public Archives - Good News 24x7 https://www.goodnews24x7.com/tag/public/ Kannada Sun, 12 Apr 2026 07:22:54 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg public Archives - Good News 24x7 https://www.goodnews24x7.com/tag/public/ 32 32 ಹೆದ್ದಾರಿ ಅ*ಘಾತ: ಗಾಯಾಳುವಿನ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ. https://www.goodnews24x7.com/highway-accident-union-minister-h-d-kumaraswamy-showed-humanity-by-rushing-to-the-aid-of-the-injured/ Sun, 12 Apr 2026 07:22:54 +0000 https://www.goodnews24x7.com/?p=9227 ಬೆಂಗಳೂರು: ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹಾಸನಕ್ಕೆ ತೆರಳುತ್ತಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಮಾರ್ಗಮಧ್ಯೆ ಸಂಭವಿಸಿದ ರಸ್ತೆ ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಘಟನೆಯ ವಿವರ: ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ಮತ್ತು ಕಾರಿನ ನಡುವೆ…

The post ಹೆದ್ದಾರಿ ಅ*ಘಾತ: ಗಾಯಾಳುವಿನ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ. appeared first on Good News 24x7.

]]>

ಬೆಂಗಳೂರು: ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹಾಸನಕ್ಕೆ ತೆರಳುತ್ತಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಮಾರ್ಗಮಧ್ಯೆ ಸಂಭವಿಸಿದ ರಸ್ತೆ ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಘಟನೆಯ ವಿವರ:
ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ವಿಕ್ರಂ ಎಂಬುವವರು ತೀವ್ರವಾಗಿ ಗಾಯಗೊಂಡು ರಸ್ತೆಯಲ್ಲೇ ನರಳಾಡುತ್ತಿದ್ದರು. ಸುಮಾರು ಅರ್ಧ ಗಂಟೆ ಕಳೆದರೂ ಯಾರೂ ಅವರ ನೆರವಿಗೆ ಧಾವಿಸಿರಲಿಲ್ಲ. ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಸಚಿವರು, ಗಾಯಾಳುವನ್ನು ಗಮನಿಸಿದ ತಕ್ಷಣ ತಮ್ಮ ವಾಹನವನ್ನು ನಿಲ್ಲಿಸಿ ಸ್ಥಳಕ್ಕೆ ಧಾವಿಸಿದರು.

ತಕ್ಷಣದ ಸ್ಪಂದನೆ:
ಪೊಲೀಸ್ ವಾಹನದ ಬಳಕೆ: ಗಾಯಾಳುವಿನ ಸ್ಥಿತಿ ಗಂಭೀರವಾಗಿರುವುದನ್ನು ಕಂಡು ಕೂಡಲೇ ಹೆದ್ದಾರಿ ಗಸ್ತು ಪೊಲೀಸರಿಗೆ ಕರೆ ಮಾಡಿದ ಸಚಿವರು, ತಮ್ಮ ಭದ್ರತಾ ಸಿಬ್ಬಂದಿಯ ವಾಹನ ಹಾಗೂ ಪೊಲೀಸ್ ವಾಹನದ ಮೂಲಕ ಗಾಯಾಳುವನ್ನು ಹತ್ತಿರದ ಆದಿಚುಂಚನಗಿರಿ ಆಸ್ಪತ್ರೆಗೆ ರವಾನಿಸಲು ವ್ಯವಸ್ಥೆ ಮಾಡಿದರು.

ವೈದ್ಯರಿಗೆ ಸೂಚನೆ: ಕೇವಲ ಆಸ್ಪತ್ರೆಗೆ ಕಳುಹಿಸುವುದಷ್ಟೇ ಅಲ್ಲದೆ, ಸ್ವತಃ ಸಚಿವರೇ ಆಸ್ಪತ್ರೆಯ ವೈದ್ಯರಿಗೆ ದೂರವಾಣಿ ಕರೆ ಮಾಡಿ, ಗಾಯಾಳುವಿಗೆ ತುರ್ತು ಮತ್ತು ಸೂಕ್ತ ಚಿಕಿತ್ಸೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಮಯಪ್ರಜ್ಞೆ ಮೆರೆದು ತಮ್ಮ ಪ್ರಾಣ ಉಳಿಸಿದ ಕೇಂದ್ರ ಸಚಿವರಿಗೆ ಗಾಯಾಳು ವಿಕ್ರಂ ಹಾಗೂ ಅವರ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ. ಸಚಿವರ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

The post ಹೆದ್ದಾರಿ ಅ*ಘಾತ: ಗಾಯಾಳುವಿನ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ. appeared first on Good News 24x7.

]]>
ಪ್ರಚಾರಕ್ಕಾಗಿ ಹಿತಾಸಕ್ತಿ ಅರ್ಜಿ: SSLC ಹಿಂದಿ ಭಾಷೆ ವಿವಾದದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್! https://www.goodnews24x7.com/public-interest-litigation-high-court-imposes-rs-1-lakh-fine-on-petitioners-in-sslc-hindi-language-dispute/ Sat, 11 Apr 2026 09:21:27 +0000 https://www.goodnews24x7.com/?p=9197 ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ಪ್ರಸ್ತಾವನೆಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದ ಅರ್ಜಿದಾರರಿಗೆ ಕರ್ನಾಟಕ ಹೈಕೋರ್ಟ್ ಭಾರಿ ಮೊತ್ತದ ದಂಡ ವಿಧಿಸಿದೆ. ಕೇವಲ ಮಾಧ್ಯಮಗಳ ವರದಿಯನ್ನು ಆಧರಿಸಿ,…

The post ಪ್ರಚಾರಕ್ಕಾಗಿ ಹಿತಾಸಕ್ತಿ ಅರ್ಜಿ: SSLC ಹಿಂದಿ ಭಾಷೆ ವಿವಾದದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್! appeared first on Good News 24x7.

]]>

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ಪ್ರಸ್ತಾವನೆಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದ ಅರ್ಜಿದಾರರಿಗೆ ಕರ್ನಾಟಕ ಹೈಕೋರ್ಟ್ ಭಾರಿ ಮೊತ್ತದ ದಂಡ ವಿಧಿಸಿದೆ. ಕೇವಲ ಮಾಧ್ಯಮಗಳ ವರದಿಯನ್ನು ಆಧರಿಸಿ, ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ನ್ಯಾಯಾಲಯದ ಮೆಟ್ಟಿಲೇರಿದ ಬೆಂಗಳೂರಿನ ಎಚ್.ಎನ್. ಚಂದನಾ ಮತ್ತು ಎಸ್. ವೆಂಕಟೇಶ್ ಅವರಿಗೆ ನ್ಯಾಯಪೀಠವು ಒಟ್ಟು 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

ನ್ಯಾಯಪೀಠದ ಕಠಿಣ ವಿನಾಶ ಮತ್ತು ಅಸಮಾಧಾನ:
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. “ಕೇವಲ ಪತ್ರಿಕಾ ಹೇಳಿಕೆಗಳನ್ನು ಆಧರಿಸಿ ಅವುಗಳನ್ನು ರದ್ದುಗೊಳಿಸಲು ನ್ಯಾಯಾಲಯದ ಅಸಾಧಾರಣ ನ್ಯಾಯವ್ಯಾಪ್ತಿಯನ್ನು ಬಳಸಲು ಸಾಧ್ಯವಿಲ್ಲ. ಅರ್ಜಿದಾರರು ಸರ್ಕಾರದ ಯಾವುದೇ ಅಧಿಕೃತ ಆದೇಶದ ಪ್ರತಿಗಳನ್ನು ಒದಗಿಸಿಲ್ಲ. ಇದು ನ್ಯಾಯಾಲಯದ ಸಮಯ ವ್ಯರ್ಥ ಮಾಡುವ ಮತ್ತು ಪ್ರಚಾರಕ್ಕಾಗಿ ಸಲ್ಲಿಸಿರುವ ಅರ್ಜಿಯಾಗಿದೆ,” ಎಂದು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ದಂಡದ ಮೊತ್ತ ಏರಿಕೆಗೆ ಕಾರಣವೇನು?:
ಆರಂಭದಲ್ಲಿ ನ್ಯಾಯಾಲಯವು ಅರ್ಜಿದಾರರಿಗೆ ತಲಾ 50 ಸಾವಿರ ರೂ. ದಂಡ ವಿಧಿಸಲು ನಿರ್ಧರಿಸಿತ್ತು. ಆದರೆ, ವಿಚಾರಣೆ ವೇಳೆ ಅರ್ಜಿದಾರರು ವಾದ ಮುಂದುವರಿಸಿ, “ಹಿಂದಿ ಭಾಷೆಯನ್ನೇ ತೆಗೆದುಹಾಕಲಾಗುತ್ತಿದೆ” ಎಂದು ಸುಳ್ಳು ಅಂಶವನ್ನು ಉಲ್ಲೇಖಿಸಿದರು. ಪತ್ರಿಕಾ ವರದಿಗಳಲ್ಲಿ ಅಂತಹ ಯಾವುದೇ ಅಂಶವಿಲ್ಲದಿದ್ದರೂ, ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠವು ದಂಡದ ಮೊತ್ತವನ್ನು 1 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿತು.

