passengers Archives - Good News 24x7 https://www.goodnews24x7.com/tag/passengers/ Kannada Mon, 20 Apr 2026 09:16:24 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg passengers Archives - Good News 24x7 https://www.goodnews24x7.com/tag/passengers/ 32 32 ಫ್ಲೈ ೯೧ ವಿಮಾನದಲ್ಲಿ ಆತಂಕದ ಕ್ಷಣ: ಪ್ರಯಾಣಿಕರ ಕಣ್ಣೀರು, ಸಿಬ್ಬಂದಿಯ ಉದ್ಧಟತನ! https://www.goodnews24x7.com/phlai-91-vimanadalli-ata%e1%b9%85kada-k%e1%b9%a3a%e1%b9%87a-praya%e1%b9%87ikara-ka%e1%b9%87%e1%b9%87iru-sibbandiya-uddha%e1%b9%adatana-crewbengalurupassengershyderabadairportfamilieshubbal/ Mon, 20 Apr 2026 09:16:24 +0000 https://www.goodnews24x7.com/?p=9314 ಬೆಂಗಳೂರು: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ ಫ್ಲೈ ೯೧ (Fly91) ವಿಮಾನವೊಂದು ಭೀಕರ ಟರ್ಬುಲೆನ್ಸ್‌ಗೆ (ಗಾಳಿಯ ಒತ್ತಡದ ಏರುಪೇರು) ಸಿಲುಕಿ ಪ್ರಯಾಣಿಕರು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಘಟನೆ ನಿನ್ನೆ ನಡೆದಿದೆ. ಸಂಕಷ್ಟದ ಸಮಯದಲ್ಲಿ ಪೈಲಟ್ ಸಮಯಪ್ರಜ್ಞೆ ಮೆರೆದರೆ, ವಿಮಾನ ನಿಲ್ದಾಣದ ಸಿಬ್ಬಂದಿಯ…

The post ಫ್ಲೈ ೯೧ ವಿಮಾನದಲ್ಲಿ ಆತಂಕದ ಕ್ಷಣ: ಪ್ರಯಾಣಿಕರ ಕಣ್ಣೀರು, ಸಿಬ್ಬಂದಿಯ ಉದ್ಧಟತನ! appeared first on Good News 24x7.

]]>

ಬೆಂಗಳೂರು: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ ಫ್ಲೈ ೯೧ (Fly91) ವಿಮಾನವೊಂದು ಭೀಕರ ಟರ್ಬುಲೆನ್ಸ್‌ಗೆ (ಗಾಳಿಯ ಒತ್ತಡದ ಏರುಪೇರು) ಸಿಲುಕಿ ಪ್ರಯಾಣಿಕರು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಘಟನೆ ನಿನ್ನೆ ನಡೆದಿದೆ. ಸಂಕಷ್ಟದ ಸಮಯದಲ್ಲಿ ಪೈಲಟ್ ಸಮಯಪ್ರಜ್ಞೆ ಮೆರೆದರೆ, ವಿಮಾನ ನಿಲ್ದಾಣದ ಸಿಬ್ಬಂದಿಯ ಅಮಾನವೀಯ ವರ್ತನೆ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಆ ೧೫ ನಿಮಿಷಗಳ ಕಾಲ ಮೃತ್ಯು ಕಣ್ಣೆದುರಿಗಿತ್ತು:
ನಿನ್ನೆ ಮಧ್ಯಾಹ್ನ ೩ ಗಂಟೆಗೆ ಹೊರಟ ವಿಮಾನವು ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ಸುಮಾರು ೧೫ ನಿಮಿಷಗಳ ಕಾಲ ತೀವ್ರವಾಗಿ ಅಲುಗಾಡತೊಡಗಿತು. ಟರ್ಬುಲೆನ್ಸ್ ಎಷ್ಟಿತ್ತೆಂದರೆ, ಪ್ರಯಾಣಿಕರು ಬದುಕುವ ಭರವಸೆಯನ್ನೇ ಕೈಬಿಟ್ಟಿದ್ದರು. ಕೆಲವರು ತಮ್ಮ ಕುಟುಂಬದವರಿಗೆ ‘ಕೊನೆಯ ಸಂದೇಶ’ ಕಳುಹಿಸಲು ವಿಡಿಯೋ ರೆಕಾರ್ಡ್ ಮಾಡತೊಡಗಿದರೆ, ಇನ್ನು ಕೆಲವರು ಕಿರುಚಾಡುತ್ತಿದ್ದರು. ಅಲುಗಾಟದ ತೀವ್ರತೆಗೆ ಮಗುವೊಂದು ಕೈಯಿಂದ ಕೆಳಗೆ ಬಿದ್ದ ಘಟನೆಯೂ ನಡೆಯಿತು. ಈ ವೇಳೆ ಗಗನಸಖಿಯರೂ ಕೂಡ ಭಯದಿಂದ ಕಣ್ಣೀರಿಟ್ಟಿದ್ದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿತ್ತು.

೪ ಗಂಟೆಗಳ ಕಾಲ ಆಕಾಶದಲ್ಲೇ ಅಲೆದಾಟ:
ಹುಬ್ಬಳ್ಳಿಯಲ್ಲಿ ಇಳಿಯಲು ಸಾಧ್ಯವಾಗದ ಕಾರಣ ಪೈಲಟ್ ವಿಮಾನವನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತಿರುಗಿಸಿದರು. ಸುಮಾರು ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ಸುತ್ತಾಡಿದ ವಿಮಾನವು ಕೊನೆಗೆ ರಾತ್ರಿ ೭ ಗಂಟೆಯ ಸುಮಾರಿಗೆ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಜೀವ ಉಳಿಸಿದ ಪೈಲಟ್‌ಗೆ ಪ್ರಯಾಣಿಕರು ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದರು.

