Pakistani nationals Archives - Good News 24x7 https://www.goodnews24x7.com/tag/pakistani-nationals/ Kannada Sat, 10 May 2025 09:37:27 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Pakistani nationals Archives - Good News 24x7 https://www.goodnews24x7.com/tag/pakistani-nationals/ 32 32 ಮೈಸೂರು ಮೂಲದ ಪಾಕಿಸ್ತಾನದ ಮಹಿಳೆ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ನಲ್ಲಿ ವಜಾ. https://www.goodnews24x7.com/central-government-orders-pakistani-nationals-to-return-home-mysore-based-womans-petition-dismissed-in-high-court/ Sat, 10 May 2025 09:35:37 +0000 https://www.goodnews24x7.com/?p=3797 ಮೈಸೂರು : ಪಾಕಿಸ್ತಾನದ ವ್ಯಕ್ತಿಯನ್ನು ಮದುವೆಯಾಗಿರುವ ಮೈಸೂರು ಮೂಲದ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ಪಾಕಿಸ್ತಾನಕ್ಕೆ ವಾಪಸಾಗಲು ಬಲವಂತದ ಕ್ರಮ ಕೈಗೊಳ್ಳದೆ, ಭಾರತದಲ್ಲೇ ವಾಸ್ತವ್ವ ಮುಂದುವರೆಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.…

The post ಮೈಸೂರು ಮೂಲದ ಪಾಕಿಸ್ತಾನದ ಮಹಿಳೆ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ನಲ್ಲಿ ವಜಾ. appeared first on Good News 24x7.

]]>

ಮೈಸೂರು : ಪಾಕಿಸ್ತಾನದ ವ್ಯಕ್ತಿಯನ್ನು ಮದುವೆಯಾಗಿರುವ ಮೈಸೂರು ಮೂಲದ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ಪಾಕಿಸ್ತಾನಕ್ಕೆ ವಾಪಸಾಗಲು ಬಲವಂತದ ಕ್ರಮ ಕೈಗೊಳ್ಳದೆ, ಭಾರತದಲ್ಲೇ ವಾಸ್ತವ್ವ ಮುಂದುವರೆಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ. ಉಮಾ ನೇತೃತ್ವದ ರಜಾ ಕಾಲದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಕಾರಣವನ್ನು ಸ್ಪಷ್ಟಪಡಿಸಿದೆ ಮೈಸೂರಿನ ರಾಜೀವ್ ನಗರದ ರಂಷಾ ಜಹಾನ್, ಪಾಕಿಸ್ತಾನದ ಬಲೂಚಿಸ್ತಾನ ಮೂಲದ ಮೊಹ ಮೃದ್ ಫಾರೂಕ್ ಎಂಬಾತ ನನ್ನು ಕಳೆದ 10 ವರ್ಷದ ಹಿಂದೆ ಮದುವೆಯಾಗಿದ್ದರು. ರಂಷಾ ದಂಪತಿಗೆ ಕುಮಾರಿ ಬಿಬಿ ಯಾಮಿನಾ (8), ರಂಷಾ ಮೊಹಮ್ಮದ್ ಮುದಾಸೀರ್ (4) ಹಾಗೂ ಮೊಹಮ್ಮದ್ ಯೂಸುಫ್ (3) ಮಕ್ಕಳಿದ್ದಾರೆ. ಮೂವರು ಮಕ್ಕಳಿಗೆ ಪಾಕಿಸ್ತಾನದ ಪೌರತ್ವ ನೀಡಿದ್ದ ಅಲ್ಲಿನ ಸರ್ಕಾರ ರಂಷಾ ಜಹಾನ್ಗೆ ಪೌರತ್ವ ನೀಡಲು ನಿರಾಕರಿಸಿತ್ತು.