ದಂಡ ಪಾವತಿಗೆ ಸೂಚನೆ:
ವಿಧಿಸಲಾದ ದಂಡದ ಮೊತ್ತವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ಕೋರ್ಟ್ ಸೂಚಿಸಿದೆ. ಒಂದು ವೇಳೆ ಅರ್ಜಿದಾರರು ನಿಗದಿತ ಅವಧಿಯಲ್ಲಿ ದಂಡ ಪಾವತಿಸದಿದ್ದರೆ, ಅದನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ಅರ್ಜಿದಾರರ ಆಸ್ತಿಯಿಂದ ವಸೂಲಿ ಮಾಡಲು ಕಂದಾಯ ಅಧಿಕಾರಿಗಳಿಗೆ ಅವಕಾಶ ನೀಡಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

The post ಪ್ರಚಾರಕ್ಕಾಗಿ ಹಿತಾಸಕ್ತಿ ಅರ್ಜಿ: SSLC ಹಿಂದಿ ಭಾಷೆ ವಿವಾದದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್! appeared first on Good News 24x7.

]]>
ಮಾ.11ರಿಂದ ವೈದ್ಯಕೀಯ ಸಿಬ್ಬಂದಿ ಸಂಘಗಳ ಮುಷ್ಕರ https://www.goodnews24x7.com/medical-staff-unions-to-strike-from-march-11medical-staff-unions-to-strike-from-march-11/ Sun, 01 Mar 2026 08:45:17 +0000 https://www.goodnews24x7.com/?p=8567 ಆರೋಗ್ಯ ಸೇವೆ ವ್ಯತ್ಯಯವಾದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ರಾಜ್ಯ ಸರ್ಕಾರ, ಸರ್ಕಾರಿ ವೈದ್ಯಕೀಯ ಸಿಬ್ಬಂದಿ ಸಂಘಗಳು ಮಾರ್ಚ್ 11ರಿಂದ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿ ಸಿರುವ ಹಿನ್ನೆಲೆಯಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಗಳ ಲಭ್ಯತೆ ಕುರಿತು…

The post ಮಾ.11ರಿಂದ ವೈದ್ಯಕೀಯ ಸಿಬ್ಬಂದಿ ಸಂಘಗಳ ಮುಷ್ಕರ appeared first on Good News 24x7.

]]>

ಆರೋಗ್ಯ ಸೇವೆ ವ್ಯತ್ಯಯವಾದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ರಾಜ್ಯ ಸರ್ಕಾರ,
ಸರ್ಕಾರಿ ವೈದ್ಯಕೀಯ ಸಿಬ್ಬಂದಿ ಸಂಘಗಳು ಮಾರ್ಚ್ 11ರಿಂದ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿ ಸಿರುವ ಹಿನ್ನೆಲೆಯಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಗಳ ಲಭ್ಯತೆ ಕುರಿತು ಜನಸಾಮಾನ್ಯ ರಲ್ಲಿ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕರ್ತವ್ಯಕ್ಕೆ ಗೈರಾಗು ವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಆಯ್ಕೆಗಳನ್ನು ಸರ್ಕಾರ ಪರಿಶೀಲಿಸು ತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಹುಕಾಲದಿಂದ ಬಾಕಿ ಇರುವ ಸೇವಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ವೈದ್ಯಕೀಯ ಸಿಬ್ಬಂದಿ ಸಂಘಗಳು ಹಂತ ಹಂತವಾಗಿ ಸೇವೆ ಸ್ಥಗಿತಗೊಳಿ ಸುವುದಾಗಿ ಘೋಷಿಸಿವೆ. ಎರಡೂವರೆ ವರ್ಷಕ್ಕೂ ಹೆಚ್ಚು ಕಾಲ ಕಾಯುತ್ತಿ ದ್ದೇವೆ. ಪದೋನ್ನತಿ, ಕೇಡರ್ ನಿಯಮ ಗಳು, ಹಿರಿಯ ಹುದ್ದೆಗಳ ಭರ್ತಿ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂ ಡಿಲ್ಲ ಎಂದು ಕರ್ನಾಟಕ ಸರ್ಕಾರ ವೈದ್ಯ ಕೀಯ ಸಂಘದ ಅಧ್ಯಕ್ಷ ಡಾ.ರವೀಂದ್ರ ನಾಥ್ ಎಂ.ಮೇಟಿ ತಿಳಿಸಿದ್ದಾರೆ.
ಹೊರರೋಗಿ ವಿಭಾಗ ಸೇವೆಗಳು ಸ್ಥಗಿತಗೊಳ್ಳಲಿವೆ: ತುರ್ತು ಚಿಕಿತ್ಸೆ ಮಾತ್ರ ಮುಂದುವರಿ ಯಲಿದೆ. ಮಾರ್ಚ್ 16ರಿಂದ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ತುರ್ತು ಸೇವೆಗಳನ್ನು ಒಳ ಗೊಂಡಂತೆ ಸಂಪೂರ್ಣ ಕರ್ತವ್ಯ ಬಹಿಷ್ಕಾರ ಮಾಡ ಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಸುಮಾರು 65 ಸಾವಿರ ದಿಂದ 80 ಸಾವಿರ ಸಿಬ್ಬಂದಿ, ಅದರಲ್ಲೂ ರಾಷ್ಟ್ರೀಯ ಆರೋಗ್ಯ ಮಿಷನ್ ಸಿಬ್ಬಂದಿ ಸೇರಿದಂತೆ, ಹಲವರು ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಸರ್ಕಾರ ನಮ್ಮೆಲ್ಲರ ಮೇಲೂ ಕ್ರಮ ಕೈಗೊಳ್ಳಲಿ, ನಾವು ನಮ್ಮ ನಿರ್ಧಾರದಿಂದ ಹಿಂದೆ ಸರಿಯುವು ದಿಲ್ಲ ಎಂದು ಮೇಟಿ ಹೇಳಿದರು. ದೀರ್ಘ ಕಾಲದಿಂದ ಖಾಲಿ ಇರುವ ಹುದ್ದೆಗಳ ಕಾರಣ ಹಿರಿಯ ವೈದ್ಯರು ಪದೋನ್ನತಿ ಇಲ್ಲದೇ ನಿವೃತ್ತಿಯಾ ಗುತ್ತಿದ್ದಾರೆ ಎಂದು ಹೇಳಿದರು.
ರೋಗಿಗಳಿಗೆ ಉಂಟಾಗುವ ತೊಂದರೆ ಗಳಿಗಾಗಿ ಸಂಘ ಕ್ಷಮೆಯಾಚಿಸಿದ್ದರೂ, ಜವಾಬ್ದಾರಿ ಸರ್ಕಾರದದ್ದೇ ಎಂದು ಹೇಳಿದೆ.

The post ಮಾ.11ರಿಂದ ವೈದ್ಯಕೀಯ ಸಿಬ್ಬಂದಿ ಸಂಘಗಳ ಮುಷ್ಕರ appeared first on Good News 24x7.

]]>
ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದೀರಾ ಹುಷಾರ್ : ನಿಮ್ಮ ಮನೆ ಮುಂದೆಯೇ ಬೀಳಲಿದೆ ರಾಶಿ ರಾಶಿ ತ್ಯಾಜ್ಯ! https://www.goodnews24x7.com/are-you-throwing-garbage-everywhere-beware-heaps-of-garbage-will-fall-in-front-of-your-house/ Sun, 26 Oct 2025 11:31:35 +0000 https://www.goodnews24x7.com/?p=7857 ಸಾಕಷ್ಟು ಜನ ಜಾಗೃತಿ ಬಳಿಕವೂ ಬೆಂಗಳೂರು ನಗರದಲ್ಲಿ ಖುಷಿ ಬಂದಂತೆ ಕಸ ಎಸೆದು ಹೋಗುವ ಪ್ರಕರಣಗಳು ನಿಂತಿಲ್ಲ. ಹೀಗಾಗಿ ಈ ವಿಚಾರದಲ್ಲಿ ಒಂದಿಷ್ಟು ಕಠಿಣ ಕ್ರಮಗಳನ್ನ ಕೈಗೊಳ್ಳಲು ಗ್ರೇಟರ್​ ಬೆಂಗಳೂರು ಪ್ರಾಧಿಕಾರ ನಿರ್ಧರಿಸಿದೆ. ಕಸ ಎಸೆಯುವವರ ಮನೆ ಬಾಗಿಲಲ್ಲೇ ಲೋಡ್​ಗಟ್ಟಲೆ ಕಸ…

The post ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದೀರಾ ಹುಷಾರ್ : ನಿಮ್ಮ ಮನೆ ಮುಂದೆಯೇ ಬೀಳಲಿದೆ ರಾಶಿ ರಾಶಿ ತ್ಯಾಜ್ಯ! appeared first on Good News 24x7.