ಫ್ಲೈ ೯೧ ಸಿಬ್ಬಂದಿಯ ಅಸಭ್ಯ ವರ್ತನೆ:
ವಿಮಾನ ಸುರಕ್ಷಿತವಾಗಿ ಇಳಿದ ನಂತರ ಪ್ರಯಾಣಿಕರಿಗೆ ಸಮಾಧಾನ ಹೇಳಬೇಕಿದ್ದ ಫ್ಲೈ ೯೧ ಏರ್‌ಲೈನ್ಸ್‌ನ ನೆಲದ ಸಿಬ್ಬಂದಿ (Ground Staff) ಅತ್ಯಂತ ಉದ್ಧಟತನದಿಂದ ವರ್ತಿಸಿದ್ದಾರೆ. “ಇದೇ ವಿಮಾನ ಮತ್ತೆ ಹುಬ್ಬಳ್ಳಿಗೆ ಹೋಗುತ್ತದೆ, ಹತ್ತುವವರು ಹತ್ತಿ ಇಲ್ಲದಿದ್ದರೆ ಇಳಿದು ಹೋಗಿ” ಎಂದು ಅಹಂಕಾರದ ಧಾಟಿಯಲ್ಲಿ ಮಾತನಾಡಿದ್ದಾರೆ. ಸಾವಿನ ದವಡೆಯಿಂದ ಬಂದಿದ್ದ ಪ್ರಯಾಣಿಕರಿಗೆ ಕನಿಷ್ಠ ಸೌಜನ್ಯವನ್ನೂ ತೋರಿಸದ ಸಿಬ್ಬಂದಿಯ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. “ಮಾನವೀಯತೆ ಇಲ್ಲದ ಇಂತಹ ಏರ್‌ಲೈನ್ಸ್‌ನಲ್ಲಿ ನಾವು ಮತ್ತೆ ಹೇಗೆ ಧೈರ್ಯವಾಗಿ ಪ್ರಯಾಣಿಸಲಿ?” ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ.

The post ಫ್ಲೈ ೯೧ ವಿಮಾನದಲ್ಲಿ ಆತಂಕದ ಕ್ಷಣ: ಪ್ರಯಾಣಿಕರ ಕಣ್ಣೀರು, ಸಿಬ್ಬಂದಿಯ ಉದ್ಧಟತನ! appeared first on Good News 24x7.

]]>
ಏ. 8ರಂದು ಬಸ್ ಸಂಚಾರ ಡೌಟ್!. https://www.goodnews24x7.com/bus-service-on-april-8th-in-doubt/ Tue, 07 Apr 2026 11:10:29 +0000 https://www.goodnews24x7.com/?p=9148 38 ತಿಂಗಳ ವೇತನ ಹಿಂಬಾಕಿ ‌ಮತ್ತು ಹೊಸ ವೇತನ (Salary Arrears) ಪರಿಷ್ಕರಣೆಗಾಗಿ ಆಗ್ರಹಿಸಿ ಈಗಾಗಲೇ ಸಾರಿಗೆ ನೌಕರರು ಹೋರಾಟಕ್ಕೆ ಮುಂದಾಗಿದ್ದರು. ಆದರೆ ‌ಸರ್ಕಾರ 26 ತಿಂಗಳ ವೇತನ ಹಿಂಬಾಕಿ 2025 ಏಪ್ರಿಲ್​ನಿಂದ ವೇತನ ಪರಿಷ್ಕರಣೆಗೆ ಒಪ್ಪಿಗೆ ನೀಡಿತ್ತು. ಸದ್ಯ ಇದಕ್ಕೆ…

The post ಏ. 8ರಂದು ಬಸ್ ಸಂಚಾರ ಡೌಟ್!. appeared first on Good News 24x7.

]]>

38 ತಿಂಗಳ ವೇತನ ಹಿಂಬಾಕಿ ‌ಮತ್ತು ಹೊಸ ವೇತನ (Salary Arrears) ಪರಿಷ್ಕರಣೆಗಾಗಿ ಆಗ್ರಹಿಸಿ ಈಗಾಗಲೇ ಸಾರಿಗೆ ನೌಕರರು ಹೋರಾಟಕ್ಕೆ ಮುಂದಾಗಿದ್ದರು. ಆದರೆ ‌ಸರ್ಕಾರ 26 ತಿಂಗಳ ವೇತನ ಹಿಂಬಾಕಿ 2025 ಏಪ್ರಿಲ್​ನಿಂದ ವೇತನ ಪರಿಷ್ಕರಣೆಗೆ ಒಪ್ಪಿಗೆ ನೀಡಿತ್ತು. ಸದ್ಯ ಇದಕ್ಕೆ ಒಪ್ಪದ ಸಾರಿಗೆ ನೌಕರರ ಕೂಟ ಮತ್ತೆ ಹೋರಾಟಕ್ಕೆ ಮುಂದಾಗಿದೆ.

ಚಿತ್ರದುರ್ಗದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್​ವರೆಗೆ ಪಾದಯಾತ್ರೆ
ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ನೀಡಬೇಕಿದ್ದ 38 ವೇತನ ಹಿಂಬಾಕಿ 2024ರಿಂದ ಆಗಬೇಕಿದ್ದ, ಹೊಸ ವೇತನ ಒಪ್ಪಂದಕ್ಕಾಗಿ ಆಗ್ರಹಿಸಿ ಹೋರಾಟಕ್ಕೆ ಮುಂದಾಗಿದ್ದರು. ಆದರೆ ‌ರಾಜ್ಯ ಸರ್ಕಾರ 38 ತಿಂಗಳು ವೇತನ ಹಿಂಬಾಕಿ ಬದಲಿಗೆ 26 ತಿಂಗಳು ವೇತನ ಹಿಂಬಾಕಿ, 2024 ಜನವರಿ ಬದಲಿಗೆ 2025ರ ಏಪ್ರಿಲ್​ನಿಂದ ಹೊಸ ವೇತನ ಒಪ್ಪಂದ ಮಾಡುವುದಾಗಿ ಈಗಾಗಲೇ ಆದೇಶ ಮಾಡಿದೆ. ಆದರೆ ಇದಕ್ಕೆ ಒಪ್ಪದ ಸಾರಿಗೆ ನೌಕರರ ಒಕ್ಕೂಟ ಇಂದು ಸುದ್ದಿಗೋಷ್ಠಿ ನಡೆಸಿ ಯಾವುದೇ ‌ಕಾರಣಕ್ಕೂ ಸರ್ಕಾರದ ಆದೇಶವನ್ನು ನಾವು ಒಪ್ಪುವುದಿಲ್ಲ. ಏಪ್ರಿಲ್​ 8ರಿಂದ ಚಿತ್ರದುರ್ಗದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್​ವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ಸಾರಿಗೆ ನೌಕರರ ಒಕ್ಕೂಟ ಅಧ್ಯಕ್ಷ ಚಂದ್ರಶೇಖರ್ ಹೇಳಿದ್ದಾರೆ.
ಇದನ್ನೂ ಓದಿ: ವೇತನ ಹಿಂಬಾಕಿಗೆ ಡಿಮ್ಯಾಂಡ್​​: ಜ.29ರಂದು ಸಾರಿಗೆ ನೌಕರರ ಪ್ರತಿಭಟನೆ

