Mysuru Dasara Archives - Good News 24x7 https://www.goodnews24x7.com/tag/mysuru-dasara/ Kannada Sat, 12 Oct 2024 12:51:39 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Mysuru Dasara Archives - Good News 24x7 https://www.goodnews24x7.com/tag/mysuru-dasara/ 32 32 ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ; ಚಿನ್ನದಂಬಾರಿಯಲ್ಲಿ ವಿರಾಜಮಾನಳಾದ ನಾಡ ಅಧಿದೇವತೆ ಚಾಮುಂಡೇಶ್ವರಿ https://www.goodnews24x7.com/cm-siddaramaiah-lays-flowers-for-jamboosawari-nada-adhidevata-chamundeshwari-is-enthroned-in-the-golden-temple/ Sat, 12 Oct 2024 12:48:26 +0000 https://www.goodnews24x7.com/?p=811 ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ; ಚಿನ್ನದಂಬಾರಿಯಲ್ಲಿ ವಿರಾಜಮಾನಳಾದ ನಾಡ ಅಧಿದೇವತೆ ಚಾಮುಂಡೇಶ್ವರಿ ವಿಶ್ವ ವಿಖ್ಯಾತ ಮೈಸೂರು ದಸರಾ ಬಹಳ ಅದ್ಧೂರಿಯಾಗಿ ನೆರವೇರಿದೆ. 415ನೇ ಜಂಬೂ ಸವಾರಿಯನ್ನು ಸಾಂಸ್ಕೃತಿಕ ನಗರಿಯಲ್ಲಿ ಲಕ್ಷಾಂತರ ಜನರು ಕಣ್ತುಂಬಿಕೊಂಡಿದ್ದಾರೆ. ನಾಡದೇವತೆ ಚಾಮುಂಡೇಶ್ವರಿ ವಿರಾಜಮನಳಾಗಿದ್ದು ನೋಡೋದೇ ಎಷ್ಟು…

The post ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ; ಚಿನ್ನದಂಬಾರಿಯಲ್ಲಿ ವಿರಾಜಮಾನಳಾದ ನಾಡ ಅಧಿದೇವತೆ ಚಾಮುಂಡೇಶ್ವರಿ appeared first on Good News 24x7.

]]>

ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ; ಚಿನ್ನದಂಬಾರಿಯಲ್ಲಿ ವಿರಾಜಮಾನಳಾದ ನಾಡ ಅಧಿದೇವತೆ ಚಾಮುಂಡೇಶ್ವರಿ

ವಿಶ್ವ ವಿಖ್ಯಾತ ಮೈಸೂರು ದಸರಾ ಬಹಳ ಅದ್ಧೂರಿಯಾಗಿ ನೆರವೇರಿದೆ. 415ನೇ ಜಂಬೂ ಸವಾರಿಯನ್ನು ಸಾಂಸ್ಕೃತಿಕ ನಗರಿಯಲ್ಲಿ ಲಕ್ಷಾಂತರ ಜನರು ಕಣ್ತುಂಬಿಕೊಂಡಿದ್ದಾರೆ. ನಾಡದೇವತೆ ಚಾಮುಂಡೇಶ್ವರಿ ವಿರಾಜಮನಳಾಗಿದ್ದು ನೋಡೋದೇ ಎಷ್ಟು ಚೆಂದ. ಸತತ 5ನೇ ಬಾರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಅಭಿಮನ್ಯು ಹೊತ್ತು ಸಾಗಿದ್ದಾನೆ.

ನಂದಿ ಪೂಜೆಯ ಬಳಿಕ ಸಿಎಂ ಸಿದ್ದರಾಮಯ್ಯ ಅವರು ನಾಡದೇವತೆಗೆ ಪುಷ್ಪ ನಮನ ಸಲ್ಲಿಸಿದರು. ಸಿಎಂಗೆ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಚಿವರು, ಅಧಿಕಾರಿಗಳು ಸಾಥ್ ನೀಡಿದ್ದರು. ರಾಜಗಾಂಭೀರ್ಯದಲ್ಲಿ ಅಭಿಮನ್ಯು ಅರಮನೆಯಿಂದ ಜಂಬೂ ಸವಾರಿ ಹೊತ್ತು ಸಾಗಿದ್ದು ಲಕ್ಷಾಂತರ ಜನರು ಕಣ್ತುಂಬಿಕೊಂಡಿದ್ದಾರೆ. ಅಂಬಾರಿ ಮೆರವಣಿಗೆಗೂ ಮುನ್ನ ರಾಜ್ಯದ 31 ಜಿಲ್ಲೆ, 20 ಇಲಾಖೆಗಳ 51 ಸ್ತಬ್ಧಚಿತ್ರಗಳು ಮುಂದೆ ಸಾಗಿದವು.

