project Archives - Good News 24x7 https://www.goodnews24x7.com/tag/project/ Kannada Wed, 20 Aug 2025 10:11:10 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg project Archives - Good News 24x7 https://www.goodnews24x7.com/tag/project/ 32 32 ರಜನಿಕಾಂತ್, ಕಮಲ್ ಹಾಸನ್.. 4 ದಶಕದ ನಂತರ ಒಂದೇ ತೆರೆಯಲ್ಲಿ…..! https://www.goodnews24x7.com/rajinikanth-kamal-haasan-on-the-same-screen-after-4-decades/ Wed, 20 Aug 2025 10:11:10 +0000 https://www.goodnews24x7.com/?p=6401 ದಕ್ಷಿಣ ಭಾರತದ ಸೂಪರ್ ಸ್ಟಾರ್​ಗಳಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರು 46 ವರ್ಷಗಳ ನಂತರ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಲೆಜೆಂಡರಿ ಹೀರೋಗಳು ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು ಈ ಸಿನಿಮಾವನ್ನು ಲೋಕೇಶ್ ಕನಕರಾಜ್ ಅವರು ನಿರ್ದೇಶನನ ಮಾಡಲಿದ್ದಾರೆ…

The post ರಜನಿಕಾಂತ್, ಕಮಲ್ ಹಾಸನ್.. 4 ದಶಕದ ನಂತರ ಒಂದೇ ತೆರೆಯಲ್ಲಿ…..! appeared first on Good News 24x7.

]]>

ದಕ್ಷಿಣ ಭಾರತದ ಸೂಪರ್ ಸ್ಟಾರ್​ಗಳಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರು 46 ವರ್ಷಗಳ ನಂತರ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಲೆಜೆಂಡರಿ ಹೀರೋಗಳು ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು ಈ ಸಿನಿಮಾವನ್ನು ಲೋಕೇಶ್ ಕನಕರಾಜ್ ಅವರು ನಿರ್ದೇಶನನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಉಳಗನಾಯಗನ್ ಕಮಲ್ ಹಾಸನ್ ಅವರಿಗೆ ಈಗಾಗಲೇ 70 ವರ್ಷಗಳು ದಾಟಿದ್ದರೂ ಗ್ಯಾಂಗ್​ಸ್ಟರ್​ಗಳಾಗಿ ಸಿನಿಮಾದಲ್ಲಿ ಮಿಂಚಲಿದ್ದಾರಂತೆ. ಈ ಕುರಿತು ಸಿನಿಮಾ ಸ್ಕ್ರೀಪ್ಟ್​ ಅನ್ನು ಕೊರೊನಾಗಿಂತ ಮೊದಲೇ ಸಿದ್ಧವಾಗಿತ್ತು. ಆದರೆ ಇಷ್ಟು ದಿನ ಈ ಸ್ಕ್ರೀಪ್ಟ್​ ಅನ್ನು ಹಾಗೇ ಇಡಲಾಗಿತ್ತು. ಈಗ ಮತ್ತೆ ಇದು ಮುನ್ನೆಲೆಗೆ ಬಂದಿದ್ದು ಹೆಸರಿಡದ ಸಿನಿಮಾ ಮತ್ತೊಂದು ಹಂತಕ್ಕೆ ಹೋಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ದಿಗ್ಗಜ ನಟರು ಅಭಿನಯಿಸಲಿದ್ದಾರೆ ಎನ್ನುವ ಸಿನಿಮಾ ಇನ್ನು ಮಾತುಕತೆಯಲ್ಲಿದೆ. ಇದರ ನಡುವೆ ಲೋಕೇಶ್ ಕನಕರಾಜ್ ಅವರು ಕಾರ್ತಿ ಜೊತೆ ಖೈದಿ-2 ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರ ಮುಂಬರುವ ದೊಡ್ಡ ಪ್ರಾಜೆಕ್ಟ್ ಇದಾಗಿದ್ದು, ಹೀಗಾಗಿ ಅವರಿಗಾಗಿ ನಿರ್ದೇಶಕರು ಇನ್ನಷ್ಟು ಕಾಯಬೇಕಾಗಿದೆ ಎಂದು ಹೇಲಾಗುತ್ತಿದೆ.

