press Archives - Good News 24x7 https://www.goodnews24x7.com/tag/press/ Kannada Tue, 24 Mar 2026 12:52:59 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg press Archives - Good News 24x7 https://www.goodnews24x7.com/tag/press/ 32 32 ಸೊಸೈಟಿಗಳ ಮೂಲಕವೇ ಬೆಳೆ ಖರೀದಿ-ಮಾರಾಟ: ರೈತರ ಸ್ವಾವಲಂಬನೆಗೆ ಹೊಸ ಯೋಜನೆ. https://www.goodnews24x7.com/sosai%e1%b9%adiga%e1%b8%b7a-mulakave-be%e1%b8%b7e-kharidi-mara%e1%b9%ada-raitara-svavalambanege-hosa-yojane-societiesmlapressagriculturalcropsfarmerscooperativeprofit-be%e1%b8%b7ega/ Tue, 24 Mar 2026 12:50:41 +0000 https://www.goodnews24x7.com/?p=8970 ಪಾಂಡವಪುರ : ಬೆಳೆಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕವೇ ಖರೀದಿಸಿ ಮಾರಾಟ ಮಾಡಿ, ರೈತರ ಬೆಳೆಗೆ ಅಧಿಕ ಲಾಭ ನೀಡುವ ಹೊಸ ಕಾಠ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಸೊಸೈಟಿಗಳು ಇಷ್ಟು ದಿನ…

The post ಸೊಸೈಟಿಗಳ ಮೂಲಕವೇ ಬೆಳೆ ಖರೀದಿ-ಮಾರಾಟ: ರೈತರ ಸ್ವಾವಲಂಬನೆಗೆ ಹೊಸ ಯೋಜನೆ. appeared first on Good News 24x7.

]]>

ಪಾಂಡವಪುರ : ಬೆಳೆಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕವೇ ಖರೀದಿಸಿ ಮಾರಾಟ ಮಾಡಿ, ರೈತರ ಬೆಳೆಗೆ ಅಧಿಕ ಲಾಭ ನೀಡುವ ಹೊಸ ಕಾಠ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಸೊಸೈಟಿಗಳು ಇಷ್ಟು ದಿನ ರೈತರಿಗೆ ಬೇಕಾದ ರಸಗೊಬ್ಬರ, ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಪಡಿತರ ವಿತರಣೆಯನ್ನು ಮಾತ್ರ ಮಾಡುತ್ತಿ ದ್ದರು. ಅದರ ಜತೆಗೆ ರೈತರು ಬೆಳೆಯುವ ಭತ್ತ, ರಾಗಿ, ಜೋಳ, ಕಾಳುಗಳನ್ನು ಸಹ ನೇರವಾಗಿ ರೈತರಿಂದ ಖರೀದಿಸಿ ಅಧಿಕ ಲಾಭನೀಡುವುದರೊಂದಿಗೆ ಸೊಸೈಟಿಗಳ ಮೂಲಕವೇ ಸಿದ್ದಪಡಿಸಿದ ಬೆಳೆಗಳನ್ನು ಮಾರಾಟ ಮಾಡಲು ಕ್ರಮ ವಹಿಸಲಾಗಿದೆ. ಇದರಿಂದ ದಲ್ಲಾಳಿಗಳ ಹಾವಳಿ ತಪ್ಪಿಸಿದಂತಾಗುತ್ತದೆ, ಜತೆಗೆ ರೈತರಿಗೂ ಅಧಿಕ