]]>

ಸಾಕಷ್ಟು ಜನ ಜಾಗೃತಿ ಬಳಿಕವೂ ಬೆಂಗಳೂರು ನಗರದಲ್ಲಿ ಖುಷಿ ಬಂದಂತೆ ಕಸ ಎಸೆದು ಹೋಗುವ ಪ್ರಕರಣಗಳು ನಿಂತಿಲ್ಲ. ಹೀಗಾಗಿ ಈ ವಿಚಾರದಲ್ಲಿ ಒಂದಿಷ್ಟು ಕಠಿಣ ಕ್ರಮಗಳನ್ನ ಕೈಗೊಳ್ಳಲು ಗ್ರೇಟರ್​ ಬೆಂಗಳೂರು ಪ್ರಾಧಿಕಾರ ನಿರ್ಧರಿಸಿದೆ. ಕಸ ಎಸೆಯುವವರ ಮನೆ ಬಾಗಿಲಲ್ಲೇ ಲೋಡ್​ಗಟ್ಟಲೆ ಕಸ ಸುರಿಯಲು ತೀರ್ಮಾನಿಸಿದೆ. ಜೊತೆಗೆ ದಂಡವನ್ನೂ ವಿಧಿಸಲಿದೆ.

ಬೆಂಗಳೂರು: ಎಲ್ಲೆಂದರಲ್ಲಿ ಕಸ ಎಸೆಯೋ ಅಭ್ಯಾಸ ಬೆಳೆಸಿಕೊಂಡಿದ್ದೀರಾ? ಹಾಗಿದ್ದಾರೆ ನಿಮ್ಮ ಮನೆ ಮುಂದೆಯೇ ಇನ್ನು ಲೋಡ್​ಗಟ್ಟಲೆ ಕಸ ಬಂದು ಬೀಳಲಿದೆ. ಹೌದು, ಸಾಕಷ್ಟು ಜನಜಾಗೃತಿ ಬಳಿಕವೂ ಹಲವು ಮಂದಿ ತಮಗೆ ಖುಷಿ ಬಂದಲ್ಲಿ ಕಸ ಎಸೆದು ಹೋಗುವ ಅಭ್ಯಾಸ ಮುಂದುವರಿಸಿದ್ದಾರೆ. ಇಂತಹ ಪ್ರಕರಣಗಳ ಕಡಿವಾಣಕ್ಕೆ ಮುಂದಾಗಿರುವ ಗ್ರೇಟರ್​ ಬೆಂಗಳೂರು ಪ್ರಾಧಿಕಾರ (GBA) ಇಂತಹದ್ದೊಂದು ಕಠಿಣ ಕ್ರಮಕ್ಕೆ ಮುಂದಾಗಿದೆ. ಕಸ ಎಸೆಯುವವರ ಮನೆ ಮುಂದೆಯೇ ಕಸ ಸುರಿಯುವ ಜೊತೆಗೆ ದಂಡ ವಿಧಿಸಲು ತೀರ್ಮಾನಿಸಿದೆ.

 

ಕಸ ಎಸೆದು ಹೋಗುವುದನ್ನು ಮೊದಲು ಮಾರ್ಷಲ್​ಗಳು ವಿಡಿಯೋ ಮಾಡಿಕೊಳ್ಳಲಿದ್ದಾರೆ. ಆ ಬಳಿಕ ಅಂತವರ ಮನೆಗಳನ್ನು ಶೀಘ್ರ ಪತ್ತೆಮಾಡಿ ಅವರ ಮನೆ ಮುಂದೆಯೇ ಕಸ ಸುರಿಯಲಾಗುತ್ತೆ. ಇಷ್ಟೇ ಅಲ್ಲ, ಮನೆ ಮುಂದೆ ಸರಿಯಲಾದ ಕಸದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲೂ ತೀರ್ಮಾನಿಸಲಾಗಿದ್ದು, ಆ ಮೂಲಕ ಕಸ ಎಸೆಯುವವರನ್ನು ಜಗಜ್ಜಾಹೀರಗೊಳಿಸಲು ಜಿಬಿಎ ಮುಂದಾಗಿದೆ. ವಿಂಗಡಣೆ ಮಾಡದ ತ್ಯಾಜ್ಯ, ಪ್ಲ್ಯಾಸ್ಟಿಕ್​ ಮತ್ತು ಬಾಕ್ಸ್​ಗಳನ್ನ ಎಸೆದು ಹೋಗುವವರ ವಿಡಿಯೋಗಳನ್ನ ದಾಖಲಿಸುವ ಕೆಲಸ ಈಗಾಗಲೇ ಆರಂಭವಾಗಿದ್ದು, ಕಳೆದ ಒಂದು ವಾರದಿಂದ ಈ ಬಗ್ಗೆ ಮಾರ್ಷಲ್​ಗಳು ಕಾರ್ಯನಿರತರಾಗಿದ್ದಾರೆ. ಕಸ ಎಸೆದು ಹೋಗುವವರ ಮನೆಗಳನ್ನ ಸ್ಥಳೀಯ ಪೊಲೀಸರ ಜೊತೆಗೆ ಮಾರ್ಷಲ್​ಗಳು ತಲುಪಲಿದ್ದು, ಅವರ ಮನೆ ಬಾಗಿಲಲ್ಲೇ ಕಸದ ಲೋಡ್​ ಅನ್ನು ಹಾಕಲಾಗುತ್ತೆ. ಇದರ ಜೊತೆಗೆ ದಂಡವನ್ನೂ ವಿಧಿಸಲು ತೀರ್ಮಾನಿಸಲಾಗಿದೆ.

2-10 ಸಾವಿರ ರೂ.ವರೆಗೆ ದಂಡ
ಮನೆಮುಂದೆ ಸುರಿಯಲಾದ ಕಸವನ್ನ ಕೆಲ ಗಂಟೆಗಳ ಬಳಿಕ ತೆರವು ಮಾಡಲಾಗುತ್ತದೆ. ಆದರೆ 2 ರಿಂದ 10 ಸಾವಿರ ರೂಪಾಯಿಗಳ ವರೆಗಿನ ದಂಡವನ್ನು ಎಲ್ಲೆಂದರಲ್ಲಿ ಕಸ ಹಾಕುವವರು ಪಾವತಿಸಬೇಕು. ಈ ಬಗ್ಗೆ ತಕರಾರು, ವಾದ ಮಾಡುವಂತೆಯೂ ಇಲ್ಲ. ನಾವು ಕಸ ಎಸೆದಿಲ್ಲ ಎಂದರೂ ಮಾರ್ಷಲ್​ ಗಳು ಅದಾಗಲೇ ಸೆರೆ ಹಿಡಿದ ನೀವು ಕಸ ಎಸೆಯುವ ವಿಡಿಯೋ ತೋರಿಸಲಿದ್ದಾರೆ. ಜನ ಜಾಗೃತಿ ಕೆಲಸಗಳ ಮೂಲಕ ನಗರದಲ್ಲಿದ್ದ 869 ಬ್ಲ್ಯಾಕ್​ ಸ್ಪಾಟ್​ಗಳನ್ನ 150ಕ್ಕೆ ಇಳಿಸುವಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ ಈಗಾಗಲೇ ಸಫಲವಾಗಿದೆ. ಈ ನಡುವೆ ನಗರವನ್ನು ಸ್ವಚ್ಛವಾಗಿ ಇರಿಸುವಂತೆ ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್​ ಕೂಡ ಸೂಚನೆ ನೀಡಿದ್ದಾರೆ. ಹೀಗಾಗಿ ಕಸ ಎಸೆಯುವವರ ವಿರುದ್ಧ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ ಎಂದು BSWML ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕರೀಗೌಡ ತಿಳಿಸಿದ್ದಾರೆ.

The post ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದೀರಾ ಹುಷಾರ್ : ನಿಮ್ಮ ಮನೆ ಮುಂದೆಯೇ ಬೀಳಲಿದೆ ರಾಶಿ ರಾಶಿ ತ್ಯಾಜ್ಯ! appeared first on Good News 24x7.

]]>
ಉದ್ಘಾಟನೆ ಮಾಡುವ ಮುನ್ನಾ ದಿನ ಆದೇಶ ರದ್ದು: ಆಟೋ ನಿಲ್ದಾಣ ನಿರ್ಮಿಸಲು ಅನುಮತಿ https://www.goodnews24x7.com/order-cancelled-a-day-before-inauguration-permission-to-build-an-auto-stand/ Wed, 15 Oct 2025 04:20:28 +0000 https://www.goodnews24x7.com/?p=7715 ಹೊಸೂರು : ಆಟೋ ನಿಲ್ದಾಣ ನಿರ್ಮಿಸಲು ಅನುಮತಿ ಕೊಟ್ಟ ಇಲಾಖೆ ಕಾಮಗಾರಿ ಮುಗಿದು ಉದ್ಘಾಟನೆ ಮಾಡುವ ಮುನ್ನಾದಿನ ಆದೇಶ ರದ್ದುಗೊಳಿಸಿದ ವಿಲಕ್ಷಣ ಪ್ರಕರಣ ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ವಿನಾಯಕ ಆಟೋ ಸವಾರರು ಮತ್ತು ಮಾಲೀಕರ ಸಂಘ ವತಿಯಿಂದ…

The post ಉದ್ಘಾಟನೆ ಮಾಡುವ ಮುನ್ನಾ ದಿನ ಆದೇಶ ರದ್ದು: ಆಟೋ ನಿಲ್ದಾಣ ನಿರ್ಮಿಸಲು ಅನುಮತಿ appeared first on Good News 24x7.

