Price Archives - Good News 24x7 https://www.goodnews24x7.com/tag/price/ Kannada Thu, 23 Apr 2026 10:16:34 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Price Archives - Good News 24x7 https://www.goodnews24x7.com/tag/price/ 32 32 ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ https://www.goodnews24x7.com/petrol-diesel-prices-to-rise-after-elections-central-government-clarification/ Thu, 23 Apr 2026 10:16:34 +0000 https://www.goodnews24x7.com/?p=9386 ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

The post ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ appeared first on Good News 24x7.

]]>

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ ತಳ್ಳಿಹಾಕಿದ್ದು, ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಚಿವಾಲಯ ನೀಡಿದ ಸ್ಪಷ್ಟನೆ ಏನು?
ಕೆಲವು ಮಾಧ್ಯಮ ವರದಿಗಳು ಮತ್ತು ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ನೀಡಿದ ಸುಳಿವುಗಳ ನಂತರ ಸಚಿವಾಲಯವು ‘X’ (ಟ್ವಿಟರ್) ನಲ್ಲಿ ಈ ಕೆಳಗಿನ ಅಂಶಗಳನ್ನು ಹಂಚಿಕೊಂಡಿದೆ:

ಭೀತಿ ಬೇಡ: ಬೆಲೆ ಏರಿಕೆಯ ವರದಿಗಳು ಸಾರ್ವಜನಿಕರಲ್ಲಿ ಅನಗತ್ಯ ಭಯ ಮತ್ತು ಭೀತಿಯನ್ನು ಸೃಷ್ಟಿಸುತ್ತಿವೆ. ಇವು ದುರುದ್ದೇಶಪೂರಿತ ಮತ್ತು ದಾರಿತಪ್ಪಿಸುವ ವರದಿಗಳಾಗಿವೆ.

ಸ್ಥಿರತೆ: ಕಳೆದ ನಾಲ್ಕು ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತಲ್ಲಣಗಳಿದ್ದರೂ, ಭಾರತವು ತೈಲ ಬೆಲೆಗಳನ್ನು ನಿಯಂತ್ರಣದಲ್ಲಿಟ್ಟಿರುವ ಅಪರೂಪದ ದೇಶಗಳಲ್ಲಿ ಒಂದಾಗಿದೆ.

ರಕ್ಷಣೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆಯ ಹೊರೆ ನಾಗರಿಕರ ಮೇಲೆ ಬೀಳದಂತೆ ತೈಲ ಕಂಪನಿಗಳು ಮತ್ತು ಸರ್ಕಾರ ನಿರಂತರ ಕ್ರಮ ಕೈಗೊಳ್ಳುತ್ತಿವೆ.

ಬೆಲೆ ಏರಿಕೆಯ ವದಂತಿಗೆ ಕಾರಣವೇನು?
ಅಂತರರಾಷ್ಟ್ರೀಯ ಮಟ್ಟದ ಭೌಗೋಳಿಕ ರಾಜಕೀಯ ಘರ್ಷಣೆಗಳು ತೈಲ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿವೆ:

ಯುದ್ಧದ ಪರಿಣಾಮ: ಇತ್ತೀಚಿನ ಇರಾನ್ ಮೇಲಿನ ದಾಳಿಯ ನಂತರ, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 70 ಡಾಲರ್‌ನಿಂದ 119-120 ಡಾಲರ್‌ಗೆ ಏರಿಕೆಯಾಗಿದೆ.

ಕೋಟಕ್ ವರದಿ: ಕಚ್ಚಾ ತೈಲದ ಈ ಭಾರೀ ಏರಿಕೆಯನ್ನು ಸರಿದೂಗಿಸಲು ಲೀಟರ್‌ಗೆ 25-28 ರೂ. ಹೆಚ್ಚಿಸುವುದು ಅನಿವಾರ್ಯವಾಗಬಹುದು ಎಂದು ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ಅಂದಾಜಿಸಿತ್ತು.

