policestation Archives - Good News 24x7 https://www.goodnews24x7.com/tag/policestation/ Kannada Mon, 10 Nov 2025 12:56:28 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg policestation Archives - Good News 24x7 https://www.goodnews24x7.com/tag/policestation/ 32 32 ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಸಲ್ಮಾನರಿಗೆ, ಭಯೋತ್ಪಾದಕರಿಗೆ ಎಲ್ಲಾ ಸೌಲಭ್ಯ: ವಿಪಕ್ಷ ನಾಯಕ ಆರ್. ಅಶೋಕ್ https://www.goodnews24x7.com/parappana-agrahara-jail-provides-all-facilities-to-muslims-terrorists-opposition-leader-r-ashok/ Mon, 10 Nov 2025 12:56:28 +0000 https://www.goodnews24x7.com/?p=8097 ಬೆಂಗಳೂರು: ಪರಪ್ಪನ ಅಗ್ರಹಾರದ ಕರ್ಮಕಾಂಡಗಳು ಒಂದೊಂದಾಗಿ ಬಯಲಾಗುತ್ತಿವೆ. ಜೈಲಿನಿಂದ ಹೊರಬಿದ್ದ ದೃಶ್ಯಗಳು ಜೈಲು ವ್ಯವಸ್ಥೆಯ ಅವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಉಗ್ರರು, ನಟೋರಿಯಸ್ ರೇಪಿಸ್ಟ್ ಹಾಗೂ ಅಪಾಯಕಾರಿ ಕೈದಿಗಳಿಗೆ ಸಿಗ್ತಿರೋ ಸವಲತ್ತು ಸಮಾಜವನ್ನ ಆತಂಕಕ್ಕೆ ದೂಡುವಂತೆ ಮಾಡಿದೆ. ಈ ಅಕ್ರಮ ಚಟುವಟಿಕೆಗಳ ವಿರುದ್ಧ…

The post ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಸಲ್ಮಾನರಿಗೆ, ಭಯೋತ್ಪಾದಕರಿಗೆ ಎಲ್ಲಾ ಸೌಲಭ್ಯ: ವಿಪಕ್ಷ ನಾಯಕ ಆರ್. ಅಶೋಕ್ appeared first on Good News 24x7.

]]>

ಬೆಂಗಳೂರು: ಪರಪ್ಪನ ಅಗ್ರಹಾರದ ಕರ್ಮಕಾಂಡಗಳು ಒಂದೊಂದಾಗಿ ಬಯಲಾಗುತ್ತಿವೆ. ಜೈಲಿನಿಂದ ಹೊರಬಿದ್ದ ದೃಶ್ಯಗಳು ಜೈಲು ವ್ಯವಸ್ಥೆಯ ಅವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಉಗ್ರರು, ನಟೋರಿಯಸ್ ರೇಪಿಸ್ಟ್ ಹಾಗೂ ಅಪಾಯಕಾರಿ ಕೈದಿಗಳಿಗೆ ಸಿಗ್ತಿರೋ ಸವಲತ್ತು ಸಮಾಜವನ್ನ ಆತಂಕಕ್ಕೆ ದೂಡುವಂತೆ ಮಾಡಿದೆ. ಈ ಅಕ್ರಮ ಚಟುವಟಿಕೆಗಳ ವಿರುದ್ಧ ಬಿಜೆಪಿ ಹೋರಾಟ ನಡೆಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರನ್ನ ಹೊಣೆ ಮಾಡಿರೋ ಬಿಜೆಪಿ ನಿಗಿನಿಗಿ ಅಂತಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಮುಸಲ್ಮಾನರನ್ನು ಮುಟ್ಟಿದರೆ ನಮಗೆ ಪ್ರಮೋಷನ್ ಇಲ್ಲ ಅಂತಾ ಕರ್ನಾಟಕದ ಪೊಲೀಸರು ಭಯಗೊಂಡಿದ್ದಾರೆ. ಯಾವ ಸ್ಟೇಷನ್ ಗಳಲ್ಲೂ ಈಗ ಮುಸಲ್ಮಾನರ ಮೇಲೆ ಏನೂ ಕೇಸ್ ಮಾಡಲ್ಲ. ಈಗ ಅದು ಪರಪ್ಪನ ಅಗ್ರಹಾರದವರೆಗೆ ಹೋಗಿದೆ. ಪರಪ್ಪನ ಅಗ್ರಹಾರದಲ್ಲಿ ಮುಸಲ್ಮಾನರಿಗೆ, ಭಯೋತ್ಪಾದಕರಿಗೆ ಎಲ್ಲಾ ಸೌಲಭ್ಯ ಕೊಡುತ್ತಾರೆ. ದೇಶದಲ್ಲಿರುವ ಎಲ್ಲಾ ಭಯೋತ್ಪಾದಕರು ನಮಗೆ ಕರ್ನಾಟಕ ಕೊಡಿ ಎಂದು ಅರ್ಜಿ ಹಾಕುತ್ತಿದ್ದಾರಂತೆ. ದರ್ಶನ್ ಬೀಡಿ ಸೇದಿದ್ದಕ್ಕೆ ಸುಪ್ರೀಂ ಕೋರ್ಟ್ ಗೆ ಹೋಗಿ ಬೇಲ್ ಕ್ಯಾನ್ಸಲ್ ಮಾಡಿಸಿದರು. ಇದರಲ್ಲಿ ಸುಪ್ರೀಂ ಕೋರ್ಟ್ ಗೆ ಸರ್ಕಾರ ಹೋಗಲ್ಲ. ದರ್ಶನ್ ಗೆ ಒಂದು ಕಾನೂನು, ಭಯೋತ್ಪಾದಕರಿಗೆ ರಾಜಾತಿಥ್ಯ. ಯಾಕೆಂದರೆ ದರ್ಶನ್ ಹಿಂದೂ, ಇವರು ಮುಸಲ್ಮಾನರು. ದರ್ಶನ್ ತಪ್ಪು ಮಾಡಿದ್ದಾರೆ, ಇಲ್ಲ ಅಂತಾ ಹೇಳಲ್ಲ. ಆದರೆ ಕಾನೂನು ಎಲ್ಲರಿಗೂ ಒಂದೇ ತಾನೇ. ದೇಶದ್ರೋಹಿಗೆ ಒಂದು ಕಾನೂನು, ದರ್ಶನ್ ಗೆ ಒಂದು ಕಾನೂನಾ? ಎಂದು ಪ್ರಶ್ನಿಸಿದರು.

The post ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಸಲ್ಮಾನರಿಗೆ, ಭಯೋತ್ಪಾದಕರಿಗೆ ಎಲ್ಲಾ ಸೌಲಭ್ಯ: ವಿಪಕ್ಷ ನಾಯಕ ಆರ್. ಅಶೋಕ್ appeared first on Good News 24x7.

]]>
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ; FIR ದಾಖಲು https://www.goodnews24x7.com/parappana-agrahara-jail-inmates-given-royal-hospitality-fir-filed/ Mon, 10 Nov 2025 12:42:35 +0000 https://www.goodnews24x7.com/?p=8089 ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲು ಪ್ರಕರಣಗಳು ದಾಖಲಾಗಿವೆ. ಮೂರು ಎನ್​ಸಿಆರ್ ಮತ್ತು ಒಂದು ಎಫ್ಐಆರ್ ದಾಖಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತನಿಖೆ ನಡೆಸಿದ್ದು, ಎನ್​​ಐಎ ಕೂಡ ಮಧ್ಯೆ ಪ್ರವೇಶಿಸಿದೆ.…

The post ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ; FIR ದಾಖಲು appeared first on Good News 24x7.

