Muslims Archives - Good News 24x7 https://www.goodnews24x7.com/tag/muslims/ Kannada Sat, 28 Mar 2026 12:34:54 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Muslims Archives - Good News 24x7 https://www.goodnews24x7.com/tag/muslims/ 32 32 ಜಮೀರ್–ಮಲ್ಲಿಕಾರ್ಜುನ ಸ್ನೇಹ ಗಟ್ಟಿ: ಪ್ರಚಾರಕ್ಕೆ ಬರುತ್ತಾರೆ ಎಂಬಿ ಪಾಟೀಲ್ ವಿಶ್ವಾಸ. https://www.goodnews24x7.com/jameer-mallikarjuna-friendship-mb-patil-confident-of-campaigning/ Sat, 28 Mar 2026 12:33:56 +0000 https://www.goodnews24x7.com/?p=9014 ಬೆಂಗಳೂರು: ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಸ್ಟಾರ್ ಕ್ಯಾಂಪೇನರ್ ಪಟ್ಟಿಯ ಕೊನೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹೆಸರು ಇರುವ ವಿಚಾರವಾಗಿ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿ, ‘ಜಮೀರ್ ಬಂದೇ ಬರ್ತಾರೆ. ಅವರು ಕೇರಳದಲ್ಲಿದ್ದಾರೆ, ನಾನು ಅಲ್ಲೇ ಹೋಗಬೇಕಿತ್ತು ಎಂದರು.…

The post ಜಮೀರ್–ಮಲ್ಲಿಕಾರ್ಜುನ ಸ್ನೇಹ ಗಟ್ಟಿ: ಪ್ರಚಾರಕ್ಕೆ ಬರುತ್ತಾರೆ ಎಂಬಿ ಪಾಟೀಲ್ ವಿಶ್ವಾಸ. appeared first on Good News 24x7.

]]>

ಬೆಂಗಳೂರು: ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಸ್ಟಾರ್ ಕ್ಯಾಂಪೇನರ್ ಪಟ್ಟಿಯ ಕೊನೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹೆಸರು ಇರುವ ವಿಚಾರವಾಗಿ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿ, ‘ಜಮೀರ್ ಬಂದೇ ಬರ್ತಾರೆ. ಅವರು ಕೇರಳದಲ್ಲಿದ್ದಾರೆ, ನಾನು ಅಲ್ಲೇ ಹೋಗಬೇಕಿತ್ತು ಎಂದರು. ದಾವಣಗೆರೆ ಟಿಕೆಟ್ ವಿಚಾರವಾಗಿ ಜಮೀರ್ ಅವರಿಗೆ ಸಿಟ್ಟು ಇರಬಹುದು. ಸಮುದಾಯಕ್ಕೆ ಟಿಕೆಟ್ ಸಿಗಲಿಲ್ಲ ಅಂತ ಬೇಸರ ಇರಬಹುದು. ಎಲ್ಲಾ ಸಮುದಾಯಗಳಲ್ಲೂ ಇರುತ್ತದೆ. ನಾವು ಲಿಂಗಾಯತ ಸಮುದಾಯಕ್ಕೆ ಸಿಗಬೇಕು ಅಂತೇವೆ, ದಲಿತ ನಾಯಕರು ಅವರ ಸಮುದಾಯಕ್ಕೆ ಕೇಳ್ತಾರೆ. ಇದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿಕೊಂಡರು.