ಗಮನಿಸಿ: ಪಶ್ಚಿಮ ಬಂಗಾಳದ ಅಂತಿಮ ಹಂತದ ಚುನಾವಣೆ ಏಪ್ರಿಲ್ 29 ರಂದು ಮುಕ್ತಾಯಗೊಳ್ಳಲಿದ್ದು, ಅಲ್ಲಿಯವರೆಗೆ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ.

The post ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ appeared first on Good News 24x7.

]]>
ಬಿಸಿಲ ಬೇಗೆಗೆ ಜನ ಹೈರಾಣು: ಶತಕದತ್ತ ಎಳನೀರು ಬೆಲೆ, ಗ್ರಾಹಕರಿಗೆ ದರ ಏರಿಕೆ ಬಿಸಿ! https://www.goodnews24x7.com/people-suffer-from-the-scorching-heat-coconut-water-price-nears-century-mark-consumers-are-worried-about-price-hike/ Sun, 12 Apr 2026 07:35:07 +0000 https://www.goodnews24x7.com/?p=9231 ರಾಜ್ಯಾದ್ಯಂತ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ 35 ಡಿ.ಸೆ. ದಾಟಿದೆ. ಬಿಸಿಲಿನ ಬೇಗೆಯಿಂದ ಕಂಗೆಟ್ಟಿರುವ ಜನರು ದೇಹ ತಣಿಸಿಕೊಳ್ಳಲು ನೈಸರ್ಗಿಕ ಪಾನೀಯಗಳ ಮೊರೆ ಹೋಗುತ್ತಿದ್ದು, ಎಳನೀರಿನ ಬೆಲೆ ಶತಕದತ್ತ ದಾಪುಗಾಲು ಹಾಕುತ್ತಿದೆ. ಮಳೆಯ ಕೊರತೆ ಹಾಗೂ…

The post ಬಿಸಿಲ ಬೇಗೆಗೆ ಜನ ಹೈರಾಣು: ಶತಕದತ್ತ ಎಳನೀರು ಬೆಲೆ, ಗ್ರಾಹಕರಿಗೆ ದರ ಏರಿಕೆ ಬಿಸಿ! appeared first on Good News 24x7.

]]>

ರಾಜ್ಯಾದ್ಯಂತ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ 35 ಡಿ.ಸೆ. ದಾಟಿದೆ. ಬಿಸಿಲಿನ ಬೇಗೆಯಿಂದ ಕಂಗೆಟ್ಟಿರುವ ಜನರು ದೇಹ ತಣಿಸಿಕೊಳ್ಳಲು ನೈಸರ್ಗಿಕ ಪಾನೀಯಗಳ ಮೊರೆ ಹೋಗುತ್ತಿದ್ದು, ಎಳನೀರಿನ ಬೆಲೆ ಶತಕದತ್ತ ದಾಪುಗಾಲು ಹಾಕುತ್ತಿದೆ. ಮಳೆಯ ಕೊರತೆ ಹಾಗೂ ರೋಗಬಾಧೆಯಿಂದ ಇಳುವರಿ ಕುಂಠಿತಗೊಂಡಿರುವುದು ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದ್ದು, ಮದ್ದೂರು ಮಾರುಕಟ್ಟೆಯಲ್ಲೇ 40-50 ರೂ. ದರವಿದೆ. ನಗರಕ್ಕೆ ಬರುವಷ್ಟರಲ್ಲಿ ಗುಣಮಟ್ಟದ ಎಳನೀರು ಒಂದಕ್ಕೆ 70 ರಿಂದ 80 ರೂ. ವರೆಗೆ ಮಾರಾಟವಾಗುತ್ತಿದೆ. ಕಲ್ಲಂಗಡಿ ಬೆಲೆಯೂ ಏರಿಕೆಯಾಗಿದ್ದು, ಬಿಸಿಲಿನಿಂದ ಪಾರಾಗಲು ಜನರು ಮನೆಯಲ್ಲಿ ಎಸಿ, ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಎಲೆಕ್ಟ್ರಾನಿಕ್ ಉಪಕರಣಗಳ ವ್ಯಾಪಾರ ವಹಿವಾಟು ಕೂಡ ಚುರುಕುಗೊಂಡಿದೆ.

