power Archives - Good News 24x7 https://www.goodnews24x7.com/tag/power/ Kannada Sat, 27 Jun 2026 07:38:22 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg power Archives - Good News 24x7 https://www.goodnews24x7.com/tag/power/ 32 32 ಇನ್ಮೇಲೆ ಪದೇ ಪದೇ ಕರೆಂಟ್ ಹೋಗಲ್ಲ https://www.goodnews24x7.com/no-more-frequent-power-outages/ Sat, 27 Jun 2026 07:38:22 +0000 https://www.goodnews24x7.com/?p=9691 ವಿದ್ಯುತ್ ಲೈನ್‌ಗಳ ತಪಾಸಣೆಗೆ ಲಗ್ಗೆ ಇಟ್ಟ ಅತ್ಯಾಧುನಿಕ ಡ್ರೋನ್‌ಗಳು; ಶೇ. 85 ರಷ್ಟು ತಗ್ಗಿದ ವಿದ್ಯುತ್ ವ್ಯತ್ಯಯ ಕೆಪಿಟಿಸಿಎಲ್ ರಾಜ್ಯದಲ್ಲಿ ವಿದ್ಯುತ್ ಪ್ರಸರಣ ಮಾರ್ಗಗಳ ತಪಾಸಣೆಗೆ ಡ್ರೋನ್ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಇದರಿಂದ ತಾಂತ್ರಿಕ ದೋಷಗಳಿಂದ ಉಂಟಾಗುವ ವಿದ್ಯುತ್ ವ್ಯತ್ಯಯದಲ್ಲಿ ಶೇ. 85ರಷ್ಟು…

The post ಇನ್ಮೇಲೆ ಪದೇ ಪದೇ ಕರೆಂಟ್ ಹೋಗಲ್ಲ appeared first on Good News 24x7.

]]>

ವಿದ್ಯುತ್ ಲೈನ್‌ಗಳ ತಪಾಸಣೆಗೆ ಲಗ್ಗೆ ಇಟ್ಟ ಅತ್ಯಾಧುನಿಕ ಡ್ರೋನ್‌ಗಳು; ಶೇ. 85 ರಷ್ಟು ತಗ್ಗಿದ ವಿದ್ಯುತ್ ವ್ಯತ್ಯಯ ಕೆಪಿಟಿಸಿಎಲ್ ರಾಜ್ಯದಲ್ಲಿ ವಿದ್ಯುತ್ ಪ್ರಸರಣ ಮಾರ್ಗಗಳ ತಪಾಸಣೆಗೆ ಡ್ರೋನ್ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಇದರಿಂದ ತಾಂತ್ರಿಕ ದೋಷಗಳಿಂದ ಉಂಟಾಗುವ ವಿದ್ಯುತ್ ವ್ಯತ್ಯಯದಲ್ಲಿ ಶೇ. 85ರಷ್ಟು ಭಾರಿ ಇಳಿಕೆ ಕಂಡುಬಂದಿದೆ. 1.5 ಲಕ್ಷಕ್ಕೂ ಹೆಚ್ಚು ದೋಷಗಳನ್ನು ಮೊದಲೇ ಪತ್ತೆಹಚ್ಚಿ ಸರಿಪಡಿಸಲಾಗಿದೆ. ಇದು ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಸರಬರಾಜಿಗೆ ಕೆಪಿಟಿಸಿಎಲ್‌ನ ಮಹತ್ವದ ಹೆಜ್ಜೆಯಾಗಿದೆ.

ವಿದ್ಯುತ್ ಪ್ರಸರಣ ಲೈನ್‌ಗಳ ನಿಖರ ತಪಾಸಣೆಗಾಗಿ ಕೆಪಿಟಿಸಿಎಲ್ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನ

ವಿದ್ಯುತ್ ವ್ಯತ್ಯಯಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಕುಸಿತ ಕಂಡಿದೆ
ಸುರಕ್ಷತಾ ಜಾಗೃತಿಗೆ ಎಸ್ಕಾಂಗಳ ಪ್ರತಿ ಡಿವಿಷನ್‌ಗೆ ಸಿಗಲಿದೆ 1 ಲಕ್ಷ ರೂ. ಫಂಡ್
ಬೆಂಗಳೂರು, ಜೂ.27: ರಾಜ್ಯದಲ್ಲಿ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಮಹತ್ತರ ತಾಂತ್ರಿಕ ಹೆಜ್ಜೆಯನ್ನಿಟ್ಟಿದೆ. ರಾಜ್ಯಾದ್ಯಂತ ಇರುವ ಹೈ ವೋಲ್ಟೇಜ್ (HV) ಮತ್ತು ಎಕ್ಸ್‌ಟ್ರಾ ಹೈ ವೋಲ್ಟೇಜ್ (EHV) ವಿದ್ಯುತ್ ಪ್ರಸರಣ ಲೈನ್‌ಗಳ ನಿಖರ ತಪಾಸಣೆಗಾಗಿ ಕೆಪಿಟಿಸಿಎಲ್ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನವನ್ನು (Drone Technology) ಯಶಸ್ವಿಯಾಗಿ ಬಳಸಿಕೊಳ್ಳುತ್ತಿದೆ. ಈ ಹೊಸ ತಂತ್ರಜ್ಞಾನದ ಬಳಕೆಯಿಂದಾಗಿ ರಾಜ್ಯದಲ್ಲಿ ತಾಂತ್ರಿಕ ದೋಷಗಳಿಂದ ಉಂಟಾಗುತ್ತಿದ್ದ ವಿದ್ಯುತ್ ವ್ಯತ್ಯಯಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಕುಸಿತ ಕಂಡಿದೆ ಎಂದು ನಿಗಮದ ಅಧಿಕೃತ ಪ್ರಕಟಣೆ ತಿಳಿಸಿದೆ.

ಕೆಪಿಟಿಸಿಎಲ್ ಅಧಿಕಾರಿಗಳು ಇದುವರೆಗೆ ಸುಮಾರು 11,000 ವಿದ್ಯುತ್ ಪ್ರಸರಣ ಟವರ್​​ಗಳನ್ನು ಡ್ರೋನ್ ಮೂಲಕ ಯಶಸ್ವಿಯಾಗಿ ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೆ ಬರೋಬ್ಬರಿ 1.5 ಲಕ್ಷಕ್ಕೂ ಹೆಚ್ಚು ತಾಂತ್ರಿಕ ದೋಷಗಳನ್ನು ಮೊದಲೇ ಪತ್ತೆಹಚ್ಚಿ, ಅವುಗಳನ್ನು ಯಶಸ್ವಿಯಾಗಿ ಸರಿಪಡಿಸಲಾಗಿದೆ. ಈ ಮುನ್ನೆಚ್ಚರಿಕಾ ಕ್ರಮಗಳಿಂದಾಗಿ ಪ್ರಸರಣ ವಲಯದ ವಿದ್ಯುತ್ ವ್ಯತ್ಯಯ ಪ್ರಕರಣಗಳ ಸಂಖ್ಯೆ 519 ರಿಂದ ಕೇವಲ 73 ಕ್ಕೆ ಕುಸಿದಿದೆ. ಅಂದರೆ ವಿದ್ಯುತ್ ಕಡಿತದಲ್ಲಿ ಶೇ. 85 ರಷ್ಟು ಬೃಹತ್ ಇಳಿಕೆ ಕಂಡಂತಾಗಿದೆ. ಇದುವರೆಗೆ ಒಟ್ಟು 3,370 ಕಿಲೋಮೀಟರ್‌ಗಿಂತಲೂ ಹೆಚ್ಚು ಉದ್ದದ ವಿದ್ಯುತ್ ಮಾರ್ಗವನ್ನು ಡ್ರೋನ್ ಮೂಲಕ ಸಮೀಕ್ಷೆ ಮಾಡಲಾಗಿದ್ದು, ಇದರಲ್ಲಿ 2,500 ಕಿ.ಮೀ ಗೂ ಹೆಚ್ಚು 220 KV ಲೈನ್‌ಗಳು ಮತ್ತು 843 ಕಿ.ಮೀ ಉದ್ದದ 400 KV ಲೈನ್‌ಗಳು ಸೇರಿವೆ.