ಈ ಹಿಂದೆ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಜನರ ಮನ ಗೆದ್ದಿದ್ದರು. ಆದರೆ ಈ ದಿಗ್ಗಜ ನಟರು 1979ರಲ್ಲಿ ರಿಲೀಸ್ ಆದಂತಹ ಅಲಾವುದ್ದೀನುಮ್ ಅಲ್ಭೂತ ವಿಲಕ್ಕುಮ್ ಎನ್ನುವ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅಂದಿನಿಂದ ಇಬ್ಬರು ಸೇರಿ ಒಟ್ಟಿಗೆ ಯಾವುದೇ ಸಿನಿಮಾದಲ್ಲಿ ಮತ್ತೆ ಅಭಿನಯ ಮಾಡಿರಲಿಲ್ಲ. ಸದ್ಯ 46 ವರ್ಷಗಳ ಬಳಿಕ ರಜನಿ-ಕಮಲ್ ಸ್ಕ್ರೀನ್ ಶೇರ್ ಮಾಡುತ್ತಾರೆ ಎಂದು ಹೇಳಲಾಗುತ್ತದೆ.

ಸ್ಟ್ 24 ಭಾನುವಾರ ಬೆಳಗ್ಗೆ 10- 05 ಕ್ಕೆ ” ದಿ ಡೆವಿಲ್ ” ನ , ಮೊದ

The post ರಜನಿಕಾಂತ್, ಕಮಲ್ ಹಾಸನ್.. 4 ದಶಕದ ನಂತರ ಒಂದೇ ತೆರೆಯಲ್ಲಿ…..! appeared first on Good News 24x7.

]]>
ಮುಧೋಳ್ ಚಿತ್ರದ ಅಪ್‌ಡೇಟ್ ನೀಡಿದ ವಿಕ್ರಂ ರವಿಚಂದ್ರನ್! https://www.goodnews24x7.com/vikram-ravichandran-gives-an-update-on-the-film-mudhol/ Mon, 18 Aug 2025 08:15:38 +0000 https://www.goodnews24x7.com/?p=6351 ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ, ನಟ ವಿಕ್ರಂ ರವಿಚಂದ್ರನ್ ತಮ್ಮ ಹುಟ್ಟುಹಬ್ಬದಂದೇ ವಿಶೇಷವಾದ ಘೋಷಣೆಯೊಂದನ್ನು ಮಾಡಿ ಚಿತ್ರೋದ್ಯಮದ ಗಮನ ಸೆಳೆದಿದ್ದಾರೆ. ಅವರ ಡ್ರೀಮ್ ಪ್ರಾಜೆಕ್ಟ್ ಆಗಿರುವ ‘ಮುಧೋಳ್’ ಚಿತ್ರಕ್ಕೆ now ಹೊಸ ಶಕ್ತಿ ಸಿಕ್ಕಿದ್ದು ಖ್ಯಾತ ಉದ್ಯಮಿ ಹಾಗೂ ನಿರ್ಮಾಪಕ…

The post ಮುಧೋಳ್ ಚಿತ್ರದ ಅಪ್‌ಡೇಟ್ ನೀಡಿದ ವಿಕ್ರಂ ರವಿಚಂದ್ರನ್! appeared first on Good News 24x7.

]]>

ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ, ನಟ ವಿಕ್ರಂ ರವಿಚಂದ್ರನ್ ತಮ್ಮ ಹುಟ್ಟುಹಬ್ಬದಂದೇ ವಿಶೇಷವಾದ ಘೋಷಣೆಯೊಂದನ್ನು ಮಾಡಿ ಚಿತ್ರೋದ್ಯಮದ ಗಮನ ಸೆಳೆದಿದ್ದಾರೆ.

