paracetamol Archives - Good News 24x7 https://www.goodnews24x7.com/tag/paracetamol/ Kannada Thu, 26 Jun 2025 11:25:54 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg paracetamol Archives - Good News 24x7 https://www.goodnews24x7.com/tag/paracetamol/ 32 32 ಕರ್ನಾಟಕದಲ್ಲಿ ಪ್ಯಾರಾಸಿಟಮೋಲ್ ಸೇರಿ ಅಪಾಯಕಾರಿ 15 ಔಷಧಗಳು ಬ್ಯಾನ್..! https://www.goodnews24x7.com/15-dangerous-drugs-including-paracetamol-banned-in-karnataka/ Thu, 26 Jun 2025 11:25:54 +0000 https://www.goodnews24x7.com/?p=4664 ಕರ್ನಾಟಕ : ಕರ್ನಾಟಕ ಆರೋಗ್ಯ ಇಲಾಖೆಯು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅಪಾಯಕಾರಿ ಪ್ಯಾರಾಸಿಟಮೋಲ್ ಸೇರಿದಂತೆ 15 ಅಸುರಕ್ಷಿತ ಕಾಂತಿವರ್ಧಕಗಳು ಮತ್ತು ಔಷಧಿಗಳನ್ನ ನಿಷೇಧ ಮಾಡಿದೆ. ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತವು ಅಸುರಕ್ಷಿತ ಕಾಂತಿವರ್ಧಕ ಔಷಧ ಹಾಗೂ ಔಷಧಿಗಳ ಪಟ್ಟಿ…

The post ಕರ್ನಾಟಕದಲ್ಲಿ ಪ್ಯಾರಾಸಿಟಮೋಲ್ ಸೇರಿ ಅಪಾಯಕಾರಿ 15 ಔಷಧಗಳು ಬ್ಯಾನ್..! appeared first on Good News 24x7.

]]>

ಕರ್ನಾಟಕ : ಕರ್ನಾಟಕ ಆರೋಗ್ಯ ಇಲಾಖೆಯು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅಪಾಯಕಾರಿ ಪ್ಯಾರಾಸಿಟಮೋಲ್ ಸೇರಿದಂತೆ 15 ಅಸುರಕ್ಷಿತ ಕಾಂತಿವರ್ಧಕಗಳು ಮತ್ತು ಔಷಧಿಗಳನ್ನ ನಿಷೇಧ ಮಾಡಿದೆ.

ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತವು ಅಸುರಕ್ಷಿತ ಕಾಂತಿವರ್ಧಕ ಔಷಧ ಹಾಗೂ ಔಷಧಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಜ್ವರಕ್ಕೆ ಬಳಕೆ ಮಾಡುವ ಪ್ಯಾರಾಸಿಟಮೋಲ್, ಮೈಸೂರು ಮೂಲದ ಓ ಶಾಂತಿ ಗೋಲ್ಡ್ ಕುಂಕುಮ್ ಸೇರಿದಂತೆ ಹಲವು ಉತ್ಪನ್ನಗಳಿವೆ. ಅಸುರಕ್ಷಿತ ಉತ್ಪನ್ನಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಅಪಾಯಕಾರಿ 15 ಔಷಧಗಳು ಬ್ಯಾನ್

1. ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇನ್ಜೆಕ್ಷನ್ ಐಪಿ – ಮೆ. ಅಲ್ಟ್ರಾ ಲ್ಯಾಬೋರೇಟರಿಸ್ ಪ್ರೈ. ಲಿಮಿಟೆಡ್.

2. ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇನ್ಜೆಕ್ಷನ್ ಐಪಿ – ಮೇ. ಟಾಮ್ ಬ್ರಾನ್ ಫಾರ್ಮಾಸ್ಯೂಟಿಕಲ್ಸ್ ಪ್ರೈ. ಲಿಮಿಟೆಡ್.

3. ಪೋಮೋಲ್-650 (ಪ್ಯಾರಾಸಿಟಮೋಲ್ ಟ್ಯಾಬ್ಲೆಟಸ್ ಐ.ಪಿ 650 ಎಂಜಿ)- ಮೇ. ಅಬಾನ್ ಫಾರ್ಮಾಸ್ಯೂಟಿಕಲ್ಸ್ ಪ್ರೈ. ಲಿಮಿಟೆಡ್.

