problem Archives - Good News 24x7 https://www.goodnews24x7.com/tag/problem/ Kannada Sun, 15 Jun 2025 12:00:38 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg problem Archives - Good News 24x7 https://www.goodnews24x7.com/tag/problem/ 32 32 ಮುಂಗಾರು ಮತ್ತೆ ಚುರುಕು: ದಕ್ಷಿಣ ಕನ್ನಡದಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ https://www.goodnews24x7.com/monsoon-is-back-agricultural-activities-in-dakshina-kannada/ Sun, 15 Jun 2025 12:00:38 +0000 https://www.goodnews24x7.com/?p=4432 ಬೆಳ್ತಂಗಡಿ: ಒಂದು ಹಂತದ ಅಬ್ಬರದ ಮಳೆ ಬಳಿಕ ಸ್ವಲ್ಪ ದಿನಗಳ ಬ್ರೇಕ್ ನಂತರ ಮತ್ತೆ ವರ್ಷಧಾರೆ ಶುರುವಾಗಿದ್ದು, ಎಲ್ಲೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮೇ ತಿಂಗಳಲ್ಲಿ ಈ ಬಾರಿ ಉತ್ತಮ ಮಳೆ ಸುರಿದುದರಿಂದ ಕೃಷಿ ನೀರಿನ ಸಮಸ್ಯೆ ದೂರವಾಗಿತ್ತು. ಅಲ್ಲದೆ ಕೃಷಿಕರು…

The post ಮುಂಗಾರು ಮತ್ತೆ ಚುರುಕು: ದಕ್ಷಿಣ ಕನ್ನಡದಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ appeared first on Good News 24x7.

]]>

ಬೆಳ್ತಂಗಡಿ: ಒಂದು ಹಂತದ ಅಬ್ಬರದ ಮಳೆ ಬಳಿಕ ಸ್ವಲ್ಪ ದಿನಗಳ ಬ್ರೇಕ್ ನಂತರ ಮತ್ತೆ ವರ್ಷಧಾರೆ ಶುರುವಾಗಿದ್ದು, ಎಲ್ಲೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಮೇ ತಿಂಗಳಲ್ಲಿ ಈ ಬಾರಿ ಉತ್ತಮ ಮಳೆ ಸುರಿದುದರಿಂದ ಕೃಷಿ ನೀರಿನ ಸಮಸ್ಯೆ ದೂರವಾಗಿತ್ತು. ಅಲ್ಲದೆ ಕೃಷಿಕರು ತಮ್ಮ ತೋಟ, ಗದ್ದೆಗಳ ಕೆಲಸವನ್ನು ಬೇಗನೆ ಆರಂಭಿಸಿದ್ದರು. ಆದರೆ ಜೂನ್ ಆರಂಭವಾಗುತ್ತಿದ್ದಂತೆ ಸುಮಾರು 10-12 ದಿನಗಳ ಕಾಲ ಮಳೆ ದೂರವಾಯಿತು. ಈ ಸಮಯ ಕೃಷಿ ಕೆಲಸಗಳು ಕೊಂಚ ಕುಂಠಿತಗೊಂಡವು. ಇದೀಗ 4 ದಿನಗಳಿಂದ ಮಳೆ ಪ್ರಾರಂಭವಾಗಿದ್ದು ಗದ್ದೆಗಳಲ್ಲಿ ನೀರು ತುಂಬಿದೆ. ಇದು ಏಣೇಲು ಭತ್ತದ ಗದ್ದೆಗಳಿಗೆ ಉತ್ತಮವಾಗಿದ್ದು, ಗದ್ದೆಗಳ ಕೆಲಸಗಳು ಭರದಿಂದ ಸಾಗುತ್ತಿದ್ದು ನೇಜಿ ನಾಟಿಯ ತಯಾರಿ ನಡೆದಿದೆ.

ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರ ಕೊರತೆ ಇರುವುದರಿಂದ ಹೆಚ್ಚಿನ ಕೃಷಿಕರು ಅಗತ್ಯ ಕೆಲಸಗಳಿಗೆ ಯಂತ್ರೋಪಕರಣಗಳನ್ನು ಬಳಸುತ್ತಿದ್ದಾರೆ. ಇದು ಕಡಿಮೆ ಖರ್ಚು ಹಾಗೂ ಕೆಲಸಗಳು ವೇಗವಾಗಿ ಸಾಗಲು ಸಹಕಾರಿಯಾಗಿದೆ. ಗದ್ದೆಗಳನ್ನು ಹದ ಮಾಡಲು ಟಿಲ್ಲರ್, ಟ್ರ್ಯಾಕ್ಟರ್ಗಳಿಗೆ ಬೇಡಿಕೆ ಹೆಚ್ಚಿದೆ. ಇದರ ಜತೆ ನೇಜಿ, ಬಿತ್ತನೆ ಬೀಜದ ಬೇಡಿಕೆ ಅಧಿಕಗೊಂಡಿದೆ. ಗದ್ದೆಗಳ ಬದು ಕಟ್ಟುವುದು, ಸಣ್ಣ ಪ್ರಮಾಣದ ಕಣಿಗಳನ್ನು ನಿರ್ಮಿಸುವುದು, ನೀರು ನಿಲ್ಲಿಸುವ, ಅಧಿಕ ನೀರನ್ನು ಹೊರ ಬಿಡುವ ಕೆಲಸಗಳನ್ನು ಕಾರ್ಮಿಕರಿಂದ ಮಾಡಿಸಲಾಗುತ್ತಿದೆ.

ಬೆಳ್ತಂಗಡಿ ತಾಲೂಕಿನಲ್ಲಿ 1600 ಹೆಕ್ಟೇರ್ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಕಳೆದ 1580 ಹೆಕ್ಟೇರ್ನಲ್ಲಿ ಬಿತ್ತನೆ ಮಾಡಲಾಗಿತ್ತು. ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ, ಕೊಕ್ಕಡ ವೇಣೂರು ಹೋಬಳಿಗಳಲ್ಲಿ ಎಂಒ-(4)- 40ಕ್ವಿಂ., ಬಿಳಿಜಯ-16ಕ್ವಿಂ., ಜ್ಯೋತಿ-12ಕ್ವಿಂ. ಬಿತ್ತನೆ ಬೀಜ ಸಹಾಯಧನದಲ್ಲಿ ಲಭ್ಯವಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಸಿಂಪಡಣೆಗೆ ಅನುಕೂಲ
ಜೂನ್ ತಿಂಗಳಲ್ಲಿ 10 ದಿನ ಮಳೆ ಬಿಟ್ಟು ಬಿಸಿಲಿನ ವಾತಾವರಣ ಮೂಡಿದ್ದು, ಅಡಕೆ ತೋಟಗಳಿಗೆ ಔಷಧ ಸಿಂಪಡಿಸುವ ಕೃಷಿಕರಿಗೆ ಹೆಚ್ಚಿನ ಅನುಕೂಲ ನೀಡಿತ್ತು. ಮೇ ತಿಂಗಳ ಕೊನೆಯ ವಾರದಲ್ಲಿ ವಿಪರೀತ ಮಳೆಯಿಂದ ಔಷಧ ಸಿಂಪಡಣೆಗೆ ಹೆಣಗಾಡುತ್ತಿದ್ದ ಅಡಕೆ ಕೃಷಿಕರಿಗೆ ಜೂನ್ ಮೊದಲ ವಾರ ಮಳೆಬಿಟ್ಟದ್ದು ಅನುಕೂಲವಾಯಿತು.

