#ndia #Samson #confused #management Archives - Good News 24x7 https://www.goodnews24x7.com/tag/ndia-samson-confused-management/ Kannada Mon, 01 Sep 2025 10:46:07 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg #ndia #Samson #confused #management Archives - Good News 24x7 https://www.goodnews24x7.com/tag/ndia-samson-confused-management/ 32 32 ಓಪನರ್ ‘ಸಂಜು’ ಸೂಪರ್​..! ಮಿಡ್ಲ್​​ನಲ್ಲಿ ಮಂಕು..! https://www.goodnews24x7.com/opener-sanju-is-super-lackluster-in-the-middle/ Mon, 01 Sep 2025 10:46:07 +0000 https://www.goodnews24x7.com/?p=7224 ಏಷ್ಯಾಕಪ್​​ಗೆ ಟೀಮ್ ಇಂಡಿಯಾ ಪ್ರಕಟವಾಗಿದ್ದಾಗಿದೆ. ಆದ್ರೆ, ಈ ತಂಡದ ಆಯ್ಕೆಯ ಪ್ರಶ್ನೆಗಳು, ಚರ್ಚೆಗಳು ಮಾತ್ರ ಇನ್ನು ನಿಂತಿಲ್ಲ. ಆದ್ರೀಗ ಸಂಜು ಸ್ಯಾಮ್ಸನ್​​ ಬ್ಯಾಟಿಂಗ್ ಕ್ರಮಾಂಕದ ಪ್ರಶ್ನೆ ಎದ್ದಿದೆ. ಈ ಸ್ಟೋರಿನಾ ನೋಡಿದ್ರೆ, ಸಂಜು ಸ್ಲಾಟ್​ ಬಗ್ಗೆ ಮ್ಯಾನೇಜ್​ಮೆಂಟ್​ಗೂ ಗೊಂದಲ ಸೃಷ್ಟಿಯಾಗೋದ್ರಲ್ಲಿ ಡೌಟೇ…

The post ಓಪನರ್ ‘ಸಂಜು’ ಸೂಪರ್​..! ಮಿಡ್ಲ್​​ನಲ್ಲಿ ಮಂಕು..! appeared first on Good News 24x7.

]]>

ಏಷ್ಯಾಕಪ್​​ಗೆ ಟೀಮ್ ಇಂಡಿಯಾ ಪ್ರಕಟವಾಗಿದ್ದಾಗಿದೆ. ಆದ್ರೆ, ಈ ತಂಡದ ಆಯ್ಕೆಯ ಪ್ರಶ್ನೆಗಳು, ಚರ್ಚೆಗಳು ಮಾತ್ರ ಇನ್ನು ನಿಂತಿಲ್ಲ. ಆದ್ರೀಗ ಸಂಜು ಸ್ಯಾಮ್ಸನ್​​ ಬ್ಯಾಟಿಂಗ್ ಕ್ರಮಾಂಕದ ಪ್ರಶ್ನೆ ಎದ್ದಿದೆ. ಈ ಸ್ಟೋರಿನಾ ನೋಡಿದ್ರೆ, ಸಂಜು ಸ್ಲಾಟ್​ ಬಗ್ಗೆ ಮ್ಯಾನೇಜ್​ಮೆಂಟ್​ಗೂ ಗೊಂದಲ ಸೃಷ್ಟಿಯಾಗೋದ್ರಲ್ಲಿ ಡೌಟೇ ಇಲ್ಲ. ಅದು ಯಾಕೆ?.

ಮಿನಿ ವಿಶ್ವ ಸಮರಕ್ಕೆ ಕೌಂಟ್​ಡೌನ್ ಶುರುವಾಗಿದೆ. ಬಲಿಷ್ಠ ತಂಡವನ್ನು ಪ್ರಕಟಿಸಿರುವ ಟೀಮ್ ಇಂಡಿಯಾ, ಇನ್ನು ದುಬೈಗೆ ಹಾರುವುದೊಂದೇ ಬಾಕಿ ಇದೆ. ಆದ್ರೆ, ಏಷ್ಯಾಕಪ್​​ಗೆ ಟೀಮ್ ಇಂಡಿಯಾ ಪ್ರಕಟಿಸಿರುವ ಬೆನ್ನಲ್ಲೇ ಒಂದಿಲ್ಲೊಂದು ಪ್ರಶ್ನೆಗಳು ಕಾಡ್ತಿದೆ. ಈ ಪೈಕಿ ಒಂದು ಸಂಜು ಸ್ಯಾಮ್ಸನ್ ಸ್ಲಾಟ್​.

