Operation Sindoor Archives - Good News 24x7 https://www.goodnews24x7.com/tag/operation-sindoor/ Kannada Sat, 10 May 2025 12:20:32 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Operation Sindoor Archives - Good News 24x7 https://www.goodnews24x7.com/tag/operation-sindoor/ 32 32 ಮಕ್ಕಳಿಗೆ ‘ಸಿಂಧೂರ’ ಎಂದು ಹೆಸರಿಡಲು ಪೋಷಕರ ಪೈಪೋಟಿ…. https://www.goodnews24x7.com/%e0%b2%ae%e0%b2%95%e0%b3%8d%e0%b2%95%e0%b2%b3%e0%b2%bf%e0%b2%97%e0%b3%86-%e0%b2%b8%e0%b2%bf%e0%b2%82%e0%b2%a7%e0%b3%82%e0%b2%b0-%e0%b2%8e%e0%b2%82%e0%b2%a6%e0%b3%81-%e0%b2%b9%e0%b3%86%e0%b2%b8/ Sat, 10 May 2025 12:20:32 +0000 https://www.goodnews24x7.com/?p=3816 ಮೇ 7 ರಂದು ಜನಿಸಿದ ಮಕ್ಕಳಿಗೆ ‘ಸಿಂಧೂರ’, ‘ಸಿಂಧೂರಿ’, ‘ಸಿಂಧೂ’ ಎಂದು ಹೆಸರಿಡಲು ದೇಶದ ವಿವಿಧೆಡೆ ಪೋಷಕರು ಪೈಪೋಟಿಗೆ ಬಿದ್ದಿದ್ದಾರೆ.ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ನೆಲೆಗಳ ಮೇಲೆ ಭಾರತದ ಸಶಸ್ತ್ರ ಪಡೆಗಳು ಮೇ 7ರಂದು ನಡೆಸಿದ್ದ ಕ್ಷಿಪಣಿ ದಾಳಿಗೆ…

The post ಮಕ್ಕಳಿಗೆ ‘ಸಿಂಧೂರ’ ಎಂದು ಹೆಸರಿಡಲು ಪೋಷಕರ ಪೈಪೋಟಿ…. appeared first on Good News 24x7.

]]>

ಮೇ 7 ರಂದು ಜನಿಸಿದ ಮಕ್ಕಳಿಗೆ ‘ಸಿಂಧೂರ’, ‘ಸಿಂಧೂರಿ’, ‘ಸಿಂಧೂ’ ಎಂದು ಹೆಸರಿಡಲು ದೇಶದ ವಿವಿಧೆಡೆ ಪೋಷಕರು ಪೈಪೋಟಿಗೆ ಬಿದ್ದಿದ್ದಾರೆ.ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ನೆಲೆಗಳ ಮೇಲೆ ಭಾರತದ ಸಶಸ್ತ್ರ ಪಡೆಗಳು ಮೇ 7ರಂದು ನಡೆಸಿದ್ದ ಕ್ಷಿಪಣಿ ದಾಳಿಗೆ ‘ಆಪರೇ ಷನ್ ಸಿಂಧೂರ್’ ಎಂದು ಹೆಸರಿಡಲಾಗಿತ್ತು. ಹೀಗಾಗಿ ಮೇ 7ರಂದು ಜನಿಸಿದ ಮಕ್ಕಳಿಗೆ ಇದಕ್ಕೆ ಸಾಮ್ಯವಿರುವ ಹೆಸರನ್ನಿ ಡಲು ಪೋಷಕರು ಮುಗಿಬಿದ್ದಿದ್ದಾರೆ.ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಕಾಂಟಿ ನಿವಾಸಿ ಸುಷ್ಮತಾ ದೇವಿ ಅವರು ಮೇ 7ರಂದು ಜನಿಸಿದ ತಮ್ಮ ಮೊಮ್ಮಗ ತಮ್ಮ ಮೊಮ್ಮಗ ನಿಗೆ ‘ಸಿಂಧೂರ’ ಎಂದು ಹೆಸರಿಟ್ಟಿದ್ದಾರೆ. ಮೊಮ್ಮಗ ಬೆಳೆದು ದೊಡ್ಡವನಾಗುತ್ತಿದ್ದಂತೆ ತನ್ನ ಹೆಸರಿನ ಹಿನ್ನೆಲೆ ತಿಳಿದುಕೊಳ್ಳುತ್ತಾನೆ ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿನ ಭಯೋತ್ಪಾದ ಕರ ನೆಲೆಗಳನ್ನು ಭಾರತ ನಾಶಪಡಿಸಲು ‘ಸಿಂಧೂರ್’ ಕಾರ್ಯಾಚರಣೆ ನಡೆಸಿದ ದಿನದಂದು ತಾನು ಹುಟ್ಟಿದ್ದು ಎಂಬುದನ್ನು ತಿಳಿದುಕೊಳ್ಳುವ ಮೂಲಕ, ತನ್ನ ಹೆಸರಿನ ಮಹತ್ವವನ್ನು ಅರಿಯುತ್ತಾನೆ. ನನ್ನ ಮೊಮ್ಮಗ ವಿದ್ಯಾಭ್ಯಾಸ ಮುಗಿಸಿದ ಬಳಿಕ ಸಮವಸ್ತ್ರ ಧರಿಸಿ ದೇಶಕ್ಕೆ ಸೇವೆ ಸಲ್ಲಿಸ ಬೇಕು ಎಂದು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.

