police station Archives - Good News 24x7 https://www.goodnews24x7.com/tag/police-station/ Kannada Thu, 02 Apr 2026 11:40:12 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg police station Archives - Good News 24x7 https://www.goodnews24x7.com/tag/police-station/ 32 32 ಪ್ರೇಯಸಿಯನ್ನ ಅಜ್ಜನ ಮನೆಗೆ ಕರೆದೊಯ್ದು ಪ್ರಿಯಕರ: ಪ್ರೇಮಿಗಳು ಆತ್ಮಹ* ! https://www.goodnews24x7.com/lovers-commit-suicide-after-taking-their-lover-to-their-grandfathers-house-lovers-commit-suicidelovers-commit-suicide-after-taking-their-lover-to-their-grandfathers-house-lovers-commit-suicide/ Thu, 02 Apr 2026 11:40:12 +0000 https://www.goodnews24x7.com/?p=9073   ಪ್ರೀತಿಗೆ ಪೋಷಕರ ವಿರೋಧ, ಮದುವೆಗೆ ನಿರಾಕರಣೆ ಅಥವಾ ಪ್ರೇಮ ವೈಫಲ್ಯದಿಂದಾಗಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಕರ್ನಾಟಕದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿವೆ. ಜೋಡಿಗಳು ಲವ್ ಮಾಡಿ ಬಳಿಕ ಒಂದಿಲ್ಲೊದು ಕಾರಣಕ್ಕೆ ಸಾಯುವ ನಿರ್ಧಾರ ಕೈಗೊಳ್ಳುತ್ತವೆ, ಅದರಂತೆ ಚಾಮರಾಜನಗರದಲ್ಲಿ ಮದುವೆಗೆ ಪೋಷಕರ ವಿರೋಧ…

The post ಪ್ರೇಯಸಿಯನ್ನ ಅಜ್ಜನ ಮನೆಗೆ ಕರೆದೊಯ್ದು ಪ್ರಿಯಕರ: ಪ್ರೇಮಿಗಳು ಆತ್ಮಹ* ! appeared first on Good News 24x7.

]]>

 

ಪ್ರೀತಿಗೆ ಪೋಷಕರ ವಿರೋಧ, ಮದುವೆಗೆ ನಿರಾಕರಣೆ ಅಥವಾ ಪ್ರೇಮ ವೈಫಲ್ಯದಿಂದಾಗಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಕರ್ನಾಟಕದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿವೆ. ಜೋಡಿಗಳು ಲವ್ ಮಾಡಿ ಬಳಿಕ ಒಂದಿಲ್ಲೊದು ಕಾರಣಕ್ಕೆ ಸಾಯುವ ನಿರ್ಧಾರ ಕೈಗೊಳ್ಳುತ್ತವೆ, ಅದರಂತೆ ಚಾಮರಾಜನಗರದಲ್ಲಿ ಮದುವೆಗೆ ಪೋಷಕರ ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದು ಪ್ರೇಮಿಗಳು ದುಡುಕಿನ ನಿರ್ಧಾರ ಕೈಗೊಂಡು ಸಾವಿನ ಮನೆ ಸೇರಿದ್ದಾರೆ.

ತಮ್ಮ ಮದುವೆಗೆ ಪೋಷಕರ ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ನದಿಯಾ(19), ನಾಗೇಂದ್ರ(21) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಮನೆಬಿಟ್ಟು ಹೋಗಿತ್ತು. ಹೀಗಾಗಿ ಇತ್ತ ಯುವತಿ ಕಡೆಯವರು ಮಿಸ್ಸಿಂಗ್ ದೂರು ನೀಡಿದ್ದಾರೆ. ಇದರಿದ ಹೆದರಿ ಪ್ರೇಮಿಗಳು ಜತೆಯಲ್ಲೇ ಸಾಯುಲು ನಿರ್ಧರಿಸಿ ನೇಣಿಗೆ ಶರಣಾಗಿದ್ದಾರೆ.

