಾಗರಿಕ ಹೆಲಿಕಾಪ್ಟರ್ ಜೋಡಣಾ ಘಟಕ ಎನ್ನಲಾಗಿದೆ. ವರ್ಷಕ್ಕೆ H125 ಮಾದರಿಯ ಹತ್ತು ಹೆಲಿಕಾಪ್ಟರ್‌ಗಳನ್ನು ಮೊದಲ ಹಂತದಲ್ಲಿ ತಯಾರಿಸುವ ಸಾಮರ್ಥ್ಯ ಈ ಘಟಕಕ್ಕಿದೆ. ರಕ್ಷಣಾ ಇಲಾಖೆಗೆ ಸೇರಿದ ಹೆಲಿಕಾಪ್ಟರ್​​ಗಳು ಇಲ್ಲಿ ತಯಾರಾಗಲಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಪ್ಲ್ಯಾನ್​​ ಸಿದ್ಧವಾಗಿರುವ ಮಾಹಿತಿ ಇದೆ.

 

The post ಕೋಲಾರದ ಖಾಸಗಿ ಮಿನಿ ಹೆಲಿಕಾಪ್ಟರ್ ಜೋಡಣಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ. appeared first on Good News 24x7.

]]>
World Cup 2025: ಇನ್ನೂ ಆರಂಭವಾಗದ ವಿಶ್ವಕಪ್ ಫೈನಲ್ ; ಮುಂಬೈನಲ್ಲಿ ಭಾರಿ ಮಳೆ https://www.goodnews24x7.com/world-cup-2025-world-cup-final-yet-to-start-heavy-rain-in-mumbai/ Sun, 02 Nov 2025 11:31:08 +0000 https://www.goodnews24x7.com/?p=8002 ICC Women’s World Cup 2025 Final: ಮುಂಬೈನಲ್ಲಿ ನಡೆಯಬೇಕಿದ್ದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಭಾರತ-ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಮಳೆಯಿಂದ ಪಂದ್ಯ ಇದುವರೆಗೂ ಆರಂಭವಾಗಿಲ್ಲ. ಒಂದು ವೇಳೆ ಇಂದು…

The post World Cup 2025: ಇನ್ನೂ ಆರಂಭವಾಗದ ವಿಶ್ವಕಪ್ ಫೈನಲ್ ; ಮುಂಬೈನಲ್ಲಿ ಭಾರಿ ಮಳೆ appeared first on Good News 24x7.

]]>

ICC Women’s World Cup 2025 Final: ಮುಂಬೈನಲ್ಲಿ ನಡೆಯಬೇಕಿದ್ದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಭಾರತ-ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಮಳೆಯಿಂದ ಪಂದ್ಯ ಇದುವರೆಗೂ ಆರಂಭವಾಗಿಲ್ಲ. ಒಂದು ವೇಳೆ ಇಂದು ಪಂದ್ಯ ನಡೆಯದಿದ್ದರೆ, ನವೆಂಬರ್ 2 ರಂದು ಮೀಸಲು ದಿನದಂದು ಪಂದ್ಯ ಪೂರ್ಣಗೊಳಿಸಲಾಗುತ್ತದೆ. ಮಳೆ ನಿಂತರೆ 20 ಓವರ್‌ಗಳ ಪಂದ್ಯ ನಡೆಸಲು ಪ್ರಯತ್ನಿಸಲಾಗುತ್ತದೆ.

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಫೈನಲ್ (ICC Women’s World Cup 2025 Final) ಪಂದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾದಂತಹ (India vs South Africa) ಬಲಿಷ್ಠ ತಂಡಗಳ ನಡುವೆ ನಡೆಯಲಿದೆ. ಆದರೆ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 3:00 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ ಮಳೆಯಿಂದಾಗಿ ಇದುವರೆಗೂ ಆರಂಭವಾಗಿಲ್ಲ. ವಾಸ್ತವವಾಗಿ ಪಂದ್ಯದ ದಿನದಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೊದಲೇ ಮುನ್ಸೂಚನೆ ನೀಡಿತ್ತು. ಅದರಂತೆ ಮುಂಬೈನಲ್ಲಿ ಮಳೆ ಎಡಬಿಡದೆ ಸುರಿಯುತ್ತಿದೆ. ಇದರಿಂದಾಗಿ ಟಾಸ್ ಕೂಡ ನಡೆದಿಲ್ಲ.