4. ಮಿಟು ಕ್ಯೂ7 ಸಿರಪ್ – ಮೆ. ಬಯೋನ್ ಥೆರಾಪ್ಯಾಟಿಕ್ಸ್ ಇಂಡಿಯಾ ಪ್ರೈ. ಲಿಮಿಟೆಡ್.

5. ಸ್ಟೈರಲ್ ಡಿಲ್ಯೈಯಂಟ್ ಪಾರ್ ರೆಕಾನೋಸ್ಟಿಟಿಶ್ಯೂನ್ ಆಪ್ ಎನ್ಡಿ, ಐಬಿ, ಐಬಿಡಿ ಆ್ಯಂಡ್ ಕಾಂಬಿನೇಷನ್ ವ್ಯಾಕ್ಸಿನ್ಸ್ ಫಾರ್ ಪೌಲ್ಟ್ರೀ (ವೆಟರ್ನರಿ) ಮಲ್ಟಿ ಡೋಸ್ ವಿಲಾ 200 ಎಂಲ್ – ಮೇ. ಸೇಫ್ ಪೇರೆಂಟರಲ್ಸ್ ಪ್ರೈ. ಲಿಮಿಟೆಡ್.

6. ಸ್ಪಾನ್ಪ್ಲಾಕ್ಸ್-ಓಡ್ ಟ್ಯಾಬ್ಲೆಟ್ಸ್ (ಓಪ್ಲಾಕ್ಸಸಿನ್ & ಓರ್ನಿಡಜೋಲ್ ಟ್ಯಾಬ್ಲೆಟ್ಸ್ ಐಪಿ) – ಮೆ. ಇಂಡೋರಾಮ ಹೇಲ್ತ್ ಕೇಸ್ ಪ್ರೈ ಲಿಮಿಟಿಡ್.

7. ಪ್ಯಾಂಟೋಕೋಟ್-ಡಿಎಸ್ಆರ್ (ಪ್ಯಾಂಟೋಫ್ರಜೋಲ್ ಗ್ಯಾಸ್ಟ್ರೋ-ರಿಜಿಸ್ಟೆಂಟ್ & ಡೋಮ್ಫೆರಿಡನ್ ಪ್ರೋಕಾಂಗಡ್ ರಿಲಿಸ್ ಕ್ಯಾಪ್ಸೂಲ್ಸ್ ಐಪಿ – ಮೇ. ಸ್ವೆಫ್ನೆ ಫಾರ್ಮಾಸ್ಯೂಟಿಕಲ್ಸ್ ಪ್ರೈ. ಲಿಮಿಟೆಡ್.

8. ಸೋಡಿಯಂ ಕ್ಲೋರೈಡ್ ಇನ್ಜೆಕ್ಷನ್ ಐಪಿ 0.9% ಡಬ್ಲ್ಯೂ/ವಿ (ಎನ್ಎಸ್) – ಮೆ. ಪುನಿಷ್ಕ ಇನ್ಜೆಕ್ಟಬಲ್ ಪ್ರೈ. ಲಿಮಿಟೆಡ್.

9. ಸೋಡಿಯಂ ಕ್ಲೋರೈಡ್ ಇನ್ಜೆಕ್ಷನ್ ಐಪಿ 0.9% ಡಬ್ಲ್ಯೂ/ವಿ (ಎನ್ಎಸ್) – ಮೆ. ಪುನಿಷ್ಕ ಇನ್ಜೆಕ್ಟಬಲ್ ಪ್ರೈ. ಲಿಮಿಟೆಡ್.

10. ಅಲ್ಪಾ ಲಿಪೋಯಿಕ್ ಆಸಿಡ್, ಪೋಲಿಕ್ ಆಸಿಡ್, ಮಿಥೈಲ್ ಕೋಬಾಲಮಿನ್, ವಿಟಮಿನ್ ಬಿ6 & ವಿಟಮಿನ್ ಡಿ3ಟ್ಯಾಬ್ಲೆಟ್ಸ್ – ಮೇ. ಇಸ್ಟ್ ಆಪ್ರಿಕನ್ (ಇಂಡಿಯಾ) ಓವರ್ಸಿಸ್.