]]>

ಹೊಸೂರು : ಆಟೋ ನಿಲ್ದಾಣ ನಿರ್ಮಿಸಲು ಅನುಮತಿ ಕೊಟ್ಟ ಇಲಾಖೆ ಕಾಮಗಾರಿ ಮುಗಿದು ಉದ್ಘಾಟನೆ ಮಾಡುವ ಮುನ್ನಾದಿನ ಆದೇಶ ರದ್ದುಗೊಳಿಸಿದ ವಿಲಕ್ಷಣ ಪ್ರಕರಣ ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವಿನಾಯಕ ಆಟೋ ಸವಾರರು ಮತ್ತು ಮಾಲೀಕರ ಸಂಘ ವತಿಯಿಂದ ಆಟೋ ನಿಲ್ದಾಣ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ವತಿಯಿಂದ ಅನುಮತಿಯನ್ನು ಪಡೆಯಲಾಗಿತ್ತು. ಅದರಂತೆ ವಿವಿಧ ದಾನಿಗಳ ಸಹಾಯದಿಂದ ಇದೀಗ ಆಟೋ ನಿಲ್ದಾಣ ಸಿದ್ಧಗೊಂಡಿದ್ದು ಬುಧವಾರ ಉದ್ಘಾಟನೆಯಾಗಬೇಕಿತ್ತು. ಆದರೆ ಸೋಮವಾರ ರಾತ್ರಿ ಏಕಾಏಕಿ ನಮ್ಮ ರಸ್ತೆಯ ಚರಂಡಿಯ ಮೇಲೆ ನಿಲ್ದಾಣ ನಿರ್ಮಿಸಲಾಗಿದೆ ತೆರವುಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆ ನೋಟಿಸ್ ನೀಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

ಆಟೋ ಸಂಘದವರು 11-8-2025 ರಂದು ಅನುಮತಿ ಕೇಳಿ ಆದೇಶ ಪಡೆದು ಈಗಾಗಲೇ ನಿಲ್ದಾಣ ನಿರ್ಮಿಸಿದ್ದು 22-9-2025 ರಂದೇ ನಿಲ್ದಾಣ ನಿರ್ಮಾಣವನ್ನು ಸ್ಥಗಿತಗೊಳಿಸಿ ಎಂದು ನೋಟಿಸ್ ಜಾರಿಯಾಗಿದ್ದರೂ ಸೋಮವಾರ ರಾತ್ರಿ ಈ ಮಾಹಿತಿ ಆಟೋ ಸಂಘದವರಿಗೆ ತಿಳಿಯಿತು. ನೋಟಿಸ್ ನೀಡಿರುವ ಕ್ರಮವೇ ಸರಿ ಇಲ್ಲ. ಅದಲ್ಲದೆ ಒಂದು ತಿಂಗಳು 10 ದಿವಸದ ನಂತರ ಕಾಮಗಾರಿ ಮುಗಿದು ಉದ್ಘಾಟನೆ ದಿನ ನಿಗದಿಯಾದ ಮೇಲೆ ನೋಟಿಸ್ ಜಾರಿ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದು ನಿಲ್ದಾಣ ನಿರ್ಮಿಸಲು ಅನುಮತಿ ನೀಡಿದ ನಂತರ ನಿಲ್ದಾಣ ಚರಂಡಿ ಮೇಲಿದೆಯೇ ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡಬೇಕಾದ ಅಧಿಕಾರಿಗಳು ಲಕ್ಷಾಂತರ ರೂ. ಗಳನ್ನು ಖರ್ಚು ಮಾಡಿ ನಿರ್ಮಿಸಿದ ನಂತರ ಈ ರೀತಿ ವರ್ತಿಸುವುದು ತುಘಲಕ್ ದರ್ಬಾರ್ ಆಗಿದೆ ಎಂದು ಸಂಘದ ಅಧ್ಯಕ್ಷ ದೂರಿದರು.

ಲೋಕೋಪಯೋಗಿ ಇಲಾಖೆ ಅನುಮತಿ ನೀಡಿರುವ ಪತ್ರದಲ್ಲಿ ಚಾಲಕರ ಹಿತ ದೃಷ್ಟಿಯಿಂದ ಅನುಮತಿ ನೀಡಿದೆ ಎಂದು ಹೇಳಿದ್ದು ಇದೀಗ ಸ್ಥಳ ತೆರವು ಗೊಳಿಸುವುದಾಗಿ ಹೇಳುತ್ತಿರುವುದರ ಹಿಂದೆ ಅನ್ಯ ಕಾರಣಗಳಿವೆ. ತಾಲೂಕಿನ ಬೇರೆ ಬೇರೆ ಗ್ರಾಮಗಳಲ್ಲೂ ರಸ್ತೆ ಬದಿಯಲ್ಲಿಯೇ ಆಟೋ ನಿಲ್ದಾಣ ನಿರ್ಮಾಣವಾಗಿದ್ದರೂ ಹೊಸೂರಿನಲ್ಲಿ ಮಾತ್ರ ತೆರವುಗೊಳಿಸಲು ಏಕಾಏಕಿ ಮುಂದಾಗುತ್ತಿರುವ ಧಾವಂತಕ್ಕೆ ಕಾರಣವೇನು ಎಂದು ಆರೋಪಿಸಿದ್ದಾರೆ.

ರಾಜಕೀಯ ಕಾರಣ
ಆಟೋ ನಿಲ್ದಾಣ ಕಾಮಗಾರಿಗೆ ಹಣಕಾಸಿನ ನೆರವನ್ನು ಜೆಡಿಎಸ್ ಮುಖಂಡ ಹಳಿಯೂರು ಮಧುಚಂದ್ರ ನಿರ್ವಹಿಸಿದ್ದು ಸದ್ಯ ನಿಲ್ದಾಣದ ಉದ್ಘಾಟನೆ ಬುಧವಾರ(ಇಂದು) ನಿಗದಿಯಾಗಿದ್ದು ಬ್ಯಾನರ್ಗಳು ಸಿದ್ದಗೊಂಡಿವೆ. ಅಲ್ಲದೆ ನಿಲ್ದಾಣದಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್ ಭಾವಚಿತ್ರವಿರುವ ಕಟೌಟ್ ಇದ್ದು ಅನ್ಯ ಪಕ್ಷದವರು ಇದರಿಂದ ಬೇಸರಗೊಂಡು ಅಧಿಕಾರಿಗಳ ಮೇಲೆ ಒತ್ತಡ ತಂದು ಬ್ಯಾನರ್ ತೆರವುಗೊಳಿಸಿದರೆ ನಿಲ್ದಾಣ ಉದ್ಘಾಟನೆಗೆ ಯಾವುದೇ ತೊಂದರೆ ಇಲ್ಲ ಎಂದು ಮೌಖಿಕವಾಗಿ ಕೆಲವು ಅಧಿಕಾರಿಗಳು ತಿಳಿಸಿರುವುದು ಜೆಡಿಎಸ್ ಮುಖಂಡರನ್ನು ರೊಚ್ಚಿಗೆಬ್ಬಿಸಿದೆ.

ಒಟ್ಟಾರೆ ರಾಜಕೀಯವೋ, ಅಧಿಕಾರಿಗಳ ಹೊಣೆಗೇಡಿತನವೋ ಒಂದು ಬಾರಿ ಅನುಮತಿ ನೀಡಿ ಉದ್ಘಾಟನೆಯಾಗುವ ಹಿಂದಿನ ದಿನ ಬೇಡ ಎನ್ನುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ತಮಗೆ ತಮ್ಮ ಆಟೋಗಳಿಗೆ ವ್ಯವಸ್ಥಿತವಾಗಿ ನಿಲ್ದಾಣ ನಿರ್ಮಾಣ ಮಾಡಿಕೊಂಡಿದ್ದ ಆಟೋ ಚಾಲಕರಿಗೆ ಮತ್ತು ಮಾಲೀಕರಿಗೆ ಈ ರಗಳೆಯಿಂದ ಸಾಕಷ್ಟು ಬೇಸರವಾಗಿದೆ. ಇಂದು ಉದ್ಘಾಟನೆ ನಡೆಯುವುದೋ ಇಲ್ಲವೋ ಎಂಬ ಜಿಜ್ಞಾಸೆಯಲ್ಲಿದ್ದಾರೆ.

 

ಆಟೋ ನಿಲ್ದಾಣ ಕಾಮಗಾರಿ ಯಾರೇ ಮಾಡಿರಲಿ ಸಾರ್ವಜನಿಕ ಉಪಯೋಗಕ್ಕೆ ಬಳಸುವ ಆಟೋಗಳಿಂದ ಈ ಭಾಗದ ಸಾವಿರಾರು ಜನರಿಗೆ ಅನುಕೂಲವಾಗಿದ್ದು ಅಂತಹ ಆಟೋ ನಿಲ್ದಾಣಕ್ಕೆ ತಡೆಗಟ್ಟುತ್ತಿರುವುದು ಎಷ್ಟು ಸರಿ? ಇದು ಕ್ಷೇತ್ರದಲ್ಲಿ ರಾಜಕೀಯ ಹೋರಾಟಕ್ಕೆ ಮುನ್ನುಡಿಯಾಗಲಿದ್ದು ಇಂದು ಉದ್ಘಾಟನೆ ನೂರಕ್ಕೆ ನೂರರಷ್ಟು ನಡೆಯಲಿದೆ. ಮಾಜಿ ಸಚಿವ ಸಾ.ರಾ. ಮಹೇಶ್ ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಉದ್ಘಾಟನೆ ನೆರವೇರಿಸಲಿದ್ದಾರೆ.