The post ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ; ಚಿನ್ನದಂಬಾರಿಯಲ್ಲಿ ವಿರಾಜಮಾನಳಾದ ನಾಡ ಅಧಿದೇವತೆ ಚಾಮುಂಡೇಶ್ವರಿ appeared first on Good News 24x7.

]]>
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ https://www.goodnews24x7.com/countdown-to-the-world-famous-mysore-dussehra-jambu-ride/ Sat, 12 Oct 2024 06:00:11 +0000 https://www.goodnews24x7.com/?p=806 ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯ ಎದುರು ನಂದಿಧ್ವಜಕ್ಕೆ ಪೂಜೆ ನೆರವೇರಿದ ಬಳಿಕ ವಿಜಯದಶಮಿ ಮೆರವಣಿಗೆ ಆರಂಭಗೊಳ್ಳಲಿದೆ. ಮಧ್ಯಾಹ್ನ 1:41 ರಿಂದ 2:10ರವರೆಗೆ ಮಕರ…

The post ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ appeared first on Good News 24x7.

]]>

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯ ಎದುರು ನಂದಿಧ್ವಜಕ್ಕೆ ಪೂಜೆ ನೆರವೇರಿದ ಬಳಿಕ ವಿಜಯದಶಮಿ ಮೆರವಣಿಗೆ ಆರಂಭಗೊಳ್ಳಲಿದೆ.

ಮಧ್ಯಾಹ್ನ 1:41 ರಿಂದ 2:10ರವರೆಗೆ ಮಕರ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಪೂಜೆ ನೆರವೇರಿಸಲಿದ್ದಾರೆ. ಈ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ದೊರೆಯಲಿದೆ. ನಂದಿ ಧ್ವಜದ ಹಿಂದೆ ನಿಶಾನೆ ಆನೆ, ಇನ್ನುಳಿದ ಕಲಾತಂಡಗಳು, ಸ್ತಬ್ಧಚಿತ್ರಗಳ ಸಾಗಲಿವೆ.

The post ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ appeared first on Good News 24x7.

]]>
2ನೇ ಮಗುವಿಗೆ ಜನ್ಮ ನೀಡಿದ ತ್ರಿಷಿಕಾ ಕುಮಾರಿ https://www.goodnews24x7.com/trishika-kumari-gave-birth-to-her-2nd-child/ Fri, 11 Oct 2024 07:39:12 +0000 https://www.goodnews24x7.com/?p=796 2ನೇ ಮಗುವಿಗೆ ಜನ್ಮ ನೀಡಿದ ತ್ರಿಷಿಕಾ ಕುಮಾರಿ ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದಲ್ಲಿರುವ ರಾಜವಂಶಸ್ಥ ಕುಟುಂಬಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್‌ ಅವರು 2ನೇ ಮಗುವಿಗೆ ಜನ್ಮ ನೀಡಿದ್ದಾರೆ. ವಿಜಯದಶಮಿಗೆ…

The post 2ನೇ ಮಗುವಿಗೆ ಜನ್ಮ ನೀಡಿದ ತ್ರಿಷಿಕಾ ಕುಮಾರಿ appeared first on Good News 24x7.

]]>

2ನೇ ಮಗುವಿಗೆ ಜನ್ಮ ನೀಡಿದ ತ್ರಿಷಿಕಾ ಕುಮಾರಿ

ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದಲ್ಲಿರುವ ರಾಜವಂಶಸ್ಥ ಕುಟುಂಬಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್‌ ಅವರು 2ನೇ ಮಗುವಿಗೆ ಜನ್ಮ ನೀಡಿದ್ದಾರೆ.

ವಿಜಯದಶಮಿಗೆ ಒಂದು ದಿನ ಬಾಕಿಯಿದ್ದು, ದಸರಾ ಜಂಬೂ ಸವಾರಿಗೆ ಸಕಲ ತಯಾರಿಗಳು ಭರದಿಂದ ಸಾಗುತ್ತಲೇ ಇವೆ. ಈಗಲೂ ಅರಮನೆಯಲ್ಲಿ ಆಯುಧಪೂಜೆಯ ಕೈಂಕರ್ಯಗಳು ನೆರವೇರುತ್ತಲೇ ಇವೆ. ಈ ಹೊತ್ತಿನಲ್ಲೇ ಸಂಸದ ಹಾಗೂ ರಾಜವಂಶಸ್ಥ ಯದುವೀರ್‌ಗೆ 2ನೇ ಮಗುವಿನ ಜನನವಾಗಿದೆ.

