pandavapura Archives - Good News 24x7 https://www.goodnews24x7.com/tag/pandavapura/ Kannada Wed, 12 Nov 2025 08:24:43 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg pandavapura Archives - Good News 24x7 https://www.goodnews24x7.com/tag/pandavapura/ 32 32 ತಿಥಿ’ ಸಿನಿಮಾ ಖ್ಯಾತಿಯ ಗಡ್ಡಪ್ಪ ನಿ*ನ https://www.goodnews24x7.com/gaddappa-nina-of-thithi-movie-fame/ Wed, 12 Nov 2025 08:24:43 +0000 https://www.goodnews24x7.com/?p=8135 ಗಡ್ಡಪ್ಪ ಚನ್ನೇ ಗೌಡ ನಿ*ನ: ಗಡ್ಡಪ್ಪ ಅವರಿಗೆ ಕೆಲ ವರ್ಷಗಳ ಹಿಂದೆ ಪಾರ್ಶ್ವ ವಾಯು ಆಗಿತ್ತು. ಇದರಿಂದ ಚೇತರಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಚಿಕಿತ್ಸೆಗೂ ಅವರ ಬಳಿ ಹಣ ಇರಲಿಲ್ಲ. ಇದಲ್ಲದೆ ನಟನಿಗೆ ಹೃದಯ ಕಾಯಿಲೆ, ಕೆಮ್ಮು ಮತ್ತು ಉಬ್ಬಸ, ಶ್ರವಣದೋಷ ಮತ್ತು…

The post ತಿಥಿ’ ಸಿನಿಮಾ ಖ್ಯಾತಿಯ ಗಡ್ಡಪ್ಪ ನಿ*ನ appeared first on Good News 24x7.

]]>

ಗಡ್ಡಪ್ಪ ಚನ್ನೇ ಗೌಡ ನಿ*ನ: ಗಡ್ಡಪ್ಪ ಅವರಿಗೆ ಕೆಲ ವರ್ಷಗಳ ಹಿಂದೆ ಪಾರ್ಶ್ವ ವಾಯು ಆಗಿತ್ತು. ಇದರಿಂದ ಚೇತರಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಚಿಕಿತ್ಸೆಗೂ ಅವರ ಬಳಿ ಹಣ ಇರಲಿಲ್ಲ. ಇದಲ್ಲದೆ ನಟನಿಗೆ ಹೃದಯ ಕಾಯಿಲೆ, ಕೆಮ್ಮು ಮತ್ತು ಉಬ್ಬಸ, ಶ್ರವಣದೋಷ ಮತ್ತು ಇತರ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳು ಇದ್ದವು. ಸರಿಯಾಗಿ 10 ವರ್ಷಗಳ ಹಿಂದೆ ತೆರೆಗೆ ಬಂದು ಸೂಪರ್ ಹಿಟ್ ಆಗಿದ್ದ ಸಿನಿಮಾ ಎಂದರೆ ಅದು ‘ತಿಥಿ’. 2015ರಲ್ಲಿ ತೆರೆಗೆ ಬಂದ ಈ ಚಿತ್ರ ಮೆಚ್ಚುಗೆ ಪಡೆಯಿತು. ಹಲವು ಪ್ರಶಸ್ತಿಗಳನ್ನು ಕೂಡ ಬಾಚಿಕೊಂಡಿತು. ಈ ಸಿನಿಮಾದಲ್ಲಿ ಗಡ್ಡಪ್ಪ ಹೆಸರಿನ ಪಾತ್ರ ಮಾಡಿದ್ದ ಚನ್ನೇಗೌಡ ಅವರು ನಿಧನ ಹೊಂದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ‘ತಿಥಿ’ ಸಿನಿಮಾದಲ್ಲಿ ಅವರು ಮಾಡಿದ್ದ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು.