ರಾಜ್ಯದಲ್ಲಿ ತಾಪಮಾನವು ವಾಡಿಕೆಗಿಂತ 3 ರಿಂದ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಕೇವಲ ಬೆಲೆ ಏರಿಕೆಯಷ್ಟೇ ಅಲ್ಲದೆ, ನೀರಿನ ಅಭಾವ ಮತ್ತು ಬಿಸಿಗಾಳಿಯ ಆರ್ಭಟದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮದ್ದೂರು ಮಾರುಕಟ್ಟೆಗೆ ಸಾಮಾನ್ಯವಾಗಿ ಪ್ರತಿದಿನ ಲಕ್ಷಾಂತರ ಎಳನೀರು ಪೂರೈಕೆಯಾಗುತ್ತಿತ್ತು, ಆದರೆ ಈ ಬಾರಿ ಬರಗಾಲ ಹಾಗೂ ‘ನುಸಿ ರೋಗ’ (Pest attack) ಬಾಧೆಯಿಂದಾಗಿ ಇಳುವರಿ ಶೇ. 50 ರಷ್ಟು ಕುಂಠಿತವಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗಿದ್ದು, ಸಣ್ಣ ಗಾತ್ರದ ಎಳನೀರು ಕೂಡ 50-60 ರೂಪಾಯಿಗೆ ಮಾರಾಟವಾಗುತ್ತಿದೆ. ಕೇವಲ ಎಳನೀರು ಮಾತ್ರವಲ್ಲದೆ, ಕಬ್ಬಿನ ಹಾಲು ಮತ್ತು ಮಜ್ಜಿಗೆಯ ದರ ಕೂಡ ಗ್ಲಾಸ್‌ಗೆ 5 ರಿಂದ 10 ರೂಪಾಯಿಯಷ್ಟು ದುಬಾರಿಯಾಗಿದೆ.

ಸಾರ್ವಜನಿಕರಿಗೆ ವೈದ್ಯರ ಸಲಹೆ:
ಬಿಸಿಲು ಹೆಚ್ಚಾಗಿರುವುದರಿಂದ ನಿರ್ಜಲೀಕರಣ (Dehydration) ತಪ್ಪಿಸಲು ಸಾರ್ವಜನಿಕರು ಕನಿಷ್ಠ 3-4 ಲೀಟರ್ ನೀರು ಕುಡಿಯಬೇಕು ಹಾಗೂ ಮಧ್ಯಾಹ್ನ 11 ರಿಂದ ಸಂಜೆ 4 ರವರೆಗೆ ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

The post ಬಿಸಿಲ ಬೇಗೆಗೆ ಜನ ಹೈರಾಣು: ಶತಕದತ್ತ ಎಳನೀರು ಬೆಲೆ, ಗ್ರಾಹಕರಿಗೆ ದರ ಏರಿಕೆ ಬಿಸಿ! appeared first on Good News 24x7.

]]>
ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ? https://www.goodnews24x7.com/will-the-price-of-gold-in-india-soon-reach-rs-20000will-the-price-of-gold-in-india-soon-reach-rs-20000/ Mon, 02 Mar 2026 11:56:08 +0000 https://www.goodnews24x7.com/?p=8591 ಪಶ್ಚಿಮ ಏಷ್ಯಾ ಪ್ರದೇಶವು ಹೊತ್ತಿ ಉರಿಯುತ್ತಿದೆ. ಹಣವಂತರು ತಮ್ಮ ಹಣದ ಸುರಕ್ಷತೆಗೆ ಚಿನ್ನದ ಮೊರೆ ಹೋಗುತ್ತಿದ್ದಾರೆ. ಚಿನ್ನದ ಮೇಲೆ ಹೂಡಿಕೆಗಳು ಹೆಚ್ಚುತ್ತಿವೆ. ಪರಿಣಾಮವಾಗಿ ಚಿನ್ನದ ಬೆಲೆ ಮತ್ತೆ ನಾಗಾಲೋಟ ಮಾಡುವುದು ನಿಶ್ಚಿತವಾಗಿದೆ. ತಜ್ಞರ ಪ್ರಕಾರ ಚಿನ್ನದ ಬೆಲೆ ಸದ್ಯದಲ್ಲೇ ಗ್ರಾಮ್​ಗೆ 20,000…