The post 2ನೇ ಮಗುವಿಗೆ ಜನ್ಮ ನೀಡಿದ ತ್ರಿಷಿಕಾ ಕುಮಾರಿ appeared first on Good News 24x7.

]]>
ದಸರಾ ಅಂಗವಾಗಿ ಆನೆಗಳಿಗೆ ಕುಶಾಲು ತೋಪು ಪೂರ್ವಭಾವಿ ಅಭ್ಯಾಸ https://www.goodnews24x7.com/kushalu-topu-preliminaries-for-elephants-on-the-occasion-of-dussehra/ Thu, 26 Sep 2024 12:30:15 +0000 https://www.goodnews24x7.com/?p=652 ದಸರಾ ಅಂಗವಾಗಿ ಆನೆಗಳಿಗೆ ಕುಶಾಲು ತೋಪು ಪೂರ್ವಭಾವಿ ಅಭ್ಯಾಸ ಮೈಸೂರು ದಸರಾ ಅಂಗವಾಗಿ ನಗರದಲ್ಲಿರುವ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆನೆಗಳು ಮತ್ತು ಕುದುರೆಗಳಿಗೆ ಕುಶಾಲತೋಪು ಪೂರ್ವಭಾವಿ ಅಭ್ಯಾಸವನ್ನು ಇಂದು ವಾಹನ ನಿಲುಗಡೆ ಸ್ಥಳದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತ್ರತ್ವದ ಗಜಪಡೆಗೆ ಇಂದು 21…

The post ದಸರಾ ಅಂಗವಾಗಿ ಆನೆಗಳಿಗೆ ಕುಶಾಲು ತೋಪು ಪೂರ್ವಭಾವಿ ಅಭ್ಯಾಸ appeared first on Good News 24x7.

]]>

ದಸರಾ ಅಂಗವಾಗಿ ಆನೆಗಳಿಗೆ ಕುಶಾಲು ತೋಪು ಪೂರ್ವಭಾವಿ ಅಭ್ಯಾಸ

ಮೈಸೂರು ದಸರಾ ಅಂಗವಾಗಿ ನಗರದಲ್ಲಿರುವ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆನೆಗಳು ಮತ್ತು ಕುದುರೆಗಳಿಗೆ ಕುಶಾಲತೋಪು ಪೂರ್ವಭಾವಿ ಅಭ್ಯಾಸವನ್ನು ಇಂದು ವಾಹನ ನಿಲುಗಡೆ ಸ್ಥಳದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತ್ರತ್ವದ ಗಜಪಡೆಗೆ ಇಂದು 21 ಕುಶಾಲ ತೋಪು ಹಾರಿಸುವ ಮೂಲಕ ಈ ಅಭ್ಯಾಸ ನಡೆಸಲಾಯಿತು.

ಮೈಸೂರು ದಸರಾದ ಆಕರ್ಷಣೆಯ ವಾದ ಜಂಬುಸವಾರಿ ದಿನದಂದು ಅರಮನೆ ಆವರಣದಲ್ಲಿ ನಾಡ ಅದಿದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮುನ್ನ 21 ಕುಶಾಲತೋಪನ್ನು ಹಾರಿಸಲಾಗುತ್ತದೆ. ಆನೆಗಳು ಕುದುರೆಗಳು ಈ ವೇಳೆ ಹೆದರಬಾರದು ಎಂಬ ಹಿನ್ನೆಲೆಯಲ್ಲಿ ಇಂದು ಕುಶಾಲತೋಪು ಅಭ್ಯಾಸವನ್ನು ನಡೆಸಲಾಯಿತು.ಇಂದು ಮೊದಲ ಸುತ್ತಿನ ಕುಶಾಲತೋಪು ಅಭ್ಯಾಸವನ್ನು ನಡೆಸಲಾಗಿದೆ. ಇನ್ನು ಎರಡು ಬಾರಿ ಅಂದರೆ ಸೆ. 29 ಹಾಗೂ ಅ. 1ರಂದು ಕುಶಾಲ ತೋಪು ಅಭ್ಯಾಸವನ್ನು ನಡೆಸಲಾಗುವುದು.