The post ಮಕ್ಕಳಿಗೆ ‘ಸಿಂಧೂರ’ ಎಂದು ಹೆಸರಿಡಲು ಪೋಷಕರ ಪೈಪೋಟಿ…. appeared first on Good News 24x7.

]]>
ಭಾರತೀಯ ನಾರಿಯ ‘ಸಿಂಧೂರ’ ಮುಟ್ಟಿದವರು ಪುರಾಣದಲ್ಲೂ ಉಳಿದಿಲ್ಲ, ಈಗಲೂ ಉಳಿಯುವುದಿಲ್ಲ https://www.goodnews24x7.com/those-who-touched-the-sindoor-of-an-indian-woman-are-not-in-the-myth-and-will-not-remain-even-now/ Fri, 09 May 2025 11:14:57 +0000 https://www.goodnews24x7.com/?p=3755 ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ಹಿಂದೂಗಳ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆ ಮಾಡಿದ್ದರು. ಧರ್ಮ ಯಾವುದು ಎಂದು ಕೇಳಿ ಗುಂಡು ಹಾರಿಸಿ ಹಿಂದೂ ಮಹಿಳೆಯರ ಕುಂಕುಮವನ್ನು ಅಳಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತದ ಸೇನೆ ಪಾಕಿಸ್ತಾನದ 9 ಕಡೆ…

The post ಭಾರತೀಯ ನಾರಿಯ ‘ಸಿಂಧೂರ’ ಮುಟ್ಟಿದವರು ಪುರಾಣದಲ್ಲೂ ಉಳಿದಿಲ್ಲ, ಈಗಲೂ ಉಳಿಯುವುದಿಲ್ಲ appeared first on Good News 24x7.