]]>

ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲು ಪ್ರಕರಣಗಳು ದಾಖಲಾಗಿವೆ. ಮೂರು ಎನ್​ಸಿಆರ್ ಮತ್ತು ಒಂದು ಎಫ್ಐಆರ್ ದಾಖಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತನಿಖೆ ನಡೆಸಿದ್ದು, ಎನ್​​ಐಎ ಕೂಡ ಮಧ್ಯೆ ಪ್ರವೇಶಿಸಿದೆ.

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ (parappana agrahara jail) ಕರ್ಮಕಾಂಡಗಳು ಒಂದೊಂದಾಗಿ ಹೊರಬರುತ್ತಿವೆ. ಐಷಾರಾಮಿ ಬದುಕಿನ ಒಂದೊಂದೇ ಕರಾಳತೆ ಬಯಲಾಗುತ್ತಿದೆ. ಈ ಬೆನ್ನಲ್ಲೇ ಗೃಹ ಇಲಾಖೆ ಅಲರ್ಟ್ ಆಗಿದೆ. ಇಬ್ಬರು ಜೈಲಧಿಕಾರಿಗಳ ತಲೆದಂಡವಾಗಿದೆ. ಇದೀಗ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರವಾಗಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಮೂರು ಎನ್​​ಸಿಆರ್​​ ಮತ್ತು ಒಂದು ಎಫ್​​ಐಆರ್​​​ ದಾಖಲಾಗಿದೆ. ಜೊತೆಗೆ ಎನ್​​ಐಎ ಎಂಟ್ರಿ ಆಗಿದೆ.

ವಿಕೃತ ಕಾಮಿ, ನಟೋರಿಯಸ್ ರೌಡಿಶೀಟರ್​ಗಳು, ಅಷ್ಟೇ ಯಾಕೆ ಮೋಸ್ಟ್ ವಾಂಟೆಡ್ ಉಗ್ರಗಾಮಿಗಳು ಪರಪ್ಪನ ಅಗ್ರಹಾರ ಜೈಲಿಗೆ ಯಾವುದೋ ರೆಸಾರ್ಟ್​​ಗೆ ಬಂದಂತಿದ್ದಾರೆ. ಹೈಪ್ರೊಫೈಲ್ ಕೇಸ್​ಗಳ ಆರೋಪಿಗಳು, ಅಪರಾಧಿಗಳು ಶಿಕ್ಷೆ ಸನುಭವಿಸುತ್ತಿರುವ ಈ ಜೈಲು ಕ್ರಿಮಿನಲ್​ಗಳ ಪಾಲಿಗೆ ಸ್ವರ್ಗ. ಅದಕ್ಕೆ ಸಾಕ್ಷಿಯಾಗಿ ಕೈದಿಗಳು ಮೋಜು ಮಸ್ತಿ ಮಾಡುತ್ತಿದ್ದ ಸಾಲು ಸಾಲು ವಿಡಿಯೋಗಳು ರಾಜ್ಯದ ಜನರನ್ನು ಬೆಚ್ಚಿಬೀಳಿಸಿವೆ.

ಒಟ್ಟು ನಾಲ್ಕು ಪ್ರಕರಣಗಳ ದಾಖಲು
ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರವಾಗಿ ಈವರೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಒಟ್ಟು ನಾಲ್ಕು ದೂರು ದಾಖಲಾಗಿವೆ. ಈ ಪೈಕಿ ಮೂರು ಎನ್​​ಸಿ ಆರ್​​ ದಾಖಲಾದರೆ, ಒಂದು ಎಫ್ಐಆರ್​​ ದಾಖಲಾಗಿದೆ.
ಇಂದು ಸಸ್ಪೆಂಡ್ ಆಗಿರುವ ಜೈಲಿನ ಅಧೀಕ್ಷಕ ಮ್ಯಾಗೇರಿ ಅವರಿಂದಲೇ ದೂರು ನೀಡಲಾಗಿದೆ. ಅವರ ದೂರಿನ ಮೇರೆಗೆ ಜೈಲಿನಲ್ಲಿ ತಟ್ಟೆ, ಡ್ರಮ್ ಬಾರಿಸಿ ಡ್ಯಾನ್ಸ್ ಮಾಡಿದ್ದ ಸಜಾ ಬಂಧಿ ಪ್ಯಾಟ್ರಿಕ್ ಟೀಮ್​​​ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಎನ್​​ಸಿಆರ್​​ ಪ್ರಕರಣಗಳನ್ನ ಪೊಲೀಸರು ಎಫ್ಐಆರ್ ಮಾಡಿಕೊಳ್ಳಲಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

ಎನ್​ಐಎ ಅಧಿಕಾರಿಗಳ ಎಂಟ್ರಿ
ಇನ್ನು ಪರಪ್ಪನ ಅಗ್ರಹಾರದಲ್ಲಿ ಉಗ್ರರ ಕೈಗೆ ಮೊಬೈಲ್ ಸಿಗುತ್ತಿದ್ದಂತೆ ಎನ್​ಐಎ ಅಧಿಕಾರಿಗಳ ಎಂಟ್ರಿಯಾಗಿದೆ. ಸಿಸಿಬಿ ಕಚೇರಿಗೆ ಬಂದ ಅಧಿಕಾರಿಗಳ ತಂಡ, ಜೈಲಿನಲ್ಲಿ ಯಾವಾಗ ವಿಡಿಯೋ ರೆಕಾರ್ಡ್ ಮಾಡಲಾಗಿದೆ? ಜೈಲಿನಲ್ಲಿ ಉಗ್ರರು ಬಳಸುತ್ತಿದ್ದ ಮೊಬೈಲ್ ಫೋನ್ ಸಿಕ್ಕಿದೆಯಾ ಎಂಬೆಲ್ಲಾ ಮಾಹಿತಿ ಪಡೆದಿದ್ದಾರೆ. ಜೈಲಿನಲ್ಲಿ ಮೊಬೈಲ್ ಬಳಕೆ ಪ್ರಕರಣ ಸಿಸಿಬಿಗೆ ವರ್ಗಾವಣೆ ಆಗಿಲ್ಲ. ಈ ಬಗ್ಗೆ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ.

ಇಂದು ಬೆಂಗಳೂರಿನ ಕಾರಾಗೃಹ ಕಚೇರಿಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಹತ್ವದ ಸಭೆ ಮಾಡಿದರು. ಸುಮಾರು ಎರಡು ಗಂಟೆಗಳ ಕಾಲ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಪರಮೇಶ್ವರ್, ತರಾಟೆಗೆ ತೆಗೆದುಕೊಂಡರು. ಸಭೆಯ ಬಳಿಕ ಮಾತನಾಡಿದ ಪರಮೇಶ್ವರ್, ಜೈಲು ಅಧೀಕ್ಷಕ ಇಮಾಮ್ ಸಾಬ್ ಮ್ಯಾಗೇರಿ, ಹಾಗೂ ಉಪಾಧೀಕ್ಷಕರಾದ ಅಶೋಕ್ ಭಜಂತ್ರಿ ಎಂಬುವವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಇನ್ನು ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕ ಸುರೇಶ್​ರನ್ನು ಬೇರೆ ಕಡೆಗೆ ಎತ್ತಂಗಡಿ ಮಾಡಲಾಗಿದೆ.

The post ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ; FIR ದಾಖಲು appeared first on Good News 24x7.