11. ಓ ಶಾಂತಿ ಗೋಲ್ಡ್ ಕ್ಲಾಸ್ ಕುಂಕುಮ್ – ಮೇ. ಎನ್. ರಂಗರಾವ್ & ಸನ್ಸ್ ಪ್ರೈ ಲಿಮಿಟೆಡ್.

12. ಪಿರಾಸಿಡ್-ಓ ಸಸ್ಪೆನ್ಶನ್ (ಸಲ್ಕ್ರಾಲ್ಫೇಟ್ & ಆಕ್ಸೆಟಾಕೈನ್ ಸಸ್ಪೆನ್ಶನ್) – ಮೆ. ರೆಡ್ನಕ್ಸ್ ಫಾರ್ಮಾಸ್ಯೂಟಿಕಲ್ಸ್ ಪ್ರೈ ಲಿಮಿಟೆಡ್.

13. ಗ್ಲಿಮಿಜ್-2 (ಗ್ಲಿಮಿಫೆರೈಡ್ ಟ್ಯಾಬ್ಲೆಟ್ಸ್ ಐಪಿ 2ಎಂಜಿ) – ಮೆ. ಕೆಎನ್ಎಂ ಫಾರ್ಮಾ ಪ್ರೈ. ಲಿಮಿಟೆಡ್.

14. ಐರನ್ ಸುಕ್ರೋಸ್ ಇನ್ಜೆಕ್ಷನ್ ಯುಎಸ್ಪಿ 100ಎಂಜಿ (ಐರೋಗೈನ್) – ಮೆ. ರೀಗೈನ್ ಲ್ಯಾಬೋರೇಟರಿಸ್.

15. ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇನ್ಜೆಕ್ಷನ್ ಐಪಿ (ರಿಂರ್ಗ ಲ್ಯಾಕ್ಟೆಟ್ ಸಲೂಷನ್ ಪಾರ್ ಇನ್ಜೆಕ್ಷನ್ ಆರ್ಎಲ್ – ಮೇ. ಒಟ್ಸುಕಾ ಫಾರ್ಮಾಸ್ಯೂಟಿಕಲ್ಸ್ ಇಂಡಿಯಾ

 

ನಿಷೇಧದ ಪರಿಣಾಮಗಳು
ವೈದ್ಯರು, ಔಷಧಾಲಯಗಳು, ಆಸ್ಪತ್ರೆಗಳು ಮತ್ತು ಸಗಟು ವ್ಯಾಪಾರಿಗಳು ಈ ಔಷಧಿಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.
ನಕಲಿ ಔಷಧಿಗಳು ರೋಗಿಗಳ ಆರೋಗ್ಯಕ್ಕೆ ಗಂಭೀರ ಹಾನಿ ಮಾಡಬಲ್ಲವು. ಕಾನೂನುಬಾಹಿರವಾಗಿ ಮಾರಾಟ ಮಾಡಿದರೆ, ಕಟ್ಟುನಿಟ್ಟಾದ ಕಾನೂನು ಕ್ರಮ ಜರುಗಿಸಲಾಗುವುದು.

 

ಕ್ಯಾನ್ಸರ್ ಆಸ್ಪತ್ರೆಗಳ ವಿಸ್ತರಣೆ
ಆರೋಗ್ಯ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಪ್ರತಿ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್ ಮತ್ತು ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಯೋಜನೆ ಹಾಕಿದ್ದಾರೆ. ಹುಬ್ಬಳ್ಳಿ ಮತ್ತು ಬೆಳಗಾವಿಯ ಜಯದೇವ ಆಸ್ಪತ್ರೆ 2025ರಲ್ಲಿ ಲೋಕಾರ್ಪಣೆಯಾಗಲಿದೆ.

ಮೆಡಿಕಲ್ ಸೀಟುಗಳ ಹಂಚಿಕೆ
ಮೆರಿಟ್ ಆಧಾರಿತ ಸೀಟು ಹಂಚಿಕೆ (KEA ಮೂಲಕ).
800 ಹೆಚ್ಚುವರಿ MBBS ಸೀಟುಗಳ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ನಕಲಿ ಮತ್ತು ಅಸುರಕ್ಷಿತ ಔಷಧಿಗಳು ಸಾರ್ವಜನಿಕ ಆರೋಗ್ಯಕ್ಕೆ ಬೆದರಿಕೆ. ಕರ್ನಾಟಕ ಸರ್ಕಾರವು ಇದನ್ನು ತಡೆಗಟ್ಟಲು ಕಟ್ಟುನಿಟ್ಟಾದ ನೀತಿಗಳನ್ನು ಅನುಸರಿಸುತ್ತಿದೆ. ಸಾರ್ವಜನಿಕರು ಸಹ ಜಾಗೃತರಾಗಿ, ಅನುಮೋದಿತ ಔಷಧಾಲಯಗಳಿಂದ ಮಾತ್ರ ಔಷಧಿಗಳನ್ನು ಖರೀದಿಸಬೇಕು.