ನಾಗೇಂದ್ರ ಹಾಗೂ ಪಾಲಾರ್ ಗ್ರಾಮದ ನದಿಯಾ ಪರಸ್ಪರ ಪ್ರೀತಿಸುತ್ತಿದ್ದರು. ಹೀಗಾಗಿ 3 ದಿನದ ಹಿಂದೆ ನಾಗೇಂದ್ರ, ನದಿಯಾಳನ್ನು ಕರೆದುಕೊಂಡು ತನ್ನ ಅಜ್ಜನ ಊರು ಪೊನ್ನಾಚಿಗೆ ಕರೆದುಕೊಂಡು ಹೋಗಿದ್ದ. ಇತ್ತ ನದಿಯಾ ಕುಟುಂಬಸ್ಥರು ಆತಂಕಗೊಂಡಿದ್ದು, ಎಲ್ಲೆಡೆ ಹುಡುಕಾರಿದ್ದಾರೆ. ಆದರೂ ಪತ್ತೆಯಾಗಿಲ್ಲ. ಕೊನೆಗೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಶ್ ದಾಖಲಿಸಿದ್ದರು.

ಕೇಸ್ ದಾಖಲಾದ ವಿಚಾರ ನಾಗೇಂದ್ರ ಹಾಗೂ ನದಿಯಾಗೆ ಗೊತ್ತಾಗಿ ಹೆದರಿಕೊಂಡಿದ್ದು, ಒಂದು ವೇಳೆ ಪೊಲೀಸರ ಕೈಗೆ ಸಿಕ್ಕರೆ ಹೇಗೆ ? ಮುಂದೇನು ಎಂದು ಭಯಗೊಡು ಸಾಯುವ ನಿರ್ಧಾರಕ್ಕೆ ಬಂದಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಇಬ್ಬರು ಒಟ್ಟಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಮಲೆ ಮಹದೇಶ್ವರಬೆಟ್ಟ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಸದ್ಯ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಶವಗಳ ಸ್ಥಳಾಂತರ ಮಾಡಲಾಗಿದೆ.

 

The post ಪ್ರೇಯಸಿಯನ್ನ ಅಜ್ಜನ ಮನೆಗೆ ಕರೆದೊಯ್ದು ಪ್ರಿಯಕರ: ಪ್ರೇಮಿಗಳು ಆತ್ಮಹ* ! appeared first on Good News 24x7.

]]>
ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹ*! https://www.goodnews24x7.com/couple-commits-suicide-by-strangling-childcouple-commits-suicide-by-strangling-child/ Mon, 09 Mar 2026 12:03:54 +0000 https://www.goodnews24x7.com/?p=8808   ಅದು ಮುದ್ದಾದ ಸಂಸಾರ. ಮದುವೆಯಾಗಿ ಮೂರು ವರ್ಷವಷ್ಟೇ ಆಗಿತ್ತು. ಆ ಕುಟುಂಬದಲ್ಲಿ ಎಲ್ಲವೂ ಸರಿಯಾಗಿಯೇ ಇದೆ ಅಂದುಕೊಳ್ತಿರುವಾಗಲೇ ಬೆಳ್ಳಂಬೆಳಗ್ಗೆ ಶಾಕಿಂಗ್ ನ್ಯೂಸ್ ಬಂದಿದೆ. ಎರಡು ವರ್ಷಗಳ ಹಿಂದಷ್ಟೇ ಪ್ರಪಂಚಕ್ಕೆ ಬಂದು ಈಗಷ್ಟೇ ಕಣ್ತೆರೆಯುತ್ತಿದ್ದ ಕಂದಮ್ಮನನ್ನ ಹೆತ್ತವರೇ ಕತ್ತು ಹಿಸುಕಿ ಕೊಲ್ಲಲು…

The post ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹ*! appeared first on Good News 24x7.

]]>

 

ಅದು ಮುದ್ದಾದ ಸಂಸಾರ. ಮದುವೆಯಾಗಿ ಮೂರು ವರ್ಷವಷ್ಟೇ ಆಗಿತ್ತು. ಆ ಕುಟುಂಬದಲ್ಲಿ ಎಲ್ಲವೂ ಸರಿಯಾಗಿಯೇ ಇದೆ ಅಂದುಕೊಳ್ತಿರುವಾಗಲೇ ಬೆಳ್ಳಂಬೆಳಗ್ಗೆ ಶಾಕಿಂಗ್ ನ್ಯೂಸ್ ಬಂದಿದೆ. ಎರಡು ವರ್ಷಗಳ ಹಿಂದಷ್ಟೇ ಪ್ರಪಂಚಕ್ಕೆ ಬಂದು ಈಗಷ್ಟೇ ಕಣ್ತೆರೆಯುತ್ತಿದ್ದ ಕಂದಮ್ಮನನ್ನ ಹೆತ್ತವರೇ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿ ತಾವು ಸಾವಿನ ಮನೆ ಸೇರಿದ್ದಾರೆ.ಆದ್ರೆ, ಪವಾಡಸದೃಶ ರೀತಿಯಲ್ಲಿ ಮಗು ಬದುಕುಳಿದಿದೆ.