ನಮ್ಮ ಗಮನವು ಈಗ ವಿದ್ಯುತ್ ದೋಷ ಸಂಭವಿಸಿದ ನಂತರ ದುರಸ್ತಿ ಮಾಡುವುದಕ್ಕಿಂತ, ದೋಷ ಬರುವ ಮುನ್ನವೇ ಅಪಾಯಗಳನ್ನು ಗುರುತಿಸಿ ತಡೆಯುವುದರ ಕಡೆಗೆ ಬದಲಾಗಿದೆ ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಡ್ರೋನ್‌ಗಳಲ್ಲಿ ಅಳವಡಿಸಲಾಗಿರುವ ಹೈ-ರೆಸಲ್ಯೂಶನ್ ಕ್ಯಾಮೆರಾಗಳು, ಥರ್ಮಲ್ ಇಮೇಜಿಂಗ್ ಸಿಸ್ಟಮ್ (ಶಾಖ ಪತ್ತೆ ಹಚ್ಚುವಿಕೆ) ಮತ್ತು ಲಿಡಾರ್ ಸೆನ್ಸಾರ್‌ಗಳು ದಟ್ಟವಾದ ಕಾಡುಗಳು, ಗುಡ್ಡಗಾಡು ಪ್ರದೇಶಗಳು ಹಾಗೂ ಜನನಿಬಿಡ ನಗರ ಪ್ರದೇಶಗಳಲ್ಲಿ ಹಾದುಹೋಗುವ ವಿದ್ಯುತ್ ತಂತಿಗಳು ಮತ್ತು ಇನ್ಸುಲೇಟರ್‌ಗಳನ್ನು ಅತ್ಯಂತ ಹತ್ತಿರದಿಂದ ಪರಿಶೀಲಿಸುತ್ತವೆ. ಲೂಸ್ ಕನೆಕ್ಷನ್‌ಗಳಿಂದಾಗಿ ಉಂಟಾಗುವ ಅಸಹಜ ತಾಪಮಾನವನ್ನು ಈ ಥರ್ಮಲ್ ಕ್ಯಾಮೆರಾಗಳು ತಕ್ಷಣವೇ ಪತ್ತೆಹಚ್ಚುತ್ತವೆ. ಈ ದತ್ತಾಂಶಗಳನ್ನು ಕೆಪಿಟಿಸಿಎಲ್‌ನ ಡಿಜಿಟಲ್ ವ್ಯವಸ್ಥೆಗೆ ಸೇರಿಸಲಾಗುತ್ತಿದ್ದು, ಶೀಘ್ರದಲ್ಲೇ ಬರಲಿರುವ ‘ಡಿಜಿಟಲ್ ಟ್ವಿನ್ ಪ್ಲಾಟ್‌ಫಾರ್ಮ್’ ಮೂಲಕ ಕೇಂದ್ರ ನಿಯಂತ್ರಣ ಕೊಠಡಿಯಿಂದಲೇ ಇಡೀ ರಾಜ್ಯದ ವಿದ್ಯುತ್ ಜಾಲವನ್ನು ರಿಯಲ್-ಟೈಮ್‌ನಲ್ಲಿ ಮೇಲ್ವಿಚಾರಣೆ ಮಾಡಬಹುದು.

ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಈ ಕುರಿತು ಮಾತನಾಡಿ, “ಕರ್ನಾಟಕದ ಸುಮಾರು 45,000 ಕಿಲೋಮೀಟರ್ ವ್ಯಾಪ್ತಿಯ ವಿಶಾಲವಾದ ವಿದ್ಯುತ್ ಪ್ರಸರಣ ಜಾಲವನ್ನು ಈ ಹಿಂದಿನ ವಿಧಾನಗಳಲ್ಲಿ ಪರಿಶೀಲಿಸುವುದು ಅತ್ಯಂತ ಕಠಿಣ ಮತ್ತು ಸಮಯ ತೆಗೆದುಕೊಳ್ಳುವ ಕೆಲಸವಾಗಿತ್ತು. ಆದರೆ ಥರ್ಮಲ್ ಇಮೇಜಿಂಗ್ ಮತ್ತು ಲಿಡಾರ್ ತಂತ್ರಜ್ಞಾನದ ಡ್ರೋನ್‌ಗಳ ಮೂಲಕ ನಾವು ಕೇವಲ ಕೆಲವೇ ಗಂಟೆಗಳಲ್ಲಿ 360 ಡಿಗ್ರಿಯ ಸಮಗ್ರ ತಪಾಸಣೆ ನಡೆಸಬಹುದು. ಬರಿಗಣ್ಣಿಗೆ ಕಾಣಿಸದ ಅತ್ಯಂತ ಸಣ್ಣ ದೋಷಗಳನ್ನೂ ಇವು ಪತ್ತೆಹಚ್ಚುತ್ತವೆ. ಈ ತಪಾಸಣೆ ಆಧಾರಿತದಿಂದ ವಿದ್ಯುತ್ ವ್ಯತ್ಯಯದಲ್ಲಿ ಶೇ. 85 ರಷ್ಟು ಇಳಿಕೆ ಸಾಧಿಸಿರುವುದು ಕೆಪಿಟಿಸಿಎಲ್‌ನ ಡಿಜಿಟಲ್ ರೂಪಾಂತರದ ಹಾದಿಯಲ್ಲಿ ಒಂದು ದೊಡ್ಡ ಮೈಲಿಗಲ್ಲು,” ಎಂದು ಶ್ಲಾಘಿಸಿದ್ದಾರೆ.

ಸುರಕ್ಷತಾ ಜಾಗೃತಿಗೆ ಎಸ್ಕಾಂಗಳ ಪ್ರತಿ ಡಿವಿಷನ್‌ಗೆ ಸಿಗಲಿದೆ 1 ಲಕ್ಷ ರೂ. ಫಂಡ್

ರಾಜ್ಯದಲ್ಲಿ ವಿದ್ಯುತ್ ಅಪಘಾತಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕರಲ್ಲಿ ವಿದ್ಯುತ್ ಸುರಕ್ಷತೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಇಂಧನ ಇಲಾಖೆಯು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಉದ್ದೇಶಕ್ಕಾಗಿ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ತಮ್ಮ ವ್ಯಾಪ್ತಿಯ ಪ್ರತಿ ವಿಭಾಗಕ್ಕೆ ತಲಾ 1 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಲಿವೆ ಎಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಪ್ರಕಟಿಸಿದ್ದಾರೆ. ವಿದ್ಯುತ್ ಪರಿವೀಕ್ಷಣಾಲಯದ ವತಿಯಿಂದ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಇಂಧನ ಮೂಲವೆಂದರೆ ಅದು ವಿದ್ಯುತ್. ದಿನದಿಂದ ದಿನಕ್ಕೆ ಇದರ ಬಳಕೆ ಅತ್ಯಂತ ವೇಗವಾಗಿ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ಸುರಕ್ಷತೆಯ ಬಗೆಗಿನ ಜಾಗೃತಿಯೂ ಸಾರ್ವಜನಿಕರಲ್ಲಿ ಬೆಳೆಯಬೇಕಿದೆ. ನಾವೆಲ್ಲರೂ ಒಟ್ಟಾಗಿ, ಹಂಚಿಕೆಯ ಜವಾಬ್ದಾರಿಯೊಂದಿಗೆ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ,” ಎಂದು ಕರೆ ನೀಡಿದರು.

 

The post ಇನ್ಮೇಲೆ ಪದೇ ಪದೇ ಕರೆಂಟ್ ಹೋಗಲ್ಲ appeared first on Good News 24x7.