The post ಕರ್ನಾಟಕದಲ್ಲಿ ಪ್ಯಾರಾಸಿಟಮೋಲ್ ಸೇರಿ ಅಪಾಯಕಾರಿ 15 ಔಷಧಗಳು ಬ್ಯಾನ್..! appeared first on Good News 24x7.

]]>
ಮೈಸೂರು ಬೆಟ್ಟದಲ್ಲಿ ಆಷಾಢ ಸಂಭ್ರಮ, ಭಕ್ತರಿಗೆ? ಇಲ್ಲಿದೆ ಸಂಪೂರ್ಣ ವಿವರ! https://www.goodnews24x7.com/ashada-celebrations-in-mysore-hills-devotees-here-are-the-complete-details/ Thu, 26 Jun 2025 11:00:28 +0000 https://www.goodnews24x7.com/?p=4651 ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಸಿದ್ಧತೆ ಜೋರಾಗಿ ಸಾಗುತ್ತಿದೆ. ಈ ಮಾಸದಲ್ಲಿ ಶುಕ್ರವಾರ ಶನಿವಾರ ಮತ್ತು ಭಾನುವಾರಗಳಂದು ಚಾಮುಂಡೇಶ್ವರಿ ಬೆಟ್ಟಕ್ಕೆ ಯಾವುದೇ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ ನೀಡಿದ್ದಾರೆ. ಪ್ರತಿ ಆಷಾಢ…

The post ಮೈಸೂರು ಬೆಟ್ಟದಲ್ಲಿ ಆಷಾಢ ಸಂಭ್ರಮ, ಭಕ್ತರಿಗೆ? ಇಲ್ಲಿದೆ ಸಂಪೂರ್ಣ ವಿವರ! appeared first on Good News 24x7.

]]>

ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಸಿದ್ಧತೆ ಜೋರಾಗಿ ಸಾಗುತ್ತಿದೆ. ಈ ಮಾಸದಲ್ಲಿ ಶುಕ್ರವಾರ ಶನಿವಾರ ಮತ್ತು ಭಾನುವಾರಗಳಂದು ಚಾಮುಂಡೇಶ್ವರಿ ಬೆಟ್ಟಕ್ಕೆ ಯಾವುದೇ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ ನೀಡಿದ್ದಾರೆ. ಪ್ರತಿ ಆಷಾಢ ಶುಕ್ರವಾರದಂದು ಮಾತ್ರ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಇನ್ನುಳಿದಂತೆ ಲಲಿತ ಮಹಲ್ ಆವರಣದಿಂದ ಸಾರಿಗೆ ಬಸ್ ಸೇವೆ ಇರಲಿದೆ. ಉಳಿದ ಎರಡು ದಿನಗಳಲ್ಲಿ ಲಲಿತ ಮಹಲ್ ಆವರಣದಿಂದ ಚಾಮುಂಡೇಶ್ವರಿ ಬೆಟ್ಟಕ್ಕೆ ಶುಲ್ಕ ಪಾವತಿಸಿ ಬಸ್ನಲ್ಲಿ ತೆರಳಬೇಕಾಗುತ್ತದೆ.

