PoojaHegde Archives - Good News 24x7 https://www.goodnews24x7.com/tag/poojahegde/ Kannada Sun, 14 Sep 2025 09:15:35 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg PoojaHegde Archives - Good News 24x7 https://www.goodnews24x7.com/tag/poojahegde/ 32 32 ‘ಕೂಲಿ’ ಸಿನಿಮಾ ಬಗ್ಗೆ ವಿಷಾದ ವ್ಯಕ್ತಪಡಿಸಿದ ನಟ ಆಮಿರ್ ಖಾನ್ https://www.goodnews24x7.com/actor-aamir-khan-expressed-regret-over-the-movie-coolie/ Sun, 14 Sep 2025 09:14:09 +0000 https://www.goodnews24x7.com/?p=7527 ನಟ ಆಮಿರ್ ಖಾನ್ ಅವರು ತಮಿಳಿನ ‘ಕೂಲಿ’ ಸಿನಿಮಾದಲ್ಲಿ ಒಂದು ಅತಿಥಿ ಪಾತ್ರ ಮಾಡಿದ್ದರು. ಆದರೆ ಆ ಸಿನಿಮಾ ಮಾಡಿದ್ದಕ್ಕೆ ಅವರು ಈಗ ವಿಷಾದ ವ್ಯಕ್ತಪಡಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಆ ಕುರಿತು ಪತ್ರಿಕೆಯೊಂದರಲ್ಲಿ ವರದಿ ಆದ ಬಳಿಕ ಆಮಿರ್ ಖಾನ್…

The post ‘ಕೂಲಿ’ ಸಿನಿಮಾ ಬಗ್ಗೆ ವಿಷಾದ ವ್ಯಕ್ತಪಡಿಸಿದ ನಟ ಆಮಿರ್ ಖಾನ್ appeared first on Good News 24x7.

]]>

ನಟ ಆಮಿರ್ ಖಾನ್ ಅವರು ತಮಿಳಿನ ‘ಕೂಲಿ’ ಸಿನಿಮಾದಲ್ಲಿ ಒಂದು ಅತಿಥಿ ಪಾತ್ರ ಮಾಡಿದ್ದರು. ಆದರೆ ಆ ಸಿನಿಮಾ ಮಾಡಿದ್ದಕ್ಕೆ ಅವರು ಈಗ ವಿಷಾದ ವ್ಯಕ್ತಪಡಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಆ ಕುರಿತು ಪತ್ರಿಕೆಯೊಂದರಲ್ಲಿ ವರದಿ ಆದ ಬಳಿಕ ಆಮಿರ್ ಖಾನ್ ತಂಡದ ಕಡೆಯಿಂದ ಸ್ಪಷ್ಟನೆ ನೀಡಲಾಗಿದೆ.

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ ‘ಕೂಲಿ’ ಸಿನಿಮಾ ಆಗಸ್ಟ್ 14ರಂದು ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಹಲವು ಕಲಾವಿದರು ನಟಿಸಿದರು. ಉಪೇಂದ್ರ, ರಚಿತಾ ರಾಮ್, ಸೌಬಿನ್ ಶಾಹಿರ್, ಆಮಿರ್ ಖಾನ್ (Aamir Khan), ನಾಗಾರ್ಜುನ, ಶ್ರುತಿ ಹಾಸನ್, ಪೂಜಾ ಹೆಗ್ಡೆ ಮುಂತಾದವರು ಅಭಿನಯಿಸಿದರು. ಬಾಕ್ಸ್ ಆಫೀಸ್​​ನಲ್ಲಿ ಈ ಚಿತ್ರಕ್ಕೆ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇತ್ತೀಚೆಗೆ ಒಂದು ಸುದ್ದಿ ಪ್ರಕಟ ಆಯಿತು. ಆಮಿರ್ ಖಾನ್ ಅವರು ‘ಕೂಲಿ’ (Coolie) ಸಿನಿಮಾದಲ್ಲಿ ನಟಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಲಾಯಿತು. ಆ ಬಗ್ಗೆ ಅವರ ತಂಡದವರಿಂದ ಪ್ರತಿಕ್ರಿಯೆ ಬಂದಿದೆ.