]]>
ದಕ್ಷಿಣ ರಾಜ್ಯಗಳ ರಾಜಕೀಯ ಶಕ್ತಿಯನ್ನು ದುರ್ಬಲಗೊಳಿಸುವ ಕುತಂತ್ರ : ಡಾ.ಹೆಚ್ ಸಿ ಮಹದೇವಪ್ಪ. https://www.goodnews24x7.com/the-trick-to-weaken-the-political-power-of-the-southern-states-dr-h-c-mahadevappa/ Wed, 20 May 2026 11:27:12 +0000 https://www.goodnews24x7.com/?p=9516 ಭಾರತವು ರಾಜಕೀಯವಾಗಿ ಸ್ವಾತಂತ್ರ್ಯ ಗಳಿಸಿದ ಕಾಲದಿಂದ ಇಲ್ಲಿಯವರೆಗೂ ಕೂಡಾ ಜನಸಂಖ್ಯಾ ನಿಯಂತ್ರಣ ಮತ್ತು ಮಾನವ ಸಂಪನ್ಮೂಲಕ ಅಭಿವೃದ್ಧಿಗೆ ಹಲವು ರೀತಿಯ ಪ್ರಯತ್ನಗಳು ನಡೆದಿವೆ. ಪಂಚವಾರ್ಷಿಕ ಯೋಜನೆಯಿಂದ ಹಿಡಿದು ಈಗಿನ ರಾಜ್ಯಗಳ ಬಜೆಟ್ ನ ವರೆಗೆ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು…

The post ದಕ್ಷಿಣ ರಾಜ್ಯಗಳ ರಾಜಕೀಯ ಶಕ್ತಿಯನ್ನು ದುರ್ಬಲಗೊಳಿಸುವ ಕುತಂತ್ರ : ಡಾ.ಹೆಚ್ ಸಿ ಮಹದೇವಪ್ಪ. appeared first on Good News 24x7.

]]>

ಭಾರತವು ರಾಜಕೀಯವಾಗಿ ಸ್ವಾತಂತ್ರ್ಯ ಗಳಿಸಿದ ಕಾಲದಿಂದ ಇಲ್ಲಿಯವರೆಗೂ ಕೂಡಾ ಜನಸಂಖ್ಯಾ ನಿಯಂತ್ರಣ ಮತ್ತು ಮಾನವ ಸಂಪನ್ಮೂಲಕ ಅಭಿವೃದ್ಧಿಗೆ ಹಲವು ರೀತಿಯ ಪ್ರಯತ್ನಗಳು ನಡೆದಿವೆ.

ಪಂಚವಾರ್ಷಿಕ ಯೋಜನೆಯಿಂದ ಹಿಡಿದು ಈಗಿನ ರಾಜ್ಯಗಳ ಬಜೆಟ್ ನ ವರೆಗೆ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಕೈಗೊಂಡರೂ ಸಹ ಭಾರತವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 193 ದೇಶಗಳ ಪೈಕಿ 130 ನೇ ಸ್ಥಾನದಲ್ಲಿ ಇದೆ.

ವಿಶ್ವದಲ್ಲಣೆ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಭಾರತದಕ್ಕೆ ಜನಸಂಖ್ಯೆ ಎಂಬುದು ವರವಾಗಬೇಕಿತ್ತು. ಆದರೆ ಇಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕದ ದರವನ್ನು ಗಮನಿಸಿದರೆ ನಮ್ಮ ದೇಶದ ಮೇಲೆ ಜನಸಂಖ್ಯಾ ಸ್ಪೋಟದ ದುಷ್ಪರಿಣಾಮ ಉಂಟಾದಂತೆ ಕಾಣುತ್ತಿದೆ.

ಈ ಪೈಕಿ ದೇಶದ ಕೆಲವು ರಾಜ್ಯಗಳು, ಬಹಳ ಜಾಗೃತೆಯಿಂದ ಜನರ ತಲಾದಾಯ, ಆರೋಗ್ಯ ಹಾಗೂ ಜನರಿಗೆ ಬೇಕಾದ ಉತ್ತಮ ಆರ್ಥಿಕ ವಾತಾವರಣ ಸೃಷ್ಟಿಸುವ ಸಲುವಾಗಿ ಹಲವು ಕ್ರಮಗಳನ್ನು ಕೈಗೊಂಡರೂ ಕೂಡಾ ಒಟ್ಟಾರೆಯಾಗಿ ದೇಶದ ಹೆಚ್ಚಿನ ಜನಸಂಖ್ಯೆಯು ಮಾನವ ಸಂಪನ್ಮೂಲವಾಗಿ ಪರಿವರ್ತನೆ ಆಗಿಲ್ಲ. ಹೀಗಾಗಿಯೇ ಇಷ್ಟು ಹೊತ್ತಿಗೆ ಅಭಿವೃದ್ಧ ದೇಶಗಳ ಪಟ್ಟಿಯಲ್ಲಿ ಇರಬೇಕಾಗಿದ್ದ ದೇಶ, ಇನ್ನೂ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲೇ ಇದೆ.

ಇಂತಹ ಪರಿಸ್ಥಿತಿಯಲ್ಲಿ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಪರಿವರ್ತನೆ ಮಾಡಬೇಕಾದ ಜವಾಬ್ದಾರಿಯನ್ನು ಹೊಂದಿರುವ ಕೇಂದ್ರದ ಬಿಜೆಪಿ ಸರ್ಕಾರವು ಜನಸಂಖ್ಯಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸಿ, ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದನ್ನು ಬಿಟ್ಟು, ಕೇವಲ ಚುನಾವಣಾ ರಾಜಕೀಯದ ದೃಷ್ಟಿಯಿಂದ ತೀರಾ ಅತಾರ್ಕಿಕವಾಗಿ ಮತ ಕ್ಷೇತ್ರಗಳ ಹೆಚ್ಚಳಕ್ಕೆ ಮುಂದಾಗಿರುವುದು ಅತ್ಯಂತ ಕೆಟ್ಟ ಸಂಗತಿಯಾಗಿದೆ.

ಜನಸಂಖ್ಯಾ ನಿಯಂತ್ರಣಕ್ಕಾಗಿ ದೇಶದ ವಿವಿಧ ರಾಜ್ಯಗಳು ಪ್ರಾಮಾಣಿಕವಾಗಿ ಶ್ರಮ ಹಾಕುತ್ತಿದ್ದು ಅದರಲ್ಲಿ ಯಶಸ್ಸು ಕಂಡಿವೆ ಕೂಡಾ.. ಈ ಪೈಕಿ ಕೇರಳ ಆದಿಯಾಗಿ ದಕ್ಷಿಣ ಭಾರತದ ರಾಜ್ಯಗಳೇ ಉತ್ತಮ ಸಾಧನೆಯನ್ನು ಮಾಡಿವೆ.

ಹೀಗಿರುವಾಗ ಜನಸಂಖ್ಯೆ ಆಧರಿಸಿ ಉತ್ತರದ ರಾಜ್ಯಗಳಿಗೆ ಹೆಚ್ಚಿನ ಚುನಾವಣಾ ಕ್ಷೇತ್ರಗಳನ್ನು ನೀಡಿ, ದಕ್ಷಿಣದ ರಾಜ್ಯಗಳಿಗೆ ಕಡಿಮೆ ಚುನಾವಣಾ ಕ್ಷೇತ್ರಗಳನ್ನು ನೀಡುವ ಹುನ್ನಾರವು ದಕ್ಷಿಣ ಭಾರತ ವಿರೋಧಿ ನಡೆಯಾಗಿದೆ.