ಶೇ. 63 ರಷ್ಟು ಮಳೆ
ಹವಾಮಾನ ಇಲಾಖೆಯ ವರದಿ ಪ್ರಕಾರ ನವಿ ಮುಂಬೈನಲ್ಲಿ ಪಂದ್ಯದ ದಿನದಂದು ಮಳೆಯಾಗುವ ಸಾಧ್ಯತೆ ಶೇ. 63 ರಷ್ಟು ಇರಲಿದೆ ಎಂದು ವರದಿಯಾಗಿತ್ತು. ಅದರಂತೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಒಂದೊಮ್ಮೆ ಮಳೆ ಕೊಂಚ ವಿರಾಮ ತೆಗೆದುಕೊಂಡ ಕಾರಣ 3 ಗಂಟೆಗೆ ಟಾಸ್ ನಡೆಸಲು ತೀರ್ಮಾನಿಸಲಾಗಿತ್ತು. ಹಾಗೆಯೇ 3:30 ಕ್ಕೆ ಪಂದ್ಯ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಟಾಸ್ ನಡೆಯುವುದಕ್ಕೂ ಮುನ್ನವೇ ಮತ್ತೆ ಮಳೆ ಸುರಿಯಲಾರಂಭಿಸಿದೆ.

ಮೀಸಲು ದಿನ ನಿಗದಿಪಡಿಸಲಾಗಿದೆ
ಮಳೆ ಧಾರಕಾರವಾಗಿ ಸುರಿಯುತ್ತಿರುವ ಕಾರಣ ಈ ಪಂದ್ಯ ನಡೆಯುತ್ತದೋ ಇಲ್ಲವೋ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಅಭಿಮಾನಿಗಳು ಚಿಂತಿಸಬೇಕಿಲ್ಲ. ಏಕೆಂದರೆ ಮಳೆಯಿಂದಾಗಿ ಇಂದು ಪಂದ್ಯ ನಡೆಯದಿದ್ದರೆ, ಮೀಸಲು ದಿನದಂದು ಈ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಮಳೆಯ ಮುನ್ಸೂಚನೆಯನ್ನು ಗಮನದಲಿಟ್ಟುಕೊಂಡು ಆಯೋಜಕರು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ನಿಗದಿಪಡಿಸಿದ್ದರು. ಅದರಂತೆ ಫೈನಲ್ ಪಂದ್ಯಕ್ಕೆ ನವೆಂಬರ್ 2 ಅನ್ನು ಮೀಸಲು ದಿನವಾಗಿ ಕಾಯ್ದಿರಿಸಲಾಗಿದೆ.

 

The post World Cup 2025: ಇನ್ನೂ ಆರಂಭವಾಗದ ವಿಶ್ವಕಪ್ ಫೈನಲ್ ; ಮುಂಬೈನಲ್ಲಿ ಭಾರಿ ಮಳೆ appeared first on Good News 24x7.

]]>
ಉದ್ಯಮಿ ಅನಿಲ್ ಅಂಬಾನಿ ಮನೆ ಮೇಲೆ ಸಿಬಿಐ ರೇಡ್ https://www.goodnews24x7.com/cbi-raids-businessman-anil-ambanis-house/ Sun, 24 Aug 2025 09:00:54 +0000 https://www.goodnews24x7.com/?p=6661 ಉದ್ಯಮಿ ಅನಿಲ್ ಅಂಬಾನಿ ಮನೆ ಮೇಲೆ ಸಿಬಿಐ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಬ್ಯಾಂಕ್ ವಂಚನೆ ಕೇಸ್ ಗೆ ಸಂಬಂಧಿಸಿದಂತೆ ರೇಡ್ ಮಾಡಲಾಗಿದೆ. ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಉದ್ಯಮಿ ಅನಿಲ್ ಅಂಬಾನಿ ಮನೆ…

The post ಉದ್ಯಮಿ ಅನಿಲ್ ಅಂಬಾನಿ ಮನೆ ಮೇಲೆ ಸಿಬಿಐ ರೇಡ್ appeared first on Good News 24x7.