]]>
ಸಮೀರ್ ವಾಯ್ಸ್ ಸ್ಯಾಂಪಲ್ ಪಡೆದು, ಯೂಟ್ಯೂಬ್‌ನಲ್ಲಿ ಮಾಡಿದ ಆರೋಪದ ಬಗ್ಗೆ ಸಾಕ್ಷಿ ಕೇಳಿದ ತನಿಖಾಧಿಕಾರಿ https://www.goodnews24x7.com/investigating-officer-obtains-sameers-voice-sample-and-asks-for-evidence-about-allegations-made-on-youtube/ Sun, 24 Aug 2025 11:57:32 +0000 https://www.goodnews24x7.com/?p=6685 ಆಗಸ್ಟ್ 24 ರಂದು ಸಮೀರ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾನೆ. ವಿಚಾರಣೆ ವೇಳೆ ತನಿಖಾಧಿಕಾರಿಗಳು ಸಮೀರ್ ವಾಯ್ಸ್ ಸ್ಯಾಂಪಲ್ ಕೂಡ ಪಡೆದುಕೊಂಡಿದ್ದಾರೆ. ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಮಯೆ ಎಸ್‌ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಧರ್ಮಸ್ಥಳದಲ್ಲಿ ನಡೆದಿದೆ…

The post ಸಮೀರ್ ವಾಯ್ಸ್ ಸ್ಯಾಂಪಲ್ ಪಡೆದು, ಯೂಟ್ಯೂಬ್‌ನಲ್ಲಿ ಮಾಡಿದ ಆರೋಪದ ಬಗ್ಗೆ ಸಾಕ್ಷಿ ಕೇಳಿದ ತನಿಖಾಧಿಕಾರಿ appeared first on Good News 24x7.

]]>

ಆಗಸ್ಟ್ 24 ರಂದು ಸಮೀರ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾನೆ. ವಿಚಾರಣೆ ವೇಳೆ ತನಿಖಾಧಿಕಾರಿಗಳು ಸಮೀರ್ ವಾಯ್ಸ್ ಸ್ಯಾಂಪಲ್ ಕೂಡ ಪಡೆದುಕೊಂಡಿದ್ದಾರೆ.

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಮಯೆ ಎಸ್‌ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಅಪರಾಧ ಕೃತ್ಯಗಳ ಆರೋಪದ ಕುರಿತು ಸಮೀರ್ ತನ್ನ ಯೂಟ್ಯೂಬ್ ಚಾನೆಲ್ ಮೂಲಕ AI ಫೋಟೋ ಬಳಸಿಕೊಂಡು ವಿಡಿಯೋ ಮಾಡಿದ್ದನು. ಇದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಬೆಳ್ತಂಗಡಿ ಪೊಲೀಸರು ನೋಟಿಸ್ ನೀಡಿದ್ದರು. ಆ ಹಿನ್ನೆಲೆಯಲ್ಲಿ ಇಂದು ಸಮೀರ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾನೆ. ವಿಚಾರಣೆ ವೇಳೆ ತನಿಖಾಧಿಕಾರಿಗಳು ಸಮೀರ್ ವಾಯ್ಸ್ ಸ್ಯಾಂಪಲ್ ಕೂಡ ಪಡೆದುಕೊಂಡಿದ್ದಾರೆ.

 

 

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬರ್ ಸಮೀರ್ ವಿಚಾರಣೆ ಮುಂದುವರಿದ್ದು, ಪೊಲೀಸರು ಸಮೀರ್‌ನ ವಾಯ್ಸ್ ಸ್ಯಾಂಪಲ್ ಪಡೆದುಕೊಂಡಿದ್ದಾರೆ. ಆತನ ವಿಡಿಯೋದ ಸ್ಕ್ರಿಪ್ಟ್‌ ಕೊಟ್ಟು ಮತ್ತೆ ವಾಯ್ಸ್ ಓವರ್ ಕೊಡಲು ಹೇಳಿದ್ದಾರೆ. ಸ್ಕ್ರಿಪ್ಟ್ ನೀಡಿ ವಾಯ್ಸ್ ರೆಕಾರ್ಡ್ ಮಾಡುತ್ತಿದ್ದಾರೆ. ಒಂದೇ ಸ್ಕ್ರಿಪ್ಟ್ ಅನ್ನು ಮೂರು ಭಾರೀ ಓದಿಸಿ ಸ್ಯಾಂಪಲ್ ಪಡೆದುಕೊಳ್ಳುತ್ತಿದ್ದಾರೆ.
ಒಂದು ಭಾರೀ ಸ್ಕ್ರಿಪ್ಟ್ ಕಂಪ್ಲೀಟ್ ಆಗಿ ಓದಿ ಮುಗಿಸಲು ಒಂದು ಗಂಟೆ ಸಮಯ ಬೇಕಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬಳಿಕ ಸಮೀರ್‌ನ ವಾಯ್ಸ್ ಸ್ಯಾಂಪಲ್ ಅನ್ನು ಪೊಲೀಸರು ಎಫ್ಎಸ್ಎಲ್‌ಗೆ ಕಳಿಹಿಸಲಿದ್ದಾರೆ. ಆತನ ವಿಡಿಯೋ ಮತ್ತು ಆತನ‌ ವಾಯ್ಸ್‌ಗೂ ತಾಳೆ ಹಾಕಲು ಎಫ್ಎಸ್ಎಲ್‌ಗೆ ರವಾನೆ ಮಾಡಲಿದ್ದಾರೆ.

The post ಸಮೀರ್ ವಾಯ್ಸ್ ಸ್ಯಾಂಪಲ್ ಪಡೆದು, ಯೂಟ್ಯೂಬ್‌ನಲ್ಲಿ ಮಾಡಿದ ಆರೋಪದ ಬಗ್ಗೆ ಸಾಕ್ಷಿ ಕೇಳಿದ ತನಿಖಾಧಿಕಾರಿ appeared first on Good News 24x7.

]]>
ಮೈಸೂರಿನ ಬ್ಯಾಂಕ್ ಆಫ್ ಬರೋಡಾ ಲಾಕರ್‌ನಲ್ಲಿಟ್ಟಿದ್ದ ಚಿನ್ನದ ನಾಣ್ಯಗಳಲ್ಲಿ ಅರ್ಧಕರ್ಧ ನಾಪತ್ತೆಯಾಗಿದೆ. https://www.goodnews24x7.com/half-of-the-gold-coins-kept-in-the-locker-of-bank-of-baroda-in-mysore-have-gone-missing6067-2/ Wed, 13 Aug 2025 13:02:26 +0000 https://www.goodnews24x7.com/?p=6067 ಮೈಸೂರಿನ ಲಿಂಗಾಂಬುದಿಪಾಳ್ಯ. ನಿವಾಸಿ ರುಕ್ಕಿಣಿ ಅವರು ಲಾಕರ್‌ನಲ್ಲಿಟ್ಟಿದ್ದ ಒಂದು ಕೆಜಿ ಚಿನ್ನದ ನಾಣ್ಯಗಳಲ್ಲಿ ಅರ್ಧ ದಷ್ಟು ಕಡಿಮೆಯಾಗಿದೆ ಎಂದು ಕುವೆಂಪು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಬ್ಯಾಂಕ್ ಆಫ್ ಬರೋಡಾ ಕುವೆಂಪುನಗರ ಶಾಖೆಯ ಮ್ಯಾನೇಜ‌ರ್ ಹಾಗೂ ಸಿಬ್ಬಂದಿ…

The post ಮೈಸೂರಿನ ಬ್ಯಾಂಕ್ ಆಫ್ ಬರೋಡಾ ಲಾಕರ್‌ನಲ್ಲಿಟ್ಟಿದ್ದ ಚಿನ್ನದ ನಾಣ್ಯಗಳಲ್ಲಿ ಅರ್ಧಕರ್ಧ ನಾಪತ್ತೆಯಾಗಿದೆ. appeared first on Good News 24x7.