ನಿರೀಕ್ಷೆಯಂತೆ ಸಂಜು ಸ್ಯಾಮ್ಸನ್, ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಆದ್ರೀಗ ಏಷ್ಯಾಕಪ್​ ಸ್ಥಾನ ಗಿಟ್ಟಿಸಿಕೊಂಡಿರುವ ಸಂಜು ಸ್ಯಾಮ್ಸನ್​​​ಗೆ ಈಗ ಬ್ಯಾಟಿಂಗ್ ಸ್ಲಾಟ್​​ನದ್ದೇ ಚಿಂತೆ. ಇದಕ್ಕೆ ಕಾರಣ ವೈಸ್ ಕ್ಯಾಪ್ಟನ್ ಶುಭ್​ಮನ್ ಗಿಲ್​ & ನಂಬರ್.1 ಟಿ20 ಬ್ಯಾಟರ್ ಅಭಿಷೇಕ್ ಶರ್ಮಾ.

ಏಷ್ಯಾಕಪ್​​ನಲ್ಲಿ ಸಂಜು ಬ್ಯಾಟಿಂಗ್ ಸ್ಲಾಟ್​ನದ್ದೇ ಪ್ರಶ್ನೆ..!

ಸಂಜು ಸ್ಯಾಮ್ಸನ್, ದಿ ಬೆಸ್ಟ್ ಪ್ಲೇಯರ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಆದ್ರೆ, ಏಷ್ಯಾಕಪ್​​ನಲ್ಲಿ ಸ್ಥಾನ ಪಡೆದ ಸಂಜು ಸ್ಯಾಮ್ಸನ್, ಪ್ಲೇಯಿಂಗ್ ಇಲೆವೆನ್​ನಲ್ಲಿ ಆಡುವ ಬಗ್ಗೆ ಅನುಮಾನ ಇಲ್ಲ. ಆದ್ರೆ, ಕಳೆದ 3 ಟಿ20 ಸರಣಿಗಳಿಂದ ಆರಂಭಿಕನಾಗಿ ಆಡಿರುವ ಸಂಜು ಸ್ಯಾಮ್ಸನ್, ಅದ್ಬುತ ಪ್ರದರ್ಶನವನ್ನು ನೀಡಿದ್ದಾರೆ. ಆದ್ರೀಗ ಶುಭ್​ಮನ್ ಗಿಲ್​ ಕಮ್​ಬ್ಯಾಕ್, ಸಂಜು ಸ್ಯಾಮ್ಸನ್​​ ಬ್ಯಾಟಿಂಗ್ ಸ್ಲಾಟ್​​ನ ಪ್ರಶ್ನೆಗೆ ನಾಂದಿಯಾಡಿದೆ. ಆರಂಭಿಕನಾಗಿ ಮುಂದುವರಿಯುತ್ತಾರಾ..? ಇಲ್ಲ ಮಿಡಲ್ ಆರ್ಡರ್​ಗೆ ಶಿಫ್ಟ್​ ಆಗ್ತಾರಾ ಎಂಬ ಕ್ಯೂರಿಯಾಸಿಟಿ ಹುಟ್ಟುಹಾಕಿದೆ.

.