ಸಚಿವ ಜಮೀರ್ ಅವರು ಅವರ ಸಮುದಾಯನ್ನು ಪ್ರತಿನಿಧಿಸುತ್ತಾರೆ. ಹಾಗಾಗಿ ಅವರು ಮುಸ್ಲಿಮರಿಗೆ ಟಿಕೆಟ್ ಕೆಳೋದ್ರಲ್ಲಿ ತಪ್ಪೇನಿಲ್ಲ. ಜಮೀರ್ ಹಾಗೂ ಮಲ್ಲಿಕಾರ್ಜುನ್ ಆತ್ಮೀಯ‌ ಸ್ನೇಹಿತರು. ಅವರು ಯಾವಾಗ ಒಟ್ಟಿಗೆ ಕಾಣ್ತಾರೋ‌ ಗೊತ್ತಾಗಲ್ಲ. ನಮಗೆ ಅವರ ಬಗ್ಗೆ ಗೊತ್ತು.ಇಬ್ಬರು ಒಳ್ಳೆ ಸ್ನೇಹಿತರು ಎಂದರು. ಹರಿದ ಬಟ್ಟೆ ತೇಪೆ ಹಾಕಬಹುದಷ್ಟೇ
ದಾವಣಗೆರೆ ದಕ್ಷಿಣದ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅಭ್ಯರ್ಥಿತನ ವಾಪಸ್ ಪಡೆದಿರಬಹುದು; ಹರಿದ ಬಟ್ಟೆಯನ್ನು ತೇಪೆ ಹಾಕಬಹುದೇ ಹೊರತು ಅದು ಹೊಸ ಬಟ್ಟೆ ಆಗುವುದಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಶ್ಲೇಷಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿ ಪ್ರಶ್ನೆಗೆ ಉತ್ತರಿಸಿದರು. ತುಂಡಾದ ಹಗ್ಗಕ್ಕೆ ಗಂಟು ಹಾಕಬಹುದೇ ಹೊರತು ಅದು ಹೊಸ ಹಗ್ಗ ಆಗುವುದಿಲ್ಲ ಎಂದರು. ಮುಸಲ್ಮಾನ ಬಂಧುಗಳೆಲ್ಲ ನಮಗೆ ಮತ ಹಾಕುತ್ತಾರೆಂದು ನಾನು ಹೇಳಲಾರೆ. ಯಾಕೆಂದರೆ ಕಾಂಗ್ರೆಸ್ಸಿನವರು ಅವರ ತಲೆಗೆ ಬಿಟ್ಟ ಹುಳಗಳು ಸತ್ತಿಲ್ಲ; ಅವು ಬದುಕಿವೆ ಎಂದು ನುಡಿದರು. ಅವರನ್ನು ದಾರಿ ತಪ್ಪಿಸಿ ನಿಮ್ಮ ಮತಬ್ಯಾಂಕ್ ಮಾಡಿದ್ದೀರಿ. ಅವರೆಲ್ಲ ವಿರೋಧ ಮಾಡಿದರೂ ದೇಶ ಆಳುತ್ತಿದ್ದೇವೆ. ಮುಸಲ್ಮಾನರು ಭಾರತದಲ್ಲಿ ಸುಭದ್ರವಾಗಿ ಬದುಕುತ್ತಿದ್ದಾರೆ ಎಂದು ತಿಳಿಸಿದರು.

ಕೇವಲ ಮುಸಲ್ಮಾನರಿರುವ ಪಾಕಿಸ್ತಾನ, ಬಾಂಗ್ಲಾದೇಶ, ಅಪಘಾನಿಸ್ತಾನದಲ್ಲಿ ಎಷ್ಟು ಸಮಸ್ಯೆಗಳಿವೆ ನೋಡಿ ಎಂದು ಕೇಳಿದರು. ಬಾಬಾ ಸಾಹೇಬ ಅಂಬೇಡ್ಕರರ ಸಂವಿಧಾನ ಎಲ್ಲ ರೀತಿಯ ರಕ್ಷಣೆಯನ್ನು ಅವರಿಗೂ ಕೊಟ್ಟಿದೆ. ಆದ್ದರಿಂದ ಅವರು ಸುಭದ್ರತೆಯಿಂದ ಬದುಕುತ್ತಿದ್ದಾರೆ ಎಂದು ತಿಳಿಸಿದರು. ಮನುವಾದ ಬದುಕಿರುವುದು ಕಾಂಗ್ರೆಸ್ಸಿನ ತಲೆಯಲ್ಲಿ ಮಾತ್ರ ಎಂದು ಟೀಕಿಸಿದರು. ಸರ್ವರಿಗೂ ಸಮಪಾಲು, ಸಮಬಾಳು ಕೊಡುವುದು ಬಿಜೆಪಿಯ ಕರ್ತವ್ಯ. ಅದನ್ನು ಮಾಡುತ್ತಿದ್ದೇವೆ ಎಂದರು. ಕಾಂಗ್ರೆಸ್ಸಿಗರೇ, ಬಿಜೆಪಿ ಗುಮ್ಮ ತೋರಿಸಿ ಎಷ್ಟು ದಿನ ನೀವು ಮುಸಲ್ಮಾನರನ್ನು ಇಟ್ಟುಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದರು. ಅವರಲ್ಲೂ ಯುವಕರು, ತಿಳಿದವರು ಇದ್ದು ಯೋಚನೆ ಮಾಡುತ್ತಾರೆ. ಕಾಂಗ್ರೆಸ್ ನಮಗೇನು ಮಾಡಿದೆ? ಪ್ರಧಾನಮಂತ್ರಿ ಮೋದಿಯವರು ನಮಗೇನಾದರೂ ಅನ್ಯಾಯ, ವಂಚನೆ ಮಾಡಿದ್ದಾರಾ ಎಂದು ಯೋಚಿಸುತ್ತಾರೆ. ಆ ಜನಾಂಗಗಳು ಯೋಚನೆ ಮಾಡಿ ಸ್ವಾಭಿಮಾನವನ್ನು ಉಳಿಸಿಕೊಳ್ಳಲಿ ಎಂದು ಕಿವಿಮಾತು ಹೇಳಿದರು.