]]>

ಮೈಸೂರಿನ ಲಿಂಗಾಂಬುದಿಪಾಳ್ಯ. ನಿವಾಸಿ ರುಕ್ಕಿಣಿ ಅವರು ಲಾಕರ್‌ನಲ್ಲಿಟ್ಟಿದ್ದ ಒಂದು ಕೆಜಿ ಚಿನ್ನದ ನಾಣ್ಯಗಳಲ್ಲಿ ಅರ್ಧ ದಷ್ಟು ಕಡಿಮೆಯಾಗಿದೆ ಎಂದು ಕುವೆಂಪು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಬ್ಯಾಂಕ್ ಆಫ್ ಬರೋಡಾ ಕುವೆಂಪುನಗರ ಶಾಖೆಯ ಮ್ಯಾನೇಜ‌ರ್ ಹಾಗೂ ಸಿಬ್ಬಂದಿ ವಿರುದ್ಧ ಎಫ್‌ಐಆ‌ರ್ ದಾಖಲಾಗಿದೆ.

ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತೊರೆಯಲು ಕಾರಣ ಯಾರು.?

ದೂರಿನಲ್ಲಿರುವುದು: ಮೊದಲು ಬ್ಯಾಂಕ್ ಆಫ್ ಬರೋಡಾ ಕೊಯಮತ್ತೂರಿನ ಶಾಖೆಯ ಲಾಕರ್‌ನಲ್ಲಿ ಚಿನ್ನದ ಆಭರಣ ಹಾಗೂ ನಾಣ್ಯಗಳನ್ನು ಇಟ್ಟಿದ್ದೆ. ನಂತರ ಮೈಸೂರಿನ ಪಂಚಮಂತ್ರ ರಸ್ತೆಯಲ್ಲಿರುವ ಕುವೆಂಪು ನಗರ ಶಾಖೆಯ ಲಾಕರ್‌ಗೆ ವರ್ಗಾವಣೆ ಪಡೆದುಕೊಂಡೆ. ಆ ವೇಳೆ ಬ್ಯಾಂಕ್ ಮ್ಯಾನೇಜರ್ ನಿಮ್ಮ ಚಿನ್ನದ ನಾಣ್ಯ
ಗಳನ್ನು ಸುರಕ್ಷಿತವಾಗಿ ಲಾಕರ್‌ನಲ್ಲಿ ಇಟ್ಟುಕೊಳ್ಳುವುದಾಗಿ ಹೇಳಿ ಅಗ್ರಿಮೆಂಟ್ ಮಾಡಿಕೊಂಡಿದ್ದರಿಂದ ಸುಮಾರು 1 ಕೆಜಿ ಚಿನ್ನದ ನಾಣ್ಯವನ್ನು 2023ರ ಏಪ್ರಿಲ್ 10ರಂದು ಲಾಕರ್‌ನಲ್ಲಿಟ್ಟಿದ್ದೆ. 2024ರ ಡಿಸೆಂಬರ್ 18ರಂದು ಲಾಕರ್ ಪರಿಶೀಲಿಸಿದಾಗ ಚಿನ್ನದ ನಾಣ್ಯ ಕಡಿಮೆಯಾಗಿರುವಂತೆ ಕಾಣಿಸಿತು. ಅನುಮಾನಗೊಂಡು ವಿಚಾರಿಸಿದಾಗ ಬ್ಯಾಂಕ್ ಸಿಬ್ಬಂದಿ ಸ್ಪಷ್ಟ ಮಾಹಿತಿ ನೀಡಲಿಲ್ಲ. ಪ್ರಸಕ್ತ ವರ್ಷದ ಮಾ.3ರಂದು ಲಾಕರ್‌ನಲ್ಲಿದ್ದ ನಾಣ್ಯಗಳ ತೂಕ ಮಾಡಿಸಿದಾಗ 550 ಗ್ರಾಂ 905 ಮಿಲಿ ಇತ್ತು. ಬಳಿಕ ಮೇ 9ರಂದು ಪರಿ ក 492 0 988 2 ಚಿನ್ನದ ನಾಣ್ಯಗಳಿದ್ದವು. ಬ್ಯಾಂಕ್ ಲಾಕರ್ ರಿಜಿಸ್ಟರ್‌ನಲ್ಲಿದ್ದ ನನ್ನ ಫೋಟೊ ಬದಲಾ ಯಿಸಿ, ಅದರ ಮೇಲೆ ಸೀಲ್ ಹಾಕಲಾ ಗಿದೆ. ಲಾಕರ್‌ನಲ್ಲಿದ್ದ ನಾಣ್ಯಗಳಲ್ಲಿ ಸುಮಾರು 500 ಗ್ರಾಂ ಚಿನ್ನದ ನಾಣ್ಯ ನಾಪತ್ತೆಯಾಗಿರುವ ಬಗ್ಗೆ ಈವರೆಗೂ ಮಾಹಿತಿ ನೀಡಿಲ್ಲ ಎಂದು ಮಹಿಳೆ ಪೊಲೀಸ ರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

The post ಮೈಸೂರಿನ ಬ್ಯಾಂಕ್ ಆಫ್ ಬರೋಡಾ ಲಾಕರ್‌ನಲ್ಲಿಟ್ಟಿದ್ದ ಚಿನ್ನದ ನಾಣ್ಯಗಳಲ್ಲಿ ಅರ್ಧಕರ್ಧ ನಾಪತ್ತೆಯಾಗಿದೆ. appeared first on Good News 24x7.

]]>
ನಂಜನಗೂಡಿನಲ್ಲಿ ಭೀಕರ ಹಲ್ಲೆ , ನಾಲ್ವರ ಮೇಲೆ ಪ್ರಕರಣ​ ದಾಖಲು. https://www.goodnews24x7.com/a-case-has-been-registered-against-four-people-in-nanjangud/ Sun, 10 Aug 2025 11:15:24 +0000 https://www.goodnews24x7.com/?p=5700 ಮೈಸೂರು: ನಾಲ್ವರು ಯುವಕರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಮೈಸೂರಿನ ಮಂಡಿ ಮೊಹಲ್ಲಾದ ನಿವಾಸಿ ಅಭಿಲಾಷ್​ ಹಾಗೂ ರವಿ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆ ನಡೆಸಿದ ನಂಜನಗೂಡಿನ ಸುಭಾಷ್ ಅಲಿಯಾಸ್ ಸುಬ್ಬು, ಆಕಾಶ್ ಅಲಿಯಾಸ್ ಮಿಂಡ್ರಿ,…

The post ನಂಜನಗೂಡಿನಲ್ಲಿ ಭೀಕರ ಹಲ್ಲೆ , ನಾಲ್ವರ ಮೇಲೆ ಪ್ರಕರಣ​ ದಾಖಲು. appeared first on Good News 24x7.

]]>

ಮೈಸೂರು: ನಾಲ್ವರು ಯುವಕರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಮೈಸೂರಿನ ಮಂಡಿ ಮೊಹಲ್ಲಾದ ನಿವಾಸಿ ಅಭಿಲಾಷ್​ ಹಾಗೂ ರವಿ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆ ನಡೆಸಿದ ನಂಜನಗೂಡಿನ ಸುಭಾಷ್ ಅಲಿಯಾಸ್ ಸುಬ್ಬು, ಆಕಾಶ್ ಅಲಿಯಾಸ್ ಮಿಂಡ್ರಿ, ಸತ್ಯ, ಮಂಟಿ ಎಂಬವರ ಮೇಲೆ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ಅಭಿಷೇಕ್ ನಂಜನಗೂಡಿನ ಶ್ರೀರಾಂಪುರದ ಯುವತಿಯನ್ನು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ. ಪತ್ನಿಯ ದೊಡ್ಡಮ್ಮನ ಮಗ ಶಿವಕುಮಾರ್​ನನ್ನು ಸುಭಾಷ್, ಆಕಾಶ್, ಸತ್ಯ ಎಂಬವರು ಕಪಿ ಕಪಿ ಎಂದು ಛೇಡಿಸುತ್ತಿದ್ದರು. ಶಿವಕುಮಾರ್ ತಾಯಿ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಮೂವರು ಶಶಿಕುಮಾರ್ ಮೇಲೆ ದ್ವೇಷ ಬೆಳೆಸಿಕೊಂಡಿದ್ದರು. ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಅಭಿಷೇಕ್ ಪತ್ನಿ ಮನೆಗೆ ಬಂದಾಗ, ಶಶಿಕುಮಾರ್ ಅವರ ಅಣ್ಣನನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು.

