Odisha Archives - Good News 24x7 https://www.goodnews24x7.com/tag/odisha/ Kannada Thu, 16 Jul 2026 05:54:55 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Odisha Archives - Good News 24x7 https://www.goodnews24x7.com/tag/odisha/ 32 32 ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ ! https://www.goodnews24x7.com/grand-jagannath-rath-yatra-begins-in-puri-odisha-from-today/ Thu, 16 Jul 2026 05:54:21 +0000 https://www.goodnews24x7.com/?p=9845   ಒಡಿಶಾದ ಪುರಿಯಲ್ಲಿ ಭವ್ಯ ಜಗನ್ನಾಥ ರಥಯಾತ್ರೆ ಇಂದಿನಿಂದ ಆರಂಭಗೊಂಡಿದೆ. ಲಕ್ಷಾಂತರ ಭಕ್ತರು ‘ಜಯ ಜಗನ್ನಾಥ’ ಘೋಷಗಳೊಂದಿಗೆ ಈ ಮಹಾ ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಜಗನ್ನಾಥ ಸ್ವಾಮಿ, ಬಲಭದ್ರ ಮತ್ತು ಸುಭದ್ರಾ ದೇವಿ ದೇವಾಲಯದಿಂದ ಹೊರಬಂದು ಭಕ್ತರಿಗೆ ದರ್ಶನ ನೀಡುತ್ತಾರೆ. ಹೊಸ ರಥಗಳ…

The post ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ ! appeared first on Good News 24x7.

]]>

 

ಒಡಿಶಾದ ಪುರಿಯಲ್ಲಿ ಭವ್ಯ ಜಗನ್ನಾಥ ರಥಯಾತ್ರೆ ಇಂದಿನಿಂದ ಆರಂಭಗೊಂಡಿದೆ. ಲಕ್ಷಾಂತರ ಭಕ್ತರು ‘ಜಯ ಜಗನ್ನಾಥ’ ಘೋಷಗಳೊಂದಿಗೆ ಈ ಮಹಾ ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಜಗನ್ನಾಥ ಸ್ವಾಮಿ, ಬಲಭದ್ರ ಮತ್ತು ಸುಭದ್ರಾ ದೇವಿ ದೇವಾಲಯದಿಂದ ಹೊರಬಂದು ಭಕ್ತರಿಗೆ ದರ್ಶನ ನೀಡುತ್ತಾರೆ. ಹೊಸ ರಥಗಳ ನಿರ್ಮಾಣ, ಗುಂಡಿಚಾ ಮಂದಿರಕ್ಕೆ ಪ್ರಯಾಣ ಮತ್ತು ‘ಛೇರಾ ಪಹರಾ’ ಸಮಾನತೆಯ ಸಂದೇಶ ಸಾರುವ ಪ್ರಮುಖ ಆಚರಣೆಗಳಾಗಿವೆ.

ಭಾರತದ ಅತ್ಯಂತ ಪವಿತ್ರ ಹಾಗೂ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಇತಿಹಾಸ ಪ್ರಸಿದ್ಧ ‘ಪುರಿ ಜಗನ್ನಾಥ ರಥಯಾತ್ರೆ’ಯು ಇಂದುಅತ್ಯಂತ ವೈಭವದಿಂದ ಆರಂಭವಾಗಿದೆ. ದೇಶ-ವಿದೇಶಗಳ ಲಕ್ಷಾಂತರ ಭಕ್ತರು ಪುರಿ ನಗರಕ್ಕೆ ಹರಿದು ಬಂದಿದ್ದು, ಇಡೀ ನಗರವು ‘ಜಯ ಜಗನ್ನಾಥ’ ಎಂಬ ಜೈಕಾರದೊಂದಿಗೆ ಭಕ್ತಿಯ ಸಾಗರದಲ್ಲಿ ಮುಳುಗಿದೆ. ಶ್ರೀ ಜಗನ್ನಾಥ ದೇವಾಲಯ ಆಡಳಿತವು ಈ ಮಹಾ ಉತ್ಸವದ ಅಧಿಕೃತ ಧಾರ್ಮಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಬಿಗಿ ಭದ್ರತೆಯ ನಡುವೆ ರಥೋತ್ಸವಕ್ಕೆ ಚಾಲನೆ ನೀಡಲಾಗಿದೆ.

