permission Archives - Good News 24x7 https://www.goodnews24x7.com/tag/permission/ Kannada Sun, 24 Aug 2025 05:49:36 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg permission Archives - Good News 24x7 https://www.goodnews24x7.com/tag/permission/ 32 32 ಗಣೇಶೋತ್ಸವಕ್ಕೆ ಸಕಲ ಸಿದ್ಧತೆ; ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ. https://www.goodnews24x7.com/all-set-for-ganesh-chaturthi-single-window-system-for-permission/ Sun, 24 Aug 2025 05:49:36 +0000 https://www.goodnews24x7.com/?p=6611 ಬೆಂಗಳೂರು ಗ್ರಾಮಾಂತರ : ಆ.27 ರಂದು ನಡೆಯುವ ಗಣೇಶ ಚತುರ್ಥಿ ಹಬ್ಬಕ್ಕಾಗಿ ಜಿಲ್ಲೆಯಲ್ಲಿ ಸಜ್ಜು ಸಿದ್ಧತೆಗಳು ನಡೆಯುತ್ತಿವೆ. ಹಬ್ಬದ ಸಂಭ್ರಮ ಗ್ರಾಮಾಂತರ ಭಾಗದತ್ತ ಹರಡಿದ್ದು, ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸಂಘ-ಸಂಸ್ಥೆಗಳು ಸಜ್ಜಾಗಿವೆ. ಅನುಮತಿಗೆ ಸುಲಭ ವಿಧಾನ: ಸಾರ್ವಜನಿಕ ಗಣೇಶೋತ್ಸವಕ್ಕಾಗಿ…

The post ಗಣೇಶೋತ್ಸವಕ್ಕೆ ಸಕಲ ಸಿದ್ಧತೆ; ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ. appeared first on Good News 24x7.

]]>

ಬೆಂಗಳೂರು ಗ್ರಾಮಾಂತರ : ಆ.27 ರಂದು ನಡೆಯುವ ಗಣೇಶ ಚತುರ್ಥಿ ಹಬ್ಬಕ್ಕಾಗಿ ಜಿಲ್ಲೆಯಲ್ಲಿ ಸಜ್ಜು ಸಿದ್ಧತೆಗಳು ನಡೆಯುತ್ತಿವೆ. ಹಬ್ಬದ ಸಂಭ್ರಮ ಗ್ರಾಮಾಂತರ ಭಾಗದತ್ತ ಹರಡಿದ್ದು, ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸಂಘ-ಸಂಸ್ಥೆಗಳು ಸಜ್ಜಾಗಿವೆ.

ಅನುಮತಿಗೆ ಸುಲಭ ವಿಧಾನ:
ಸಾರ್ವಜನಿಕ ಗಣೇಶೋತ್ಸವಕ್ಕಾಗಿ ಈ ಬಾರಿ ‘ಏಕಗವಾಕ್ಷಿ’ (Single Window) ವ್ಯವಸ್ಥೆ ರೂಪಿಸಲಾಗಿದೆ. ನಗರಸಭೆ, ಪೊಲೀಸರು ಮತ್ತು ಬೆಸ್ಕಾಂ ಅಧಿಕಾರಿಗಳೊಂದಿಗೆ ಒಂದೇ ಸ್ಥಳದಲ್ಲಿ ಎಲ್ಲಾ ಅನುಮತಿಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ನಾನಾ ಕಚೇರಿಗಳಿಗೆ ಅಲೆದಾಟ ಮಾಡುವ ಅಗತ್ಯವಿಲ್ಲ.

ಪಿಒಪಿ ಮೂರ್ತಿಗಳ ವಿರುದ್ಧ ಕಠಿಣ ಕ್ರಮ:
ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಬಳಸಿ ತಯಾರಿಸಿದ ಮೂರ್ತಿಗಳ ತಯಾರಿಕೆ, ಮಾರಾಟ ಹಾಗೂ ವಿಸರ್ಜನೆ ರಾಜ್ಯ ಸರ್ಕಾರದಿಂದ ನಿಷಿದ್ಧವಾಗಿದೆ. ಈ ಬಗ್ಗೆ ಸೆಪ್ಟೆಂಬರ್ 15, 2023ರಂದು ಆದೇಶ ಹೊರಡಿಸಲಾಗಿದೆ. ಹೈಕೋರ್ಟ್ ಕೂಡ ಈ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.