ಅರ್ಧಕ್ಕಿಂತ ಅಧಿಕ ತೋಟಗಳಲ್ಲಿ ಈಗಾಗಲೇ ಪ್ರಥಮ ಹಂತದ ಔಷಧ ಸಿಂಪಡಣೆ ಪೂರ್ಣಗೊಂಡಿದೆ. ಈ ಬಾರಿ ಉತ್ತಮ ಬೇಸಿಗೆ ಮಳೆಯಿಂದ ಅಡಕೆ ಬೇಗನೆ ಹಣ್ಣಾಗುವ ನಿರೀಕ್ಷೆ ಇದೆ. ನಳ್ಳಿ ಉದುರುವಿಕೆ ಕಡಿಮೆ ಇದ್ಧ ಕಾರಣ ಹಾಗೂ ನೀರಿನ ಕೊರತೆ ಕಂಡು ಬರದುದರಿಂದ ಹೆಚ್ಚಿನ ತೋಟಗಳಲ್ಲಿಉತ್ತಮ ಫಸಲು ಕಂಡು ಬರುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಕೃಷಿಕರು ಆಸಕ್ತರಾಗಿದ್ದಾರೆ. ನಾವು ಪ್ರತಿ ವರ್ಷ ನಮ್ಮ ಹಿರಿಯರಿಂದ ಬಂದ ಸುಮಾರು ಐದು ಎಕರೆ ಪ್ರದೇಶದಲ್ಲಿ ವರ್ಷಕ್ಕೆ ಎರಡು ಬಾರಿ ಗದ್ದೆ ಬೇಸಾಯ ಮಾಡುತ್ತಿದ್ದೇವೆ. ಏಣೇಲು ಬಿತ್ತನೆಯ ಪೂರ್ವ ತಯಾರಿ ಸಂಪೂರ್ಣಗೊಂಡಿದೆ ಎಂದಿದ್ದಾರೆ ರಮಾನಂದ ಶರ್ಮ, ಗದ್ದೆ ಕೃಷಿಕ, ಗುರಿಪಳ್ಳ, ನಡ.

ತಾಲೂಕಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಅಗತ್ಯ ಕೀಟನಾಶಕಗಳ ದಾಸ್ತಾನು ಸಾಕಷ್ಟು ಇದೆ. ಸಹಾಯಧನದಲ್ಲಿ ಬಿತ್ತನೆ ಬೀಜ ಲಭ್ಯವಿದ್ದು, ಆಸಕ್ತ ಕೃಷಿಕರು ಕಚೇರಿ ಸಮಯದಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದಿದ್ದಾರೆ ವೀರಭದ್ರಪ್ಪ ಎ.ಡಿ., ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಬೆಳ್ತಂಗಡಿ.

The post ಮುಂಗಾರು ಮತ್ತೆ ಚುರುಕು: ದಕ್ಷಿಣ ಕನ್ನಡದಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ appeared first on Good News 24x7.

]]>
ಬಾಲ್ಯವಿವಾಹವಾಯ್ತು, ಈಗ ಆರೋಗ್ಯ-ಕುಟುಂಬ ಅಭಿವೃದ್ಧಿ ಇಲಾಖೆಗೆ ಮತ್ತೊಂದು ಸಮಸ್ಯೆ..ಬಾಲ ಗರ್ಭಿಣಿಯರು! https://www.goodnews24x7.com/child-marriage-has-become-a-problem-now-the-health-and-family-development-department-has-another-problem-pregnant-children/ Sun, 15 Jun 2025 10:34:24 +0000 https://www.goodnews24x7.com/?p=4434 ಮೈಸೂರು :- ಬಾಲ್ಯವಿವಾಹ ಕಾನೂನುಬಾಹಿರ, ಬಾಲ್ಯವಿವಾಹ ಮಾಡಿದ ಬಾಲಕಿಯ ಪೋಷಕರು, ಬಾಲಕಿಯನ್ನು ವಿವಾಹವಾದ ವ್ಯಕ್ತಿ, ಆತನ ಪೋಷಕರು ಹಾಗೂ ಸಹಕರಿಸಿದ ಎಲ್ಲರಿಗೂ ಈಗ ಜೈಲು ಶಿಕ್ಷೆ ಗ್ಯಾರಂಟಿ. ಬಾಲ್ಯವಿವಾಹ ತಡೆಯಲು ಸರ್ಕಾ ರವು ಇಂತಹ ಕಟ್ಟುನಿಟ್ಟಿನ ಕಾನೂನನ್ನು ಜಾರಿಗೊಳಿಸಿದೆ. ಅಲ್ಲದೆ ಬಾಲ್ಯವಿವಾಹ…

