Promotion Archives - Good News 24x7 https://www.goodnews24x7.com/tag/promotion/ Kannada Sat, 18 Apr 2026 08:40:04 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Promotion Archives - Good News 24x7 https://www.goodnews24x7.com/tag/promotion/ 32 32 ಹಿಂದಿ ಪ್ರಚಾರ ಸಮಿತಿಗೆ ರಮೇಶ್ ಪಾಟೀಲ್ ಸೊಲಪೂರ ಆಯ್ಕೆ: ಗ್ರಾಮಸ್ಥರಿಂದ ಸನ್ಮಾನ. https://www.goodnews24x7.com/ramesh-patil-solapur-elected-to-hindi-promotion-committee-villagers-felicitate-him/ Sat, 18 Apr 2026 08:40:04 +0000 https://www.goodnews24x7.com/?p=9298 ಬೀದರ್ ಜಿಲ್ಲೆಯ ಸೊಲಪೂರ ಗ್ರಾಮದವರೂ ಹಾಗೂ ಪ್ರಸ್ತುತ ಜೆಡಿಎಸ್ ಜಿಲ್ಲಾಧ್ಯಕ್ಷರೂ ಆಗಿರುವ ರಮೇಶ್ ಪಾಟೀಲ್ ಸೊಲಪೂರ ಅವರು ಕೇಂದ್ರ ಸರ್ಕಾರದ ಉಕ್ಕು ಮಂತ್ರಾಲಯದ ವತಿಯಿಂದ ರಚಿಸಲಾಗಿರುವ ಹಿಂದಿ ಪ್ರಚಾರ ಹಾಗೂ ಪ್ರಸಾರ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಗೌರವಕ್ಕೆ ಪಾತ್ರರಾದ ಅವರನ್ನು…

The post ಹಿಂದಿ ಪ್ರಚಾರ ಸಮಿತಿಗೆ ರಮೇಶ್ ಪಾಟೀಲ್ ಸೊಲಪೂರ ಆಯ್ಕೆ: ಗ್ರಾಮಸ್ಥರಿಂದ ಸನ್ಮಾನ. appeared first on Good News 24x7.

]]>

ಬೀದರ್ ಜಿಲ್ಲೆಯ ಸೊಲಪೂರ ಗ್ರಾಮದವರೂ ಹಾಗೂ ಪ್ರಸ್ತುತ ಜೆಡಿಎಸ್ ಜಿಲ್ಲಾಧ್ಯಕ್ಷರೂ ಆಗಿರುವ ರಮೇಶ್ ಪಾಟೀಲ್ ಸೊಲಪೂರ ಅವರು ಕೇಂದ್ರ ಸರ್ಕಾರದ ಉಕ್ಕು ಮಂತ್ರಾಲಯದ ವತಿಯಿಂದ ರಚಿಸಲಾಗಿರುವ ಹಿಂದಿ ಪ್ರಚಾರ ಹಾಗೂ ಪ್ರಸಾರ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಗೌರವಕ್ಕೆ ಪಾತ್ರರಾದ ಅವರನ್ನು ಗ್ರಾಮದ ‘ಪುಣ್ಯಕೋಟಿ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು. ರಮೇಶ್ ಪಾಟೀಲ್ ಅವರು ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲದಂತೆ ಪ್ರಾಮಾಣಿಕ ಮತ್ತು ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅವರ ಈ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಈ ಮಹತ್ವದ ಜವಾಬ್ದಾರಿಯನ್ನು ನೀಡಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಕಾಂತ ಸ್ವಾಮಿ ಅವರು, “ಒಂದು ಸಣ್ಣ ಹಳ್ಳಿಯಾದ ಸೊಲಪೂರಕ್ಕೆ ರಮೇಶ್ ಪಾಟೀಲ್ ಅವರ ಶ್ರಮದಿಂದಾಗಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಭೇಟಿ ನೀಡುವಂತಾಗಿದ್ದು ನಮ್ಮ ಗ್ರಾಮಕ್ಕೆ ಹೆಮ್ಮೆಯ ವಿಷಯ. ಈಗ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಇವರಿಗೆ ಹೊಸ ಜವಾಬ್ದಾರಿ ದೊರೆತಿರುವುದು ಸಂತೋಷ ತಂದಿದೆ. ಇವರ ಸಾಧನೆಯು ಗ್ರಾಮದ ಯುವಕರಿಗೆ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಬೆಳೆಯಲು ದೊಡ್ಡ ಪ್ರೇರಣೆಯಾಗಲಿದೆ,” ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘಶೆಟ್ಟಿ ಖೆಳಗೆ, ಸಿದ್ದಪ್ಪಾ ಖೆಳಗೆ, ರಾಜಕುಮಾರ್ ಮಡಿವಾಳ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

The post ಹಿಂದಿ ಪ್ರಚಾರ ಸಮಿತಿಗೆ ರಮೇಶ್ ಪಾಟೀಲ್ ಸೊಲಪೂರ ಆಯ್ಕೆ: ಗ್ರಾಮಸ್ಥರಿಂದ ಸನ್ಮಾನ. appeared first on Good News 24x7.