ಗಡ್ಡಪ್ಪ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೆ ಇಹಲೋಕದ ಪ್ರಯಾಣ ಮುಗಿಸಿದ್ದಾರೆ. ಗಡ್ಡಪ್ಪ ಅವರು ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದವರು. ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಪಾಂಡವಪುರಕ್ಕೆ ಹೋಗುವ ರಸ್ತೆಯಲ್ಲಿ ಈ ಊರು ಸಿಗುತ್ತದೆ. ಅವರು ‘ತಿಥಿ’ ಸಿನಿಮಾದಲ್ಲಿ ಗಡ್ಡಪ್ಪ ಹೆಸರಿನ ಪಾತ್ರ ಮಾಡಿ ಫೇಮಸ್ ಆದರು. ಎಲ್ಲರೂ ಅವರನ್ನು ಗಡ್ಡಪ್ಪ ಎಂದೇ ಗುರುತಿಸುತ್ತಿದ್ದರು. ಗಡ್ಡಪ್ಪ ಅವರಿಗೆ ಕೆಲ ವರ್ಷಗಳ ಹಿಂದೆ ಪಾರ್ಶ್ವ ವಾಯು ಆಗಿತ್ತು. ಇದರಿಂದ ಚೇತರಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಚಿಕಿತ್ಸೆಗೂ ಅವರ ಬಳಿ ಹಣ ಇರಲಿಲ್ಲ. ಇದಲ್ಲದೆ ನಟನಿಗೆ ಹೃದಯ ಕಾಯಿಲೆ, ಕೆಮ್ಮು ಮತ್ತು ಉಬ್ಬಸ, ಶ್ರವಣದೋಷ ಮತ್ತು ಇತರ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳು ಇದ್ದವು.

 

‘ಗಡ್ಡಪ್ಪ’ ಪಾತ್ರವನ್ನು ನೋಡಿ ಅನೇಕರು ಮೂಕವಿಸ್ಮಿತರಾದರು. ಅವರು ತಮ್ಮ ಸಹಜ ನಟನಾ ಕೌಶಲ್ಯದಿಂದ ಜನಪ್ರಿಯರಾದರು. ಆ ಬಳಿಕ ಹಲವು ಸಿನಿಮಾಗಳಲ್ಲಿ ಚನ್ನೇಗೌಡ ಅವರು ನಟಿಸಿದ್ದರು. ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದರೂ ಆರ್ಥಿಜವಾಗಿ ಸೃಧಡರಾಗಲು ಸಾಧ್ಯವಾಗಲೇ ಇಲ್ಲ.

The post ತಿಥಿ’ ಸಿನಿಮಾ ಖ್ಯಾತಿಯ ಗಡ್ಡಪ್ಪ ನಿ*ನ appeared first on Good News 24x7.

]]>
ಮಗಳನ್ನು ಕೊ*ದ ವ್ಯಕ್ತಿಯ ತಂದೆಯನ್ನು ಕೊ*ದ; ಮಗಳ ತಂದೆ!! https://www.goodnews24x7.com/%e0%b2%ae%e0%b2%97%e0%b2%b3%e0%b2%a8%e0%b3%8d%e0%b2%a8%e0%b3%81-%e0%b2%95%e0%b3%8a%e0%b2%a6-%e0%b2%b5%e0%b3%8d%e0%b2%af%e0%b2%95%e0%b3%8d%e0%b2%a4%e0%b2%bf%e0%b2%af-%e0%b2%a4%e0%b2%82%e0%b2%a6/ Thu, 08 May 2025 10:53:27 +0000 https://www.goodnews24x7.com/?p=3723 ಮಗಳ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಹ* ಮಾಡಿದ್ದ ಆರೋಪಿಯ ತಂದೆಯನ್ನು ಆಕೆಯ ತಂದೆ ಬರ್ಬರವಾಗಿ ಕೊ* ಮಾಡಿರುವ ಘಟನೆ ಮಂಡ್ಯಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿಯಲ್ಲಿ ನಡೆದಿದೆ. ಇದೇ ಗ್ರಾಮದ ನರಸಿಂಹೇಗೌಡ ಕೊ* ಮಾಡಿದ ವ್ಯಕ್ತಿ. ಅದೇ ಗ್ರಾಮದ ವೆಂಕಟೇಶ್ ಕೊ* ಆರೋಪಿ.ನರಸಿಂಹೇಗೌಡ…

The post ಮಗಳನ್ನು ಕೊ*ದ ವ್ಯಕ್ತಿಯ ತಂದೆಯನ್ನು ಕೊ*ದ; ಮಗಳ ತಂದೆ!! appeared first on Good News 24x7.

