Phone Archives - Good News 24x7 https://www.goodnews24x7.com/tag/phone/ Kannada Fri, 27 Jun 2025 06:47:44 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Phone Archives - Good News 24x7 https://www.goodnews24x7.com/tag/phone/ 32 32 ಮೊಬೈಲ್‌ಫೋನ್ ಬೆಳಕಿನಲ್ಲಿಯೇ ಮೈಸೂರು ಕ್ರಾಫರ್ಡ್ ಭವನದಲ್ಲಿ ಮೌಲ್ಯಮಾಪನ! https://www.goodnews24x7.com/evaluation-in-the-light-of-a-mobile-phone/ Fri, 27 Jun 2025 06:47:38 +0000 https://www.goodnews24x7.com/?p=4712 ಮೈಸೂರು : ಕ್ರಾಫರ್ಡ್ ಭವನದಲ್ಲಿರುವ ಪರೀಕ್ಷಾ ಭವನದಲ್ಲಿ ಗುರುವಾರ ವಿದ್ಯುತ್ ವ್ಯತ್ಯಯದಿಂದಾಗಿ ಮೌಲ್ಯಮಾಪಕರು ಪದವಿ ಪರೀಕ್ಷೆಗಳ ಉತ್ತರಪತ್ರಿಕೆಗಳನ್ನು ಮೊಬೈಲ್‌ಫೋನ್ ಬೆಳಕಿನಲ್ಲಿಯೇ ಮೌಲ್ಯಮಾಪನ ನಡೆಸಿದ ಘಟನೆ ನಡೆದಿದೆ. ಸೆಸ್ಕ್ ಮೂರು ದಿನದ ಹಿಂದೆಯೇ ‘ಕಲಾಮಂದಿರ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂಬ…

The post ಮೊಬೈಲ್‌ಫೋನ್ ಬೆಳಕಿನಲ್ಲಿಯೇ ಮೈಸೂರು ಕ್ರಾಫರ್ಡ್ ಭವನದಲ್ಲಿ ಮೌಲ್ಯಮಾಪನ! appeared first on Good News 24x7.

]]>

ಮೈಸೂರು : ಕ್ರಾಫರ್ಡ್ ಭವನದಲ್ಲಿರುವ ಪರೀಕ್ಷಾ ಭವನದಲ್ಲಿ ಗುರುವಾರ ವಿದ್ಯುತ್ ವ್ಯತ್ಯಯದಿಂದಾಗಿ ಮೌಲ್ಯಮಾಪಕರು ಪದವಿ ಪರೀಕ್ಷೆಗಳ ಉತ್ತರಪತ್ರಿಕೆಗಳನ್ನು ಮೊಬೈಲ್‌ಫೋನ್ ಬೆಳಕಿನಲ್ಲಿಯೇ ಮೌಲ್ಯಮಾಪನ ನಡೆಸಿದ ಘಟನೆ ನಡೆದಿದೆ.

ಸೆಸ್ಕ್ ಮೂರು ದಿನದ ಹಿಂದೆಯೇ ‘ಕಲಾಮಂದಿರ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂಬ ಪ್ರಕಟಣೆ ಹೊರಡಿಸಿತ್ತು. ಪತ್ರಿಕೆಗಳಲ್ಲೂ ಪ್ರಕಟವಾಗಿತ್ತು. ಮೈಸೂರು ವಿಶ್ವವಿದ್ಯಾಲಯವು ಅದಕ್ಕೆ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಇದ್ದರಿಂದ ಮೌಲ್ಯಮಾಪಕರು ಇಡೀ ದಿನ ತೊಂದರೆ ಅನುಭವಿಸಿದ ಘಟನೆ ನಡೆದಿದೆ.
ವಯಸ್ಸಾದ ಪ್ರಾಧ್ಯಾಪಕರು ಮಂದ ಬೆಳಕಿನಲ್ಲಿ ಮೌಲ್ಯಮಾಪನ ಮಾಡಿದ್ದರಿಂದ, ಅಂಕಗಳು ವ್ಯತ್ಯಾಸವಾಗುವ ಆತಂಕವೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಚಿತ್ರಗಳಿಂದ ವ್ಯಕ್ತವಾಗಿದೆ.