ಅವರ ಡ್ರೀಮ್ ಪ್ರಾಜೆಕ್ಟ್ ಆಗಿರುವ ‘ಮುಧೋಳ್’ ಚಿತ್ರಕ್ಕೆ now ಹೊಸ ಶಕ್ತಿ ಸಿಕ್ಕಿದ್ದು ಖ್ಯಾತ ಉದ್ಯಮಿ ಹಾಗೂ ನಿರ್ಮಾಪಕ ವಿಜಯ್ ಟಾಟಾ ಅವರ *ಅಮೃತ ಸಿನಿ ಕ್ರಾಫ್ಟ್* ಕಂಪನಿಯ ಮೂಲಕ. ಈ ಪ್ರೊಡಕ್ಷನ್ ಹೌಸ್ ಚಿತ್ರ ನಿರ್ಮಾಣದ ಜೊತೆಗೆ ವಿತರಣೆ, ಮಾರ್ಕೆಟಿಂಗ್ ಹಾಗೂ ಇತರ ಚಿತ್ರಗಳ ಜೊತೆಗೆ ಸಹಕಾರಿಯೂ ಮುಂದಾಗುತ್ತಿದೆ ಎಂಬುದು ಒಂದು ದೊಡ್ಡ ಬೆಳವಣಿಗೆ.

ಪತ್ರಿಕಾಗೋಷ್ಠಿಯಲ್ಲಿ ವಿಶೇಷ ಘೋಷಣೆ : ಈ ವಿಷಯ ತಿಳಿಸಲು ವಿಶೇಷವಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಟ ವಿಕ್ರಂ ರವಿಚಂದ್ರನ್, ನಿರ್ಮಾಪಕಿ ರಕ್ಷಾ ಹಾಗೂ ವಿಜಯ್ ಟಾಟಾ ಉಪಸ್ಥಿತರಿದ್ದರು. ಈ ಸಂದರ್ಭ ಮಾತನಾಡಿದ ವಿಕ್ರಂ,“ನನ್ನ ಹುಟ್ಟುಹಬ್ಬವನ್ನು ಸಾಮಾನ್ಯವಾಗಿ ನಾನು ಆಚರಿಸೋಲ್ಲ. ಆದರೆ ಈ ಬಾರಿ ವಿಜಯ್ ಸರ್ ವಿಶಿಷ್ಟವಾದ ಘೋಷಣೆ ಮಾಡೋಣ ಎಂದು ಸಲಹೆ ನೀಡಿದರು. ನಾನು ರವಿಚಂದ್ರನ್ ಸರ್ ಮಗ ಎಂಬುದು ಎಲ್ಲರಿಗೂ ಗೊತ್ತು. ನನ್ನ ಎರಡನೇ ಸಿನಿಮಾದಾಗಿನಿಂದಲೇ ನಿರ್ಮಾಪಕಿ ರಕ್ಷಾ ಮೇಡಂ ಬೆಂಬಲ ನೀಡುತ್ತಿದ್ದಾರೆ.”

“ನನ್ನ ಡ್ರೀಮ್ ಪ್ರಾಜೆಕ್ಟ್‌ಗೆ ಸಪೋರ್ಟ್ ಬೇಕಿತ್ತು. ಆ ಸಮಯದಲ್ಲಿ ಟ್ಯಾಲೆಂಟ್‌ಡ್ ಡೈರೆಕ್ಟರ್ ಕಾರ್ತಿಕ್ ರಾಜು ಸಿಕ್ಕರು. ನಾನು, ಕಾರ್ತಿಕ್ ಮತ್ತು ನಿರ್ಮಾಪಕರು ಸೇರಿ ಚರ್ಚೆ ನಡೆಸಿದಾಗ ‘ಮುಧೋಳ್’ ಮೂಡಿಬಂತು. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ನಂತರ ನಿರ್ಮಾಪಕಿ ರಕ್ಷಾ ಮೇಡಂ ಈ ಯೋಜನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.”

ವಿಜಯ್ ಟಾಟಾ ಜೊತೆ ಕೊಲಾಬ್ರೇಶನ್ ಹೇಗೆ ಶುರುವಾಯ್ತು?
ವಿಕ್ರಂ ಅವರಲ್ಲಿ ಉತ್ತಮ ಗೆಳೆಯನಾಗಿರುವ ದಿಲ್ ಸೆ ದಿಲೀಪ್ ಅವರು ಡೈರೆಕ್ಟರ್ ಋಷಿ ಅವರ ಕಥೆಯನ್ನು ಪರಿಚಯಿಸಿದರು. ಆ ಕಥೆ ಇಷ್ಟವಾದ ವಿಕ್ರಂ, ಚಿತ್ರ ನಿರ್ಮಾಪಕರಾದ ವಿಜಯ್ ಟಾಟಾ ಅವರ ಜೊತೆಗೆ ಕೆಲಸ ಮಾಡಬೇಕು ಎಂದು ನಿರ್ಧರಿಸಿದರು.

