people Archives - Good News 24x7 https://www.goodnews24x7.com/tag/people/ Kannada Sun, 12 Apr 2026 07:35:07 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg people Archives - Good News 24x7 https://www.goodnews24x7.com/tag/people/ 32 32 ಬಿಸಿಲ ಬೇಗೆಗೆ ಜನ ಹೈರಾಣು: ಶತಕದತ್ತ ಎಳನೀರು ಬೆಲೆ, ಗ್ರಾಹಕರಿಗೆ ದರ ಏರಿಕೆ ಬಿಸಿ! https://www.goodnews24x7.com/people-suffer-from-the-scorching-heat-coconut-water-price-nears-century-mark-consumers-are-worried-about-price-hike/ Sun, 12 Apr 2026 07:35:07 +0000 https://www.goodnews24x7.com/?p=9231 ರಾಜ್ಯಾದ್ಯಂತ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ 35 ಡಿ.ಸೆ. ದಾಟಿದೆ. ಬಿಸಿಲಿನ ಬೇಗೆಯಿಂದ ಕಂಗೆಟ್ಟಿರುವ ಜನರು ದೇಹ ತಣಿಸಿಕೊಳ್ಳಲು ನೈಸರ್ಗಿಕ ಪಾನೀಯಗಳ ಮೊರೆ ಹೋಗುತ್ತಿದ್ದು, ಎಳನೀರಿನ ಬೆಲೆ ಶತಕದತ್ತ ದಾಪುಗಾಲು ಹಾಕುತ್ತಿದೆ. ಮಳೆಯ ಕೊರತೆ ಹಾಗೂ…

The post ಬಿಸಿಲ ಬೇಗೆಗೆ ಜನ ಹೈರಾಣು: ಶತಕದತ್ತ ಎಳನೀರು ಬೆಲೆ, ಗ್ರಾಹಕರಿಗೆ ದರ ಏರಿಕೆ ಬಿಸಿ! appeared first on Good News 24x7.

]]>

ರಾಜ್ಯಾದ್ಯಂತ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ 35 ಡಿ.ಸೆ. ದಾಟಿದೆ. ಬಿಸಿಲಿನ ಬೇಗೆಯಿಂದ ಕಂಗೆಟ್ಟಿರುವ ಜನರು ದೇಹ ತಣಿಸಿಕೊಳ್ಳಲು ನೈಸರ್ಗಿಕ ಪಾನೀಯಗಳ ಮೊರೆ ಹೋಗುತ್ತಿದ್ದು, ಎಳನೀರಿನ ಬೆಲೆ ಶತಕದತ್ತ ದಾಪುಗಾಲು ಹಾಕುತ್ತಿದೆ. ಮಳೆಯ ಕೊರತೆ ಹಾಗೂ ರೋಗಬಾಧೆಯಿಂದ ಇಳುವರಿ ಕುಂಠಿತಗೊಂಡಿರುವುದು ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದ್ದು, ಮದ್ದೂರು ಮಾರುಕಟ್ಟೆಯಲ್ಲೇ 40-50 ರೂ. ದರವಿದೆ. ನಗರಕ್ಕೆ ಬರುವಷ್ಟರಲ್ಲಿ ಗುಣಮಟ್ಟದ ಎಳನೀರು ಒಂದಕ್ಕೆ 70 ರಿಂದ 80 ರೂ. ವರೆಗೆ ಮಾರಾಟವಾಗುತ್ತಿದೆ. ಕಲ್ಲಂಗಡಿ ಬೆಲೆಯೂ ಏರಿಕೆಯಾಗಿದ್ದು, ಬಿಸಿಲಿನಿಂದ ಪಾರಾಗಲು ಜನರು ಮನೆಯಲ್ಲಿ ಎಸಿ, ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಎಲೆಕ್ಟ್ರಾನಿಕ್ ಉಪಕರಣಗಳ ವ್ಯಾಪಾರ ವಹಿವಾಟು ಕೂಡ ಚುರುಕುಗೊಂಡಿದೆ.

ರಾಜ್ಯದಲ್ಲಿ ತಾಪಮಾನವು ವಾಡಿಕೆಗಿಂತ 3 ರಿಂದ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಕೇವಲ ಬೆಲೆ ಏರಿಕೆಯಷ್ಟೇ ಅಲ್ಲದೆ, ನೀರಿನ ಅಭಾವ ಮತ್ತು ಬಿಸಿಗಾಳಿಯ ಆರ್ಭಟದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮದ್ದೂರು ಮಾರುಕಟ್ಟೆಗೆ ಸಾಮಾನ್ಯವಾಗಿ ಪ್ರತಿದಿನ ಲಕ್ಷಾಂತರ ಎಳನೀರು ಪೂರೈಕೆಯಾಗುತ್ತಿತ್ತು, ಆದರೆ ಈ ಬಾರಿ ಬರಗಾಲ ಹಾಗೂ ‘ನುಸಿ ರೋಗ’ (Pest attack) ಬಾಧೆಯಿಂದಾಗಿ ಇಳುವರಿ ಶೇ. 50 ರಷ್ಟು ಕುಂಠಿತವಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗಿದ್ದು, ಸಣ್ಣ ಗಾತ್ರದ ಎಳನೀರು ಕೂಡ 50-60 ರೂಪಾಯಿಗೆ ಮಾರಾಟವಾಗುತ್ತಿದೆ. ಕೇವಲ ಎಳನೀರು ಮಾತ್ರವಲ್ಲದೆ, ಕಬ್ಬಿನ ಹಾಲು ಮತ್ತು ಮಜ್ಜಿಗೆಯ ದರ ಕೂಡ ಗ್ಲಾಸ್‌ಗೆ 5 ರಿಂದ 10 ರೂಪಾಯಿಯಷ್ಟು ದುಬಾರಿಯಾಗಿದೆ.

ಸಾರ್ವಜನಿಕರಿಗೆ ವೈದ್ಯರ ಸಲಹೆ:
ಬಿಸಿಲು ಹೆಚ್ಚಾಗಿರುವುದರಿಂದ ನಿರ್ಜಲೀಕರಣ (Dehydration) ತಪ್ಪಿಸಲು ಸಾರ್ವಜನಿಕರು ಕನಿಷ್ಠ 3-4 ಲೀಟರ್ ನೀರು ಕುಡಿಯಬೇಕು ಹಾಗೂ ಮಧ್ಯಾಹ್ನ 11 ರಿಂದ ಸಂಜೆ 4 ರವರೆಗೆ ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

The post ಬಿಸಿಲ ಬೇಗೆಗೆ ಜನ ಹೈರಾಣು: ಶತಕದತ್ತ ಎಳನೀರು ಬೆಲೆ, ಗ್ರಾಹಕರಿಗೆ ದರ ಏರಿಕೆ ಬಿಸಿ! appeared first on Good News 24x7.

]]>
ಗೃಹಬಳಕೆ ಎಲ್​ಪಿಜಿ ಸಿಲಿಂಡರ್​ಗಾಗಿ ಜನರ ಕ್ಯೂ! https://www.goodnews24x7.com/people-queue-for-domestic-lpg-cylinderspeople-queue-for-domestic-lpg-cylinders/ Tue, 24 Mar 2026 12:35:16 +0000 https://www.goodnews24x7.com/?p=8966 ನಗರವು ಪ್ರಸ್ತುತ ಗೃಹಬಳಕೆ LPG ಸಿಲಿಂಡರ್ ಕೊರತೆಯನ್ನು ಎದುರಿಸುತ್ತಿದೆ. ರಾಜಧಾನಿಯ ಲಿಂಗರಾಜಪುರದಲ್ಲಿರುವ ವಿನಯ್ ಗ್ಯಾಸ್ ಏಜೆನ್ಸಿ ಮುಂಭಾಗದಲ್ಲಿ ಸಿಲಿಂಡರ್‌ಗಳಿಗಾಗಿ ಜನರು ಅರ್ಧ ಕಿಲೋಮೀಟರ್‌ಗೂ ಹೆಚ್ಚು ದೂರ ಕ್ಯೂ ನಿಂತಿರುವುದು ಕಂಡುಬಂದಿದೆ. ಖಾಲಿ ಸಿಲಿಂಡರ್‌ಗಳನ್ನು ರಸ್ತೆಯಲ್ಲಿ ಸಾಲಾಗಿ ಇಟ್ಟ ಗ್ರಾಹಕರು ಬೆಳಿಗ್ಗೆ 8:30…

The post ಗೃಹಬಳಕೆ ಎಲ್​ಪಿಜಿ ಸಿಲಿಂಡರ್​ಗಾಗಿ ಜನರ ಕ್ಯೂ! appeared first on Good News 24x7.