ಪರೀಕ್ಷಾಂಗ ವಿಭಾಗ ಪರ್ಯಾಯ ವ್ಯವಸ್ಥೆ ಮಾಡಿರಲಿಲ್ಲ. ಕಿಟಕಿಗಳು ದೂರದಲ್ಲಿದ್ದವು. ಮೋಡವೂ ಕವಿದಿದ್ದರಿಂದ ಬೆಳಕಿರಲಿಲ್ಲ. ನಾಳೆ ಉತ್ತರ ಪತ್ರಿಕೆಗಳನ್ನೂ ನೋಡುತ್ತೇವೆಂದರೂ ಅವಕಾಶ ನೀಡಲಿಲ್ಲ. ಜನರೇಟರ್ ಕೆಟ್ಟಿದ್ದು, ಡೀಸೆಲ್ ಹಾಕಲೂ ವಿಶ್ವವಿದ್ಯಾಲಯದ ಬಳಿ ಹಣವಿಲ್ಲವೆಂದು ಹೇಳಿದ್ದರಿಂದ ಸುಮ್ಮನಾದೆವು ಎಂದು ಸಹಾಯಕ ಪ್ರಾಧ್ಯಾಪಕರೊಬ್ಬರು ತಿಳಿಸಿದರು.

ಗಂಭೀರತೆಯೂ ಮಾಯ: ‘ಉತ್ತರ ಪತ್ರಿಕೆಗಳ ಮೌಲ್ಯಮಾಪನ 20 ದಿನದಿಂದ ನಡೆಯುತ್ತಿದೆ. ಐವರು ಮೌಲ್ಯಮಾಪಕರಿಗೆ ಒಬ್ಬ ಪ್ರತಿ ಮುಖ್ಯಸ್ಥರಿರುತ್ತಾರೆ. ನಿಗದಿಯಂತೆ ಪ್ರಕ್ರಿಯೆ ಆರಂಭವಾಗಿತ್ತು. ಕಳೆದ ಬಾರಿಯ ಹಣವನ್ನೇ ನೀಡದ್ದರಿಂದ ಉಪನ್ಯಾಸಕರು ಪ್ರತಿಭಟಿಸಿದ್ದರು. ದೊಂಬಿಯಂತೆ ಪ್ರಕ್ರಿಯೆ ನಡೆದಿದೆ. ಮೊದಲಿದ್ದ ಗಂಭೀರತೆಯೇ ಮಾಯವಾಗಿದೆ ಎಂದರು.
ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ. ಉಪನ್ಯಾಸಕರು ಮೌಲ್ಯಮಾಪನದ ದಿನವೇ ಕಂಪ್ಯೂಟರ್ ಗೆ ಅಂಕಗಳ ದತ್ತಾಂಶ ನೀಡಬೇಕಿತ್ತು. ಈಗ ಮಾರನೇಯ ದಿನ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆಗೆ ಪರೀಕ್ಷಾಂಗ ಕುಲಸಚಿವರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ ಎಂದು ಆರೋಪಿಸಲಾಗಿದೆ.

ಗ್ರಾಮೀಣ ಭಾಗದ ಖಾಯಂ ಪ್ರಾಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರಿಂದಲೇ ಮೌಲ್ಯಮಾಪನ ನಡೆದಿದೆ. ಆದರೆ, ನಗರ ಭಾಗದ ಖಾಯಂ ಅಧ್ಯಾಪಕರು ಬರುತ್ತಿಲ್ಲ. ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂಬ ಸುತ್ತೋಲೆಯನ್ನೂ ಹೊರಡಿಸುತ್ತಿಲ್ಲ ಎಂದು ಅಧ್ಯಾಪಕರೊಬ್ಬರು ತಿಳಿಸಿದರು.