ಇದೇ ವೇಳೆ ಹೊಂಚು ಹಾಕಿದ ಸುಭಾಷ್ ತಂಡ ಮಂಟಿಯ ಪ್ಯಾಸೆಂಜರ್ ಆಟೋದಲ್ಲಿ ಮಾರಕಾಸ್ತ್ರಗಳ ಸಮೇತ ಬಂದು ಲಾಂಗ್​ಗಳನ್ನು ಹಿಡಿದು ಭಯ ಸೃಷ್ಟಿಸಿ ಅಭಿಷೇಕ್ ಮೇಲೆ ದಾಳಿ ಮಾಡಿದ್ದಾರೆ. ಬಿಡಿಸಲು ಬಂದ ಶಶಿಕುಮಾರ್ ಅವರ ಅಣ್ಣ ರವಿ ಮೇಲೂ ದಾಳಿ ಮಾಡಿದ್ದಾರೆ. ಚಾಕು, ಕಬ್ಬಿಣದ ರಾಡ್, ರಿಪೀಸ್ ಪಟ್ಟಿಗಳಿಂದ ಹಲ್ಲೆ ನಡೆಸಿದ್ದಾರೆ. ಇವರಿಂದ ಅಭಿಷೇಕ್ ತಪ್ಪಿಸಿಕೊಂಡು ಓಡಿದರೂ, ಬೆನ್ನಟ್ಟಿಕೊಂಡು ಬಂದ ಆರೋಪಿಗಳು ಹಟ್ಟಿಮಾರಮ್ಮನ ದೇವಸ್ಥಾನದ ಬಳಿ ಹಿಡಿದು ಮತ್ತೆ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದಲೂ ಬೈದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ತೀವ್ರವಾಗಿ ಗಾಯಗೊಂಡ ಅಭಿಷೇಕ್ ಹಾಗೂ ರವಿ ಅವರನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ನಡೆಸಿದ ನಾಲ್ವರ ವಿರುದ್ದ ನಂಜನಗೂಡು ಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

The post ನಂಜನಗೂಡಿನಲ್ಲಿ ಭೀಕರ ಹಲ್ಲೆ , ನಾಲ್ವರ ಮೇಲೆ ಪ್ರಕರಣ​ ದಾಖಲು. appeared first on Good News 24x7.

]]>
ಸೋದರಮಾವನಿಂದಲೇ ಕೊ*ಯಾದ ಬಾಲಕ ! ಕಾರಣವಾಯ್ತ ಫ್ರೀಫೈರ್ ಗೇಮ್​​ ಅಡಿಕ್ಷನ್ ? https://www.goodnews24x7.com/boy-killed-by-uncle-was-addiction-to-free-fire-game-the-cause/ Fri, 08 Aug 2025 06:48:39 +0000 https://www.goodnews24x7.com/?p=5558 ಬೆಂಗಳೂರು: ಫ್ರೀಫೈರ್ ಗೇಮ್​ ಚಟಕ್ಕೆ ಬಿದ್ದ14 ವರ್ಷದ ಬಾಲಕನನ್ನು ಆತನ ಮಾವನೇ ಕೊಲೆ ಮಾಡಿರುವಂತಹ ಭೀಕರ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಕುಂಬಾರಹಳ್ಳಿಯ ವಿನಾಯಕ ಲೇಔಟ್​​ನಲ್ಲಿ ನಡೆದಿದೆ. ಸದ್ಯ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡು ಬಾಲಕನ ಮಾವನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.…

The post ಸೋದರಮಾವನಿಂದಲೇ ಕೊ*ಯಾದ ಬಾಲಕ ! ಕಾರಣವಾಯ್ತ ಫ್ರೀಫೈರ್ ಗೇಮ್​​ ಅಡಿಕ್ಷನ್ ? appeared first on Good News 24x7.

]]>

ಬೆಂಗಳೂರು: ಫ್ರೀಫೈರ್ ಗೇಮ್​ ಚಟಕ್ಕೆ ಬಿದ್ದ14 ವರ್ಷದ ಬಾಲಕನನ್ನು ಆತನ ಮಾವನೇ ಕೊಲೆ ಮಾಡಿರುವಂತಹ ಭೀಕರ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಕುಂಬಾರಹಳ್ಳಿಯ ವಿನಾಯಕ ಲೇಔಟ್​​ನಲ್ಲಿ ನಡೆದಿದೆ. ಸದ್ಯ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡು ಬಾಲಕನ ಮಾವನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ನೆಲಮಂಗಲ, ಆಗಸ್ಟ್​ 08: ಫ್ರೀಫೈರ್ ಗೇಮ್ ಚಟಕ್ಕೆ ಬಿದ್ದಿದ್ದ ಅಕ್ಕನ ಮಗನನ್ನು ಮಾವ ಕೊಲೆ (kill) ಮಾಡಿರುವಂತಹ ಘಟನೆ ಬೆಂಗಳೂರಿನ (bangaluru) ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಕುಂಬಾರಹಳ್ಳಿಯ ವಿನಾಯಕ ಲೇಔಟ್​​ನಲ್ಲಿ ನಡೆದಿದೆ. 14 ವರ್ಷದ ಅಮೋಘ ಕೀರ್ತಿ ಕೊಲೆಯಾದ ಬಾಲಕ. ಸದ್ಯ ಪೊಲೀಸರು ಮಾವ ನಾಗಪ್ರಸಾದ್(50) ನನ್ನು ಬಂಧಿಸಿದ್ದಾರೆ. ಮೃತ ಬಾಲಕ ನಾಗಪ್ರಸಾದ್ ಸಹೋದರಿ ಶಿಲ್ಪಾ ಮಗ. ಘಟನೆ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

https://www.goodnews24x7.com/do-you-know-why-green-bangles-are-given-to-the-elders-on-the-day-of-varamahalakshmi-festival/ವರಮಹಾಲಕ್ಷ್ಮಿ ಹಬ್ಬದ ದಿನ ಮುತ್ತೈದೆಯರಿಗೆ ಹಸಿರು ಬಣ್ಣದ ಬಳೆಯನ್ನೇ ಕೊಡುವುದೇಕೆ ಗೊತ್ತಾ?

ನಡೆದದ್ದೇನು?
ಬಾಲಕ ಅಮೋಘ ಕೀರ್ತಿ ಕಳೆದ 8 ತಿಂಗಳಿನಿಂದ ಮಾವ ನಾಗಪ್ರಸಾದ್ ಜೊತೆಗೆ ವಾಸವಿದ್ದ. ಈ ವೇಳೆ ಮೊಬೈಲ್​ನಲ್ಲಿ ಫ್ರೀಫೈರ್ ಗೇಮ್​​ಗೆ ಅಡಿಕ್ಟ್ ಆಗಿದ್ದ. ಗೇಮ್ ಚಟಕ್ಕೆ ಬಿದ್ದು ಪದೇ ಪದೇ ಹಣ ಕೇಳುತ್ತಿದ್ದ. ವಾರದ ಹಿಂದೆ ಹಣ ಕೊಡುವಂತೆ ಮಾವನ ಮೇಲೆ ಹಲ್ಲೆ ಕೂಡ ಮಾಡಿದ್ದ. ಇದರಿಂದ ಬೇಸತ್ತ ನಾಗಪ್ರಸಾದ್ ಬಾಲಕನ ಕತ್ತು ಸೀಳಿ ಕೊಂದಿದ್ದಾರೆ.

