notorious Archives - Good News 24x7 https://www.goodnews24x7.com/tag/notorious/ Kannada Mon, 10 Nov 2025 12:56:28 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg notorious Archives - Good News 24x7 https://www.goodnews24x7.com/tag/notorious/ 32 32 ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಸಲ್ಮಾನರಿಗೆ, ಭಯೋತ್ಪಾದಕರಿಗೆ ಎಲ್ಲಾ ಸೌಲಭ್ಯ: ವಿಪಕ್ಷ ನಾಯಕ ಆರ್. ಅಶೋಕ್ https://www.goodnews24x7.com/parappana-agrahara-jail-provides-all-facilities-to-muslims-terrorists-opposition-leader-r-ashok/ Mon, 10 Nov 2025 12:56:28 +0000 https://www.goodnews24x7.com/?p=8097 ಬೆಂಗಳೂರು: ಪರಪ್ಪನ ಅಗ್ರಹಾರದ ಕರ್ಮಕಾಂಡಗಳು ಒಂದೊಂದಾಗಿ ಬಯಲಾಗುತ್ತಿವೆ. ಜೈಲಿನಿಂದ ಹೊರಬಿದ್ದ ದೃಶ್ಯಗಳು ಜೈಲು ವ್ಯವಸ್ಥೆಯ ಅವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಉಗ್ರರು, ನಟೋರಿಯಸ್ ರೇಪಿಸ್ಟ್ ಹಾಗೂ ಅಪಾಯಕಾರಿ ಕೈದಿಗಳಿಗೆ ಸಿಗ್ತಿರೋ ಸವಲತ್ತು ಸಮಾಜವನ್ನ ಆತಂಕಕ್ಕೆ ದೂಡುವಂತೆ ಮಾಡಿದೆ. ಈ ಅಕ್ರಮ ಚಟುವಟಿಕೆಗಳ ವಿರುದ್ಧ…

The post ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಸಲ್ಮಾನರಿಗೆ, ಭಯೋತ್ಪಾದಕರಿಗೆ ಎಲ್ಲಾ ಸೌಲಭ್ಯ: ವಿಪಕ್ಷ ನಾಯಕ ಆರ್. ಅಶೋಕ್ appeared first on Good News 24x7.

]]>

ಬೆಂಗಳೂರು: ಪರಪ್ಪನ ಅಗ್ರಹಾರದ ಕರ್ಮಕಾಂಡಗಳು ಒಂದೊಂದಾಗಿ ಬಯಲಾಗುತ್ತಿವೆ. ಜೈಲಿನಿಂದ ಹೊರಬಿದ್ದ ದೃಶ್ಯಗಳು ಜೈಲು ವ್ಯವಸ್ಥೆಯ ಅವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಉಗ್ರರು, ನಟೋರಿಯಸ್ ರೇಪಿಸ್ಟ್ ಹಾಗೂ ಅಪಾಯಕಾರಿ ಕೈದಿಗಳಿಗೆ ಸಿಗ್ತಿರೋ ಸವಲತ್ತು ಸಮಾಜವನ್ನ ಆತಂಕಕ್ಕೆ ದೂಡುವಂತೆ ಮಾಡಿದೆ. ಈ ಅಕ್ರಮ ಚಟುವಟಿಕೆಗಳ ವಿರುದ್ಧ ಬಿಜೆಪಿ ಹೋರಾಟ ನಡೆಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರನ್ನ ಹೊಣೆ ಮಾಡಿರೋ ಬಿಜೆಪಿ ನಿಗಿನಿಗಿ ಅಂತಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಮುಸಲ್ಮಾನರನ್ನು ಮುಟ್ಟಿದರೆ ನಮಗೆ ಪ್ರಮೋಷನ್ ಇಲ್ಲ ಅಂತಾ ಕರ್ನಾಟಕದ ಪೊಲೀಸರು ಭಯಗೊಂಡಿದ್ದಾರೆ. ಯಾವ ಸ್ಟೇಷನ್ ಗಳಲ್ಲೂ ಈಗ ಮುಸಲ್ಮಾನರ ಮೇಲೆ ಏನೂ ಕೇಸ್ ಮಾಡಲ್ಲ. ಈಗ ಅದು ಪರಪ್ಪನ ಅಗ್ರಹಾರದವರೆಗೆ ಹೋಗಿದೆ. ಪರಪ್ಪನ ಅಗ್ರಹಾರದಲ್ಲಿ ಮುಸಲ್ಮಾನರಿಗೆ, ಭಯೋತ್ಪಾದಕರಿಗೆ ಎಲ್ಲಾ ಸೌಲಭ್ಯ ಕೊಡುತ್ತಾರೆ. ದೇಶದಲ್ಲಿರುವ ಎಲ್ಲಾ ಭಯೋತ್ಪಾದಕರು ನಮಗೆ ಕರ್ನಾಟಕ ಕೊಡಿ ಎಂದು ಅರ್ಜಿ ಹಾಕುತ್ತಿದ್ದಾರಂತೆ. ದರ್ಶನ್ ಬೀಡಿ ಸೇದಿದ್ದಕ್ಕೆ ಸುಪ್ರೀಂ ಕೋರ್ಟ್ ಗೆ ಹೋಗಿ ಬೇಲ್ ಕ್ಯಾನ್ಸಲ್ ಮಾಡಿಸಿದರು. ಇದರಲ್ಲಿ ಸುಪ್ರೀಂ ಕೋರ್ಟ್ ಗೆ ಸರ್ಕಾರ ಹೋಗಲ್ಲ. ದರ್ಶನ್ ಗೆ ಒಂದು ಕಾನೂನು, ಭಯೋತ್ಪಾದಕರಿಗೆ ರಾಜಾತಿಥ್ಯ. ಯಾಕೆಂದರೆ ದರ್ಶನ್ ಹಿಂದೂ, ಇವರು ಮುಸಲ್ಮಾನರು. ದರ್ಶನ್ ತಪ್ಪು ಮಾಡಿದ್ದಾರೆ, ಇಲ್ಲ ಅಂತಾ ಹೇಳಲ್ಲ. ಆದರೆ ಕಾನೂನು ಎಲ್ಲರಿಗೂ ಒಂದೇ ತಾನೇ. ದೇಶದ್ರೋಹಿಗೆ ಒಂದು ಕಾನೂನು, ದರ್ಶನ್ ಗೆ ಒಂದು ಕಾನೂನಾ? ಎಂದು ಪ್ರಶ್ನಿಸಿದರು.

