policecustody Archives - Good News 24x7 https://www.goodnews24x7.com/tag/policecustody/ Kannada Thu, 21 Aug 2025 12:13:40 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg policecustody Archives - Good News 24x7 https://www.goodnews24x7.com/tag/policecustody/ 32 32 ಬ್ರಹ್ಮಾವರ ಠಾಣೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಬಂಧನ https://www.goodnews24x7.com/mahesh-shetty-timarodi-arrested-at-brahmavar-police-station/ Thu, 21 Aug 2025 12:13:40 +0000 https://www.goodnews24x7.com/?p=6437 ಉಡುಪಿ: ಮಹೇಶ್ ಶೆಟ್ಟಿ ತಿಮರೋಡಿ ತೀವ್ರ ವಿಚಾರಣೆಯ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ಸುತ್ತ ಒಂದು ದಿನದ ಮಟ್ಟಿಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಸ್ವರೂಪಾ ಟಿಕೆ ಆದೇಶಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತವನ್ನು ಕಾಪಾಡುವ…

The post ಬ್ರಹ್ಮಾವರ ಠಾಣೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಬಂಧನ appeared first on Good News 24x7.

]]>

ಉಡುಪಿ: ಮಹೇಶ್ ಶೆಟ್ಟಿ ತಿಮರೋಡಿ ತೀವ್ರ ವಿಚಾರಣೆಯ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ಸುತ್ತ ಒಂದು ದಿನದ ಮಟ್ಟಿಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಸ್ವರೂಪಾ ಟಿಕೆ ಆದೇಶಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತ 2023 ರ ಕಲಂ 163 ರಡಿ ಪ ಅಧಿಕಾರವನ್ನು ಚಲಾಯಿಸಿ ಆ. 21, ಮಧ್ಯಾಹ್ನ 1 ಗಂಟೆಯಿಂದ ಆ. 22 ಮಧ್ಯಾಹ್ನ 1 ಗಂಟೆಯವರೆಗೆ ಬ್ರಹ್ಮಾವರ ಪೊಲೀಸ್ ಠಾಣೆ ಸರಹದ್ದಿನ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಇದೆ.

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಉಜಿರೆಯಲ್ಲಿ ಬಂಧಿಸಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಕರೆ ತಂದಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಕರೆದು ತರಲಾಗಿದೆ. ಠಾಣೆಯ ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023ರ ಕಲಂ 163 ರನ್ವಯ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.


ನಿಷೇಧಾಜ್ಞೆಯ ಆದೇಶವನ್ನು ಹೊರಡಿಸುವಂತೆ ಕೋರಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ವರದಿಯನ್ನು ಸಲ್ಲಿಸಿದ್ದಾರೆ. ಉಡುಪಿ ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳುವುದು ಅತೀ ಅವಶ್ಯಕವಾಗಿರುತ್ತದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಎಡೆಮಾಡಿಕೊಡದಂತೆ ಸೂಕ್ತ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲು ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ಉಡುಪಿ ಇವರ ವರದಿಯನ್ನು ಆಧರಿಸಿ ಮುಂಜಾಗೃತ ಕ್ರಮವಾಗಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.‌ ಭಾರತೀಯ ನಾಗರಿಕ ಸುರಕ್ಷಾ ಸಂಹಿತ 2023 ರ ಕಲಂ 163 ರಡಿ ಮ ಅಧಿಕಾರವನ್ನು ಚಲಾಯಿಸಿ ಆದೇಶಿಸಿದ್ದಾರೆ.

