police's Archives - Good News 24x7 https://www.goodnews24x7.com/tag/polices/ Kannada Fri, 06 Jun 2025 07:18:37 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg police's Archives - Good News 24x7 https://www.goodnews24x7.com/tag/polices/ 32 32 ಕಾಲ್ತುಳಿತದ 11 ಜನರ ಸಾ*ವಿಗೆ ಸರ್ಕಾರವೇ ಕಾರಣ-ಆರ್.ಅಶೋಕ್ ವಾಗ್ದಾಳಿ. https://www.goodnews24x7.com/government-responsible-for-11-deaths-in-stampede-r-ashok-attacks/ Fri, 06 Jun 2025 07:17:05 +0000 https://www.goodnews24x7.com/?p=4251 ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿರುವುದಕ್ಕೆ ಸರ್ಕಾರವೇ ಕಾರಣ. ಅಂಧ ಸಿಎಂ, ಅಂಧ ದರ್ಬಾರ್ ಸರ್ಕಾರ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ಇಂದು ಜೆಡಿಎಸ್ ಬಿಜೆಪಿ ನಾಯಕರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.…

The post ಕಾಲ್ತುಳಿತದ 11 ಜನರ ಸಾ*ವಿಗೆ ಸರ್ಕಾರವೇ ಕಾರಣ-ಆರ್.ಅಶೋಕ್ ವಾಗ್ದಾಳಿ. appeared first on Good News 24x7.

]]>

ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿರುವುದಕ್ಕೆ ಸರ್ಕಾರವೇ ಕಾರಣ. ಅಂಧ ಸಿಎಂ, ಅಂಧ ದರ್ಬಾರ್ ಸರ್ಕಾರ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಇಂದು ಜೆಡಿಎಸ್ ಬಿಜೆಪಿ ನಾಯಕರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇದ್ದರು.


ಈ ವೇಳೆ ಮಾತನಾಡಿದ ಆರ್.ಅಶೋಕ್, ಐಪಿಎಲ್ ಕಪ್ ಗೆದ್ದಿದ್ದು ಆರ್ ಸಿಬಿ ತಂಡ. ಆದರೆ ಫೋಟೊಗೆ ಫೋಸ್ ನೀಡಿದ್ದು ಕೆಪಿಸಿಸಿ ತಂಡ . ಇವರು ಕುರುಡು ಮುಖ್ಯಮಂತ್ರಿ. ಇಲ್ಲಿ ಸರ್ಕಾರ ಅಪರಾಧಿ. ತಪ್ಪಿತಸ್ಥರು ಸರ್ಕಾರ. ಪೊಲೀಸರನನ್ನ ಹರಕೆಯ ಕುರಿಯನ್ನಾಗಿಸಿದಿರಿ. ಮೊಸರನ್ನು ನೀವು ತಿಂದು ಪೊಲೀಸರ ಮೂತಿಗೆ ಒರೆಸಿದ್ರಿ ಸಿಎಂ ರನ್ ಔಟ್ ಮಾಡಲು ಡಿಕೆಶಿ ಯತ್ನಿಸುತ್ತಿದ್ದು , ಸಾರ್ವಜನಿಕರು ಪೊಲೀಸರ ಪರ ಇದ್ದಾರೆ ಎಂದರು.

ಹೈಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಸರ್ಕಾರಕ್ಕೆ ನಾಚಿಕೆ ಬೇಡವಾ? ನಮ್ಮದೇನು ತಪ್ಪಿಲ್ಲ ಅಂತ ಸಿಎಂ ಪ್ರೆಸ್ ಮೀಟ್ ಮಾಡಿದ್ರಿ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಪೊಲೀಸ್ ಕಮಿಷನರ್ ಸಸ್ಪೆಂಡ್ ಆಗಿದ್ದಾರೆ. ರಾಜ್ಯದ ಜನರು ಇಂದು ವಿ ಆರ್ ವಿತ್ ಪೊಲೀಸ್ ಎಂದು ಹೇಳುತ್ತಿದ್ದಾರೆ. ಅನಧಿಕೃತ ಕಾರ್ಯಕ್ರಮ ಎಂದು ನೀವೆ ಎಫ್ ಐಆರ್ ನಲ್ಲಿ ಹೇಳಿದ್ದೀರಾ? ಹಾಗಾದರೆ ಸಿಎಂ ಮನೆಗೆ ಪ್ರಾಂಚೈಸಿ ಅವರನ್ನ ಕರೆದುಕೊಂಡು ಹೋಗಿದ್ದು ಯಾರು. ಕಮಿಷನರ್ ಅನುಮತಿ ಕೊಟ್ಟಿಲ್ಲ ಅಂತಾ ಸಿಎಂಗೆ ಹೇಳಿದವರು ಯಾರು? ವಿಧಾನಸೌಧದಲ್ಲಿ ಏನು ಗಲಾಟೆ ಆಗಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗಲಾಟೆ ಆಗಿದ್ದು ಎಂದು ಸಿಎಂ ಹೇಳಿದ್ದಾರೆ. ಆಗಾದರೆ ಸ್ಟೇಡಿಯಂ ಏನು ಕರ್ನಾಕಟದಲ್ಲಿ ಇಲ್ವಾ ಎಂದು ಅಶೋಕ್ ಪ್ರಶ್ನಿಸಿದರು.