The post ದಸರಾ ಅಂಗವಾಗಿ ಆನೆಗಳಿಗೆ ಕುಶಾಲು ತೋಪು ಪೂರ್ವಭಾವಿ ಅಭ್ಯಾಸ appeared first on Good News 24x7.

]]>
ದಸರಾ ಮಹೋತ್ಸವ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಹ್ವಾನ https://www.goodnews24x7.com/invitation-to-chief-minister-siddaramaiah-to-inaugurate-dussehra-celebrations/ Thu, 26 Sep 2024 12:23:40 +0000 https://www.goodnews24x7.com/?p=649 ದಸರಾ ಮಹೋತ್ಸವ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಹ್ವಾನ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಹೆಚ್.ಸಿ.ಮಹದೇವಪ್ಪ ಅವರು ಇಂದು ಆಹ್ವಾನ ನೀಡಿದರು. ಕೆ.ಆರ್. ನಗರ ವಿಧಾನ ಸಭಾ ಶಾಸಕ ಡಿ.ರವಿಶಂಕರ್, ಎಚ್‍.ಡಿ…

The post ದಸರಾ ಮಹೋತ್ಸವ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಹ್ವಾನ appeared first on Good News 24x7.

]]>

ದಸರಾ ಮಹೋತ್ಸವ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಹ್ವಾನ

ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಹೆಚ್.ಸಿ.ಮಹದೇವಪ್ಪ ಅವರು ಇಂದು ಆಹ್ವಾನ ನೀಡಿದರು.

ಕೆ.ಆರ್. ನಗರ ವಿಧಾನ ಸಭಾ ಶಾಸಕ ಡಿ.ರವಿಶಂಕರ್, ಎಚ್‍.ಡಿ ಕೋಟೆ ಶಾಸಕರಾದ ಅನಿಲ್ ಕುಮಾರ್, ವಿಧಾನ ಪರಿಷತ್ ಶಾಸಕ ಡಾ ಯತೀಂದ್ರ ಎಸ್, ಸಿ.ಎನ್.ಮಂಜೇಗೌಡ, ಡಾ ತಿಮ್ಮಯ್ಯ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀ ಕಾಂತ ರೆಡ್ಡಿ ಹಾಗೂ ಸ್ವಾಗತ ಸಮಿತಿಯ ಅಧಿಕಾರಿಗಳು ಮತ್ತಿತರರೊಂದಿಗೆ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾಕ್ಕೆ ತೆರಳಿದ ಅವರು, ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತೆ ಆಮಂತ್ರಿಸಿದರು.

The post ದಸರಾ ಮಹೋತ್ಸವ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಹ್ವಾನ appeared first on Good News 24x7.

]]>
ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಸಾಹಿತಿ ಪ್ರೊ.ಹಂಪನಾಗೆ ಜಿಲ್ಲಾಡಳಿತ ವತಿಯಿಂದ ಆಹ್ವಾನ https://www.goodnews24x7.com/invitation-to-prof-hampana-from-the-district-administration-to-inaugurate-the-mysore-dussehra-celebrations/ Thu, 26 Sep 2024 05:41:15 +0000 https://www.goodnews24x7.com/?p=640 ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಸಾಹಿತಿ ಪ್ರೊ.ಹಂಪನಾಗೆ ಜಿಲ್ಲಾಡಳಿತ ವತಿಯಿಂದ ಆಹ್ವಾನ ಮೈಸೂರು ಜಿಲ್ಲಾಡಳಿತ ವತಿಯಿಂದ ಹೆಸರಾಂತ ಸಂಶೋಧಕರು, ಸಾಹಿತಿಗಳಾದ ಪ್ರೊ. ಹಂ.ಪ. ನಾಗರಾಜಯ್ಯ (ಹಂಪನಾ) ಅವರನ್ನು ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಗುರುವಾರ ಆಹ್ವಾನಿಸಲಾಯಿತು. ಹಂಪನಾ ಅವರ ಬೆಂಗಳೂರಿನ ಕ್ರಸೆಂಟ್…

The post ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಸಾಹಿತಿ ಪ್ರೊ.ಹಂಪನಾಗೆ ಜಿಲ್ಲಾಡಳಿತ ವತಿಯಿಂದ ಆಹ್ವಾನ appeared first on Good News 24x7.