ಪಿಒಪಿ ಮೂರ್ತಿಗಳಲ್ಲಿ ಹಾನಿಕಾರಕ ರಾಸಾಯನಿಕಗಳು ಇರುವ ಕಾರಣ, ಅವುಗಳನ್ನು ನೀರಿನಲ್ಲಿ ವಿಸರ್ಜಿಸಿದರೆ ಪರಿಸರಕ್ಕೆ ತೀವ್ರ ಹಾನಿ ಉಂಟಾಗುತ್ತದೆ. ಇದು ಜಲಚರ ಜೀವಿಗಳ ಸಾವು ಹಾಗೂ ಮಾನವ ಮತ್ತು ಪಶುಪಕ್ಷಿಗಳ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಪರಿಸರ ಸ್ನೇಹಿ ಪರ್ಯಾಯಗಳು:
ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಹಲವು ಸಂಘಟನೆಗಳು ಜಾಗೃತಿ ಮೂಡಿಸುತ್ತಿವೆ. ಘಾಟಿ ಗೋಶಾಲೆ, ಯುವಸಂಚಲನ, ದೊಡ್ಡಬಳ್ಳಾಪುರ ನಗರಸಭೆ ಜೀವವೈವಿಧ್ಯ ಸಮಿತಿ ಮೊದಲಾದವುಗಳು ಮಣ್ಣಿನ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿವೆ. ಮಹಿಳಾ ಸಂಘಟನೆಗಳೂ ಈ ಕಾರ್ಯದಲ್ಲಿ ಭಾಗವಹಿಸುತ್ತಿವೆ.

ಅನುಮತಿ ಕಡ್ಡಾಯ, ಹಬ್ಬಕ್ಕೆ ಮಾರ್ಗಸೂಚಿ ಪಾಲನೆ ಅಗತ್ಯ:
ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕಾಗಿದ್ದು, ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಅನುಮತಿ ನೀಡಲಾಗುತ್ತದೆ. ಪರಿಸರ ಸ್ನೇಹಿ ಮೂರ್ತಿಗಳನ್ನು ಬಳಸಬೇಕು ಮತ್ತು ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕೆಂಬ ನಿಯಮವಿದೆ.

ಹೀಗೆ ಜಿಲ್ಲೆಯಾದ್ಯಂತ ಶಿಸ್ತಿನಿಂದ, ಪರಿಸರದ ರಕ್ಷಣೆಯೊಂದಿಗೆ, ಸಂಯಮದಿಂದ ಹಬ್ಬವನ್ನು ಆಚರಿಸಲು ಸಿದ್ಧತೆ ನಡೆಯುತ್ತಿದೆ.

The post ಗಣೇಶೋತ್ಸವಕ್ಕೆ ಸಕಲ ಸಿದ್ಧತೆ; ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ. appeared first on Good News 24x7.

]]>
ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ಹಲವು ಮೃ*ತದೇಹಗಳ ರಹಸ್ಯ ವಿಲೇವಾರಿ ದೂರು: ಪ್ರಕರಣ ದಾಖಲು. https://www.goodnews24x7.com/complaint-of-secret-disposal-of-several-dead-bodies-at-dharmasthala-village-police-station-case-registered/ Sat, 05 Jul 2025 11:03:27 +0000 https://www.goodnews24x7.com/?p=4925 ಮಂಗಳೂರು: ತಾನು ರಹಸ್ಯವಾಗಿ ಹಲವು ಮೃತದೇಹಗಳನ್ನು ವಿಲೇವಾರಿ ಮಾಡಿದ್ದೆ ಎಂದು ವ್ಯಕ್ತಿಯೊಬ್ಬರು ವಕೀಲರ ಮೂಲಕ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ದ.ಕ ಜಿಲ್ಲಾ ಪೊಲೀಸ್…

The post ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ಹಲವು ಮೃ*ತದೇಹಗಳ ರಹಸ್ಯ ವಿಲೇವಾರಿ ದೂರು: ಪ್ರಕರಣ ದಾಖಲು. appeared first on Good News 24x7.