]]>

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ಹಿಂದೂಗಳ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆ ಮಾಡಿದ್ದರು. ಧರ್ಮ ಯಾವುದು ಎಂದು ಕೇಳಿ ಗುಂಡು ಹಾರಿಸಿ ಹಿಂದೂ ಮಹಿಳೆಯರ ಕುಂಕುಮವನ್ನು ಅಳಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತದ ಸೇನೆ ಪಾಕಿಸ್ತಾನದ 9 ಕಡೆ ಉಗ್ರರ ನೆಲೆಗಳ ಮೇಲೆ ವಾಯು ದಾಳಿ ನಡೆಸಿದ್ದುಈ ದಾಳಿಗೆ “ಆಪರೇಷನ್ ಸಿಂಧೂರ್” ಎಂದು ಹೆಸರಿಡಲಾಗಿದೆ. ಇದು ಹಿಂದೂ ಪುರುಷರನ್ನು ಹೊಡೆದು ಅವರ ಹಿಂದೂ ಪುರುಷರನ್ನು ಪತ್ನಿಯರ ಕುಂಕುಮ ಅಳಿಸಿದವರ ಮೇಲೆ ತೀರಿಸಿಕೊಂಡ ಪ್ರತಿಕಾರವಾಗಿದೆ. ಭಾರತದಲ್ಲಿ ಹೆಣ್ಣನ್ನು ದೇವಿ ರೂಪದಲ್ಲಿ ಪೂಜೆ ಮಾಡಲಾಗುತ್ತದೆ. ಅಂತವರ ಮುತ್ತೈದೆ ಭಾಗ್ಯವನ್ನು ಕಿತ್ತುಕೊಂಡಿದ್ದು ಸಾಮಾನ್ಯ ವಿಷಯವಲ್ಲ. ನಮ್ಮ ಇತಿಹಾಸ ಪುಟ ತಿರುವಿ ನೋಡಿದರೂ ಕೂಡ ಹೆಣ್ಣಿನ ಕಣ್ಣೀರಿನ ಮುಂದೆ ಯಾರೂ ಗೆದ್ದಿಲ್ಲ. ಹೆಣ್ಣಿನ ಶಕ್ತಿಯೇ ಅಂತದ್ದು. ಅದರಲ್ಲಿ ಅವರ ಸೌಭಾಗ್ಯವನ್ನು ಅವರ ಮುಂದೆಯೇ ಕಿತ್ತುಕೊಂಡವರನ್ನು ಬಿಟ್ಟಿತೇ?

ಭಾರತೀಯ ನಾರಿಗೆ ಸಿಂಧೂರ ಅಥವಾ ಕುಂಕುಮ ಕೇವಲ ನೆತ್ತಿಯ ಮೇಲೆ ಅಥವಾ ಹಣೆ ಮೇಲಿಡುವ ಬಣ್ಣವಲ್ಲ. ಅದು ಆಕೆಯ ಶಕ್ತಿ. ಮದುವೆಯ ಸಮಯದಲ್ಲಿ ಇಟ್ಟ ಸಿಂಧೂರ ಕೊನೆಯವರೆಗೂ ಅವಳೊಂದಿಗೆ ಇರಬೇಕು ಎಂಬುದು ಪದ್ಧತಿ. ಇದರಿಂದ ಮಹಿಳೆಗೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳು ಕೂಡ ಲಭಿಸುತ್ತದೆ. ಆದರೆ ಇದೆಲ್ಲದರ ಹೊರತಾಗಿ ಸಿಂಧೂರ ಸ್ತ್ರೀ ಶಕ್ತಿಯ ಸಂಕೇತ. ಬೆಂಕಿ, ರಕ್ತ ಮತ್ತು ಶಕ್ತಿಯ ಬಣ್ಣ, ಆಕೆಯನ್ನು ಶಕ್ತಿ ಸ್ವರೂಪಿಯಾಗಿ ಗೌರವಿಸಬೇಕು ಎಂಬುದರ ಸಂಕೇತ. ಅವಳನ್ನು ಕೆಣಕಿದರೆ ತನ್ನ ತಾಯ್ನಾಡನ್ನು ರಕ್ಷಿಸಲು ಬೆಂಕಿಯ ಕಿಡಿಯಾಗಬಹುದು ಅಥವಾ ಮೃದುವಾದ ಹೂವು ಆಗಬಹುದು.