ಸೋಮವಾರ ಬೆಳಗಿನ ಜಾವ 4.30ಕ್ಕೆ ಬಾಲಕನ ಕತ್ತು ಸೀಳಿ ಕೊಲೆ ಮಾಡಿದ ನಾಗಪ್ರಸಾದ್​, ನಂತರ ಕೆರೆಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಆದರೆ ಎಲ್ಲಿಗೂ ಹೋಗಲು ಹಣವಿಲ್ಲದೆ ಮೆಜೆಸ್ಟಿಕ್​​ನಲ್ಲಿ 3 ದಿನ ಕಾಲಕಳೆದಿದ್ದಾರೆ. ನಂತರ ಸೋಲದೇವನಹಳ್ಳಿ ಠಾಣೆಗೆ ಹೋಗಿ ಶರಣಾಗಿದ್ದಾರೆ.

The post ಸೋದರಮಾವನಿಂದಲೇ ಕೊ*ಯಾದ ಬಾಲಕ ! ಕಾರಣವಾಯ್ತ ಫ್ರೀಫೈರ್ ಗೇಮ್​​ ಅಡಿಕ್ಷನ್ ? appeared first on Good News 24x7.

]]>
ಕಳ್ಳನ ಜೊತೆಗೆ ರೂಮ್ ಶೇರ್ ಮಾಡಿದ್ದ ಪೇದೆ ಸಸ್ಪೆಂಡ್ . https://www.goodnews24x7.com/constable-suspended-for-sharing-room-with-thief/ Thu, 07 Aug 2025 10:14:37 +0000 https://www.goodnews24x7.com/?p=5513 – ಪೊಲೀಸ್‌ ಸಮವಸ್ತ್ರ ಧರಿಸಿದ ಕಳ್ಳ ಬೆಂಗಳೂರು: ಕೈತುಂಬಾ ಸಂಬಳ ಇದ್ರೂ, ಕಳ್ಳನ ಜೊತೆ ರೂಮ್ ಶೇರ್ ಮಾಡಿ ಕರ್ತವ್ಯ ಲೋಪವೆಸಗಿದ್ದ ಪೊಲೀಸ್ ಪೇದೆಯನ್ನು ಕೆಲಸದಿಂದ ಅಮಾನತು ಮಾಡಿದ ಘಟನೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಗೋವಿಂದಪುರ ಠಾಣೆಯ ಕಾನ್ಸ್ಟೇಬಲ್‌ ಹೆಚ್.ಆರ್…

The post ಕಳ್ಳನ ಜೊತೆಗೆ ರೂಮ್ ಶೇರ್ ಮಾಡಿದ್ದ ಪೇದೆ ಸಸ್ಪೆಂಡ್ . appeared first on Good News 24x7.

]]>

– ಪೊಲೀಸ್‌ ಸಮವಸ್ತ್ರ ಧರಿಸಿದ ಕಳ್ಳ

ಬೆಂಗಳೂರು: ಕೈತುಂಬಾ ಸಂಬಳ ಇದ್ರೂ, ಕಳ್ಳನ ಜೊತೆ ರೂಮ್ ಶೇರ್ ಮಾಡಿ ಕರ್ತವ್ಯ ಲೋಪವೆಸಗಿದ್ದ ಪೊಲೀಸ್ ಪೇದೆಯನ್ನು ಕೆಲಸದಿಂದ ಅಮಾನತು ಮಾಡಿದ ಘಟನೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಗೋವಿಂದಪುರ ಠಾಣೆಯ ಕಾನ್ಸ್ಟೇಬಲ್‌ ಹೆಚ್.ಆರ್ ಸೋನಾರ್, ಕುಖ್ಯಾತ ಸಲೀಂ ಅಲಿಯಾಸ್ ಬಾಂಬೆ ಸಲೀಂ ಜೊತೆ ರೂಂ ಶೇರ್ ಮಾಡಿದ್ದ. ಖದೀಮ ಬಾಂಬೆ ಸಲೀಂನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ಪೇದೆಯ ಕಳ್ಳಾಟ ಬಯಲಾಗಿದೆ.

ಸಲೀಂ ಮೊಬೈಲ್‌ನಲ್ಲಿ ಸೋನಾರ್‌ನ ಪೊಲೀಸ್ ಯೂನಿಫಾರ್ಮ್ ಧರಿಸಿದ್ದ ಫೋಟೊಗಳು ಪತ್ತೆಯಾಗಿವೆ. ಪೊಲೀಸ್ ಯೂನಿಫಾರ್ಮ್ ಹಾಕೊಂಡು ಪತ್ನಿಗೆ ಖದೀಮ ಸಲೀಂ ವಿಡಿಯೋ ಕಾಲ್ ಮಾಡಿರುವುದು ಬೆಳಕಿಗೆ ಬಂದಿದೆ.

ವಿಚಾರಣೆಯ ವೇಳೆ ಖದೀಮ ಸಲೀಂ, ಪೊಲೀಸ್ ಕಾನ್ಸ್ಟೇಬಲ್‌ ಸೋನಾರ್‌ನ ಮನೆಯಲ್ಲಿ ವಾಸವಿದ್ದ ವಿಚಾರ ಬಯಲಾಗಿದೆ. ಕಳ್ಳನ ಜೊತೆ ರೂಂ ಶೇರ್ ಮಾಡಿ ಕರ್ತವ್ಯ ಲೋಪವೆಸಗಿದ ಪೊಲೀಸ್ ಕಾನ್ಸ್ಟೇಬಲ್‌ ಸೋನಾರ್‌ನನ್ನು ಪೂರ್ವ ವಿಭಾಗ ಡಿಸಿಪಿ ದೇವರಾಜ್ ಕೆಲಸದಿಂದ ಅಮಾನತು ಮಾಡಿದ್ದಾರೆ.

ಇದೀಗ ಪೊಲೀಸರು ಸಲೀಂನ ಜೊತೆ ಪೊಲೀಸ್ ಪೇದೆ ಬರೀ ಸ್ನೇಹ ಮಾತ್ರ ಇಟ್ಟುಕೊಂಡಿದ್ನಾ ಅಥವಾ ಬೇರೆ ಲಿಂಕ್ ಇದ್ಯಾ ಎಂದು ಪರಿಶೀಲನೆ ನಡೆಸುತ್ತಿದ್ದಾರೆ.

The post ಕಳ್ಳನ ಜೊತೆಗೆ ರೂಮ್ ಶೇರ್ ಮಾಡಿದ್ದ ಪೇದೆ ಸಸ್ಪೆಂಡ್ . appeared first on Good News 24x7.

]]>
ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ಹಲವು ಮೃ*ತದೇಹಗಳ ರಹಸ್ಯ ವಿಲೇವಾರಿ ದೂರು: ಪ್ರಕರಣ ದಾಖಲು. https://www.goodnews24x7.com/complaint-of-secret-disposal-of-several-dead-bodies-at-dharmasthala-village-police-station-case-registered/ Sat, 05 Jul 2025 11:03:27 +0000 https://www.goodnews24x7.com/?p=4925 ಮಂಗಳೂರು: ತಾನು ರಹಸ್ಯವಾಗಿ ಹಲವು ಮೃತದೇಹಗಳನ್ನು ವಿಲೇವಾರಿ ಮಾಡಿದ್ದೆ ಎಂದು ವ್ಯಕ್ತಿಯೊಬ್ಬರು ವಕೀಲರ ಮೂಲಕ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ದ.ಕ ಜಿಲ್ಲಾ ಪೊಲೀಸ್…

The post ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ಹಲವು ಮೃ*ತದೇಹಗಳ ರಹಸ್ಯ ವಿಲೇವಾರಿ ದೂರು: ಪ್ರಕರಣ ದಾಖಲು. appeared first on Good News 24x7.