The post ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಸಲ್ಮಾನರಿಗೆ, ಭಯೋತ್ಪಾದಕರಿಗೆ ಎಲ್ಲಾ ಸೌಲಭ್ಯ: ವಿಪಕ್ಷ ನಾಯಕ ಆರ್. ಅಶೋಕ್ appeared first on Good News 24x7.

]]>
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ; FIR ದಾಖಲು https://www.goodnews24x7.com/parappana-agrahara-jail-inmates-given-royal-hospitality-fir-filed/ Mon, 10 Nov 2025 12:42:35 +0000 https://www.goodnews24x7.com/?p=8089 ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲು ಪ್ರಕರಣಗಳು ದಾಖಲಾಗಿವೆ. ಮೂರು ಎನ್​ಸಿಆರ್ ಮತ್ತು ಒಂದು ಎಫ್ಐಆರ್ ದಾಖಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತನಿಖೆ ನಡೆಸಿದ್ದು, ಎನ್​​ಐಎ ಕೂಡ ಮಧ್ಯೆ ಪ್ರವೇಶಿಸಿದೆ.…

The post ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ; FIR ದಾಖಲು appeared first on Good News 24x7.

]]>

ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲು ಪ್ರಕರಣಗಳು ದಾಖಲಾಗಿವೆ. ಮೂರು ಎನ್​ಸಿಆರ್ ಮತ್ತು ಒಂದು ಎಫ್ಐಆರ್ ದಾಖಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತನಿಖೆ ನಡೆಸಿದ್ದು, ಎನ್​​ಐಎ ಕೂಡ ಮಧ್ಯೆ ಪ್ರವೇಶಿಸಿದೆ.

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ (parappana agrahara jail) ಕರ್ಮಕಾಂಡಗಳು ಒಂದೊಂದಾಗಿ ಹೊರಬರುತ್ತಿವೆ. ಐಷಾರಾಮಿ ಬದುಕಿನ ಒಂದೊಂದೇ ಕರಾಳತೆ ಬಯಲಾಗುತ್ತಿದೆ. ಈ ಬೆನ್ನಲ್ಲೇ ಗೃಹ ಇಲಾಖೆ ಅಲರ್ಟ್ ಆಗಿದೆ. ಇಬ್ಬರು ಜೈಲಧಿಕಾರಿಗಳ ತಲೆದಂಡವಾಗಿದೆ. ಇದೀಗ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರವಾಗಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಮೂರು ಎನ್​​ಸಿಆರ್​​ ಮತ್ತು ಒಂದು ಎಫ್​​ಐಆರ್​​​ ದಾಖಲಾಗಿದೆ. ಜೊತೆಗೆ ಎನ್​​ಐಎ ಎಂಟ್ರಿ ಆಗಿದೆ.

ವಿಕೃತ ಕಾಮಿ, ನಟೋರಿಯಸ್ ರೌಡಿಶೀಟರ್​ಗಳು, ಅಷ್ಟೇ ಯಾಕೆ ಮೋಸ್ಟ್ ವಾಂಟೆಡ್ ಉಗ್ರಗಾಮಿಗಳು ಪರಪ್ಪನ ಅಗ್ರಹಾರ ಜೈಲಿಗೆ ಯಾವುದೋ ರೆಸಾರ್ಟ್​​ಗೆ ಬಂದಂತಿದ್ದಾರೆ. ಹೈಪ್ರೊಫೈಲ್ ಕೇಸ್​ಗಳ ಆರೋಪಿಗಳು, ಅಪರಾಧಿಗಳು ಶಿಕ್ಷೆ ಸನುಭವಿಸುತ್ತಿರುವ ಈ ಜೈಲು ಕ್ರಿಮಿನಲ್​ಗಳ ಪಾಲಿಗೆ ಸ್ವರ್ಗ. ಅದಕ್ಕೆ ಸಾಕ್ಷಿಯಾಗಿ ಕೈದಿಗಳು ಮೋಜು ಮಸ್ತಿ ಮಾಡುತ್ತಿದ್ದ ಸಾಲು ಸಾಲು ವಿಡಿಯೋಗಳು ರಾಜ್ಯದ ಜನರನ್ನು ಬೆಚ್ಚಿಬೀಳಿಸಿವೆ.