ಆದರೆ, ಪತಿ ಜೊತೆಗಿನ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರಂಷಾ ಮೂಮು ಮಕ್ಕಳೊಂದಿಗೆ ಜನಮ 24, 2025 ರಂದು ಭಾರತಕ್ಕೆ ಹಿಂತಿರುಗಿ ತವರು ಮನೆ ಸೇರಿದ್ದರು.
ಆದರೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕಿಸ್ತಾನದ ಭಯೋ ಜಹಾನ್ ತ್ಪಾದಕರು 26 ಪ್ರವಾಸಿಗರ ಮಾರಣ ಹೋಮ ನಡೆಸಿದ ನಂತರ ಭಾರತ ದಲ್ಲಿರುವ ಎಲ್ಲಾ ಪಾಕಿಸ್ತಾನದ ಪ್ರಜೆಗಳು ತಮ್ಮ ದೇಶಕ್ಕೆ ವಾಪಾಸಾಗಬೇಕೆಂದು ಕೇಂದ್ರ ಸರ್ಕಾರ ಕಟ್ಟಾಜ್ಞೆ ವಿಧಿಸಿತ್ತು.

ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಹೋಗದಂತೆ ತಮ್ಮ ವಿರುದ್ಧ ಬಲ ವಂತದ ಕ್ರಮ ಕೈಗೊಳ್ಳದೆ ಭಾರತದಲ್ಲೇ ವಾಸ್ತವ್ಯ ಮುಂದುವರೆಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಂಷಾ ಜಹಾನ್ ಮತ್ತು ಮಕ್ಕಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಆಕ್ಷೇಪಣೆ ಸಲ್ಲಿಸಿದ ಕೇಂದ್ರ ಸರ್ಕಾರದ ಪರ ವಕೀಲ ಡಿಎಸ್ ಜಿ ಶಾಂತಿ ಭೂಷಣ್, ರಂಷಾ ಅವರ ಅರ್ಜಿಗೆ ಮಾನ್ಯತೆ ನೀಡದಂತೆ ಮತ್ತು ಕೇಂದ್ರ ಸರ್ಕಾರದ ತೀರ್ಮಾನದ ಮಹತ್ವವನ್ನು ವಿವರಿಸಿದರು.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಎಂ.ಜಿ.ಉಮಾ, ರಂಷಾ ಮತ್ತು ಮೂವರು ಮಕ್ಕಳ ಅರ್ಜಿಯನ್ನು ವಜಾ ಗೊಳಿಸಿದರು. ಪಾಕಿಸ್ತಾನದ ಪ್ರಜೆಗಳ ವೀಸಾ ರದ್ದತಿ ಮಾಡಿ ಅವರ ದೇಶಕ್ಕೆ ಹೋಗುವಂತೆ ಏಪ್ರಿಲ್ 25 ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಭಾರತ ಒಕ್ಕೂಟವು ಭದ್ರತೆಯ ಕುರಿತಾದ ಸಂಪುಟ ಸಮಿತಿಯ ಮೂಲಕ ಭಾರತದ ಪ್ರಜೆಗಳ ಹಿತಾಸಕ್ತಿ ಕಾಪಾಡಲು ಪ್ರಜ್ಞಾಪೂರ್ವಕ ವಾದ ದಿಟ್ಟ ಕ್ರಮ ಕೈಗೊಂಡಿದೆ. ಈ ವಿಚಾರ ದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಲದೆ ಪಾಕಿಸ್ತಾನಕ್ಕೆ ಹೋಗದೆ ಭಾರತ ದಲ್ಲೇ ಇರಲು ನಿಮ್ಮ ಪರವಾಗಿ ಅನುಕೂಲ ಕರವಾದ ಆದೇಶ ನೀಡಲು ಯಾವುದೇ ಕಾರಣ ಸಿಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿ, ರಂಷಾ ಮತ್ತು ಮಕ್ಕಳ ಅರ್ಜಿಯನ್ನು ನ್ಯಾಯ ಮೂರ್ತಿ ಉಮಾ ವಜಾ ಮಾಡಿದ್ದಾರೆ.

The post ಮೈಸೂರು ಮೂಲದ ಪಾಕಿಸ್ತಾನದ ಮಹಿಳೆ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ನಲ್ಲಿ ವಜಾ. appeared first on Good News 24x7.

]]>