]]>

ಮಂಗಳೂರು: ತಾನು ರಹಸ್ಯವಾಗಿ ಹಲವು ಮೃತದೇಹಗಳನ್ನು ವಿಲೇವಾರಿ ಮಾಡಿದ್ದೆ ಎಂದು ವ್ಯಕ್ತಿಯೊಬ್ಬರು ವಕೀಲರ ಮೂಲಕ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಪತ್ರಿಕಾ ಪ್ರಕಟಣೆ ನೀಡಲಾಗಿದೆ. ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿದ್ದು, ದೂರುದಾರರಿಗೆ ಜೀವಬೆದರಿಕೆ ಒಡ್ಡಿ, ಸದ್ರಿ ಅಪರಾದ ಕೃತ್ಯಗಳ ಮೃತದೇಹಗಳನ್ನು ದೂರುದಾರರ ಮೂಲಕ ರಹಸ್ಯವಾಗಿ ವಿಲೇವಾರಿ ಮಾಡಿಸಿರುತ್ತಾರೆ. ಈ ಹಿನ್ನೆಲೆ ಹಲವಾರು ಮೃತದೇಹಗಳನ್ನು ದೂರುದಾರರು ವಿಲೇವಾರಿ ಮಾಡಿದ್ದು, ಪ್ರಸ್ತುತ ದೂರುದಾರರಿಗೆ ಪಾಪಪ್ರಜ್ಞೆ ಕಾಡುತ್ತಿರುವುದರಿಂದ, ತನಗೆ ಹಾಗೂ ತನ್ನ ಕುಟುಂಬಕ್ಕೆ ಕಾನೂನಾತ್ಮಕವಾಗಿ ರಕ್ಷಣೆ ದೊರೆತ ಕೂಡಲೇ, ಈ ಅಪರಾಧ ಕೃತ್ಯಗಳನ್ನು ನಡೆಸಿದವರ ಸಂಪೂರ್ಣ ಮಾಹಿತಿಯನ್ನು ಹಾಗೂ ತಾನು ಮೃತದೇಹಗಳನ್ನು ವಿಲೇವಾರಿ ಮಾಡಿದ ಸ್ಥಳಗಳನ್ನು ಪೊಲೀಸರಿಗೆ ತೋರಿಸಲು ಸಿದ್ದವಿರುವುದಾಗಿ ಜುಲೈ 3ರಂದು ಪೊಲೀಸ್ ಅಧೀಕ್ಷಕರ ಕಚೇರಿಗೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ಸದ್ರಿ ವ್ಯಕ್ತಿಯಿಂದ ದೂರು ಸಲ್ಲಿಕೆಯಾಗಿರುತ್ತದೆ.


ಈ ದೂರಿನ ಬಗ್ಗೆ ನ್ಯಾಯಾಲಯದಿಂದ ಅಗತ್ಯ ಅನುಮತಿಯನ್ನು ಪಡೆದುಕೊಂಡು, ದಿನಾಂಕ 04.07.2025 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 39/2025, ಕಲಂ: 211(a) ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರಗಿಸಲಾಗುವುದು. ದೂರುದಾರರು ದೂರಿನಲ್ಲಿ ತನ್ನ ಹೆಸರು ಮತ್ತು ಮಾಹಿತಿಯನ್ನು ಗೌಪ್ಯವಾಗಿ ಇಡುವಂತೆ ವಿನಂತಿಸಿಕೊಂಡ ಮೇರೆಗೆ, ದೂರುದಾರರ ಮಾಹಿತಿಯನ್ನು ಪೊಲೀಸ್ ಮೂಲಗಳಿಂದ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಈ ಬಗ್ಗೆ ನೀಡಿದ ಇನ್ನೊಂದು ಪ್ರಕಟಣೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ: 39/2025 ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ದೂರಿಗೆ ಅನ್ವಯವಾಗುವಂತೆ, ಈವರೆಗೆ ಪೊಲೀಸ್ ಠಾಣೆಗೆ ತಲೆಬುರುಡೆ ಹಾಗೂ ಅವಶೇಷದ ಕೆಲಭಾಗಗಳಿರುವ ಎರಡು ಫೋಟೋಗಳ ಕಲರ್ ಝೆರಾಕ್ಸ್ ಪ್ರತಿಯನ್ನು ಮಾತ್ರ ಸಲ್ಲಿಸಿರುತ್ತಾರೆ. ಇದನ್ನು ಹೊರತುಪಡಿಸಿದಂತೆ ಯಾವುದೇ ಕಳೇಬರವನ್ನು ಈವರೆಗೆ ಪೊಲೀಸ್ ಠಾಣೆಗೆ ನೀಡಿರುವುದಿಲ್ಲ. ದೂರುದಾರರ ಪರವಾಗಿ ವಕೀಲರು ದೂರು ಸಲ್ಲಿಸುವ ವೇಳೆ ಕಳೇಬರವನ್ನು ಮುಂದಿನ ಹಂತದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಲಿಖಿತವಾಗಿ ತಿಳಿಸಿರುತ್ತಾರೆ ಎಂದು ತಿಳಿಸಲಾಗಿದೆ.

 

 

 

The post ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ಹಲವು ಮೃ*ತದೇಹಗಳ ರಹಸ್ಯ ವಿಲೇವಾರಿ ದೂರು: ಪ್ರಕರಣ ದಾಖಲು. appeared first on Good News 24x7.

]]>
ಶಿವಮೊಗ್ಗದಲ್ಲಿ ಹಸುವಿನ ಕೆಚ್ಚಲು ಕೊ*ಯ್ದು ವಿಕೃತಿ ಮೆರೆದ ಕಿಡಿಗೇಡಿಗಳು https://www.goodnews24x7.com/miscreants-cut-off-cows-udder-and-commit-mischief-in-shivamogga/ Sun, 29 Jun 2025 08:34:31 +0000 https://www.goodnews24x7.com/?p=4806 ಶಿವಮೊಗ್ಗ : ಕರ್ನಾಟಕದಲ್ಲಿ ಜಾನುವಾರುಗಳ ಮೇಲಿನ ಕ್ರೌರ್ಯ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಹಲವೆಡೆ ಹಸುವಿನ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ವಿಕೃತಿ ಮೆರೆಯುತ್ತಿದ್ದಾರೆ. ಗೋವಿನ ಮೇಲಿನ ದಾಳಿ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಹೀಗಿದ್ದರು ಇದೀಗ ಮತ್ತೊಂದು ಹಸುವಿನ ಕೆಚ್ಚಲು ಕೊಯ್ದು ಕಿಡಿಗೇಡಿಗಳು ವಿಕೃತಿ ಮೆರೆದಿರುವಂತಹ…

The post ಶಿವಮೊಗ್ಗದಲ್ಲಿ ಹಸುವಿನ ಕೆಚ್ಚಲು ಕೊ*ಯ್ದು ವಿಕೃತಿ ಮೆರೆದ ಕಿಡಿಗೇಡಿಗಳು appeared first on Good News 24x7.