ಸಾಮಾನ್ಯವಾಗಿ ಹಿಂದೂ ಧರ್ಮದ ಬಹುತೇಕ ಹಬ್ಬಗಳಲ್ಲಿ ಭಕ್ತರು ದೇವರ ದರ್ಶನ ಪಡೆಯಲು ದೇವಾಲಯಗಳ ಒಳಗೆ ಹೋಗಬೇಕಾಗುತ್ತದೆ. ಆದರೆ, ಪುರಿ ರಥಯಾತ್ರೆಯ ವೈಶಿಷ್ಟ್ಯವೇ ಬೇರೆ. ಇಲ್ಲಿ ಜಗನ್ನಾಥ ಸ್ವಾಮಿ, ಅಣ್ಣ ಬಲಭದ್ರ ಮತ್ತು ತಂಗಿ ಸುಭದ್ರಾ ದೇವಿಯೊಂದಿಗೆ ಸ್ವತಃ ತಾನೇ ದೇವಾಲಯದಿಂದ ಹೊರಬಂದು, ಜಾತಿ, ಮತ, ಧರ್ಮ ಅಥವಾ ಬಡವ-ಬಲ್ಲಿದ ಎಂಬ ಭೇದವಿಲ್ಲದೆ ರಸ್ತೆಯಲ್ಲಿ ನಿಂತಿರುವ ಪ್ರತಿಯೊಬ್ಬ ಭಕ್ತನಿಗೂ ದರ್ಶನ ನೀಡಿ ಆಶೀರ್ವದಿಸುತ್ತಾನೆ.

ಸನಾತನ ಸಂಪ್ರದಾಯದ ಪ್ರಕಾರ, ಜಗನ್ನಾಥ ಸ್ವಾಮಿಯು ತನ್ನ ಒಡಹುಟ್ಟಿದವರೊಂದಿಗೆ ಜಗನ್ನಾಥ ದೇವಸ್ಥಾನದಿಂದ ಹೊರಟು, ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ತನ್ನ ಸೋದರತ್ತೆಯ ಮನೆ ಎಂದು ನಂಬಲಾದ ‘ಗುಂಡಿಚಾ ದೇವಸ್ಥಾನ’ಕ್ಕೆ ವಾರ್ಷಿಕ ಪ್ರಯಾಣ ಬೆಳೆಸುತ್ತಾನೆ. ಈ ಒಂಬತ್ತು ದಿನಗಳ ಕಾಲ ದೇವತೆಗಳು ಗುಂಡಿಚಾ ಮಂದಿರದಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಜಗತ್ತಿನ ಸೃಷ್ಟಿಕರ್ತನಾದ ಜಗನ್ನಾಥನ ಮುಂದೆ ರಾಜನಾಗಲಿ ಅಥವಾ ಸಾಮಾನ್ಯ ಪ್ರಜೆಯಾಗಲಿ ಎಲ್ಲರೂ ಸಮಾನರು, ಭಗವಂತನಿಗೆ ಎಲ್ಲರೂ ಸೇವಕರು ಎಂಬ ಪರಮೋಚ್ಚ ಸಮಾನತೆಯ ಸಂದೇಶವನ್ನು ಈ ಆಚರಣೆ ಸಾರುತ್ತದೆ. ಒಡಿಶಾ ಸರ್ಕಾರ ಹಾಗೂ ಸ್ಥಳೀಯ ಪೊಲೀಸರು ಲಕ್ಷಾಂತರ ಭಕ್ತರ ಸೌಕರ್ಯಕ್ಕಾಗಿ ಇಡೀ ಪುರಿ ನಗರದಾದ್ಯಂತ ವಾಹನ ಸಂಚಾರ ವ್ಯವಸ್ಥೆ ಮತ್ತು ಪ್ರವಾಸೋದ್ಯಮ ಸೌಲಭ್ಯಗಳನ್ನು

The post ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ ! appeared first on Good News 24x7.