ಧರ್ಮಸ್ಥಳದ ತಿಮರೋಡಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಿರುವ ಪೊಲೀಸರು ಬಿಗುಬಂದೋಬಸ್ತ್‌ನಲ್ಲಿ ಮಧ್ಯಾಹ್ನ 1.20 ಕ್ಕೆ ಪೊಲೀಸರು ಠಾಣೆಗೆ ಕರೆದು ತಂದಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಗೆ ಆಗಮಿಸಿದ ವಕೀಲರ ತಂಡವು ಭದ್ರತಾ ಜಾಮೀನಿನ ಮೇಲೆ ತಿಮರೋಡಿ ಬಿಡುಗಡೆಗೆ ಕ್ರಮಕ್ಕೆ ಸಿದ್ಧತೆ ನಡೆಸಿದೆ. ತಿಮ್ಮರೊಡಿ ಜತೆ ಗಿರೀಶ್ ಮಟ್ಟಣ್ಣನವರ್ ಆಗಮಿಸಿದ್ದು, ಠಾಣೆಗೆ ಆಗಮಿಸುವ ಮುನ್ನವೇ ಮಹೇಶ್ ಶೆಟ್ಟಿ ಪರ ವಕೀಲರು ಠಾಣೆಯಲ್ಲಿದ್ದರು. ತಿಮರೋಡಿಯನ್ನು ಠಾಣೆಯಲ್ಲಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ‌.

The post ಬ್ರಹ್ಮಾವರ ಠಾಣೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಬಂಧನ appeared first on Good News 24x7.

]]>
ಹೆಣ್ಣುಮಗು ಹುಟ್ಟಿದ್ದಕ್ಕೆ ಬಿಸ್ಕತ್​ನಲ್ಲಿ ವಿಷವಿಟ್ಟ TSR ಯೋಧ! https://www.goodnews24x7.com/tsr-soldier-poisoned-biscuits-after-giving-birth-to-a-girl/ Tue, 12 Aug 2025 06:54:48 +0000 https://www.goodnews24x7.com/?p=5894 ಅಗರ್ತಲಾ: ಗಂಡು ಮಗು ಹುಟ್ಟಲಿಲ್ಲ ಅಂತ ಒಂದು ವರ್ಷದ ಹೆಣ್ಣು ಮಗುವಿಗೆ ಯೋಧರೊಬ್ಬರು ಬಿಸ್ಕತ್​ನಲ್ಲಿ ವಿಷ ಇಟ್ಟು ತಿನಿಸಿ ಜೀವ ತೆಗೆದಿದ್ದಾರೆ. ತ್ರಿಪುರಾದ ಖೊವೈ ಜಿಲ್ಲೆಯ ಬೆಹಲಬಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಬೆಹಲಬಾರಿ ಗ್ರಾಮದ ರಥೀಂದ್ರ ದೆಬ್ಬಾರ್ಮ್ ಜೀವ…

The post ಹೆಣ್ಣುಮಗು ಹುಟ್ಟಿದ್ದಕ್ಕೆ ಬಿಸ್ಕತ್​ನಲ್ಲಿ ವಿಷವಿಟ್ಟ TSR ಯೋಧ! appeared first on Good News 24x7.

]]>

ಅಗರ್ತಲಾ: ಗಂಡು ಮಗು ಹುಟ್ಟಲಿಲ್ಲ ಅಂತ ಒಂದು ವರ್ಷದ ಹೆಣ್ಣು ಮಗುವಿಗೆ ಯೋಧರೊಬ್ಬರು ಬಿಸ್ಕತ್​ನಲ್ಲಿ ವಿಷ ಇಟ್ಟು ತಿನಿಸಿ ಜೀವ ತೆಗೆದಿದ್ದಾರೆ. ತ್ರಿಪುರಾದ ಖೊವೈ ಜಿಲ್ಲೆಯ ಬೆಹಲಬಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಜಿಲ್ಲೆಯ ಬೆಹಲಬಾರಿ ಗ್ರಾಮದ ರಥೀಂದ್ರ ದೆಬ್ಬಾರ್ಮ್ ಜೀವ ತೆಗೆದ ಆರೋಪಿ. ಇವರು ತ್ರಿಪುರಾ ಸ್ಟೇಟ್ ರೈಫಲ್ಸ್ (ಟಿಎಸ್​​ಆರ್​)​ನ ಬೆಟಲಿಯಾನ್​ 10ರಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಗಳ ಜೀವ ತೆಗೆದ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಕೋರ್ಟ್​ ವಿಚಾರಣೆ ನಡೆಸಿ ಆರೋಪಿಯನ್ನು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ಹೇಳಲಾಗಿದೆ.