The post ಬಾಲ್ಯವಿವಾಹವಾಯ್ತು, ಈಗ ಆರೋಗ್ಯ-ಕುಟುಂಬ ಅಭಿವೃದ್ಧಿ ಇಲಾಖೆಗೆ ಮತ್ತೊಂದು ಸಮಸ್ಯೆ..ಬಾಲ ಗರ್ಭಿಣಿಯರು! appeared first on Good News 24x7.

]]>

ಮೈಸೂರು :- ಬಾಲ್ಯವಿವಾಹ ಕಾನೂನುಬಾಹಿರ, ಬಾಲ್ಯವಿವಾಹ ಮಾಡಿದ ಬಾಲಕಿಯ ಪೋಷಕರು, ಬಾಲಕಿಯನ್ನು ವಿವಾಹವಾದ ವ್ಯಕ್ತಿ, ಆತನ ಪೋಷಕರು ಹಾಗೂ ಸಹಕರಿಸಿದ ಎಲ್ಲರಿಗೂ ಈಗ ಜೈಲು ಶಿಕ್ಷೆ ಗ್ಯಾರಂಟಿ.

ಬಾಲ್ಯವಿವಾಹ ತಡೆಯಲು ಸರ್ಕಾ ರವು ಇಂತಹ ಕಟ್ಟುನಿಟ್ಟಿನ ಕಾನೂನನ್ನು ಜಾರಿಗೊಳಿಸಿದೆ. ಅಲ್ಲದೆ ಬಾಲ್ಯವಿವಾಹ ತಡೆ ಬಗ್ಗೆ ಸತತವಾಗಿ ಜಾಗೃತಿ ಕಾರ್ಯ ಕ್ರಮಗಳನ್ನು ನಡೆಸುತ್ತಿದೆ. ಆದರೂ ಬಾಲ್ಯವಿವಾಹಗಳ ಸಂಖ್ಯೆಯಂತೂ ಕಡಿ ‘ ಗರ್ಭಿಣಿ’ ಪ್ರಕರಣಗಳೇ ಸಾಕ್ಷಿ.
ಮೈಸೂರು ಜಿಲ್ಲೆಯಲ್ಲಿ 1603 ಬಾಲ ಗರ್ಭಿಣಿಯರು ಪತ್ತೆಯಾಗಿರುವುದು ತೀವ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

 

 

 

 

 

 

 

 

 

ಮೈಸೂರು ಜಿಲ್ಲೆಯಲ್ಲಿ 14ರಿಂದ 15 ವರ್ಷಕ್ಕೊಳಪಟ್ಟ ಐವರು. 15ರಿಂದ 16 ವರ್ಷಕ್ಕೊಳಪಟ್ಟ 15, 16ರಿಂದ 17 ವರ್ಷಕ್ಕೊಳಪಟ್ಟ 23, 17ರಿಂದ 18 ವರ್ಷಕ್ಕೊಳಪಟ್ಟ 124 ಮತ್ತು 18 ರಿಂದ 19 ವರ್ಷಕ್ಕೊಳಪಟ್ಟ 1436 ಸೇರಿ ದಂತೆ ಒಟ್ಟು 1603 ಬಾಲಗರ್ಭಿಣಿ ಯರು ಇರುವುದು ಸಂತಾನೋತ್ಪತ್ತಿ ಹಾಗೂ ಮಕ್ಕಳ ಆರೋಗ್ಯ ಅಂಕಿ-ಅಂಶ ತಿಳಿಸಿದೆ.