 

                                                                                                                         ಹಳಿಯೂರು ಮಧುಚಂದ್ರ,ಜಿಲ್ಲಾ ಜೆಡಿಎಸ್ ಮುಖಂಡ

ನಾವು ಎಲ್ಲಾ ಪಕ್ಷದವರನ್ನು ಹಣಕಾಸು ನೆರವು ಕೇಳಿದ್ದು ಆದರೆ ಮಧುಚಂದ್ರ ಅವರು ಸಂಪೂರ್ಣ ನಿಲ್ದಾಣ ಕಾಮಗಾರಿಯ ಹೊಣೆ ಹೊತ್ತು ಕಾಮಗಾರಿ ಉದ್ಘಾಟನೆಗೆ ಸಿದ್ಧಗೊಂಡಿದೆ. ಇದೀಗ ಉದ್ಘಾಟನೆಗೆ ನೆರವು ನೀಡಿದ ದಾನಿಗಳ ಫೋಟೋ ಬಳಸಿದ್ದನ್ನು ನೆಪವಾಗಿಸಿಕೊಂಡು ಉದ್ಘಾಟನೆ ತಡೆಯುವುದು ಎಷ್ಟು ಸರಿ ಆಟೋ ಚಾಲಕರಲ್ಲಿ ಎಲ್ಲಾ ಪಕ್ಷದ ಕಾರ್ಯಕರ್ತರು ಇದ್ದು ಈ ಘಟನೆಯಿಂದ ನಮಗೆ ನೋವಾಗಿದೆ, ಆದರೆ ಇಂದು ಉದ್ಘಾಟನೆಯಾಗುವುದು ಶತಸಿದ್ಧ.

                                                                                                ಮಂಜು,ಅಧ್ಯಕ್ಷರು ವಿನಾಯಕ ಆಟೋ ಚಾಲಕರು ಮತ್ತು ಮಾಲೀಕರ ಸಂಘ. ಹೊಸೂರು.

ಆಟೋ ನಿಲ್ದಾಣ ನಿರ್ಮಾಣವಾಗಿರುವುದು ನಮ್ಮ ರಸ್ತೆಯ ಚರಂಡಿಯ ಮೇಲಾಗಿದ್ದು ಅದನ್ನು ತೆರವುಗೊಳಿಸಲೇಬೇಕು ಈ ಬಗ್ಗೆ ಯಾವುದೇ ರಾಜಿ ಇಲ್ಲ.

ಸುಮಿತ ಬಸವರಾಜು,ಎ ಇ ಇ ಲೋಕೋಪಯೋಗಿ ಇಲಾಖೆ, ಕೆ ಆರ್ ನಗರ.

The post ಉದ್ಘಾಟನೆ ಮಾಡುವ ಮುನ್ನಾ ದಿನ ಆದೇಶ ರದ್ದು: ಆಟೋ ನಿಲ್ದಾಣ ನಿರ್ಮಿಸಲು ಅನುಮತಿ appeared first on Good News 24x7.

]]>
ಬಿಡಿಎನಲ್ಲಿ ಬದಲಾವಣೆ ಪರ್ವ ಶುರು.. ಮಾಸ್ಟರ್​ ಪ್ಲಾನ್-2041! https://www.goodnews24x7.com/the-era-of-change-has-begun-in-bda-master-plan-2041/ Sun, 31 Aug 2025 05:38:46 +0000 https://www.goodnews24x7.com/?p=7101 ಬಿಡಿಎನಲ್ಲಿ ಬದಲಾವಣೆ ಪರ್ವ ಶುರುವಾಗಿದೆ.. ಹಿಂದಿನ ನ್ಯೂನತೆ ಸರಿಪಡಿಸಿ ನಗರಕ್ಕೆ ಭದ್ರ ಬುನಾದಿ ಹಾಕಲು ಬಿಡಿಎ ಸಜ್ಜಾಗಿದೆ.. RMP-2041 ಪ್ಲಾನ್​ ಹಿಡಿದು ಬಿಡಿಎ ಬದಲಾವಣೆ ಪರ್ವಕ್ಕೆ ನಾಂದಿಹಾಡಿದೆ. ಉದ್ದೇಶವೇನು? ಬಿಡಿಎನಲ್ಲಿ ಪ್ರಸ್ತುತ ಪರಿಷ್ಕೃತ ಮಾಸ್ಟರ್​​​ ಪ್ಲಾನ್​​-2015 ಬಳಕೆ ವಿಸ್ತರಣೆ, ಹೆಚ್ಚುತ್ತಿರುವ ಜನಸಂಖ್ಯೆ,…

The post ಬಿಡಿಎನಲ್ಲಿ ಬದಲಾವಣೆ ಪರ್ವ ಶುರು.. ಮಾಸ್ಟರ್​ ಪ್ಲಾನ್-2041! appeared first on Good News 24x7.

]]>

ಬಿಡಿಎನಲ್ಲಿ ಬದಲಾವಣೆ ಪರ್ವ ಶುರುವಾಗಿದೆ.. ಹಿಂದಿನ ನ್ಯೂನತೆ ಸರಿಪಡಿಸಿ ನಗರಕ್ಕೆ ಭದ್ರ ಬುನಾದಿ ಹಾಕಲು ಬಿಡಿಎ ಸಜ್ಜಾಗಿದೆ.. RMP-2041 ಪ್ಲಾನ್​ ಹಿಡಿದು ಬಿಡಿಎ ಬದಲಾವಣೆ ಪರ್ವಕ್ಕೆ ನಾಂದಿಹಾಡಿದೆ.

ಉದ್ದೇಶವೇನು?
ಬಿಡಿಎನಲ್ಲಿ ಪ್ರಸ್ತುತ ಪರಿಷ್ಕೃತ ಮಾಸ್ಟರ್​​​ ಪ್ಲಾನ್​​-2015 ಬಳಕೆ
ವಿಸ್ತರಣೆ, ಹೆಚ್ಚುತ್ತಿರುವ ಜನಸಂಖ್ಯೆ, ವಾಹನ ದಟ್ಟಣೆ ನಿಯಂತ್ರಣ
ಉತ್ತಮ ಜೀವನ ಗುಣಮಟ್ಟಕ್ಕೆ ಮೂಲ ಸೌಕರ್ಯಗಳ ಅಭಿವೃದ್ಧಿ
ಅನಧಿಕೃತ ಲೇಔಟ್​ಗಳು & ಕಟ್ಟಡಗಳಿಗೆ ಕಡಿವಾಣ ಹಾಕುವುದು
ನಗರಕ್ಕೆ ಅಗತ್ಯವಾದ ಫ್ಲೈಓವರ್​​ಗಳನ್ನು ನಿರ್ಮಾಣ ಮಾಡುವುದು
ಎಲ್ಲಾ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವುದು
ವಿಶೇಷವಾಗಿ ಗುಣಮಟ್ಟದ ಸಾರಿಗೆ ವ್ಯವಸ್ಥೆಯನ್ನ ರೂಪಿಸುವುದು
ಕೃಷಿ, ವಸತಿ, ವಾಣಿಜ್ಯ, ಸರ್ಕಾರಿ ಉದ್ದೇಶದ ಜಮೀನಿನ ಮಾಹಿತಿ

BDAಯಿಂದ ಟೆಂಡ‌ರ್ ಅಡಿ ಹೈಟೆಕ್ ತ್ರಿಡಿ ಡೋನ್ ಸಮೀಕ್ಷೆ ನಡೆಸಲಾಗುತ್ತೆ.. ಆಧುನಿಕ ತಂತ್ರಜ್ಞಾನದ ಮೂಲಕ ಸಮೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ.. 1,240 ಚದರ ಕಿ.ಮೀ. ವಿಸ್ತೀರ್ಣ ಒಳಗೊಂಡ ಬೆಂಗಳೂರು ನಗರದ ಮೂಲ ನಕ್ಷೆ, ಭೂ ಬಳಕೆಯ ನಕ್ಷೆ, ಡಿಜಿಟಲ್ ಎಲಿವೇಶನ್​​ ಬಳಕೆ ಮಾಡಲಾಗುತ್ತೆ.. ಭೌಗೋಳಿಕ ಮಾಹಿತಿ ವ್ಯವಸ್ಥೆ ವಿಧಾನದ ಮೂಲಕ ಸಮೀಕ್ಷೆ ನಡೆಸಲಾಗುತ್ತೆ.. ಕರಡು ಸಿದ್ಧವಾದ ನಂತರ ಈ ಬಗ್ಗೆ ಗೆಜೆಟ್‌ನಲ್ಲಿ ಪ್ರಕಟಣೆ ಮಾಡುವ ಸಾಧ್ಯತೆ ಇದೆ.. ಬಳಿಕ ಸಾರ್ವಜನಿಕರಿಗೆ ಸಲಹೆ, ಆಕ್ಷೇಪಣೆಗೆ 60 ದಿನ ಕಾಲಾವಕಾಶ ಇರುತ್ತೆ.. 2026ರ ಮಧ್ಯಭಾಗದ ವೇಳೆಗೆ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಇದಾಗಿದೆ.. ಸದ್ಯ ಪರಿಷ್ಕೃತ ಮಾಸ್ಟರ್​​​ ಸಿದ್ಧಪಡಿಸಲು BDA ಟೆಂಡರ್​ ಕರೆದಿದೆ.. ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಏಜೆನ್ಸಿ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ.. ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 30ಕ್ಕೆ ಬಿಡಿಎ ಡೆಡ್​ಲೈನ್​ ನೀಡಿದೆ.