ಮೊದಲಿದ್ದ ಪಾರದರ್ಶಕತೆ, ಶಿಸ್ತು ಇಲ್ಲ. ಯಾರು ಬೇಕಾದರೂ ಭವನದೊಳಕ್ಕೆ ಬರಬಹುದು. ಭದ್ರತೆಯ ಬಗ್ಗೆಯೂ ನಿರ್ಲಕ್ಷ್ಯವಿದೆ. ಎಲ್ಲಕ್ಕೂ ವಿಶ್ವವಿದ್ಯಾಲಯಕ್ಕೆ ಹಣವಿಲ್ಲವೆಂದು ಆಡಳಿತ ಸಿಬ್ಬಂದಿ ಹೇಳುತ್ತಾರೆ. ಮೌಲ್ಯಮಾಪನಕ್ಕೆ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಡೆಯುವುದೇಕೆ ಎಂದು ಅಧ್ಯಾಪಕರೊಬ್ಬರು ಪ್ರಶ್ನಿಸಿದ್ದಾರೆ.

The post ಮೊಬೈಲ್‌ಫೋನ್ ಬೆಳಕಿನಲ್ಲಿಯೇ ಮೈಸೂರು ಕ್ರಾಫರ್ಡ್ ಭವನದಲ್ಲಿ ಮೌಲ್ಯಮಾಪನ! appeared first on Good News 24x7.

]]>
ಆಂಡ್ರಾಯ್ಡ್ ಬಳಕೆದಾರರಿಗೆ CIRILನಿಂದ ಎಚ್ಚರಿಕೆ: ಈ 20 ಅಪ್ಲಿಕೇಶನ್‌ಗಳು ನಿಮ್ಮ ಮೊಬೈಲ್ ನಲ್ಲಿದ್ದರೆ ತಕ್ಷಣವೇ ಡಿಲೀಟ್ ಮಾಡಿ…. https://www.goodnews24x7.com/%e0%b2%86%e0%b2%82%e0%b2%a1%e0%b3%8d%e0%b2%b0%e0%b2%be%e0%b2%af%e0%b3%8d%e0%b2%a1%e0%b3%8d-%e0%b2%ac%e0%b2%b3%e0%b2%95%e0%b3%86%e0%b2%a6%e0%b2%be%e0%b2%b0%e0%b2%b0%e0%b2%bf%e0%b2%97%e0%b3%86-ciril/ Thu, 12 Jun 2025 12:06:57 +0000 https://www.goodnews24x7.com/?p=4375 CIRIL ನ ಹೊಸ ವರದಿಯ ಪ್ರಕಾರ, ಅಂದರೆ ಸೈಬರ್ ರಿಸರ್ಚ್ ಮತ್ತು ಇಂಟೆಲಿಜೆನ್ಸ್ ಲ್ಯಾಬ್ಸ್, ಗೂಗಲ್ ಪ್ಲೇ ಸ್ಟೋರ್ ನಲ್ಲಿ 20 ಕ್ಕೂ ಹೆಚ್ಚು ಅಪಾಯಕಾರಿ ಕ್ರಿಪ್ಟೋಕರೆನ್ಸಿ ವ್ಯಾಲೆಟ್ ಆಪ್ ಗಳನ್ನು ಗುರುತಿಸಲಾಗಿದೆ. ಈ ಆಪ್ ಗಳು ವ್ಯಾಲೆಟ್ ರಿಕವರಿ ಮುಂತಾದ…

The post ಆಂಡ್ರಾಯ್ಡ್ ಬಳಕೆದಾರರಿಗೆ CIRILನಿಂದ ಎಚ್ಚರಿಕೆ: ಈ 20 ಅಪ್ಲಿಕೇಶನ್‌ಗಳು ನಿಮ್ಮ ಮೊಬೈಲ್ ನಲ್ಲಿದ್ದರೆ ತಕ್ಷಣವೇ ಡಿಲೀಟ್ ಮಾಡಿ…. appeared first on Good News 24x7.