]]>

ಮಂಗಳೂರು: ತಾನು ರಹಸ್ಯವಾಗಿ ಹಲವು ಮೃತದೇಹಗಳನ್ನು ವಿಲೇವಾರಿ ಮಾಡಿದ್ದೆ ಎಂದು ವ್ಯಕ್ತಿಯೊಬ್ಬರು ವಕೀಲರ ಮೂಲಕ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಪತ್ರಿಕಾ ಪ್ರಕಟಣೆ ನೀಡಲಾಗಿದೆ. ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿದ್ದು, ದೂರುದಾರರಿಗೆ ಜೀವಬೆದರಿಕೆ ಒಡ್ಡಿ, ಸದ್ರಿ ಅಪರಾದ ಕೃತ್ಯಗಳ ಮೃತದೇಹಗಳನ್ನು ದೂರುದಾರರ ಮೂಲಕ ರಹಸ್ಯವಾಗಿ ವಿಲೇವಾರಿ ಮಾಡಿಸಿರುತ್ತಾರೆ. ಈ ಹಿನ್ನೆಲೆ ಹಲವಾರು ಮೃತದೇಹಗಳನ್ನು ದೂರುದಾರರು ವಿಲೇವಾರಿ ಮಾಡಿದ್ದು, ಪ್ರಸ್ತುತ ದೂರುದಾರರಿಗೆ ಪಾಪಪ್ರಜ್ಞೆ ಕಾಡುತ್ತಿರುವುದರಿಂದ, ತನಗೆ ಹಾಗೂ ತನ್ನ ಕುಟುಂಬಕ್ಕೆ ಕಾನೂನಾತ್ಮಕವಾಗಿ ರಕ್ಷಣೆ ದೊರೆತ ಕೂಡಲೇ, ಈ ಅಪರಾಧ ಕೃತ್ಯಗಳನ್ನು ನಡೆಸಿದವರ ಸಂಪೂರ್ಣ ಮಾಹಿತಿಯನ್ನು ಹಾಗೂ ತಾನು ಮೃತದೇಹಗಳನ್ನು ವಿಲೇವಾರಿ ಮಾಡಿದ ಸ್ಥಳಗಳನ್ನು ಪೊಲೀಸರಿಗೆ ತೋರಿಸಲು ಸಿದ್ದವಿರುವುದಾಗಿ ಜುಲೈ 3ರಂದು ಪೊಲೀಸ್ ಅಧೀಕ್ಷಕರ ಕಚೇರಿಗೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ಸದ್ರಿ ವ್ಯಕ್ತಿಯಿಂದ ದೂರು ಸಲ್ಲಿಕೆಯಾಗಿರುತ್ತದೆ.