]]>
ಕನ್ನಡದ ಖ್ಯಾತ ನಟನಿಂದ ‘TEDDY BEAR’ ಅವತಾರದಲ್ಲಿ ಸಿನಿಮಾ ಪ್ರಚಾರ! https://www.goodnews24x7.com/a-famous-kannada-actor-promotes-a-movie-in-the-avatar-of-teddy-bear/ Sat, 17 May 2025 10:15:08 +0000 https://www.goodnews24x7.com/?p=3929 ಸಿನಿಮಾ ಯಶಸ್ಸಿಗೆ ಪ್ರಚಾರ ಅತ್ಯಗತ್ಯ. ಅದರಂತೆ, ಚಿತ್ರತಂಡಗಳು ವಿಭಿನ್ನವಾಗಿ ಪ್ರಮೋಶನ್ ಈವೆಂಟ್ಗಳನ್ನು ಆಯೋಜಿಸಿ ಪ್ರೇಕ್ಷಕರನ್ನು ತಲುಪುವ ಪ್ರಯತ್ನ ನಡೆಸುತ್ತವೆ. ಅದರಂತೆ, ಇದೀಗ ಕನ್ನಡದ ಖ್ಯಾತ ನಟರೋರ್ವರು ಟೆಡ್ಡಿಬೇರ್ ವೇಷ ಧರಿಸಿ ತಮ್ಮ ಸಿನಿಮಾವನ್ನು ವಿಭಿನ್ನವಾಗಿ ಪ್ರಚಾರ ಮಾಡಿ ಜನಮನ ಸೆಳೆದಿದ್ದಾರೆ. ಶೀರ್ಷಿಕೆಯಿಂದಲೇ…

The post ಕನ್ನಡದ ಖ್ಯಾತ ನಟನಿಂದ ‘TEDDY BEAR’ ಅವತಾರದಲ್ಲಿ ಸಿನಿಮಾ ಪ್ರಚಾರ! appeared first on Good News 24x7.

]]>

ಸಿನಿಮಾ ಯಶಸ್ಸಿಗೆ ಪ್ರಚಾರ ಅತ್ಯಗತ್ಯ. ಅದರಂತೆ, ಚಿತ್ರತಂಡಗಳು ವಿಭಿನ್ನವಾಗಿ ಪ್ರಮೋಶನ್ ಈವೆಂಟ್ಗಳನ್ನು ಆಯೋಜಿಸಿ ಪ್ರೇಕ್ಷಕರನ್ನು ತಲುಪುವ ಪ್ರಯತ್ನ ನಡೆಸುತ್ತವೆ. ಅದರಂತೆ, ಇದೀಗ ಕನ್ನಡದ ಖ್ಯಾತ ನಟರೋರ್ವರು ಟೆಡ್ಡಿಬೇರ್ ವೇಷ ಧರಿಸಿ ತಮ್ಮ ಸಿನಿಮಾವನ್ನು ವಿಭಿನ್ನವಾಗಿ ಪ್ರಚಾರ ಮಾಡಿ ಜನಮನ ಸೆಳೆದಿದ್ದಾರೆ. ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಸಿನಿಮಾ ”ಎಡಗೈಯೇ ಅಪಘಾತಕ್ಕೆ ಕಾರಣ”. ಸ್ಯಾಂಡಲ್ವುಡ್ನ ದೂದ್ ಪೇಡಾ ಖ್ಯಾತಿಯ ದಿಗಂತ್ ಮಂಚಾಲೆ ಮುಖ್ಯಭೂಮಿಕೆಯಲ್ಲಿರೋ ಈ ಬಹುನಿರೀಕ್ಷಿತ ಚಿತ್ರ ವಿಭಿನ್ನ ಕಾನ್ಸೆಪ್ಟ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದೆ.