ಇನ್ನು ಸಾರಿಗೆ ನೌಕರರ ಒಕ್ಕೂಟ 38 ತಿಂಗಳ ವೇತನ ಹಿಂಬಾಕಿ ಮತ್ತು 2024 ಜನವರಿಯಿಂದಲೇ ವೇತನ ಹೆಚ್ಚಳ ಮಾಡಬೇಕೆಂದು ಪಟ್ಟುಹಿಡಿದಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ 38 ತಿಂಗಳ ವೇತನ ಹಿಂಬಾಕಿಯಲ್ಲಿ 26 ತಿಂಗಳ ವೇತನ ಹಿ‌ಂಬಾಕಿ 1272 ಕೋಟಿ ರೂ ನೀಡುತ್ತಿದೆ. 2024 ಜನವರಿಯಿಂದ ಆಗಬೇಕಿದ್ದ ಹೊಸ ವೇತನ ಒಪ್ಪಂದವನ್ನು 2025 ಏಪ್ರಿಲ್​ನಿಂದ ಮಾಡಲು ಮುಂದಾಗಿದೆ.

1970 ಕೋಟಿ ರೂ ಹಿಂಬಾಕಿ ಬಿಡುಗಡೆಗೆ ಪಟ್ಟು
ಸರ್ಕಾರದ ಈ ನಿರ್ಧಾರಕ್ಕೆ ಒಪ್ಪದ ಕೆಎಸ್ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ನೌಕರರು 38 ತಿಂಗಳ ವೇತನ ಹಿಂಬಾಕಿ 1970 ಕೋಟಿ ರೂ ಬಿಡುಗಡೆ ಮಾಡಲೇಬೇಕು ಮತ್ತು 2024 ಜನವರಿಯಿಂದಲೇ ಹೊಸ ವೇತನ ಒಪ್ಪಂದ ಮಾಡಬೇಕೆಂದು ಪಟ್ಟುಹಿಡಿದಿದ್ದಾರೆ. ಈ ನಿಟ್ಟಿನಲ್ಲಿ ಫ್ರೀಡಂ ಪಾರ್ಕ್​ಗೆ ಬಂದು, ಅಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಂತರ ಮುಷ್ಕರಕ್ಕೆ ಹೋಗಬೇಕೆಂದು ಸಾರಿಗೆ ನೌಕರರ ಮುಖಂಡರು ಸಿದ್ಧತೆ ಮಾಡಿಕೊಂಡಿದ್ದಾರೆ. ಅಂದು ಬಸ್​​ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದೂಡುವುದು ಉತ್ತಮ.

ಒಟ್ಟಿನಲ್ಲಿ ರಾಜ್ಯ ಸರ್ಕಾರ ನೀಡಬೇಕಿದ್ದ 38 ತಿಂಗಳ ಬದಲಿಗೆ 26 ತಿಂಗಳಿನ ವೇತನ ಮತ್ತು 2024 ಜನವರಿ ಬದಲಿಗೆ ‌25 ಏಪ್ರಿಲ್​ನಿಂದ ಹೊಸ ವೇತನ ಪರಿಷ್ಕರಣೆ ಮಾಡುತ್ತೇವೆ ಅಂತಿದ್ದಾರೆ. ಆದರೆ ಇದಕ್ಕೆ ಸಾರಿಗೆ ನೌಕರರು ಒಪ್ಪದೆ ಮತ್ತೆ ಹೋರಾಟಕ್ಕೆ ಮುಂದಾಗಿದ್ದು, ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ‌ಕಾದು ನೋಡಬೇಕಿದೆ.

The post ಏ. 8ರಂದು ಬಸ್ ಸಂಚಾರ ಡೌಟ್!. appeared first on Good News 24x7.

]]>
ರಷ್ಯಾದಲ್ಲಿ ಭೀಕರ ವಿಮಾನ ದುರಂತ: ಕ್ರೈಮಿಯಾ ಬಂಡೆಗೆ ಅಪ್ಪಳಿಸಿದ ‘An-26’, 29 ಸೇನಾ ಸಿಬ್ಬಂದಿ ದುರ್ಮರಣ. https://www.goodnews24x7.com/russias-deadliest-plane-crash-an-26-crashes-into-crimean-cliff-killing-29-military-personnel/ Wed, 01 Apr 2026 10:20:38 +0000 https://www.goodnews24x7.com/?p=9067 [ಮಾಸ್ಕೋ/ಕ್ರೈಮಿಯಾ]: ರಷ್ಯಾದ ರಕ್ಷಣಾ ಪಡೆಗೆ ಸೇರಿದ ‘An-26’ ಸೇನಾ ಸಾರಿಗೆ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ 29 ಪ್ರಯಾಣಿಕರು ಸಾವನ್ನಪ್ಪಿರುವ ಭೀಕರ ಘಟನೆ ಮಂಗಳವಾರ ಸಂಭವಿಸಿದೆ. ಕ್ರೈಮಿಯಾ ಪರ್ಯಾಯ ದ್ವೀಪದ ದುರ್ಗಮ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ರಷ್ಯಾದ…

The post ರಷ್ಯಾದಲ್ಲಿ ಭೀಕರ ವಿಮಾನ ದುರಂತ: ಕ್ರೈಮಿಯಾ ಬಂಡೆಗೆ ಅಪ್ಪಳಿಸಿದ ‘An-26’, 29 ಸೇನಾ ಸಿಬ್ಬಂದಿ ದುರ್ಮರಣ. appeared first on Good News 24x7.