]]>

ನಗರವು ಪ್ರಸ್ತುತ ಗೃಹಬಳಕೆ LPG ಸಿಲಿಂಡರ್ ಕೊರತೆಯನ್ನು ಎದುರಿಸುತ್ತಿದೆ. ರಾಜಧಾನಿಯ ಲಿಂಗರಾಜಪುರದಲ್ಲಿರುವ ವಿನಯ್ ಗ್ಯಾಸ್ ಏಜೆನ್ಸಿ ಮುಂಭಾಗದಲ್ಲಿ ಸಿಲಿಂಡರ್‌ಗಳಿಗಾಗಿ ಜನರು ಅರ್ಧ ಕಿಲೋಮೀಟರ್‌ಗೂ ಹೆಚ್ಚು ದೂರ ಕ್ಯೂ ನಿಂತಿರುವುದು ಕಂಡುಬಂದಿದೆ. ಖಾಲಿ ಸಿಲಿಂಡರ್‌ಗಳನ್ನು ರಸ್ತೆಯಲ್ಲಿ ಸಾಲಾಗಿ ಇಟ್ಟ ಗ್ರಾಹಕರು ಬೆಳಿಗ್ಗೆ 8:30 ರಿಂದಲೇ ಕಾಯುತ್ತಿದ್ದಾರೆ.

ಕಳೆದ ಒಂದು ವಾರದಿಂದ ಸಪ್ಲೈ ಆಗಿಲ್ಲ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು 10 ರಿಂದ 24 ದಿನಗಳವರೆಗೆ ಸಿಲಿಂಡರ್ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಆಹಾರ ಸಚಿವ ಮುನಿಯಪ್ಪ , ಗ್ಯಾಸ್ ಏಜೆನ್ಸಿಗಳ ಮುಂದೆ ಕ್ಯೂ ನಿಲ್ಲಬೇಡಿ, ಮನೆಬಾಗಿಲಿಗೆ ಸಿಲಿಂಡರ್ ತಲುಪಿಸಲಾಗುವುದು ಎಂದು ಹೇಳಿದರೂ, ವಾಸ್ತವದಲ್ಲಿ ಬೆಂಗಳೂರಿನ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿರವಂತೆ ಕಾಣುತ್ತಿದೆ.

 

ಸಿಲಿಂಡರ್ ವಿತರಣಾ ಏಜೆನ್ಸಿಯ ಹೇಳುವಂತೆ 5000 ಬುಕಿಂಗ್‌ಗಳಿಗೆ ಕೇವಲ 300-500 ಸಿಲಿಂಡರ್‌ಗಳು ಬರುತ್ತಿವೆ. ಇದಕ್ಕೆ “ಪ್ಯಾನಿಕ್ ಬುಕಿಂಗ್” ಕಾರಣ ಎಂದು ಹೇಳಲಾಗುತ್ತಿದೆ. ಸರ್ಕಾರವು ದೇಶೀಯ ಸಿಲಿಂಡರ್‌ಗಳಿಗೆ ಯಾವುದೇ ಕೊರತೆ ಇಲ್ಲ ಎಂದು ಹೇಳುತ್ತಿದ್ದರೂ, ಬೆಂಗಳೂರಿನಲ್ಲಿ ಜನರು ತಮ್ಮ ದೈನಂದಿನ ಕಾರ್ಯಗಳನ್ನು ಬಿಟ್ಟು ಸಿಲಿಂಡರ್‌ಗಳಿಗಾಗಿ ಕಾಯುತ್ತಿದ್ದಾರೆ. OTP ಬಂದಿದ್ದರೂ ಸಿಲಿಂಡರ್ ಸಿಗದಂತಹ ಪ್ರಕರಣಗಳು ವರದಿಯಾಗಿದೆ.

The post ಗೃಹಬಳಕೆ ಎಲ್​ಪಿಜಿ ಸಿಲಿಂಡರ್​ಗಾಗಿ ಜನರ ಕ್ಯೂ! appeared first on Good News 24x7.

]]>
ಹಾಸನದ ದುರಂತಕ್ಕೂ ಮುನ್ನ ಮತ್ತೊಂದು ಅಪಘಾತ ಮಾಡಿದ್ದ ಟ್ರಕ್ ಚಾಲಕ? https://www.goodnews24x7.com/truck-driver-had-another-accident-before-the-hassan-tragedy/ Sat, 13 Sep 2025 10:16:58 +0000 https://www.goodnews24x7.com/?p=7506 ಹಾಸನ: ಹಾಸನದ ಹೊರವಲಯದ ಮೊಸಳೆ ಹೊಸಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಸಂಭವಿಸಿದ ಟ್ರಕ್ ಅಪಘಾತದಲ್ಲಿ 9 ಮಂದಿ ಸಾವಿಗೀಡಾಗಿ ಹಲವು ಮಂದಿ ಗಾಯಗೊಂಡಿದ್ದಾರೆ. ಟ್ರಕ್ ಚಾಲಕನು ಚನ್ನಪಟ್ಟಣ ಬೈಪಾಸ್‌ನಲ್ಲಿಯೂ ಅಪಘಾತ ಮಾಡಿ ಮುಂದುವರಿದಿದ್ದ. ಅಲ್ಲಿ ಅಪಘಾ ಮಾಡಿ ಬಂದು ಗಣೇಶ ಮೆರವಣಿಗೆ…

The post ಹಾಸನದ ದುರಂತಕ್ಕೂ ಮುನ್ನ ಮತ್ತೊಂದು ಅಪಘಾತ ಮಾಡಿದ್ದ ಟ್ರಕ್ ಚಾಲಕ? appeared first on Good News 24x7.

]]>

ಹಾಸನ: ಹಾಸನದ ಹೊರವಲಯದ ಮೊಸಳೆ ಹೊಸಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಸಂಭವಿಸಿದ ಟ್ರಕ್ ಅಪಘಾತದಲ್ಲಿ 9 ಮಂದಿ ಸಾವಿಗೀಡಾಗಿ ಹಲವು ಮಂದಿ ಗಾಯಗೊಂಡಿದ್ದಾರೆ. ಟ್ರಕ್ ಚಾಲಕನು ಚನ್ನಪಟ್ಟಣ ಬೈಪಾಸ್‌ನಲ್ಲಿಯೂ ಅಪಘಾತ ಮಾಡಿ ಮುಂದುವರಿದಿದ್ದ. ಅಲ್ಲಿ ಅಪಘಾ ಮಾಡಿ ಬಂದು ಗಣೇಶ ಮೆರವಣಿಗೆ ವೇಳೆ ಟ್ರಕ್ ನುಗ್ಗಿಸಿದ್ದಾನೆ ಎಂಬ ಸ್ಫೋಟಕ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ಥಳೀಯರು ಆರೋಪ ಮಾಡಿದ್ದು, ಬೈಪಾಸ್‌ನಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಆಟೋ ಮತ್ತು ಬೈಕ್‌ಗಳಿಗೆ ಹಾನಿಯಾಗಿದೆ ಎನ್ನಲಾಗಿದೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ನಡೆಸಲಿ. ಆಗ ಸತ್ಯ ಗೊತ್ತಾಗಲಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮದ್ಯಪಾನ ಮಾಡಿ ಟ್ರಕ್ ಚಲಾಯಿಸಿರುವುದು ಕೂಡ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

 

 

The post ಹಾಸನದ ದುರಂತಕ್ಕೂ ಮುನ್ನ ಮತ್ತೊಂದು ಅಪಘಾತ ಮಾಡಿದ್ದ ಟ್ರಕ್ ಚಾಲಕ? appeared first on Good News 24x7.