]]>

ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಸಾಹಿತಿ ಪ್ರೊ.ಹಂಪನಾಗೆ ಜಿಲ್ಲಾಡಳಿತ ವತಿಯಿಂದ ಆಹ್ವಾನ

ಮೈಸೂರು ಜಿಲ್ಲಾಡಳಿತ ವತಿಯಿಂದ ಹೆಸರಾಂತ ಸಂಶೋಧಕರು, ಸಾಹಿತಿಗಳಾದ ಪ್ರೊ. ಹಂ.ಪ. ನಾಗರಾಜಯ್ಯ (ಹಂಪನಾ) ಅವರನ್ನು ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಗುರುವಾರ ಆಹ್ವಾನಿಸಲಾಯಿತು.

ಹಂಪನಾ ಅವರ ಬೆಂಗಳೂರಿನ ಕ್ರಸೆಂಟ್ ರಸ್ತೆಯ ಅಮೇರಿಕನ್ ಕಾಲೋನಿಯಲ್ಲಿರುವ ಅವರ ನಿವಾಸಕ್ಕೆ ಆಗಮಿಸಿ ಆಹ್ವಾನ ಕೋರಲಾಯಿತು. ಮೈಸೂರು ಪೇಟ ತೋಡಿಸಿ,ಫಲಫುಷ್ಪದೊಂದಿಗೆ ಆಮಂತ್ರಣ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ‌ ಲಾಟ್ಕರ್, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್, ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಮತ್ತು ಸ್ವಾಗತ ಸಮಿತಿಯ ಎಲ್ಲ ಅಧಿಕಾರಿಗಳು ಇದ್ದರು.

The post ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಸಾಹಿತಿ ಪ್ರೊ.ಹಂಪನಾಗೆ ಜಿಲ್ಲಾಡಳಿತ ವತಿಯಿಂದ ಆಹ್ವಾನ appeared first on Good News 24x7.

]]>
ಹಿರಿಯ ಸಾಹಿತಿ .ಹಂ.ಪ. ನಾಗರಾಜಯ್ಯ ಅವರಿಂದ ದಸರಾ ಉದ್ಘಾಟನೆ: ಮುಖ್ಯಮಂತ್ರಿ ಸಿದ್ದರಾಮಯ್ಯ https://www.goodnews24x7.com/senior-literature-h-p-dussehra-inaugurated-by-nagarajaiah-chief-minister-siddaramaiah/ Fri, 20 Sep 2024 08:53:47 +0000 https://www.goodnews24x7.com/?p=613 ಹಿರಿಯ ಸಾಹಿತಿ .ಹಂ.ಪ. ನಾಗರಾಜಯ್ಯ ಅವರಿಂದ ದಸರಾ ಉದ್ಘಾಟನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು, ಸಪ್ಟೆಂಬರ್ 20: ಹೆಸರಾಂತ ಹಿರಿಯ ಸಾಹಿತಿ ಹಂ.ಪ.ನಾಗರಾಜಯ್ಯ ಅವರನ್ನು ಈ ಬಾರಿಯ ದಸರಾ ಉದ್ಘಾಟನೆಗೆ ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಶಾಸಕ ಮುನಿರತ್ನ ಅವರ…

The post ಹಿರಿಯ ಸಾಹಿತಿ .ಹಂ.ಪ. ನಾಗರಾಜಯ್ಯ ಅವರಿಂದ ದಸರಾ ಉದ್ಘಾಟನೆ: ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Good News 24x7.