]]>

[ಮಾಸ್ಕೋ/ಕ್ರೈಮಿಯಾ]: ರಷ್ಯಾದ ರಕ್ಷಣಾ ಪಡೆಗೆ ಸೇರಿದ ‘An-26’ ಸೇನಾ ಸಾರಿಗೆ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ 29 ಪ್ರಯಾಣಿಕರು ಸಾವನ್ನಪ್ಪಿರುವ ಭೀಕರ ಘಟನೆ ಮಂಗಳವಾರ ಸಂಭವಿಸಿದೆ. ಕ್ರೈಮಿಯಾ ಪರ್ಯಾಯ ದ್ವೀಪದ ದುರ್ಗಮ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ರಷ್ಯಾದ ರಕ್ಷಣಾ ಸಚಿವಾಲಯ ಘಟನೆಯನ್ನು ಅಧಿಕೃತವಾಗಿ ದೃಢಪಡಿಸಿದೆ.

ಘಟನೆಯ ವಿವರ:
ಮಂಗಳವಾರ (ಮಾರ್ಚ್ 31) ಸ್ಥಳೀಯ ಕಾಲಮಾನ ಸಂಜೆ 6 ಗಂಟೆಯ ಸುಮಾರಿಗೆ ಆಂಟೊನೊವ್ ಡಿಸೈನ್ ಬ್ಯೂರೋ ನಿರ್ಮಿತ An-26 ವಿಮಾನವು ಕ್ರೈಮಿಯಾ ಪರ್ಯಾಯ ದ್ವೀಪದ ಮೇಲೆ ತನ್ನ ನಿಯಮಿತ ಹಾರಾಟ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ವಿಮಾನವು ಇದ್ದಕ್ಕಿದ್ದಂತೆ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಕಳೆದುಕೊಂಡಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಪೈಲಟ್ ನಿಯಂತ್ರಣ ಕಳೆದುಕೊಂಡಿದ್ದಾರೆ, ಪರಿಣಾಮವಾಗಿ ವಿಮಾನವು ಬೆಟ್ಟದ ಬಂಡೆಗೆ ನೇರವಾಗಿ ಅಪ್ಪಳಿಸಿದೆ.

ಮೃತರ ವಿವರ:
ವಿಮಾನದಲ್ಲಿ ಒಟ್ಟು 29 ಜನರಿದ್ದರು ಎಂದು ವರದಿಯಾಗಿದೆ. ಇದರಲ್ಲಿ ಆರು ಮಂದಿ ವಿಮಾನ ಚಾಲನಾ ಸಿಬ್ಬಂದಿ (Crew Members) ಮತ್ತು 23 ಪ್ರಯಾಣಿಕರಿದ್ದರು. ದುರಂತದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂದು ರಕ್ಷಣಾ ಇಲಾಖೆ ತಿಳಿಸಿದೆ. ಸದ್ಯ ಘಟನಾ ಸ್ಥಳದಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದ್ದು, ಮೃತದೇಹಗಳನ್ನು ಹೊರತೆಗೆಯುವ ಪ್ರಕ್ರಿಯೆ ಜಾರಿಯಲ್ಲಿದೆ.

ಹಳೆಯ ವಿಮಾನಗಳ ಸುರಕ್ಷತೆ ಬಗ್ಗೆ ಪ್ರಶ್ನೆ:
An-26 ವಿಮಾನಗಳು 1960ರ ದಶಕದ ಅಂತ್ಯದಿಂದ ರಷ್ಯಾ ಮತ್ತು ಉಕ್ರೇನ್ ಸೇನೆಗಳಲ್ಲಿ ಸಕ್ರಿಯವಾಗಿವೆ. ಸರಕು ಸಾಗಣೆ ಮತ್ತು ಸುಮಾರು 40 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಈ ವಿಮಾನಗಳು ದಶಕಗಳಷ್ಟು ಹಳೆಯದಾಗಿವೆ. ಈ ಹಿಂದೆಯೂ ಈ ವಿಮಾನಗಳು ಹಲವಾರು ಬಾರಿ ತಾಂತ್ರಿಕ ಕಾರಣಗಳಿಂದ ಅಪಘಾತಕ್ಕೀಡಾಗಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಸದ್ಯ ಅಪಘಾತ ನಡೆದ ಕ್ರೈಮಿಯಾ ಪ್ರಾಂತ್ಯವು 2014ರಿಂದ ರಷ್ಯಾದ ಅಧೀನದಲ್ಲಿದೆ.

ಕರಾಳ ಇತಿಹಾಸದ ಮೇಲೆ ಒಂದು ನೋಟ:
An-26 ವಿಮಾನಗಳ ಸುರಕ್ಷತಾ ದಾಖಲೆ ಇತ್ತೀಚಿನ ವರ್ಷಗಳಲ್ಲಿ ಕಳವಳಕಾರಿಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ನಡೆದ ಪ್ರಮುಖ ಅಪಘಾತಗಳು ಇಲ್ಲಿವೆ:

  • 2022: ಉಕ್ರೇನ್‌ನ ಜಪೋರಿಝಿಯಾ ಪ್ರಾಂತ್ಯದಲ್ಲಿ ವಿಮಾನ ಪತನಗೊಂಡು ಓರ್ವ ಸಾವು.
  • 2020: ಉಕ್ರೇನ್‌ನಲ್ಲಿ ತರಬೇತಿ ವೇಳೆ ಸಂಭವಿಸಿದ ಅಪಘಾತದಲ್ಲಿ 27 ಜನರ ಪೈಕಿ 26 ಮಂದಿ ದಾರುಣವಾಗಿ ಮೃತಪಟ್ಟಿದ್ದರು.
  • 2020: ದಕ್ಷಿಣ ಸುಡಾನ್‌ನಲ್ಲಿ ನಡೆದ ಅಪಘಾತದಲ್ಲಿ ಐವರು ರಷ್ಯನ್ನರು ಸೇರಿದಂತೆ ಎಂಟು ಜನರು ಪ್ರಾಣ ಕಳೆದುಕೊಂಡಿದ್ದರು.
  • 2017: ಪಶ್ಚಿಮ ಆಫ್ರಿಕಾದ ಐವರಿ ಕೋಸ್ಟ್‌ನಲ್ಲಿ ಲ್ಯಾಂಡಿಂಗ್ ವೇಳೆ ವಿಮಾನ ಪತನವಾಗಿ ನಾಲ್ವರು ಮೃತಪಟ್ಟಿದ್ದರು.