ಕೌಟುಂಬಿಕ ಕಲಹಕ್ಕೆ 2 ವರ್ಷದ ಮಗುವನ್ನು ಕತ್ತು ಹಿಸುಕಿ, ಬಳಿಕ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಅಸ್ವಸ್ಥಗೊಂಡಿದ್ದ ಮಗು ಅದೃಷ್ಟವಶಾತ್ ಪವಾಡದಂತೆ ಬದುಕುಳಿದಿದ್ದು, ಇದೀಗ ತಂದೆ ತಾಯಿ ಇಲ್ಲದೇ ಅನಾಥವಾಗಿದೆ. ಈ ಹೃದಯ ವಿದ್ರಾವಕ ಘಟನೆ ಮಂಡ್ಯದ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ. ಹೊಸಕೋಟೆ ಗ್ರಾಮದ ದರ್ಶನ್, ದಿವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ದಂಪತಿ.

ಹೊಸಕೋಟೆ ಗ್ರಾಮದ ದರ್ಶನ್, ದಿವ್ಯಶ್ರೀ ಕಳೆದ ಮೂರು ವರ್ಷದ‌ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಎರಡು ವರ್ಷದ ಮಗುವಿನೊಂದಿಗೆ ಮಂಡ್ಯದ ಕೆ.ಆರ್.ಪೇಟೆಯ ಜಯನಗರ ಬಡಾವಣೆ ಮನೆಯೊಂದರಲ್ಲಿ ವಾಸವಾಗಿದ್ದರು. ಆದ್ರೆ, ಗಂಡ ಹೆಂಡತಿ ನಡುವೆ ಅದೇನಾಗಿತ್ತೋ ಏನೋ ದಂಪತಿ ಇಂದು ಬೆಳಿಗ್ಗೆ ನೇಣಿಗೆ ಶರಣಾಗಿದ್ದಾರೆ. ಆದ್ರೆ, ದಂಪತಿ ಸಾಯುವ ಮುನ್ನ ತಮ್ಮ ಎರಡು ವರ್ಷದ ಮಗುವನ್ನು ಸಹ ಕೊಲ್ಲಲು ತೀರ್ಮಾನಿಸಿದ್ದರು.

ಸ್ನೇಹಿತೆಯ ಲವ್​​ನಲ್ಲಿ ಮಧ್ಯಸ್ಥಿಕೆ: ಗಂಡ ಹೆಂಡ್ತಿ ಗಲಾಟೆ ಸಾವಿನಲ್ಲಿ ಅಂತ್ಯ
ಅದರಂತೆ ಮಗುವನ್ನು ಕತ್ತು ಹಿಸುಕಿದ್ದಾರೆ. ಇದರಿಂದ ಮಗು ಅಸ್ವಸ್ಥಗೊಂಡು ಬಿದ್ದಿದೆ. ಬಳಿಕ ದಂಪತಿ ಮಗು ಸಾವನ್ನಪ್ಪಿದೆ ಎಂದು ತಾವು ಸಹ ನೇಣಿಗೆ ಕೊರಳೊಡ್ಡಿದ್ದಾರೆ. ಆದ್ರೆ, ದಂಪತಿ ಸಾವನ್ನಪ್ಪುತ್ತಿದ್ದಂತೆಯೇ ಇನ್ನೊಂದೆಡೆ ಮಗು ಉಸಿರಾಡಿದ್ದು, ಪವಾಡದ ತೀರಿಯಲ್ಲಿ ಬದುಕುಳಿದಿದೆ. ಆದ್ರೆ, ತಂದೆ ತಾಯಿ ಇಲ್ಲದೇ ಅನಾಥವಾಗಿದ್ದು, ಎರಡು ಕಡೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ನನ್ನು ಬದುಕುಳಿದ ಮಗುವನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆ.ಆರ್.ಪೇಟೆ ಟೌನ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದಂಪತಿಯ ಕೆಟ್ಟ ನಿರ್ಧಾರಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಕೌಂಟುಂಬಿಕ ಕಲಹದಿಂದ ಬೇಸತ್ತು ಈ ಪ್ರಪಂಚವನ್ನೇ ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗಿದ್ದು, ಪೊಲೀಸರ ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರಲಿದೆ.