]]>

ಹಿರಿಯ ಸಾಹಿತಿ .ಹಂ.ಪ. ನಾಗರಾಜಯ್ಯ ಅವರಿಂದ ದಸರಾ ಉದ್ಘಾಟನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಸಪ್ಟೆಂಬರ್ 20: ಹೆಸರಾಂತ ಹಿರಿಯ ಸಾಹಿತಿ ಹಂ.ಪ.ನಾಗರಾಜಯ್ಯ ಅವರನ್ನು ಈ ಬಾರಿಯ ದಸರಾ ಉದ್ಘಾಟನೆಗೆ ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶಾಸಕ ಮುನಿರತ್ನ ಅವರ ಮೇಲೆ ಮೇಲಿನ ಮೂರು ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನು ಎಸ್.ಐ ಟಿಗೆ ವಹಿಸಬೇಕೆಂದು ಇಂದು ತಮ್ಮನ್ನು ಭೇಟಿ ಮಾಡಿದ ಒಕ್ಕಲಿಗ ಸಚಿವರು ಹಾಗೂ ಶಾಸಕರು ಮನವಿ ಮಾಡಿದ್ದಾರೆ. ಈ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಅವರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮರು ಪರೀಕ್ಷೆಯನ್ನು ಆದಷ್ಟೂ ಶೀಘ್ರದಲ್ಲಿಯೇ ಏರ್ಪಡಿಸುವಂತೆ ಕೆ.ಪಿ.ಎಸ್.ಸಿ ಗೆ ಸೂಚಿಸಲಾಗಿದೆ ಎಂದರು.
ಕಾನ್ ಸ್ಟಬಲ್ ಹುದ್ದೆಗಳಿಗೆ ವಯೋಮಿತಿಯನ್ನು 27 ರಿಂದ 33 ವರ್ಷಕ್ಕೆ ಏರಿಸಬೇಕೆಂಬ ಬೇಡಿಕೆ ಬಗ್ಗೆ ಮಾತನಾಡಿ ಈ ಕುರಿತು ಒಂದು ಬಾರಿಯ ತೀರ್ಮಾನ ಕೈಗೊಳ್ಳುವಂತೆ ಗೃಹ ಸಚಿವರಿಗೆ ತಿಳಿಸಿದ್ದೇನೆ ಎಂದರು.

The post ಹಿರಿಯ ಸಾಹಿತಿ .ಹಂ.ಪ. ನಾಗರಾಜಯ್ಯ ಅವರಿಂದ ದಸರಾ ಉದ್ಘಾಟನೆ: ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Good News 24x7.

]]>
ಈ ಬಾರಿ ಅದ್ದೂರಿಯಾಗಿ ವಿಜೃಂಭಣೆಯಿಂದ ನಾಡಹಬ್ಬ ದಸರಾ ಆಚರಣೆ ಮಾಡಲಾಗುವುದು : ಸಚಿವ ಹೆಚ್. ಸಿ. ಮಹದೇವಪ್ಪ https://www.goodnews24x7.com/this-time-nadahabba-dasara-will-be-celebrated-with-grandeur-minister-h-c-mahadevappa/ Fri, 16 Aug 2024 09:16:59 +0000 https://www.goodnews24x7.com/?p=368 ಈ ಬಾರಿ ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿದ್ದು, ರಾಜ್ಯದ ಜನರು ಖುಷಿಯಿಂದ ಇದ್ದಾರೆ. ಆದ್ದರಿಂದ ವಿಶ್ವವಿಖ್ಯಾತ ನಾಡ ಹಬ್ಬ ದಸರಾ ವನ್ನು ಈ ಬಾರಿ ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ ಮಹದೇವಪ್ಪ…

The post ಈ ಬಾರಿ ಅದ್ದೂರಿಯಾಗಿ ವಿಜೃಂಭಣೆಯಿಂದ ನಾಡಹಬ್ಬ ದಸರಾ ಆಚರಣೆ ಮಾಡಲಾಗುವುದು : ಸಚಿವ ಹೆಚ್. ಸಿ. ಮಹದೇವಪ್ಪ appeared first on Good News 24x7.

]]>

ಈ ಬಾರಿ ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿದ್ದು, ರಾಜ್ಯದ ಜನರು ಖುಷಿಯಿಂದ ಇದ್ದಾರೆ. ಆದ್ದರಿಂದ ವಿಶ್ವವಿಖ್ಯಾತ ನಾಡ ಹಬ್ಬ ದಸರಾ ವನ್ನು ಈ ಬಾರಿ ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ ಮಹದೇವಪ್ಪ ಅವರು ತಿಳಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ದಸರಾ ಆಚರಣೆ ಕುರಿತ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೊನ್ನೆ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಹೈ ಪವರ್ ಕಮಿಟಿ ಸಭೆ ನಡೆಯಿತು. ಈ ಸಭೆಯಲ್ಲಿ ದಸರಾ ಆಚರಣೆಗೆ ಅನುದಾನ, ಅನುದಾನ ಬಳಕೆಗೆ 4ಜಿ ವಿನಾಯಿತಿ ನೀಡುವ ಬಗ್ಗೆ ಹಾಗೂ ದಸರಾ ಉದ್ಘಾಟಕರ ಆಯ್ಕೆ ಬಗ್ಗೆ ಚರ್ಚಿಸಲಾಗಿದೆ. ದಸರಾ ಆಚರಣೆಗೆ ಹೆಚ್ಚಿನ ಪ್ರಾಯೋಜಕತ್ವ ಪಡೆಯಲು ಅಧಿಕಾರಿಗಳು ಮುಂದಾಗಬೇಕು. ಅಕ್ಟೋಬರ್ 03 ರಂದು ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9.15 ರಿಂದ 9.45 ಗಂಟೆಯೊಳಗೆ ದಸರಾ ಉದ್ಘಾಟನೆ ಮಾಡಲಾಗುವುದು ಎಂದರು.