ದರ್ಶನಕ್ಕೆ ಬೆಟ್ಟದಲ್ಲಿ ಸಿಗಲ್ಲ ಟಿಕೆಟ್: ಮತ್ತೆಲ್ಲಿ ಸಿಗುತ್ತೆ?
ಚಾಮುಂಡಿ ಬೆಟ್ಟದ ಮೇಲೆ ದರ್ಶನದ ಯಾವುದೇ ಟಿಕೆಟ್ ನೀಡಲಾಗುವುದಿಲ್ಲ. ಬದಲಿಗೆ ಎಲ್ಲಾ ವಿಶೇಷ ದರ್ಶನದ ಟಿಕೆಟ್ಗಳನ್ನು ಲಲಿತ ಮಹಲ್ ಆವರಣದಲ್ಲಿ ಹಾಗೂ ನಗರ ಬಸ್ ನಿಲ್ದಾಣದಲ್ಲಿ ನೀಡಲಾಗುತ್ತಿದೆ. ಪ್ಯಾರಾಸಿಟಮೋಲ್ ಸೇರಿದಂತೆ 15 ಔಷಧಿ ಬಳಕೆ ನಿರ್ಬಂಧಿಸಿದ ಆರೋಗ್ಯ ಇಲಾಖೆ ಮೋಬೈಲ್, ಕ್ಯಾಮರಾ ಬಳಸಿದರೆ ಮತ್ತೆಂದೂ ಸಿಗದು!
ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಉತ್ಸವ ಮೂರ್ತಿ, ಗರ್ಭಗುಡಿ ಮತ್ತು ಪ್ರಾಂಗಣದಲ್ಲಿ ಮೊಬೈಲ್ ಹಾಗೂ ಕ್ಯಾಮೆರಾಗಳಲ್ಲಿ ಛಾಯಾ ಚಿತ್ರ ಮಾಡುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ವಿಡಿಯೋ ಮಾಡಿದ್ದಲ್ಲಿ ಅಥವಾ ಫೋಟೋ ತೆಗೆದಿದ್ದಲ್ಲಿ ಶಾಶ್ವತವಾಗಿ ಮೊಬೈಲ್ ಹಾಗೂ ಕ್ಯಾಮರಾಗಳನ್ನು ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಪ್ರಾಧಿಕಾರದ ವತಿಯಿಂದ ಉತ್ಸವ ಮೂರ್ತಿಯ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಿ ನೇರ ಪ್ರಸಾರ ಮಾಡಲಾಗುತ್ತದೆ. ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವನ್ನು ನೋಡಬಹುದಾಗಿದೆ.

ಭಕ್ತರಿಗೆ ಉಚಿತ ಡ್ರೈಫ್ರೂಟ್ಸ್, ಬಾದಾಮಿ ಹಾಲು
ಧರ್ಮ ದರ್ಶನದ ಸಾಲಿನಲ್ಲಿ ಬರುವಂತಹ ಭಕ್ತಾದಿಗಳಿಗೆ ಉಚಿತ ಡ್ರೈಫ್ರೂಟ್ಸ್ ಹಾಗೆ ಬಾದಾಮಿ ಹಾಲು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಧರ್ಮ ದರ್ಶನದ ಸರದಿ ಸಾಲಿನಲ್ಲಿ ಮಾರಾಟದ ಮಳಿಗೆಗಳನ್ನ ತೆರೆದು ಮಳಿಗೆಗಳಲ್ಲಿ ನಂದಿನಿ ಉತ್ಪನ್ನಗಳು ಹಾಗೂ ಗಾಜಿನ ನೀರಿನ ಬಾಟಲ್, ಕಾಫಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲಾ ಭಕ್ತರಿಗೆ ಕುಂಕುಮ ಪ್ರಸಾದ, ಮುತ್ತೈದೆರಿಗೆ ಮಡಿಲಕ್ಕಿ ವಿತರಣೆ ಪ್ರಾಧಿಕಾರದ ವತಿಯಿಂದ ಇರಲಿದೆ.

ಭಕ್ತರಿಗೆ ವಿಶೇಷ ಗಿಫ್ಟ್ ಬ್ಯಾಗ್: ಏನೇನಿರಲಿದೆ?