“ಒಮ್ಮೆ ಭೇಟಿಯಾದ ನಂತರ, ‘ಮುಧೋಳ್’ ಚಿತ್ರವನ್ನೂ ವಿಜಯ್ ಸರ್‌ಗೆ ತೋರಿಸಿದ್ದೆವು. ಅವರಿಗೆ ಇಷ್ಟವಾಯಿತು. ನಂತರ ನಿರ್ಮಾಪಕಿ ರಕ್ಷಾ ಮೇಡಂ ಹಾಗೂ ವಿಜಯ್ ಸರ್ ನಡುವೆ ಚರ್ಚೆ ನಡೆಯಿತು. ಅಂತಿಮವಾಗಿ ‘ಅಮೃತ ಸಿನಿ ಕ್ರಾಫ್ಟ್’ ಈ ಚಿತ್ರದ ಸಹ ನಿರ್ಮಾಪಕರಾಗಿ ಸೇರಿದ್ದು, ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತಲುಪಿಸಲು ಕೈಜೋಡಿಸಿದ್ದಾರೆ.”

ಹೊಸ ಶಕ್ತಿಯ ಜೊತೆ ಮುಂದೆ ಸಾಗುತ್ತಿರುವ ‘ಮುಧೋಳ್’ ಟೀಮ್ : ಈ ಕೊಲಾಬ್ರೇಶನ್ ಮೂಲಕ ‘ಮುಧೋಳ್’ ಚಿತ್ರ ತಂಡ ಈಗ ಲಿಷ್ಠವಾಗಿದ್ದು, ಸಿನಿಮಾಗೆ ತಕ್ಕ ಮಟ್ಟದ ಪ್ಲಾಟ್‌ಫಾರ್ಮ್ ಸಿಗಲಿದೆ ಎನ್ನುವ ವಿಶ್ವಾಸವಿದೆ. ಚಿತ್ರದ ಬಹುತೇಕ ವಿಭಾಗಗಳಲ್ಲಿ ಹೊಸ ಪ್ರತಿಭೆಗಳಿದ್ದು, ಈ ಚಿತ್ರ ಎಲ್ಲರಿಗೂ ಸ್ಫೂರ್ತಿದಾಯಕವಾಗಬೇಕು ಎಂಬ ಆಶಯವನ್ನು ವಿಕ್ರಂ ವ್ಯಕ್ತಪಡಿಸಿದ್ದಾರೆ.

The post ಮುಧೋಳ್ ಚಿತ್ರದ ಅಪ್‌ಡೇಟ್ ನೀಡಿದ ವಿಕ್ರಂ ರವಿಚಂದ್ರನ್! appeared first on Good News 24x7.

]]>
UER-II ದ್ವಾರಕಾ ಎಕ್ಸ್‌ಪ್ರೆಸ್‌ವೇಗೆ ಪ್ರಧಾನಿ ಮೋದಿ ಉದ್ಘಾಟನೆಯ ಮೆರಗು. https://www.goodnews24x7.com/pm-modi-inaugurates-uer-ii-dwarka-expressway/ Sat, 16 Aug 2025 08:31:03 +0000 https://www.goodnews24x7.com/?p=6198 ನವದೆಹಲಿ : ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ ಎನ್‌ಸಿಆರ್‌ಗೆ ಸಂಪರ್ಕ ಕಲ್ಪಿಸುವ ಯುಇಆರ್-II ದ್ವಾರಕಾ ಎಕ್ಸ್‌ಪ್ರೆಸ್‌ವೇಯನ್ನುಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದರು. ಈ ಎಕ್ಸ್‌ಪ್ರೆಸ್‌ವೇಯು ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ ಎನ್‌ಸಿಆರ್‌ಗೆ ಸಂಪರ್ಕವನ್ನು ಸುಧಾರಿಸುವ ಪ್ರಮುಖ ಯೋಜನೆಯಾಗಿದೆ. ಈ ಮಾರ್ಗವು ನೋಯ್ಡಾದಿಂದ (Noida)…

The post UER-II ದ್ವಾರಕಾ ಎಕ್ಸ್‌ಪ್ರೆಸ್‌ವೇಗೆ ಪ್ರಧಾನಿ ಮೋದಿ ಉದ್ಘಾಟನೆಯ ಮೆರಗು. appeared first on Good News 24x7.