]]>
ರೀಲ್ಸ್ ಮಾಡಲು ಹೋಗಿ ಜಲಪಾತದಲ್ಲಿ ಕೊಚ್ಚಿಹೋದ ಯೂಟ್ಯೂಬರ್ ! https://www.goodnews24x7.com/youtuber-washed-away-in-waterfall-while-making-reels/ Mon, 25 Aug 2025 06:05:10 +0000 https://www.goodnews24x7.com/?p=6703 ಭುವನೇಶ್ವರ ( ಒಡಿಶಾ ): ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಯೂಟ್ಯೂಬರ್ ಕೊಚ್ಚಿಹೋದ ಘಟನೆ ಒಡಿಶಾದ ಕೊರಾಪುಟ್ ಜಿಲ್ಲೆಯಲ್ಲಿ ನಡೆದಿದೆ. ದುಡುಮಾ ಜಲಪಾತದಲ್ಲಿ ಘಟನೆ ನಡೆದಿದೆ. ನೀರಿನಲ್ಲಿ ಸಿಲುಕಿ ಬೆರ್ಹಾಂಪುರ್‌ನ ಸಾಗರ್ ತುಡು (22) ಎಂಬ ಯೂಟ್ಯೂಬರ್ ನಾಪತ್ತೆಯಾಗಿದ್ದಾನೆ. ಸಾಗರ್ ತನ್ನ…

The post ರೀಲ್ಸ್ ಮಾಡಲು ಹೋಗಿ ಜಲಪಾತದಲ್ಲಿ ಕೊಚ್ಚಿಹೋದ ಯೂಟ್ಯೂಬರ್ ! appeared first on Good News 24x7.

]]>

ಭುವನೇಶ್ವರ ( ಒಡಿಶಾ ): ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಯೂಟ್ಯೂಬರ್ ಕೊಚ್ಚಿಹೋದ ಘಟನೆ ಒಡಿಶಾದ ಕೊರಾಪುಟ್ ಜಿಲ್ಲೆಯಲ್ಲಿ ನಡೆದಿದೆ.

ದುಡುಮಾ ಜಲಪಾತದಲ್ಲಿ ಘಟನೆ ನಡೆದಿದೆ. ನೀರಿನಲ್ಲಿ ಸಿಲುಕಿ ಬೆರ್ಹಾಂಪುರ್‌ನ ಸಾಗರ್ ತುಡು (22) ಎಂಬ ಯೂಟ್ಯೂಬರ್ ನಾಪತ್ತೆಯಾಗಿದ್ದಾನೆ. ಸಾಗರ್ ತನ್ನ ಯೂಟ್ಯೂಬ್ ಚಾನೆಲ್‌ಗಾಗಿ ಪ್ರಮುಖ ಪ್ರವಾಸಿ ತಾಣಗಳ ವೀಡಿಯೋಗಳನ್ನು ಚಿತ್ರೀಕರಿಸಲು ಬಂದಿದ್ದಾಗ ಘಟನೆ ಸಂಭವಿಸಿದೆ. ಇದನ್ನೂ ಓದಿ: ಬೆಂಗಳೂರು ಟೆಕ್ಕಿಗೆ 2.65 ಲಕ್ಷ ವಂಚನೆ – ಟ್ರಾಫಿಕ್‌ ಫೈನ್‌ ಕಟ್ಟೋ ಮುನ್ನ ಎಚ್ಚರವಾಗಿರಿ

ಕಟಕ್‌ನಿಂದ ತನ್ನ ಸ್ನೇಹಿತ ಅಭಿಜಿತ್ ಬೆಹೆರಾ ಜೊತೆ ಕೊರಾಪುಟ್‌ಗೆ ಬಂದಿದ್ದ ಸಾಗರ್ ಜಲಪಾತದಲ್ಲಿ ಡ್ರೋನ್ ಕ್ಯಾಮೆರಾ ಬಳಸಿ ರೀಲ್ ರೆಕಾರ್ಡ್ ಮಾಡುತ್ತಿದ್ದಾಗ ಘಟನೆ ನಡೆದಿದೆ. ಜಲಪಾತದಲ್ಲಿ ಹಠಾತ್ ನೀರಿನ ಪ್ರಮಾಣ ಏರಿಕೆಯಾದ ಪರಿಣಾಮ ಬಂಡೆಯ ಮೇಲೆ ನಿಂತಿದ್ದ ಸಾಗರ್ ಕೊಚ್ಚಿಹೋಗಿದ್ದಾನೆ. ನಾಪತ್ತೆಯಾಗಿರುವ ಸಾಗರ್‌ಗಾಗಿ ಅಗ್ನಿಶಾಮಕ ದಳ ರಕ್ಷಣಾ ಪಡೆಗಳಿಂದ ಶೋಧ ಕಾರ್ಯ ನಡೆಯುತ್ತಿದೆ.