]]>
ಸಾವಿರಾರು ಜನರಿದ್ದ ಗಣೇಶ ಮೆರವಣಿಗೆಗೆ ಯಮನಂತೆ ನುಗ್ಗಿದ ಟ್ರಕ್ https://www.goodnews24x7.com/truck-ploughs-into-ganesh-procession-with-thousands-of-people-2/ Sat, 13 Sep 2025 10:06:12 +0000 https://www.goodnews24x7.com/?p=7501 ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಭೀಕರ ದುರಂತ ಸಂಭವಿಸಿದೆ. ಮೊಸಳೆಹೊಸಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಒಂದು ಬದಿಯಲ್ಲಿ ಗಣೇಶ ಮೆರವಣಿಗೆ ಹೋಗುತ್ತಿದ್ದು, ಈ ವೇಳೆ ಟ್ರಂಕ್ ವೊಂದು ಯಮನಂತೆ ಬಂದು ಸಾವಿರಾರರು ಜನರಿದ್ದ ಮೆರಣಿಗೆಗೆ ನುಗ್ಗಿದೆ.…

The post ಸಾವಿರಾರು ಜನರಿದ್ದ ಗಣೇಶ ಮೆರವಣಿಗೆಗೆ ಯಮನಂತೆ ನುಗ್ಗಿದ ಟ್ರಕ್ appeared first on Good News 24x7.

]]>

ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಭೀಕರ ದುರಂತ ಸಂಭವಿಸಿದೆ. ಮೊಸಳೆಹೊಸಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಒಂದು ಬದಿಯಲ್ಲಿ ಗಣೇಶ ಮೆರವಣಿಗೆ ಹೋಗುತ್ತಿದ್ದು, ಈ ವೇಳೆ ಟ್ರಂಕ್ ವೊಂದು ಯಮನಂತೆ ಬಂದು ಸಾವಿರಾರರು ಜನರಿದ್ದ ಮೆರಣಿಗೆಗೆ ನುಗ್ಗಿದೆ. ಪರಿಣಾಮ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು, ಗಾಯಗೊಂಡರಿಗೆ ಚಿಕಿತ್ಸೆ ಮುಂದುರೆದಿದೆ. ಮೆರವಣಿಯಲ್ಲಿ ಸಾವಿರಾರು ಜನರು ಡಿಜೆ ಸಾಂಗ್ ಗೆ ಭರ್ಜರಿ ಸ್ಟೆಪ್ ಹಾಕುತ್ತ ಎಂಜಾಯ್ ಮಾಡುತ್ತಿದ್ದರು. ಈ ವೇಳೆ ನೋಡ ನೋಡುತ್ತಿದ್ದಂತೆಯೇ ಟ್ರಕ್ ವೇಗವಾಗಿ ಬಂದು ಜನರ ಮೇಲೆ ಹರಿದಿದೆ.

The post ಸಾವಿರಾರು ಜನರಿದ್ದ ಗಣೇಶ ಮೆರವಣಿಗೆಗೆ ಯಮನಂತೆ ನುಗ್ಗಿದ ಟ್ರಕ್ appeared first on Good News 24x7.

]]>
ಗೋವಾ ಮೂಲದ ಯುವಕನಿಗೆ ಸಾರಾ ಕ್ಲೀನ್​ಬೋಲ್ಡ್​.? https://www.goodnews24x7.com/7295-2sara-kleinbold-for-a-young-man-from-goa/ Wed, 03 Sep 2025 09:27:45 +0000 https://www.goodnews24x7.com/?p=7295 ಮಾಸ್ಟರ್​​ ಬ್ಲಾಸ್ಟರ್​​ ಸಚಿನ್​ ತೆಂಡುಲ್ಕರ್​​​ಗಿಂತ ಕಳೆದೊಂದು ಕೆಲ ವರ್ಷದಿಂದ ಅವರ ಮಗಳ ಹೆಸರೇ ಸಖತ್​ ಸೌಂಡ್​ ಮಾಡ್ತಿದೆ. ಸಾರಾ ತೆಂಡುಲ್ಕರ್​​ ಡೇಟಿಂಗ್​, ಲವ್​ ಗಾಸಿಪ್​ಗಳಂತೂ ಆಗಾಗ ಸದ್ದು ಮಾಡ್ತಾನೆ ಇರುತ್ತೆ. ಶುಭ್​ಮನ್​ ಗಿಲ್​ಯಿಂದ ಹಿಡಿದು ಸಿದ್ಧಾಂತ್​ ಚತುರ್ವೇದಿವರೆಗೆ ಸಾರಾ ಹೆಸರು ಥಳುಕು…

The post ಗೋವಾ ಮೂಲದ ಯುವಕನಿಗೆ ಸಾರಾ ಕ್ಲೀನ್​ಬೋಲ್ಡ್​.? appeared first on Good News 24x7.

]]>

ಮಾಸ್ಟರ್​​ ಬ್ಲಾಸ್ಟರ್​​ ಸಚಿನ್​ ತೆಂಡುಲ್ಕರ್​​​ಗಿಂತ ಕಳೆದೊಂದು ಕೆಲ ವರ್ಷದಿಂದ ಅವರ ಮಗಳ ಹೆಸರೇ ಸಖತ್​ ಸೌಂಡ್​ ಮಾಡ್ತಿದೆ. ಸಾರಾ ತೆಂಡುಲ್ಕರ್​​ ಡೇಟಿಂಗ್​, ಲವ್​ ಗಾಸಿಪ್​ಗಳಂತೂ ಆಗಾಗ ಸದ್ದು ಮಾಡ್ತಾನೆ ಇರುತ್ತೆ. ಶುಭ್​ಮನ್​ ಗಿಲ್​ಯಿಂದ ಹಿಡಿದು ಸಿದ್ಧಾಂತ್​ ಚತುರ್ವೇದಿವರೆಗೆ ಸಾರಾ ಹೆಸರು ಥಳುಕು ಹಾಕಿಕೊಂಡಿದ್ದ ಕತೆಗಳೆಲ್ಲಾ ಗೊತ್ತಲ್ವಾ.? ಆದ್ರೀಗ ಈ ಕಹಾನಿಯಲ್ಲಿ ಒಂದು ಟ್ವಿಸ್ಟ್​​ ಸಿಕ್ಕಿದೆ.

ಸುಡುವ ಸೂರ್ಯನೇ ನಾಚುವಂತಾ ನಗು, ಹಾಲುಗೆನ್ನೆಯ ಹೊಳಪು, ಗುಳಿಕೆನ್ನೆಯ ಚೆಲುವು. ಒಂದೇ ಮಾತಲ್ಲಿ ಹೇಳೋದಾದ್ರೆ ಸೌಂದರ್ಯದ ಗಣಿ. ವಿಶ್ವದ ಅಸಂಖ್ಯ ಜನರ ಹೃದಯ ಗೆದ್ದ ಸೌಂದರ್ಯ ಈಕೆಯದ್ದು.