]]>

ಮಗಳ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಹ* ಮಾಡಿದ್ದ ಆರೋಪಿಯ ತಂದೆಯನ್ನು ಆಕೆಯ ತಂದೆ ಬರ್ಬರವಾಗಿ ಕೊ* ಮಾಡಿರುವ ಘಟನೆ ಮಂಡ್ಯಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿಯಲ್ಲಿ ನಡೆದಿದೆ. ಇದೇ ಗ್ರಾಮದ ನರಸಿಂಹೇಗೌಡ ಕೊ* ಮಾಡಿದ ವ್ಯಕ್ತಿ. ಅದೇ ಗ್ರಾಮದ ವೆಂಕಟೇಶ್ ಕೊ* ಆರೋಪಿ.ನರಸಿಂಹೇಗೌಡ ಅವರ ಪುತ್ರ ನಿತೀಶ್, ವೆಂಕಟೇಶ್ ಅವರ ಪುತ್ರಿ ದೀಪಿಕಾಳನ್ನು ಕೊ* ಮಾಡಿದ್ದ. ಮಗಳ ಸಾವಿಗೆ ಪ್ರತೀಕಾರವಾಗಿ ಆಕೆಯ ತಂದೆ ವೆಂಕಟೇಶ್ ಆರೋಪಿ ನಿತೀಶ್ನ ತಂದೆಯನ್ನು ಹ* ಮಾಡಿದ್ದಾನೆ. ಇದು ತಂದೆಯ ಆಕ್ರೋಶವನ್ನು ವ್ಯಕ್ತಪಡಿಸುತ್ತದೆ.

ಟೀಚರ್ ದೀಪಿಕಾ ಮತ್ತು ನಿತೀಶ್ ಇಬ್ಬರು ಸ್ನೇಹ ಹಾಗೂ ಸಲುಗೆಯಿಂದಿದ್ದರು. ಇದನ್ನು ಗಮನಿಸಿದ ದೀಪಿಕಾ ಗಂಡ ಹಾಗೂ ಕುಟುಂಬಸ್ಥರು ನಿತೀಶ್‌ಗೆ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ದೀಪಿಕಾ ಬಳಿ ಪ್ರಶ್ನಿಸಿದಾಗ ಆತ ನನಗೆ ತಮ್ಮ ಇದ್ದಂತೆ ಎಂದು ಹೇಳಿದ್ದಳು. ಕುಟುಂಬಸ್ಥರ ಎಚ್ಚರಿಕೆಯ ಬಳಿಕ ಇಬ್ಬರು ಅಂತರ ಕಾಯ್ದುಕೊಂಡಿದ್ದರು.ದೀಪಿಕಾ ಜೊತೆ ಒಡನಾಟವಿಲ್ಲದೇ ನಿತೀಶ್ ಕೋಪಗೊಂಡಿದ್ದ. ಬಳಿಕ 2024 ಜ. 22ರಂದು ನಿತೀಶ್ ಬರ್ತ್ಡೇ ನೆಪದಲ್ಲಿ ದೀಪಿಕಾಳನ್ನು ಬೆಟ್ಟದ ತಪ್ಪಲಿಗೆ ಕರೆಸಿಕೊಂಡಿದ್ದ. ದೀಪಿಕಾ ಆತನಿಗೆ ಶರ್ಟ್ ಗಿಫ್ಟ್ ಕೊಡಲು ಹೋಗಿದ್ದಳು. ಈ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿ, ಕೊ*ಯಲ್ಲಿ ಅಂತ್ಯವಾಗಿತ್ತು. ಮಂಡ್ಯ ಪೊಲೀಸರು ಕೊ* ಆರೋಪಿ ನಿತೀಶ್‌ನನ್ನು ಬಂಧಿಸಿದ್ದರು.