ಪುರಾಣ ಮತ್ತು ಸಿಂಧೂರದ ಐತಿಹಾಸ ಈಗಿನದಲ್ಲ
ಇನ್ನು, ನಮ್ಮ ಹಿಂದೂ ಪುರಾಣಗಳಲ್ಲಿ, ಸಿಂಧೂರವು ಅಗಾಧವಾದ ಸಂಕೇತಗಳನ್ನು ಹೊಂದಿದೆ. ದಂತಕಥೆಗಳ ಪ್ರಕಾರ, ಶಿವನ ಪತ್ನಿ ಪಾರ್ವತಿ, ಕೃಷ್ಣನ ಪತ್ನಿ ರುಕ್ಮಿಣಿ, ರಾಮನ ಪತ್ನಿ ಸೀತೆ ಹೀಗೆ ಮುತ್ತೈದೆಯರು ತಮ್ಮ ಹಣೆಯ ಮೇಲೆ ಯಾವಾಗಲೂ ಸಿಂಧೂರವಿಡುತ್ತಿದ್ದರು ಎಂಬ ನಂಬಿಕೆ ಇದೆ. ಈ ಕ್ರಮ ಗಂಡನ ಆಯುಷ್ಯ, ಆರೋಗ್ಯವನ್ನು ಹೆಚ್ಚಿಸುವುದರ ಸಂಕೇತವಾಗಿದೆ. ಇದರಿಂದ ದೀರ್ಘ ಮತ್ತು ಆನಂದದಾಯಕ ವೈವಾಹಿಕ ಜೀವನ ಸಿಗುತ್ತದೆ. ಜೊತೆಗೆ ದಂಪತಿಗಳಿಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಮತ್ತು ದುಷ್ಟ ಶಕ್ತಿಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂಬುದರ ಪ್ರತೀಕವಾಗಿದೆ.
ಸೀತೆಯನ್ನು ಅಪಹರಿಸಿದ ರಾವಣನಿಗೆ, ದ್ರೌಪದಿಯ ಸೀರೆ ಎಳೆದ ದುಶ್ಯಾಸನಿಗೆ ಕ್ಷಣಿಕ ಜಯ ಸಿಕ್ಕರೂ ಸಹ ಊಹೆಗೂ ನಿಲುಕದ ಸೋಲು ಪ್ರಾಪ್ತವಾಗಿತ್ತು. ಇದೇ ರೀತಿ ಕಲಿಯುಗದಲ್ಲಿಯೂ ಹೆಣ್ಣಿಗೆ ಅನ್ಯಾಯವಾಗಿದೆ. ಹಿಂದೆ ಹೆಣ್ಣಿಗೆ ಅವಮಾನ ಮಾಡಿಯೇ ಉಳಿದಿಲ್ಲ ಎಂದ ಮೇಲೆ ಹೆಣ್ಣಿನ ಸೌಭಾಗ್ಯವನ್ನೇ ಕಿತ್ತುಕೊಂದವರು ಉಳಿದಾರೆಯೇ?…

The post ಭಾರತೀಯ ನಾರಿಯ ‘ಸಿಂಧೂರ’ ಮುಟ್ಟಿದವರು ಪುರಾಣದಲ್ಲೂ ಉಳಿದಿಲ್ಲ, ಈಗಲೂ ಉಳಿಯುವುದಿಲ್ಲ appeared first on Good News 24x7.

]]>
ಆಪರೇಷನ್ ಸಿಂಧೂರ್ ಬಳಿಕ, ಸಿಂಧೂರದ ಅರ್ಥ ಹುಡುಕಿದ ಪಾಕಿಸ್ಥಾನಿಯರು!!! https://www.goodnews24x7.com/%e0%b2%86%e0%b2%aa%e0%b2%b0%e0%b3%87%e0%b2%b7%e0%b2%a8%e0%b3%8d-%e0%b2%b8%e0%b2%bf%e0%b2%82%e0%b2%a7%e0%b3%82%e0%b2%b0%e0%b3%8d-%e0%b2%ac%e0%b2%b3%e0%b2%bf%e0%b2%95-%e0%b2%b8%e0%b2%bf%e0%b2%82/ Thu, 08 May 2025 11:36:50 +0000 https://www.goodnews24x7.com/?p=3733 ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ನಡೆದ ಉಗ್ರರ ದಾಳಿ ಬಳಿಕ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತದ ಸೇನೆಯ ಆಪರೇಷನ್ ಸಿಂಧೂರ್ ನಡೆಸಿ, ಒಟ್ಟು 9 ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಹೌದು, ಭಾರತವು ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಂತೆ ಪಾಕಿಸ್ತಾನಿಯರು…

The post ಆಪರೇಷನ್ ಸಿಂಧೂರ್ ಬಳಿಕ, ಸಿಂಧೂರದ ಅರ್ಥ ಹುಡುಕಿದ ಪಾಕಿಸ್ಥಾನಿಯರು!!! appeared first on Good News 24x7.