ಈ ದೂರಿನ ಬಗ್ಗೆ ನ್ಯಾಯಾಲಯದಿಂದ ಅಗತ್ಯ ಅನುಮತಿಯನ್ನು ಪಡೆದುಕೊಂಡು, ದಿನಾಂಕ 04.07.2025 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 39/2025, ಕಲಂ: 211(a) ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರಗಿಸಲಾಗುವುದು. ದೂರುದಾರರು ದೂರಿನಲ್ಲಿ ತನ್ನ ಹೆಸರು ಮತ್ತು ಮಾಹಿತಿಯನ್ನು ಗೌಪ್ಯವಾಗಿ ಇಡುವಂತೆ ವಿನಂತಿಸಿಕೊಂಡ ಮೇರೆಗೆ, ದೂರುದಾರರ ಮಾಹಿತಿಯನ್ನು ಪೊಲೀಸ್ ಮೂಲಗಳಿಂದ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಈ ಬಗ್ಗೆ ನೀಡಿದ ಇನ್ನೊಂದು ಪ್ರಕಟಣೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ: 39/2025 ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ದೂರಿಗೆ ಅನ್ವಯವಾಗುವಂತೆ, ಈವರೆಗೆ ಪೊಲೀಸ್ ಠಾಣೆಗೆ ತಲೆಬುರುಡೆ ಹಾಗೂ ಅವಶೇಷದ ಕೆಲಭಾಗಗಳಿರುವ ಎರಡು ಫೋಟೋಗಳ ಕಲರ್ ಝೆರಾಕ್ಸ್ ಪ್ರತಿಯನ್ನು ಮಾತ್ರ ಸಲ್ಲಿಸಿರುತ್ತಾರೆ. ಇದನ್ನು ಹೊರತುಪಡಿಸಿದಂತೆ ಯಾವುದೇ ಕಳೇಬರವನ್ನು ಈವರೆಗೆ ಪೊಲೀಸ್ ಠಾಣೆಗೆ ನೀಡಿರುವುದಿಲ್ಲ. ದೂರುದಾರರ ಪರವಾಗಿ ವಕೀಲರು ದೂರು ಸಲ್ಲಿಸುವ ವೇಳೆ ಕಳೇಬರವನ್ನು ಮುಂದಿನ ಹಂತದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಲಿಖಿತವಾಗಿ ತಿಳಿಸಿರುತ್ತಾರೆ ಎಂದು ತಿಳಿಸಲಾಗಿದೆ.

 

 

 

The post ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ಹಲವು ಮೃ*ತದೇಹಗಳ ರಹಸ್ಯ ವಿಲೇವಾರಿ ದೂರು: ಪ್ರಕರಣ ದಾಖಲು. appeared first on Good News 24x7.

]]>
ಇನ್ಮುಂದೆ 16 ವರ್ಷದೊಳಗಿನ ಮಕ್ಕಳು Instagram ಬಳಕೆ ಮಾಡಲು ಹೊಸ ನಿಯಮ. https://www.goodnews24x7.com/%e0%b2%87%e0%b2%a8%e0%b3%8d%e0%b2%ae%e0%b3%81%e0%b2%82%e0%b2%a6%e0%b3%86-16-%e0%b2%b5%e0%b2%b0%e0%b3%8d%e0%b2%b7%e0%b2%a6%e0%b3%8a%e0%b2%b3%e0%b2%97%e0%b2%bf%e0%b2%a8-%e0%b2%ae%e0%b2%95%e0%b3%8d/ Sat, 12 Apr 2025 12:02:22 +0000 https://www.goodnews24x7.com/?p=3180 ಈ ಇನ್ಸ್ಟಾಗ್ರಾಮ್ ಸಾಮಾಜಿಕ ಮಾಧ್ಯಮ ವೇದಿಕೆಯ ಬಗ್ಗೆ ತಿಳಿದಿಲ್ಲದವರೇ ಇಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ ಬಳಸುತ್ತಾರೆ. ಟಿಕ್ ಟಾಕ್ ನಿಷೇಧವಾದ ಬಳಿಕ ಇನ್ಸ್ಟಾಗ್ರಾಮ್ ನಂಬಲಾಗದಷ್ಟು ಜನಪ್ರಿಯವಾಯಿತು. ಆದರೆ, ಇದರಲ್ಲಿ ಬರುವ ವಿವಿಧ ರೀಲ್ಸ್, ವಿಡಿಯೋಗಳು ಮಕ್ಕಳ ಮೇಲೆ…

The post ಇನ್ಮುಂದೆ 16 ವರ್ಷದೊಳಗಿನ ಮಕ್ಕಳು Instagram ಬಳಕೆ ಮಾಡಲು ಹೊಸ ನಿಯಮ. appeared first on Good News 24x7.