ಪ್ಲಾಸ್ಟಿಕ್ ಮುಕ್ತ ವಲಯಕ್ಕೆ ಆದ್ಯತೆಯನ್ನು ನೀಡಲಾಗಿದ್ದು, ಬಟ್ಟೆ ಬ್ಯಾಗ್ಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. 2000 ರೂ. ಟಿಕೆಟ್ ಪಡೆಯುವಂತಹ ಭಕ್ತರಿಗೆ ವಿಶೇಷವಾಗಿ ಒಂದು ವಿಗ್ರಹ ಒಂದು ಲಾಡು ಪ್ರಸಾದ ಮತ್ತು 500 ಎಂಎಲ್ ನೀರಿನ ಗಾಜಿನ ಬಾಟಲ್ ಒಳಗೊಂಡಂತೆ ವಿಶೇಷ ಬ್ಯಾಗ್ ನೀಡಲಾಗುತ್ತದೆ. ಈ ವಿಶೇಷ ಗಿಫ್ಟ್ ಬ್ಯಾಗ್ನಲ್ಲಿ ತಾಯಿ ಚಾಮುಂಡೇಶ್ವರಿ ವಿಗ್ರಹ, ಗಂಡಬೇರುಂಢ ವಿಗ್ರಹ, ಅಂಬಾರಿ ಹೊತ್ತಿರುವಂತಹ ಆನೆಯ ವಿಗ್ರಹ, ಕುಂಕುಮ ಭರಣಿ, ಕೈಗೆ ಕಟ್ಟುವಂತಹ ದಾರ ಸೇರಿದಂತೆ ಶ್ರೀ ಚಕ್ರವಿರುವಂತಹ ಮರದ ಬಾಕ್ಸ್ ನೀಡಲಾಗುತ್ತದೆ.


ಚಾಮುಂಡಿ ಬೆಟ್ಟ ಸುತ್ತ ಬಿಗಿ ಭದ್ರತೆ
ಚಾಮುಂಡೇಶ್ವರಿ ಬೆಟ್ಟದ ಬುಡದಿಂದ ಸಾವಿರ ಮೆಟ್ಟಿಲುಗಳಿಗೆ, ಚಾಮುಂಡೇಶ್ವರಿ ಬೆಟ್ಟದ ಮೇಲ್ಭಾಗ ಸೇರಿದಂತೆ ಲಲಿತ ಮಹಲ್ ಆವರಣದಲ್ಲಿ ನೂರಕ್ಕೂ ಹೆಚ್ಚು ಎಐ ತಂತ್ರಜ್ಞಾನ ಆಧಾರಿತ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ದರ್ಶನಕ್ಕೆ ಬರುವಂತಹ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಜೊತೆಗೆ ಶೌಚಾಲಯಗಳ ವ್ಯವಸ್ಥೆ ಹಾಗೂ ಇತರೆ ಸೌಕರ್ಯಗಳನ್ನ ಸಹ ಮಾಡಲಾಗಿದೆ.


ವಾಟರ್ ಬಾಟಲ್ ಗಾಜಿನದ್ದು, ವಾಪಸ್ ಕೊಟ್ರೆ ಸಿಗತ್ತೆ ದುಡ್ಡು!
ಈ ಬಾರಿ ವಿಶೇಷವಾಗಿ, ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆಯಲ್ಲಿ ನೀರನ್ನು ಗಾಜಿನ ಬಾಟಲ್ಗಳ ಮೂಲಕ ಮಾರಾಟ ಮಾಡಲಾಗುತ್ತದೆ. 500 ಎಂಎಲ್ ಗಾಜಿನ ನೀರಿನ ಬಾಟಲಿಗೆ 50 ರೂ. ಇದ್ದು, ಬಾಟಲ್ ವಾಪಸ್ ನೀಡಿದರೆ 30 ರೂ. ವಾಪಸ್ ನೀಡುವ ವ್ಯವಸ್ಥೆ ಮಾಡಲಾಗಿದೆ.  ಈ ಬಾರಿಯೂ ನಾಲ್ಕು ಶುಕ್ರವಾರ ಮತ್ತು ಒಂದು ವರ್ಧಂತಿ ದಿನ ದಾಸೋಹದ , ಹೂವಿನ ಅಲಂಕಾರ ಮತ್ತು ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಉತ್ತಮ ಗುಣಮಟ್ಟದ ಬ್ಯಾರಿಕೇಡಗಳು ಹಾಗೆಯೇ ಜರ್ಮನ್ ಟೆಂಟ್ಗಳ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ.

The post ಮೈಸೂರು ಬೆಟ್ಟದಲ್ಲಿ ಆಷಾಢ ಸಂಭ್ರಮ, ಭಕ್ತರಿಗೆ? ಇಲ್ಲಿದೆ ಸಂಪೂರ್ಣ ವಿವರ! appeared first on Good News 24x7.

]]>