ಜೈಲು ಸೇರಿದ್ದ ನಿತೀಶ್ ಜಾಮೀನಿನ ಮೇಲೆ ಹೊರ ಬಂದಿದ್ದ. ತನ್ನ ಮಗಳನ್ನು ಕೊ* ಮಾಡಿದ್ದ ನಿತೀಶ್‌ನನ್ನು ಹೇಗಾದರೂ ಮಾಡಿ ಕೊ* ಮಾಡಬೇಕೆಂದು ದೀಪಿಕಾ ತಂದೆ ವೆಂಕಟೇಶ್ ಹೊಂಚು ಹಾಕುತ್ತಿದ್ದ. ಇದೇ ಭಾನುವಾರ ಧರ್ಮಸ್ಥಳದಲ್ಲಿ ನಿತೀಶ್ ತಂಗಿ ಮದುವೆ ನಿಶ್ಚಯವಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ವೆಂಕಟೇಶ್ ನಿತೀಶ್ ತಂದೆ ನರಸಿಂಹೇಗೌಡರನ್ನ ಚಾಕುವಿನಿಂದ ಇರಿದು ಕೊ* ಮಾಡಿದ್ದಾನೆ. ಕೊ* ಮಾಡುವ ವೇಳೆ ನನ್ನ ಮಗಳನ್ನು ಕೊ* ಮಾಡಿ ನಿನ್ನ ಮಗಳ ಮದುವೆ ಮಾಡ್ತಾ ಇದ್ದೀರಾ ಎಂದು ಭೀಕರವಾಗಿ ಹ* ಮಾಡಿ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಮೇಲುಕೋಟೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೊ* ಆರೋಪಿ ವೆಂಕಟೇಶ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

 

The post ಮಗಳನ್ನು ಕೊ*ದ ವ್ಯಕ್ತಿಯ ತಂದೆಯನ್ನು ಕೊ*ದ; ಮಗಳ ತಂದೆ!! appeared first on Good News 24x7.

]]>
ದಕ್ಷಿಣ ಡೈರಿ ಶೃಂಗಸಭೆ-2025 ರ ‘ಅತ್ಯುತ್ತಮ ಹೈನುಗಾರ್ತಿ’ ಪ್ರಶಸ್ತಿ ಸ್ವೀಕರಿಸಿದ ಪಾಂಡವಪುರದ ರೈತ ಮಹಿಳೆ ಮಂಗಳಮ್ಮ. https://www.goodnews24x7.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%a1%e0%b3%88%e0%b2%b0%e0%b2%bf-%e0%b2%b6%e0%b3%83%e0%b2%82%e0%b2%97%e0%b2%b8%e0%b2%ad%e0%b3%86-2025-%e0%b2%b0-%e0%b2%85%e0%b2%a4%e0%b3%8d/ Mon, 13 Jan 2025 06:32:20 +0000 https://www.goodnews24x7.com/?p=1734 ಪಾಂಡವಪುರ :- ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಡಿಂಕ ಗ್ರಾಮದ ಅವಿದ್ಯಾವಂತ ರೈತ ಮಹಿಳೆಯೋರ್ವರು ಹೈನುಗಾರಿಕೆಯಿಂದಲೇ ಸಾಧನೆಗೈದು ಶನಿವಾರ ಬೆಂಗಳೂರಿನಲ್ಲಿ ನಡೆದ ದಕ್ಷಿಣ ಡೈರಿ ಶೃಂಗಸಭೆಯಲ್ಲಿ ‘ಅತ್ಯುತ್ತಮ ಹೈನು ಗಾರ್ತಿ’ ಪ್ರಶಸ್ತಿ ಸ್ವೀಕರಿಸಿದರು. ಭಾರತೀಯ ಡೈರಿ ಅಸೋಸಿಯೇಷನ್, ದಕ್ಷಿಣ ವಲಯ ಆಯೋಜಿಸಿದ್ದ…

The post ದಕ್ಷಿಣ ಡೈರಿ ಶೃಂಗಸಭೆ-2025 ರ ‘ಅತ್ಯುತ್ತಮ ಹೈನುಗಾರ್ತಿ’ ಪ್ರಶಸ್ತಿ ಸ್ವೀಕರಿಸಿದ ಪಾಂಡವಪುರದ ರೈತ ಮಹಿಳೆ ಮಂಗಳಮ್ಮ. appeared first on Good News 24x7.