ತೆರಿಗೆ ಪಾವತಿಯಿಂದ ಹಿಡಿದು, ದೇಶದ ಅಭಿವೃದ್ಧಿಯ ಎಲ್ಲ ಮಗ್ಗುಲುಗಳಲ್ಲೂ ಸಹ ದಕ್ಷಿಣ ಭಾರತದ ರಾಜಗಯಗಳು ತನ್ನದೇ ಆದ ಮಹತ್ವದ ಕೊಡುಗೆ ನೀಡಿವೆ

ಹೀಗಿರುವಾಗ ದಕ್ಷಿಣದ ರಾಜ್ಯಗಳ ಮೇಲೆ ಸದಾ ತಾರತಮ್ಯ ತೋರುವ ಕೇಂದ್ರದ ಬಿಜೆಪಿ ಸರ್ಕಾರ, ದಕ್ಷಿಣದ ರಾಜ್ಯಗಳ ರಾಜಕೀಯ ಅಸ್ಮಿತೆಗೆ ಕೊಡಲಿ ಪೆಟ್ಟು ನೀಡುವ ದುರುದ್ದೇಶದಿಂದ ಉತ್ತರ ಭಾರತಕ್ಕೆ ಹೆಚ್ಚು ಮತ್ತು ದಕ್ಷಿಣ ಭಾರತಕ್ಕೆ ಕಡಿಮೆ ಮತ ಕ್ಷೇತ್ರಗಳನ್ನು ಹಂಚಿಕೆ ಮಾಡಲು ಹೊರಟಿದ್ದು, ಇದನ್ನು ಒಕ್ಕೂಟ ವ್ಯವಸ್ಥೆಯ ಭಾಗವಾಗಿರುವ ದಕ್ಷಿಣದ ರಾಜ್ಯಗಳು ಖಂಡಿಸಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಮತ ಕ್ಷೇತ್ರಗಳ ಹೆಚ್ಚಳದ ಮಸೂದೆಯನ್ನು ಈಗಾಗಲೇ ಅನುಮೋದಿತವಾಗಿದ್ದ ಮಹಿಳಾ ಮೀಸಲಾತಿ ಮಸೂದೆಯ ಒಳಗಿಟ್ಟು, ದಕ್ಷಿಣದ ರಾಜ್ಯಗಳನ್ನು ಹಣಿಯಲು ಕ್ಷೇಂದ್ರದ ಬಿಜೆಪಿಗರು ಸಂಚು ರೂಪಿಸಿದ್ದರು.

ಅಷ್ಟಲ್ಲದೇ ದೇಶದ ಪ್ರಮುಖ ವಿಷಯವಾದ ಮತ ಕ್ಷೇತ್ರಗಳ ಹೆಚ್ಚಳ ಕಾಯ್ದೆಯನ್ನು, ಮುನ್ನಲೆಗೆ ತಾರದೇ, ಒಳಗಿಂದೊಳಗೆಯೇ ಮಾಡುವುದರ ಉದ್ದೇಶ ಏನು ಎಂದು ಗಮನಿಸಿದರೆ ಸಾಕು, ಕೇಂದ್ರ ಸರ್ಕಾರ ಮಾಡಲು ಹೊರಟಿರುವುದು ಕುತಂತ್ರ ಎಂದೇ ಅರ್ಥವಾಗುತ್ತದೆ.

The post ದಕ್ಷಿಣ ರಾಜ್ಯಗಳ ರಾಜಕೀಯ ಶಕ್ತಿಯನ್ನು ದುರ್ಬಲಗೊಳಿಸುವ ಕುತಂತ್ರ : ಡಾ.ಹೆಚ್ ಸಿ ಮಹದೇವಪ್ಪ. appeared first on Good News 24x7.

]]>
ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು https://www.goodnews24x7.com/the-number-of-criminal-cases-in-our-society-is-increasing-day-by-day-complex-cases-like-murder-property-disputes-and-marital-disputes-have-been-gathering-dust-in-the-courts-for-years-it-is-a-matter/ Wed, 22 Apr 2026 06:41:44 +0000 https://www.goodnews24x7.com/?p=9371 ನಮ್ಮ ಸಮಾಜದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೊಲೆ, ಆಸ್ತಿ ಕಲಹ ಹಾಗೂ ದಾಂಪತ್ಯ ಕಲಹಗಳಂತಹ ಜಟಿಲ ಪ್ರಕರಣಗಳು ನ್ಯಾಯಾಲಯದ ಕಟಕಟೆಯಲ್ಲಿ ವರ್ಷಗಟ್ಟಲೆ ಧೂಳು ಹಿಡಿಯುತ್ತಿವೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಲಕ್ಷಾಂತರ ಪ್ರಕರಣಗಳು ಇಂದಿಗೂ ವಿಲೇವಾರಿಯಾಗದೆ ಬಾಕಿ…

The post ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು appeared first on Good News 24x7.

]]>

ನಮ್ಮ ಸಮಾಜದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೊಲೆ, ಆಸ್ತಿ ಕಲಹ ಹಾಗೂ ದಾಂಪತ್ಯ ಕಲಹಗಳಂತಹ ಜಟಿಲ ಪ್ರಕರಣಗಳು ನ್ಯಾಯಾಲಯದ ಕಟಕಟೆಯಲ್ಲಿ ವರ್ಷಗಟ್ಟಲೆ ಧೂಳು ಹಿಡಿಯುತ್ತಿವೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಲಕ್ಷಾಂತರ ಪ್ರಕರಣಗಳು ಇಂದಿಗೂ ವಿಲೇವಾರಿಯಾಗದೆ ಬಾಕಿ ಉಳಿದಿರುವುದು ಕಳವಳಕಾರಿ ಸಂಗತಿ. ಕೆಲವು ಜಮೀನು ವಿವಾದಗಳಂತೂ ಎಷ್ಟು ಸುದೀರ್ಘವಾಗಿ ನಡೆಯುತ್ತವೆ ಎಂದರೆ, ಒಂದು ತಲೆಮಾರು ನ್ಯಾಯಾಲಯ ಅಲೆದು ಸುಸ್ತಾಗಿ, ಅಂತಿಮವಾಗಿ ಅವರ ಮಕ್ಕಳು ಹೋರಾಟವನ್ನು ಮುಂದುವರಿಸುವ ಅನಿವಾರ್ಯತೆ ಎದುರಾಗಿದೆ. ಇಂತಹ ಸನ್ನಿವೇಶಗಳ ನಡುವೆ ಅಮಾನವೀಯ ಕೃತ್ಯ ಎಸಗಿದವರಿಗೆ ಗಲ್ಲು ಅಥವಾ ಜೀವಾವಧಿ ಶಿಕ್ಷೆಯಾದಾಗ ನ್ಯಾಯಾಂಗದ ಮೇಲೆ ತುಸು ನಂಬಿಕೆ ಮೂಡುತ್ತದೆ. ಆದರೂ, ಶಿಕ್ಷೆಗೊಳಗಾದವರು ಪ್ರಭಾವ ಬಳಸಿ ಅಥವಾ ಕ್ಷಮಾದಾನದ ಮೂಲಕ ಬಿಡುಗಡೆಯಾದಾಗ ಸಮಾಜದಲ್ಲಿ ಕೆಲವೊಮ್ಮೆ ಸಂಶಯಗಳು ಹುಟ್ಟಿಕೊಳ್ಳುವುದು ಸಹಜ.