 

 

The post ಕಾಲ್ತುಳಿತದ 11 ಜನರ ಸಾ*ವಿಗೆ ಸರ್ಕಾರವೇ ಕಾರಣ-ಆರ್.ಅಶೋಕ್ ವಾಗ್ದಾಳಿ. appeared first on Good News 24x7.

]]>
ಕರ್ತವ್ಯ ನಿರತ ಪೊಲೀಸರೊಂದಿಗೆ ಅನುಚಿತ ವರ್ತನೆ, ಇಬ್ಬರ ವಿರುದ್ದ FIR ದಾಖಲು. https://www.goodnews24x7.com/%e0%b2%95%e0%b2%b0%e0%b3%8d%e0%b2%a4%e0%b2%b5%e0%b3%8d%e0%b2%af-%e0%b2%a8%e0%b2%bf%e0%b2%b0%e0%b2%a4-%e0%b2%aa%e0%b3%8a%e0%b2%b2%e0%b3%80%e0%b2%b8%e0%b2%b0%e0%b3%8a%e0%b2%82%e0%b2%a6%e0%b2%bf%e0%b2%97/ Wed, 05 Mar 2025 07:36:29 +0000 https://www.goodnews24x7.com/?p=2604 ಕರ್ತವ್ಯನಿರತ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಹಿನ್ನಲೆ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ ಹಾಗೂ ಮತ್ತೊಬ್ಬನ ವಿರುದ್ದ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ ಹಾಗೂ ಮತ್ತೊಬ್ಬನ ವಿರುದ್ದ FIR ದಾಖಲಾಗಿದೆ. ನಿನ್ನೆ ತಡರಾತ್ರಿ ವೇಳೆ…

The post ಕರ್ತವ್ಯ ನಿರತ ಪೊಲೀಸರೊಂದಿಗೆ ಅನುಚಿತ ವರ್ತನೆ, ಇಬ್ಬರ ವಿರುದ್ದ FIR ದಾಖಲು. appeared first on Good News 24x7.

]]>

ಕರ್ತವ್ಯನಿರತ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಹಿನ್ನಲೆ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ ಹಾಗೂ ಮತ್ತೊಬ್ಬನ ವಿರುದ್ದ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ ಹಾಗೂ ಮತ್ತೊಬ್ಬನ ವಿರುದ್ದ FIR ದಾಖಲಾಗಿದೆ.

ನಿನ್ನೆ ತಡರಾತ್ರಿ ವೇಳೆ ಮರಿಸ್ವಾಮಿ ಹಾಗೂ ಮತ್ತೊಬ್ಬ ವ್ಯಕ್ತಿ ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್ ಒಂದರ ಬಳಿ ಸ್ಕೂಟರ್ ಜೊತೆ ನಿಂತಿದ್ದಾರೆ.ಸ್ಕೂಟರ್ ಗೆ ನಂಬರ್ ಪ್ಲೇಟ್ ಹಾಕಿರಲಿಲ್ಲ.ಈ ಬಗ್ಗೆ ರಾತ್ರಿ ಗಸ್ತಿನಲ್ಲಿದ್ದ ವಿವಿಪುರಂ ಠಾಣೆಯ ಪೇದೆಗಳಾದ ರೆಹಮಾನ್ ಮತ್ತು ಕೌಶಿಕ್ ರವರು ಪ್ರಶ್ನಿಸಿದ್ದಾರೆ.ಪೊಲೀಸರ ಪ್ರಶ್ನೆಗೆ ಕೆರಳಿದ ಮರಿಸ್ವಾಮಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಳ್ಳುವಾಗ ಕಿತ್ತುಕೊಳ್ಳಲು ಬಂದಿದ್ದಾರೆ.ಹಿರಿಯ ಪೊಲೀಸ್ ಅಧಿಕಾರಿ ಬರುತ್ತಿದ್ದಾರೆ ಇಲ್ಲೇ ಇರುವಂತೆ ತಾಕೀತು ಮಾಡುತ್ತಿದ್ದರೂ ಓಡಿಹೋಗುವ ಪ್ರಯತ್ನ ಮಾಡಿದ್ದಾರೆ.ಕೊನೆಗೆ ಪೊಲೀಸರು ಚೇಸ್ ಮಾಡಿ ಮರಿಸ್ವಾಮಿಯನ್ನ ಹಿಡಿದಿದ್ದಾರೆ.ಯಾವ ಪೊಲೀಸ್ ಏನು ಮಾಡಲು ಸಾಧ್ಯವಿಲ್ಲ ಎಂದು ಮರಿಸ್ವಾಮಿ ಧಂಕಿ ಹಾಕಿರುವುದಾಗಿ ಸಿಬ್ಬಂದಿಗಳು ಆರೋಪಿಸಿದ್ದಾರೆ.ಈ ಸಂಭಂಧ ಮರಿಸ್ವಾಮಿ ಹಾಗೂ ಮತ್ತೊಬ್ಬನ ವಿರುದ್ದ ಸಿಬ್ಬಂದಿಗಳಾದ ರೆಹಮಾನ್ ಹಾಗೂ ಕೌಶಿಕ್ ರವರು ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

The post ಕರ್ತವ್ಯ ನಿರತ ಪೊಲೀಸರೊಂದಿಗೆ ಅನುಚಿತ ವರ್ತನೆ, ಇಬ್ಬರ ವಿರುದ್ದ FIR ದಾಖಲು. appeared first on Good News 24x7.

]]>