”ಎಡಗೈಯೇ ಅಪಘಾತಕ್ಕೆ ಕಾರಣ” ಚಿತ್ರತಂಡವು ಮೊದಲಿನಿಂದಲೂ ಬಹಳ ಡಿಫ್ರೆಂಟ್ ಆಗಿ ಪ್ರಮೋಶನ್ ಮಾಡುತ್ತಾ ಬಂದಿದೆ. ಈ ಹಿಂದೆ ಎಡಗೈ ಬಳಸುವವರಿಗೆ ಹೆಲ್ಮೆಟ್ ನೀಡಲಾಗಿತ್ತು. ನಂತರ ಮಾಡಿಸಲಾದ ಫೋಟೋಶೂಟ್ ಆನ್ಲೈನ್ನಲ್ಲಿ ಸದ್ದು ಮಾಡಿತ್ತು. ಇದೀಗ ಮತ್ತೊಂದು ಯೂನಿಕ್ ಕಾನ್ಸೆಪ್ಟ್ನೊಂದಿಗೆ ಚಿತ್ರತಂಡ ಸಾರ್ವಜನಿಕರೆದುರು ಬಂದಿದೆ.

ಹೌದು, ಬೆಂಗಳೂರಿನ ಮಾಲ್ ಒಂದರಲ್ಲಿ, ಟೆಡ್ಡಿಬೇರ್ ವೇಷ ಧರಿಸಿ, ಶೇಕ್ ಹ್ಯಾಂಡ್ ವಿತ್ ಲೆಫ್ಟ್ ಹ್ಯಾಂಡ್ ಆ್ಯಂಡ್ ಗೆಟ್ ಸರ್ಪೈಸ್ ಎಂಬ ನಾಮಫಲಕವನ್ನಿಡಿದು ವ್ಯಕ್ತಿಯೋರ್ವರು ಓಡಾಡುತ್ತಿದ್ದರು. ಪ್ರೇಕ್ಷಕರು ಥಿಯೇಟರ್ಗೆ ಬರುತ್ತಿಲ್ಲವೆಂಬ ಮಾತುಗಳು ಕೇಳಿಬರುತ್ತಿರೋ ಹೊತ್ತಲ್ಲಿ, ತಮ್ಮ ಸಿನಿಮಾ ಗೆಲ್ಲಿಸಲು ತಂಡ ಎಷ್ಟು ಶ್ರಮ ವಹಿಸುತ್ತದೆ ಎಂಬುದಕ್ಕಿದು ಬೆಸ್ಟ್ ಉದಾಹರಣೆಯಾಗಿದೆ.


ಅಷ್ಟಕ್ಕೂ ಹೀಗೆ ಟೆಡ್ಡಿ ಬೇರ್ ವೇಷ ಹಾಕಿ ಬೋರ್ಡ್ ಹಿಡಿದು ಆ ಕಡೆ ಈ ಕಡೆ ಓಡಾಡುತ್ತಿದ್ದ ವ್ಯಕ್ತಿ ಬೇರೆ ಯಾರೂ ಅಲ್ಲ. ನಟ ದಿಗಂತ್. ಯೆಸ್, ತಮ್ಮ ಸಿನಿಮಾವನ್ನು ಸಖತ್ ಯೂನಿಕ್ ಆಗಿ ಪ್ರಚಾರ ಮಾಡುತ್ತಿರೋ ದಿಗಂತ್ ಅವರನ್ನು ಕಣ್ತುಂಬಿಕೊಂಡ ಜನರಿಗಿದು ಸರ್ಪೈಸ್ ಅಂತಲೇ ಹೇಳಬಹುದು. ಸಮರ್ಥ್ ಬಿ.ಕಡಕೊಳ್ ಆ್ಯಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ದಿಗಂತ್ ಮಂಚಾಲೆ ಜೋಡಿಯಾಗಿ ನಟಿ ಧನು ಹರ್ಷ ಅಭಿನಯಿಸಿದ್ದಾರೆ. ಇನ್ನುಳಿದಂತೆ, ಖ್ಯಾತ ನಟಿಯರಾದ ರಾಧಿಕಾ ನಾರಾಯಣ್ ಮತ್ತು ನಿಧಿ ಸುಬ್ಬಯ್ಯ ಕೂಡಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಪಾತ್ರದಲ್ಲಿ ನಿರೂಪ್ ಭಂಡಾರಿ ಅಭಿನಯಿಸಿದ್ದಾರೆ. ಸಮರ್ಥ್ ಅವರಿಗಿದು ಮೊದಲ ನಿರ್ದೇಶನದ ಚಿತ್ರ ಅಂತಲೇ ಹೇಳಬಹುದು.

The post ಕನ್ನಡದ ಖ್ಯಾತ ನಟನಿಂದ ‘TEDDY BEAR’ ಅವತಾರದಲ್ಲಿ ಸಿನಿಮಾ ಪ್ರಚಾರ! appeared first on Good News 24x7.

]]>