The post ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ? appeared first on Good News 24x7.

]]>

ಪಶ್ಚಿಮ ಏಷ್ಯಾ ಪ್ರದೇಶವು ಹೊತ್ತಿ ಉರಿಯುತ್ತಿದೆ. ಹಣವಂತರು ತಮ್ಮ ಹಣದ ಸುರಕ್ಷತೆಗೆ ಚಿನ್ನದ ಮೊರೆ ಹೋಗುತ್ತಿದ್ದಾರೆ. ಚಿನ್ನದ ಮೇಲೆ ಹೂಡಿಕೆಗಳು ಹೆಚ್ಚುತ್ತಿವೆ. ಪರಿಣಾಮವಾಗಿ ಚಿನ್ನದ ಬೆಲೆ ಮತ್ತೆ ನಾಗಾಲೋಟ ಮಾಡುವುದು ನಿಶ್ಚಿತವಾಗಿದೆ. ತಜ್ಞರ ಪ್ರಕಾರ ಚಿನ್ನದ ಬೆಲೆ ಸದ್ಯದಲ್ಲೇ ಗ್ರಾಮ್​ಗೆ 20,000 ರೂ ಸಮೀಪ ಮುಟ್ಟಬಹುದು.

ಪಶ್ಚಿಮ ಏಷ್ಯನ್ ಪ್ರದೇಶದಲ್ಲಿ ಯುದ್ಧದ ವಾತಾವರಣ ಹೀಗೇ ಮುಂದುವರಿದರೆ ಚಿನ್ನದ ಬೆಲೆ ಹೈಜಂಪ್ ಮಾಡಿಕೊಂಡು ಸಾಗಬಹುದು ಎಂದು ಪರಿಣಿತರು ಊಹಿಸಿದ್ದಾರೆ. ಈಗಾಗಲೇ ಹೂಡಿಕೆದಾರರು ಗೋಲ್ಡ್ ಇಟಿಎಫ್​ಗಳನ್ನು ಹಣ ಹಾಕುವುದನ್ನು ಹೆಚ್ಚಿಸಿದ್ದಾರೆ. ಇದು ಇನ್ನೂ ಬಹಳಷ್ಟು ಹೆಚ್ಚಬಹುದು. ಡಾಲರ್ ಎದುರು ರುಪಾಯಿ ಮೌಲ್ಯದ ಕುಸಿತದ ಪರಿಣಾಮವೂ ಚಿನ್ನದ ಬೆಲೆ ಮೇಲೆ ಆಗಲಿದೆ.