]]>

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ನಡೆದ ಉಗ್ರರ ದಾಳಿ ಬಳಿಕ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತದ ಸೇನೆಯ ಆಪರೇಷನ್ ಸಿಂಧೂರ್ ನಡೆಸಿ, ಒಟ್ಟು 9 ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಹೌದು, ಭಾರತವು ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಂತೆ ಪಾಕಿಸ್ತಾನಿಯರು ಗೂಗಲ್ ನಲ್ಲಿ ಈ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಪಾಕಿಸ್ತಾನಿಯರು ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದು ಏನು? ಗೂಗಲ್ ನಲ್ಲಿ ಟ್ರೆಂಡ್ ಆಗುತ್ತಿರುವುದೇನು? ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯೂ ಆಪರೇಷನ್ ಸಿಂಧೂರ ಹೆಸರಿನಲ್ಲಿ ದಾಳಿ ನಡೆಸಿ ತಿರುಗೇಟು ನೀಡಿದೆ. ಹೌದು, ಮಂಗಳವಾರ ತಡರಾತ್ರಿ 1.30 ರ ಸುಮಾರಿಗೆ ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕ್ಷಿಪಣಿ ದಾಳಿ ನಡೆಸಿದ್ದು, ತಮ್ಮವರನ್ನು ಕೊ*ದ ಪಾಕ್ ಉಗ್ರರಿಗೆ ಸರಿಯಾದ ಉತ್ತರ ನೀಡಿದೆ. ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕ್ಷಿಪಣಿ ದಾಳಿ ನಡೆಸಿದ್ದು, ಪಾಕ್‌ ಜನತೆಯೂ ಈ ದಾಳಿಯಿಂದ ಬೆಚ್ಚಿ ಬಿದ್ದಿದ್ದು ಸದ್ಯಕ್ಕಂತೂ ಪಾಕಿಸ್ತಾನಿಯರು ಗೂಗಲ್ ನಲ್ಲಿ ಸಿಂಧೂರ ಹೆಸರಿನ ಅರ್ಥವೇನು ಎನ್ನುವ ಬಗ್ಗೆ ಹುಡುಕಾಟ ನಡೆಸಿದ್ದಾರೆ.

ಹೌದು, ಪಾಕಿಸ್ತಾನಿಯರು ಗೂಗಲ್ ನಲ್ಲಿ ಆಪರೇಷನ್ ಸಿಂಧೂರ್, ಆಪರೇಷನ್ ಸಿಂಧೂರ್ ವಿಕಿ, ಇಂಡಿಯಾ ಆಪರೇಷನ್ ಸಿಂಧೂರ್, ಸಿಂಧೂರ್ ಅಟ್ಯಾಕ್, ಭಾರತದ ಕ್ಷಿಪಣಿ ದಾಳಿ, ಆಪರೇಷನ್ ಸಿಂಧೂರ್ ಎಂದರೇನು? ಬಿಳಿಧ್ವಜ, ಪಾಕಿಸ್ತಾನದ ಮೇಲೆ ಭಾರತದ ದಾಳಿ, ವಾಯುದಾಳಿ, ಭಾರತೀಯ ಸೇನೆ ಈ ಕೆಲವು ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದಾರೆ.ಅದಲ್ಲದೆ, ಈ ಪಾಕ್ ಪ್ರಜೆಗಳು ʻಸಿಂಧೂರ ಎಂದರೇನು ಎನ್ನುವ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡು ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಉಳಿದಂತೆ ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪ್ರತೀಕಾರ ತೀರಿಸಿಕೊಂಡಿದ್ದು, ಪಾಕಿಸ್ತಾನ ಸೇನೆಯ ಕಾರ್ಯಾಚರಣೆಯ ಬಗ್ಗೆ ಹುಡುಕಾಟ ನಡೆಸಿರುವುದು ಗೂಗಲ್ ಟ್ರೆಂಡ್ ನಲ್ಲಿ ತಿಳಿದು ಬಂದಿದೆ.