 

The post ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹ*! appeared first on Good News 24x7.

]]>
ಮೈಸೂರಿನಲ್ಲಿ 1.52 ಕೋಟಿ ರೂ. ಆನ್ ಲೈನ್ ಮೂಲಕ ವಂಚನೆ: ದೂರು ದಾಖಲು. https://www.goodnews24x7.com/%e0%b2%ae%e0%b3%88%e0%b2%b8%e0%b3%82%e0%b2%b0%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-1-52-%e0%b2%95%e0%b3%8b%e0%b2%9f%e0%b2%bf-%e0%b2%b0%e0%b3%82-%e0%b2%86%e0%b2%a8%e0%b3%8d-%e0%b2%b2/ Mon, 14 Apr 2025 10:25:29 +0000 https://www.goodnews24x7.com/?p=3244 ಮೈಸೂರು: ವಂಚಕರು ನಿವೃತ್ತ ಅಧಿಕಾರಿ ಹಾಗೂ ಇಂಜಿನಿಯರ್ ಇಬ್ಬರಿಗೆ ಆನ್ ಲೈನ್ ಮೂಲಕ ವಂಚಿಸಿ 1.52 ಕೋಟಿ ಪಂಗನಾಮ ಹಾಕಿರುವ ಘಟನ ಮೈಸೂರಿನಲ್ಲಿ ನಡೆದಿದೆ. ಗಾಯತ್ರಿಪುರಂ ನಿವಾಸಿ ಹಾಗೂ ಕನಕದಾಸನಗರದ ನಿವಾಸಿಗಳಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಎಂದು ಹೇಳಿ…

The post ಮೈಸೂರಿನಲ್ಲಿ 1.52 ಕೋಟಿ ರೂ. ಆನ್ ಲೈನ್ ಮೂಲಕ ವಂಚನೆ: ದೂರು ದಾಖಲು. appeared first on Good News 24x7.

]]>

ಮೈಸೂರು: ವಂಚಕರು ನಿವೃತ್ತ ಅಧಿಕಾರಿ ಹಾಗೂ ಇಂಜಿನಿಯರ್ ಇಬ್ಬರಿಗೆ ಆನ್ ಲೈನ್ ಮೂಲಕ ವಂಚಿಸಿ 1.52 ಕೋಟಿ ಪಂಗನಾಮ ಹಾಕಿರುವ ಘಟನ ಮೈಸೂರಿನಲ್ಲಿ ನಡೆದಿದೆ.
ಗಾಯತ್ರಿಪುರಂ ನಿವಾಸಿ ಹಾಗೂ ಕನಕದಾಸನಗರದ ನಿವಾಸಿಗಳಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಎಂದು ಹೇಳಿ ಖದೀಮರು 1.52 ಕೋಟಿ ರೂ ವಂಚನೆ ಮಾಡಿದ್ದಾರೆ. ಹೆಚ್ಚಿನ ಹಣದ ಆಸೆಗೆ ಬಿದ್ದ ನಿವೃತ್ತ ಅಧಿಕಾರಿ ಹಾಗೂ ಇಂಜಿನಿಯರ್ ಇಬ್ಬರು ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ. ವಂಚಕರು ಇನ್ ಸ್ಟಾಗ್ರಾಂ ಮೂಲಕ ಷೇರು ಮಾರುಕಟ್ಟೆಯ ವಿಡಿಯೋ ಪ್ರದರ್ಶನ ಮಾಡಿದ್ದು, ನಿವೃತ್ತ ಅಧಿಕಾರಿ ಹಾಗೂ ಇಂಜಿನಿಯರ್ ವಿಡಿಯೋ ನಂಬಿ ಮೆಸೇಜ್ ಮಾಡಿದಾಗ ಆಪ್ಸ್ ಟಾಕ್ಸ್ ವ್ಯಾಲ್ಯೂ ವಾಟ್ಸಾಪ್ ಗ್ರೂಪಿಗೆ ಜಾಯಿನ್ ಮಾಡಿದ್ದಾರೆ. ಆರಂಭದಲ್ಲಿ ಲಾಭ ತೋರಿಸಿದ ವಂಚಕರು ನಂತರ ಹಂತ- ಹಂತವಾಗಿ ಹಣ ಪಡೆದು ವಂಚನೆ ಮಾಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಪೊಲೀಸ್ ಅಂತ ಹೇಳಿ 11.80 ಲಕ್ಷ ರೂ. ಹಣ ಖಾತೆಗೆ ಹಾಕಿಸಿಕೊಂಡು ವಂಚನೆ ಮಾಡಲಾಗಿದೆ. ಮುಂಬೈ ಪೊಲೀಸ್ ಅಂತ ನಿವೃತ್ತ ಅಧಿಕಾರಿಗೆ ಕರೆ ಮಾಡಿದ ವಂಚಕರು ಕೆಲವು ಅಪರಾಧ ಕೃತ್ಯದಲ್ಲಿ ನೀವು ಭಾಗಿಯಾಗಿದ್ದೀರಿ. ನಿಮ್ಮ ಖಾತೆಗಳನ್ನ ಸೀಜ್ ಮಾಡಲಾಗುವುದು ಎಂದು ಎಂದು ಬೆದರಿಕೆ ಹಾಕಿ ಹಣ ಹಾಕಿಸಿಕೊಂಡು ವಂಚಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ದೂರುಗಳು ದಾಖಲಾಗಿದೆ.