]]>

CIRIL ನ ಹೊಸ ವರದಿಯ ಪ್ರಕಾರ, ಅಂದರೆ ಸೈಬರ್ ರಿಸರ್ಚ್ ಮತ್ತು ಇಂಟೆಲಿಜೆನ್ಸ್ ಲ್ಯಾಬ್ಸ್, ಗೂಗಲ್ ಪ್ಲೇ ಸ್ಟೋರ್ ನಲ್ಲಿ 20 ಕ್ಕೂ ಹೆಚ್ಚು ಅಪಾಯಕಾರಿ ಕ್ರಿಪ್ಟೋಕರೆನ್ಸಿ ವ್ಯಾಲೆಟ್ ಆಪ್ ಗಳನ್ನು ಗುರುತಿಸಲಾಗಿದೆ. ಈ ಆಪ್ ಗಳು ವ್ಯಾಲೆಟ್ ರಿಕವರಿ ಮುಂತಾದ ಮಾಹಿತಿಯನ್ನು ಕದಿಯುವ ಮೂಲಕ ಬಳಕೆದಾರರ ಸಂಪೂರ್ಣ ಖಾತೆಯನ್ನು ಹ್ಯಾಕ್ ಮಾಡಬಹುದು.ಹಾಗಾಗಿ CIRIL ಈ 20 ಆಪ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬಳಕೆದಾರರು ಅವುಗಳನ್ನು ತಕ್ಷಣ ಡಿಲೀಟ್ ಅಥವಾ ಅನ್​ಇನ್​ಸ್ಟಾಲ್ ಮಾಡಲು ಕೇಳಿಕೊಂಡಿದೆ. ಬಿಡುಗಡೆ ಮಾಡಿರುವ 20 ಅಪ್ಲಿಕೇಶನ್ ಗಳು ಯಾವುವೆಂದರೆ,ಸೂಟ್ ವಾಲೆಟ್,ಶಿಸ್ವಾಪ್ ,ರೇಡಿಯಂ, ಹೈಪರ್‌ಲಿಕ್ವಿಡ್, ಬುಲ್‌ಎಕ್ಸ್ ಕ್ರಿಪ್ಟೋ, ಪ್ಯಾನ್‌ಕೇಕ್‌ಸ್ವಾಪ್, ಓಪನ್ ಓಷನ್ ಎಕ್ಸ್ಚೇಂಜ್, ಸುಶಿಸ್ವಾಪ್, ಮೀಟೋರಾ ಎಕ್ಸ್‌ಚೇಂಜ್, ಬುಲ್‌ಎಕ್ಸ್ ಕ್ರಿಪ್ಟೋ, ಪ್ಯಾನ್‌ಕೇಕ್‌ಸ್ವಾಪ್, ಹಾರ್ವೆಸ್ಟ್ ಫೈನಾನ್ಸ್ ಬ್ಲಾಗ್.ಈ ರೀತಿಯ ಅಪ್ಲಿಕೇಶನ್ಗಳು ನಿಮ್ಮ ಮೊಬೈಲ್ ನಲ್ಲಿದ್ದರೆ ತಕ್ಷಣವೇ ಡಿಲೀಟ್ ಮಾಡಿ.

ಈ ಮೇಲಿನ ಅಪ್ಲಿಕೇಶನ್ಗಳನ್ನು ಡಿಲೀಟ್ ಮಾಡಿದ ನಂತರ ನೀವು ಮಾಡಬೇಕಾದ ಕೆಲಸಗಳೆಂದರೆ,
*ಅಪ್ಲಿಕೇಶನ್‌ಗಳನ್ನು ಅಳಿಸಿದ ನಂತರ, ನಿಮ್ಮ ಫೋನ್‌ನಲ್ಲಿ ಟು ಸ್ಟೆಪ್ ವೆರಿಫಿಕೇಷನ್ ಆನ್ ಮಾಡಬೇಕು.
*ಯಾವುದೇ ಅಪರಿಚಿತ ಲಿಂಕ್ ಅಥವಾ ಸಂದೇಶದ ಮೂಲಕ ಅಪ್ಲಿಕೇಶನ್‌ಗಳನ್ನು ಎಂದಿಗೂ ಡೌನ್‌ಲೋಡ್ ಮಾಡಬೇಡಿ.
*ಅಧಿಕೃತ ವೆಬ್‌ಸೈಟ್ ಅಥವಾ ಗೂಗಲ್ ಪ್ಲೇ ಸ್ಟೋರ್‌ನಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ.
*ಇದಲ್ಲದೆ, ಕಾಲಕಾಲಕ್ಕೆ ವ್ಯಾಲೆಟ್ ಅನ್ನು ಮೇಲ್ವಿಚಾರಣೆ ಮಾಡುತ್ತಿರಿ.