20,000 ರೂ ಸಮೀಪಕ್ಕೆ ಚಿನ್ನದ ಬೆಲೆ?
ಸ್ಪಾಟ್ ಗೋಲ್ಡ್ ಬೆಲೆ ಒಂದು ಔನ್ಸ್​ಗೆ 5,400 ಯುಎಸ್ ಡಾಲರ್ ಇದೆ. ಅಂದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಗ್ರಾಮ್​ಗೆ 17,434 ರು ಬೆಲೆ ಇದೆ. ಈಗ ಜಾಗತಿಕವಾಗಿ ಭಯದ ವಾತಾವರಣ ತೀವ್ರಗೊಳ್ಳುತ್ತಿದ್ದು, ಇಂಥ ಸಂದರ್ಭಗಳಲ್ಲಿ ಚಿನ್ನದ ಮೇಲೆ ಹೂಡಿಕೆಗಳು ಹೆಚ್ಚುವುದು ಸ್ವಾಭಾವಿಕ. ಈಗ ಅದೇ ಆಗುತ್ತಿರುವುದು. ತಜ್ಞರು ಮಾಡಿರುವ ಅಂದಾಜು ಪ್ರಕಾರ, ಒಂದು ಔನ್ಸ್​ಗೆ 5,400 ಡಾಲರ್ ಇರುವ ಚಿನ್ನದ ಬೆಲೆ ಕೆಲ ದಿನಗಳಲ್ಲಿ 6,000 ಡಾಲರ್ ಮುಟ್ಟಬಹುದು. ಅಂದರೆ, ಒಂದು ಗ್ರಾಮ್ ಚಿನ್ನದ ಬೆಲೆ 19,400 ರೂ ಮುಟ್ಟಬಹುದು.

ವಿವಿಧ ದೇಶಗಳ ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಖರೀದಿ ಹೆಚ್ಚಿಸಲಿವೆ. ಗೋಲ್ಡ್ ಇಟಿಎಫ್​ಗಳ ಮೇಲೆ ಹೂಡಿಕೆ ಹೆಚ್ಚಲಿವೆ. ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಿದೆ. ಈ ಮೂರು ಅಂಶಗಳು ಚಿನ್ನದ ಬೆಲೆಯನ್ನು ಸಿಕ್ಕಾಪಟ್ಟೆ ಏರಿಸಬಹುದು. ಚಿನ್ನ ಮಾತ್ರವಲ್ಲ, ಬೆಳ್ಳಿ ಬೆಲೆಯೂ ಜಂಪ್ ಪಡೆಯಬಹುದು.ಭಾರತದಲ್ಲಿ ಚಿನ್ನದ ಬೆಲೆ ಸೋಮವಾರ ಬೆಳಗ್ಗೆ ಭರ್ಜರಿ ಇಳಿಕೆ ಕಂಡು ನಂತರ ಮತ್ತೆ ಶೇ. 4.37ರಷ್ಟು ಮೇಲೇರಿದೆ. ಅಪರಂಜಿ ಚಿನ್ನದ ಬೆಲೆ 17,000 ರೂ ಸಮೀಪಕ್ಕೆ ಹೋಗಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 296 ರೂ ದಾಟಿದೆ.

ಈ ಹಿನ್ನಲೆಯಲ್ಲಿ ತೈಲ ಬೆಲೆ ಏರಿಕೆ !
ಇರಾನ್ ಯುದ್ಧದ ಪರಿಣಾಮ ತೈಲ ಬೆಲೆ ಏರಿಕೆ ಆಗುವ ಭೀತಿ ಇದೆ. ಈಗಾಗಲೇ ಹೆಚ್ಚಿನ ಮಟ್ಟದಲ್ಲಿರುವ ತೈಲ ಬೆಲೆ ಬ್ಯಾರಲ್​ಗೆ 90 ಡಾಲರ್ ಮಟ್ಟದಲ್ಲೇ ಹೆಚ್ಚಿನ ಕಾಲ ಮುಂದುವರಿದರೆ ಭಾರತದ ಆರ್ಥಿಕತೆಗೆ ತುಸು ಹಿನ್ನಡೆ ತರಬಹುದು.

The post ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ? appeared first on Good News 24x7.