The post ರೀಲ್ಸ್ ಮಾಡಲು ಹೋಗಿ ಜಲಪಾತದಲ್ಲಿ ಕೊಚ್ಚಿಹೋದ ಯೂಟ್ಯೂಬರ್ ! appeared first on Good News 24x7.

]]>
ಬಿಟ್ಟು ಬಿಡದೇ ಸುರಿಯುತ್ತಿರೋ ಮಳೆ.. ಜೀವ ಕೈಯಲ್ಲಿಡಿದು ದಿನ ಕಳೆಯುತ್ತಿರೋ ಜನ! https://www.goodnews24x7.com/the-rain-is-pouring-non-stop-people-are-spending-their-days-with-their-lives-in-their-hands/ Sun, 24 Aug 2025 05:54:08 +0000 https://www.goodnews24x7.com/?p=6613 ಮಳೆಯ ರೌದ್ರರೂಪಕ್ಕೆ ಬಿಹಾರದಲ್ಲಿ ಲೋಕೈನ್ ನದಿ ಉಕ್ಕಿ ಹರಿಯುತ್ತಿದೆ. ನದಿ ಉಕ್ಕಿ ಹರಿದ ಪರಿಣಾಮ, ನಳಂದದಲ್ಲಿನ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ನೋಡ ನೋಡುತ್ತಲೇ ಮನೆಗಳು ಕುಸಿದು ಹೋಗುತ್ತಿವೆ. ಉತ್ತರ ಭಾರತದಲ್ಲಿ ಸದ್ಯ ಮಳೆರಾಯನ ಅಬ್ಬರ ಜೋರಾಗಿದೆ. ಮಳೆಯ ರೌದ್ರ ನರ್ತನಕ್ಕೆ…

The post ಬಿಟ್ಟು ಬಿಡದೇ ಸುರಿಯುತ್ತಿರೋ ಮಳೆ.. ಜೀವ ಕೈಯಲ್ಲಿಡಿದು ದಿನ ಕಳೆಯುತ್ತಿರೋ ಜನ! appeared first on Good News 24x7.

]]>

ಮಳೆಯ ರೌದ್ರರೂಪಕ್ಕೆ ಬಿಹಾರದಲ್ಲಿ ಲೋಕೈನ್ ನದಿ ಉಕ್ಕಿ ಹರಿಯುತ್ತಿದೆ. ನದಿ ಉಕ್ಕಿ ಹರಿದ ಪರಿಣಾಮ, ನಳಂದದಲ್ಲಿನ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ನೋಡ ನೋಡುತ್ತಲೇ ಮನೆಗಳು ಕುಸಿದು ಹೋಗುತ್ತಿವೆ. ಉತ್ತರ ಭಾರತದಲ್ಲಿ ಸದ್ಯ ಮಳೆರಾಯನ ಅಬ್ಬರ ಜೋರಾಗಿದೆ. ಮಳೆಯ ರೌದ್ರ ನರ್ತನಕ್ಕೆ ಅಕ್ಷರಶಃ ತತ್ತರಿಸಿರುವ ರಾಜಸ್ಥಾನ, ಬಿಹಾರ, ಒಡಿಶಾಗಳಲ್ಲಿ ಜನ ಜೀವ ಕೈಯಲ್ಲಿ ಹಿಡಿದು ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ, ಬೆಳೆ, ರಸ್ತೆ ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗ್ತಿವೆ. ಮಳೆ, ತನ್ನ ರೌದ್ರ ಪ್ರತಾಪದಿಂದ ಉತ್ತರ ಭಾರತವನ್ನ ಹಿಂಡಿ ಹಿಪ್ಪೆ ಮಾಡ್ತಿದೆ. ವರುಣ ಅಬ್ಬರಕ್ಕೆ ಉತ್ತರ ಭಾರತ ನಲುಗಿ ಹೋಗ್ತಿದ್ದು, ರಾಜಸ್ತಾನ, ಒಡಿಶಾ ಹಾಗೂ ಬಿಹಾರದಲ್ಲಿ ಜನರ ಕಣ್ಣ ಮುಂದೆಯೇ ಆಸ್ತಿ-ಪಾಸ್ತಿಗಳು ನಾಶ ಆಗುತ್ತಿವೆ. ನಿರಂತರ ಮಳೆಯಿಂದಾಗಿ ರಾಜಸ್ಥಾನದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಟಾ, ಬುಂಡಿ, ಬರಾನ್ ಮತ್ತು ಸವಾಯಿ ಮಾಧೋಪುರ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸವಾಯಿ ಮಾಧೋಪುರ ಸಂಪೂರ್ಣ ಜಲಾವೃತವಾಗಿದ್ದು, ರಸ್ತೆಯಲ್ಲಿ ಬಸ್ ವಾಲಿಕೊಂಡು ನಿಂತಿದ್ದು, ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಮತ್ತೊಂದೆಡೆ ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣೆ ತೆರಳಿದ್ದ ಎನ್​ಡಿಆರ್​ಎಫ್​ ಸಿಬ್ಬಂದಿ ಇದ್ದ ಟ್ರ್ಯಾಕ್ಟರ್​ ಪಲ್ಟಿಯಾಗಿದೆ.