 

ನಾವು ಮಾತನಾಡ್ತಾ ಇರೋದು ಕ್ರಿಕೆಟ್​ ದೇವರು ಸಚಿನ್​ ತೆಂಡುಲ್ಕರ್​​ ಪುತ್ರಿ ಸಾರಾ ತೆಂಡುಲ್ಕರ್​​ ಬಗ್ಗೆನೇ. ಕಳೆದ ಕೆಲ ವರ್ಷದಿಂದ ತೆಂಡುಲ್ಕರ್​ಗಿಂತ ಹೆಚ್ಚು ಸಾರಾ ಸುದ್ದಿಯಾಗಿದ್ದಾರೆ. ಲವ್​​, ಡೇಡಿಂಗ್​ ವಿಚಾರಗಳಂತೂ ಪದೇ ಸದ್ದು ಮಾಡಿವೆ. ಟೀಮ್​ ಇಂಡಿಯಾ ಟೆಸ್ಟ್​​ ಕ್ಯಾಪ್ಟನ್​​ ಶುಭ್​ಮನ್​ ಗಿಲ್​, ಬಾಲಿವುಡ್​​ ನಟ ಸಿದ್ಧಾಂತ್​ ಚತುರ್ವೇದಿ ಹೆಸರುಗಳು ಓಡಾಡಿದ್ವು. ಇದೀಗ ಈ ಲವ್​ ಕಹಾನಿಯಲ್ಲಿ ಹೊಸ ಪಾತ್ರದ ಎಂಟ್ರಿಯಾಗಿದೆ.

 

ಸಾರಾ ತೆಂಡುಲ್ಕರ್​​​ ಲವ್​ ಕಹಾನಿಯಲ್ಲಿ ಈಗ ಒಂದು ಟ್ವಿಸ್ಟ್​​​ ಸಿಕ್ಕಿದೆ. ಸಾರಾ ತೆಂಡುಲ್ಕರ್​ ಲೈಫ್​ಗೆ ಹೊಸ ಹುಡುಗನ ಎಂಟ್ರಿಯಾದಂತಿದೆ. ಒಬ್ಬ ಹುಡುಗನೊಟ್ಟಿಗೆ ಸಾರಾ ಇರೋ ಹಲವು ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿವೆ. ಆ ಫೋಟೋಗಳೇ ಮತ್ತೊಂದು ಡೇಟಿಂಗ್​ಗೆ ಗಾಸಿಪ್​ ಹುಟ್ಟಿಗೆ ದಾರಿ ಮಾಡಿಕೊಟ್ಟಿವೆ.

ಸಾರಾ ತೆಂಡುಲ್ಕರ್​​ ಒಬ್ಬ ಹುಡುಗನೊಂದಿಗೆ ಆತ್ಮೀಯವಾಗಿ ಕಾಣಿಸಿಕೊಂಡ ಬೆನ್ನಲ್ಲೇ ಲವ್​ ಗಾಸಿಪ್​ ಕಾಡ್ಗಿಚ್ಚಿನಂತೆ ಹಬ್ಬಿದೆ. ಇದಕ್ಕೆ ಮತ್ತೊಂದು ಫೋಟೋ ಕಾರಣವಾಗಿದೆ. ಸಾರಾ ತಂದೆ ಸಚಿನ್​, ತಾಯಿ ಅಂಜಲಿ ಜೊತೆಗೆ ಈ ಹುಡುಗ ಕಾಣಿಸಿಕೊಂಡ ಫೋಟೋ ಕೂಡ ವೈರಲ್​ ಆಗಿದೆ. ಜೊತೆಗೆ ಸಚಿನ್​, ಅಂಜಲಿ ಹಾಗೂ ಅರ್ಜುನ್​ ಇನ್ಸ್​​ಸ್ಟಾಗ್ರಾಂನಲ್ಲಿ ಈ ಹುಡುಗನನ್ನ ಫಾಲೋ ಮಾಡ್ತಿದ್ದಾರೆ. ಹೊಸ ಪ್ರೇಮ್​ ಕಹಾನಿಯ ಸುದ್ದಿ ಹಬ್ಬಲು ಈ ಎಲ್ಲಾ ವಿಚಾರಗಳು ಕಾರಣವಾಗಿವೆ.

ಸಾರಾ ತೆಂಡುಲ್ಕರ್​​ ಜೊತೆಗೆ ಕಾಣಿಸಿಕೊಂಡಿರೋ ಹುಡುಗನ ಹೆಸರು ಸಿದ್ಧಾರ್ಥ್​​ ಕೆರ್ಕರ್​​. ಶ್ರೀಮಂತ ಉದ್ಯಮಿ ಹಾಗೂ ಖ್ಯಾತ ಆರ್ಟಿಸ್ಟ್​​.! ಗೋವಾದಲ್ಲಿ ಹೋಟೆಲ್​ ಉದ್ಯಮವನ್ನ ನಡೆಸ್ತಾ ಇದ್ದಾರೆ. ಮೂಲತಃ ಸಿದ್ಧಾರ್ಥ್​​ ಕುಟುಂಬಸ್ಥರು ಶಿಲ್ಪಕಲೆಯ ಹಿನ್ನೆಲೆಯುಳ್ಳವರು. ಸಿದ್ಧಾರ್ಥ್​​ ಕೂಡ ಲಂಡನ್​ನ ಯುನಿವರ್ಸಿಟಿ ಆಫ್​ ಆರ್ಟ್ಸ್​​ನಲ್ಲಿ ಪದವಿ ಪಡೆದಿದ್ದು, ಶಿಲ್ಪಕಲೆಯ ವೃತ್ತಿಯನ್ನೂ ಮಾಡ್ತಿದ್ದಾರೆ.

 

ಸಾರಾ ತೆಂಡುಲ್ಕರ್​​ -ಸಿದ್ಧಾರ್ಥ್​​.. ಇವರಿಬ್ಬರ​​​ ಭೇಟಿ-ಪರಿಚಯ ಆಗಿದ್ದು ಲಂಡನ್​​ನಲ್ಲೇ. ಇದೀಗ ಭಾರತಕ್ಕೆ ವಾಪಾಸ್ಸಾಗಿರೋ ಇಬ್ಬರೂ ಇಲ್ಲಿಯೇ ನೆಲೆಯೂರೋ ಯತ್ನದಲ್ಲಿದ್ದಾರೆ. ಸಾರಾ ತೆಂಡುಲ್ಕರ್​​ ಕೆಲ ದಿನಗಳ ಹಿಂದಷ್ಟೇ ಮುಂಬೈನಲ್ಲಿ ಬ್ಯುಸಿನೆಸ್​ ಆರಂಭಿಸಿದ್ದಾರೆ. ಸಿದ್ಧಾರ್ಥ್​​ ಗೋವಾದಲ್ಲಿ ಸೆಟಲ್​ ಆಗೋ ಯತ್ನದಲ್ಲಿದ್ದಾರೆ.

ಸಾರಾ ತೆಂಡುಲ್ಕರ್​​ ಲವ್​ ಲೈಫ್​ ಅವರನ್ನ ಬಿಟ್ಟು, ಇವರನ್ನ ಬಿಟ್ಟು ಇವರ್ಯಾರು ಎಂಬಂತಾಗಿದೆ. ಸದ್ಯ ಸಿದ್ಧಾರ್ಥ್​​ ಕೆರ್ಕರ್​ ಜೊತೆಗೆ ಸಾರಾ ಹೆಸರು ಜೋರಾಗಿ ಸದ್ದು ಮಾಡ್ತಿದೆ. ಆದ್ರೆ, ಅಧಿಕೃತವಾದ ಯಾವುದೇ ಮಾಹಿತಿಯಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಏನಾಗುತ್ತೋ ದೇವರೆ ಬಲ್ಲ.

The post ಗೋವಾ ಮೂಲದ ಯುವಕನಿಗೆ ಸಾರಾ ಕ್ಲೀನ್​ಬೋಲ್ಡ್​.? appeared first on Good News 24x7.