ಮಾಸ್ಟರ್ ಪ್ಲಾನ್-2041ನ್ನು ಪರಿಷ್ಕರಣೆಗೆ BDAಗೆ ಅಧಿಕಾರ ಇಲ್ಲ ಎಂಬ ವಾದದಿಂದ ಸದ್ಯ ಹೈಕೋರ್ಟ್​​ನಲ್ಲಿ ಹಿನ್ನಡೆಯಾಗಿದೆ.. ಸದ್ಯ ಹೈಕೊರ್ಟ್​ ಹಸಿರು ನಿಶಾನೆ ತೋರಿದ್ರೆ ಬಿಡಿಎನಲ್ಲಿ ಬದಲಾವಣೆ ಪರ್ವ ಆರಂಭವಾಗಲಿದೆ.. ಒಟ್ನಲ್ಲಿ ಮಾಸ್ಟರ್ ಪ್ಲಾನ್-2041 ಮೂಲಕ ಬಿಡಿಎ ಇಂಥದ್ದೊಂದು ಪ್ಲಾನ್​ ಮಾಡಿರೋದು ರಾಜಧಾನಿಗೆ ವರವಾಗೋದು ನಿಶ್ಚಿತ.

The post ಬಿಡಿಎನಲ್ಲಿ ಬದಲಾವಣೆ ಪರ್ವ ಶುರು.. ಮಾಸ್ಟರ್​ ಪ್ಲಾನ್-2041! appeared first on Good News 24x7.

]]>
ರಾಷ್ಟ್ರಪತಿ ದ್ರೌಪದಿಮುರ್ಮು ಮೈಸೂರು ಭೇಟಿಗೆ ಸಕಲ ಸಿದ್ಧತೆ; ಸೆಪ್ಟೆಂಬರ್ 1–2 ರಂದು ಮೈಸೂರಿನಲ್ಲಿ ಭರಪೂರ ಕಾರ್ಯಕ್ರಮಗಳು. https://www.goodnews24x7.com/all-preparations-underway-for-president-droupadi-murmus-visit-to-mysuru-a-host-of-events-in-mysuru-on-september-1-2/ Thu, 28 Aug 2025 05:52:58 +0000 https://www.goodnews24x7.com/?p=6876 ಮೈಸೂರು : ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 1ರಂದು ಮೈಸೂರಿಗೆ ಆಗಮಿಸಿ, ವಿವಿಧ ಸಾರ್ವಜನಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಭೇಟಿಯ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತಾ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಅಖಿಲ ಭಾರತ ವಾಕ್ ಮತ್ತು ಶ್ರವಣ…

The post ರಾಷ್ಟ್ರಪತಿ ದ್ರೌಪದಿಮುರ್ಮು ಮೈಸೂರು ಭೇಟಿಗೆ ಸಕಲ ಸಿದ್ಧತೆ; ಸೆಪ್ಟೆಂಬರ್ 1–2 ರಂದು ಮೈಸೂರಿನಲ್ಲಿ ಭರಪೂರ ಕಾರ್ಯಕ್ರಮಗಳು. appeared first on Good News 24x7.

]]>

ಮೈಸೂರು : ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 1ರಂದು ಮೈಸೂರಿಗೆ ಆಗಮಿಸಿ, ವಿವಿಧ ಸಾರ್ವಜನಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಭೇಟಿಯ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತಾ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ಸವದಲ್ಲಿ ಭಾಗವಹಿಸಲಿರುವ ರಾಷ್ಟ್ರಪತಿ,

ಸಾಂಸ್ಕೃತಿಕ ನಗರಿ ಮೈಸೂರು ಪಟ್ಟಣದ ಮಾನಸಗಂಗೋತ್ರಿಯಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ 60ನೇ ವಾರ್ಷಿಕೋತ್ಸವ (ವಜ್ರಮಹೋತ್ಸವ) ಕಾರ್ಯಕ್ರಮದಲ್ಲಿ ಸೆ.1 ರಂದು ಸಂಜೆ 4 ಗಂಟೆಗೆ ರಾಷ್ಟ್ರಪತಿ ಮುರ್ಮು ಭಾಗವಹಿಸಲಿದ್ದಾರೆ. ಅವರು ಅದೇ ದಿನ ನವದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿ, ನಗರದ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಕಾರ್ಯಕ್ರಮದ ನಂತರ, ಅವರು ಚಾಮುಂಡಿಬೆಟ್ಟಕ್ಕೆ ತೆರಳಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವರು.

ಸೆ.2ರಂದು ಮೈಸೂರು ಅರಮನೆ ಭೇಟಿ,

ಮರುದಿನವಾದ ಸೆಪ್ಟೆಂಬರ್ 2ರಂದು ಬೆಳಿಗ್ಗೆ 8.30ಕ್ಕೆ ಮೈಸೂರು ಅರಮನೆಗೆ ಭೇಟಿ ನೀಡಲಿರುವ ರಾಷ್ಟ್ರಪತಿಗಳನ್ನು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಆಹ್ವಾನಿಸಿದ್ದಾರೆ.

ಅಂದು ಬೆಳಿಗ್ಗೆ 11.30ರವರೆಗೆ ಮೈಸೂರು ಅರಮನೆಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇನ್ನು, ಅಂದು ಸಂಜೆ ನಡೆಯಬೇಕಿದ್ದ ಧ್ವನಿ–ಬೆಳಕು (Sound and Light) ಕಾರ್ಯಕ್ರಮವನ್ನು ಕೂಡ ರದ್ದುಪಡಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಮತ್ತು ಅರಮನೆ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದ್ದಾರೆ.

ಕಾರ್ಯಕ್ರಮಗಳೆಲ್ಲಾ ಮುಗಿದ ಬಳಿಕ ರಾಷ್ಟ್ರಪತಿ ಮುರ್ಮು ಅವರು ಮೈಸೂರು ವಿಮಾನ ನಿಲ್ದಾಣದಿಂದ ದೆಹಲಿಗೆ ಹಿಂದಿರುಗಲಿದ್ದಾರೆ.

ನಗರದಲ್ಲಿ ಭದ್ರತಾ ಕ್ರಮಗಳು ಗಟ್ಟಿಯಾಗಿ: ವಾಹನ ಸಂಚಾರಕ್ಕೆ ತಾತ್ಕಾಲಿಕ ನಿಯಮ,

ರಾಷ್ಟ್ರಪತಿಯವರು ಸಂಚರಿಸಲಿರುವ ಎಲ್ಲಾ ಮಾರ್ಗಗಳ ಮೇಲೆ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೈಸೂರು ವಿಮಾನ ನಿಲ್ದಾಣದಿಂದ ರಾಡಿಸನ್ ಬ್ಲೂ ಹೋಟೆಲ್, ಹೋಟೆಲ್‌ನಿಂದ ವಾಕ್ ಮತ್ತು ಶ್ರವಣ ಸಂಸ್ಥೆ, ಅಲ್ಲಿಂದ ಮೈಸೂರು ಅರಮನೆ ಮತ್ತು ಚಾಮುಂಡಿಬೆಟ್ಟದವರೆಗೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗುವುದು.

ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೂ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಈ ಕುರಿತು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಸಂಚಾರ ವಿಭಾಗದ ಎಸಿಪಿ ಶಿವಶಂಕರ್ ತಿಳಿಸಿದರು.

ರಸ್ತೆ ಸುಧಾರಣೆ ಮತ್ತು ಸ್ವಚ್ಛತಾ ಚಟುವಟಿಕೆಗಳಿಗೆ ವೇಗ,

ರಾಷ್ಟ್ರಪತಿಯವರ ಪ್ರವಾಸದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳ ಹೊಂಡಗಳನ್ನು ಮುಚ್ಚಿ ಡಾಂಬರೀಕರಣ, ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಗಿಡಗಳನ್ನು ತೆಗೆಯುವ, ರಸ್ತೆ ಒತ್ತುವರಿ ತೆರವು, ಹಾಗೂ ಸ್ವಚ್ಛತಾ ಕಾರ್ಯ ಭರದಿಂದ ಸಾಗುತ್ತಿವೆ.

ನಗರಪಾಲಿಕೆ ಮುಂಭಾಗ, ಕಾಡಾ ಕಚೇರಿ, ಬಸವೇಶ್ವರ ವೃತ್ತ ಹಾಗೂ ಜೆಎಸ್‌ಎಸ್ ವಿದ್ಯಾಪೀಠದ ಮುಂಭಾಗದ ರಸ್ತೆಗಳ ಸುಧಾರಣಾ ಕೆಲಸಗಳು ಜೋರುಗೊಳ್ಳುತ್ತಿವೆ.