]]>

ನವದೆಹಲಿ : ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ ಎನ್‌ಸಿಆರ್‌ಗೆ ಸಂಪರ್ಕ ಕಲ್ಪಿಸುವ ಯುಇಆರ್-II ದ್ವಾರಕಾ ಎಕ್ಸ್‌ಪ್ರೆಸ್‌ವೇಯನ್ನುಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದರು.

ಈ ಎಕ್ಸ್‌ಪ್ರೆಸ್‌ವೇಯು ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ ಎನ್‌ಸಿಆರ್‌ಗೆ ಸಂಪರ್ಕವನ್ನು ಸುಧಾರಿಸುವ ಪ್ರಮುಖ ಯೋಜನೆಯಾಗಿದೆ. ಈ ಮಾರ್ಗವು ನೋಯ್ಡಾದಿಂದ (Noida) ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣ ಸಮಯವನ್ನು ಗಣನೀಯವಾಗಿ ಕಡಿಮೆಗೊಳಿಸಲಿದೆ.

ಈ ಎಕ್ಸ್‌ಪ್ರೆಸ್‌ವೇಯು 19.2 ಕಿಲೋಮೀಟರ್ ಉದ್ದವಿರುವ ಎಂಟು-ಪಥದ ರಸ್ತೆಯಾಗಿದ್ದು, ದ್ವಾರಕಾದಿಂದ ಗುರ್‌ಗಾವ್ ಶಿವ್ ಮೂರ್ತಿಯವರೆಗೆ ವಿಸ್ತರಿಸಿದೆ. ಈ ಯೋಜನೆಯಿಂದ ನೋಯ್ಡಾ, ಗುರುಗ್ರಾಮ್ ಮತ್ತು ದೆಹಲಿಯ ನಡುವಿನ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಲು ಸಹಾಯವಾಗಲಿದೆ. ಅಲ್ಲದೇ ಎನ್‌ಸಿಆರ್‌ನಲ್ಲಿ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲಿದೆ ಮತ್ತು ಜನರ ಜೀವನವನ್ನು ಸುಗಮಗೊಳಿಸಲಿದೆ ಎಂದು ಪ್ರಧಾನಿ ಮೋದಿ ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.

ಈ ಮಾರ್ಗವು ಆಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿತವಾಗಿದ್ದು, ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಒತ್ತು ನೀಡಲಾಗಿದೆ. ಇದರಿಂದ ಪ್ರಯಾಣಿಕರು ಸುಮಾರು 20 ರಿಂದ 25 ನಿಮಿಷಗಳಲ್ಲಿ ನೋಯ್ಡಾದಿಂದ ಐಜಿಐ ವಿಮಾನ ನಿಲ್ದಾಣವನ್ನು ತಲುಪಬಹುದಾಗಿದೆ. ಈ ಹಿಂದೆ ಪ್ರಯಾಣಕ್ಕೆ ಒಂದು ಗಂಟೆಗಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು.

ಈ ಯೋಜನೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿದ್ದು, ದೆಹಲಿ-ಎನ್‌ಸಿಆರ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ. ಸ್ಥಳೀಯ ಜನರು ಮತ್ತು ವಾಣಿಜ್ಯ ಸಂಸ್ಥೆಗಳು ಈ ಎಕ್ಸ್‌ಪ್ರೆಸ್‌ವೇಯಿಂದ ಗಮನಾರ್ಹ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.

The post UER-II ದ್ವಾರಕಾ ಎಕ್ಸ್‌ಪ್ರೆಸ್‌ವೇಗೆ ಪ್ರಧಾನಿ ಮೋದಿ ಉದ್ಘಾಟನೆಯ ಮೆರಗು. appeared first on Good News 24x7.

]]>