ಹಾಸನ ಜಿಲ್ಲೆಯಲ್ಲಿ 14ರಿಂದ 15, ವರ್ಷಕ್ಕೊಳಪಟ್ಟ ಇಬ್ಬರು, 15ರಿಂದ 16 ವರ್ಷಕ್ಕೊಳಪಟ್ಟ 7, 16ರಿಂದ 17 ವರ್ಷ ಕ್ಕೊಳಪಟ್ಟ 18, 17ರಿಂದ 18 ವರ್ಷಕ್ಕೊಳ ಪಟ್ಟ 136, 18ರಿಂದ 19 ವರ್ಷಕ್ಕೊಳಪಟ್ಟ 924 ಸೇರಿದಂತೆ 1087 ಬಾಲಗರ್ಭಿಣಿ ಯರಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ 15ರಿಂದ 16 ವರ್ಷಕ್ಕೊಳಪಟ್ಟ ನಾಲ್ವರು, 16ರಿಂದ 17 ವರ್ಷಕ್ಕೊಳ ಪಟ್ಟ 23, 17ರಿಂದ 18 ವರ್ಷಕ್ಕೊಳಪಟ್ಟ 107, 18ರಿಂದ 19 ವರ್ಷಕ್ಕೊಳಪಟ್ಟ 814 ಸೇರಿದಂತೆ 948 ಬಾಲಗರ್ಭಿಣಿಯರಿದ್ದಾರೆ.

ಕೊಡಗು ಜಿಲ್ಲೆಯಲ್ಲಿ 14ರಿಂದ 15 ವರ್ಷ ಕ್ಕೊಳಪಟ್ಟ ಓರ್ವ, 15ರಿಂದ 16 ವರ್ಷ ಕ್ಕೊಳಪಟ್ಟ 11, 16ರಿಂದ 17 ವರ್ಷಕ್ಕೊಳ ಪಟ್ಟ 10, 17ರಿಂದ 18 ವರ್ಷಕ್ಕೊಳಪಟ್ಟ 79, 18ರಿಂದ 19 ವರ್ಷಕ್ಕೊಳಪಟ್ಟ 318 ಸೇರಿದಂತೆ 424 ಬಾಲಗರ್ಭಿಣಿಯರಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ 14 ರಿಂದ 15 ವರ್ಷಕ್ಕೊಳಪಟ್ಟ ಓರ್ವ, 15ರಿಂದ 16 ವರ್ಷಕ್ಕೊಳಪಟ್ಟ ಓರ್ವ, 16ರಿಂದ 17 ವರ್ಷಕ್ಕೊಳ ಪಟ್ಟ 9, 17ರಿಂದ 18 ವರ್ಷಕ್ಕೊಳಪಟ್ಟ 25, 18ರಿಂದ 19 ವರ್ಷಕ್ಕೊಳಪಟ್ಟ 380 ಸೇರಿದಂತೆ 416 ಬಾಲ ಗರ್ಭಿಣಿಯರಿದ್ದಾರೆ.

 

 

 

 

 

 

 

 