The post ರಾಷ್ಟ್ರಪತಿ ದ್ರೌಪದಿಮುರ್ಮು ಮೈಸೂರು ಭೇಟಿಗೆ ಸಕಲ ಸಿದ್ಧತೆ; ಸೆಪ್ಟೆಂಬರ್ 1–2 ರಂದು ಮೈಸೂರಿನಲ್ಲಿ ಭರಪೂರ ಕಾರ್ಯಕ್ರಮಗಳು. appeared first on Good News 24x7.

]]>
ರಸ್ತೆ ಬದಿ ಕಸ ಸುರಿಯುವವರ ವಿರುದ್ಧ BBMP ನಿಂದ ಕಠಿಣ ಕ್ರಮ: ತ್ಯಾಜ್ಯ ಸಂಗ್ರಹ ಆಟೋಗಳ ಸಮಯದಲ್ಲಿ ಬದಲಾವಣೆ. https://www.goodnews24x7.com/bbmp-takes-strict-action-against-those-who-dump-garbage-on-the-roadside-change-in-the-timing-of-waste-collection-autos/ Tue, 26 Aug 2025 10:02:21 +0000 https://www.goodnews24x7.com/?p=6759 ಬೆಂಗಳೂರು: ನಗರದಲ್ಲಿ ರಸ್ತೆಗಳ ಬದಿಯಲ್ಲಿ ಕಸ ಸುರಿಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಂದಾಗಿದೆ. ಈ ಹಿನ್ನೆಲೆಯಲ್ಲಿ, ಪಾಲಿಕೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಘನತ್ಯಾಜ್ಯ ಸಂಗ್ರಹಣಾ ಆಟೋ ಟಿಪ್ಪರ್ ವಾಹನಗಳ ಮಸ್ಟರಿಂಗ್ (ಹಾಜರಾತಿ ದಾಖಲೆ) ಸಮಯವನ್ನು…

The post ರಸ್ತೆ ಬದಿ ಕಸ ಸುರಿಯುವವರ ವಿರುದ್ಧ BBMP ನಿಂದ ಕಠಿಣ ಕ್ರಮ: ತ್ಯಾಜ್ಯ ಸಂಗ್ರಹ ಆಟೋಗಳ ಸಮಯದಲ್ಲಿ ಬದಲಾವಣೆ. appeared first on Good News 24x7.

]]>

ಬೆಂಗಳೂರು: ನಗರದಲ್ಲಿ ರಸ್ತೆಗಳ ಬದಿಯಲ್ಲಿ ಕಸ ಸುರಿಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಂದಾಗಿದೆ. ಈ ಹಿನ್ನೆಲೆಯಲ್ಲಿ, ಪಾಲಿಕೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಘನತ್ಯಾಜ್ಯ ಸಂಗ್ರಹಣಾ ಆಟೋ ಟಿಪ್ಪರ್ ವಾಹನಗಳ ಮಸ್ಟರಿಂಗ್ (ಹಾಜರಾತಿ ದಾಖಲೆ) ಸಮಯವನ್ನು ನವೀಕರಿಸಲಾಗಿದೆ.

ಹಳೆಯ ನಿಯಮದಂತೆ ಬೆಳಿಗ್ಗೆ 6 ಗಂಟೆಯಿಂದ 7:30 ರವರೆಗೆ ತ್ಯಾಜ್ಯ ಸಂಗ್ರಹಣೆಯ ಕಾರ್ಯ ನಡೆಯುತ್ತಿದ್ದರೆ, ಈಗ ಅದನ್ನು ಬೆಳಿಗ್ಗೆ 5:30ಕ್ಕೆ ಮುಂದೂಡಲಾಗಿದೆ. ಈ ಮೂಲಕ ನಾಗರಿಕರು ತಮ್ಮ ದೈನಂದಿನ ಕೆಲಸಗಳಿಗೆ ಹೊರಡುವ ಮೊದಲು ತ್ಯಾಜ್ಯವನ್ನು ನೀಡಲು ಅನುಕೂಲವಾಗಲಿದೆ.

ಈ ಹೊಸ ಕ್ರಮದಿಂದ, ಸಾರ್ವಜನಿಕರು ಅಸ್ಥಾನದಲ್ಲಿ ತ್ಯಾಜ್ಯ ಎಸೆಯುವ ಪ್ರವೃತ್ತಿಗೆ ಕಡಿವಾಣ ಬೀಳುವ ಸಾಧ್ಯತೆ ಇದೆ. ತ್ಯಾಜ್ಯ ಸುರಿಯುವುದರಿಂದ ಉಂಟಾಗುವ ‘ಕಪ್ಪು ಚುಕ್ಕಿ’ (Black Spots) ಗಳನ್ನು ತಡೆಯಲು ಸಹ ಸಹಾಯವಾಗಲಿದೆ.

ಸಹಕಾರಕ್ಕೆ ಸಾರ್ವಜನಿಕರಲ್ಲಿ ಮನವಿ

ಈ ಕ್ರಮವನ್ನು ಯಶಸ್ವಿಯಾಗಿ ಜಾರಿಗೆ ತರಲು ಸಾರ್ವಜನಿಕರ ಸಹಕಾರ ಅತ್ಯಾವಶ್ಯಕ ಎಂದು BBMP ಘನತ್ಯಾಜ್ಯ ನಿರ್ವಹಣಾ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಮನವಿ ಮಾಡಿದ್ದಾರೆ.

BBMP ಅಧಿಕಾರಿಗಳ ಪ್ರಕಾರ, ಈ ಹೊಸ ನಿಯಮವು ನಗರದಲ್ಲಿನ ಸ್ವಚ್ಛತಾ ಕಾರ್ಯದ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಲು ಹಾಗೂ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲು ಸಹಾಯಕವಾಗಲಿದೆ.

ಸ್ಕೈವಾಕ್‌ಗಳಲ್ಲಿ ಸ್ವಚ್ಛತೆಗೆ ಒತ್ತು

ಇದಷ್ಟೇ ಅಲ್ಲದೆ, BBMP ನಗರದಲ್ಲಿನ 77 ಸ್ಕೈವಾಕ್‌ಗಳಲ್ಲಿ ಸ್ವಚ್ಛತಾ ಕಾರ್ಯವನ್ನು ತೀವ್ರಗೊಳಿಸಿದೆ. ಬ್ಯಾಪ್ಟಿಸ್ಟ್ ಆಸ್ಪತ್ರೆ, ಮಾಗಡಿ ರಸ್ತೆ, ಮೈಸೂರು ರಸ್ತೆ, ಟಿನ್ ಫ್ಯಾಕ್ಟರಿ, ಬೆಳ್ಳಂದೂರು ಸೇರಿದಂತೆ ಹಲವೆಡೆ ಈ ಕ್ರಮ ಜಾರಿಯಲ್ಲಿದೆ. ಜನರು ಈ ಸ್ಕೈವಾಕ್‌ಗಳಲ್ಲಿ ಉಗುಳಬಾರದು, ಪ್ಲಾಸ್ಟಿಕ್ ಬಾಟಲ್‌ಗಳು, ಕವರ್‌ಗಳನ್ನು ಬಿಸಾಡಬಾರದು ಹಾಗೂ ಪೋಸ್ಟರ್‌ಗಳನ್ನು ಅಂಟಿಸಬಾರದು ಎಂದು BBMP ಮನವಿ ಮಾಡಿದೆ

The post ರಸ್ತೆ ಬದಿ ಕಸ ಸುರಿಯುವವರ ವಿರುದ್ಧ BBMP ನಿಂದ ಕಠಿಣ ಕ್ರಮ: ತ್ಯಾಜ್ಯ ಸಂಗ್ರಹ ಆಟೋಗಳ ಸಮಯದಲ್ಲಿ ಬದಲಾವಣೆ. appeared first on Good News 24x7.

]]>
ಗಣೇಶೋತ್ಸವಕ್ಕೆ ಸಕಲ ಸಿದ್ಧತೆ; ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ. https://www.goodnews24x7.com/all-set-for-ganesh-chaturthi-single-window-system-for-permission/ Sun, 24 Aug 2025 05:49:36 +0000 https://www.goodnews24x7.com/?p=6611 ಬೆಂಗಳೂರು ಗ್ರಾಮಾಂತರ : ಆ.27 ರಂದು ನಡೆಯುವ ಗಣೇಶ ಚತುರ್ಥಿ ಹಬ್ಬಕ್ಕಾಗಿ ಜಿಲ್ಲೆಯಲ್ಲಿ ಸಜ್ಜು ಸಿದ್ಧತೆಗಳು ನಡೆಯುತ್ತಿವೆ. ಹಬ್ಬದ ಸಂಭ್ರಮ ಗ್ರಾಮಾಂತರ ಭಾಗದತ್ತ ಹರಡಿದ್ದು, ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸಂಘ-ಸಂಸ್ಥೆಗಳು ಸಜ್ಜಾಗಿವೆ. ಅನುಮತಿಗೆ ಸುಲಭ ವಿಧಾನ: ಸಾರ್ವಜನಿಕ ಗಣೇಶೋತ್ಸವಕ್ಕಾಗಿ…

The post ಗಣೇಶೋತ್ಸವಕ್ಕೆ ಸಕಲ ಸಿದ್ಧತೆ; ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ. appeared first on Good News 24x7.