ಒಟ್ಟು ನಾಲ್ಕು ಪ್ರಕರಣಗಳ ದಾಖಲು
ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರವಾಗಿ ಈವರೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಒಟ್ಟು ನಾಲ್ಕು ದೂರು ದಾಖಲಾಗಿವೆ. ಈ ಪೈಕಿ ಮೂರು ಎನ್​​ಸಿ ಆರ್​​ ದಾಖಲಾದರೆ, ಒಂದು ಎಫ್ಐಆರ್​​ ದಾಖಲಾಗಿದೆ.
ಇಂದು ಸಸ್ಪೆಂಡ್ ಆಗಿರುವ ಜೈಲಿನ ಅಧೀಕ್ಷಕ ಮ್ಯಾಗೇರಿ ಅವರಿಂದಲೇ ದೂರು ನೀಡಲಾಗಿದೆ. ಅವರ ದೂರಿನ ಮೇರೆಗೆ ಜೈಲಿನಲ್ಲಿ ತಟ್ಟೆ, ಡ್ರಮ್ ಬಾರಿಸಿ ಡ್ಯಾನ್ಸ್ ಮಾಡಿದ್ದ ಸಜಾ ಬಂಧಿ ಪ್ಯಾಟ್ರಿಕ್ ಟೀಮ್​​​ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಎನ್​​ಸಿಆರ್​​ ಪ್ರಕರಣಗಳನ್ನ ಪೊಲೀಸರು ಎಫ್ಐಆರ್ ಮಾಡಿಕೊಳ್ಳಲಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

ಎನ್​ಐಎ ಅಧಿಕಾರಿಗಳ ಎಂಟ್ರಿ
ಇನ್ನು ಪರಪ್ಪನ ಅಗ್ರಹಾರದಲ್ಲಿ ಉಗ್ರರ ಕೈಗೆ ಮೊಬೈಲ್ ಸಿಗುತ್ತಿದ್ದಂತೆ ಎನ್​ಐಎ ಅಧಿಕಾರಿಗಳ ಎಂಟ್ರಿಯಾಗಿದೆ. ಸಿಸಿಬಿ ಕಚೇರಿಗೆ ಬಂದ ಅಧಿಕಾರಿಗಳ ತಂಡ, ಜೈಲಿನಲ್ಲಿ ಯಾವಾಗ ವಿಡಿಯೋ ರೆಕಾರ್ಡ್ ಮಾಡಲಾಗಿದೆ? ಜೈಲಿನಲ್ಲಿ ಉಗ್ರರು ಬಳಸುತ್ತಿದ್ದ ಮೊಬೈಲ್ ಫೋನ್ ಸಿಕ್ಕಿದೆಯಾ ಎಂಬೆಲ್ಲಾ ಮಾಹಿತಿ ಪಡೆದಿದ್ದಾರೆ. ಜೈಲಿನಲ್ಲಿ ಮೊಬೈಲ್ ಬಳಕೆ ಪ್ರಕರಣ ಸಿಸಿಬಿಗೆ ವರ್ಗಾವಣೆ ಆಗಿಲ್ಲ. ಈ ಬಗ್ಗೆ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ.

ಇಂದು ಬೆಂಗಳೂರಿನ ಕಾರಾಗೃಹ ಕಚೇರಿಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಹತ್ವದ ಸಭೆ ಮಾಡಿದರು. ಸುಮಾರು ಎರಡು ಗಂಟೆಗಳ ಕಾಲ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಪರಮೇಶ್ವರ್, ತರಾಟೆಗೆ ತೆಗೆದುಕೊಂಡರು. ಸಭೆಯ ಬಳಿಕ ಮಾತನಾಡಿದ ಪರಮೇಶ್ವರ್, ಜೈಲು ಅಧೀಕ್ಷಕ ಇಮಾಮ್ ಸಾಬ್ ಮ್ಯಾಗೇರಿ, ಹಾಗೂ ಉಪಾಧೀಕ್ಷಕರಾದ ಅಶೋಕ್ ಭಜಂತ್ರಿ ಎಂಬುವವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಇನ್ನು ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕ ಸುರೇಶ್​ರನ್ನು ಬೇರೆ ಕಡೆಗೆ ಎತ್ತಂಗಡಿ ಮಾಡಲಾಗಿದೆ.

The post ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ; FIR ದಾಖಲು appeared first on Good News 24x7.

]]>