]]>
ರಾಜ್ಯದಲ್ಲಿ ದರ ಏರಿಕೆ ಸುಳಿವು ಕೊಟ್ಟ ಡಿ.ಕೆ.ಸುರೇಶ್ https://www.goodnews24x7.com/rajyadalli-dara-erike-su%e1%b8%b7ivu-ko%e1%b9%ad%e1%b9%ada-%e1%b8%8di-ke-sures-price-state-pricehike-money-dksuresh-governmentproducedcrore-bangalore-electricity-buttermilk-farmers-worke/ Thu, 06 Nov 2025 11:59:20 +0000 https://www.goodnews24x7.com/?p=8049 1 ಕೋಟಿ ಲೀಟರ್ ಹಾಲು ಉತ್ಪತ್ತಿಯಾಗು ತ್ತದೆ. ಆದರೆ 50 ಲಕ್ಷ ಲೀಟರ್ ಹಾಲು ಮಾತ್ರ ಮಾರಾಟ ವಾಗುತ್ತದೆ. ಸರ್ಕಾರ ಹಾಲಿನ ಮೇಲೆ ದರ ಹೆಚ್ಚಳ ಮಾಡಿರುವ 4 ರೂಪಾಯಿಯನ್ನು ರೈತರಿಗೆ ಕೊಡಲು ಸೂಚಿಸಿದ್ದೇವೆ ಎಂದರು. 50 ಲಕ್ಷ ಲೀಟರ್ ಮಾರಾಟ…

The post ರಾಜ್ಯದಲ್ಲಿ ದರ ಏರಿಕೆ ಸುಳಿವು ಕೊಟ್ಟ ಡಿ.ಕೆ.ಸುರೇಶ್ appeared first on Good News 24x7.

]]>

1 ಕೋಟಿ ಲೀಟರ್ ಹಾಲು ಉತ್ಪತ್ತಿಯಾಗು ತ್ತದೆ. ಆದರೆ 50 ಲಕ್ಷ ಲೀಟರ್ ಹಾಲು ಮಾತ್ರ ಮಾರಾಟ ವಾಗುತ್ತದೆ. ಸರ್ಕಾರ ಹಾಲಿನ ಮೇಲೆ ದರ ಹೆಚ್ಚಳ ಮಾಡಿರುವ 4 ರೂಪಾಯಿಯನ್ನು ರೈತರಿಗೆ ಕೊಡಲು ಸೂಚಿಸಿದ್ದೇವೆ ಎಂದರು.

50 ಲಕ್ಷ ಲೀಟರ್ ಮಾರಾಟ ಮಾಡುವುದಕ್ಕೆ ಮಾತ್ರ ನಮಗೆ ಹಣ ಬರುತ್ತಿದೆ. ಉಳಿದ 50 ಲಕ್ಷ ಲೀಟರ್ ಹಾಲಿಗೆ ನಮ್ಮ ಕೈಯಿಂದ ರೈತರಿಗೆಹಣ ಕೊಡುತ್ತಿದ್ದೇವೆ. ಸದ್ಯ ಬೆಣ್ಣೆ ಮತ್ತು ತುಪ್ಪಕ್ಕೆ ಬೇಡಿಕೆ ಇದ್ದು, ಈಗ ನಾವು ತುಪ್ಪಕ್ಕೆ ನಿಗದಿಮಾಡಿರುವ ದರ ಮಾರುಕಟ್ಟೆಗಿಂತ ಕಡಿಮೆಯಿದೆ. ಆದರೆ ಗುಣಮಟ್ಟದಲ್ಲಿ ನಾವೇ ಮುಂಚೂಣಿಯಲ್ಲಿದ್ದೇವೆ ಎಂದು ಡಿ.ಕೆ.ಸುರೇಶ್ ಹೇಳಿದರು.