]]>

ಉದ್ಯಮಿ ಅನಿಲ್ ಅಂಬಾನಿ ಮನೆ ಮೇಲೆ ಸಿಬಿಐ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಬ್ಯಾಂಕ್ ವಂಚನೆ ಕೇಸ್ ಗೆ ಸಂಬಂಧಿಸಿದಂತೆ ರೇಡ್ ಮಾಡಲಾಗಿದೆ.
ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಉದ್ಯಮಿ ಅನಿಲ್ ಅಂಬಾನಿ ಮನೆ ಮೇಲೆ ರೇಡ್ ಮಾಡಿದ್ದಾರೆ. ಮನೆಯಲ್ಲಿ ಇಡೀ ದಿನ ಸಿಬಿಐ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಅನಿಲ್ ಅಂಬಾನಿ ಮಾಲೀಕತ್ವದ ಕಂಪನಿಗಳ ಮೇಲೂ ದಾಳಿ ಮಾಡಿದ್ದಾರೆ. ಬ್ಯಾಂಕ್ ಗಳಿಗೆ ಬರೋಬ್ಬರಿ 2 ಸಾವಿರ ಕೋಟಿ ರೂಪಾಯಿಯನ್ನು ವಂಚಿಸಿದ ಆರೋಪ ಅನಿಲ್ ಅಂಬಾನಿ ಹಾಗೂ ಅವರ ಕಂಪನಿಗಳ ಮೇಲಿದೆ. ಮುಂಬೈನ ಕೂಫೆ ಪರೇಡ್ ಸೀ ವಿಂಡ್ ಕಾಂಪ್ಲೆಕ್ಸ್ ನಲ್ಲಿರುವ ಅನಿಲ್ ಅಂಬಾನಿ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಸಿಬಿಐ ದಾಳಿ ವೇಳೆ, ಅನಿಲ್ ಅಂಬಾನಿ ಮನೆಯಲ್ಲೇ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೂ ಪಾರ್ಲಿಮೆಂಟ್ ನಲ್ಲಿ ಸ್ಟೇಟ್ ಆಫ್ ಇಂಡಿಯಾ , ಅನಿಲ್ ಅಂಬಾನಿ ಹಾಗೂ ಅವರ ಮಾಲೀಕತ್ವದ ರಿಲಯನ್ಸ್ ಕಮ್ಯೂನಿಕೇಷನ್ಸ್ ಲಿಮಿಟೆಡ್ ಕಂಪನಿಯನ್ನು ಫ್ರಾಡ್ ಎಂದು ವರ್ಗೀಕರಣ ಮಾಡಿರುವುದಾಗಿ ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಉತ್ತರ ನೀಡಿದ್ದಾರೆ.