ಸದ್ಯ ರಷ್ಯಾದ ವಿಶೇಷ ತನಿಖಾ ತಂಡವು ಸ್ಥಳಕ್ಕೆ ಧಾವಿಸಿದ್ದು, ಕಪ್ಪು ಪೆಟ್ಟಿಗೆ (Black Box) ಪತ್ತೆ ಹಚ್ಚುವ ಮೂಲಕ ಅಪಘಾತದ ನಿಖರ ಕಾರಣವನ್ನು ತಿಳಿಯಲು ಮುಂದಾಗಿದೆ. ಈ ಘಟನೆಯು ರಷ್ಯಾದ ವಾಯುಪಡೆಯ ಹಳೆಯ ವಿಮಾನಗಳ ಆಧುನೀಕರಣದ ಅಗತ್ಯವನ್ನು ಮತ್ತೊ

The post ರಷ್ಯಾದಲ್ಲಿ ಭೀಕರ ವಿಮಾನ ದುರಂತ: ಕ್ರೈಮಿಯಾ ಬಂಡೆಗೆ ಅಪ್ಪಳಿಸಿದ ‘An-26’, 29 ಸೇನಾ ಸಿಬ್ಬಂದಿ ದುರ್ಮರಣ. appeared first on Good News 24x7.

]]>
ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ತುರ್ತು ಲ್ಯಾಂಡಿಂಗ್: ಎಂಜಿನ್ ದೋಷದ ಮಧ್ಯೆಯೂ 161 ಪ್ರಯಾಣಿಕರು ಸುರಕ್ಷಿತ https://www.goodnews24x7.com/dehali-vimana-nilda%e1%b9%87adalli-i%e1%b9%87%e1%b8%8digo-vimanada-turtu-lya%e1%b9%87%e1%b8%8di%e1%b9%85g-enjin-do%e1%b9%a3ada-madhyeyu-161-praya%e1%b9%87ikaru-surak%e1%b9%a3ita-indigoflight/ Sat, 28 Mar 2026 09:20:07 +0000 https://www.goodnews24x7.com/?p=8993 ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ರಾಷ್ಟ್ರ ರಾಜಧಾನಿ ದೆಹಲಿಯತ್ತ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಮಧ್ಯಾಹ್ನದ ವೇಳೆ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ, ವಿಮಾನವನ್ನು ತುರ್ತು ಭೂಸ್ಪರ್ಶಕ್ಕೆ ಒಳಪಡಿಸಲಾಯಿತು. ಬೆಳಗ್ಗೆ ಸುಮಾರು 10:50ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದ ರನ್‌ವೇ 28ರಲ್ಲಿ ತುರ್ತು…

The post ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ತುರ್ತು ಲ್ಯಾಂಡಿಂಗ್: ಎಂಜಿನ್ ದೋಷದ ಮಧ್ಯೆಯೂ 161 ಪ್ರಯಾಣಿಕರು ಸುರಕ್ಷಿತ appeared first on Good News 24x7.

]]>

ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ರಾಷ್ಟ್ರ ರಾಜಧಾನಿ ದೆಹಲಿಯತ್ತ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಮಧ್ಯಾಹ್ನದ ವೇಳೆ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ, ವಿಮಾನವನ್ನು ತುರ್ತು ಭೂಸ್ಪರ್ಶಕ್ಕೆ ಒಳಪಡಿಸಲಾಯಿತು. ಬೆಳಗ್ಗೆ ಸುಮಾರು 10:50ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದ ರನ್‌ವೇ 28ರಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, ಸುರಕ್ಷತಾ ಕ್ರಮಗಳ ನಡುವೆ ವಿಮಾನವನ್ನು ಯಶಸ್ವಿಯಾಗಿ ನೆಲಕ್ಕಿಳಿಸಲಾಯಿತು.

ಬೋಯಿಂಗ್ 737 ಮಾದರಿಯ ಈ ವಿಮಾನದಲ್ಲಿ ಒಟ್ಟು 161 ಪ್ರಯಾಣಿಕರು ಇದ್ದರು. ತುರ್ತು ಲ್ಯಾಂಡಿಂಗ್ ಬಳಿಕ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಹೊರತೆಗೆದು ಸ್ಥಳಾಂತರಿಸಲಾಗಿದ್ದು, ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳ ಮತ್ತು ವಿಮಾನ ನಿಲ್ದಾಣದ ತುರ್ತು ಸೇವಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆಗೆ ಮುಂದಾಗಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿದರು.

ಈ ವಿಮಾನವು ಮೂಲತಃ ಟರ್ಕಿಯ ಕೊರೆಂಡನ್ ಏರ್‌ಲೈನ್ಸ್‌ಗೆ ಸೇರಿದದ್ದಾಗಿದ್ದು, ಇಂಡಿಗೋ ಕಂಪನಿಯು ಅದನ್ನು ಲೀಸ್ ಆಧಾರದಲ್ಲಿ ಬಳಸುತ್ತಿತ್ತು. ತಾಂತ್ರಿಕ ದೋಷದ ನಿಖರ ಕಾರಣವನ್ನು ಪತ್ತೆಹಚ್ಚಲು ತಜ್ಞರು ಪರಿಶೀಲನೆ ಆರಂಭಿಸಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.

The post ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ತುರ್ತು ಲ್ಯಾಂಡಿಂಗ್: ಎಂಜಿನ್ ದೋಷದ ಮಧ್ಯೆಯೂ 161 ಪ್ರಯಾಣಿಕರು ಸುರಕ್ಷಿತ appeared first on Good News 24x7.

]]>
280 ಪ್ರಯಾಣಿಕರಿದ್ದ ಹಡಗಿನಲ್ಲಿ ಭಾರೀ ಬೆಂಕಿ! https://www.goodnews24x7.com/massive-fire-on-a-ship-carrying-280-passengers/ Mon, 21 Jul 2025 10:30:57 +0000 https://www.goodnews24x7.com/?p=5175 ಇಂಡೋನೇಷಿಯಾ : ಟೈಟಾನಿಕ್ ಸಿನಿಮಾ ಮಾದರಿಯ ದುರಂತವೊಂದು ಇಂಡೋನೇಷಿಯಾದಲ್ಲಿ ನಡೆದಿದೆ. 280 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಹಗಡು ಬೆಂಕಿಗಾಹುತಿ ಆಗಿದೆ. ಇದರಿಂದ ಜೀವ ಉಳಿಸಿಕೊಳ್ಳಲು ಜನರು ಸಮುದ್ರಕ್ಕೆ ಹಾರಿದ್ದು, ಐವರು ಜೀವಬಿಟ್ಟಿದ್ದಾರೆ. ಉತ್ತರ ಸುಲಾವೇಸಿಯಲ್ಲಿ 280 ಪ್ರಯಾಣಿಕರಿದ್ದ ಕೆಎಂ ಬಾರ್ಸಿಲೋನಾ 5…

The post 280 ಪ್ರಯಾಣಿಕರಿದ್ದ ಹಡಗಿನಲ್ಲಿ ಭಾರೀ ಬೆಂಕಿ! appeared first on Good News 24x7.