The post ಆಪರೇಷನ್ ಸಿಂಧೂರ್ ಬಳಿಕ, ಸಿಂಧೂರದ ಅರ್ಥ ಹುಡುಕಿದ ಪಾಕಿಸ್ಥಾನಿಯರು!!! appeared first on Good News 24x7.

]]>
‘ಸಿಂಧೂರ-ರಾಮಯ್ಯ’ ಆದ ಸಿಎಂ ಸಿದ್ದರಾಮಯ್ಯ! https://www.goodnews24x7.com/cm-siddaramaiah-becomes-sindoor-ramaiah/ Wed, 07 May 2025 12:43:57 +0000 https://www.goodnews24x7.com/?p=3703 ಬೆಂಗಳೂರು : ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಸರ್ಕಾರದಿಂದ ಉಗ್ರದ ಶಿಬಿರಗಳನ್ನು ಗುರಿಯಾಗಿಸಿಕೊಂಡು 9 ಉಗ್ರ ನೆಲೆಗಳ ಮೇಲೆ ಬಾಂಬ್ ಹಾಕಿ ಛಿದ್ರಗೊಳಿಸಿದೆ. ಇದರ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವುದಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣೆಗೆ ಸಿಂಧೂರ ಇಟ್ಟುಕೊಂಡು ಬಂದಿದ್ದಾರೆ. ಇದನ್ನು…

The post ‘ಸಿಂಧೂರ-ರಾಮಯ್ಯ’ ಆದ ಸಿಎಂ ಸಿದ್ದರಾಮಯ್ಯ! appeared first on Good News 24x7.

]]>

ಬೆಂಗಳೂರು : ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಸರ್ಕಾರದಿಂದ ಉಗ್ರದ ಶಿಬಿರಗಳನ್ನು ಗುರಿಯಾಗಿಸಿಕೊಂಡು 9 ಉಗ್ರ ನೆಲೆಗಳ ಮೇಲೆ ಬಾಂಬ್ ಹಾಕಿ ಛಿದ್ರಗೊಳಿಸಿದೆ. ಇದರ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವುದಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣೆಗೆ ಸಿಂಧೂರ ಇಟ್ಟುಕೊಂಡು ಬಂದಿದ್ದಾರೆ. ಇದನ್ನು ನೋಡಿದ ಜನರು ಆಪರೇಷನ್ ಸಿಂಧೂರ ಸುದ್ದಿಗೋಷ್ಠಿಗೆ ನಮ್ಮ ಸಿಎಂ ಸಿಂಧೂರ-ರಾಮಯ್ಯ ಆಗಿದ್ದಾರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಸುದ್ದಿಗೋಷ್ಠಿ ಆರಂಭದ ಬೆನ್ನಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಧ್ಯಮಗಳಿಂದ ನೀವು ಹಣೆಗೆ ಸಿಂಧೂರ ಇಟ್ಟುಕೊಂಡು ಬಂದಿರುವ ಉದ್ದೇಶವೇನು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ನಾನು ಪಟಾಲಮ್ಮ ದೇವಾಲಯಕ್ಕೆ ಹೋಗಿದ್ದೆ. ಅಲ್ಲಿ ದೇವರ ದರ್ಶನ ಮಾಡಿದ ನಂತರ ಸಿಂಧೂರ ಇಟ್ಟುಕೊಂಡು ಬಂದಿದ್ದೇನೆ ಎಂದು ಹೇಳಿ ಈ ವಿಚಾರವನ್ನು ಅಲ್ಲಿಗೆ ಮೊಟಕುಗೊಳಿಸಿದರು. ಈ ಬಗ್ಗೆ ಇನ್ನೂ ಪ್ರಶ್ನೆ ಕೇಳುವುದಕ್ಕೆ ಅವಕಾಶ ಇಲ್ಲದಂತೆ ಸುದ್ದಿಗೋಷ್ಠಿಯ ವಿಚಾರಗಳನ್ನು ಮುಂದುವರೆಸಿದರು.