20225ರ ಜೂನ್ 13 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಸ್ಟರ್ ಡೈರೆಕ್ಷನ್ ಆನ್ ಫ್ರಾಡ್ ರಿಸ್ಕ್ ಮ್ಯಾನೇಜ್ ಮೆಂಟ್ ಮತ್ತು ಎಸ್‌ಬಿಐನ ಅಂತರಿಕ ನೀತಿಯಡಿ ಈ ವರ್ಗೀಕರಣ ಮಾಡಲಾಗಿದೆ ಎಂದು ಪಂಕಜ್ ಚೌಧರಿ ಹೇಳಿದ್ದಾರೆ.ಇನ್ನೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ರಿಲಯನ್ಸ್ ಕಮ್ಯೂನಿಕೇಷನ್ಸ್ ಗೆ ಒಟ್ಟಾರೆ 2,227 ಕೋಟಿ ರೂಪಾಯಿ ಹಣವನ್ನು ಸಾಲವಾಗಿ ನೀಡಿದೆ. ಇನ್ನೂ ನಾನ್ ಫಂಡ್ ಬ್ಯಾಂಕ್ ಗ್ಯಾರಂಟಿಯಾಗಿ 786 ಕೋಟಿ ರೂಪಾಯಿ ನೀಡಿದೆ. ಇನ್ನೂ ಇ.ಡಿ. ಕೂಡ ಅನಿಲ್ ಅಂಬಾನಿ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಆಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪ ಕೂಡ ಅನಿಲ್ ಅಂಬಾನಿ ಮೇಲಿದೆ. ಜೊತೆಗೆ ಬ್ಯಾಂಕ್ ನಿಂದ ಸಾಲ ಪಡೆಯಲು ಬ್ಯಾಂಕ್ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪವೂ ಅನಿಲ್ ಅಂಬಾನಿ ಹಾಗೂ ಅವರ ಮಾಲೀಕತ್ವದ ಕಂಪನಿಗಳ ಮೇಲಿದೆ.

The post ಉದ್ಯಮಿ ಅನಿಲ್ ಅಂಬಾನಿ ಮನೆ ಮೇಲೆ ಸಿಬಿಐ ರೇಡ್ appeared first on Good News 24x7.

]]>
ಅಮೆರಿಕನ್ ಡೈಮಂಡ್​ನಿಂದ ತಯಾರಾದ ವಿಶೇಷ ಗಣಪ.. ಇದರ ಬೆಲೆ ಎಷ್ಟು ಗೊತ್ತಾ? https://www.goodnews24x7.com/special-ganesha-idol-made-from-american-diamond-do-you-know-how-much-it-costs/ Sun, 24 Aug 2025 06:26:21 +0000 https://www.goodnews24x7.com/?p=6629 ‘‘ಗಣಪತಿ ಬಪ್ಪ ಮೋರೆಯಾ ಮಂಗಳ ಮೂರ್ತಿ ಮೋರೆಯಾ’’ ಇನ್ನೇನೂ ಗೌರಿ ಗಣೇಶ ಹಬ್ಬ ಬಂದೇಬಿಡ್ತು. ಎಲ್ಲೆಲ್ಲೂ ಶುರು ವಿನಾಯಕನ ಸಂಭ್ರಮ. ಹಬ್ಬಕ್ಕೆ ಇನ್ನು ಒಂದು ವಾರ ಇರುವಾಗಲೇ ಸಿಲಿಕಾನ್​ ಸಿಟಿಗೆ ಮುಂಬೈನಿಂದ ಗಣಪ ಬಂದಿದ್ದಾನೆ.ಮುಂಬೈ ಹಾಗೂ ಸೊಲ್ಲಾಪುರ ಕುಶಲಕರ್ಮಿಗಳಿಂದ 30 ದಿನಗಳಿಂದ…

The post ಅಮೆರಿಕನ್ ಡೈಮಂಡ್​ನಿಂದ ತಯಾರಾದ ವಿಶೇಷ ಗಣಪ.. ಇದರ ಬೆಲೆ ಎಷ್ಟು ಗೊತ್ತಾ? appeared first on Good News 24x7.