The post ಆಂಡ್ರಾಯ್ಡ್ ಬಳಕೆದಾರರಿಗೆ CIRILನಿಂದ ಎಚ್ಚರಿಕೆ: ಈ 20 ಅಪ್ಲಿಕೇಶನ್‌ಗಳು ನಿಮ್ಮ ಮೊಬೈಲ್ ನಲ್ಲಿದ್ದರೆ ತಕ್ಷಣವೇ ಡಿಲೀಟ್ ಮಾಡಿ…. appeared first on Good News 24x7.

]]>
ಫೋನ್ ಕಸಿದುಕೊಂಡರು ಎಂಬ ಕೋಪಕ್ಕೆ ಶಿಕ್ಷಕಿಗೆ ಚಪ್ಪಲಿಯಲ್ಲಿ ಬಾರಿಸಿದ ವಿದ್ಯಾರ್ಥಿನಿ!!! https://www.goodnews24x7.com/%e0%b2%ab%e0%b3%8b%e0%b2%a8%e0%b3%8d-%e0%b2%95%e0%b2%b8%e0%b2%bf%e0%b2%a6%e0%b3%81%e0%b2%95%e0%b3%8a%e0%b2%82%e0%b2%a1%e0%b2%b0%e0%b3%81-%e0%b2%8e%e0%b2%82%e0%b2%ac-%e0%b2%95%e0%b3%8b%e0%b2%aa/ Sat, 26 Apr 2025 12:07:29 +0000 https://www.goodnews24x7.com/?p=3438 ಹೌದು ವೀಕ್ಷಕರೇ ಇಂತಹದೊಂದು ಅಮಾನವೀಯ ಘಟನೆ ಆಂಧ್ರಪ್ರದೇಶದ ರಘು ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ. ಕ್ಲಾಸ್ನಲ್ಲಿ ಫೋನ್ ಬಳಸಿದ್ದಕ್ಕೆ ಪ್ರಾಧ್ಯಾಪಕಿ ಫೋನ್ ವಶಪಡಿಸಿಕೊಂಡಿದ್ದು, ಇದರಿಂದ ಕೋಪಗೊಂಡ ಯುವತಿ ನೇರವಾಗಿ ಶಿಕ್ಷಕಿಯ ಮೇಲೆ ಕೈ ಮಾಡಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ…

The post ಫೋನ್ ಕಸಿದುಕೊಂಡರು ಎಂಬ ಕೋಪಕ್ಕೆ ಶಿಕ್ಷಕಿಗೆ ಚಪ್ಪಲಿಯಲ್ಲಿ ಬಾರಿಸಿದ ವಿದ್ಯಾರ್ಥಿನಿ!!! appeared first on Good News 24x7.