]]>

ಇಂಡೋನೇಷಿಯಾ : ಟೈಟಾನಿಕ್ ಸಿನಿಮಾ ಮಾದರಿಯ ದುರಂತವೊಂದು ಇಂಡೋನೇಷಿಯಾದಲ್ಲಿ ನಡೆದಿದೆ. 280 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಹಗಡು ಬೆಂಕಿಗಾಹುತಿ ಆಗಿದೆ. ಇದರಿಂದ ಜೀವ ಉಳಿಸಿಕೊಳ್ಳಲು ಜನರು ಸಮುದ್ರಕ್ಕೆ ಹಾರಿದ್ದು, ಐವರು ಜೀವಬಿಟ್ಟಿದ್ದಾರೆ.

ಉತ್ತರ ಸುಲಾವೇಸಿಯಲ್ಲಿ 280 ಪ್ರಯಾಣಿಕರಿದ್ದ ಕೆಎಂ ಬಾರ್ಸಿಲೋನಾ 5 ಎಂಬ ಹಡಗು, ಅಗ್ನಿ ಅವಘಡಕ್ಕೆ ತುತ್ತಾಗಿದೆ. ಬೆಂಕಿ ಕಾಣಿಸಿದ ಹಿನ್ನಲೆ ಹಡಗಿನ ಡೆಕ್ಗಳಲ್ಲಿ ದಟ್ಟವಾದ ಕಪ್ಪು ಹೊಗೆ ಕಾಣಿಸಿಕೊಂಡಿದ್ದು, ನೋಡ ನೋಡ್ತಿದ್ದಂತೆ ಡಕ್ನ ಮುಂಭಾಗದಲ್ಲಿ ಬೆಂಕಿಯು ಸ್ಫೋಟಗೊಂಡಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆ ಆಗಿದೆ.

ಹಡಗಿನಲ್ಲಿ ಬೆಂಕಿ ಕಾಣಿಸಿಕ್ತೊದ್ದಂತೆ ಭಯಭೀತರಾದ ಜನರು ಲೈಫ್ ಜಾಕೆಟ್ ಹಾಕಿಕೊಡು ಸಮುದ್ರಕ್ಕೆ ನಗೆಯುವ ಮೂಲಕ ಜೀವುಳಿಸಿಕೊಂಡಿದ್ದಾರೆ. 300 ಪ್ರಯಾಣಿಕರಿದ್ದ ಹಡಗಿನಲ್ಲಿ 150 ಜನರನ್ನು ರಕ್ಷಿಸಲಾಗಿದೆ. ಉಳಿದವರಿಗಾಗಿ ಶೋಧ ನಡೀತಿದೆ. ಇಂಡೋನೇಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.

ಇನ್ನು, ಪುಟ್ಟು ಮಗುವನ್ನು ರಕ್ಷಣೆ ಮಾಡುವ ದೃಶ್ಯ ರೋಚಕವಾಗಿದೆ. ನೀರಿನ ಮಧ್ಯೆ ಮಹಿಳೆಯನ್ನ ಹಿಡಿದುಕೊಂಡು ಪುಟ್ಟ ಮಗು ಪರದಾಡ್ತಿದ್ದ ದೃಶ್ಯ ಮನ ಕಲಕುವಂತಿದೆ. ಇನ್ನೂ, ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ರಕ್ಷಣಾ ತಂಡದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. 20 ಮಂದಿ ನಾಪತ್ತೆ ಆದವರಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ಕತ್ತಲಾದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಆಗಿದೆ.

The post 280 ಪ್ರಯಾಣಿಕರಿದ್ದ ಹಡಗಿನಲ್ಲಿ ಭಾರೀ ಬೆಂಕಿ! appeared first on Good News 24x7.

]]>
ವಿಮಾನ-ಹೆಲಿಕ್ಯಾಪ್ಟರ್ ನಡುವೆ ಮುಖಾಮುಖಿ ಡಿಕ್ಕಿ :ಎಲ್ಲ 67 ಪ್ರಯಾಣಿಕರು ಸಾ*, 28 ಶ* ಪತ್ತೆ. https://www.goodnews24x7.com/%e0%b2%b5%e0%b2%bf%e0%b2%ae%e0%b2%be%e0%b2%a8-%e0%b2%b9%e0%b3%86%e0%b2%b2%e0%b2%bf%e0%b2%95%e0%b3%8d%e0%b2%af%e0%b2%be%e0%b2%aa%e0%b3%8d%e0%b2%9f%e0%b2%b0%e0%b3%8d-%e0%b2%a8%e0%b2%a1%e0%b3%81%e0%b2%b5/ Fri, 31 Jan 2025 09:01:46 +0000 https://www.goodnews24x7.com/?p=2007 ಆರ್ಲಿಂಗ್ಟನ್: 60 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ಜೆಟ್ ವಿಮಾನವು ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದ್ದು, ಅತ್ಯಂತ ಭೀಕರ ಅಪಘಾತದಲ್ಲಿ ವಿಮಾನ ಮತ್ತು ಹೆಲಿಕಾಪ್ಟರ್ ನಲ್ಲಿ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಪೊಟೊಮ್ಯಾಕ್…

The post ವಿಮಾನ-ಹೆಲಿಕ್ಯಾಪ್ಟರ್ ನಡುವೆ ಮುಖಾಮುಖಿ ಡಿಕ್ಕಿ :ಎಲ್ಲ 67 ಪ್ರಯಾಣಿಕರು ಸಾ*, 28 ಶ* ಪತ್ತೆ. appeared first on Good News 24x7.