]]>

ಪಾಂಡವಪುರ :- ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಡಿಂಕ ಗ್ರಾಮದ ಅವಿದ್ಯಾವಂತ ರೈತ ಮಹಿಳೆಯೋರ್ವರು ಹೈನುಗಾರಿಕೆಯಿಂದಲೇ ಸಾಧನೆಗೈದು ಶನಿವಾರ ಬೆಂಗಳೂರಿನಲ್ಲಿ ನಡೆದ ದಕ್ಷಿಣ ಡೈರಿ ಶೃಂಗಸಭೆಯಲ್ಲಿ ‘ಅತ್ಯುತ್ತಮ ಹೈನು ಗಾರ್ತಿ’ ಪ್ರಶಸ್ತಿ ಸ್ವೀಕರಿಸಿದರು.
ಭಾರತೀಯ ಡೈರಿ ಅಸೋಸಿಯೇಷನ್, ದಕ್ಷಿಣ ವಲಯ ಆಯೋಜಿಸಿದ್ದ ದಕ್ಷಿಣ ಡೈರಿ ಶೃಂಗಸಭೆ-2025ರ ಅಂತಿಮ ದಿನವಾದ ಶನಿ ವಾರದಂದು ದಕ್ಷಿಣ ಭಾರತದ ಮಹಿಳಾ ಡೈರಿ ರೈತರ ಶ್ರಮವನ್ನು ಪುರಸ್ಕರಿಸಿ ರಾಜ್ಯವಾರು 2024ರ ‘ಅತ್ಯುತ್ತಮ ಹೈನುಗಾರ್ತಿ’ ಪ್ರಶಸ್ತಿ ಪ್ರದಾನ ಮಾಡಿದ್ದು, ಕರ್ನಾಟಕದಿಂದ ಪಾಂಡವ ಪುರ ತಾಲೂಕಿನ ಡಿಂಕ ಗ್ರಾಮದ ಮಂಗಳಮ್ಮ ಈ ಪ್ರಶಸ್ತಿ ಪಡೆದರೆ, ಆಂಧ್ರಪ್ರದೇಶದಿಂದ ನವೀನಕುಮಾರಿ, ಕೇರಳ ಮತ್ತು ಲಕ್ಷದ್ವೀಪ ದಿಂದ ವಿಧು ರಾಜೀವ್, ತೆಲಂಗಾಣದಿಂದ ಪುಧಾರಿ ಗಂಗವ್ವ ಮತ್ತು ಪುದುಚೇರಿಯಿಂದ ಸೆಲ್ವನಾಯಕಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡ ಲಾಯಿತು. ಈ ಸಮಾರಂಭದಲ್ಲಿ ರಾಜ್ಯದ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಾಧಕ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಪಾಂಡವಪುರ ತಾಲೂಕು ಡಿಂಕ ಗ್ರಾಮದ ಮಹದೇವಪ್ಪ ಅವರ ಪತ್ನಿ ಮಂಗಳಮ್ಮ ಓದಿದ್ದು ಕೇವಲ 5ನೇ ತರಗತಿ. ಆದರೆ ತಮಗಿದ್ದ 2 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಾ ಸುಮಾರು 20 ವರ್ಷಗಳ ಹಿಂದೆ ಒಂದು ಹಸುವನ್ನು ಸಾಕಲಾರಂಭಿಸಿದರು. ನಂತರ ಹಂತ-ಹಂತವಾಗಿ ಈಗ 30 ಹಸು ಗಳಿರುವ ಫಾರಂ ಅನ್ನೇ ತಮ್ಮ ಜಮೀನಿನಲ್ಲಿ ಸ್ಥಾಪಿಸಿದ್ದಾರೆ. ಅಲ್ಲದೇ ಅದೇ ಜಮೀನಿನ