The post ಮೈಸೂರಿನಲ್ಲಿ 1.52 ಕೋಟಿ ರೂ. ಆನ್ ಲೈನ್ ಮೂಲಕ ವಂಚನೆ: ದೂರು ದಾಖಲು. appeared first on Good News 24x7.

]]>
ಪತ್ನಿಯ ಕಿರುಕುಳದಿಂದ ಬೇಸತ್ತು ಕಂಪ್ಲೇಂಟ್ ಕೊಟ್ಟ ಗಂಡ!!! https://www.goodnews24x7.com/%e0%b2%aa%e0%b2%a4%e0%b3%8d%e0%b2%a8%e0%b2%bf%e0%b2%af-%e0%b2%95%e0%b2%bf%e0%b2%b0%e0%b3%81%e0%b2%95%e0%b3%81%e0%b2%b3%e0%b2%a6%e0%b2%bf%e0%b2%82%e0%b2%a6-%e0%b2%ac%e0%b3%87%e0%b2%b8%e0%b2%a4%e0%b3%8d/ Fri, 04 Apr 2025 13:03:16 +0000 https://www.goodnews24x7.com/?p=3046 ಹೌದು ವೀಕ್ಷಕರೇ ಇಂತಹದೊಂದು ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.ಇತ್ತೀಚಿನ ದಿನಗಳಲ್ಲಿ ಹೆಂಡ್ತಿ ಗಂಡನ ಮೇಲೆ ಹಲ್ಲೆ ನಡೆಸುವ, ಬಾಯ್ಫ್ರೆಂಡ್ ಸಲುವಾಗಿ ಗಂಡನನ್ನೇ ಕೊಲೆ ಮಾಡುವುದು ಸೇರಿದಂತೆ ಪುರುಷರ ಮೇಲಾಗುವ ದೌರ್ಜನ್ಯಗಳ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು,…

The post ಪತ್ನಿಯ ಕಿರುಕುಳದಿಂದ ಬೇಸತ್ತು ಕಂಪ್ಲೇಂಟ್ ಕೊಟ್ಟ ಗಂಡ!!! appeared first on Good News 24x7.

]]>

ಹೌದು ವೀಕ್ಷಕರೇ ಇಂತಹದೊಂದು ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.ಇತ್ತೀಚಿನ ದಿನಗಳಲ್ಲಿ ಹೆಂಡ್ತಿ ಗಂಡನ ಮೇಲೆ ಹಲ್ಲೆ ನಡೆಸುವ, ಬಾಯ್ಫ್ರೆಂಡ್ ಸಲುವಾಗಿ ಗಂಡನನ್ನೇ ಕೊಲೆ ಮಾಡುವುದು ಸೇರಿದಂತೆ ಪುರುಷರ ಮೇಲಾಗುವ ದೌರ್ಜನ್ಯಗಳ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಪತ್ನಿ ತನ್ನ ಗಂಡನಿಗೆ ಮನಬಂದಂತೆ ಥಳಿಸಿದ್ದಾಳೆ. ಹಲ್ಲೆಯ ದೃಶ್ಯವನ್ನು ಹಿಡನ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ನನ್ ಹೆಂಡ್ತಿಯಿಂದ ನನ್ನನ್ನು ರಕ್ಷಿಸಿ ಎಂದು ಪತಿರಾಯ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದು, ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ

ಮಧ್ಯಪ್ರದೇಶದ ಪನ್ನಾ ಎಂಬಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಸಹೋದರ ಹಾಗೂ ತಾಯಿಯ ಜೊತೆ ಸೇರಿ ಮಹಿಳೆಯೊಬ್ಬಳು ಚಿನ್ನಾಭರಣ ಹಾಗೂ ಹಣ ಕೊಡುವಂತೆ ಒತ್ತಾಯಿಸಿ ತನ್ನ ಗಂಡನ ಮೇಲೆಯೇ ದೈಹಿಕ ಹಲ್ಲೆ ನಡೆಸಿದ್ದಾಳೆ. ಅಷ್ಟೇ ಅಲ್ಲದೆ ಗಂಡನಿಗೆ ಮಾನಸಿಕ ಹಿಂಸೆಯನ್ನು ಕೂಡ ನೀಡಿದ್ದಾಳೆ. ಪತ್ನಿಯ ನಿರಂತರ ಕಿರುಕುಳದಿಂದ ಬೇಸತ್ತ ಪತಿರಾಯ ದಯವಿಟ್ಟು ನನಗೆ ರಕ್ಷಣೆ ಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದಾನೆ. ಲೊಕೇಶ್ ಎಂಬಾತನಿಗೆ ಆತನ ಪತ್ನಿ ಹರ್ಷಿತಾ ಹಲ್ಲೆ ನಡೆಸಿದ್ದು, ಈ ದೃಶ್ಯವನ್ನು ಹಿಡನ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಬಳಿಕ ಪೊಲೀಸ್ ಠಾಣೆಗೆ ಹೋಗಿ ನನಗೆ ರಕ್ಷಣೆ ಕೊಡಿ ಎಂದು ಲೊಕೇಶ್ ಪೊಲೀಸರ ಬಳಿ ಕೇಳಿಕೊಂಡಿದ್ದಾನೆ.

The post ಪತ್ನಿಯ ಕಿರುಕುಳದಿಂದ ಬೇಸತ್ತು ಕಂಪ್ಲೇಂಟ್ ಕೊಟ್ಟ ಗಂಡ!!! appeared first on Good News 24x7.

]]>
ಅಕ್ಕನ ಮಗಳ ಮದುವೆಗೆ ರಜೆ ಕೊಡ್ಲಿಲ್ಲ ಎಂದು ಮನನೊಂದು ಬಸ್ನಲ್ಲೇ ಚಾಲಕ ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ….. https://www.goodnews24x7.com/%e0%b2%85%e0%b2%95%e0%b3%8d%e0%b2%95%e0%b2%a8-%e0%b2%ae%e0%b2%97%e0%b2%b3-%e0%b2%ae%e0%b2%a6%e0%b3%81%e0%b2%b5%e0%b3%86%e0%b2%97%e0%b3%86-%e0%b2%b0%e0%b2%9c%e0%b3%86-%e0%b2%95%e0%b3%8a%e0%b2%a1/ Wed, 02 Apr 2025 11:23:48 +0000 https://www.goodnews24x7.com/?p=2999 ಹೌದು ಇಂತಹದೊಂದು ಆಘಾತಕಾರಿ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕಾರಣ ಇಷ್ಟೇ ಅಕ್ಕನ ಮಗಳ ಮದುವೆಗೆ ರಜೆ ನೀಡದ ಹಿನ್ನೆಲೆ, ಚಾಲಕ ಮನನೊಂದು ಬಸ್ನಲ್ಲೇ ಚಾಲಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಡಿಪೋದ 2ನೇ ಘಟಕದಲ್ಲಿ ನಡೆದಿದೆ.   2ನೇ…

The post ಅಕ್ಕನ ಮಗಳ ಮದುವೆಗೆ ರಜೆ ಕೊಡ್ಲಿಲ್ಲ ಎಂದು ಮನನೊಂದು ಬಸ್ನಲ್ಲೇ ಚಾಲಕ ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ….. appeared first on Good News 24x7.

]]>

ಹೌದು ಇಂತಹದೊಂದು ಆಘಾತಕಾರಿ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕಾರಣ ಇಷ್ಟೇ ಅಕ್ಕನ ಮಗಳ ಮದುವೆಗೆ ರಜೆ ನೀಡದ ಹಿನ್ನೆಲೆ, ಚಾಲಕ ಮನನೊಂದು ಬಸ್ನಲ್ಲೇ ಚಾಲಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಡಿಪೋದ 2ನೇ ಘಟಕದಲ್ಲಿ ನಡೆದಿದೆ.