]]>

ಈ ಇನ್ಸ್ಟಾಗ್ರಾಮ್ ಸಾಮಾಜಿಕ ಮಾಧ್ಯಮ ವೇದಿಕೆಯ ಬಗ್ಗೆ ತಿಳಿದಿಲ್ಲದವರೇ ಇಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ ಬಳಸುತ್ತಾರೆ. ಟಿಕ್ ಟಾಕ್ ನಿಷೇಧವಾದ ಬಳಿಕ ಇನ್ಸ್ಟಾಗ್ರಾಮ್ ನಂಬಲಾಗದಷ್ಟು ಜನಪ್ರಿಯವಾಯಿತು. ಆದರೆ, ಇದರಲ್ಲಿ ಬರುವ ವಿವಿಧ ರೀಲ್ಸ್, ವಿಡಿಯೋಗಳು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಇದನ್ನು ಗಮನಿಸಿದ ಇನ್ಸ್ಟಾಗ್ರಾಮ್, ಪ್ಲಾಟ್ಫಾರ್ಮ್ನಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಇನ್ನು ಮುಂದೆ 16 ವರ್ಷದೊಳಗಿನ ಮಕ್ಕಳಿಗೆ ಲೈವ್ ಮಾಡಲು ಅವಕಾಶ ಇರುವುದಿಲ್ಲ.


ಇನ್ಸ್ಟಾಗ್ರಾಮ್ ಮಾಡಿದ ಬದಲಾವಣೆಗಳ ಪ್ರಕಾರ, 16 ವರ್ಷದೊಳಗಿನ ಮಕ್ಕಳು ಇನ್ಸ್ಟಾಗ್ರಾಮ್ನಲ್ಲಿ ನೇರ ಪ್ರಸಾರ ಮಾಡಲು ಮೊದಲು ಪೋಷಕರ ಅನುಮತಿಯನ್ನು ಪಡೆಯಬೇಕು. ಅವರ ಅನುಮತಿಯಿಲ್ಲದೆ ಲೈವ್ ಆಯ್ಕೆಯನ್ನು ಬಳಸಲಾಗುವುದಿಲ್ಲ. ಪೋಷಕರ ಅನುಮತಿಯಿಲ್ಲದೆ 16 ವರ್ಷ ವಯಸ್ಸಿನವರಿಗೆ ನೇರ ಸಂದೇಶಗಳಲ್ಲಿ ನಗ್ನತೆಯನ್ನು ಹೊಂದಿರುವ ವಿಷಯವು ಗೋಚರಿಸುವುದಿಲ್ಲ. ಮೆಟಾ ತನ್ನ ಬ್ಲಾಗ್ ಪೋಸ್ಟ್ನಲ್ಲಿ ಇದನ್ನು ಬಹಿರಂಗಪಡಿಸಿದೆ.
16 ವರ್ಷದೊಳಗಿನ ಹದಿಹರೆಯದವರು ತಮ್ಮ ಪೋಷಕರ ಅನುಮತಿ ನೀಡದ ಹೊರತು ಇನ್ಸ್ಟಾ ಲೈವ್ ಅನ್ನು ಬಳಸುವಂತಿಲ್ಲ. ನೇರ ಸಂದೇಶಗಳಲ್ಲಿ, “ನಗ್ನತೆಯಿರುವ ಚಿತ್ರಗಳನ್ನು ಮಸುಕುಗೊಳಿಸಲಾಗುತ್ತದೆ. ನೀವು ಅದನ್ನು ವೀಕ್ಷಿಸಲು ಪ್ರಯತ್ನಿಸಿದರೂ, ನಿಮಗೆ ಸಾಧ್ಯವಾಗುವುದಿಲ್ಲ. ಅದನ್ನು ಆಫ್ ಮಾಡಲು ಯಾವುದೇ ಆಯ್ಕೆಯಿಲ್ಲ,” ಎಂದು ಮೆಟಾ ಬ್ಲಾಗ್ ಪೋಸ್ಟ್ನಲ್ಲಿ ಹೇಳಿದೆ, ಇದಕ್ಕೆ ಪೋಷಕರ ಅನುಮತಿಯೂ ಬೇಕಾಗುತ್ತದೆ.
16 ವರ್ಷದೊಳಗಿನ ಬಳಕೆದಾರರಿಗೆ ಸುರಕ್ಷತಾ ಕ್ರಮಗಳನ್ನು ಫೇಸ್ಬುಕ್ ಮತ್ತು ಮೆಸೆಂಜರ್ಗೆ ವಿಸ್ತರಿಸುತ್ತಿರುವುದಾಗಿ ಸಾಮಾಜಿಕ ಮಾಧ್ಯಮ ಕಂಪನಿ ಬಹಿರಂಗಪಡಿಸಿದೆ. ಸಾಮಾಜಿಕ ಮಾಧ್ಯಮಗಳು ಯುವಜನರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಮೇಲ್ವಿಚಾರಣೆ ಮಾಡುತ್ತದೆ.