ಇತ್ತೀಚಿನ ಕೆಲವು ಮಹತ್ವದ ತೀರ್ಪುಗಳು ಕಾನೂನಿನ ಶಕ್ತಿಯನ್ನು ಮರುಸ್ಥಾಪಿಸಿವೆ. ತಮಿಳುನಾಡಿನ ಸಾತಾಂಕುಳಂನಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ತಂದೆ ಜಯರಾಜ್ ಮತ್ತು ಮಗ ಬೆನಿಕ್ಸ್ ಎಂಬವರನ್ನು ಪೊಲೀಸರು ಅಮಾನವೀಯವಾಗಿ ಥಳಿಸಿ ಕೊಂದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪೊಲೀಸರೇ ಸಾಕ್ಷ್ಯ ನಾಶಪಡಿಸಲು ಯತ್ನಿಸಿದರೂ, ಅದೇ ಠಾಣೆಯ ಕಾನ್ಸ್ಟೇಬಲ್ ರೇವತಿ ಎಂಬವರು ಯಾವುದೇ ಬೆದರಿಕೆಗೆ ಬಗ್ಗದೆ ಸತ್ಯ ನುಡಿದ ಪರಿಣಾಮ ಒಂಬತ್ತು ಪೊಲೀಸರಿಗೆ ಮಧುರೈ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಇದು ಕರ್ತವ್ಯ ಪ್ರಜ್ಞೆ ಮತ್ತು ನ್ಯಾಯಕ್ಕೆ ಸಂದ ಜಯವಾಗಿದೆ.

ಹಾಗೆಯೇ ಕರ್ನಾಟಕದಲ್ಲಿ ಸಂಚಲನ ಮೂಡಿಸಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ರಾಜಕೀಯ ಪ್ರಭಾವದ ನಡುವೆಯೂ ಸಿಬಿಐ ತನಿಖೆ ನಡೆದು, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆಯಾಗಿದೆ. ಇದರ ಜೊತೆಗೆ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ, ನಟ ದರ್ಶನ್ ಪ್ರಕರಣ ಹಾಗೂ ಜನಾರ್ದನ ರೆಡ್ಡಿ ಅವರ ಪ್ರಕರಣಗಳಲ್ಲಿ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳು ಸಮಾಜಕ್ಕೆ ಒಂದು ಸ್ಪಷ್ಟ ಸಂದೇಶ ನೀಡಿವೆ. “ಕಾನೂನಿಗಿಂತ ಯಾರೂ ದೊಡ್ಡವರಲ್ಲ” ಮತ್ತು ತಪ್ಪೆಸಗಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ನ್ಯಾಯದ ಮುಂದೆ ತಲೆಬಾಗಲೇಬೇಕು ಎಂಬ ಆಶಾವಾದವನ್ನು ಈ ಬೆಳವಣಿಗೆಗಳು ನಾಗರಿಕ ಸಮಾಜದಲ್ಲಿ ಮೂಡಿಸಿವೆ.

The post ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು appeared first on Good News 24x7.

]]>
ಭಾರತದ ಭವಿಷ್ಯ ರೂಪಿಸುತ್ತಿರುವ ಸೌರಶಕ್ತಿ ಚಾಲಿತ ಡ್ರೋನ್‌ಗಳು. https://www.goodnews24x7.com/solar-powered-drones-shaping-indias-future/ Sat, 30 Aug 2025 04:37:45 +0000 https://www.goodnews24x7.com/?p=6984 ಕರಿಯಪ್ಪ, ಹೆಗ್ಗಡದಿನ್ನಿ : ಇವತ್ತು ಡ್ರೋನ್‌ಗಳ ಯುಗ. ಕೇವಲ ಹೆವಿ ಮಶೀನರಿ ಅಥವಾ ಕೋಟ್ಯಂತರ ರೂ. ವೆಚ್ಚದ ಯುದ್ಧ ವಿಮಾನಗಳು ಮಾತ್ರವಲ್ಲದೇ, ಸುಲಭವಾಗಿ ನಿಯಂತ್ರಿಸಬಹುದಾದ, ಕಡಿಮೆ ವೆಚ್ಚದ ಡ್ರೋನ್‌ಗಳು ವಿಶ್ವದ ಪ್ರಮುಖ ರಕ್ಷಣಾ ಕಾರ್ಯಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಇತ್ತೀಚೆಗೆ ಭಾರತ ‘ಆಪರೇಷನ್…

The post ಭಾರತದ ಭವಿಷ್ಯ ರೂಪಿಸುತ್ತಿರುವ ಸೌರಶಕ್ತಿ ಚಾಲಿತ ಡ್ರೋನ್‌ಗಳು. appeared first on Good News 24x7.

]]>

ಕರಿಯಪ್ಪ, ಹೆಗ್ಗಡದಿನ್ನಿ : ಇವತ್ತು ಡ್ರೋನ್‌ಗಳ ಯುಗ. ಕೇವಲ ಹೆವಿ ಮಶೀನರಿ ಅಥವಾ ಕೋಟ್ಯಂತರ ರೂ. ವೆಚ್ಚದ ಯುದ್ಧ ವಿಮಾನಗಳು ಮಾತ್ರವಲ್ಲದೇ, ಸುಲಭವಾಗಿ ನಿಯಂತ್ರಿಸಬಹುದಾದ, ಕಡಿಮೆ ವೆಚ್ಚದ ಡ್ರೋನ್‌ಗಳು ವಿಶ್ವದ ಪ್ರಮುಖ ರಕ್ಷಣಾ ಕಾರ್ಯಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಇತ್ತೀಚೆಗೆ ಭಾರತ ‘ಆಪರೇಷನ್ ಸಿಂದೂರ’ ಎಂಬ ಶೋಧ ಕಾರ್ಯಾಚರಣೆಯಲ್ಲಿ ಡ್ರೋನ್‌ ಬಳಸಿ ಪಾಕಿಸ್ತಾನದ ನೆಲೆಗಳ ಮೇಲೆ ಪರಿಣಾಮಕಾರಿ ದಾಳಿ ನಡೆಸಿತು. ಇಸ್ರೇಲ್ ಹಮಾಸ್ ವಿರುದ್ಧದ ಹೋರಾಟದಲ್ಲಿ ಡ್ರೋನ್‌ ಬಳಸಿದರೆ, ರಷ್ಯಾ ಉಕ್ರೇನ್‌ ವಿರುದ್ಧದ ಸಮರದಲ್ಲಿ ನೌಕಾ ದಾಳಿ ನಡೆಸಿತು—all using drones.

ಇಂತಹ ಹಿನ್ನೆಲೆಯಲ್ಲಿ, ಡ್ರೋನ್ ತಂತ್ರಜ್ಞಾನದಲ್ಲಿ ಭಾರತ ಮಾಡುತ್ತಿರುವ ಇತ್ತೀಚಿನ ಅಭಿವೃದ್ಧಿಯು ಹೆಮ್ಮೆ ತರಲಿದೆ.

ಕಾಲಭೈರವ – ಭಾರತೀಯ ಯುದ್ಧ ಡ್ರೋನ್‌ಗಳಲ್ಲಿನ ಹೊಸ ಶಕ್ತಿ

ಬೆಂಗಳೂರು ಮೂಲದ ಎಐ ಸಂಸ್ಥೆ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋ ಸ್ಪೇಸ್ ದೇಶದ ಮೊದಲ ಸ್ವದೇಶಿ ‘ಮಧ್ಯಮ ಎತ್ತರದ ದೀರ್ಘ ಬಾಳಿಕೆಯ ಯುದ್ಧ ಡ್ರೋನ್’ (MALE – Medium Altitude Long Endurance) ಅನ್ನು ಅಭಿವೃದ್ಧಿಪಡಿಸಿದೆ. ಈ ಡ್ರೋನ್‌ಗೆ ‘ಕಾಲಭೈರವ’ ಎಂಬ ಹೆಸರನ್ನು ನೀಡಲಾಗಿದೆ.