ಅಂದಹಾಗೆ, ಆಮಿರ್ ಖಾನ್ ಅವರು ‘ಕೂಲಿ’ ಸಿನಿಮಾದಲ್ಲಿ ಮಾಡಿದ್ದು ಅತಿಥಿ ಪಾತ್ರ. ಅದನ್ನು ಆಮಿರ್ ಖಾನ್ ಅವರೇ ಮಾಡಬೇಕು ಎಂಬುದೇನೂ ಇರಲಿಲ್ಲ. ರಜನಿಕಾಂತ್ ಅವರ ಮೇಲಿನ ಪ್ರೀತಿ, ಗೌರವದ ಕಾರಣಕ್ಕೆ ಅವರು ಆ ಪಾತ್ರವನ್ನು ಮಾಡಲು ಒಪ್ಪಿಕೊಂಡರು. ಆದರೆ ಈಗ ‘ಯಾಕಾದ್ರೂ ರಜನಿ ಜೊತೆ ಕೂಲಿ ಸಿನಿಮಾ ಮಾಡಿದ್ನೋ’ ಎಂದು ಆಮಿರ್ ಖಾನ್ ಬೇಸರ ಮಾಡಿಕೊಂಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಟ್ವಿಸ್ಟ್ ಏನೆಂದರೆ ಆಮಿರ್ ಖಾನ್ ಅವರು ಯಾವ ಪತ್ರಿಕೆಗೂ ಆ ರೀತಿಯ ಹೇಳಿಕೆ ನೀಡಿಲ್ಲ! ಈ ಕುರಿತು ಅವರ ಟೀಮ್ ಕಡೆಯಿಂದ ಸ್ಪಷ್ಟನೆ ನೀಡಲಾಗಿದೆ. ‘ಆಮಿರ್ ಖಾನ್ ಅವರು ಇಂಥ ಯಾವುದೇ ಸಂದರ್ಶನ ನೀಡಿಲ್ಲ. ಕೂಲಿ ಸಿನಿಮಾ ಬಗ್ಗೆ ಅವರು ನೆಗೆಟಿವ್ ಆಗಿ ಮಾತನಾಡಿಲ್ಲ’ ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ.

ರಜನಿಕಾಂತ್ ಬಗ್ಗೆ ಆಮಿರ್ ಖಾನ್ ಅವರಿಗೆ ಬಹಳ ಗೌರವ ಇದೆ. ನಿರ್ದೇಶಕ ಲೋಕೇಶ್ ಕನಗರಾಜ್ ಮತ್ತು ಇಡೀ ಕೂಲಿ ಸಿನಿಮಾ ತಂಡದ ಬಗ್ಗೆ ಅವರಿಗೆ ಆ ಗೌರವ ಇದೆ. ಬಾಕ್ಸ್​ ಆಫೀಸ್​​ನಲ್ಲಿ ಈ ಸಿನಿಮಾ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾ ಬಗ್ಗೆ ಈ ಗಳಿಕೆಯೇ ಎಲ್ಲವನ್ನೂ ಹೇಳುತ್ತಿದೆ’ ಎಂದು ಆಮಿರ್ ಖಾನ್ ತಂಡದವರು ಪ್ರತಿಕ್ರಿಯಿಸಿದ್ದಾರೆ.

‘ಕೂಲಿ’ ಸಿನಿಮಾಗೆ ಅಂದಾಜು 400 ಕೋಟಿ ರೂಪಾಯಿ ಬಂಡವಾಳ ಸುರಿಯಲಾಗಿತ್ತು. ಅದಕ್ಕೆ ಹೋಲಿಸಿದರೆ 500 ಕೋಟಿ ರೂಪಾಯಿ ಕಲೆಕ್ಷನ್ ಏನೇನೂ ಅಲ್ಲ. ಅಲ್ಲದೇ ವಿಮರ್ಶೆ ದೃಷ್ಟಿಯಿಂದಲೂ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಒಟಿಟಿಯಲ್ಲೂ ವೀಕ್ಷಣೆಗೆ ಲಭ್ಯವಿದೆ. ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆ ಆಮಿರ್ ಖಾನ್ ಇನ್ನೊಂದು ಸಿನಿಮಾ ಮಾಡಬೇಕಿತ್ತು. ಆದರೆ ಈ ಚಿತ್ರ ಸೆಟ್ಟೇರುವುದು ಅನುಮಾನ ಎನ್ನಲಾಗುತ್ತಿದೆ.