]]>
ಗೂಗಲ್ ಮ್ಯಾಪ್ ತಂಡದವರ ಮೇಲೆ ಹಳ್ಳಿಗರ ದಾಳಿ…! https://www.goodnews24x7.com/villagers-beat-up-google-map-team-members-mistaking-them-for-thieves/ Fri, 29 Aug 2025 11:55:58 +0000 https://www.goodnews24x7.com/?p=6976 ಗೂಗಲ್ ಮ್ಯಾಪ್​(Google Map) ತಂಡದ ಸದಸ್ಯರನ್ನು ಕಳ್ಳರೆಂದು ಭಾವಿಸಿ ಹಳ್ಳಿ ಜನ ಥಳಿಸಿರುವ ಘಟನೆ ಉತ್ತರ ಪ್ರದೇಶದ ಘಟಂಪುರದಲ್ಲಿ ನಡೆದಿದೆ. ಠಾಣೆಯ ಬಿರ್ಹಾರ್ ಔಟ್‌ಪೋಸ್ಟ್ ಪ್ರದೇಶದ ಮಹೋಲಿಯಾ ಗ್ರಾಮದ ಗ್ರಾಮಸ್ಥರು ಗೂಗಲ್ ಮ್ಯಾಪ್ ಕ್ಯಾಮೆರಾ ಅಳವಡಿಸಲಾದ ಕಾರನ್ನು ಕಳ್ಳರ ಕಾರು ಎಂದು…

The post ಗೂಗಲ್ ಮ್ಯಾಪ್ ತಂಡದವರ ಮೇಲೆ ಹಳ್ಳಿಗರ ದಾಳಿ…! appeared first on Good News 24x7.

]]>

ಗೂಗಲ್ ಮ್ಯಾಪ್​(Google Map) ತಂಡದ ಸದಸ್ಯರನ್ನು ಕಳ್ಳರೆಂದು ಭಾವಿಸಿ ಹಳ್ಳಿ ಜನ ಥಳಿಸಿರುವ ಘಟನೆ ಉತ್ತರ ಪ್ರದೇಶದ ಘಟಂಪುರದಲ್ಲಿ ನಡೆದಿದೆ. ಠಾಣೆಯ ಬಿರ್ಹಾರ್ ಔಟ್‌ಪೋಸ್ಟ್ ಪ್ರದೇಶದ ಮಹೋಲಿಯಾ ಗ್ರಾಮದ ಗ್ರಾಮಸ್ಥರು ಗೂಗಲ್ ಮ್ಯಾಪ್ ಕ್ಯಾಮೆರಾ ಅಳವಡಿಸಲಾದ ಕಾರನ್ನು ಕಳ್ಳರ ಕಾರು ಎಂದು ತಪ್ಪಾಗಿ ಭಾವಿಸಿದ್ದರು.

 

ಗ್ರಾಮಸ್ಥರು ಕಾರನ್ನು ಸುತ್ತುವರೆದು ಗದ್ದಲ ಸೃಷ್ಟಿಸಲು ಪ್ರಾರಂಭಿಸಿದಾಗ,ಸಿಬ್ಬಂದಿ ಭಯಭೀತರಾಗಿದ್ದರು.ಪೊಲೀಸರಿಗೆ ಕರೆ ಮಾಡಿದ್ದರು.ಸಾಧ್ ಪೊಲೀಸರು ಸ್ಥಳಕ್ಕೆ ತಲುಪಿ ಜನರಿಗೆ ವಿವರಿಸಿದರು. ಇದಾದ ನಂತರ ಕಾರನ್ನು ಕಳುಹಿಸಲಾಯಿತು.

ಸಾಧ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನದ ಘಟನೆಗಳಿಂದ ಜನರು ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ಶಹಪುರ್ ಉಮ್ರಾ ಗ್ರಾಮದಲ್ಲಿ ಒಂಬತ್ತು ತಿಂಗಳ ಶಿಶುವಿನ ಹಣೆಗೆ ಬಂದೂಕಿಟ್ಟು, ದರೋಡೆ ಮಾಡಿದ ಪ್ರಕರಣವೂ ವರದಿಯಾಗಿದೆ.

 

ಮತ್ತಷ್ಟು ಓದಿ: ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆ ಮೇಲೆ ಹೋಗಿ ಜೀವ ಕಳೆದುಕೊಂಡ ದುರ್ದೈವಿಗಳು

ಗುರುವಾರ, ಗೂಗಲ್‌ನ ಸ್ಟ್ರೀಟ್ ವ್ಯೂ ಮ್ಯಾಪಿಂಗ್ ಕಾರು, 360 ಡಿಗ್ರಿ ಕ್ಯಾಮೆರಾ ಹೊತ್ತು ಹಾದುಹೋದಾಗ, ಊರಿಗೆ ಕಳ್ಳರು ಬಂದಿದ್ದಾರೆಂಬ ವದಂತಿ ಶರವೇಗದಲ್ಲಿ ಹಬ್ಬಿತ್ತು. ಇದಾದ ನಂತರ, ಗ್ರಾಮಸ್ಥರು ಕಾರನ್ನು ಎಲ್ಲಾ ಕಡೆಯಿಂದ ಸುತ್ತುವರೆದು ಗದ್ದಲ ಸೃಷ್ಟಿಸಲು ಪ್ರಾರಂಭಿಸಿದರು. ಕಾರನ್ನು ನಿಲ್ಲಿಸಲು ಅವರು ರಸ್ತೆಯ ಮೇಲೆ ಮರದ ದಿಮ್ಮಿಗಳನ್ನು ಹಾಕಿದರು. ಕಾರಿನಲ್ಲಿದ್ದ ಸಿಬ್ಬಂದಿ ಭಯಭೀತರಾಗಿದ್ದರು.

ಅವರು ತಕ್ಷಣ ಪೊಲೀಸರಿಗೆ ಕರೆ ಮಾಡಿದರು. ಮಾಹಿತಿಯ ಮೇರೆಗೆ ಪೊಲೀಸರು ಆಗಮಿಸಿ ಜನರಿಗೆ ವಿವರಿಸಿದರು. ಗ್ರಾಮಸ್ಥರಿಗೆ ವಿವರಿಸಿದ ನಂತರ ಕಾರನ್ನು ಸುರಕ್ಷಿತವಾಗಿ ಕಳುಹಿಸಲಾಯಿತು ಎಂದು ಇನ್ಸ್‌ಪೆಕ್ಟರ್ ಹೇಳಿದರು.

ತಡರಾತ್ರಿ ಕಳ್ಳರು ಕಾರಿನಲ್ಲಿ ಬಂದು ಕಳ್ಳತನ ಮಾಡಿರುವ ಸಾಕಷ್ಟು ಘಟನೆಗಳು ಅಲ್ಲಿ ಅಂಭವಿಸಿದೆ. ಹೀಗಾಗಿ ಜನರು ಜಾಗರೂಕರಾಗಿದ್ದು, ಅಲ್ಲಿ ಓಡಾಡುವ ಎಲ್ಲಾ ವಾಹನಗಳ ಮೇಲೆ ನಿಗಾ ಇಡುತ್ತಿದ್ದಾರೆ. ಆಗಸ್ಟ್​ 28ರಂದು ಗೂಗಲ್ ಮ್ಯಾಪ್ ತಂಡವುಪೊಲೀಸರು ಅಥವಾ ಗ್ರಾಮ ಅಧಿಕಾರಿಗಳಿಗೆ ಪೂರ್ವ ಸೂಚನೆ ನೀಡದೆ ರಸ್ತೆ ಮಟ್ಟದ ಸಮೀಕ್ಷೆಯನ್ನು ನಡೆಸುತ್ತಿತ್ತು. ಆಗ ಊರಿನವರು ಅವರು ಕಳ್ಳರೆಂದು ಥಳಿಸಿದ್ದಾರೆ.