ವಿಶೇಷತೆಗಳು:

  • 30 ಗಂಟೆಗಳ ನಿರಂತರ ಹಾರಾಟ
  • 3000 ಕಿಲೋಮೀಟರ್ ದೂರ ಹಾರುವ ಸಾಮರ್ಥ್ಯ
  • ಪ್ರಿಡೇಟರ್ (ಅಮೆರಿಕಾ) ಮತ್ತು ಸರ್ಚರ್ (ಇಸ್ರೇಲ್) ಡ್ರೋನ್‌ಗಳಿಗೆ ಪರ್ಯಾಯವಾಗಿ ಕಡಿಮೆ ವೆಚ್ಚದಲ್ಲಿ ಲಭ್ಯ
  • ಈಗಾಗಲೇ ದಕ್ಷಿಣ ಏಷ್ಯಾದ ಒಂದು ರಾಷ್ಟ್ರದಿಂದ ಬೇಡಿಕೆ

ಫ್ಲೈಯಿಂಗ್ ವೆಡ್ಜ್ ಕಂಪನಿಯ ಸಂಸ್ಥಾಪಕ ಸುಹಾಸ್ ತೇಜಸ್‌ಕಂಡ ನೇತೃತ್ವದಲ್ಲಿ ನಿರ್ಮಿತವಾದ ಈ ಡ್ರೋನ್ ಈಗ ರಫ್ತಿಗೂ ಸಿದ್ಧವಾಗಿದೆ.

ತೇಜಸ್ವಾನ್ – ಸೌರಶಕ್ತಿಯಿಂದ ಚಲಿಸುವ ಡ್ರೋನ್‌

ಇದು ಯುದ್ಧ ಉಪಯೋಗಕ್ಕಲ್ಲ, ಆದರೆ equally ಮಹತ್ವಪೂರ್ಣ. ದೆಹಲಿ ಮೂಲದ ಸ್ಟಾರ್ಟ್‌ಅಪ್ ಸಂಸ್ಥೆಯು ‘ತೇಜಸ್ವಾನ್’ ಹೆಸರಿನ ಸೌರಶಕ್ತಿ ಚಾಲಿತ ಡ್ರೋನ್ ಅನ್ನು ಅಭಿವೃದ್ಧಿಪಡಿಸಿದೆ. ಐಐಟಿ ಕಾನ್ಪುರದ ವಿದ್ಯಾರ್ಥಿಯಾಗಿದ್ದ ವಿಜಯ್ ಶಂಕರ್ ದ್ವಿವೇದಿ ಅವರ ನೇತೃತ್ವದಲ್ಲಿ ಈ ಯೋಜನೆ ರೂಪುಗೊಂಡಿದೆ.

ತೇಜಸ್ವಾನ್ ವೈಶಿಷ್ಟ್ಯಗಳು:

  • 150 ಕಿ.ಮೀ. ದೂರವರೆಗೆ ಹಾರಾಟ
  • 12 ಗಂಟೆಗಳ ನಿರಂತರ ಕಾರ್ಯ
  • 3 ಕೆ.ಜಿ. ವರೆಗೆ ಭಾರ ಸಾಗಿಸಲು ಸಾಧ್ಯ
  • ಸೌರ ಫಲಕಗಳ ಮೂಲಕ ಚಾರ್ಜ್ ಆಗುತ್ತದೆ; ಸೂರ್ಯ ಬೆಳಕು ಇಲ್ಲದಿದ್ದರೂ ಬ್ಯಾಟರಿ ಮೂಲಕ 50 ಕಿ.ಮೀ ದೂರ ಸಾಗಬಲ್ಲದು
  • ಸಮುದ್ರಮಟ್ಟದಿಂದ 5 ಕಿ.ಮೀ ಎತ್ತರದಲ್ಲಿ ಹಾರುವ ಶಕ್ತಿ

ಈ ಡ್ರೋನ್‌ಗಳನ್ನು ಪ್ರಾಯೋಗಿಕವಾಗಿ ದೆಹಲಿಯ ಸ್ಟಾರ್ಟ್‌ಅಪ್ ಮೇಳದಲ್ಲಿ ಪ್ರದರ್ಶಿಸಲಾಯಿತು. ಈಗ ಭಾರತೀಯ ಸೇನೆಯು ಈ ಡ್ರೋನ್‌ಗಳ ಬಗ್ಗೆ ಆಸಕ್ತಿ ತೋರುತ್ತಿದ್ದು, ಉಪಯುಕ್ತತೆ ಕುರಿತಂತೆ ಮಾತುಕತೆಗಳು ನಡೆಯುತ್ತಿವೆ.

ಬಳಕೆ ಪ್ರದೇಶಗಳು:

‘ತೇಜಸ್ವಾನ್’ ಡ್ರೋನ್ ನನ್ನು ಹಲವಾರು ನಾಗರಿಕ ಮತ್ತು ಭದ್ರತಾ ಕಾರ್ಯಗಳಲ್ಲಿ ಬಳಸಬಹುದು:

  • ಗಡಿಯಲ್ಲಿ ಕಣ್ಗಾವಲು
  • ಅರಣ್ಯಗಳಲ್ಲಿ ಬೆಂಕಿ ಮೇಲ್ವಿಚಾರಣೆ
  • ನೈಸರ್ಗಿಕ ವಿಪತ್ತುಗಳಲ್ಲಿ ಸಂತ್ರಸ್ತರ ಪತ್ತೆ ಮತ್ತು ರಕ್ಷಣೆ
  • ಶತ್ರು ಚಟುವಟಿಕೆಗಳ ಮೇಲ್ವಿಚಾರಣೆ

ಇದರ ಎರಡು ಹೈ-ರೆಸೊಲ್ಯೂಷನ್ ಕ್ಯಾಮೆರಾಗಳು ಗುರಿಗಳನ್ನು ನಿಖರವಾಗಿ ಗಮನಿಸಬಲ್ಲುವು. ಈಗಾಗಲೇ ಕೆಲವು ಡ್ರೋನ್‌ಗಳನ್ನು ಸೇನೆಗೆ ತಯಾರಿಸಲಾಯಿತು.

ಭದ್ರತೆಯ ಹೊಸ ಆಯಾಮ

ಪ್ರಸ್ತುತ ದೇಶದ ಬಹುತೇಕ ಡ್ರೋನ್‌ಗಳು ಕೇವಲ 10–20 ಕಿ.ಮೀ ವ್ಯಾಪ್ತಿ ಹೊಂದಿದ್ದು, 2–3 ಗಂಟೆಗಳ ಮಾತ್ರ ಕಾರ್ಯ ನಿರ್ವಹಿಸುತ್ತವೆ. ಆದರೆ, ‘ತೇಜಸ್ವಾನ್’ ಈ ಮಿತಿಗಳನ್ನು ದಾಟಿದೆ — 150 ಕಿ.ಮೀ. ದೂದಲು, 12 ಗಂಟೆಗಳ ಕಾಲ ನಿರಂತರ ಕಾರ್ಯ ಸಾಧ್ಯ. ಇದರ ಆಧಾರದಿಂದ ಭಾರತೀಯ ಸೇನೆಯ ನಿರೀಕ್ಷೆಗಳು ಹೆಚ್ಚಾಗಿವೆ.

ಇತರೆ ತಂತ್ರಜ್ಞಾನ ಬೆಳವಣಿಗೆಗಳು:

ಗೂಗಲ್ ಪಿಕ್ಸೆಲ್ 10 – ಸಿಗ್ನಲ್ ಇಲ್ಲದೆ ಕರೆ? ಸಾಧ್ಯ!

ಗೂಗಲ್ ತನ್ನ ಪಿಕ್ಸೆಲ್ 10 ಫೋನ್‌ನಲ್ಲಿ ಹೊಸ ತಂತ್ರಜ್ಞಾನ ಪರಿಚಯಿಸಿದ್ದು, ನೆಟ್‌ವರ್ಕ್ ಇಲ್ಲದ ಪ್ರದೇಶದಲ್ಲಿಯೂ ವಾಟ್ಸ್‌ಅಪ್ ಮೂಲಕ ಧ್ವನಿ ಮತ್ತು ವಿಡಿಯೋ ಕರೆ ಮಾಡಲು ಅವಕಾಶ ನೀಡುತ್ತದೆ. ಈ ಫೋನ್‌ ಶೀಘ್ರದಲ್ಲೇ ₹79,999 ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ.