The post ಜಮೀರ್–ಮಲ್ಲಿಕಾರ್ಜುನ ಸ್ನೇಹ ಗಟ್ಟಿ: ಪ್ರಚಾರಕ್ಕೆ ಬರುತ್ತಾರೆ ಎಂಬಿ ಪಾಟೀಲ್ ವಿಶ್ವಾಸ. appeared first on Good News 24x7.

]]>
ದರ್ಗಾಗಳಿಗೆ ಜಾತಿ, ಧರ್ಮದ ಮಿತಿ ಇಲ್ಲ: ಸಿ.ಎಂ.ಸಿದ್ದರಾಮಯ್ಯ. https://www.goodnews24x7.com/dargahs-have-no-caste-or-religion-limit-cm-siddaramaiah/ Sat, 17 May 2025 07:24:39 +0000 https://www.goodnews24x7.com/?p=3919 ಮಂಗಳೂರು : ನಾವು ಮೊದಲು ಮನುಷ್ಯರು, ನಂತರ ಭಾರತೀಯರು ಆಮೇಲೆ ಹಿಂದೂಗಳು, ಮುಸ್ಲೀಮರು ಮತ್ತು ಧರ್ಮೀಯರು ಎಂದು ಸಿ.ಎಂ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಉಳ್ಳಾಲದ ಶರೀಫುಲ್ ಮದನಿ ದರ್ಗಾದ 22ನೇ ಪಂಚವಾರ್ಷಿಕ ಊರುಸ್ ಮಹೋತ್ಸವದಲ್ಲಿ ಮಾತನಾಡಿದರು. ನಮ್ಮ ಸರ್ಕಾರ ಸಂವಿಧಾನದ ಆಶಯದಂತೆ…

The post ದರ್ಗಾಗಳಿಗೆ ಜಾತಿ, ಧರ್ಮದ ಮಿತಿ ಇಲ್ಲ: ಸಿ.ಎಂ.ಸಿದ್ದರಾಮಯ್ಯ. appeared first on Good News 24x7.

]]>

ಮಂಗಳೂರು : ನಾವು ಮೊದಲು ಮನುಷ್ಯರು, ನಂತರ ಭಾರತೀಯರು ಆಮೇಲೆ ಹಿಂದೂಗಳು, ಮುಸ್ಲೀಮರು ಮತ್ತು ಧರ್ಮೀಯರು ಎಂದು ಸಿ.ಎಂ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.

ಉಳ್ಳಾಲದ ಶರೀಫುಲ್ ಮದನಿ ದರ್ಗಾದ 22ನೇ ಪಂಚವಾರ್ಷಿಕ ಊರುಸ್ ಮಹೋತ್ಸವದಲ್ಲಿ ಮಾತನಾಡಿದರು. ನಮ್ಮ ಸರ್ಕಾರ ಸಂವಿಧಾನದ ಆಶಯದಂತೆ ಸರ್ವರನ್ನೂ ಸಮಾನವಾಗಿ ಕಾಣುತ್ತದೆ. ದೇಶದಲ್ಲಿ ಅನೇಕ ಸೂಫಿ, ಸಾಧು, ಸಂತರು, ಸಾಮಾಜಿಕ ಹರಿಕಾರರು ಬಂದು ಹೋಗಿದ್ದಾರೆ. ಇವರೆಲ್ಲರೂ ಮನುಷ್ಯ ಧರ್ಮವನ್ನು ಪ್ರತಿಪಾದಿಸಿದವರು. ಆದ್ದರಿಂದ ನಾವು ಮಾನವೀಯ ನೆಲೆಯಲ್ಲಿ ಸಮಾಜವನ್ನು ಬೆಸೆಯಬೇಕು ಎಂದರು.