 

2ನೇ ಘಟಕದ ಬಸ್ ಚಾಲಕ ಬಾಲಚಂದ್ರ ಹುಕೋಜಿ ನೇಣಿಗೆ ಶರಣಾಗಿದ್ದಾರೆ. ಮನೆಯಲ್ಲಿ ಅಕ್ಕನ ಮಗಳ ಮದುವೆಯಿದ್ದ ಕಾರಣ ಕಳೆದ ಮೂರು ದಿನಗಳ ಹಿಂದೆ ರಜೆಗಾಗಿ ಅರ್ಜಿ ಸಲ್ಲಿಸಿದ್ದರು. ರಜೆ ನೀಡದ ಹಿನ್ನೆಲೆ ಸಿಬಿಟಿಯಿಂದ ವಡಗಾವ ನಗರ ಸಂಚಾರ ಬಸ್ನಲ್ಲಿ ಕರ್ತವ್ಯ ನಿರ್ವಹಿಸಬೇಕಿದ್ದ ಅವರು ಅದೇ ಬಸ್ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹದೊಂದು ಮನಕಲಕುವ ದೃಶ್ಯ ಕರ್ನಾಟಕದಲ್ಲಿ ನಡೆದಿದೆ ಎಂಬುದೇ ಎಲ್ಲರನ್ನೂ ಆಶ್ಚರ್ಯಕ್ಕೆ ತಳ್ಳಿದೆ.

ಇನ್ನೂ ಆ ಚಾಲಕ ಗಾಂಧಿ ನಗರದಲ್ಲಿ ವಾಸವಿರುತ್ತಾರೆ. ಮೃತ ಚಾಲಕ, ಬೆಳಿಗ್ಗೆ 6 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಅವರು ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

The post ಅಕ್ಕನ ಮಗಳ ಮದುವೆಗೆ ರಜೆ ಕೊಡ್ಲಿಲ್ಲ ಎಂದು ಮನನೊಂದು ಬಸ್ನಲ್ಲೇ ಚಾಲಕ ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ….. appeared first on Good News 24x7.

]]>
ರೌಡಿ ಶೀಟರ್ ದೊರೆಸ್ವಾಮಿ ಹ* ಪ್ರಕರಣದಲ್ಲಿ ಎಂಟು ಮಂದಿ ಬಂಧನ; ಪ್ರೇಯಸಿ ಪೊಲೀಸ್ ವಶಕ್ಕೆ. https://www.goodnews24x7.com/%e0%b2%b0%e0%b3%8c%e0%b2%a1%e0%b2%bf-%e0%b2%b6%e0%b3%80%e0%b2%9f%e0%b2%b0%e0%b3%8d-%e0%b2%a6%e0%b3%8a%e0%b2%b0%e0%b3%86%e0%b2%b8%e0%b3%8d%e0%b2%b5%e0%b2%be%e0%b2%ae%e0%b2%bf-%e0%b2%b9-%e0%b2%aa/ Wed, 19 Mar 2025 09:09:09 +0000 https://www.goodnews24x7.com/?p=2823 ಮೈಸೂರು:- ರೌಡಿ ಶೀಟರ್ ದೊರೆಸ್ವಾಮಿ ಹತ್ಯೆ ಪ್ರಕರಣದಲ್ಲಿ ಈವರೆಗೆ 8 ಮಂದಿಯನ್ನು ಬಂಧಿಸಿರುವ ಪೊಲೀಸರು, ಘಟನೆ ವೇಳೆ ದೊರೆಸ್ವಾಮಿ ಜೊತೆಯಲ್ಲಿದ್ದ ಮಹಿಳೆಯ ವಿಚಾರಣೆ ನಡೆಸಿದ್ದಾರೆ. ದೊರೆಸ್ವಾಮಿ ಕೊಲೆಯಾದ ವೇಳೆ ಜೊತೆಯಲ್ಲಿದ್ದ ಬೆಂಗಳೂರು ಮೂಲದ ಶ್ವೇತಾಳನ್ನು ಮಂಗಳವಾರ ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗಿದೆ.…

The post ರೌಡಿ ಶೀಟರ್ ದೊರೆಸ್ವಾಮಿ ಹ* ಪ್ರಕರಣದಲ್ಲಿ ಎಂಟು ಮಂದಿ ಬಂಧನ; ಪ್ರೇಯಸಿ ಪೊಲೀಸ್ ವಶಕ್ಕೆ. appeared first on Good News 24x7.