 

2025ರಲ್ಲಿ ಟ್ರ್ಯಾಕ್ ರೆಕಾರ್ಡ್​ ನೋಡಿದ್ರೆ, ಸಂಜು ಸ್ಯಾಮ್ಸನ್​ ಅಗ್ರೆಸ್ಸಿವ್ ಬ್ಯಾಟಿಂಗ್​. ಮ್ಯಾಚ್ ವಿನ್ನಿಂಗ್ ನಾಕ್ಸ್​, ಮೈ ರೋಮಾಚನಗೊಳಿಸುತ್ತೆ. ಹೊಸ ಸಂಜು ಸ್ಯಾಮ್ಸನ್​ರನ್ನೇ ಪರಿಚಯಿಸುತ್ತೆ. ಆದ್ರೆ. ಓಪನರ್ ಆಗಿ ಬೊಂಬಾಟ್ ಆಟವಾಡಿರುವ ಸಂಜು, ನಾನ್ ಓಪರ್ ಆಗಿ ಕಂಪ್ಲೀಟ್ ಫೇಲಾಗಿದ್ದಾರೆ.

2024ರ ಅಕ್ಟೋಬರ್​​​ನಿಂದ T20ಯಲ್ಲಿ ಸಂಜು

2024ರ ಅಕ್ಟೋಬರ್​​ನಿಂದ 12 ಟಿ20 ಪಂದ್ಯಗಳನ್ನಾಡಿರುವ ಸಂಜು ಸ್ಯಾಮ್ಸನ್, 417 ರನ್ ಸಿಡಿಸಿದ್ದಾರೆ. ಈ ಪೈಕಿ 3 ಶತಕ ಗಳಿಸಿರುವ ಸಂಜು ಸ್ಯಾಮ್ಸನ್, 183.7ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​ ಹೊಂದಿದ್ದಾರೆ.

ಇಂಟ್ರೆಸ್ಟಿಂಗ್ ಅಂದ್ರೆ, ಈ 12 ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಆಡಿದ್ದು ಓಪನರ್ ಆಗಿಯೇ ಅನ್ನೋದು ವಿಶೇಷ. ಆದ್ರೆ, ನಾನ್​ ಓಪನ್ ಆಗಿ ಸಂಜು ಸ್ಯಾಮ್ಸನ್ ಆಟ ನೋಡಿದ್ರೆ, ಟೀಮ್ ಮ್ಯಾನೇಜ್​ಮೆಂಟ್​ಗೆ ಹೊಸ ಆತಂಕ ಹುಟ್ಟುಹಾಕೋದ್ರಲ್ಲಿ ಅನುಮಾನ ಇಲ್ಲ.

ಟಿ20ಯಲ್ಲಿ ಸಂಜು ಸ್ಯಾಮ್ಸನ್​ ಪ್ರದರ್ಶನ

ಟಿ20ಯಲ್ಲಿ ಆರಂಭಿಕನಾಗಿ 17 ಪಂದ್ಯಗಳನ್ನಾಡಿರುವ ಸಂಜು ಸ್ಯಾಮ್ಸನ್, 522 ರನ್ ಗಳಿಸಿದ್ದಾರೆ. 3 ಶತಕ, 1 ಅರ್ಧಶತಕ ದಾಖಲಿಸಿರುವ ಸಂಜು, 178.76ರ ಸ್ಟ್ರೈಕ್​​ರೇಟ್​ ಹೊಂದಿದ್ದಾರೆ. ಆದ್ರೆ, ಮಿಡಲ್ ಆರ್ಡರ್​​ನಲ್ಲಿ 25 ಪಂದ್ಯಗಳನ್ನಾಡಿರುವ ಸಂಜು ಸ್ಯಾಮ್ಸನ್, ಸಿಡಿಸಿದ್ದು ಕೇವಲ 1 ಅರ್ಧಶತಕ. ಸ್ಟ್ರೈಕ್​​ರೇಟ್​ ಕೇವಲ 124.17… ಹೀಗಾಗಿ ಸಂಜು ಸ್ಲಾಟ್ ಯಾವುದು ಅನ್ನೋ ಪ್ರಶ್ನೆ ಸಹಜವಾಗೇ ಉದ್ಬವಾಗುತ್ತೆ.