The post ‘ಕೂಲಿ’ ಸಿನಿಮಾ ಬಗ್ಗೆ ವಿಷಾದ ವ್ಯಕ್ತಪಡಿಸಿದ ನಟ ಆಮಿರ್ ಖಾನ್ appeared first on Good News 24x7.

]]>
ಸ್ವಂತ ಮನೆಯನ್ನು ಮಕ್ಕಳ ಶಿಕ್ಷಣಕ್ಕಾಗಿ ಉಚಿತ ಶಾಲೆಯಾಗಿ ಬದಲಾಯಿಸಿದ ನಟ ರಾಘವ ಲಾರೆನ್ಸ್ https://www.goodnews24x7.com/actor-raghava-lawrence-converted-his-own-house-into-a-free-school-for-childrens-education-2/ Fri, 12 Sep 2025 11:59:13 +0000 https://www.goodnews24x7.com/?p=7494 ರಾಘವ ಲಾರೆನ್ಸ್ ತಮಿಳಿನ ಸ್ಟಾರ್ ನಟರುಗಳಲ್ಲಿ ಒಬ್ಬರು. ಅದ್ಭತವಾದ ಡ್ಯಾನ್ಸರ್ ಸಹ. ಆದರೆ ರಾಘವ್ ಲಾರೆನ್ಸ್ ಅವರು ತಮ್ಮ ಸಿನಿಮಾಗಳಷ್ಟೆ ತಮ್ಮ ಅದ್ಭುತ ಸಮಾಜ ಮುಖಿ ಕಾರ್ಯದಿಂದ ಹೆಚ್ಚು ಪರಿಚಿತರು. ರಾಘವ್ ಲಾರೆನ್ಸ್ ಅವರು ಹಲವಾರು ಅನಾಥ ಮಕ್ಕಳನ್ನು ದತ್ತು ಪಡೆದು…

The post ಸ್ವಂತ ಮನೆಯನ್ನು ಮಕ್ಕಳ ಶಿಕ್ಷಣಕ್ಕಾಗಿ ಉಚಿತ ಶಾಲೆಯಾಗಿ ಬದಲಾಯಿಸಿದ ನಟ ರಾಘವ ಲಾರೆನ್ಸ್ appeared first on Good News 24x7.

]]>

ರಾಘವ ಲಾರೆನ್ಸ್ ತಮಿಳಿನ ಸ್ಟಾರ್ ನಟರುಗಳಲ್ಲಿ ಒಬ್ಬರು. ಅದ್ಭತವಾದ ಡ್ಯಾನ್ಸರ್ ಸಹ. ಆದರೆ ರಾಘವ್ ಲಾರೆನ್ಸ್ ಅವರು ತಮ್ಮ ಸಿನಿಮಾಗಳಷ್ಟೆ ತಮ್ಮ ಅದ್ಭುತ ಸಮಾಜ ಮುಖಿ ಕಾರ್ಯದಿಂದ ಹೆಚ್ಚು ಪರಿಚಿತರು. ರಾಘವ್ ಲಾರೆನ್ಸ್ ಅವರು ಹಲವಾರು ಅನಾಥ ಮಕ್ಕಳನ್ನು ದತ್ತು ಪಡೆದು ಶಿಕ್ಷಣ ನೀಡಿದ್ದಾರೆ. ಇದೀಗ ತಮ್ಮ ಸ್ವಂತ ಮನೆಯನ್ನೇ ಉಚಿತ ಶಾಲೆಯನ್ನಾಗಿ ಪರಿವರ್ತನೆ ಮಾಡಿದ್ದಾರೆ ನಟ.