]]>

ಮೈಸೂರು:- ರೌಡಿ ಶೀಟರ್ ದೊರೆಸ್ವಾಮಿ ಹತ್ಯೆ ಪ್ರಕರಣದಲ್ಲಿ ಈವರೆಗೆ 8 ಮಂದಿಯನ್ನು ಬಂಧಿಸಿರುವ ಪೊಲೀಸರು, ಘಟನೆ ವೇಳೆ ದೊರೆಸ್ವಾಮಿ ಜೊತೆಯಲ್ಲಿದ್ದ ಮಹಿಳೆಯ ವಿಚಾರಣೆ ನಡೆಸಿದ್ದಾರೆ.
ದೊರೆಸ್ವಾಮಿ ಕೊಲೆಯಾದ ವೇಳೆ ಜೊತೆಯಲ್ಲಿದ್ದ ಬೆಂಗಳೂರು ಮೂಲದ ಶ್ವೇತಾಳನ್ನು ಮಂಗಳವಾರ ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗಿದೆ. ಆಕೆಯ ಮೊಬೈಲ್ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯ ಲಾಗಿದ್ದು, ಬುಧವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಘಟನೆ ಸಂಬಂಧ ನಿನ್ನೆ ಮತ್ತು ಮೊನ್ನೆ ಒಟ್ಟು 8 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಮೈಸೂರು ತಾಲೂಕು, ಜಯಪುರ ಹೋಬಳಿ, ಅನಗನಹಳ್ಳಿ ಸಮೀಪದ ತೋಟದ ಮನೆಯಲ್ಲಿ ಕೆಲ ದಿನಗಳ ಹಿಂದೆ ದೊರೆಸ್ವಾಮಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಆ ರಾತ್ರಿ ಆತನ ಜೊತೆಯಲ್ಲಿದ್ದ ಪ್ರೇಯಸಿ ಬೆಂಗ ಳೂರು ಮೂಲದ ಶ್ವೇತಾ ನಾಪತ್ತೆಯಾಗಿ ದ್ದಳು. ಆದ್ದರಿಂದ ಶ್ವೇತಾ ಮೇಲೆ ಅನುಮಾನ ವ್ಯಕ್ತವಾಗಿತ್ತು. ಆಕೆಯೇ ಕೊಲೆ ಮಾಡಿ, ತಲೆಮರೆಸಿಕೊಂಡಿರುವುದಾಗಿ ದೊರೆಸ್ವಾಮಿ ಪತ್ನಿಯ ಆರೋಪಿಸಿದ್ದರು. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೇಲಧಿಕಾರಿಗಳ ನಿರ್ದೇಶನದಂತೆ ವೃತ್ತ ನಿರೀಕ್ಷಕ ಶಿವನಂಜಶೆಟ್ಟಿ ನೇತೃತ್ವದಲ್ಲಿ ತನಿಖೆ ನಡೆಸಿದ ತಂಡ, ಹಳೇ ದ್ವೇಷಕ್ಕೆ ಹತ್ಯೆ ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿತ್ತು. ಇದೀಗ ಹತ್ಯೆ ನಡೆದ ವೇಳೆ ಜೊತೆಯಲ್ಲಿದ್ದರು ಎನ್ನಲಾದ ಶ್ವೇತಾಳ ವಿಚಾರಣೆ ನಡೆಸ ಲಾಗಿದ್ದು, ಈಕೆ ಭಾಗಿಯಾಗಿದ್ದಾಳೋ, ಇಲ್ಲವೋ ಎನ್ನುವುದು ಮುಂದಿನ ತನಿಖೆಯಲ್ಲಿ ತಿಳಿಯಲಿದೆ.

The post ರೌಡಿ ಶೀಟರ್ ದೊರೆಸ್ವಾಮಿ ಹ* ಪ್ರಕರಣದಲ್ಲಿ ಎಂಟು ಮಂದಿ ಬಂಧನ; ಪ್ರೇಯಸಿ ಪೊಲೀಸ್ ವಶಕ್ಕೆ. appeared first on Good News 24x7.

]]>