]]>

ಆರ್ಲಿಂಗ್ಟನ್: 60 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ಜೆಟ್ ವಿಮಾನವು ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದ್ದು, ಅತ್ಯಂತ ಭೀಕರ ಅಪಘಾತದಲ್ಲಿ ವಿಮಾನ ಮತ್ತು ಹೆಲಿಕಾಪ್ಟರ್ ನಲ್ಲಿ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಪೊಟೊಮ್ಯಾಕ್ ನದಿಯ ಹಿಮಾವೃತ ನೀರಿನಿಂದ ಇದುವರೆಗೆ ಕನಿಷ್ಠ 28 ಶವಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ರಾತ್ರಿ ವಾಷಿಂಗ್ಟನ್ ಬಳಿಯ ರೊನಾಲ್ಡ್ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಯತ್ನಿಸುತ್ತಿದ್ದಾಗ ಜೆಟ್ ವಿಮಾನ ಡಿಕ್ಕಿ ಹೊಡೆದಿದೆ.


ಡಿಕ್ಕಿಯ ನಂತರ ಹೆಲಿಕಾಪ್ಟರ್ ಮತ್ತು ವಿಮಾನ ಎರಡೂ ನದಿಯಲ್ಲಿ ಪತನವಾಗಿದ್ದು, ಪೊಟೊಮ್ಯಾಕ್ ನದಿಯ ಹಿಮಾವೃತ ನೀರಿನಿಂದ ಇದುವರೆಗೆ ಕನಿಷ್ಠ 28 ಶವಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಂತದಲ್ಲಿ ಯಾವುದೇ ಪ್ರಯಾಣಿಕರು ಬದುಕುಳಿದಿದ್ದಾರೆ ಎಂಬ ನಾವು ನಂಬುವುದಿಲ್ಲ. ಹೀಗಾಗಿ ನಾವು ಈಗ ರಕ್ಷಣಾ ಕಾರ್ಯಾಚರಣೆಯನ್ನು ಮೃತದೇಹಗಳ ಪತ್ತೆ ಕಾರ್ಯಾಚರಣೆಯಾಗಿ ಬದಲಾಯಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಾಷಿಂಗ್ಟನ್ ಅಗ್ನಿಶಾಮಕ ದಳದ ಮುಖ್ಯಸ್ಥ ಜಾನ್ ಡೊನ್ನೆಲ್ಲಿ ಅವರು ಹೇಳಿದ್ದಾರೆ.
ವಿಮಾನವು ಮೂರು ಭಾಗಗಳಾಗಿ ತಲೆಕೆಳಗಾಗಿ ನೀರಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಹೆಲಿಕಾಪ್ಟರ್ನ ಅವಶೇಷಗಳು ಸಹ ಕಂಡುಬಂದಿವೆ. ಇನ್ನೂ ಶವಗಳಿಗಾಗಿ ಹುಡುಕಾಟ ನಡೆದಿದೆ ಎಂದು ಡೊನ್ನೆಲ್ಲಿ ತಿಳಿಸಿದ್ದಾರೆ.
ಅಪಘಾತದ ಹಿಂದಿನ ಕಾರಣವನ್ನು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್‌ಟಿಎಸ್‌ಬಿ) ಮತ್ತು ಫೆಡರಲ್ ವಿಮಾನಯಾನ ಆಡಳಿತ (ಎಫ್ಎಎ)ದ ತನಿಖಾಧಿಕಾರಿಗಳು ಅಪಘಾತದ ಸ್ಥಳದಲ್ಲಿದ್ದಾರೆ.

The post ವಿಮಾನ-ಹೆಲಿಕ್ಯಾಪ್ಟರ್ ನಡುವೆ ಮುಖಾಮುಖಿ ಡಿಕ್ಕಿ :ಎಲ್ಲ 67 ಪ್ರಯಾಣಿಕರು ಸಾ*, 28 ಶ* ಪತ್ತೆ. appeared first on Good News 24x7.

]]>
ಯಾವ ವಿಮಾನಕ್ಕಿಂತಲೂ ಕಮ್ಮಿಯಿಲ್ಲ ಈ ಕ್ಯಾಬ್‌ನಲ್ಲಿರುವ ಸೌಲಭ್ಯ! https://www.goodnews24x7.com/the-facilities-in-this-cab-are-no-less-than-any-plane/ Fri, 31 Jan 2025 08:40:29 +0000 https://www.goodnews24x7.com/?p=2001 ನಗರ ಪ್ರದೇಶಗಳಲ್ಲಿ ಹೆಚ್ಚಿನವರು ಅನುಕೂಲಕರ ಪ್ರಯಾಣವೆಂದು ಓಲಾ, ಉಬರ್ನಂತಹ ಕ್ಯಾಬ್ಗಳಲ್ಲೇ ಹೆಚ್ಚಾಗಿ ಓಡಾಡುತ್ತಿರುತ್ತಾರೆ. ಆದ್ರೆ ಹೆಚ್ಚಾಗಿ ಕ್ಯಾಬ್ ಡ್ರೈವರ್ಸ್ಗಳು ಸಮಯಕ್ಕೆ ಸರಿಯಾಗಿ ಬರೊಲ್ಲ, ಹೆಚ್ಚು ಹಣ ಪೀಕುತ್ತಾರೆ, ಗ್ರಾಹಕರೊಂದಿಗೆ ಸರಿಯಾಗಿ ವರ್ತನೆಯನ್ನು ತೋರುತ್ತಿಲ್ಲ ಎನ್ನೋ ದೂರುಗಳೇ ಕೇಳಿ ಬರುತ್ತಿರುತ್ತವೆ. ಈ ಎಲ್ಲಾ…

The post ಯಾವ ವಿಮಾನಕ್ಕಿಂತಲೂ ಕಮ್ಮಿಯಿಲ್ಲ ಈ ಕ್ಯಾಬ್‌ನಲ್ಲಿರುವ ಸೌಲಭ್ಯ! appeared first on Good News 24x7.