ಬಾಲಕಿಯರು ಗರ್ಭಿಣಿಯಾದಾಗ ಅನ್ಯಮಾರ್ಗವಿಲ್ಲದೆ ಆಸ್ಪತ್ರೆಗಳಿಗೆ ಬರುವು ದರಿಂದ ಆರೋಗ್ಯ ಇಲಾಖೆ ಗಮನಕ್ಕೆ ಈ ಪ್ರಕರಣಗಳು ಸಹಜವಾಗಿ ಬರುತ್ತಿವೆ. ಸದರಿ ಇಲಾಖೆಯು ಬಾಲಗರ್ಭಿಣಿ ಯರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಮಾಹಿತಿಯನ್ನಷ್ಟೇ ಪೊಲೀಸ್ ಇಲಾಖೆಗೆ ರವಾನಿಸುತ್ತದೆ. ಆದರೆ ಅಪ್ರಾಪ್ತ ವಯಸ್ಸಿ ನಲ್ಲಿ ಗರ್ಭ ಧರಿಸುವ ಬಾಲಕಿಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆಯು ಬಾಲಗರ್ಭಿಣಿಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅವರಿಗೆ ಹೆರಿಗೆಯಾಗುವವರೆಗೂ ಅಗತ್ಯವಿರುವ ಎಲ್ಲಾ ರೀತಿಯ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲೆಯ ಯಾವುದೇ ಆಸ್ಪತ್ರೆಗೆ ಬಾಲಗರ್ಭಿಣಿಯರು ಬಂದರೆ, ಅವರನ್ನು ಮಕ್ಕಳ ಆಸ್ಪತ್ರೆಯಾದ ಚೆಲುವಾಂಬ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಜೊತೆಗೆ ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ಮಾಹಿತಿ ನೀಡಲಾಗುತ್ತದೆ.

 

 

 

 

 

 

 

 

 

ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳು ಬಾಲ ಗರ್ಭಿಣಿಯರಿಂದ ಮಾಹಿತಿ ಪಡೆಯುವು ದಲ್ಲದೇ ಮುಂದಿನ ಕ್ರಮ ವಹಿಸುತ್ತಾರೆ. ಹೆಚ್.ಡಿ.ಕೋಟೆ, ಹುಣಸೂರು ಮುಂತಾದ ತಾಲೂಕುಗಳಲ್ಲಿರುವ ಹಾಡಿಗಳಲ್ಲಿ ಹೆಚ್ಚಿನ ಬಾಲ್ಯವಿವಾಹಗಳು ನಡೆಯುತ್ತವೆ. ಅವರ ಸಂಪ್ರದಾಯದಂತೆ ಚಿಕ್ಕ ವಯಸ್ಸಿನಲ್ಲೇ ರಕ್ತ ಸಂಬಂಧದಲ್ಲೇ ಮದುವೆ ಮಾಡು ವುದು ವಾಡಿಕೆಯಾಗಿ ಬಂದಿದೆ. ಬಾಲ್ಯ ವಿವಾಹ ನಡೆಯುವುದು ಮುಂಚಿತವಾಗಿ ಗೊತ್ತಾದರೆ ಸಂಬಂಧಪಟ್ಟ ಇಲಾಖೆ ಅದನ್ನು ತಡೆಯುತ್ತದೆ. ಆದರೆ ಬಹುತೇಕ ಪ್ರಕರಣಗಳು ಗೊತ್ತಾಗುವುದೇ ಇಲ್ಲ. ಬಾಲಕಿಯರು ಗರ್ಭಿಣಿಯರಾಗಿ ಆಸ್ಪತ್ರೆಗೆ ಬಂದಾಗಲಷ್ಟೇ ಗೊತ್ತಾಗುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

 

 

 

 

 

 

 

 

 