ಭಾರತದಲ್ಲಿ ಹಲವು ಸ್ಟಾರ್ ನಟರುಗಳಿದ್ದಾರೆ. ತೆರೆಯ ಮೇಲೆ ದುಷ್ಟರನ್ನು ಶಿಕ್ಷಿಸುವ, ಶಿಷ್ಟರನ್ನು ರಕ್ಷಿಸುವ, ಬಡವರಿಗೆ ಸಹಾಯ ಮಾಡುವ, ವಿಶಾಲ ಗುಣ ಹೊಂದಿರುವ ‘ಹೀರೋ’ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇವರಲ್ಲಿ ಹಲವಾರು ಮಂದಿ ಕೇವಲ ತೆರೆಯ ಮೇಲಷ್ಟೆ ಹೀರೋಗಳು, ತೆರೆಯ ಹಿಂದೆ ಕಾಮ, ಕ್ರೋಧ, ಲೋಭ, ಮದ, ಮತ್ಸರ ತುಂಬಿರುವ ಸಾಮಾನ್ಯ ಮನುಷ್ಯರು. ತೆರೆಯ ಮೇಲೆ ಹಾಗೂ ತೆರೆಯ ಹೊರಗೆಯೂ ‘ಹೀರೋ’ ಆಗಿ ಬದುಕುತ್ತಿರುವವರು ಬೆರಳೆಣಿಕೆಯಷ್ಟು ನಟರು ಮಾತ್ರ. ಅವರಲ್ಲಿ ಒಬ್ಬರು ನಟ ರಾಘವ್ ಲಾರೆನ್ಸ್.
ಸಾಮಾನ್ಯ ಕಾರು ಕ್ಲೀನರ್ ಆಗಿದ್ದವರು ತಮ್ಮ ಸ್ವಂತ ಪ್ರತಿಭೆಯಿಂದಾಗಿ ಇಂದು ತಮಿಳಿನ ಸ್ಟಾರ್ ನಟರುಗಳ ಸಾಲಿನಲ್ಲಿ ನಿಂತಿದ್ದಾರೆ. ಅದ್ಭುತ ಡ್ಯಾನ್ಸರ್ ಅಗಿದ್ದ ರಾಘವ್ ಲಾರೆನ್ಸ್, ಸಿನಿಮಾ ಹಾಡುಗಳಲ್ಲಿ ಹಿಂದಿನ ಸಾಲಿನಲ್ಲಿ ಡ್ಯಾನ್ಸ್ ಮಾಡುವವರಾಗಿದ್ದವರು, ಬಳಿಕ ಸ್ವಂತ ಪರಿಶ್ರಮದಿಂದ ಲೀಡ್ ಡ್ಯಾನ್ಸರ್ ಆಗಿ ಬಳಿಕ ಕೊರಿಯಾಗ್ರಫರ್ ಆದರು. ಬಳಿಕ ನಟರಾಗಿಯೂ ಹೆಸರು ಮಾಡಿದರು. ಈಗ ತಮಿಳಿನ ಸ್ಟಾರ್ ನಟ ಮತ್ತು ನಿರ್ದೇಶಕರಾಗಿದ್ದಾರೆ. ಆದರೆ ರಾಘವ್ ಲಾರೆನ್ಸ್ ತಮ್ಮ ನಟನೆಯಷ್ಟೆ ತಾವು ಮಾಡುವ ಸಮಾಜ ಮುಖಿ ಕಾರ್ಯದಿಂದಲೂ ದೊಡ್ಡ ಮಟ್ಟದ ಹೆಸರು ಗಳಿಸಿದ್ದಾರೆ.