]]>

ನಗರ ಪ್ರದೇಶಗಳಲ್ಲಿ ಹೆಚ್ಚಿನವರು ಅನುಕೂಲಕರ ಪ್ರಯಾಣವೆಂದು ಓಲಾ, ಉಬರ್ನಂತಹ ಕ್ಯಾಬ್ಗಳಲ್ಲೇ ಹೆಚ್ಚಾಗಿ ಓಡಾಡುತ್ತಿರುತ್ತಾರೆ. ಆದ್ರೆ ಹೆಚ್ಚಾಗಿ ಕ್ಯಾಬ್ ಡ್ರೈವರ್ಸ್ಗಳು ಸಮಯಕ್ಕೆ ಸರಿಯಾಗಿ ಬರೊಲ್ಲ, ಹೆಚ್ಚು ಹಣ ಪೀಕುತ್ತಾರೆ, ಗ್ರಾಹಕರೊಂದಿಗೆ ಸರಿಯಾಗಿ ವರ್ತನೆಯನ್ನು ತೋರುತ್ತಿಲ್ಲ ಎನ್ನೋ ದೂರುಗಳೇ ಕೇಳಿ ಬರುತ್ತಿರುತ್ತವೆ. ಈ ಎಲ್ಲಾ ಸಂಗತಿಗಳ ನಡುವೆ ಇಲ್ಲೊಬ್ರು ಕ್ಯಾಬ್ ಡ್ರೈವರ್ ಕಾರ್ಯ ಎಲ್ಲರ ಮನ ಗೆದ್ದಿದೆ. ಸಾಮಾನ್ಯವಾಗಿ ವಿಮಾನಗಳಲ್ಲಿ ಊಟ, ತಿಂಡಿಯಿಂದ ಹಿಡಿದು ಪ್ರಯಾಣಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಆದ್ರೆ ಇಲ್ಲೊಬ್ರು ಕ್ಯಾಬ್ ಡ್ರೈವರ್ ನಾನೇನು ಕಮ್ಮಿಯಿಲ್ಲ ಎನ್ನುತ್ತಾ ವಿಮಾನಗಳಿಗಿಂತಲೂ ಉತ್ತಮವಾದ ಕ್ಯಾಬ್ ಸೇವೆಯನ್ನು ತಮ್ಮ ಪ್ರಯಾಣಿಕರಿಗೆ ಒದಗಿಸುತ್ತಿದ್ದಾರೆ. ಹೌದು ಇವರು ಉಚಿತ ತಿಂಡಿ, ನೀರಿನಿಂದ ಹಿಡಿದು ವೈ-ಫೈ ವರೆಗೆ ತಮ್ಮ ಕ್ಯಾಬ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸಿಕೊಡುತ್ತಿದ್ದಾರೆ. ಈ ಕುರಿತ ಫೋಟೊವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ದೆಹಲಿ ಮೂಲದ ಉಬರ್ ಚಾಲಕ ತಮ್ಮ ಕ್ಯಾಬ್ನಲ್ಲಿ ಪ್ರಯಾಣಿಕರಿಗೆ ಐಷಾರಾಮಿ ಸೇವೆಯನ್ನು ಒದಗಿಸುತ್ತಿದ್ದಾರೆ. ಕ್ಯಾಬ್ ಡ್ರೈವರ್ ಅಬ್ದುಲ್ ಖದೀರ್ ವಿಮಾನಗಳಿಗಿಂತಲೂ ಉತ್ತಮವಾದ ಕ್ಯಾಬ್ ಸೇವೆಯನ್ನು ತಮ್ಮ ಪ್ರಯಾಣಿಕರಿಗೆ ಒದಗಿಸುತ್ತಿದ್ದಾರೆ. ಇವರು ಪ್ರಯಾಣಿಕರಿಗಾಗಿ ಕ್ಯಾಬ್ನಲ್ಲಿ ಉಚಿತ ತಿಂಡಿಗಳು, ನೀರಿನ ಬಾಟಲ್, ತಂಪು ಪಾನೀಯ, ಕ್ಯಾಂಡಿ, ಚೂಯಿಂಗ್ಗಮ್, ಸುಗಂಧ ದ್ರವ್ಯ, ಪ್ರಥಮ ಚಿಕಿತ್ಸಾ ಕಿಟ್, ಹ್ಯಾಂಡ್ ಸ್ಯಾನಿಟೈಸರ್, ಔಷಧಗಳು, ಇಯರ್ಬಡ್, ಟಿಷ್ಯೂ ಪೇಪರ್, ನ್ಯೂಸ್ ಪೇಪರ್, ನಿಯತಕಾಲಿಕೆ, ವೈಫೈ ಎಲ್ಲಾ ರೀತಿಯ ಸೌಲಭ್ಯಗಳನ್ನು ಸಹ ಒದಗಿಸಿಕೊಡುತ್ತಿದ್ದಾರೆ.
ಈ ಕುರಿತ ಪೋಸ್ಟ್ ಒಂದನ್ನು r/delhi ಹೆಸರಿನ ರೆಡ್ಡಿಟ್ ಪೇಜ್ ಒಂದರಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ಕ್ಯಾಬ್ ಒಂದರಲ್ಲಿ ನೀರು, ಜ್ಯೂಸ್, ತಿಂಡಿಗಳಿಂದ ಹಿಡಿದು ಔಷಧಗಳವರೆಗೆ ಪ್ರಯಾಣಿಕರಿಗೆ ಅಗತ್ಯವಾಗಿ ಬೇಕಾದಂತಹ ಎಲ್ಲಾ ರೀತಿಯ ಸೌಲಭ್ಯಗಳಿರುವಂತಹ ದೃಶ್ಯವನ್ನು ಕಾಣಬಹುದು.
ಮೂರು ದಿನಗಳ ಹಿಂದೆ ಶೇರ್ ಮಾಡಲಾದ ಈ ಪೋಸ್ಟ್ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಚಾಲಕನಿಗೆ ದೇವರು ಒಳ್ಳೆಯದು ಮಾಡಲಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಹುಶಃ ವಿಮಾನದಲ್ಲಿಯೂ ಇಷ್ಟು ಸೌಲಭ್ಯ ಇಲ್ಲ ಎಂದು ಕಾಣುತ್ತೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಾನು ಕೂಡಾ ಈ ಕ್ಯಾಬ್ನಲ್ಲಿ ಪ್ರಯಾಣಿಸಿದ್ದೆ, ಆ ಚಾಲಕ ತುಂಬಾ ಒಳ್ಳೆಯ ವ್ಯಕ್ತಿʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಚಾಲಕನ ಈ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

The post ಯಾವ ವಿಮಾನಕ್ಕಿಂತಲೂ ಕಮ್ಮಿಯಿಲ್ಲ ಈ ಕ್ಯಾಬ್‌ನಲ್ಲಿರುವ ಸೌಲಭ್ಯ! appeared first on Good News 24x7.

]]>