ಆರೋಗ್ಯ ಇಲಾಖೆಯು ಬಾಲ ಗರ್ಭಿಣಿಯರಿಗೆ ಅತ್ಯಾವಶ್ಯಕ ಆರೋಗ್ಯ ಸೇವೆ ನೀಡುವುದರತ್ತ ವಿಶೇಷ ಗಮನ ಹರಿಸುತ್ತದೆ. ಕೆಲವು ಹಳ್ಳಿಗಳಲ್ಲಿ ಬಾಲ್ಯ ವಿವಾಹ ನಡೆಯುವುದು ಗೊತ್ತಾದರೂ ಯಾರೂ ಸಂಬಂಧಪಟ್ಟ ಇಲಾಖೆಗೆ ತಿಳಿಸುವುದಿಲ್ಲ. ಬಾಲಗರ್ಭಿಣಿಯರು ಆಸ್ಪತ್ರೆಗೆ ಬಂದಾಗ ಆರೋಗ್ಯ ಇಲಾಖೆ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸು ವುದೇ ಪ್ರಥಮ ಮಾಹಿತಿಯಾಗಿರುತ್ತದೆ ಎಂದು ತಿಳಿಸಿದ ಈ ಅಧಿಕಾರಿಯು, ಬಾಲ್ಯ ವಿವಾಹವಾಗಿ ಬಾಲಕಿ 20 ವರ್ಷ ಆಗು ವವರೆಗೂ ಗರ್ಭಿಣಿಯಾಗದಿದ್ದರೆ ಆರೋಗ್ಯ ಇಲಾಖೆ ಗಮನಕ್ಕೂ ಕೂಡ ಬಾಲ್ಯ ವಿವಾಹದ ಬಗ್ಗೆ ಮಾಹಿತಿ ಲಭ್ಯವಾಗುವುದಿಲ್ಲ. ಕೆಲವು ವಿದ್ಯಾವಂತ ಹಾಗೂ ಶ್ರೀಮಂತ ಮನೆತನ ಗಳಲ್ಲೇ ಬಾಲ್ಯವಿವಾಹಗಳು ನಡೆಯುತ್ತಿವೆ ಎಂದರು. ಈ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ತಡೆಯುವ ಸಲುವಾಗಿ ಆರೋಗ್ಯ ಇಲಾಖೆ ಮಾತ್ರವಲ್ಲದೇ, ಪೊಲೀಸ್ ಇಲಾಖೆ ಹಾಗೂ ನ್ಯಾಯಾಂಗ ಇಲಾಖೆಯೂ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸು ತ್ತಿದ್ದರೂ ಬಾಲ್ಯ ವಿವಾಹ ನಡೆಯುತ್ತಲೇ ಇದೆ ಎಂದು ಅವರು ಹೇಳಿದರು.

The post ಬಾಲ್ಯವಿವಾಹವಾಯ್ತು, ಈಗ ಆರೋಗ್ಯ-ಕುಟುಂಬ ಅಭಿವೃದ್ಧಿ ಇಲಾಖೆಗೆ ಮತ್ತೊಂದು ಸಮಸ್ಯೆ..ಬಾಲ ಗರ್ಭಿಣಿಯರು! appeared first on Good News 24x7.

]]>
ಅವೈಜ್ಞಾನಿಕವಾಗಿ ಚರಂಡಿ ಕಾಮಗಾರಿ, ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ಸ್ಥಳೀಯರು. https://www.goodnews24x7.com/%e0%b2%85%e0%b2%b5%e0%b3%88%e0%b2%9c%e0%b3%8d%e0%b2%9e%e0%b2%be%e0%b2%a8%e0%b2%bf%e0%b2%95%e0%b2%b5%e0%b2%be%e0%b2%97%e0%b2%bf-%e0%b2%9a%e0%b2%b0%e0%b2%82%e0%b2%a1%e0%b2%bf-%e0%b2%95%e0%b2%be%e0%b2%ae/ Wed, 02 Apr 2025 11:09:49 +0000 https://www.goodnews24x7.com/?p=2995 ಹುಣಸೂರು :- ಅವೈಜ್ಞಾನಿಕವಾಗಿ ಚರಂಡಿ ಕಾಮಗಾರಿ ನಡೆಸಿದ ಹಿನ್ನಲೆ ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿರುವ ಘಟನೆ ಹುಣಸೂರು ಬಡಾವಣೆ ನಿವಾಸಿಗಳನ್ನ ಹೈರಾಣುಗೊಳಿಸಿದೆ. ಕಾಮಗಾರಿ ನಡೆಸಿ ಕೈಕಟ್ಟಿ ಕುಳಿತ ಅಧಿಕಾರಿಗಳಿಗೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.ಕೂಡಲೇ ಅವ್ಯವಸ್ಥೆಗೆ ಪರಿಹಾರ ಕಲ್ಪಿಸದಿದ್ದಲ್ಲಿ ಪ್ರತಿಭಟನೆ ದಾರಿ ಹಿಡಿಯಬೇಕಾಗುತ್ತದೆಂದು…

The post ಅವೈಜ್ಞಾನಿಕವಾಗಿ ಚರಂಡಿ ಕಾಮಗಾರಿ, ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ಸ್ಥಳೀಯರು. appeared first on Good News 24x7.