ಸ್ವತಃ ಕಿತ್ತು ತಿನ್ನುವ ಬಡತನ ಕಂಡು ಬಂದಿರುವ ರಾಘವ್ ಲಾರೆನ್ಸ್​ಗೆ ಬಡವರು, ಅಂಗವಿಕಲರು, ವೃದ್ಧರ ಮೇಲೆ ಅಪಾರ ಅಕ್ಕರೆ. ರಾಘವ್ ಲಾರೆನ್ಸ್ ಈಗಾಗಲೇ ನೂರಾರು ಮಂದಿ ಬಡ, ಅನಾಥ ಮಕ್ಕಳನ್ನು ದತ್ತು ಪಡೆದು ಅವರ ಜೀವನ ನಿರ್ವಹಣೆಗೆ ಸಹಾಯ ಮಾಡುತ್ತಿದ್ದಾರೆ. ಸಹಾಯ ಕೇಳಿ ಬರುವ ಹಲವರಿಗೆ ರಾಘವ್ ಸಹಾಯ ಮಾಡಿದ್ದಾರೆ. ಇದೀಗ ತಮ್ಮ ಸ್ವಂತ ಮನೆಯನ್ನೇ ಬಡ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಯನ್ನಾಗಿ ಬದಲಾಯಿಸಿಬಿಟ್ಟಿದ್ದಾರೆ. ರಾಘವ್ ಅವರ ಈ ಕಾರ್ಯಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಘವ್, ‘ನಾನು ಡ್ಯಾನ್ಸ್ ಮಾಸ್ಟರ್ ಆಗಿದ್ದಾಗ ದುಡಿದ ಹಣದಿಂದ ಖರೀದಿ ಮಾಡಿದ ಮೊದಲ ಮನೆಯನ್ನು ನಾನು ಮಕ್ಕಳ ಶಿಕ್ಷಣಕ್ಕಾಗಿ ಉಚಿತ ಶಾಲೆಯನ್ನಾಗಿ ಪರಿವರ್ತನೆ ಮಾಡುತ್ತಿದ್ದೇನೆ. ಆ ಮನೆಯಲ್ಲಿ ಮೊದಲಿಗೆ ಅನಾಥ ಮಕ್ಕಳ ವಸತಿಗಾಗಿ ಮೀಸಲಿರಿಸಿದ್ದೆ. ಆದರೆ ಆ ಮಕ್ಕಳು ಬೆಳೆದು ದೊಡ್ಡವರಾಗಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಈಗ ಆ ಮನೆಯನ್ನು ಉಚಿತ ಶಾಲೆಯಾಗಿ ಬದಲಾಯಿಸುತ್ತಿದ್ದೇನೆ’ ಎಂದಿದ್ದಾರೆ.

ಈ ಘೋಷಣೆಗೆ ಒಂದು ದಿನ ಮುಂಚೆಯಷ್ಟೆ, ರೈಲಿನಲ್ಲಿ ಸಿಹಿ ಮಾರಾಟ ಮಾಡುತ್ತಿದ್ದ ವೃದ್ಧ ವ್ಯಕ್ತಿಯ ಚಿತ್ರವೊಂದನ್ನು ಟ್ವೀಟ್ ಮಾಡಿ ಈ ಶ್ರಮಜೀವಿ ದಂಪತಿಗೆ ಕೆಲ ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದರು. ಅಲ್ಲದೆ ಇವರಿಂದ ಸಿಹಿ ಖರೀದಿ ಮಾಡಿ ಎಂದು ಮನವಿ ಸಹ ಮಾಡಿದ್ದರು. ಆ ಘಟನೆಯಾಗಿ 24 ಗಂಟೆಯೊಳಗೆ ಮತ್ತೊಂದು ಮಹತ್ ಕಾರ್ಯದ ಘೋಷಣೆಯನ್ನು ರಾಘವ್ ಮಾಡಿದ್ದಾರೆ. ಅಂದಹಾಗೆ ರಾಘವ್ ಲಾರೆನ್ಸ್ ತಮ್ಮ ‘ಕಾಂಚನಾ 4’ ಸಿನಿಮಾ ಘೋಷಣೆ ಮಾಡಿದ್ದಾರೆ. ಸಿನಿಮಾನಲ್ಲಿ ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ಮತ್ತು ನೋರಾ ಫತೇಹಿ ಸಹ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭ ಆಗಲಿದೆ.

The post ಸ್ವಂತ ಮನೆಯನ್ನು ಮಕ್ಕಳ ಶಿಕ್ಷಣಕ್ಕಾಗಿ ಉಚಿತ ಶಾಲೆಯಾಗಿ ಬದಲಾಯಿಸಿದ ನಟ ರಾಘವ ಲಾರೆನ್ಸ್ appeared first on Good News 24x7.

]]>