ಪೊಲೀಸರು ಗ್ರಾಮಸ್ಥರು ಮತ್ತು ಸಮೀಕ್ಷಾ ತಂಡವನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಗ್ರಾಮಸ್ಥರು ನಮ್ಮನ್ನು ಸುತ್ತುವರೆದರು. ಅವರು ನಮ್ಮ ದಾಖಲೆಗಳನ್ನು ಪರಿಶೀಲಿಸಿದ್ದರೆ, ಅವರಿಗೆ ನಮ್ಮ ಉದ್ದೇಶ ಅರ್ಥವಾಗುತ್ತಿತ್ತು ಎಂದು ಆ ತಂಡದ ನಾಯಕ ಸಂದೀಪ್ ತಿಳಿಸಿದ್ದಾರೆ.

The post ಗೂಗಲ್ ಮ್ಯಾಪ್ ತಂಡದವರ ಮೇಲೆ ಹಳ್ಳಿಗರ ದಾಳಿ…! appeared first on Good News 24x7.

]]>
KSRTC ಬಸ್ಸಿನಿಂದಾಗಿ ಒಂದು ಮಗು ಸೇರಿ ಐವರ ಜೀವ ಬ*ಲಿ…! https://www.goodnews24x7.com/five-people-including-a-child-lost-their-lives-due-to-a-ksrtc-bus/ Thu, 28 Aug 2025 11:34:35 +0000 https://www.goodnews24x7.com/?p=6902 ಬ್ರೇಕ್ ಫೇಲ್.. ಒಂದು ಮಗು ಸೇರಿ ಐವರ ಜೀವ ತೆಗೆದ KSRTC ಕೇರಳ ಗಡಿಭಾಗ ತಲಪಾಡಿಯಲ್ಲಿ ಭೀಕರ ಅಪಘಾತ ಸಂಭವಿಸಿ ಒಂದು ಮಗು ಸೇರಿ ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಿಯಂತ್ರಣ ತಪ್ಪಿದ KSRTC ಬಸ್ ನಿಲ್ದಾಣ ಮತ್ತು ಆಟೋ ರಿಕ್ಷಾಗಳಿಗೆ…

The post KSRTC ಬಸ್ಸಿನಿಂದಾಗಿ ಒಂದು ಮಗು ಸೇರಿ ಐವರ ಜೀವ ಬ*ಲಿ…! appeared first on Good News 24x7.

]]>

ಬ್ರೇಕ್ ಫೇಲ್.. ಒಂದು ಮಗು ಸೇರಿ ಐವರ ಜೀವ ತೆಗೆದ KSRTC
ಕೇರಳ ಗಡಿಭಾಗ ತಲಪಾಡಿಯಲ್ಲಿ ಭೀಕರ ಅಪಘಾತ ಸಂಭವಿಸಿ ಒಂದು ಮಗು ಸೇರಿ ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಿಯಂತ್ರಣ ತಪ್ಪಿದ KSRTC ಬಸ್ ನಿಲ್ದಾಣ ಮತ್ತು ಆಟೋ ರಿಕ್ಷಾಗಳಿಗೆ ಡಿಕ್ಕಿ ಹೊಡೆದಿದೆ.
ಮಂಗಳೂರು: ಕೇರಳ ಗಡಿಭಾಗ ತಲಪಾಡಿಯಲ್ಲಿ ಭೀಕರ ಅಪಘಾತ ಸಂಭವಿಸಿ ಒಂದು ಮಗು ಸೇರಿ ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಬಸ್ ನಿಲ್ದಾಣಕ್ಕೆ ಬಂದು ನುಗ್ಗಿದ್ದರಿಂದ ಅಲ್ಲಿ ನಿಂತಿದ್ದವರ ಮೇಲೂ ಹರಿದಿದೆ. ಅಲ್ಲದೇ ಪಕ್ಕದಲ್ಲಿದ್ದ ಆಟೋಗೂ ಬಂದು ಗುದ್ದಿದೆ. ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಮೃತಪಟ್ಟಿದ್ದಾರೆ. ಮೃತರೆಲ್ಲ ಒಂದೇ ಕುಟುಂಬದವರು ಎನ್ನಲಾಗಿದೆ. ಇದಲ್ಲದೇ ಒಂದು ಮಗು ಕೂಡ ಪ್ರಾಣ ಕಳೆದುಕೊಂಡಿದೆ.

The post KSRTC ಬಸ್ಸಿನಿಂದಾಗಿ ಒಂದು ಮಗು ಸೇರಿ ಐವರ ಜೀವ ಬ*ಲಿ…! appeared first on Good News 24x7.

]]>
ಲಾರಿ-ಕೆಎಸ್​ಆರ್​ಟಿಸಿ ಬಸ್​ ಮಧ್ಯೆ ಭೀಕರ ಅಪಘಾತ. https://www.goodnews24x7.com/a-terrible-accident-between-a-lorry-and-a-ksrtc-bus/ Sat, 16 Aug 2025 08:16:25 +0000 https://www.goodnews24x7.com/?p=6195 ಬೆಂಗಳೂರು : ನೆಲಮಂಗಲ ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಬಳಿ ಬೆಳಗ್ಗಿನಜಾವ 3:30 ಗಂಟೆ ಸುಮಾರಿಗೆ ಕುರಿ, ಮೇಕೆ ತುಂಬಿದ್ದ ಲಾರಿಗೆ ಕೆಎಸ್​​ಆರ್​ಟಿಸಿ ಬಸ್​ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಲಾರಿಯಲ್ಲಿದ್ದ ಸೀನಪ್ಪ(50), ನಜೀರ್ ಅಹ್ಮದ್(36), ಆನಂದ್(42) ಮೃತರು. ನೆಲಮಂಗಲ ಸಂಚಾರಿ…

The post ಲಾರಿ-ಕೆಎಸ್​ಆರ್​ಟಿಸಿ ಬಸ್​ ಮಧ್ಯೆ ಭೀಕರ ಅಪಘಾತ. appeared first on Good News 24x7.

]]>

ಬೆಂಗಳೂರು : ನೆಲಮಂಗಲ ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಬಳಿ ಬೆಳಗ್ಗಿನಜಾವ 3:30 ಗಂಟೆ ಸುಮಾರಿಗೆ ಕುರಿ, ಮೇಕೆ ತುಂಬಿದ್ದ ಲಾರಿಗೆ ಕೆಎಸ್​​ಆರ್​ಟಿಸಿ ಬಸ್​ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಲಾರಿಯಲ್ಲಿದ್ದ ಸೀನಪ್ಪ(50), ನಜೀರ್ ಅಹ್ಮದ್(36), ಆನಂದ್(42) ಮೃತರು. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುರಿ, ಮೇಕೆ ತುಂಬಿಕೊಂಡು ಮುಧೋಳದಿಂದ ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆಗೆ ಲಾರಿ ತೆರಳುತ್ತಿತ್ತು. ಟೈಯರ್ ಪಂಚರ್ ಆಗಿದ್ದರಿಂದ ರಸ್ತೆ ಬದಿ ನಿಲ್ಲಿಸಲಾಗಿತ್ತು. ಈ ವೇಳೆ ನಿಂತಿದ್ದ ಲಾರಿಗೆ ಕೆಎಸ್​ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಲಾರಿ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮರಕ್ಕೆ ಕಾರು ಡಿಕ್ಕಿಯಾಗಿ ಮೂವರಿಗೆ ಗಂಭೀರ ಗಾಯ
ವೇಗ ಹಿನ್ನಲೆ ನಿಯಂತ್ರಣಕ್ಕೆ ಸಿಗದೆ ಮರಕ್ಕೆ ಕಾರು ಡಿಕ್ಕಿಯಾಗಿ ಮೂವರಿಗೆ ಗಂಭೀರ ಗಾಯಗಳಾಗಿರುವಂತಹ ಘಟನೆ ಬೆಂಗಳೂರಿನ ಹೆಸರಘಟ್ಟ ಸಮೀಪದ ತೋಟಗೆರೆಯಲ್ಲಿ ನಡೆದಿದೆ. ರಾಮದೇವನಹಳ್ಳಿಯ ರಾಕೇಶ್, ಕಾರ್ತಿಕ್ ಮತ್ತು ನವೀನ್​ಗೆ ಗಾಯಗಳಾಗಿದ್ದು, ಮೂವರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

The post ಲಾರಿ-ಕೆಎಸ್​ಆರ್​ಟಿಸಿ ಬಸ್​ ಮಧ್ಯೆ ಭೀಕರ ಅಪಘಾತ. appeared first on Good News 24x7.