]]>

ಹುಣಸೂರು :- ಅವೈಜ್ಞಾನಿಕವಾಗಿ ಚರಂಡಿ ಕಾಮಗಾರಿ ನಡೆಸಿದ ಹಿನ್ನಲೆ ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿರುವ ಘಟನೆ ಹುಣಸೂರು ಬಡಾವಣೆ ನಿವಾಸಿಗಳನ್ನ ಹೈರಾಣುಗೊಳಿಸಿದೆ. ಕಾಮಗಾರಿ ನಡೆಸಿ ಕೈಕಟ್ಟಿ ಕುಳಿತ ಅಧಿಕಾರಿಗಳಿಗೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.ಕೂಡಲೇ ಅವ್ಯವಸ್ಥೆಗೆ ಪರಿಹಾರ ಕಲ್ಪಿಸದಿದ್ದಲ್ಲಿ ಪ್ರತಿಭಟನೆ ದಾರಿ ಹಿಡಿಯಬೇಕಾಗುತ್ತದೆಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.ಹುಣಸೂರು ತಾಲೂಕು ಮಂಜುನಾಥ ಬಡಾವಣೆ ವಾರ್ಡ್ 28 ರಲ್ಲಿನ ನಿವಾಸಿಗಳು ಚರಂಡಿ ನೀರಿನ ಅವ್ಯವಸ್ಥೆಯಿಂದಾಗಿ ಅಧಿಕಾರಿಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.ಇತ್ತೀಚೆಗೆ ನಡೆಸಿದ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿ ಮಾಡಿರುವ ಹಿನ್ನಲೆ ನೀರು ಸರಾಗವಾಗಿ ಹರಿದುಹೋಗದೆ ಮನೆಗಳಿಗೇ ನುಗ್ಗುತ್ತಿದೆ.ಲಕ್ಷಾಂತರ ವೆಚ್ಚ ಮಾಡಿ ಮಾಡಿದ ಕಾಮಗಾರಿ ಉಪಯೋಗಕ್ಕೆ ಬಾರದಂತಾಗಿದೆ.ಶೌಚಾಲಯ ನೀರು ಹರಿದುಹೋಗಲೆಂದು ಚರಂಡಿ ನಿರ್ಮಾಣ ಮಾಡಲಾಗಿದೆ.ಆದ್ರೆ ಚರಂಡಿಗೆ ಸೇರಿದ ನೀರು ಮುಂದೆ ಹರಿದುಹೋಗದೆ ತಟಸ್ಥವಾಗಿ ನಿಂತಿದೆ.ಅಲ್ಲದೆ ಮನೆಗೇ ವಾಪಸ್ ನುಗ್ಗುತ್ತಿದೆ.

ಇದರಿಂದಾಗಿ ಸಮಸ್ಯೆ ಮತ್ತಷ್ಟು ಉಲ್ಭಣವಾಗಿದೆ.ಈಗಾಗಲೇ ಸಮಸ್ಯಗೆ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಸಾಕಷ್ಟು ಬಾರಿ ದೂರು ನೀಡಿದ್ದಾರೆ.ಹೀಗಿದ್ದೂ ಕ್ಯಾರೆ ಎನ್ನದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.ಕೂಡಲೇ ಚರಂಡಿಯನ್ನ ವೈಜ್ಞಾನಿಕವಾಗಿ ನಿರ್ಮಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದಲ್ಲಿ ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ…

The post ಅವೈಜ್ಞಾನಿಕವಾಗಿ ಚರಂಡಿ ಕಾಮಗಾರಿ, ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ಸ್ಥಳೀಯರು. appeared first on Good News 24x7.

]]>