ಈ ಬಾರಿ ದಸರಾ ಆಚರಣೆಗೆ 40 ಕೋಟಿ ವರೆಗೂ ಅನುದಾನ ಬಳಕೆಗೆ ಅವಕಾಶ ಕಲ್ಪಿಸಲು ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ. ಮೈಸೂರು ನಗರದ ಎಲ್ಲಾ ರಸ್ತೆಗಳನ್ನು ಪರಿಶೀಲಿಸಿ ಗುಂಡಿ ಮುಚ್ಚಿ, ಮರು ಡಾಂಬರೀಕರಣ ಮಾಡಲಾಗುವುದು ಎಂದರು.

ದಸರಾ ಆಚರಣೆಯಲ್ಲಿ ಅಧಿಕಾರಿಗಳು ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು. ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು. ಆಹಾರ ಮೇಳವನ್ನು ಸ್ಕೌಟ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್ ಪ್ಯಾಲೇಸ್ ಆವರಣದಲ್ಲಿ ಆಯೋಜಿಸಬೇಕು ಎಂದರು.

ಸ್ತಬ್ಧ ಚಿತ್ರಗಳ ಲ್ಲಿ ಕರ್ನಾಟಕ ಸರ್ಕಾರದ 5 ಗ್ಯಾರೆಂಟಿಗಳ ಕುರಿತ ಸ್ತಬ್ಧ ಚಿತ್ರಗಳು ಇರಬೇಕು. ಜೊತೆಗೆ ಸರ್ಕಾರದ ಒಂದು ವರ್ಷದ ಸಾಧನೆ ಕುರಿತ ಸ್ತಬ್ಧ ಚಿತ್ರ ಇರಬೇಕು. ದೀಪಾಲಂಕಾರ 21 ದಿನಗಳ ಕಾಲ ಇರಬೇಕು. ದೀಪಾಲಂಕಾರ ದಸರಾ ಆಚರಣೆ ಯ ಮೇರುಗನ್ನು ಹೆಚ್ಚಿಸುತ್ತದೆ. ದೀಪಾಲಂಕಾರವನ್ನು ದಸರಾ ಮಹೋತ್ಸವದಲ್ಲಿ ಪ್ರಮುಖ ವೃತ್ತಗಳಲ್ಲಿ ಮಾಡುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಯುವ ಸಂಭ್ರಮ ಹಾಗೂ ಯುವ ದಸರಾ ಕಾರ್ಯಕ್ರಮಗಳಿಗೆ ಕಳೆದ ಎರಡು ವರ್ಷಗಳಲ್ಲಿನ ಕಾರ್ಯಕ್ರಮಗಳು ಹಾಗೂ ಕಲಾವಿದರೂ ಪುನರಾವರ್ತನೆಯಾಗದಂತೆ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಚಿವರು ತಿಳಿಸಿದರು.

ಚಿಣ್ಣರ ದಸರಾ, ಮಹಿಳಾ ದಸರಾ ಹಾಗೂ ರೈತ ದಸರ ಕಾರ್ಯಕ್ರಮ ಅರ್ಥ ಪೂರ್ಣವಾಗಿ ನಡೆಸಬೇಕು. ಸ್ವತಂತ್ರ ದೇಶಾಭಿಮಾನದ ಸಂದೇಶಗಳನ್ನು ಸಾರುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದರು.

The post ಈ ಬಾರಿ ಅದ್ದೂರಿಯಾಗಿ ವಿಜೃಂಭಣೆಯಿಂದ ನಾಡಹಬ್ಬ ದಸರಾ ಆಚರಣೆ ಮಾಡಲಾಗುವುದು : ಸಚಿವ ಹೆಚ್. ಸಿ. ಮಹದೇವಪ್ಪ appeared first on Good News 24x7.

]]>