ಉಳ್ಳಾಲ ದರ್ಗಾಕ್ಕೆ ಜಾತಿ, ಧರ್ಮದ ಮಿತಿ ಇಲ್ಲ. ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರ ದರ್ಗಾ. ನಮ್ಮ ಸರ್ಕಾರದ ಕಾರ್ಯಕ್ರಮಗಳೂ ಸರ್ವ ಧರ್ಮ, ಸರ್ವ ಜಾತಿಯವರಿಗೆ ಸಲ್ಲುವಂಥವು ಎಂದರು.

The post ದರ್ಗಾಗಳಿಗೆ ಜಾತಿ, ಧರ್ಮದ ಮಿತಿ ಇಲ್ಲ: ಸಿ.ಎಂ.ಸಿದ್ದರಾಮಯ್ಯ. appeared first on Good News 24x7.

]]>
ಸಿಎಂ ಸಿದ್ದರಾಮಯ್ಯ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ: ಬಿ.ವೈ.ವಿಜಯೇಂದ್ರ. https://www.goodnews24x7.com/cm-siddaramaiah-is-following-a-policy-of-divide-and-rule-b-y-vijayendra/ Tue, 15 Apr 2025 12:30:29 +0000 https://www.goodnews24x7.com/?p=3288 ಬೆಳಗಾವಿ : ಸ್ವಾತಂತ್ರ ನಂತರ ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಈ ಹಿಂದೆ ಇದೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವೀರಶೈವ ಮತ್ತು…

The post ಸಿಎಂ ಸಿದ್ದರಾಮಯ್ಯ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ: ಬಿ.ವೈ.ವಿಜಯೇಂದ್ರ. appeared first on Good News 24x7.

]]>

ಬೆಳಗಾವಿ : ಸ್ವಾತಂತ್ರ ನಂತರ ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಈ ಹಿಂದೆ ಇದೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಬೆಂಕಿ ಹಚ್ಚುವ ಕೆಲಸ ಮಾಡಿದ್ದರು. ಅದರಲ್ಲಿ ವಿಫಲರಾದರು. ಈಗ ಜಾತಿ ಗಣತಿ ಅಂತಾ ಹಿಂದೂ ಮುಸ್ಲೀಮರನ್ನ ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಅಡ್ರೆಸ್ ಕಳೆದುಕೊಂಡಿದೆ ಎಂದು ಲೇವಡಿ ಮಾಡಿದರು.

ಕರ್ನಾಟಕ ಅಂದ್ರೆ ಅತಿ ಹೆಚ್ಚು ದುಬಾರಿ ರಾಜ್ಯವಾಗಿದೆ. ರಾಜ್ಯದಲ್ಲಿ 50ಕ್ಕೂ ಹೆಚ್ಚು ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ನಾಳೆ ಬೆಳಗಾವಿಯಲ್ಲಿ ಜನಾಕ್ರೋಶ ಯಾತ್ರೆ ಮಾಡುತ್ತೇವೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.
ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಕಾರಣ ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಸಂಸತ್ತಿನಲ್ಲಿ ವಿರೋಧ ಪಕ್ಷದಲ್ಲಿ ಕೂರಲು ಪರದಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಅಂಬೇಡ್ಕರ್ ಹಾಗೂ ಮುಸ್ಲಿಮರು ನೆನಪಾಗುತ್ತಿದ್ದಾರೆ ಎಂದು ಬಿವೈ ವಿಜಯೇಂದ್ರ ಹರಿಹಾಯ್ದರು.

The post ಸಿಎಂ ಸಿದ್ದರಾಮಯ್ಯ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ: ಬಿ.ವೈ.ವಿಜಯೇಂದ್ರ. appeared first on Good News 24x7.

]]>