ಸಿದ್ದರಾಂಯ್ಯ ಅವರು ಸುದ್ದಿಗೋಷ್ಠಿ ಆರಂಭ ಆಗುತ್ತಿದ್ದಂತೆ ಕೆಲವರು ತಮ್ಮ ಸಾಮಾಜಿಕ ಜಾಲತಾಣಲದಲ್ಲಿ ಈ ಬಗ್ಗೆ ಟೀಕೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಇಂದು ಹಣೆಗೆ ಅತ್ಯಂತ ದೊಡ್ಡ ಸಿಂಧೂರವನ್ನು ಇಟ್ಟುಕೊಂಡಿದ್ದಾರೆ. ಹಿಂದುಗಳನ್ನು ಓಲೈಸಲು ಹಣೆಗೆ ಸಿಂಧೂರ ಇಟ್ಟು ಮುಂದಿನ ಎಲೆಕ್ಷನ್ನಿಗೆ ಸಿದ್ದರಾಮಯ್ಯ ರೆಡಿ ಆಗುತ್ತಿದ್ದಾರೆ ಎಂಬ ಮಾತುಗಳನ್ನು ಕೆಲವರು ಹೇಳಿದ್ದಾರೆ. ಈ ಸಿದ್ದರಾಮಯ್ಯ ಅವರ ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ಗಳನ್ನು ಮಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಂಟ ನೆಟ್ಟಿಗರು, ‘ಸಿಂಧೂರ ರಾಮಯ್ಯ ಅತ್ಯುತ್ತಮ ದಿನವು ಇಟ್ಟುಕೊಳ್ಳಿ ಸಿಂಧೂರ ಬಂಡಾರ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಅತೀ ಭಾರವಾದ ಹೃದಯದಿಂದ ಯೋಧರ ಸಾಧನೆಯನ್ನು ಬಣ್ಣಿಸಿದಂತೆ ಆಗಿದೆ. ಇದೇನು ಶ್ಲಾಘನೆಯೋ ಅಥವಾ ಶೋಕ ಸಂದೇಶವೊ ಎಂದು ತಿಳಿಯುವದಿಲ್ಲ’ ಎಂದು ಹೇಳಿದ್ದಾರೆ. ಇನ್ನೊಬ್ಬರು ‘ನಿಮ್ಮ ಹಣೆಯಲ್ಲಿರುವ ಸಿಂಧೂರ ನೋಡಿ ನಗು ಬಂತು ಜೈ ಹಿಂದ್ ಜೈ ಭಾರತ’ ಎಂದಿದ್ದಾರೆ. ಇನ್ನೊಬ್ಬರು ಆಪರೇಷನ್ ಸಿಂಧೂರ್ ಓಕೆ ಆದರೆ, ನಿಮ್ಮ ಹಣೆಯಲ್ಲಿ ಸಿಂಧೂರ ಯಾಕೇ???’ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ‘ಸಿದ್ದಣ್ಣ ಏನ್ ಕುಂಕುಮ ಇಟ್ಕೊಂಡಿದೀಯ ಒಂದ ಎರಡ-ನಿಮ್ ಅವತಾರಗಳು’ ಎಂದು ಟೀಕಿಸಿದ್ದಾರೆ.