 

ಇನ್ನು ಭಾರೀ ಮಳೆಗೆ ಬುಂಡಿ ಪ್ರದೇಶ ಜಲಾವೃತವಾಗಿದ್ದು, ಜೈಪುರದ ಅಮೇರ್ ಕೋಟೆಯಲ್ಲಿ 200 ಅಡಿ ಉದ್ದದ ಗೋಡೆ ಕುಸಿತವಾಗಿದೆ. ಬಿಹಾರದಲ್ಲೂ ವರುಣನ ಅಬ್ಬರ.. ಉಕ್ಕಿ ಹರಿದ ಲೋಕೈನ್ ರಿವರ್ ಮಳೆಯ ರೌದ್ರರೂಪಕ್ಕೆ ಬಿಹಾರದಲ್ಲಿ ಲೋಕೈನ್ ನದಿ ಉಕ್ಕಿ ಹರಿಯುತ್ತಿದೆ. ನದಿ ಉಕ್ಕಿ ಹರಿದ ಪರಿಣಾಮ, ನಳಂದದಲ್ಲಿನ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ನೋಡ ನೋಡುತ್ತಲೇ ಮನೆಗಳು ಕುಸಿದು ಹೋಗ್ತಿವೆ. ನಗರದ ಪ್ರಮುಖ ರಸ್ತೆಗಳು ಕೊಚ್ಚಿಹೋಗಿ ಬೆಳೆಗಳು ನಾಶವಾಗಿವೆ. ಓಡಿಶಾದಲ್ಲೂ ವರುಣ ತನ್ನ ರೌದ್ರ ರೂಪ ಪ್ರದರ್ಶಿಸ್ತಿದ್ದಾನೆ. ಧಾರಾಕಾರ ಮಳೆಗೆ ಸಮಕೋಯ್​ ನದಿ ಪಾಯ ಮಟ್ಟ ಮೀರಿದೆ. ಇದ್ರಿಂದ ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದು, 13 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಉತ್ತರ ಭಾರರತ ಅಕ್ಷರಶಃ ತತ್ತರಿಸಿ ಹೋಗಿದೆ. ಪ್ರವಾಹದ ಭೀತಿ ಮಧ್ಯೆಯೇ ಜನರು ಬದುಕು ನಡೆಸುವಂತಾಗಿದೆ. ಇನ್ನೂ ಮಳೆ ಮುಂದುವರಿದ್ರೆ ಉತ್ತರ ಭಾರತದಲ್ಲಿ ಪ್ರವಾಹ ಅಪ್ಪಳಿಸಿದ್ರೂ ಅಚ್ಚರಿಯೇನಿಲ್ಲ.

The post ಬಿಟ್ಟು ಬಿಡದೇ ಸುರಿಯುತ್ತಿರೋ ಮಳೆ.. ಜೀವ ಕೈಯಲ್ಲಿಡಿದು ದಿನ ಕಳೆಯುತ್ತಿರೋ ಜನ! appeared first on Good News 24x7.

]]>