ಪೋಷಕರು ತಮ್ಮ ಮಕ್ಕಳ ಆನ್ಲೈನ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಹೆಚ್ಚಿನ ಆಯ್ಕೆಗಳನ್ನು ನೀಡಲು ಮೆಟಾ ಸೆಪ್ಟೆಂಬರ್ನಲ್ಲಿ ಇನ್ಸ್ಟಾಗ್ರಾಮ್ಗಾಗಿ ತನ್ನ ಹದಿಹರೆಯದ ಖಾತೆ ಎಂಬ ಪ್ರೊಗ್ರಾಂ ಪ್ರಾರಂಭಿಸಿತು.
ಸಾಮಾಜಿಕ ಮಾಧ್ಯಮದ ಹಾನಿಯಿಂದ ಮಕ್ಕಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಕಿಡ್ಸ್ ಆನ್ಲೈನ್ ಸೇಫ್ಟಿ ಆಕ್ಟ್ ನಂತಹ ಕಾನೂನುಗಳನ್ನು ಜಾರಿಗೆ ತರುವಲ್ಲಿ ಕೆಲವು ಯುಎಸ್ ಶಾಸಕರು ಬಹಳ ಸಕ್ರಿಯರಾಗಿರುವ ಸಮಯದಲ್ಲಿ ಮೆಟಾದಿಂದ ಈ ನಿರ್ಧಾರವು ಬಂದಿದೆ. ಮೆಟಾ ಜೊತೆಗೆ, ಟಿಕ್ಟಾಕ್ ಮತ್ತು ಯೂಟ್ಯೂಬ್ ನಂತಹ ಕಂಪನಿಗಳು ಸಾಮಾಜಿಕ ಮಾಧ್ಯಮ ವ್ಯಸನಕ್ಕೆ ಸಂಬಂಧಿಸಿದಂತೆ ಮಕ್ಕಳು ಮತ್ತು ಶಾಲೆಗಳಿಂದ ನೂರಾರು ಮೊಕದ್ದಮೆಗಳನ್ನು ಎದುರಿಸುತ್ತಿವೆ.
ಮಾಹಿತಿಯ ಪ್ರಕಾರ, 2023 ರಲ್ಲಿ, ಕ್ಯಾಲಿಫೋರ್ನಿಯಾ ಮತ್ತು ನ್ಯೂಯಾರ್ಕ್ ಸೇರಿದಂತೆ 33 ಯುಎಸ್ ರಾಜ್ಯಗಳು ಮೆಟಾ ತನ್ನ ಪ್ಲಾಟ್ಫಾರ್ಮ್ಗಳ ಅಪಾಯಕಾರಿ ಸ್ವರೂಪದ ಬಗ್ಗೆ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿ ಮೊಕದ್ದಮೆ ಹೂಡಿದ್ದವು.
ಸದ್ಯ ಮೆಟಾ ಪ್ಲಾಟ್ಫಾರ್ಮ್ಗಳು ಈಗ ಫೇಸ್ಬುಕ್ ಮತ್ತು ಮೆಸೆಂಜರ್ನಲ್ಲಿ ಕೂಡ ತನ್ನ ‘ಟೀನ್ ಅಕೌಂಟ್ಸ್’ ವೈಶಿಷ್ಟ್ಯವನ್ನು ಜಾರಿಗೆ ತಂದಿವೆ. ಆನ್ಲೈನ್ ಅಪಾಯಗಳಿಂದ ಯುವ ಬಳಕೆದಾರರನ್ನು ರಕ್ಷಿಸಲು ಮೆಟಾ ಏನನ್ನೂ ಮಾಡುತ್ತಿಲ್ಲ ಎಂದು ಬಹಳ ಸಮಯದಿಂದ ಆರೋಪ ಕೇಳಿ ಬಂದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

The post ಇನ್ಮುಂದೆ 16 ವರ್ಷದೊಳಗಿನ ಮಕ್ಕಳು Instagram ಬಳಕೆ ಮಾಡಲು ಹೊಸ ನಿಯಮ. appeared first on Good News 24x7.