ಪ್ರಶಸ್ತಿ ಸ್ವೀಕರಿಸಿದ ನಂತರ ಡಿಂಕ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಹಾಗೂ ಇನ್ನಿತರರೊಂದಿಗೆ ಬಹುಮಾನ ಚೆಕ್ ಪ್ರದರ್ಶಿಸುತ್ತಿರುವ ಮಂಗಳಮ್ಮಒಂದು ಭಾಗದಲ್ಲಿ ಹಸಿಗಳಿಗೆ ಮೇವು ಬೆಳೆಸುತ್ತಿದ್ದಾರೆ. ಡಿಂಕ ಗ್ರಾಮದ ಹಾಲು ಉತ್ಪಾದಕರ ಸಹ ಕಾರಿ ಸಂಘದ ಸದಸ್ಯರಾಗಿರುವ ಮಂಗಳಮ್ಮ 2024ನೇ ವರ್ಷದಲ್ಲಿ ಡೈರಿಗೆ 1,01,915 ಲೀಟರ್ ಹಾಲು ಸರಬರಾಜು ಮಾಡಿ 33 ಲಕ್ಷ ರೂ. ಆದಾಯ ಗಳಿಸುವ ಮೂಲಕ ಹೈನುಗಾರಿಕೆಯಲ್ಲಿ ಸಾಧನೆ ಮಾಡಿ ದಕ್ಷಿಣ ಡೈರಿ ಶೃಂಗಸಭೆಯಲ್ಲಿ ಅತ್ಯುತ್ತಮ ಹೈನುಗಾರ್ತಿ ಪ್ರಶಸ್ತಿ ಪಡೆದಿದ್ದಾರೆ.
ಈಕೆ ಅವಿದ್ಯಾವಂತೆಯಾದರೂ, ಹಾಲು ಮಾರಿದ ಹಣದಲ್ಲೇ ತಮ್ಮ ಪುತ್ರ ದಿನೇಶ್ ನನ್ನು ಐಟಿಐವರೆಗೆ ಓದಿಸಿದ್ದಲ್ಲದೇ, ಪುತ್ರಿ ದಿವ್ಯಾರನ್ನು ಇಂಜಿನಿಯರಿಂಗ್ ಪದವೀಧರೆ ಮಾಡಿದ್ದಾರೆ. ಈಗ ಐಟಿಐ ಓದಿರುವ ದಿನೇಶ್ ಅವರು ತನ್ನ ತಂದೆ ಮತ್ತು ತಾಯಿಗೆ ಹಸುಗಳ ಫಾರಂನಲ್ಲಿ ಸಹಾಯಕರಾಗಿದ್ದು, ಹೈನುಗಾರಿಕೆಯಲ್ಲಿ ತಾಯಿಯ ಜೊತೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಡಿಂಕ ಗ್ರಾಮದ ಮಂಗಳಮ್ಮ ಅವರು ತಮ್ಮ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜಿಲ್ಲೆಯಲ್ಲಿಯೇ ಹೆಚ್ಚು ಪ್ರಮಾಣದ ಹಾಲು ಸರಬರಾಜು ಮಾಡುವ ಮೂಲಕ ಕಳೆದ ವರ್ಷ 33 ಲಕ್ಷ ರೂ. ಸಂಪಾದನೆ ಮಾಡುವ ಮೂಲಕ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮಪಡಿಸಿಕೊಂಡಿದ್ದು ಮಾತ್ರವಲ್ಲದೆ, ದಕ್ಷಿಣ ಡೈರಿ ಶೃಂಗ ಸಭೆಯಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಮಂಡ್ಯ ಜಿಲ್ಲೆಗೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಹೆಮ್ಮೆ ಎನಿಸಿದ್ದಾರೆ.

The post ದಕ್ಷಿಣ ಡೈರಿ ಶೃಂಗಸಭೆ-2025 ರ ‘ಅತ್ಯುತ್ತಮ ಹೈನುಗಾರ್ತಿ’ ಪ್ರಶಸ್ತಿ ಸ್ವೀಕರಿಸಿದ ಪಾಂಡವಪುರದ ರೈತ ಮಹಿಳೆ ಮಂಗಳಮ್ಮ. appeared first on Good News 24x7.

]]>