ರಾಜ್ಯದಲ್ಲಿ ಬೆಲೆ ಏರಿಕೆಯ ಸರಮಾಲೆ

  • ಬಸ್ ದರ ಶೇ.15ರಷ್ಟು ಹೆಚ್ಚಳ
  • ಡೀಸೆಲ್ ದರ ಪ್ರತಿ ಲೀಗೆ 2 ರೂ. ಹೆಚ್ಚಳ
  • ವಿದ್ಯುತ್ ದರದೊಂದಿಗೆ ಸೆಸ್ ಹೆಚ್ಚಳ
  • ಆಸ್ತಿ ಮಾರ್ಗಸೂಚಿ ಮೌಲ್ಯ ಶೇ.15ರಿಂದ 30ರಷ್ಟರವರೆಗೆ ಹೆಚ್ಚಳ
  • ಕೈಗಾರಿಕಾ ಬಳಕೆಗಾಗಿ ವಿದ್ಯುತ್, ನೀರು, ಇಂಧನದ ದರಗಳು ಹೆಚ್ಚಳ.
  • ಖಾಸಗಿ ಪದವಿ ಕಾಲೇಜುಗಳಲ್ಲಿ ಶೇ.10ರಷ್ಟು ಶುಲ್ಕ ಏರಿಕೆ.
  • ರೂ. 25 ಲಕ್ಷ ಮೀರಿದ ವಿದ್ಯುತ್ ವಾಹನಗಳಿಗೆ ಶೇ.10ರಷ್ಟು ಲೈಫ್ರೆಮ್ ಟ್ಯಾಕ್ಸ್.
  • ಬೆಂಗಳೂರು ಮೆಟ್ರೋ ಪ್ರಯಾಣ ದರ ಶೇ.71ರಷ್ಟು ಏರಿಕೆ.
  • ಹಾಲು, ಮೊಸರು, ಮಜ್ಜಿಗೆ ವರಗಳಲ್ಲಿ ರೂ.4ರಷ್ಟು ಏರಿಕೆ.
  • ಒಟಿಟಿ ಸೇವೆಗಳು, ಚಿತ್ರಮಂದಿರ ಟಿಕೆಟ್‌ಗಳಿಗೆ ಶೇ.2ರಷ್ಟು ಸೆಸ್.
  • ವಾಸಸ್ಥಳ ಮತ್ತು ವ್ಯಾಪಾರಿಕ ಪ್ರದೇಶಗಳಲ್ಲಿ ಪಾರ್ಕಿಂಗ್ ಶುಲ್ಕ ಏರಿಕೆ.
  • ಕ್ವಾರಿ ಚಾರ್ಜ್ ಹೆಚ್ಚಳದಿಂದ ಕಟ್ಟಡ ನಿರ್ಮಾಣದ ವೆಚ್ಚ ಗಗನಕ್ಕೆ.
  • ಬಾಡಿಗೆ ದಾಖಲೆಗಳ ಸ್ಟಾಂಪ್ ಡ್ಯೂಟಿ ಶೇ.200ರಿಂದ 500ರಷ್ಟು ಹೆಚ್ಚಳ.
  • ಬೆಂಗಳೂರು ನಗರದಲ್ಲಿ ಆಸ್ತಿ ತೆರಿಗೆಯೊಂದಿಗೆ ತ್ಯಾಜ್ಯ ಶುಲ್ಕ ಸೇರ್ಪಡೆ.
  • ಹೊಸ ವಾಹನ ನೋಂದಣಿಗೆ ಹೆಚ್ಚುವರಿ ಶುಲ್ಕ
  • ಮದ್ಯದ ದರ ಹೆಚ್ಚಳ
  • ಆಹಾರ ಪದಾರ್ಥಗಳ ಬೆಲೆ ಏರಿಕೆ
  • ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ
  • ಆಸ್ಪತ್ರೆಗಳಲ್ಲಿ ಎಕ್ಸರೇ, ಔಟ್ ಪೇಸೆಂಟ್ ಶುಲ್ಕ ಶೇ.50ರಿಂದ 100ರಷ್ಟು ಹೆಚ್ಚಳ
  • ಗಿಗ್ ವರ್ಕರ್ಸ್ ನಿಧಿಗೆ ಕಂಪನಿಗಳಿಂದ ಶೇ.5ರಷ್ಟು ಸೆಸ್.

The post ರಾಜ್ಯದಲ್ಲಿ ದರ ಏರಿಕೆ ಸುಳಿವು ಕೊಟ್ಟ ಡಿ.ಕೆ.ಸುರೇಶ್ appeared first on Good News 24x7.

]]>