]]>
ಆಹಾರ ಪ್ಯಾಕೆಟ್ ಗಳ ಮೇಲೆ ಇರುವ ಬಣ್ಣದ ಚುಕ್ಕೆಗಳ ಹಿಂದಿನ ರಹಸ್ಯ ಏನು ಗೊತ್ತಾ.! https://www.goodnews24x7.com/do-you-know-the-secret-behind-the-colored-dots-on-food-packets/ Wed, 06 Aug 2025 11:53:47 +0000 https://www.goodnews24x7.com/?p=5472 ಚಿಪ್ಸ್, ಕುರುಕರೇ, ಬನ್ ಹೀಗೆ ಅಂಗಡಿಯಿಂದ ಯಾವುದಾದರೂ ತಿನಿಸನ್ನು ನಾವು ಖರೀದಿ ಮಾಡಿದಾಗ ಅವುಗಳ ಮೇಲೆ ಕಾಮಾನ್ ಆಗಿ ಕೆಂಪು ಹಾಗೂ ಹಸಿರು ಬಣ್ಣದ ಡಾಟ್ ಅಥವಾ ಚಿಹ್ನೆಗಳು ಇದ್ದೇ ಇರುತ್ತವೆ. ಇದರ ಬಗ್ಗೆ ಹಲವು ಜನರಿಗೆ ತಿಳಿದಿರಬಹುದು. ಈ ಎರಡು…

The post ಆಹಾರ ಪ್ಯಾಕೆಟ್ ಗಳ ಮೇಲೆ ಇರುವ ಬಣ್ಣದ ಚುಕ್ಕೆಗಳ ಹಿಂದಿನ ರಹಸ್ಯ ಏನು ಗೊತ್ತಾ.! appeared first on Good News 24x7.

]]>

ಚಿಪ್ಸ್, ಕುರುಕರೇ, ಬನ್ ಹೀಗೆ ಅಂಗಡಿಯಿಂದ ಯಾವುದಾದರೂ ತಿನಿಸನ್ನು ನಾವು ಖರೀದಿ ಮಾಡಿದಾಗ ಅವುಗಳ ಮೇಲೆ ಕಾಮಾನ್ ಆಗಿ ಕೆಂಪು ಹಾಗೂ ಹಸಿರು ಬಣ್ಣದ ಡಾಟ್ ಅಥವಾ ಚಿಹ್ನೆಗಳು ಇದ್ದೇ ಇರುತ್ತವೆ. ಇದರ ಬಗ್ಗೆ ಹಲವು ಜನರಿಗೆ ತಿಳಿದಿರಬಹುದು. ಈ ಎರಡು ಬಣ್ಣ ಅಲ್ಲದೇ ಇನ್ನು ಕೆಲವು ತಿನಿಸುಗಳ ಪ್ಯಾಕೆಟ್ ಮೇಲೆ ನೀಲಿ, ಹಳದಿ, ಕಪ್ಪು ಡಾಟ್ಗಳು ಇರುತ್ತವೆ ಇವುಗಳ ಅರ್ಥ ಏನು?.

ಆರೋಗ್ಯ ಹಾಗೂ ಆಹಾರ ಪದ್ಧತಿಗೆ ಅನುಗುಣವಾಗಿ ಈ ಬಣ್ಣದ ಚಿಹ್ನೆಗಳು ಸಲಹೆ, ಸೂಚನೆಗಳನ್ನು ನೀಡುತ್ತವೆ. ಅಂದರೆ ಆರೋಗ್ಯದ ಸಮಸ್ಯೆ ಇರುವವರು ಇದನ್ನು ತಿನ್ನಬಾರದು ಎಂದು. ಇದರಿಂದ ನೀವು ಸರಿಯಾದ ಆಹಾರ ತಿನಿಸನ್ನು ಆಯ್ಕೆ ಮಾಡಲು ಅನುಕೂಲವಾಗುತ್ತದೆ. ಅಲ್ಲದೇ ಸಸ್ಯಾಹಾರಿ ಹಾಗೂ ಮಾಂಸಹಾರಿ ಸೇವಿಸುವವರು ಇದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಂಪು, ಹಸಿರು ಡಾಟ್ಸ್ ಸೂಚಿಸುತ್ತವೆ. ಉಳಿದ ಡಾಟ್ಸ್ ಅಥವಾ ಚಿಹ್ನೆಗಳು ಏನೇನು ಸೂಚಿಸುತ್ತವೆ?.

ಕೆಂಪು ಡಾಟ್: ತಿನಿಸಿನ ಪ್ಯಾಕೆಟ್ ಮೇಲೆ ಕೆಂಪು ಬಣ್ಣದ ವೃತ್ತಾಕಾರದ ಚಿಹ್ನೆ ಇದ್ದರೆ ಅದು ಮಾಂಸಾಹಾರಿ ಎಂದು ಅರ್ಥ. ಇದರಲ್ಲಿ ಚಿಕನ್, ಮಟನ್, ಮೀನು ಸೇರಿದಂತೆ ಮಾಂಸಹಾರಿ ವಸ್ತುವನ್ನು ಉಪಯೋಗ ಮಾಡಿರುತ್ತಾರೆ.

ಹಸಿರು ಚಿಹ್ನೆ:ಪ್ಯಾಕೆಟ್ ಮೇಲೆ ಹಸಿರು ಬಣ್ಣದ ಚಿಹ್ನೆ ಇದ್ದರೇ ಅದು ಸಂಪೂರ್ಣವಾಗಿ ಸಸ್ಯಾಹಾರಿ ಎಂದರ್ಥ. ಇದರಲ್ಲಿ ಯಾವುದೇ ಮಾಂಸ ಅಥವಾ ಮೊಟ್ಟೆಗಳನ್ನು ಬಳಕೆ ಮಾಡಿರಲ್ಲ.

ನೀಲಿ ಚಿಹ್ನೆ: ಪಾಕೆಟ್ ಮೇಲೆ ನೀಲಿ ಬಣ್ಣದ ಚಿಹ್ನೆ ಕಂಡುಬಂದರೆ ಅದನ್ನು ನಾವು ವೈದ್ಯಕೀಯ ಪ್ರಾಡಕ್ಟ್ ಎಂದು ತಿಳಿದುಕೊಳ್ಳಬೇಕು. ಇಂಥವುಗಳನ್ನು ಯಾರಾದರೂ ತೆಗೆದುಕೊಳ್ಳಬೇಕು ಎಂದರೆ ಮೊದಲು ವೈದ್ಯರಿಂದ ಸಲಹೆ, ಸೂಚನೆ ತೆಗೆದುಕೊಂಡಿರಬೇಕು.

https://www.goodnews24x7.com/dharmasthala-burude-mystery-will-6-locals-come-forward-on-behalf-of-the-witness/ಧರ್ಮಸ್ಥಳ ಬುರುಡೆ ರಹಸ್ಯ- ಸಾಕ್ಷಿದಾರನ ಪರವಾಗಿ ಬರ್ತಾರಾ 6 ಮಂದಿ ಸ್ಥಳೀಯರು?