ಇದನ್ನೂ ಓದಿ: ಸಚಿವ ಜಮೀರ್​ಗೆ 2 ಕೋಟಿ ಹಣ.. ಲೋಕಾಯುಕ್ತ ವಿಚಾರಣೆಯಲ್ಲಿ ನಟಿ ರಾಧಿಕಾ ಹೇಳಿದ್ದೇನು?

 

3ನೇ ಕ್ರಮಾಂಕದಲ್ಲಿ 3 ಪಂದ್ಯಗಳನ್ನಾಡಿರುವ ಸಂಜು ಸ್ಯಾಮ್ಸನ್, 126.92ರ ಸ್ಟ್ರೈಕ್​ರೇಟ್​ನಲ್ಲಿ 33 ರನ್ ಗಳಿಸಿದ್ರೆ. 4ನೇ ಕ್ರಮಾಂಕದಲ್ಲಿ ಆಡಿದ 11 ಪಂದ್ಯಗಳಿಂದ 213 ರನ್ ಗಳಿಸಿದ್ದಾರೆ. 129ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿರುವ ಸಂಜು, ಒಂದೇ ಒಂದು ಅರ್ಧಶತಕ ಗಳಿಸಿದ್ದಾರೆ. ಇನ್ನು 5ನೇ ಕ್ರಮಾಂಕದಲ್ಲಿ ಆಡಿರೋ 5 ಪಂದ್ಯಗಳಿಂದ 62 ರನ್ ಗಳಿಸಿರುವ ಸಂಜು ಸ್ಟ್ರೈಕ್​ರೇಟ್​, 131.91 ಆಗಿದೆ. ಇನ್ನು 6 ಹಾಗೂ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ರು. ಅದು ನಾಮಕವಸ್ಥೆಯಷ್ಟೇ.

ಕೇವಲ ಆರಂಭಿಕನಾಗಿ ಅದ್ಬುತ ಟ್ರ್ಯಾಕ್ ರೆಕಾರ್ಡ್​ ಹೊಂದಿರುವ ಸಂಜು, ಉಳಿದ್ಯಾವ ಸ್ಲಾಟ್​ನಲ್ಲಿ ಆಡಿಲ್ಲ. ಹೀಗಾಗಿ ಸಂಜು ಆರಂಭಿಕನಾಗಿ ಆಡಬೇಕಾದ್ರೆ, ಶುಭ್​ಮನ್ ಗಿಲ್ ಅಥವಾ ಅಭಿಷೇಕ್ ಶರ್ಮಾ ತ್ಯಾಗ ಮಾಡಬೇಕು. ಆದ್ರೆ, ಶುಭ್​ಮನ್ ಗಿಲ್, ಅಭಿಷೇಕ್ ಶರ್ಮಾ ಟಿ20ಯಲ್ಲಿ ಆರಂಭಿಕರಾಗಿಯೇ ಪಳಗಿದವರು. ಪವರ್ ಪ್ಲೇನಲ್ಲೇ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಆದ್ರೆ, ಮೂವರಿಗೂ ಫೇವರಿಟ್ ಸ್ಲಾಟ್​ ಆಗಿರುವ ಆರಂಭಿಕ ಸ್ಥಾನವನ್ನ ಒಬ್ಬರು ತ್ಯಾಗ ಮಾಡಬೇಕು. ಇಲ್ಲ ಸಂಜು 3ನೇ ಕ್ರಮಾಂಕದಲ್ಲಿ ಆಡಬೇಕು. ಆದ್ರೆ, ಅಲ್ಲೂ ಕೂಡ ತಿಲಕ್ ವರ್ಮ, ಸೂರ್ಯಕುಮಾರ್ ಇದ್ದಾರೆ. ಹೀಗಾಗಿ ಸಂಜು ಸ್ಥಾನ ಏನು ಅನ್ನೋದೆ ಯಕ್ಷ ಪ್ರಶ್ನೆಯಾಗಿ ಕಾಡ್ತಿದೆ.

The post ಓಪನರ್ ‘ಸಂಜು’ ಸೂಪರ್​..! ಮಿಡ್ಲ್​​ನಲ್ಲಿ ಮಂಕು..! appeared first on Good News 24x7.

]]>