6 ತಿಂಗಳು ಉಚಿತ ಎಐ ತರಬೇತಿ – ಓಪನ್‌ಎಐ ಯೋಜನೆ

ಓಪನ್‌ಎಐ ಸಂಸ್ಥೆ ಭಾರತದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಎಐ ತರಬೇತಿ ನೀಡಲು 5 ಲಕ್ಷ ChatGPT ಪರವಾನಗಿಗಳನ್ನು ಉಚಿತವಾಗಿ ನೀಡಲಿದೆ. ಸರಕಾರಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಇದರ ಪ್ರಯೋಜನ ಪಡೆಯಬಲ್ಲರು.

ಹೈದರಾಬಾದ್‌ನಲ್ಲಿ ಚಾಲಕರಿಲ್ಲದ ಬಸ್ ಸೇವೆ

ಐಐಟಿ ಹೈದರಾಬಾದ್ ತನ್ನ ಕ್ಯಾಂಪಸ್‌ನಲ್ಲಿ ಸ್ವಯಂಚಾಲಿತ ಬಸ್ ಸೇವೆಯನ್ನು ಆರಂಭಿಸಿದೆ. ಇದುವರೆಗೆ 10,000ಕ್ಕೂ ಹೆಚ್ಚು ಪ್ರಯಾಣಿಕರು ಈ ಸೇವೆಯ ಪ್ರಯೋಜನ ಪಡೆದಿದ್ದಾರೆ. ಭವಿಷ್ಯದಲ್ಲಿ ಇದು ನಗರಮಟ್ಟದ ಪಬ್ಲಿಕ್ ಟ್ರಾನ್ಸ್‌ಪೋರ್ಟ್‌ನ ಭವಿಷ್ಯವಾಗಬಹುದು.

The post ಭಾರತದ ಭವಿಷ್ಯ ರೂಪಿಸುತ್ತಿರುವ ಸೌರಶಕ್ತಿ ಚಾಲಿತ ಡ್ರೋನ್‌ಗಳು. appeared first on Good News 24x7.

]]>
ರಾಹುಲ್ ಗಾಂಧಿ ಪ್ರತಿಭಟನೆಗೆ ಸಿ.ಟಿ ರವಿ ತಿರುಗೇಟು! https://www.goodnews24x7.com/c-t-ravi-hits-back-at-rahul-gandhis-protest/ Sun, 03 Aug 2025 10:19:43 +0000 https://www.goodnews24x7.com/?p=5285 ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಭಟನೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಸಿ.ಟಿ ರವಿ, ಮತದಾರ ಪಟ್ಟಿ ಪರಿಷ್ಕರಣೆಗೆ…

The post ರಾಹುಲ್ ಗಾಂಧಿ ಪ್ರತಿಭಟನೆಗೆ ಸಿ.ಟಿ ರವಿ ತಿರುಗೇಟು! appeared first on Good News 24x7.

]]>

ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಭಟನೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಿ.ಟಿ ರವಿ, ಮತದಾರ ಪಟ್ಟಿ ಪರಿಷ್ಕರಣೆಗೆ ಅಧಿಕಾರಿಗಳನ್ನ ಬಳಸಿಕೊಳ್ಳುತ್ತಾರೆ. 2014ಕ್ಕೂ ಮೊದಲು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. 2013 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು 2024ರ ಎಂಪಿ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು.

ಹಾಗಾದರೇ ಅಧಿಕಾರರ ದುರ್ಬಳಕೆ ಮಾಡಿಕೊಂಡವರು ಯಾರು ಎಂದು ಪ್ರಶ್ನಿಸಿದರು. ಅಲ್ಲದೆ ನೀವೇ ಚುನಾವಣಾ ಅಕ್ರಮವೆಸಗಿರಬಹುದೇನೋ ಎಂಬ ಅನುಮಾನ ಮೂಡಿದೆ ಎಂದು ಸಿಟಿ ರವಿ ಟಾಂಗ್ ಕೊಟ್ಟಿದ್ದಾರೆ.

The post ರಾಹುಲ್ ಗಾಂಧಿ ಪ್ರತಿಭಟನೆಗೆ ಸಿ.ಟಿ ರವಿ ತಿರುಗೇಟು! appeared first on Good News 24x7.

]]>
ಕಬಿನಿ ಜಲಾಶಯ ಭೂಮಿ, ಸಮನ್ಸ್ ಜಾರಿ ಮಾಡಿದ ಕೋರ್ಟ್. https://www.goodnews24x7.com/kabini-reservoir-land-court-issued-summons/ Sat, 21 Jun 2025 12:04:29 +0000 https://www.goodnews24x7.com/?p=4585 ಮೈಸೂರು : ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕು ಬಿದರಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಭೂಮಿ ಅಡವಿಟ್ಟು ನೂರಾರು ಕೋಟಿ ಸಾಲ ಪಡೆದಿದ್ದ ಪ್ರಕರಣ, ಕಬಿನಿ ಜಲಾಶಯದ ಹೆಸರಿನ ಆರ್ ಟಿಸಿ ಬದಲಿಸಿದ್ದ ಕೇಸ್ ಗೆ ಸಂಬಂಧಿಸಿದಂತೆ ಸುಭಾಷ್ ಪವರ್ ಮ್ಯಾನೇಜ್‌ಮೆಂಟ್ ವಿರುದ್ಧ…

The post ಕಬಿನಿ ಜಲಾಶಯ ಭೂಮಿ, ಸಮನ್ಸ್ ಜಾರಿ ಮಾಡಿದ ಕೋರ್ಟ್. appeared first on Good News 24x7.

]]>

ಮೈಸೂರು : ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕು ಬಿದರಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಭೂಮಿ ಅಡವಿಟ್ಟು ನೂರಾರು ಕೋಟಿ ಸಾಲ ಪಡೆದಿದ್ದ ಪ್ರಕರಣ, ಕಬಿನಿ ಜಲಾಶಯದ ಹೆಸರಿನ ಆರ್ ಟಿಸಿ ಬದಲಿಸಿದ್ದ ಕೇಸ್ ಗೆ ಸಂಬಂಧಿಸಿದಂತೆ ಸುಭಾಷ್ ಪವರ್ ಮ್ಯಾನೇಜ್‌ಮೆಂಟ್ ವಿರುದ್ಧ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.


ಪ್ರಕರಣ ಸಂಬಂಧ ವಕೀಲ ಬಾಲಚಂದ್ರ ಎಂಬುವವರು ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದು ಸುಭಾಷ್ ಪವರ್ ಮ್ಯಾನೇಜ್‌ಮೆಂಟ್ ಗೆ ಜೂನ್ 28 ನೇ ತಾರೀಖು ಖುದ್ದು ಹಾಜರಿಗೆ ಕೋರ್ಟ್ ಸಮನ್ಸ್ ಜಾರಿಮಾಡಿದೆ. ಪ್ರತಿನಿಧಿತ್ವ ರೆಪ್ರೆಸೆಂಟಿಟಿವ್ ಕ್ಯಾರೆಕ್ಟರ್ ಸೂಟ್ ಅಡಿ ಒಎಸ್ ದಾಖಲು ಮಾಡಲಾಗಿದ್ದು, 74/2025 ಕೇಸ್ ನಂ. ಬಾಲಚಂದ್ರ v/s ಚೀಫ್ ಸೆಕ್ರೆಟರಿ, ಕರ್ನಾಟಕ ಸ್ಟೇಟ್ ಚೀಫ್ ಸೆಕ್ರೆಟರಿ, ಕಾವೇರಿ ನೀರಾವರಿ ನಿಗಮದ ಸೂಪರಿಡೆಂಟ್ ಇಂಜಿನಿಯರ್, ಚೀಫ್ ಇಂಜಿನಿಯರ್, ಎಕ್ಸಿಕ್ಯುಟಿವ್ ಎಂಜಿನಿಯರ್, ಕಬಿನಿ ಎಇಇ ಚಂದ್ರಶೇಖರ್, ಸುಭಾಷ್ ಪವರ್ ಕಂಪನಿ ಮ್ಯಾನೇಜಿಂಗ್ ಡೈರೆಕ್ಟರ್, ಸೆಂದಿಲ್, ಸೀನಿಯರ್ ಮ್ಯಾನೇಜರ್, ತಹಶಿಲ್ದಾರ್ ಮೋಹನಕುಮಾರಿ ಅವರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಕಬಿನಿ ಜಲಾಶಯದ ಹೆಸರಿನ ಆರ್ ಟಿಸಿಯಲ್ಲಿ ಸುಭಾಷ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಎಂದು ದಾಖಲೆ ಪಡೆದು ಸಾಲ ಪಡೆಯಲಾಗಿತ್ತು. ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿ ಬಳಿಕ ಆರ್ ಟಿಸಿ ಮರುಬದಲು, ನೂರಾರು ಕೋಟಿ ಸಾಲ ಪಾವತಿ ಮಾಡಲಾಗಿತ್ತು. ಈ ನಡುವೆ ಇದೀಗ ಜೂನ್ 28 ರಂದು ಕೋರ್ಟ್‌ಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