ಹಳದಿ ಡಾಟ್: ಈ ಆಹಾರದಲ್ಲಿ ಮೊಟ್ಟೆ ಉಪಯೋಗ ಮಾಡಲಾಗಿದೆ ಎಂದು ತಿಳಿಸುತ್ತದೆ. ಕೆಲವು ಜನರು ಮೊಟ್ಟೆಗಳನ್ನು ತಿನ್ನುವುದಿಲ್ಲ. ಅಂಥವರು ಪಾಕೆಟ್ ಮೇಲೆ ಹಳದಿ ಬಣ್ಣದ ಚಿಹ್ನೆ ಇದ್ದರೇ ಅದನ್ನು ಖರೀದಿ ಮಾಡದೇ ಇರಬಹುದು. ಏಕೆಂದರೆ ಮೊಟ್ಟೆ ಬಳಸಿ ತಿನಿಸು ಮಾಡಲಾಗಿದೆ ಎಂದುಬು ಇದು ಹೇಳುತ್ತದೆ.

ಕಪ್ಪು ಚಿಹ್ನೆ: ಈ ಪ್ಯಾಕೆಟ್ನಲ್ಲಿ ಕೆಮಿಕಲ್ಸ್ (Chemicals) ಬಳಕೆ ಮಾಡಲಾಗಿದೆ ಎಂದು ಹೇಳುತ್ತದೆ. ಪ್ರಾಡಕ್ಟ್ನಲ್ಲಿ ರಾಸಾಯನಿಕ ಪ್ರಮಾಣವನ್ನು ಅಧಿಕವಾಗಿ ಬಳಕೆ ಮಾಡಲಾಗಿರುತ್ತದೆ. ಏಕೆಂದರೆ ದೀರ್ಘಕಾಲ ಉಳಿಯುವಿಕೆಗಾಗಿ ಆಹಾರವನ್ನ ಸಂಸ್ಕರಣೆ ಮಾಡಲಾಗಿರುತ್ತದೆ. ಇದನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಆಹಾರ ಪದಾರ್ಥಗಳ ಪ್ಯಾಕೆಟ್‌ಗಳ ಮೇಲಿನ ಈ ಬಣ್ಣದ ಚಿಹ್ನೆಗಳು ನಾವು ಏನು ತಿನ್ನುತ್ತಿದ್ದೇವೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡುತ್ತವೆ. ಮುಂದಿನ ಬಾರಿ ನೀವು ಯಾವುದೇ ಪ್ಯಾಕೆಟ್ ಆಹಾರವನ್ನು ಖರೀದಿಸುವಾಗ, ಈ ಚಿಹ್ನೆಗಳನ್ನು ಗಮನಿಸುವುದನ್ನು ಮರೆಯದಿರಿ.

The post ಆಹಾರ ಪ್ಯಾಕೆಟ್ ಗಳ ಮೇಲೆ ಇರುವ ಬಣ್ಣದ ಚುಕ್ಕೆಗಳ ಹಿಂದಿನ ರಹಸ್ಯ ಏನು ಗೊತ್ತಾ.! appeared first on Good News 24x7.

]]>
ಫುಡ್ ಡೆಲಿವರಿ ವ್ಯಕ್ತಿಯ ಹುಟ್ಟು ಹಬ್ಬ ಆಚರಿಸಿದ ಫುಡ್ ಆರ್ಡರ್ ಮಾಡಿದ ಮನೆ ಮಂದಿ…. https://www.goodnews24x7.com/%e0%b2%ab%e0%b3%81%e0%b2%a1%e0%b3%8d-%e0%b2%a1%e0%b3%86%e0%b2%b2%e0%b2%bf%e0%b2%b5%e0%b2%b0%e0%b2%bf-%e0%b2%b5%e0%b3%8d%e0%b2%af%e0%b2%95%e0%b3%8d%e0%b2%a4%e0%b2%bf%e0%b2%af-%e0%b2%b9%e0%b3%81/ Mon, 23 Jun 2025 10:23:17 +0000 https://www.goodnews24x7.com/?p=4622 ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ತಾನು ಖುಷಿಯಾಗಿದ್ದರೆ ಸಾಕು ಎಂದು ಬಯಸುವವರೇ ಹೆಚ್ಚು. ಬೇರೆಯವರು ಖುಷಿಯಾಗಿರಲಿ, ಸಂತೋಷವಾಗಿರಲಿ ಎಂದು ಬಯಸುವ ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಕಾಣಸಿಗುವುದೇ ಅಪರೂಪ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಡ್‌ ಆರ್ಡರ್ ಮಾಡಿದ್ದ ಮನೆಮಂದಿ ಡೆಲಿವರಿ ಬಾಯ್‌ಗೆ…

The post ಫುಡ್ ಡೆಲಿವರಿ ವ್ಯಕ್ತಿಯ ಹುಟ್ಟು ಹಬ್ಬ ಆಚರಿಸಿದ ಫುಡ್ ಆರ್ಡರ್ ಮಾಡಿದ ಮನೆ ಮಂದಿ…. appeared first on Good News 24x7.

]]>

ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ತಾನು ಖುಷಿಯಾಗಿದ್ದರೆ ಸಾಕು ಎಂದು ಬಯಸುವವರೇ ಹೆಚ್ಚು. ಬೇರೆಯವರು ಖುಷಿಯಾಗಿರಲಿ, ಸಂತೋಷವಾಗಿರಲಿ ಎಂದು ಬಯಸುವ ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಕಾಣಸಿಗುವುದೇ ಅಪರೂಪ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಡ್‌ ಆರ್ಡರ್ ಮಾಡಿದ್ದ ಮನೆಮಂದಿ ಡೆಲಿವರಿ ಬಾಯ್‌ಗೆ ಬರ್ತ್ಡೇ ಸರ್ಪ್ರೈಸ್ ನೀಡುವ ಮೂಲಕ ಖುಷಿಪಡಿಸಿ, ಆತನ ಮುಖದಲ್ಲಿ ನಗುತರಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಒಳ್ಳೆಯ ಮನಸ್ಸಿನ ವ್ಯಕ್ತಿಗಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹುಟ್ಟುಹಬ್ಬ ಬಂತೆಂದರೆ ಎಲ್ಲರೂ ಕೂಡ ಆತ್ಮೀಯರು ಏನಾದ್ರೂ ಸರ್ಪ್ರೈಸ್ ಉಡುಗೊರೆಗಳನ್ನು ನೀಡುತ್ತಾರಾ ಎಂದು ಕಾಯುತ್ತೇವೆ. ಯಾರಾದ್ರೂ ಸ್ಪೆಷಲ್ ಆಗಿ ಸರ್ಪ್ರೈಸ್ ನೀಡಿದರೆ ಆ ಖುಷಿಯನ್ನು ಹೇಳಲು ಪದಗಳೇ ಸಾಲಲ್ಲ. ಇನ್ನು ಮನೆ ಮಂದಿಗೆ, ಸ್ನೇಹಿತರಿಗೆ ಹುಟ್ಟುಹಬ್ಬದ ಸರ್ಪ್ರೈಸ್‌ ನೀಡುವುದು ಕಾಮನ್‌. ಆದರೆ ಇಲ್ಲೊಂದು ಮನೆ ಮಂದಿ ಗುರುತು ಪರಿಚಯವಿಲ್ಲದ ಜೊಮಾಟೊ ಡೆಲಿವರಿ ಬಾಯ್‌ಗೆ ಬರ್ತ್ಡೇ ಸರ್ಪ್ರೈಸ್ ನೀಡಿದ್ದಾರೆ. ಈ ಸರ್ಪ್ರೈಸ್ ನೋಡಿ ಫುಡ್ ಡೆಲಿವರಿ ಬಾಯ್ ಕಣ್ಣೀರು ಸುರಿಸಿದ್ದಾನೆ. ಈ ವಿಡಿಯೋ ಸಾಮಾಜಿಕತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

The post ಫುಡ್ ಡೆಲಿವರಿ ವ್ಯಕ್ತಿಯ ಹುಟ್ಟು ಹಬ್ಬ ಆಚರಿಸಿದ ಫುಡ್ ಆರ್ಡರ್ ಮಾಡಿದ ಮನೆ ಮಂದಿ…. appeared first on Good News 24x7.

]]>