]]>
ಮಾಜಿ ಸಚಿವ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರ ಅನುಮತಿ! https://www.goodnews24x7.com/%e0%b2%ae%e0%b2%be%e0%b2%9c%e0%b2%bf-%e0%b2%b8%e0%b2%9a%e0%b2%bf%e0%b2%b5-%e0%b2%a8%e0%b2%be%e0%b2%97%e0%b3%87%e0%b2%82%e0%b2%a6%e0%b3%8d%e0%b2%b0-%e0%b2%b5%e0%b2%bf%e0%b2%b0%e0%b3%81%e0%b2%a6/ Wed, 09 Apr 2025 13:16:43 +0000 https://www.goodnews24x7.com/?p=3148 ಬೆಂಗಳೂರು : ವಾಲ್ಮೀಕಿ ನಿಗಮ ಬಹುಕೋಟಿ ಹಗರಣ ಸಂಬಂಧ ಮಾಜಿ ಸಚಿವ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. 3 ದಿನಗಳ ಹಿಂದೆಯೇ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದರು. ವಾಲ್ಮೀಕಿ ನಿಗಮದಲ್ಲಿ 89 ಕೋಟಿ ಹಣ ವರ್ಗಾವಣೆ…

The post ಮಾಜಿ ಸಚಿವ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರ ಅನುಮತಿ! appeared first on Good News 24x7.

]]>

ಬೆಂಗಳೂರು : ವಾಲ್ಮೀಕಿ ನಿಗಮ ಬಹುಕೋಟಿ ಹಗರಣ ಸಂಬಂಧ ಮಾಜಿ ಸಚಿವ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. 3 ದಿನಗಳ ಹಿಂದೆಯೇ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದರು.
ವಾಲ್ಮೀಕಿ ನಿಗಮದಲ್ಲಿ 89 ಕೋಟಿ ಹಣ ವರ್ಗಾವಣೆ ಆರೋಪ ಸಂಬಂಧ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ED ಅನುಮತಿ ಕೋರಿತ್ತು. ಇದೀಗ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ಕೋರ್ಟ್ ಅನುಮತಿ ನೀಡಿದೆ. ತನಿಖೆ ವೇಳೆ ED ಅಧಿಕಾರಿಗಳು ನಾಗೇಂದ್ರರನ್ನ ಅರೆಸ್ಟ್ ಮಾಡಿದ್ದು, ಈ ಹಗರಣ ಕೇಸಲ್ಲಿ ನಾಗೇಂದ್ರ ಜೈಲು ಸೇರಿದ್ದರು. ನಂತರ ಜಾಮೀನು ಮೇಲೆ ಹೊರ ಬಂದಿದ್ದ ನಾಗೇಂದ್ರಗೆ ತನಿಖೆ ಶಾಕ್ ನೀಡಿತ್ತು.


ಪ್ರಕರಣದ ಹಿನ್ನೆಲೆ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಬಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ 89 ಕೋಟಿ ಹಣ ವರ್ಗಾಯಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ಮತ್ತಿತರರ ವಿರುದ್ಧ ಇಸಿಐಆರ್ ದಾಖಲಿಸಿ ತನಿಖೆ ಕೈಗೊಂಡಿತ್ತು. ಈ ಹಗರಣ ಕೇಸಲ್ಲಿ ಮಾಜಿ ಸಚಿವ ನಾಗೇಂದ್ರರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು.

 

The post ಮಾಜಿ ಸಚಿವ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರ ಅನುಮತಿ! appeared first on Good News 24x7.

]]>