]]>

ಬೆಂಗಳೂರು ಗ್ರಾಮಾಂತರ : ಆ.27 ರಂದು ನಡೆಯುವ ಗಣೇಶ ಚತುರ್ಥಿ ಹಬ್ಬಕ್ಕಾಗಿ ಜಿಲ್ಲೆಯಲ್ಲಿ ಸಜ್ಜು ಸಿದ್ಧತೆಗಳು ನಡೆಯುತ್ತಿವೆ. ಹಬ್ಬದ ಸಂಭ್ರಮ ಗ್ರಾಮಾಂತರ ಭಾಗದತ್ತ ಹರಡಿದ್ದು, ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸಂಘ-ಸಂಸ್ಥೆಗಳು ಸಜ್ಜಾಗಿವೆ.

ಅನುಮತಿಗೆ ಸುಲಭ ವಿಧಾನ:
ಸಾರ್ವಜನಿಕ ಗಣೇಶೋತ್ಸವಕ್ಕಾಗಿ ಈ ಬಾರಿ ‘ಏಕಗವಾಕ್ಷಿ’ (Single Window) ವ್ಯವಸ್ಥೆ ರೂಪಿಸಲಾಗಿದೆ. ನಗರಸಭೆ, ಪೊಲೀಸರು ಮತ್ತು ಬೆಸ್ಕಾಂ ಅಧಿಕಾರಿಗಳೊಂದಿಗೆ ಒಂದೇ ಸ್ಥಳದಲ್ಲಿ ಎಲ್ಲಾ ಅನುಮತಿಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ನಾನಾ ಕಚೇರಿಗಳಿಗೆ ಅಲೆದಾಟ ಮಾಡುವ ಅಗತ್ಯವಿಲ್ಲ.

ಪಿಒಪಿ ಮೂರ್ತಿಗಳ ವಿರುದ್ಧ ಕಠಿಣ ಕ್ರಮ:
ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಬಳಸಿ ತಯಾರಿಸಿದ ಮೂರ್ತಿಗಳ ತಯಾರಿಕೆ, ಮಾರಾಟ ಹಾಗೂ ವಿಸರ್ಜನೆ ರಾಜ್ಯ ಸರ್ಕಾರದಿಂದ ನಿಷಿದ್ಧವಾಗಿದೆ. ಈ ಬಗ್ಗೆ ಸೆಪ್ಟೆಂಬರ್ 15, 2023ರಂದು ಆದೇಶ ಹೊರಡಿಸಲಾಗಿದೆ. ಹೈಕೋರ್ಟ್ ಕೂಡ ಈ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.

ಪಿಒಪಿ ಮೂರ್ತಿಗಳಲ್ಲಿ ಹಾನಿಕಾರಕ ರಾಸಾಯನಿಕಗಳು ಇರುವ ಕಾರಣ, ಅವುಗಳನ್ನು ನೀರಿನಲ್ಲಿ ವಿಸರ್ಜಿಸಿದರೆ ಪರಿಸರಕ್ಕೆ ತೀವ್ರ ಹಾನಿ ಉಂಟಾಗುತ್ತದೆ. ಇದು ಜಲಚರ ಜೀವಿಗಳ ಸಾವು ಹಾಗೂ ಮಾನವ ಮತ್ತು ಪಶುಪಕ್ಷಿಗಳ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಪರಿಸರ ಸ್ನೇಹಿ ಪರ್ಯಾಯಗಳು:
ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಹಲವು ಸಂಘಟನೆಗಳು ಜಾಗೃತಿ ಮೂಡಿಸುತ್ತಿವೆ. ಘಾಟಿ ಗೋಶಾಲೆ, ಯುವಸಂಚಲನ, ದೊಡ್ಡಬಳ್ಳಾಪುರ ನಗರಸಭೆ ಜೀವವೈವಿಧ್ಯ ಸಮಿತಿ ಮೊದಲಾದವುಗಳು ಮಣ್ಣಿನ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿವೆ. ಮಹಿಳಾ ಸಂಘಟನೆಗಳೂ ಈ ಕಾರ್ಯದಲ್ಲಿ ಭಾಗವಹಿಸುತ್ತಿವೆ.

ಅನುಮತಿ ಕಡ್ಡಾಯ, ಹಬ್ಬಕ್ಕೆ ಮಾರ್ಗಸೂಚಿ ಪಾಲನೆ ಅಗತ್ಯ:
ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕಾಗಿದ್ದು, ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಅನುಮತಿ ನೀಡಲಾಗುತ್ತದೆ. ಪರಿಸರ ಸ್ನೇಹಿ ಮೂರ್ತಿಗಳನ್ನು ಬಳಸಬೇಕು ಮತ್ತು ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕೆಂಬ ನಿಯಮವಿದೆ.

ಹೀಗೆ ಜಿಲ್ಲೆಯಾದ್ಯಂತ ಶಿಸ್ತಿನಿಂದ, ಪರಿಸರದ ರಕ್ಷಣೆಯೊಂದಿಗೆ, ಸಂಯಮದಿಂದ ಹಬ್ಬವನ್ನು ಆಚರಿಸಲು ಸಿದ್ಧತೆ ನಡೆಯುತ್ತಿದೆ.

The post ಗಣೇಶೋತ್ಸವಕ್ಕೆ ಸಕಲ ಸಿದ್ಧತೆ; ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ. appeared first on Good News 24x7.

]]>
ಧರ್ಮಸ್ಥಳದ ತಿಮರೋಡಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಿರುವ ಪೊಲೀಸರು https://www.goodnews24x7.com/police-have-arrested-mahesh-shetty-timarodi-in-dharmasthalas-timarod/ Fri, 22 Aug 2025 12:59:26 +0000 https://www.goodnews24x7.com/?p=6477 .ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತ 2023 ರ ಕಲಂ 163 ರಡಿ ಪ್ರಾಧಿಕಾರವನ್ನು ಚಲಾಯಿಸಿ ಆ. 21, ಮಧ್ಯಾಹ್ನ 1 ಗಂಟೆಯಿಂದ ಆ. 22 ಮಧ್ಯಾಹ್ನ…

The post ಧರ್ಮಸ್ಥಳದ ತಿಮರೋಡಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಿರುವ ಪೊಲೀಸರು appeared first on Good News 24x7.

]]>

.ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತ 2023 ರ ಕಲಂ 163 ರಡಿ ಪ್ರಾಧಿಕಾರವನ್ನು ಚಲಾಯಿಸಿ ಆ. 21, ಮಧ್ಯಾಹ್ನ 1 ಗಂಟೆಯಿಂದ ಆ. 22 ಮಧ್ಯಾಹ್ನ 1 ಗಂಟೆಯವರೆಗೆ ಬ್ರಹ್ಮಾವರ ಪೊಲೀಸ್ ಠಾಣೆ ಸರಹದ್ದಿನ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಇದೆ.
ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಉಜಿರೆಯಲ್ಲಿ ಬಂಧಿಸಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಕರೆ ತಂದಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಕರೆದು ತರಲಾಗಿದೆ. ಠಾಣೆಯ ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023ರ ಕಲಂ 163 ರನ್ವಯ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಸೂಕ್ತ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲು ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ಉಡುಪಿ ಇವರ ವರದಿಯನ್ನು ಆಧರಿಸಿ ಮುಂಜಾಗೃತ ಕ್ರಮವಾಗಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.‌ ಭಾರತೀಯ ನಾಗರಿಕ ಸುರಕ್ಷಾ ಸಂಹಿತ 2023 ರ ಕಲಂ 163 ರಡಿ ಮ ಅಧಿಕಾರವನ್ನು ಚಲಾಯಿಸಿ ಆದೇಶಿಸಿದ್ದಾರೆ.

ಧರ್ಮಸ್ಥಳದ ತಿಮರೋಡಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಿರುವ ಪೊಲೀಸರು ಬಿಗುಬಂದೋಬಸ್ತ್‌ನಲ್ಲಿ ಮಧ್ಯಾಹ್ನ 1.20 ಕ್ಕೆ ಪೊಲೀಸರು ಠಾಣೆಗೆ ಕರೆದು ತಂದಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಗೆ ಆಗಮಿಸಿದ ವಕೀಲರ ತಂಡವು ಭದ್ರತಾ ಜಾಮೀನಿನ ಮೇಲೆ ತಿಮರೋಡಿ ಬಿಡುಗಡೆಗೆ ಕ್ರಮಕ್ಕೆ ಸಿದ್ಧತೆ ನಡೆಸಿದೆ. ತಿಮ್ಮರೊಡಿ ಜತೆ ಗಿರೀಶ್ ಮಟ್ಟಣ್ಣನವರ್ ಆಗಮಿಸಿದ್ದು, ಠಾಣೆಗೆ ಆಗಮಿಸುವ ಮುನ್ನವೇ ಮಹೇಶ್ ಶೆಟ್ಟಿ ಪರ ವಕೀಲರು ಠಾಣೆಯಲ್ಲಿದ್ದರು. ತಿಮರೋಡಿಯನ್ನು ಠಾಣೆಯಲ್ಲಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ‌.

 

The post ಧರ್ಮಸ್ಥಳದ ತಿಮರೋಡಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಿರುವ ಪೊಲೀಸರು appeared first on Good News 24x7.

]]>