]]>

ಹೌದು ವೀಕ್ಷಕರೇ ಇಂತಹದೊಂದು ಅಮಾನವೀಯ ಘಟನೆ ಆಂಧ್ರಪ್ರದೇಶದ ರಘು ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ. ಕ್ಲಾಸ್ನಲ್ಲಿ ಫೋನ್ ಬಳಸಿದ್ದಕ್ಕೆ ಪ್ರಾಧ್ಯಾಪಕಿ ಫೋನ್ ವಶಪಡಿಸಿಕೊಂಡಿದ್ದು, ಇದರಿಂದ ಕೋಪಗೊಂಡ ಯುವತಿ ನೇರವಾಗಿ ಶಿಕ್ಷಕಿಯ ಮೇಲೆ ಕೈ ಮಾಡಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದ ಬೆನ್ನಲ್ಲೇ ಇದೀಗ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿನಿಯನ್ನು ಅಮಾನತುಗೊಳಿಸಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವನ್ನು ನೀಡಿ ಅವರನ್ನು ನಾಳಿನ ಉದಯೋನ್ಮುಖ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿಯನ್ನು ಹೊತ್ತಿರುವುದು ಶಿಕ್ಷಕರು. ಶಿಕ್ಷಕರು ದೇವರಿಗೆ ಸಮಾನ ಎಂಬ ಮಾತಿದೆ ಹಾಗಿದ್ದರೂ ಸಹ ಕೇವಲ ಫೋನಿಗಾಗಿ ಶಿಕ್ಷಕೀಯ ಮೇಲೆ ಕೈ ಮಾಡಿರುವುದು ಹಾಗೂ ಚಪ್ಪಲಿಯಿಂದ ಬಾರಿಸಿರುವುದು ನಿಜಕ್ಕೂ ವಿದ್ಯಾರ್ಥಿ ಜೀವನಕ್ಕೆ ಅವಮಾನ ಮಾಡುವಂತಹ ಘಟನೆ ಇದಾಗಿದೆ.

ಮಕ್ಕಳಿಗೆ ವಿದ್ಯೆ ಕಲಿಸಿ, ಬದುಕಿನ ಮಾರ್ಗ ತೋರಿಸುವ ಶಿಕ್ಷಕನ್ನು ದೇವರೆಂದು ಗೌರವಿಸಲಾಗುತ್ತದೆ. ಆದರೆ ಇಲ್ಲೊಬ್ಬಳು ವಿದ್ಯಾರ್ಥಿನಿ ತನ್ನ ಚಪ್ಪಲಿಯಲ್ಲೇ ತನ್ನ ಗುರುವಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಈ ಘಟನೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ರಘು ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವಿದ್ಯಾರ್ಥಿನಿ ತರಗತಿಯಲ್ಲಿ ಫೋನಿನಲ್ಲಿ ಮಾತನಾಡುತ್ತಿದ್ದನ್ನು ಕಂಡ ಶಿಕ್ಷಕಿ ಆಕೆಯಿಂದ ಫೋನ್ ಕಸಿದುಕೊಂಡಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿನಿ ನೇರವಾಗಿ ತನ್ನ ಶಿಕ್ಷಕಿಯ ಮೇಲೆಯೇ ಕೈ ಮಾಡಿದ್ದಾಳೆ.

ಕಾಲೇಜಿನ ಕ್ಯಾಂಪಸ್ನಲ್ಲೇ ನೂರಾರು ವಿದ್ಯಾರ್ಥಿಗಳ ಮುಂದೆ ಶಿಕ್ಷಕಿಗೆ ಚಪ್ಪಲಿಯಲ್ಲಿ ಹೊಡೆದಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಇದಲ್ಲದೇ ಶಿಕ್ಷಕಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವುದನ್ನು ಕಾಣಬಹುದು. ಅಲ್ಲೇ ಇದ್ದ ವಿದ್ಯಾರ್ಥಿಯೊಬ್ಬರು ಈ ಘಟನೆಯನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಅಷ್ಟೇ ಅಲ್ಲ, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಘು ಕಾಲೇಜು ಆಡಳಿತ ಮಂಡಳಿ ವಿಚಾರಣೆ ನಡೆಸಿದ್ದು,ವಿದ್ಯಾರ್ಥಿನಿ ಕೋಪಗೊಂಡು ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದಾಳೆಂದು ತಿಳಿದುಬಂದಿದೆ. ಶಿಕ್ಷಕಿಯ ಮೇಲೆ ಕೈ ಮಾಡಿದ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ.

The post ಫೋನ್ ಕಸಿದುಕೊಂಡರು ಎಂಬ ಕೋಪಕ್ಕೆ ಶಿಕ್ಷಕಿಗೆ ಚಪ್ಪಲಿಯಲ್ಲಿ ಬಾರಿಸಿದ ವಿದ್ಯಾರ್ಥಿನಿ!!! appeared first on Good News 24x7.

]]>