The post ಕಬಿನಿ ಜಲಾಶಯ ಭೂಮಿ, ಸಮನ್ಸ್ ಜಾರಿ ಮಾಡಿದ ಕೋರ್ಟ್. appeared first on Good News 24x7.

]]>
ವಿದ್ಯುತ್ ದರ ಮತ್ತೆ ಯೂನಿಟ್ಗೆ 15 ರಿಂದ 20 ಪೈಸೆ ಏರಿಕೆಗೆ ನಿರ್ಧಾರ. https://www.goodnews24x7.com/%e0%b2%b5%e0%b2%bf%e0%b2%a6%e0%b3%8d%e0%b2%af%e0%b3%81%e0%b2%a4%e0%b3%8d-%e0%b2%a6%e0%b2%b0-%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%af%e0%b3%82%e0%b2%a8%e0%b2%bf%e0%b2%9f%e0%b3%8d/ Tue, 25 Mar 2025 12:06:35 +0000 https://www.goodnews24x7.com/?p=2886 ಬೆಂಗಳೂರು :- ಮುಸ್ಲಿಮರಿಗಾಗಿ ಮೀಸಲಾತಿ ಕಲ್ಪಿಸಲು ಸಂವಿಧಾನ ಬದಲಾವಣೆ ಹಾಗೂ ಹನಿಟ್ರ್ಯಾಪ್ ವಿಚಾರಗಳು ಭಾರಿ ಚರ್ಚೆ ಯಲ್ಲಿರುವ ನಡುವೆಯೇ ರಾಜ್ಯ ಸರ್ಕಾರ ಮತ್ತೆ ವಿದ್ಯುತ್ ದರ ಹೆಚ್ಚಳಕ್ಕೆ ಮುಂದಾಗಿದೆ. ಪ್ರತಿ ಯೂನಿಟ್ಗೆ 15 ರಿಂದ 20 ಪೈಸೆ ಏರಿಕೆ ಮಾಡಿ ಒಂದೆರಡು…

The post ವಿದ್ಯುತ್ ದರ ಮತ್ತೆ ಯೂನಿಟ್ಗೆ 15 ರಿಂದ 20 ಪೈಸೆ ಏರಿಕೆಗೆ ನಿರ್ಧಾರ. appeared first on Good News 24x7.

]]>

ಬೆಂಗಳೂರು :- ಮುಸ್ಲಿಮರಿಗಾಗಿ ಮೀಸಲಾತಿ ಕಲ್ಪಿಸಲು ಸಂವಿಧಾನ ಬದಲಾವಣೆ ಹಾಗೂ ಹನಿಟ್ರ್ಯಾಪ್ ವಿಚಾರಗಳು ಭಾರಿ ಚರ್ಚೆ ಯಲ್ಲಿರುವ ನಡುವೆಯೇ ರಾಜ್ಯ ಸರ್ಕಾರ ಮತ್ತೆ ವಿದ್ಯುತ್ ದರ ಹೆಚ್ಚಳಕ್ಕೆ ಮುಂದಾಗಿದೆ. ಪ್ರತಿ ಯೂನಿಟ್ಗೆ 15 ರಿಂದ 20 ಪೈಸೆ ಏರಿಕೆ ಮಾಡಿ ಒಂದೆರಡು ದಿನ ದಲ್ಲೇ ಆದೇಶ ಹೊರಬೀಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

 

 

 

 

 

 

ವಿದ್ಯುತ್ ಪ್ರಸರಣ ಮತ್ತು ಸರಬರಾಜು ಕಂಪನಿಗಳ ಸಿಬ್ಬಂದಿಯ ಪಿಂಚಣಿ ಹಾಗೂ ಗ್ರಾಚುಟಿ ಹಣವನ್ನು ವಿದ್ಯುತ್ ಬಳಕೆದಾರ ರಿಂದಲೇ ಭರಿಸಲು ಪ್ರತಿ ಯೂನಿಟ್ಗೆ 36 ಪೈಸೆ ಹೆಚ್ಚಳ ಮಾಡಿ ಈಗಾಗಲೇ ಆದೇಶ ಹೊರಡಿಸಿದೆ. ಹೆಚ್ಚಳ ದರ ಕೇವಲ ನಿವೃತ್ತ ನೌಕರರ ಹಿತಕ್ಕಾಗಿ, ಇದೀಗ ಹೆಚ್ಚಳ ಮಾಡುತ್ತಿರುವ ದರ ನಿಗಮಗಳ ಮೂಲ ಸೌಕರ್ಯ ಮತ್ತು ನಷ್ಟ ಭರಿಸಲು. ಪ್ರತಿ ಯೂನಿಟ್ಗೆ 70 ರಿಂದ 90 ಪೈಸೆ ಹೆಚ್ಚಳ ಮಾಡುವಂತೆ ವಿದ್ಯುತ್ ನಿಗಮಗಳು ಕರ್ನಾಟಕ ವಿದ್ಯುತ್ ನಿಯಂ ತ್ರಣ ಆಯೋಗಕ್ಕೆ ಮನವಿ ಮಾಡಿದ್ದವು. ದಿನದಿಂದ ದಿನಕ್ಕೆ ವಿದ್ಯುತ್ ಬೇಡಿಕೆ ಹೆಚ್ಚಿದೆ. ಅದಕ್ಕನುಗುಣ ವಾಗಿ ಉತ್ಪಾದನೆ ಮತ್ತು ಪ್ರಸರಣಕ್ಕೆ ಒತ್ತು ಕೊಡ ಬೇಕಿದೆ ಹಾಗೂ ಮೂಲಸೌಕರ್ಯಗಳಿಗೂ ಆದ್ಯತೆ ನೀಡ ಬೇಕಿರುವುದರಿಂದ ನಮ್ಮ ಕಂಪನಿಗಳ ವಿದ್ಯುತ್ ದರ ಏರಿಕೆ ಮಾಡಲೇ ಬೇಕೆಂದು ಮನವಿ ಮಾಡಿದ್ದವ. ಕಂಪನಿಗಳ ಕೋರಿಕೆ ಮತ್ತು ಸಾರ್ವಜನಿಕರ ಅಹ ವಾಲು ಆಲಿಸಿದ ಆಯೋಗ, ಪ್ರತಿ ಯೂನಿಟ್ಗೆ 15 ರಿಂದ 20 ಪೈಸೆ ಹೆಚ್ಚಿಸಲು ತೀರ್ಮಾನಿಸಿದೆ ಎನ್ನಲಾಗಿದೆ.

The post ವಿದ್ಯುತ್ ದರ ಮತ್ತೆ ಯೂನಿಟ್ಗೆ 15 ರಿಂದ 20 ಪೈಸೆ ಏರಿಕೆಗೆ ನಿರ್ಧಾರ. appeared first on Good News 24x7.

]]>