ಸಿಂಧೂರ ಇಡಲು ವಿರೋಧಿಸಿದ್ದ ಸಿದ್ದರಾಮಯ್ಯ


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವು ಬಾರಿ ನಾನು ದೇವರನ್ನು ನಂಬುವುದಿಲ್ಲ, ಹಣೆಗೆ ಕುಂಕುಮ ಇಟ್ಟುಕೊಳ್ಳಲು ಭಯವಾಗುತ್ತದೆ ಎನ್ನುವ ಹೇಳಿಕೆ ಹೇಳಿದ್ದರು. ಈ ಹಿಂದೆ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಸಂದರ್ಭದಲ್ಲಿ ಅಲ್ಲಿನ ಕಾಮಗಾರಿ ಚಾಲನೆಗೆ ಹೋದ ವೇಳೆ ಪೂಜಾರಿಯೊಬ್ಬರು ಹಣೆಗೆ ಕುಂಕುಮ ಇಡಲು ಬಂದಾಗ, ‘ಬೇಡಪ್ಪ ಬೇಡ ನನಗೆ ಕುಂಕುಮ ಇಟ್ಟುಕೊಳ್ಳುವುದಕ್ಕೆ ಭಯ ಆಗುತ್ತದೆ’ ಎಂದು ಹೇಳಿದ್ದರು. ಆದರೆ, ಇದಾದ ನಂತರ ಸಿದ್ದರಾಮಯ್ಯ ಅವರು ಇದೀಗ ವರುಣ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಿಎಂ ಆಗಿದ್ದಾರೆ. ಕಳೆದ ವರ್ಷ ಸೆಪ್ಟಂಬರ್ನಲ್ಲಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಹಾಗೂ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗಿದ್ದ ವೇಳೆ ತಾವೇ ಹಣೆಗೆ ಕುಂಕುಮ ಧರಿಸಿಕೊಂಡು ಬಂದಿದ್ದರು. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಸ್ತಿಕರೋ, ನಾಸ್ತಿಕರೋ ಎನ್ನುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?
ಸೇನೆ ಉಗ್ರಗಾಮಿ ನೆಲೆ ನಾಶ ಮಾಡಿದೆ. ಪರಾಕ್ರಮ ಮೆರೆದಿದ್ದಾರೆ. ಸೈನಿಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಭಾರತದ ಸೇನೆ ಸಿಂಧೂರ ಆಪರೇಷನ್ ಮಾಡಿದೆ. 9 ಉಗ್ರಗಾಮಿ ನೆಲೆಗಳ ಮೇಲೆ ದಾಳಿಮಾಡಿದೆ. ಪಾಕಿಸ್ತಾನದವರಿಗೆ ಉಗ್ರಗಾಮಿ ಗಳು ಅಂತ ಗೊತ್ತಿದೆ. ಆದರೂ ಬೆಂಬಲಕೊಡ್ತಾ ಬಂದಿದ್ದಾರೆ. 26 ಅಮಾಯಕರನ್ನು ಉಗ್ರರು ಕೊಂದು ಹಾಕಿದ್ದರು. ಇವರನ್ನು ಸಾಕುವವರು ಪಾಕಿಸ್ತಾನದವರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಉಗ್ರರ ದಾಳಿ ಖಂಡಿಸುವ ಕೆಲಸ ಮಾಡಿಲ್ಲ. ಭಾರತದ ದಾಳಿಯನ್ನು ನಾನು ಬೆಂಬಲಿಸುವೆ. ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆ ಇದು. ಉಗ್ರರ ನೆಲೆಗಳ ಮೇಲೆ ಮಾತ್ರ ದಾಳಿ ನಡೆದಿದೆ. ಅಮಾಯಕರ ಸಾವು ಆಗದ ಹಾಗೆ ನೋಡಿಕೊಂಡಿದೆ. ಅದಕ್ಕಾಗಿ ಸೈನಿಕರ ಕಾರ್ಯದಕ್ಷತೆಗೆ ದೊಡ್ಡ ಸಲಾಂ. ಕೇಂದ್ರ ಸರ್ಕಾರದ ಪರವಾಗಿ ನಾನು ಬೆಂಬಲ ಘೋಷಣೆ ಮಾಡ್ತೇನೆ. ನಾವು ಎಲ್ಲರೂ ಎಚ್ಚರ ವಹಿಸುವ ಕೆಲಸ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆ ಮಾಡಿ, ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡುಸುವ ಕೆಲಸ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

The post ‘ಸಿಂಧೂರ-ರಾಮಯ್ಯ’ ಆದ ಸಿಎಂ ಸಿದ್ದರಾಮಯ್ಯ! appeared first on Good News 24x7.

]]>