]]>

ಶಿವಮೊಗ್ಗ : ಕರ್ನಾಟಕದಲ್ಲಿ ಜಾನುವಾರುಗಳ ಮೇಲಿನ ಕ್ರೌರ್ಯ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಹಲವೆಡೆ ಹಸುವಿನ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ವಿಕೃತಿ ಮೆರೆಯುತ್ತಿದ್ದಾರೆ. ಗೋವಿನ ಮೇಲಿನ ದಾಳಿ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಹೀಗಿದ್ದರು ಇದೀಗ ಮತ್ತೊಂದು ಹಸುವಿನ ಕೆಚ್ಚಲು ಕೊಯ್ದು ಕಿಡಿಗೇಡಿಗಳು ವಿಕೃತಿ ಮೆರೆದಿರುವಂತಹ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ವಿಜಾಪುರದಲ್ಲಿ ನಡೆದಿದೆ. ಈ ಕುರಿತಾಗಿ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿಡಿಗೇಡಿಗಳು ಗ್ರಾಮದ ವಿಜಯಕುಮಾರ್ ಎಂಬುವರಿಗೆ ಸೇರಿದ ಹಸುವಿನ ಕೆಚ್ಚಲು ಕೊಯ್ದಿದ್ದಾರೆ. ಶನಿವಾರ ಹಸು ಮೇಯಲು ಹೋಗಿದ್ದಾಗ ಕೃತ್ಯವೆಸಗಿ ವಿಕೃತಿ ಮೆರೆದಿದ್ದಾರೆ. ಸ್ಥಳೀಯರ ಸಹಾಯದಿಂದ ಹಸುವನ್ನು ಮನೆಗೆ ಕರೆತಂದ ವಿಜಯಕುಮಾರ್, ಚಿಕಿತ್ಸೆ ನೀಡಿದ್ದಾರೆ.

 

 

 

 

 

ಇತ್ತ ಇತ್ತೀಚೆಗೆ ಜಿಲ್ಲೆಯಲ್ಲಿ ಹಸುಗಳ ಮಾರಣ ಹೋಮ ನಡೆದಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಭದ್ರಾವತಿಯ ಹಳೆ ಸಿಗೇಬಾಗಿ ನದಿಯ ತಟದಲ್ಲಿ ರಾಶಿರಾಶಿ ಗೋವಿನ ಮೂಳೆ, ಕೊಂಬು ಪತ್ತೆಯಾಗಿದ್ದವು. ಉದ್ದೇಶ ಪೂರ್ವಕವಾಗಿ ನದಿಗೆ ಗೋವಿನ ತ್ಯಾಜ್ಯ ಎಸೆಯಲಾಗಿದೆ ಎಂದು ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಕೇಸ್ ಕರ್ನಾಟಕದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಬಾಗಲಕೋಟೆ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕೆಲವೆಡೆ ಮೂಕ ಪ್ರಾಣಿ ಮೇಲೆ ದುಷ್ಕರ್ಮಿಗಳು ಕೌರ್ಯ ಎಸಗಿದ್ದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಗರ್ಭ ಧರಿಸಿದ್ದ ಹಸುವಿನ ತಲೆಯನ್ನೇ ಕಡೆಯಲಾಗಿತ್ತು. ಹೊಟ್ಟೆಯೊಳಗಿದ್ದ ಕರುವನ್ನ ಹೊರತೆಗೆದು ಹಸುವಿನ ದೇಹ ಎತ್ಕೊಂಡು ಹೋಗಿದ್ದರು. ಇತ್ತೀಚೆಗೆ ಬೆಂಗಳೂರು ದಕ್ಷಿಣ ತಾಲೂಕಿನ ಸೂಲಿವಾರ ಗ್ರಾಮದಲ್ಲಿ ಹಾಲಿನ ಡೈರಿ ಅಧ್ಯಕ್ಷರಿಗೆ ಸೇರಿದ್ದ ಹಸುವಿನ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ಕ್ರೌರ್ಯ ಮೆರೆದಿರುವಂತಹ ಘಟನೆ ನಡೆದಿತ್ತು.

The post ಶಿವಮೊಗ್ಗದಲ್ಲಿ ಹಸುವಿನ ಕೆಚ್ಚಲು ಕೊ*ಯ್ದು ವಿಕೃತಿ ಮೆರೆದ ಕಿಡಿಗೇಡಿಗಳು appeared first on Good News 24x7.

]]>
ಎಲ್ಲೇ ಇದ್ದರೂ ಮನೆಗೆ ವಾಪಸ್ಸು ಬಾ ಮಗನೇ! ಮಗನ ಹುಡುಕಾಟಕ್ಕೆ ಅಂಗಲಾಚಿದ ಪೋಷಕರು. https://www.goodnews24x7.com/wherever-you-are-come-back-home-son-parents-are-desperately-searching-for-their-son/ Sun, 15 Jun 2025 09:19:37 +0000 https://www.goodnews24x7.com/?p=4426 ಟಿ ನರಸೀಪುರ :- ಕ್ಷುಲ್ಲಕ ಕಾರಣಕ್ಕೆ ಮನೆ ಬಿಟ್ಟು ಹೋಗಿರುವ ಮಗನ ಬರುವಿಕೆಗೆ ಕಾದು ಕುಳಿತಿರುವ ಪೋಷಕರು. ಮನೆಗೆ ವಾಪಾಸ್ ಬರುವಂತೆ ಕಣ್ಣೀರು ಹಾಕುತ್ತಿರುವ ಘಟನೆ ಮೈಸೂರು ಜಿಲ್ಲೆ ಟಿ ನರಸೀಪುರ ಪಟ್ಟಣದಲ್ಲಿ ನಡೆದಿದೆ. ಪುನೀತ್ ಮನೆ ಬಿಟ್ಟು ಹೋಗಿರುವ ಯುವಕ…

The post ಎಲ್ಲೇ ಇದ್ದರೂ ಮನೆಗೆ ವಾಪಸ್ಸು ಬಾ ಮಗನೇ! ಮಗನ ಹುಡುಕಾಟಕ್ಕೆ ಅಂಗಲಾಚಿದ ಪೋಷಕರು. appeared first on Good News 24x7.

]]>

ಟಿ ನರಸೀಪುರ :- ಕ್ಷುಲ್ಲಕ ಕಾರಣಕ್ಕೆ ಮನೆ ಬಿಟ್ಟು ಹೋಗಿರುವ ಮಗನ ಬರುವಿಕೆಗೆ ಕಾದು ಕುಳಿತಿರುವ ಪೋಷಕರು. ಮನೆಗೆ ವಾಪಾಸ್ ಬರುವಂತೆ ಕಣ್ಣೀರು ಹಾಕುತ್ತಿರುವ ಘಟನೆ ಮೈಸೂರು ಜಿಲ್ಲೆ ಟಿ ನರಸೀಪುರ ಪಟ್ಟಣದಲ್ಲಿ ನಡೆದಿದೆ.

ಪುನೀತ್ ಮನೆ ಬಿಟ್ಟು ಹೋಗಿರುವ ಯುವಕ ನರಸೀಪುರ ಪಟ್ಟಣದ ದಾಸನಾಯಕರ ಕಾಲೋನಿಯ ನಿವಾಸಿ ರವಿ ಮತ್ತು ಶಿಲ್ಪಾ ಎಂಬುವರ ಪುತ್ರ.
ಬನ್ನೂರಿನ ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿ.25-12-2024 ರಂದು ಮನೆ ಬಿಟ್ಟು ಹೋಗಿದ್ದ, 6 ತಿಂಗಳು ಕಳೆದರು ಮನೆಗೆ ವಾಪಾಸ್ ಬರದ ಮಗನನ್ನ. ಎಲ್ಲಿದ್ದರು ಮನೆಗೆ ಬಾ ಎಂದು ಪೋಷಕರು ಕಣ್ಣೀರಿಡುತ್ತಿದ್ದಾರೆ.

ಸದ್ಯ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಯುವಕನನ್ನ ಕಂಡರೆ ಮಾಹಿತಿ ನೀಡುವಂತೆ ಪೋಷಕರ ಮನವಿ ಮಾಡಿದ್ದಾರೆ
7760031291, 9611081291,
ನರಸೀಪುರ ಪೊಲೀಸ್ ಠಾಣೆ ನಂಬರ್ 08227 261227

The post ಎಲ್ಲೇ ಇದ್ದರೂ ಮನೆಗೆ ವಾಪಸ್ಸು ಬಾ ಮಗನೇ! ಮಗನ ಹುಡುಕಾಟಕ್ಕೆ ಅಂಗಲಾಚಿದ ಪೋಷಕರು. appeared first on Good News 24x7.

]]>