ರಥೀಂದ್ರ ದೆಬ್ಬಾರ್ಮ್ ಹಾಗೂ ಮಿತಾಲಿ ದೆಬ್ಬಾರ್ಮ್​ ದಂಪತಿಗೆ ಎರಡು ಹೆಣ್ಣು ಮಕ್ಕಳಿವೆ. ಇದರಲ್ಲಿ 2ನೇ ಮಗು ಸುಹಾನಿ, ತನ್ನ ತಂದೆಯಿಂದಲೇ ಜೀವ ಕಳೆದುಕೊಂಡಿದೆ. ಈ ಬಗ್ಗೆ ಆರೋಪ ಮಾಡಿರುವ ಹೆಂಡತಿ ನನ್ನ ಗಂಡನಿಂದಲೇ ಮಗು ಇಲ್ಲವಾಗಿದೆ ಎಂದು ದುಃಖಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಮಿತಾಲಿ ತನ್ನ ಮಕ್ಕಳೊಂದಿಗೆ ಸಹೋದರಿಯ ಊರಿಗೆ ಹೋಗಿದ್ದಳು. ಈ ವೇಳೆ ಗಂಡ ಕೂಡ ಜೊತೆಗೆ ಬಂದಿದ್ದನು. ಮನೆಯಲ್ಲಿ ಇರುವಾಗ ಬಿಸ್ಕೆತ್​ ಕೊಡಿಸುವುದಾಗಿ ನನ್ನ ಮಗಳು ಸುಹಾನಿ ಹಾಗೂ ಸಹೋದರಿಯ ಮಗನನ್ನು ಕರೆದುಕೊಂಡು ಸಮೀಪದ ಅಂಗಡಿಗೆ ಹೋಗಿದ್ದರು. ಇದಾದ ಮೇಲೆ ಮಗಳು ವಾಂತಿ ಮಾಡಲು ಶುರು ಮಾಡಿದಳು. ಅವಳ ಬಾಯಿಂದ ಮೆಡಿಸೆನ್​ ವಾಸನೆ ಬರುತ್ತಿತ್ತು. ಇದಕ್ಕೆ ಏನಾದರೂ ತಿನ್ನಿಸಿದ್ದೀಯಾ ಎಂದು ಗಂಡನನ್ನ ಕೇಳಿದ್ದೆ. ಅವರು ಏನನ್ನು ಒಪ್ಪಲಿಲ್ಲ. ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಜೀವ ಹೋಗಿದೆ ಅಂತ ವೈದ್ಯರು ಹೇಳಿದರು ಎಂದು ತಾಯಿ ಮಿತಾಲಿ ಹೇಳಿದ್ದಾರೆ.

ಮತ್ತೊಂದು ಹೆಣ್ಣು ಮಗು ಹುಟ್ಟಿದ್ದಕ್ಕೆ ನನ್ನನ್ನು ನಿತ್ಯ ನಿಂದಿಸುತ್ತಿದ್ದರು. ಕೂದಲು ಹಿಡಿದು ಎಳೆದಾಡಿ ಹೊಡೆಯುತ್ತಿದ್ದರು. ಗಂಡು ಮಗು ಹುಟ್ಟಲಿಲ್ಲ ಎನ್ನುತ್ತಿದ್ದರು. ಮಗುನ ಮುಗಿಸಿದ್ದಕ್ಕೆ ಗಂಡನಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆಯಾಗಬೇಕು ಎಂದು ಮಿತಾಲಿ ಆಗ್ರಹವಾಗಿದೆ. ಸದ್ಯ ಪೊಲೀಸರು ಆರೋಪಿಯನ್ನ ವಿಚಾರಣೆ ನಡೆಸುತ್ತಿದ್ದಾರೆ.

The post ಹೆಣ್ಣುಮಗು ಹುಟ್ಟಿದ್ದಕ್ಕೆ ಬಿಸ್ಕತ್​ನಲ್ಲಿ ವಿಷವಿಟ್ಟ TSR ಯೋಧ! appeared first on Good News 24x7.

]]>