]]>

‘‘ಗಣಪತಿ ಬಪ್ಪ ಮೋರೆಯಾ ಮಂಗಳ ಮೂರ್ತಿ ಮೋರೆಯಾ’’ ಇನ್ನೇನೂ ಗೌರಿ ಗಣೇಶ ಹಬ್ಬ ಬಂದೇಬಿಡ್ತು. ಎಲ್ಲೆಲ್ಲೂ ಶುರು ವಿನಾಯಕನ ಸಂಭ್ರಮ. ಹಬ್ಬಕ್ಕೆ ಇನ್ನು ಒಂದು ವಾರ ಇರುವಾಗಲೇ ಸಿಲಿಕಾನ್​ ಸಿಟಿಗೆ ಮುಂಬೈನಿಂದ ಗಣಪ ಬಂದಿದ್ದಾನೆ.ಮುಂಬೈ ಹಾಗೂ ಸೊಲ್ಲಾಪುರ ಕುಶಲಕರ್ಮಿಗಳಿಂದ 30 ದಿನಗಳಿಂದ ಸಿದ್ಧಗೊಂಡ ಚಾಮರ ಕರ್ಣನ ರೂಪ ಎಷ್ಟು ಅದ್ಭುತವಾಗಿದೆ ಅಲ್ವಾ. ಬರೋಬ್ಬರಿ 12 ಲಕ್ಷ ಖರ್ಚು ಮಾಡಿ ಅಮೆರಿಕನ್ ಡೈಮಂಡ್​ನಿಂದ ಈ ಗಣಪತಿಯನ್ನ ತಯಾರಿಸಲಾಗಿದೆ. ಆರು ಅಡಿ ಎತ್ತರದ ಬಹಳ ವಿಶೇಷವಾದ ಗಣಪ ಮೂರ್ತಿ ಇದಾಗಿದ್ದು, ಮಿಲ್ಕ್ ಕಾಲೋನಿಯ ಸ್ವಸ್ತಿಕ್ ಯುವಕರ ಸಂಘದಿಂದ 40ನೇ ವರ್ಷದ ಗಣಪತಿ ಉತ್ಸವಕ್ಕೆ ಇದನ್ನ ಸಿದ್ಧಪಡಿಸಲಾಗಿದೆ.

ಲಂಬೋದರನ ಮೂರ್ತಿಯಷ್ಟೇ ವಿಶೇಷವಾಗಿಲ್ಲ. ಈತ ಕೂರುವ ಮಂಟಪ ಕೂಡ ಅಷ್ಟೇ ವೈಶಿಷ್ಟ್ಯತೆಯಿಂದ ಕೂಡಿದೆ. ಬರೀ ಮಂಟಪಕ್ಕೇನೇ 30 ಲಕ್ಷ ವೆಚ್ಚ ಮಾಡಲಾಗಿದೆ. ಕಳೆದ ವರ್ಷ ‘ಕೈಲಾಸನಾಥ ದೇವಸ್ಥಾನ’ ಹೋಲುವ ಮಂಟಪ ನಿರ್ಮಾಣ ಮಾಡಿದ್ರು. ಈ ಬಾರಿ ವಾರಣಾಸಿಯ ‘ಕಾಶಿವಿಶ್ವನಾಥ ದೇವಾಲಯ’ ಹೋಲುವ ಮಂಟಪ ಸಿದ್ಧಪಡಿಸಲಾಗ್ತಾಯಿದೆ.
ಆಗಸ್ಟ್ 27ನೇ ತಾರೀಖಿನಿಂದ ಸೆಪ್ಟೆಂಬರ್ 5ನೇ ತಾರೀಖಿನವರೆಗೂ ಗಣೇಶನ ಹಬ್ಬ ಆಚರಣೆಗೆ ಸ್ವಸ್ತಿಕ್ ಯುವಕರ ಸಂಘ ಸಜ್ಜಾಗಿದೆ. ಅದೇನೇ ಹೇಳಿ ನಗರದಲ್ಲಿ ವೆರೈಟಿ ವೆರೈಟಿ ಗಣಾಧ್ಯಕ್ಷನ ದರ್ಶನ ಆಗೋದಂತು ಪಕ್ಕ. ಸುಮುಖನ ಸಂಭ್ರಮಕ್ಕೆ ಕೌಂಟ್​ಡೌನ್​ ಶುರು.g

The post ಅಮೆರಿಕನ್ ಡೈಮಂಡ್​ನಿಂದ ತಯಾರಾದ ವಿಶೇಷ ಗಣಪ.. ಇದರ ಬೆಲೆ ಎಷ್ಟು ಗೊತ್ತಾ? appeared first on Good News 24x7.

]]>