ಲಾಭವಾಗಿ ಸೊಸೈಟಿಗಳು ಲಾಭದಾಯಕ ವಾಗಲಿವೆ. ಇದಕ್ಕಾಗಿ ನಬಾರ್ಡ್ ಅಥವಾ ಡಿಸಿಸಿ ಬ್ಯಾಂಕ್‌ಗಳಿಂದ ಸೊಸೈಟಿಗಳಿಗೆ ಆರ್ಥಿಕ ನೆರವು ನೀಡಲು ಕ್ರಮ ವಹಿಸಲಾಗುತ್ತಿದೆ,” ಎಂದು ತಿಳಿಸಿದರು. ”ಈ ಸಂಬಂಧ ಈಗಾಗಲೇ ಸೊಸೈಟಿಗಳ ಸಿಇಒ, ಸಿಬ್ಬಂದಿಗಳೊಂದಿಗೆ ಹಲವು ಬಾರಿ ಸಭೆ ನಡೆಸಿ ಚರ್ಚಿಸಲಾಗಿದೆ. ಜತೆಗೆ ಹೊಸ ಸಾಫ್ಟ್‌ವೇರ್ ಅನ್ನು ಡೆವಲಪ್ ಮಾಡಲಾಗಿದೆ. ಮೊದಲ ಹಂತದಲ್ಲಿ ಭತ್ತ.
ರಾಗಿ, ಜೋಳ, ಕಾಳುಗಳು, ಮೆಣಸಿನ ಕಾಯಿಗಳನ್ನು ಖರೀದಿಸಲಾಗುವುದು, ಬಳಿಕ ಕೋಲ್ಡ್ ಸ್ಟೋರೇಜ್‌ಗಳನ್ನು ನಿರ್ಮಿಸಿ ತರಕಾರಿ ಖರೀದಿಸಲು ತೀರ್ಮಾನಿ ಸಲಾಗುತ್ತಿದೆ. ಈ ಕೆಲಸಕ್ಕೆ ಸಹಕಾರ ಸಂಘಗಳ ಸಹಕಾರ ಇಲ್ಲಿ ನೀಡಬೇಕು, ಯಾವುದೇ ರೀತಿಯ ರಾಜಕೀಯ ನಡೆಸುತ್ತಿಲ್ಲ, ಇದು ಕೇವಲ ರೈತರು ಆರ್ಥಿಕ ಸ್ವಾವಲಂಬಿ ನಡೆಸುವುದಕ್ಕಾಗಿ ಮಾತ್ರ ಈ ಕಾಠ್ಯಕ್ರಮ ಆಯೋಜಿಸಲಾಗಿದೆ,”ಎಂದರು.

‘ಈಗಾಗಲೇ ತಾಲೂಕಿನ ಅರಳಕುಪ್ಪೆ, ಕ್ಯಾತನಹಳ್ಳಿ ಸೊಸೈಟಿಗಳಲ್ಲಿ ರೈತರಿಂದ ನೇರವಾಗಿ ಭತ್ತ ಖರೀದಿಸಿ ಮಾರಾಟ ಮಾಡಿ ಲಾಭ ಗಳಿಸುವ ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇಡೀ ಕ್ಷೇತ್ರದಾದ್ಯಂತ ಮಾಡಲಾಗುತ್ತಿದೆ. ಈ ವಿಚಾರವಾಗಿ ಚರ್ಚಿಸಲು ಏ.1ರಂದು ಪಟ್ಟಣದ ಟಿಎಪಿಸಿಎಂಎಸ್‌ ರೈತ ಸಭಾಂಗಣದಲ್ಲಿ ಎಲ್ಲಾ ತ ಸಹಕಾರ ಸಂಘಗಳ ಆಡಳಿತ ಮಂಡಳಿಯ ನಿರ್ದೇಶಕ ಸಭೆಯನ್ನು ಕರೆಯಲಾಗಿದೆ,” ಎಂದು ಮನವಿ ಮಾಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ,ಎಲ್. ಕೆಂಪೂಗೌಡ, ತಾಲೂಕು ಅಧ್ಯಕ್ಷ ಎಣ್ಣೆಹೊಳೆ ಕೊಪ್ಪಲು ಮಂಜುನಾಥ್, ಮಾಜಿ ಅಧ್ಯಕ್ಷ ಕೆನ್ನಾಳು ವಿಜಯ್‌ಕುಮಾರ್, ನಾಗರಾಜು, ಪ್ರಕಾಶ್, ಪ್ರಧಾನ ಕಾಠ್ಯದರ್ಶಿ ಡಾಮಡಹಳ್ಳಿ ಅಶೋಕ್, ಕೆ.ಟಿ.ಗೋವಿಂದೇಗೌಡ, ಬಿ.ಟಿ.ಶಿವಣ್ಣ, ಶಂಕರ, ರೂಪಾ, ಕಟ್ಟೇರಿ ಮಹದೇವು, ಮುಖಂಡ ಗೋವಿಂದರಾಜು, ರಾಘು, ಪ್ರಕಾಶ್ ಸೇರಿದಂತೆ ಇತರರು ಇದ್ದರು.

The post ಸೊಸೈಟಿಗಳ ಮೂಲಕವೇ ಬೆಳೆ ಖರೀದಿ-ಮಾರಾಟ: ರೈತರ ಸ್ವಾವಲಂಬನೆಗೆ ಹೊಸ ಯೋಜನೆ. appeared first on Good News 24x7.

]]>